Monday, July 31, 2023

ಕಿರು ಚಲನಚಿತ್ರದ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದ ದಸಾಪ : ಡಾ ಅರ್ಜುನ ಗೊಳಸಂಗಿ

ಈ ದಿವಸ ವಾರ್ತೆ

ವಿಜಯಪುರ: ಪುಸ್ತಕ ಪ್ರಕಾಶನ, ಸಾಹಿತ್ಯ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ದಲಿತ ಸಾಹಿತ್ಯ ಪರಿಷತ್ತು ರಾಮಸಾಹೇಬಾ ಕಿರು ಚಲನಚಿತ್ರದ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ ಎಂದು ದಸಾಪ ರಾಜ್ಯ ಘಟಕದ  ಅಧ್ಯಕ್ಷ ಡಾ ಅರ್ಜುನ ಗೊಳಸಂಗಿ ಅವರು ಹೇಳಿದರು.

 ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಾಡಿನ ಹೆಸರಾಂತ ಸಾಹಿತಿ ಪ್ರೊ ಎಚ್ ಟಿ ಪೋತೆ ಅವರ ಜನಪ್ರಿಯ ಕಾದಂಬರಿ ರಾಮಾಯಿ ಆಧಾರಿತ ಜೀವನ ಕ್ರಿಯೇಷನ್ ಅಡಿ ದಲಿತ ಸಾಹಿತ್ಯ ಪರಿಷತ್ತು ನಿರ್ಮಾಣ ಮಾಡಿದ ,ಸುನೀಲಕುಮಾರ ಸುಧಾಕರ ನಿರ್ದೇಶನದ ರಮಾಸಾಹೇಬಾ ಕಿರುಚಿತ್ರ ಬಿಡುಗಡೆ ಮಾಡಿ ಮಾಡಿ ಮಾತನಾಡಿದರು.  ಕಿರು ಚಲನಚಿತ್ರದಲ್ಲಿ ಅಂಬೇಡ್ಕರ್ ಅವರ ಪಾತ್ರದಲ್ಲಿ ಪ್ರೊ ಎಚ್ ಟಿ ಪೋತೆ, ರಮಾಬಾಯಿ ಪಾತ್ರದಲ್ಲಿ ಕಲಾವಿದೆ ರೇಣುಕಾ ಪಾಟೀಲ ರಾಮಜಿ ಪಾತ್ರದಲ್ಲಿ ವಿಶ್ವೇಶ್ವರಯ್ಯ ಮಠಪತಿ ಬಾಲ ರಾಮಬಾಯಿಯಾಗಿ ಬಾಲ ಕಲಾವಿದೆ ಮೇಘನಾ ಶಿವಶರಣ, ಮೀರಾಬಾಯಿ ಪಾತ್ರದಲ್ಲಿ ಇಂದುಮತಿ ಲಮಾಣಿ ಆನಂದರಾವ ಆಗಿ ಜಗದೀಶ ಹಲಸಂಗಿ,ಶ್ರೀಶೈಲ ನಾಗರಾಳ ಅರುಣಾ ಎಂಪಿ ಸರೋಜಿನಿ ಪಾಟೀಲ,ಪರಶುರಾಮ ಶಿವಶರಣ,ಲಾಯಪ್ಪ ಇಂಗಳೆ,  ಕಲ್ಲಪ್ಪ ಶಿವಶರಣ,ಬಸವರಾಜ ಜಾಲವಾದಿ,ಸುನೀಲ ಕಳ್ಳಿಮನಿ,ಲಕ್ಷ್ಮಣ ಹಂದ್ರಾಳ,ಜನಾರ್ಧನ ಕೆ.,ಬಾಬು ತಡಲಗಿ, ಸುರೇಶ ಚವ್ಹಾಣ,ನರೇಶ ಪೋದ್ದಾರ,ಮನು ಪತ್ತಾರ,ಸೃಜನ ಪತ್ತಾರ,ಸಚಿನ್,ವಿನೋದ ರಾಠೋಡ ಸೇರಿದಂತೆ ವಿವಿಧ ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ದೇವು ಅಂಬಿಗ ಅವರು ಸಂಕಲನ ಮಾಡಿದ್ದಾರೆ.ಜೀವನ ಗೊಳಸಂಗಿ ಉಮೇಶ ಶಿವಶರಣ ,‌ಚಂದ್ರಶೇಖರ ಅಂಬಲಿ ಸೇರಿದಂತೆ 20ಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ನಿರ್ವಹಿಸಿರುವ ಈ ಚಿತ್ರವು ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ಮೆರಗನ್ನು ಹೆಚ್ಚಿಸಿದ ರಮಾಸಾಹೇಬಾ ಚಿತ್ರ ನೋಡುಗರ ಕಣ್ಮನ ಸೆಳೆಯಿತು. 

 


ಚಿತ್ರದಲ್ಲಿ ಬರುವ  ಅಂಬೇಡ್ಕರ್ ಅವರ ಜೀವನದಲ್ಲಿ ಬರುವ ಕಷ್ಟದ ಘಟನೆಗಳಿಗೆ ನೋಡುಗರ ಕಣ್ಣಲ್ಲಿ ನೀರು ತುಂಬಿ ಬಂದಿದ್ದು ಕಂಡು ಬಂತು. ಈ ಸಂಧರ್ಭದಲ್ಲಿ ದಸಾಪ ರಾಜ್ಯ ಘಟಕದ ಪದಾಧಿಕಾರಿಗಳಾದ ಡಾ ಎಚ್ ಬಿ ಕೋಲ್ಕಾರ ಸುಭಾಷ ಹುದ್ಲೂರ, ವೈ ಎಂ ಭಜಂತ್ರಿ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾಹಿತಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.

Sunday, July 30, 2023

31-07-2023 EE DIVASA KANNADA DAILY NEWS PAPER

ದಲಿತ ಸಾಹಿತ್ಯ ಹೆಚ್ಚಾಗಿ ಇಂದು ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದ ಆಗಬೇಕಾದ ಅವಶ್ಯಕತೆಯಿದೆ: ಮೂಡ್ನಾಕೂಡು ಚಿನ್ನಸ್ವಾಮಿ


ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ :25ವರ್ಷಗಳ  ಕಾಲ ಒಂದು ದಲಿತ ಸಾಹಿತ್ಯ ಪರಿಷತ್ತು ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ಬೆಳಸಿ ಉಳಸಿಕೊಂಡು ಬರುವುದು ಕಷ್ಟದ ಕೆಲಸ ಇಂತಹ ಕೆಲಸ ನಿರಂತರವಾಗಿ ಮಾಡುತ್ತಿರುವ ರಾಜ್ಯಾಧ್ಯಕ್ಷ ಡಾ ಅರ್ಜುನ ಗೊಳಸಂಗಿ ಅವರ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಹೇಳಿದರು. ಅವರು ವಿಜಯಪುರದ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ದಸಾಪ ಬೆಳ್ಳಿ ಸಂಭ್ರಮ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.



ದಲಿತ ಸಾಹಿತ್ಯ ಹೆಚ್ಚಾಗಿ ಇಂದು ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದ ಆಗಬೇಕಾದ ಅವಶ್ಯಕತೆಯಿದೆ, ಒಂದು ಸಾವಿರ ವರ್ಷ ಮೊಗಲರು ಭಾರತ ಆಳ್ವಿಕೆಯನ್ನು ವೈದಿಕರು ಸಹಿಸಿಕೊಂಡರು ಆದರೆ 150 ವರ್ಷಗಳ ಬ್ರಿಟಿಷ್ ಆಳ್ವಿಕೆಯನ್ನು ಸಹಿಸಲಿಲ್ಲ ಏಕೆಂದರೆ ಅವರು ಭಾರತದ ಕಂದಾಚಾರಗಳನ್ನು ವಿರೋಧಿಸಿದ್ದೇ ಅದಕ್ಕೆ ಕಾರಣ ದಲಿತರಿಗೆ ಅಕ್ಷರ ಮಾತ್ರವಲ್ಲ ಅನ್ನ ನೀರು ಕೊಡದೆ ಪೀಡಿಸಿದಂತಹ ವರ್ಗದವರು ಸಮಾಜ ಸುಧಾರಣೆ ಕಾನೂನುಗಳನ್ನು ವಿರೋಧಿಸಿದರು ಆದರೆ ಅಂಬೇಡ್ಕರ್ ಅವರ ಪ್ರಯತ್ನದಿಂದ ಅದು ಸಾಧ್ಯವಾಯಿತು ಎಂದು ಹೇಳಿದರು.


ಪ್ರಶಸ್ತಿ ಸ್ವೀಕರಿಸಿ ಡಾ ಗವಿಸಿದ್ದಪ್ಪ ಪಾಟೀಲ ಅವರು ಮಾತನಾಡಿ ದಲಿತ ಸಾಹಿತ್ಯ ಪರಿಷತ್ತು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ನಾಡಿನ ಎಲ್ಲರನ್ನು ಒಳಗೊಳ್ಳುವ ಮೂಲಕ ಮಾದರಿ ಕಾರ್ಯ ಮಾಡುತ್ತಿದೆ ಎಂದರು. ಇನ್ನೋರ್ವ ಪ್ರಶಸ್ತಿ ಪುರಸ್ಕೃತೆ ಸೌಜನ್ಯ ಕರಡೋಣಿ ಅವರು ಮಾತನಾಡಿದರು ಜೊತೆಗೆ ಸಮ್ಮೇಳನ ಅಧ್ಯಕ್ಷರಿಗೆ ಹಾಗೂ ಗಣ್ಯರಿಗೆ ತಮ್ಮ ಕಲಾಕೃತಿಗಳನ್ನು ನೀಡಿ ಗೌರವಿಸಿದರು. ಮತ್ತೋರ್ವ ಪ್ರಶಸ್ತಿ ಪುರಸ್ಕೃತೆ ಮುರ್ತುಜಾ ಬೇಗಂ ಕೊಡಗಲಿ ಅವರು ಮಾತನಾಡಿ ಹಳ್ಳಿಗಳಲ್ಲಿ ಬೇರೂರಿರುವ ಅಸಮಾನತೆಯನ್ನು ತೊಲಗಿಸಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಪ್ರಶಸ್ತಿ ಪುರಸ್ಕೃತರಾದ ರೇಣುಕಾ ಹೆಳವರ ಮುಳ್ಳೂರು ಶಿವಮಲ್ಲು, ಡಾ ಹೊಂಬಯ್ಯ ಹೊನ್ನಲಗೆರೆ,ಸ್ವಪ್ನ ಬುಕ್ ಹೌಸ್ ನ ದೊಡ್ಡೇಗೌಡ, ಡಾ ಎಂ ಬಿ ಕಟ್ಟಿ, ಗಣಪತಿ ಚಲವಾದಿ ಅವರು ಮಾತನಾಡಿದರು.


ಗೌರವ ಪ್ರಶಸ್ತಿಗೆ ಭಾಜನರಾದ ವಿವಿಧ ಕ್ಷೇತ್ರದ ಸಾಧಕರಾದ ಆರ್. ದೊಡ್ಡಗೌಡ ಬೆಂಗಳೂರು (ಸಾಹಿತ್ಯ),  ವೀರಹನುಮಾನ ರಾಯಚೂರು (ಸಾಹಿತ್ಯ), ಶ್ರೀಶೈಲ ನಾಗರಾಳ ಕಲಬುರ್ಗಿ (ಸಾಹಿತ್ಯ), ಡಾ. ಗವಿಸಿದ್ದಪ್ಪ ಪಾಟೀಲ ಹುಮ್ನಾಬಾದ (ಸಾಹಿತ್ಯ), ಶ್ರೀಮತಿ ಮುರ್ತುಜಾ ಬೇಗಂ ಕೊಡಗಲಿ ಇಲಕಲ್ಲ (ಸಾಹಿತ್ಯ), ಹಾರೋಹಳ್ಳಿ ರವೀಂದ್ರ ಮೈಸೂರು (ಸಾಹಿತ್ಯ), ಪರಶುರಾಮ ಶಿವಶರಣ ವಿಜಯಪುರ (ಸಾಹಿತ್ಯ), ನರೇಂದ್ರ ನಾಗವಾಲ ಮೈಸೂರು (ಸಮಾಜಸೇವೆ) ,ಮುಳ್ಳೂರ ಶಿವಮಲ್ಲು ಚಾಮರಾಜನಗರ (ದಲಿತ ಚಳುವಳಿ), ಡಾ. ಸಂಜೀವಕುಮಾರ ಮಾಲಗತ್ತಿ ಧಾರವಾಡ (ಪತ್ರಿಕಾರಂಗ), ರಾಜು ವಿಜಯಪುರ ಹುಬ್ಬಳ್ಳಿ (ಪತ್ರಿಕಾರಂಗ), ಕು. ಸೌಜನ್ಯ ಕರಡೋಣಿ ಧಾರವಾಡ (ಚಿತ್ರಕಲೆ), ಸಿ. ಆರ್. ನಟರಾಜ ಕೋಲಾರ (ಸಂಗೀತ), ದೇವು ಕೆ, ಅಂಬಿಗ ವಿಜಯಪುರ (ಸಿನೆಮಾ) ಅವರಿಗೆ ಬೆಳ್ಳಿ ಪ್ರಶಸ್ತಿ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಬಿಡಲೋಟಿ ರಂಗನಾಥ್, ಡಾ ಸದಾಶಿವ ದೊಡಮನಿ, ಡಾ ಶಾಂತನಾಯ್ಕ ಶಿರಾಗಾನಹಳ್ಳಿ, ರೇಣುಕಾ ಹೆಳವರ, ಪಿ ಆರ್ ಡಿ ಮಲ್ಲಯ್ಯ ಕಟ್ಟೇರ, ಡಾ ಪ್ರಸನ್ನ ನಂಜಾಪುರ, ಡಾ ಗಿರೀಶ ಮೂಗ್ತಿಹಳ್ಳಿ, ಪ್ರಭುಲಿಂಗ ನೀಲೂರೆ, ಗೌಡಗೆರೆ ಮಾಯುಶ್ರೀ, ಡಾ ಎಚ್ ಡಿ ಉಮಾಶಂಕರ, ಸೋಮಲಿಂಗ ಗೆಣ್ಣೂರ, ಡಾ ಎಂ ಬಿ ಕಟ್ಟಿ, ಡಾ ಹೊಂಬಯ್ಯ ಹೊನ್ನಲೆಗೆರೆ, ಡಾ ಅಮರೇಶ ಯತಗಲ್, ಡಾ ಪೂರ್ಣಿಮಾ, ರಾಯಸಾಬ ದರ್ಗಾದವರ ಅವರಿಗೆ  ವಾರ್ಷಿಕ ವಿವಿಧ ದತ್ತಿ ಹಾಗೂ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದರು.
ಅದರಂತೆ ಸಂಘಟನೆಯಲ್ಲಿ ತೊಡಗಿಸಿಕೊಂಡ ವಿಭಾಗೀಯ ಸಂಯೋಜಕರ ಗಣಪತಿ ಚಲವಾದಿ, ರಾಯಚೂರು ದಸಾಪ ಜಿಲ್ಲಾಧ್ಯಕ್ಷ ತಾಯರಾಜ್‌ ಮಚಟಹಾಳ, ತಾಲೂಕಾ ಅಧ್ಯಕ್ಷರಾದ ಹುಸೇನಪ್ಪ ಅಮರಾಪೂರ ಅವರಿಗೆ ದಸಾಪ ಅತ್ಯುತ್ತಮ ಸಂಘಟಕ ಸಾಧಕರಶ್ರೀ ಪ್ರಶಸ್ತಿ  ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ ಎಚ್‌.ಟಿ.ಪೋತೆ, ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು. ಡಾ ಚಂದ್ರಗುಪ್ತ ಅವರು ಕಾರ್ಯಕ್ರಮ ಸಂಯೋಜಿಸಿದರು. ಅಶ್ವಿನಿ ಮದನಕರ ಸ್ವಾಗತಿಸಿದರು, ಎಂ ಬಿ ಕಟ್ಟಿಮನಿ ಹಾಗೂ ರುಕ್ಮಿಣಿ ನಾಗಣ್ಣವರ ನಿರೂಪಿಸಿದರು ಪದ್ಮಾವತಿ ಯಾತಗಲ್ಲ ವಂದಿಸಿದರು.

Saturday, July 29, 2023

ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಕವಿಗಳ ಕುರಿತು ಕವನ ಕಟ್ಟಿ ವಾಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -೪: ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಕವಿಗಳ ಕುರಿತು ಕವನ ಕಟ್ಟಿ ವಾಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ, ಕವಿತೆಗಳಲ್ಲಿ ಸಮಾಜದ ನೋವು -ನಲಿವು, ಬಡತನ, ಅನಕ್ಷರತೆ, ನಿರುದ್ಯೋಗ ಸೇರಿದಂತೆ ಕಂದಾಚಾರಗಳ ಕುರಿತು ಕವಿತೆ ಬರೆದು ಕವಿಗಳು ಆಧುನಿಕ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು  ಬೆಂಗಳೂರಿನ ಹಿರಿಯ ಕವಿ ಡಾ. ಟಿ. ಯಲ್ಲಪ್ಪ ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೪ರ ಕಾವ್ಯ ಸಂಭ್ರಮ-೧ ವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅತಿಥಿಗಳಾಗಿ ಕವಯಿತ್ರಿ ಇಂದುಮತಿ ಲಮಾಣಿ ಅವರು ಮಾತನಾಡಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಕವಿಗಳು ಅರ್ಥಪೂರ್ಣವಾಗಿ ಕವಿತೆಗಳನ್ನು ವಾಚಿಸುವ ಮೂಲಕ ಸಮ್ಮೇಳನದ ಮೆರಗು ಹೆಚ್ಚಿಸಿದ್ದಾರೆ ಎಂದು ಹೇಳಿದರು , ಡಾ, ಜಯಮಂಗಲ ಚಂದ್ರಶೇಖರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಜಿಲ್ಲೆಗಳ ಕವಿಗಳಾದ ಸಂತೆಬೆನ್ನೂರ ಫೈಜ್ನಟ್ರಾಜ್‌, ಡಾ.ರತ್ನಾಕರ ಕುನಗೋಡು,ಮಹಾಂತೇಶ ಪಾಟೀಲ , ರಮೇಶ ಗಬ್ಬೂರ, ಇಂಚರಾ ನಾರಾಯಣಸ್ವಾಮಿ, ದಾಕ್ಷಾಯಣಿ ಹುಡೇದ, ಜಬೀವುಲ್ಲಾ ಎಂ ಅಸದ್, ಸಿದ್ದು ಸವಳಸಂಗ, ಪಿ ಆರ್ ವೆಂಕಟೇಶ್, ಸಿದ್ದು ಬಾರಿಗಿಡದ,ಮಮತಾ ಅರಸಿಕೇರಿ, ಡಾ ಎಚ್ ಬಿ ನಡುವಿನಕೇರಿ, ಡಾ ಎಂ ಎಸ್ ಶಿವಶರಣ, ಈರಣ್ಣ ಮಾದರ ,ಡಾ ಮಲ್ಲಿಕಾರ್ಜುನ ಮೇತ್ರಿ, ವಿಶಾಲ ಮ್ಯಾಸರ್, ಮೈಲಾರಪ್ಪ ಬೂದಿಹಾಳ, ವಸಂತಕುಮಾರ ಕಡ್ಲಿಮಟ್ಟಿ, ಸಿದ್ದು ಸತ್ಯಣ್ಣವರ, ಶಂಕರ ಚಾಮರಾಜನಗರ ಮತ್ತು ಸಿದ್ಧಾರೂಢ ಕಟ್ಟಿಮನಿ ಅವರು 
ತಮ್ಮ ಕವನವನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ ಎಚ್‌.ಟಿ.ಪೋತೆ, ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು. ಕಲಬುರಗಿ ದಸಾಪ ಅಧ್ಯಕ್ಷ ಡಾ. ಸುನೀಲ ಜಾಬಾದಿ, ಅವರು ಗೋಷ್ಠಿಯನ್ನು ಸಂಯೋಜಿಸಿದರು ಅಶೋಕ ಬಾಬು ಸ್ವಾಗತಿಸಿದರು. ಸವಿತಾ ಲಮಾಣಿ, ವಿಕ್ರಂ ನಿಂಬರ್ಗಾ ನಿರೂಪಿಸಿದರು. ರಾಹುಲ ದ್ರಾವಿಡ್‌ ವಂದಿಸಿದರು.

ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಕವಿಗಳ ಕುರಿತು ಕವನ ಕಟ್ಟಿ ವಾಚಿಸಿರುವುದು :ಡಾ. ಟಿ. ಯಲ್ಲಪ್ಪ ಉತ್ತಮ ಬೆಳವಣಿಗೆ:

ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -೪: ಆಧುನಿಕ ಜಗತ್ತಿನ ಸಮಸ್ಯೆಗಳ ಕುರಿತು ಕವನ ಕಟ್ಟಿ ವಾಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ, ಕವಿತೆಗಳಲ್ಲಿ ಸಮಾಜದ ನೋವು -ನಲಿವು, ಬಡತನ, ಅನಕ್ಷರತೆ, ನಿರುದ್ಯೋಗ ಸೇರಿದಂತೆ ಕಂದಾಚಾರಗಳ ಕುರಿತು ಕವಿತೆ ಬರೆದು ಕವಿಗಳು ಆಧುನಿಕ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು  ಬೆಂಗಳೂರಿನ ಹಿರಿಯ ಕವಿ ಡಾ. ಟಿ. ಯಲ್ಲಪ್ಪ ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೪ರ ಕಾವ್ಯ ಸಂಭ್ರಮ-೧ ವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅತಿಥಿಗಳಾಗಿ ಕವಯಿತ್ರಿ ಇಂದುಮತಿ ಲಮಾಣಿ ಅವರು ಮಾತನಾಡಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಕವಿಗಳು ಅರ್ಥಪೂರ್ಣವಾಗಿ ಕವಿತೆಗಳನ್ನು ವಾಚಿಸುವ ಮೂಲಕ ಸಮ್ಮೇಳನದ ಮೆರಗು ಹೆಚ್ಚಿಸಿದ್ದಾರೆ ಎಂದು ಹೇಳಿದರು , ಡಾ, ಜಯಮಂಗಲ ಚಂದ್ರಶೇಖರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಜಿಲ್ಲೆಗಳ ಕವಿಗಳಾದ ಸಂತೆಬೆನ್ನೂರ ಫೈಜ್ನಟ್ರಾಜ್‌, ಡಾ.ರತ್ನಾಕರ ಕುನಗೋಡು,ಮಹಾಂತೇಶ ಪಾಟೀಲ , ರಮೇಶ ಗಬ್ಬೂರ, ಇಂಚರಾ ನಾರಾಯಣಸ್ವಾಮಿ, ದಾಕ್ಷಾಯಣಿ ಹುಡೇದ, ಜಬೀವುಲ್ಲಾ ಎಂ ಅಸದ್, ಸಿದ್ದು ಸವಳಸಂಗ, ಪಿ ಆರ್ ವೆಂಕಟೇಶ್, ಸಿದ್ದು ಬಾರಿಗಿಡದ,ಮಮತಾ ಅರಸಿಕೇರಿ, ಡಾ ಎಚ್ ಬಿ ನಡುವಿನಕೇರಿ, ಡಾ ಎಂ ಎಸ್ ಶಿವಶರಣ, ಈರಣ್ಣ ಮಾದರ ,ಡಾ ಮಲ್ಲಿಕಾರ್ಜುನ ಮೇತ್ರಿ, ವಿಶಾಲ ಮ್ಯಾಸರ್, ಮೈಲಾರಪ್ಪ ಬೂದಿಹಾಳ, ವಸಂತಕುಮಾರ ಕಡ್ಲಿಮಟ್ಟಿ, ಸಿದ್ದು ಸತ್ಯಣ್ಣವರ, ಶಂಕರ ಚಾಮರಾಜನಗರ ಮತ್ತು ಸಿದ್ಧಾರೂಢ ಕಟ್ಟಿಮನಿ ಅವರು ತಮ್ಮ ಕವನವನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ ಎಚ್‌.ಟಿ.ಪೋತೆ, ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು. ಕಲಬುರಗಿ ದಸಾಪ ಅಧ್ಯಕ್ಷ ಡಾ. ಸುನೀಲ ಜಾಬಾದಿ, ಅವರು ಗೋಷ್ಠಿಯನ್ನು ಸಂಯೋಜಿಸಿದರು ಅಶೋಕ ಬಾಬು ಸ್ವಾಗತಿಸಿದರು. ಸವಿತಾ ಲಮಾಣಿ, ವಿಕ್ರಂ ನಿಂಬರ್ಗಾ ನಿರೂಪಿಸಿದರು. ರಾಹುಲ ದ್ರಾವಿಡ್‌ ವಂದಿಸಿದರು.


 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಆಧುನಿಕ ಭಾರತದಲ್ಲಿ ಹೆಚ್ಚು ಜನರಿಗೆ ತಲುಪಿದ ಯಾವುದಾದರು ಚಿಂತನೆ ಇದ್ದರೆ ಅದು ಅಂಬೇಡ್ಕರ್ ಚಿಂತನೆ ನಿಮ್ನ ವರ್ಗಗಳ ಬದುಕಿನ ಸುತ್ತ ಪೋತೆ ಅವರ ಸಾಹಿತ್ಯ ರಚನೆಗೊಂಡಿದೆ ಅವರು ಬಳಸಿದ ಶಬ್ದ ಲಹರಿ ಅವರು ಬರೆದ ಸಾಹಿತ್ಯ ನೋಡಿದರೆ ಒಂದು ಕ್ಷಣ ಅಚ್ಚರಿಯಾಗುತ್ತದೆ ಎಂದು ಚಳ್ಳಕೆರೆಯ ಪ್ರೊ ಡಿ ಅಂಜನಪ್ಪ ಹೇಳಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 3ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಕುರಿತು ವಿವಿಧ ಉಪನ್ಯಾಸಕರು ಮಂಡಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷ ಪ್ರೊ ಎಚ್ ಟಿ ಪೋತೆ ಡಾ ಮೂದೇನೂರು ನಿಂಗಪ್ಪ, ಡಾ ಕಿರಣ ಗಾಜನೂರು, ಡಾ ಶಿವರಾಜ ಬ್ಯಾಡರಹಳ್ಳಿ,   ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ:ಶಿವರಾಜ ಬ್ಯಾಡರ


 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಪೋತೆ ಅವರು ತಮ್ಮ ಪಿ ಎಚ್ ಡಿ ಯನ್ನು ನಿಗದಿತ ಕಲಾವಧಿಯಲ್ಲಿ ಮುಗಿಸಿದವರು ಒಂದು ಕಾಲದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಚ್ಚೆ ಹಾಕುವ ಕಲೆಯನ್ನು ವಿಸ್ತಾರವಾಗಿ ಬರೆದಿದ್ದಾರೆ ಜಾನಪದ ನಂಬಿಕೊಂಡು ಬಂದಿರುವ ಕುಟುಂಬಗಳ ಬಗ್ಗೆ ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ ಕಲ್ಯಾಣ ಕರ್ನಾಟಕ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಜಾನಪದ ಹಾಡುಗಳನ್ನು ಅಶ್ಲೀಲವಾಗಿ ಬಿಂಬಿಸುವ ಕೆಲಸ ನಡೆದಿದೆ ಎಂದು ಶಿವರಾಜ ಬ್ಯಾಡರ ಹಳ್ಳಿ ವಿಷಾದ ವ್ಯಕ್ತಪಡಿಸಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 3ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದಲ್ಲಿ ಪ್ರೊ ಎಚ್ ಟಿ ಪೋತೆ ಅವರ ಸಂಶೋಧನೆ ಸಾಹಿತ್ಯ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷ ಪ್ರೊ ಎಚ್ ಟಿ ಪೋತೆ ಡಾ ಮೂದೇನೂರು ನಿಂಗಪ್ಪ, ಡಾ ಕಿರಣ ಗಾಜನೂರು, ಡಾ ಶಿವರಾಜ ಬ್ಯಾಡರಹಳ್ಳಿ,  ಪ್ರೊ ಡಿ. ಅಂಜನಪ್ಪ, ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

ಅಸಮಾನತೆಯ ಜಾತಿ ಹೋಗಲಾಡಿಸುವ ಸಲುವಾಗಿ ಎಚ್.ಟಿ.ಪೋತೆ ಅವರು ಹಲವು ಪ್ರಯೋಗ ಮಾಡುತ್ತಾರೆ:ಮುದೇನೂರು ನಿಂಗಪ್ಪ


 ಅಸಮಾನತೆಯ ಜಾತಿ ಹೋಗಲಾಡಿಸುವ ಸಲುವಾಗಿ ಎಚ್.ಟಿ.ಪೋತೆ ಅವರು ಹಲವು ಪ್ರಯೋಗ ಮಾಡುತ್ತಾರೆ. ಅವರ ಮಾನವಿಯತೆ ಬರಹಗಳು ಎಲ್ಲರರಿಗೂ ಅನ್ವಯಿಸುತ್ತವೆ. ಸಾಹಿತ್ಯ ಮತ್ತು ಇತರೆ ಮಾನವೀಯತೆ ಜ್ಞಾನವನ್ನು ಒಟ್ಟಾಗಿಸಿ ಹೋಗುವುದು ಕಷ್ಟಕರ. ಅಂತಹವುಗಳಲ್ಲಿಗೂ ಕಲಾತ್ಮಕವಾಗಿ ಬರಹಗಳನ್ನು ಬರೆಯುತ್ತಾರೆ ಎಂದು ಮುದೇನೂರು ನಿಂಗಪ್ಪ ಅವರು ಹೇಳಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೩ರಲ್ಲಿ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕುರಿತು ಅವರು ಮಾತನಾಡಿದರು.

ವಿಶಿಷ್ಠ ಹೆಣೆಯುತ್ತಾರೆ. ಅವರು ವೈದಿಕ ಕೃತಿಯ ಪರಿಚಯಗಳನ್ನು ನೋಡಿದರೆ ಸಾಕು ಅವರಿಗೆ ಅಘಾದವಾದ ಜ್ಞಾನ ಇದೆ ಎಂಬುವುದು ಕಂಡು ಬರುತ್ತದೆ. ವರ್ತಮಾನವನ್ನು ಮರು ಶೋಧನೆಗೆ, ಅಂಬೇಡ್ಕರ, ಗಾಂಧಿ, ದಲಿತ ಚಿಂತನೆ, ವೈಚಾರಿಕ ಆಲೋಚನೆಗಳನ್ನು ಸಹಿತ ಬರವಣೆಗಳನ್ನು ಸ್ಪಷ್ಟಪಡಿಸುತ್ತಾರೆ. ನಿರ್ಭೀಡ , ಪ್ರಾಮಾಣಿಕ ವೈಚಾರಿಕತೆಯನ್ನು ಅವರ ಬರವಣಿಗೆಯಲ್ಲಿ ಕಾಣಬಹುದಾಗಿದೆ. ಅವರ ಬರಹಗಳನ್ನು ಜೀವಪರ ಮತ್ತು ಜನರಪರವಾಗಿವೆ. ಈ ಮೌಖಿಕ ಪರಂಪರೆ ಕುರಿತು, ಲಿಖಿತ ಪರಂಪರೆ ಮಾತನಾಡುವಾಗ ಅದರ ಫಲಿತಗಳನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ಸಾಮಾಜಿಕ ವೈಜ್ಞಾನಿಕ, ವೈಚಾರಿಕ ಸಾಹಿತ್ಯಿಕವನ್ನು ಅವರು ರೂಪಿಸಿಕೊಳ್ಳುತ್ತಿದ್ದಾರೆ.  

ಸಾಹಿತಿಗಳಾದ ಡಾ, ಚನ್ನಪ್ಪ ಕಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ವಿಕ್ರಂ ವಿಸಾಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಬುಕ್‌ ಬ್ರಹ್ಮ ದೇವು ಪತ್ತಾರ, ಡಾ. ಜೈನೇಶ ಪ್ರಸಾದ, ಡಾ. ಬಸವರಾಜ ಪೂಜಾರ, ಡಾ. ಪೀರಪ್ಪ ಸಜ್ಜನ ವೇದಿಕೆಯಲ್ಲಿದ್ದರು.


ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು. ಶ್ರೀಮತಿ ಪೂಜಾ ಸಿಂಗೆ ನಿರೂಪಿಸಿದರು. ಶಂಕ್ರೆಮ್ಮ ಈಳಗೇರ ವಂದಿಸಿದರು.

ಮೂಖನಾಯಕ ನಾಟಕ ಪೋತೆ ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿದೆ :ಡಾ ಕಿರಣ ಗಾಜನೂರ


ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಕುಮಾರ ಕಕ್ಕಯ್ಯ ಪೋಳ ಅವರು ಬರೆದ ಮೂಖನಾಯಕ ನಾಟಕ ಪೋತೆ ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿದೆ ಎಂದು ಡಾ ಕಿರಣ ಗಾಜನೂರ ಅವರು ಹೇಳಿದರು. ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದಲ್ಲಿ ಪ್ರೊ ಎಚ್ ಟಿ ಪೋತೆ ಅವರ ಜೀವನ ಚರಿತ್ರೆ  ಕುರಿತು ಮಾತನಾಡಿದರು.ದಲಿತ ಸಮುದಾಯದ ಸಾಂಸ್ಕೃತಿಕ ನಾಯಕರ ಚರಿತ್ರೆಗಳು ಅಷ್ಟಾಗಿ ಬಂದಿಲ್ಲ ಇದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ಪೋತೆ ಅವರು ಬರೆದ ಜೀವನ ಚರಿತ್ರೆಗಳು ಅಂತಃ ಕರಣ ಸಂಸ್ಕೃತಿಯಿಂದ ಕುದಿರುವಂತಹವು ಜೀವನ ಚರಿತ್ರೆಗಳ ಮೂಲಕ ಸಾಂಸ್ಕೃತಿಕ ರಾಜ್ಯಕಾರಣವನ್ನು ಕಟ್ಟಿಕೊಡುವ ಕೆಲಸವನ್ನು ಪ್ರೊ ಪೋತೆ ಅವರು ಮಾಡಿದ್ದಾರೆ ಎಂದು ಹೇಳಿದರು. ಸಾಹಿತಿ ಚೆನ್ನಪ್ಪ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮುದೇನೂರು ನಿಂಗಪ್ಪ,  ಡಾ ಶಿವರಾಜ ಬ್ಯಾಡರಹಳ್ಳಿ, ಡಾ ಶಿವಗಂಗಾ ಬಲಗುಂದಿ, ಪ್ರೊ ಡಿ. ಅಂಜನಪ್ಪ, ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

ಕಾದಂಬರಿಗಳನ್ನು ಬರೆಯುವ ಕಲೆ ಪೋತೆ ಅವರಿಗೆ ಕರಗತವಾಗಿದೆ:ಡಾ ವಿಕ್ರಮ ವಿಸಾಜಿ


ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -3:ಪ್ರೊ ಎಚ್ ಟಿ ಪೋತೆ ಅವರಿಗೆ ಅವರ ಜನ್ಮಸ್ಥಳ ಇಂಡಿ ತಾಲೂಕಿನ ಹಂಜಗಿಯ ಬಾಲ್ಯದ ದಿನಗಳು, ಅವರ ವಿಜಯಪುರದ ವಿದ್ಯಾರ್ಥಿ ಜೀವನದ ದಿನಗಳು ಹಾಗೂ ಕಲಬುರಗಿಯ ಅವರ ನಂಟು ಕಂಡುಬರುತ್ತವೆ ಅವರ ಕಥಾ ಪಾತ್ರಗಳಲ್ಲಿ ಊಹಾತ್ಮಕ ಪಾತ್ರಗಳು ಬರುವುದಿಲ್ಲ ವರ್ತಮಾನದ ಸತ್ಯ ಘಟನೆಗಳು ಹೇಳುತ್ತವೆ ಅವರ 6 ಕಥಾ ಸಂಕಲನಗಳು ಹಾಗೂ ಎರಡು ಕಾದಂಬರಿಗಳಲ್ಲಿ ಮತ್ತೆ ಮತ್ತೆ ಬರುವ ಪಾತ್ರ ಅಪ್ಪ ಬಹುಷಃ ಅವರ ಜೀವನದಲ್ಲಿ ಅವರ ತಂದೆ ತಿಪ್ಪಣ್ಣ ಅವರು  ಗಾಢವಾದ ಪ್ರಭಾವ ಬೀರಿದಂತೆ ತೋರುತ್ತದೆ ಎಂದು ಕಲಬುರಗಿ ಕೇಂದ್ರೀಯ ವಿ ವಿ ಪ್ರಾಧ್ಯಾಪಕ ಡಾ ವಿಕ್ರಮ ವಿಸಾಜಿ ಅವರು ಹೇಳಿದರು. ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರ ಸಮ್ಮೇಳನಾಧ್ಯಕ್ಷರ ಸಾಹಿತ್ಯದಲ್ಲಿ ಪ್ರೊ ಎಚ್ ಟಿ ಪೋತೆ ಅವರ ಸೃಜನ ಸಾಹಿತ್ಯ ಕುರಿತು ಮಾತನಾಡಿದರು.ತಮ್ಮ ಸುತ್ತ -ಮುತ್ತಲಿನ ವಿಷಯಗಳನ್ನು ತಮ್ಮ ಕಥಾವಸ್ತುವಾಗಿಸಿಕೊಂಡವರು ವರ್ತಮಾನದ ವಿಷಯಗಳನ್ನು ವಿಷಯವಾಗಿ ಇಟ್ಟುಕೊಂಡು ಕಥೆಗಳನ್ನು ಹಾಗೂ ಕಾದಂಬರಿಗಳನ್ನು ಬರೆಯುವ ಕಲೆ ಪೋತೆ ಅವರಿಗೆ ಕರಗತವಾಗಿದೆ ಚರಿತ್ರೆಯನ್ನು ವರ್ತಮಾನಕ್ಕೆ ತಂದಿರುವ ಅವರು ಬುದ್ಧ ಬಸವ, ಅಂಬೇಡ್ಕರ್ ದೇವನೂರು ಮಹಾದೇವ, ಬಿ ಬಸಲಿಂಗಪ್ಪ, ಡಾ ಸಿದ್ದಲಿಂಗಯ್ಯ ಅವರ ಪತ್ರಗಳನ್ನು ಬಳಸಿಕೊಂಡು ಮಹಾಬಿಂದು ಎಂಬ ಅಪರೂಪದ ಕಾಂದಬರಿಯನ್ನು ಬರೆದಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷ ಪ್ರೊ ಎಚ್ ಟಿ ಪೋತೆ ಡಾ ಮೂದೇನೂರು ನಿಂಗಪ್ಪ, ಡಾ ಕಿರಣ ಗಾಜನೂರು, ಡಾ ಶಿವರಾಜ ಬ್ಯಾಡರಹಳ್ಳಿ, ಡಾ ಶಿವಗಂಗಾ ಬಲಗುಂದಿ, ಪ್ರೊ ಡಿ. ಅಂಜನಪ್ಪ, ಜಂಬುನಾಥ ಕಂಚ್ಯಾಣಿ, ಜೈನೇಶ ಪ್ರಸಾದ, ದೇವು ಪತ್ತಾರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.ಅನುಪ್ರಿಯಾ ಬಿರಾದಾರ ಸ್ವಾಗತಿಸಿದರು ಪೂಜಾ ಸಿಂಗೆ ನಿರೂಪಿಸಿದರು ಶಂಕ್ರೆಮ್ಮ ಈಳಗೇರ ವಂದಿಸಿದರು.

ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಹೊಣೆ:ಶ್ರೀದೇವಿ ಉತ್ಲಾಸ್ಕರ


ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2:ನಮ್ಮ ಸಂವಿಧಾನ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆಯಾಗಿದೆ ಸಂವಿಧಾನ ಪ್ರತಿಯೊಬ್ಬ ಭಾರತೀಯರಿಗೆ ಪವಿತ್ರ ಗ್ರಂಥವಾಗಿದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಂಯೋಜಕಿ ಶ್ರೀದೇವಿ ಉತ್ಲಾಸ್ಕರ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ಡಾ ಸಿದ್ದನಗೌಡ ಪಾಟೀಲ ಅವರು ಮಂಡಿಸಿದ ವಿಷಯಕ್ಕೆ ಅವರು ಪ್ರತಿಕ್ರಿಯಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಂದೀಪ ವಿಶ್ವನಾಥ ಅವರು ಸಂವಿಧಾನ ರಕ್ಷಣೆ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ಸುಜಾತಾ ಚಲವಾದಿ,  ಡಾ. ಗಾಂಧೀಜಿ ಮೊಳಕೇರಿ ಡಾ ರಾಮಚಂದ್ರ ಗಾಣೆಪುರೆ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.

ಅಕ್ಷರಸ್ಥರು ಮತ್ತು ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವವರಿಂದ ಅಪಾಯವಿದೆ:ಡಾ ರಾಮಚಂದ್ರ ಗಾಣಾಪುರೆ

 


ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2:ದೇಶದಲ್ಲಿ ನಡೆದ ಅನೇಕ ದುಕೃತ್ಯಗಳನ್ನು ನೋಡಿದಾಗ ಸಂವಿಧಾನ ಅಪಾಯದಲ್ಲಿದೆ ಎಂಬ ಭಾವನೆ ಮೂಡುತ್ತದೆ ದೇಶದಲ್ಲಿ ಅಕ್ಷರಸ್ಥರು ಮತ್ತು ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವವರಿಂದ ಅಪಾಯವಿದೆ ಹೊರತು ಅನಕ್ಷರಸ್ಥರಿಂದ ಅಲ್ಲ ಎಂದು ಡಾ ರಾಮಚಂದ್ರ ಗಾಣಾಪುರೆ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ಡಾ ಸಿದ್ದನಗೌಡ ಪಾಟೀಲ ಅವರು ಮಂಡಿಸಿದ ವಿಷಯಕ್ಕೆ ಅವರು ಪ್ರತಿಕ್ರಿಯಿಸಿ ಮಾತನಾಡಿದರು 

ಈ ಸಂದರ್ಭದಲ್ಲಿ ಡಾ. ಸುಜಾತಾ ಚಲವಾದಿ ಶ್ರೀದೇವಿ ಉತ್ಲಾಸರ, ಸಂದೀಪ ವಿಶ್ವನಾಥ, ಡಾ. ಗಾಂಧೀಜಿ ಮೊಳಕೇರಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.

ಸಂವಿಧಾನವನ್ನು ನಾವು ಅಧ್ಯಯನದ ಮೂಲಕ ಅರ್ಥೈಸಿಕೊಳ್ಳಬೇಕಿದೆ:ಸಾಹಿತಿ ಡಾ ಸುಜಾತಾ ಚಲವಾದಿ


ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2: ಸಂವಿಧಾನವನ್ನು ನಾವು ಅಧ್ಯಯನದ ಮೂಲಕ ಅರ್ಥೈಸಿಕೊಳ್ಳಬೇಕಿದೆ ಪ್ರಬುದ್ಧತೆಯಿಂದ ಮಾತನಾಡುವ ನಾವು ಪ್ರತಿಯೊಂದರಲ್ಲಿ ಜಾತಿಯನ್ನು ಹುಡುಕುತ್ತೇವೆ ಎಂದು ಸಾಹಿತಿ ಡಾ ಸುಜಾತಾ ಚಲವಾದಿ ಅವರು ಕಳವಳ ವ್ಯಕ್ತಪಡಿಸಿದರು. ಅವರು  ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ ೨ರ ಸಂವಾದದಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ವಿಷಯದ ಕುರಿತು ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ ಅವರು ಮಂಡಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ  ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ಸಿದ್ದನಗೌಡ ಪಾಟೀಲ ರಾಮಚಂದ್ರ ಗಾಣಾಪುರೆ, ಶ್ರೀದೇವಿ ಉತ್ಲಾಸರ, ಸಂದೀಪ ವಿಶ್ವನಾಥ, ಡಾ. ಗಾಂಧೀಜಿ ಮೊಳಕೇರಿ ಉಪಸ್ಥಿತರಿದ್ದರು.

ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.

ಭಾರತದ ಸಂವಿಧಾನ ಒಂದು ಮಹಾಕಾವ್ಯವಾಗಿದೆ: ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ



ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -2:ಯಾವುದೇ ಒಬ್ಬ ವ್ಯಕ್ತಿ ಆತನ ನಿಧನದ ನಂತರ ಅವು ಬದುಕಿದರೆ ಸಿದ್ಧಾಂತಗಳಾಗುತ್ತವೆ, ಚಿಂತನೆ ಇಲ್ಲದ ಚಟುವಟಿಕೆ ಮತ್ತು ಚಟುವಟಿಕೆಯಿಲ್ಲದ ಚಿಂತನೆ ಕುರುಡಾಗುತ್ತವೆ ಮನಸ್ಮೃತಿ ವೈದಿಕರು ಹೇಗೆ ಬದುಕಬೇಕು, ಬೈಬಲ್ ಕ್ರಿಸ್ತರು ಹೇಗೆ ಬದುಕಬೇಕು, ಕುರಾನ್ ಮುಸ್ಲಿಂರು ಹೇಗೆ ಬದುಕಬೇಕು ಎಂದು ತಿಳಿಸಿದರೆ ಭಾರತದ ಸಂವಿಧಾನ ಎಲ್ಲರೂ ಕೂಡಿ ಹೇಗೆ ಬದುಕಬೇಕು ಎಂದು ತಿಳಿಸುತ್ತದೆ ಹೊಸತು ಪತ್ರಿಕೆ ಸಂಪಾದಕ ಡಾ ಸಿದ್ದನಗೌಡ ಪಾಟೀಲ ಅವರು ಹೇಳಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 2ರಲ್ಲಿ ನಮ್ಮ ಸಂವಿಧಾನ ನಮ್ಮ ರಕ್ಷಣೆ ಎಂಬ ವಿಷಯ ಮಂಡಿಸಿ ಮಾತನಾಡಿದರು.ಅಂಬೇಡ್ಕರ್ ಅವರು ದೇಶದ ಸಂಪತ್ತು ಅವಕಾಶ ವಂಚಿತ ಜನರು ಆರ್ಥಿಕವಾಗಿ ಸಬಲರಾಗಲು ಮೀಸಲಾತಿಯನ್ನು ತಂದರು ಕೆಲವು ಪ್ರಮುಖ ವಿಷಯಗಳಿಗೆ ವಿರೋಧ ವ್ಯಕ್ತವಾದಾಗ ಅವುಗಳನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿದರು.ನಮ್ಮ ದೇಶದಲ್ಲಿ ಇಂದಿಗೂ ಪುನಾ ಒಪ್ಪಂದದ ದುರುಪಯೋಗವಾಗುತ್ತಿದೆ ಎಂದು ಆಘಾತ ವ್ಯಕ್ತಪಡಿಸಿದ ಅವರು ಅಂಬೇಡ್ಕರ್ ಅವರು ಜಗತ್ತಿನ ಎಲ್ಲ ಸಂವಿಧಾನಗಳನ್ನು ಅಭ್ಯಸಿಸಿ ಭಾರತದ ಸಂವಿಧಾನವನ್ನು ರಚಿಸಿದರು. ಭಾರತದಲ್ಲಿ ಸಮಾಜವಾದಿ ಪ್ರಜಾಪ್ರಭುತ್ವ ಜಾರಿಗೊಳಿಸುವುದು ಅವರ ಉದ್ದೇಶವಾಗಿತ್ತು ಸಂವಿಧಾನದ ಪೀಠಕೆಯಲ್ಲಿ ನಮಗೆ ನಾವೇ ಅರ್ಪಿಸಿಕೊಳ್ಳುತ್ತಿದ್ದೇವೆ ಎಂದು ಬರೆದಿರುವುದು ಭಾರತದ ಎಲ್ಲರೂ ಅದ್ದನ್ನು ಒಪ್ಪಿಕೊಂಡಿದ್ದೇವೆ ಎಂಬುದಾಗಿದೆ. ಭಾರತದ ಸಂವಿಧಾನ ಒಂದು ಮಹಾಕಾವ್ಯವಾಗಿದೆ ಇತ್ತೀಚಿಗೆ ಸಂವಿಧಾನಕ್ಕೆ ಅಪಮಾನವಾಗುವ ಘಟನೆಗಳು ಜರುಗುತ್ತಿವೆ, ನಮ್ಮ ಸಂವಿಧಾನ ಇವತ್ತು ತನ್ನ ಪ್ರಸ್ತುತತೆ ಉಳಿಸಿಕೊಂಡಿದೆಯೇ ಎಂಬುದನ್ನು ಚಿಂತಿಸಬೇಕಿದೆ ಭಾರತ ಒಂದು ದೇಶವಲ್ಲ ಇದು ಹಲವು ದೇಶಗಳ ಒಂದು ಒಕ್ಕೂಟವಾಗಿದೆ ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡಲಾಗುತ್ತಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಡಾ. ಸುಜಾತಾ ಚಲವಾದಿ, ಶ್ರೀದೇವಿ ಉತ್ಲಾಸರ, ಸಂದೀಪ ವಿಶ್ವನಾಥ, ಡಾ. ಗಾಂಧೀಜಿ ಮೊಳಕೇರಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹೂಡ್ಲೂರ, ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು.

ಆರತಿ ಸವ್ವಾಸೆ ಸ್ವಾಗತಿಸಿದರು. ಡಾ. ಕಪಿಲದೇವ ಚಕ್ರವರ್ತಿ ನಿರೂಪಿಸಿದರು. ಡಾ. ಗೀತಾ ಅಥರ್ಗಾ ವಂದಿಸಿದರು.

ಮಾನವೀಯತೆಯನ್ನು ಬೆಳೆಸಿಕೊಂಡು ನಾವು ವಿಶ್ವಮಾನವರಾಗಬೇಕು:ಡಾ ಕಲ್ಯಾಣಸಿರಿ ಭಂತೇಜಿ


ಈ ದಿವಸ ವಾರ್ತೆ ವಿಜಯಪುರ:

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಮಾನವೀಯತೆಯನ್ನು ಬೆಳೆಸಿಕೊಂಡು ನಾವು ವಿಶ್ವಮಾನವರಾಗಬೇಕು ಸಹೋದರತೆಯಿಂದ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು ನಮ್ಮ ಬದುಕಿನಲ್ಲಿ  ಭಾರತದಲ್ಲಿ ಬೆಳಕಾಗಿ ಬಂದ ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಇಂದಿನ ಭಾರತಕ್ಕೆ ಬುದ್ಧನ ಅಸ್ಟಾಂಗ ಮಾರ್ಗದ ಅವಶ್ಯಕತೆ ಇದೆ ಎಂದು ಮೈಸೂರು ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದ ನೇತೃತ್ವ ವಹಿಸಿ ಮಾತನಾಡಿದರು.ವೇದಿಕೆಯಲ್ಲಿ ಸಮ್ಮೇಳನ ಸರ್ವಧ್ಯಕ್ಷರಾದ ಪ್ರೊ ಎಚ್ ಟಿ ಪೋತೆ,ಡಾ ಬಿ ಎಂ ಪುಟ್ಟಯ್ಯ, ಡಾ ನಾರಾಯಣ ಪವಾರ ಡಾ ಅರುಣ ಜೋಳದ ಗಂಗಾವತಿ ಸಾಹಿತಿ ಡಾ. ಸೋಮಕ್ಕ, ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಕಲಬುಗಿ ಸಾಹಿತಿ ಡಾ.ಸೂಯಕಾಂತ ಸುಜ್ಯಾತ, ಚಿತ್ರದುಗ ಸಾಹಿತಿ ಬಿ.ಎಂ.ಗುರುನಾಥ  ವೇದಿಕೆಯಲ್ಲಿ ಇದ್ದರು.ಡಾ ಗುರುರಾಜ ಯರಗನಹಳ್ಳಿ ಕಾರ್ಯಕ್ರಮ ಸಂಯೋಜಿಸಿದರು ಅವಿನಾಶ ಹತ್ತರಕಿಹಾಳ ಸ್ವಾಗತಿಸಿದರು ಬಸವರಾಜ ಜಾಲವಾದಿ ನಿರೂಪಿಸಿದರು ಭಾರತಿ ಸಂಗಣ್ಣವರ ವಂದಿಸಿದರು.

ನಮ್ಮ ನಮ್ಮ ಸಮುದಾಯಗಳನ್ನು ಎಚ್ಚರಿಸುವ ಕೆಲಸ ಇಂದು ಮಾಡಬೇಕಿದೆ : ಬಿ ಎಂ ಗುರುನಾಥ



 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಜಾತಿ ಅನ್ನುವಂತಹದು ಈ ದೇಶದಲ್ಲಿ ಬಹು ಸಂಖ್ಯಾತರನ್ನು ಶೋಷಣೆಗೆ ಒಳಪಡಿಸಿದೆ ನಮ್ಮ ನಮ್ಮ ಸಮುದಾಯಗಳನ್ನು ಎಚ್ಚರಿಸುವ ಕೆಲಸ ಇಂದು ಮಾಡಬೇಕಿದೆ ಚರ್ಚೆಗಳು ನಾಲ್ಕು ಗೋಡೆ ಒಳಗಿನ ಭಾಷಣಕ್ಕೆ ಸೀಮಿತವಾಗದೆ ನಮ್ಮನ್ನು ನಂಬಿರುವ ಸಮುದಾಯದ ಒಳತಿಗಾಗಿ ಶ್ರಮಿಸಬೇಕಿದೆ ಎಂದು ಚಿತ್ರದುರ್ಗದ ಸಾಹಿತಿ ಬಿ ಎಂ ಗುರುನಾಥ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದಲ್ಲಿ ಭಾಗವಹಿಸಿ ಡಾ ಬಿ ಎಂ ಪುಟ್ಟಯ್ಯ ಅವರು ಮಂಡಿಸಿದ ಪ್ರಬುದ್ಧ ಭಾರತ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.ಡಾ ಅರುಣ ಜೋಳದ ಗಂಗಾವತಿ ಸಾಹಿತಿ ಡಾ. ಸೋಮಕ್ಕ, ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಕಲಬುಗಿ ಸಾಹಿತಿ ಡಾ.ಸೂಯಕಾಂತ ಸುಜ್ಯಾತ,  ವೇದಿಕೆಯಲ್ಲಿ ಇದ್ದರು.

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ : ಡಾ.ಸೂರ್ಯಕಾಂತ ಸುಜ್ಯಾತ



 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಶಿಕ್ಷಣ ಪಡೆಯಲು ಅವಕಾಶ ಪಡೆದ ನಾವು ಅನಾಗರಿಕರಂತೆ ವರ್ತಿಸುತ್ತಿದ್ದೇವೆ, ಸುಶಿಕ್ಷಿತರಾದ ನಾವು ಆಳುವ ವರ್ಗ ಆಗದೆ ಆಳುಗಳಾಗಿದ್ದೇವೆ,ನಾವು ನೂರಕ್ಕೆ 90ರಷ್ಟು ಇರುವ ಜನರನ್ನು ಶಿಕ್ಷಣದಿಂದ ವಂಚಿಸಲು ಇಂದಿನ ಸರಕಾರ ಹೊಂಚುಹಾಕುತ್ತಿದೆ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ ಎಂದು ಕಲಬುರಗಿ ಸಾಹಿತಿ ಡಾ ಸೂರ್ಯಕಾಂತ ಸುಜ್ಯಾತ ಅವರು ಹೇಳಿದರು.ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದಲ್ಲಿ ಭಾಗವಹಿಸಿ ಡಾ ಬಿ ಎಂ ಪುಟ್ಟಯ್ಯ ಅವರು ಮಂಡಿಸಿದ ಪ್ರಬುದ್ಧ ಭಾರತ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.ಡಾ ಅರುಣ ಜೋಳದ ಗಂಗಾವತಿ ಸಾಹಿತಿ ಡಾ. ಸೋಮಕ್ಕ, ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, , ಚಿತ್ರದುಗ ಸಾಹಿತಿ ಬಿ.ಎಂ.ಗುರುನಾಥ ವೇದಿಕೆಯಲ್ಲಿ ಇದ್ದರು.

ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ: ಡಾ.ಸೋಮಕ್ಕ

ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ ಗೋಷ್ಠಿ -1:ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಗಂಗಾವತಿ ಸಾಹಿತಿ ಡಾ ಸೋಮಕ್ಕ ಅವರು ಹೇಳಿದರು. ಅವರು  ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತಿನ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಗೋಷ್ಠಿ 1ರ ಸಂವಾದದಲ್ಲಿ ಭಾಗವಹಿಸಿ ಡಾ ಬಿ ಎಂ ಪುಟ್ಟಯ್ಯ ಅವರು ಮಂಡಿಸಿದ ಪ್ರಬುದ್ಧ ಭಾರತ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.ಭಾರತದ ಪ್ರತಿಯೊಬ್ಬರು ಗೊಡ್ಡು ಸಂಪ್ರದಾಯದಿಂದ ಹೊರ ಬರಬೇಕು ಮೊದಲ ಬಾರಿಗೆ ಬುದ್ಧನ ಕಾಲದಲ್ಲಿ,12ನೇ ಶತಮಾನದಲ್ಲಿ ಬಸವಾದಿ ಶರಣರ ಕಾಲದಲ್ಲಿ ಪ್ರಬುದ್ಧ ಭಾರತ ಬಂದಿತ್ತು ಪ್ರಸ್ತುತ ಸಂದರ್ಭದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಗಟ್ಟಿಗೊಳಿಸುವ ಮೂಲಕ ಪ್ರಬುದ್ಧ ಭಾರತ ಕಟ್ಟಬೇಕಿದೆ ನಾವು ಬುದ್ಧನ ರೀತಿಯಲ್ಲಿ ಎಚ್ಚಗೊಂಡಾಗ ಬಸವಣ್ಣನವರಂತೆ ತಳ ಸಮುದಾಯದವರನ್ನು ತಬ್ಬಿಕೊಂಡಾಗ, ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.ಡಾ ಅರುಣ ಜೋಳದ , ಕುಪ್ಪಂ ಸಾಹಿತಿ ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಕಲಬುಗಿ ಸಾಹಿತಿ ಡಾ.ಸೂಯಕಾಂತ ಸುಜ್ಯಾತ, ಚಿತ್ರದುಗ ಸಾಹಿತಿ ಬಿ.ಎಂ.ಬಿರಾದಾರ ವೇದಿಕೆಯಲ್ಲಿ ಇದ್ದರು.

ಸಂವಿಧಾನವನ್ನು ಓದಿಕೊಳ್ಳದೆ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಕಷ್ಟದ ಕೆಲಸ: ಡಾ ಬಿ ಎಂ ಪುಟ್ಟಯ್ಯ

ಈ ದಿವಸ ವಾರ್ತೆ

ವಿಜಯಪುರ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ : ಗಾಂಧೀಜಿ ಕಲ್ಪನೆ ಸ್ವಾವಲಂಬಿ ಭಾರತವನ್ನು ಇರುವ ಹಾಗೆ ಮುಂದುವರೆಸಬೇಕೆಂಬುದಾಗಿತ್ತು. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನವರದು ಭಾರತವನ್ನು ಆಳಬೇಕೆಂಬುದಾಗಿತ್ತು, ಭಾರತದಲ್ಲಿ ತಲತಲಾತರದಿಂದ ಶೋಷಣೆಗೆ ಒಳಗಾದ ಬಹುಸಂಖ್ಯಾತರಿಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವುದಾಗಿತ್ತು ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ ಬಿ ಎಂ ಪುಟ್ಟಯ್ಯ ಹೇಳಿದರು. ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಪ್ರಬುದ್ಧ ಭಾರತ ಎಂಬ ವಿಷಯದ ಕುರಿತು ವಿಷಯ ಮಂಡಿಸಿ ಮಾತನಾಡಿದರು. ಭಾರತದ ಸಂವಿಧಾನವನ್ನು ಓದಿಕೊಳ್ಳದೆ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಕಷ್ಟದ ಕೆಲಸ ಎಂದರು. ಪ್ರತಿಯೊಬ್ಬರು ಸಂವಿಧಾನದ ಆರ್ಟಿಕಲ್ 51 ಓದಿಕೊಳ್ಳಬೇಕು ಪ್ರಬುದ್ಧ ಭಾರತ ನಿರ್ಮಾಣಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಅಡ್ಡಿಯಾಗಿದೆ ಇದರಿಂದ ಭಾರತದಲ್ಲಿ ಜನರ ಇಂದ್ರಿಯಗಳು ಮಲಿನಗೊಂಡಿವೆ, ಭಾರತ ಸಂವಿಧಾನವನ್ನು ನಾವು ಕೇವಲ ಕಾನೂನು ಗ್ರಂಥಗಳೆಂದು ಪರಿಗಣಿಸಿದ್ದೇವೆ ಇದು ಕೇವಲ ಕಾನೂನು ಗ್ರಂಥವಾಗಿರದೆ ನೈತಿಕ, ಮನೋವೈಜ್ಞಾನಿಕ ಗ್ರಂಥವಾಗಿದೆ ಎಂದು ಹೇಳಿದರು.                   

ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ ಕಲ್ಯಾಣಸಿರಿ ಭಂತೇಜಿ ಅವರು ನೇತೃತ್ವವನ್ನು ವಹಿಸಿದ್ದರು.

ಮಕ್ಕಳಿಗೆ ಸಾಹಿತ್ಯವನ್ನು ಓದುವುದನ್ನು ಕಲಿಸಬೇಕು :ಗಜಲ್ ಕವಿ ಅಲ್ಲಾಗಿರಿರಾಜ್


ಈ ದಿವಸ ವಾರ್ತೆ

 ವಿಜಯಪುರ: ಅಕ್ಯಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಗಾಗಿ ಸಾಹಿತ್ಯ ಬರೆದು ವಿಧಾನಸೌಧ ಸುತ್ತುವುದನ್ನು ಬಿಟ್ಟು ಸಮಾಜದಲ್ಲಿನ ನೋವು ಸಂಕಟಗಳ ಬಗ್ಗೆ ಸಾಹಿತ್ಯ ರಚನೆ ಮಾಡಬೇಕಿದೆ ಎಂದು ಗಜಲ್ ಕವಿ ಅಲ್ಲಾಗಿರಿರಾಜ್ ಅವರು ಹೇಳಿದರು. ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ ಕುಮಾರ ಕಕ್ಕಯ್ಯ ಪೋಳ ವೇದಿಕೆಯಲ್ಲಿ ಜುಲೈ 29 ಮತ್ತು 30ರಂದು ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾಗಿ ಭಾಗವಹಿಸಿ ಮಾತನಾಡಿದರು.ಕವಿ ಮತ್ತೊಬ್ಬ ಕವಿ ಯನ್ನು ಎಂದು ಪ್ರೀತಿಸಲಾರ ನೀವು ಬರೆದ ಪುಸ್ತಕಗಳನ್ನು ಹಮಾಲನಿಗೆ ಕೊಡಿ ಅವರು ನಿಮ್ಮ ಸಾಹಿತ್ಯವನ್ನು ಪ್ರೀತಿಸುತ್ತಾರೆ ನಮ್ಮ ಮನೆಯ ಮಕ್ಕಳಿಗೆ ಸಾಹಿತ್ಯವನ್ನು ಓದುವುದನ್ನು ಕಲಿಸಬೇಕು ಇಲ್ಲವಾದರೆ ಸಾಹಿತ್ಯ ಸಂಸ್ಕೃತಿ ಕಟ್ಟುವುದು ಕಷ್ಟಕರವಾಗಲಿದೆ ಎಂದರು. 

ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ, ನಾಗಠಾಣ ಶಾಸಕ ವಿಠ್ಠಲ ಕಟಧೋಂಡ, ರಾಜು ಆಲಗೂರ, ಮುತ್ತಪ್ಪ ಪೋತೆ, ದಸಂಸ ರಾಜ್ಯ ಸಂಚಾಲಕ ಡಿ.ಜಿಸಾಗರ,  ಬಿ ಎಚ್ ನಾಡಗೇರಿ, ರಾಜ್ಯಾಧ್ಯಕ್ಷ ಡಾ. ಅರ್ಜುನಗೊಳಸಂಗಿ , ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಸ ಹೊದ್ಲೂರ, ಉಪಾಧ್ಯಕ್ಚ ಡಾ. ವೈ.ಎಂ.ಭಜಂತ್ರಿ, ದಸಾಪ ವಿಜಯಪುರ ಜಿಲ್ಲಾಧ್ಯಕ್ಷ ಸಂಯೋಜಕ ಬಸವರಾಜ ಜಾಲವಾದಿ,ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ,  ಸುಜಾತಾ ಚಲವಾದಿ, ಡಾ.ಗಾಂಧೀಜಿ ಮೊಳಕೇರಿ,ಹೇಮಲತಾ ವಸ್ತ್ರದ , ಸಿದ್ದು ರಾಯಣ್ಣವರ  ಇದ್ದರು.

ಸಂವಿಧಾನ ಉಳಿದರೆ ಎಲ್ಲ ಧರ್ಮಗ್ರಂಥಗಳು ಉಳಿಯಲು ಸಾಧ್ಯ:ಪ್ರೊ ಎಚ್ ಟಿ ಪೋತೆ


 ಈ ದಿವಸ ವಾರ್ತೆ

ವಿಜಯಪುರ: ಸಂವಿಧಾನ ಉಳಿದರೆ ಎಲ್ಲ ಧರ್ಮಗ್ರಂಥಗಳು ಉಳಿಯಲು ಸಾಧ್ಯ. ಯಾವ ದೇಶ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಂಸ್ಕೃತವನ್ನು ಕಲಿಯಲಿಕ್ಕೆ ಬಿಡಲಿಲ್ಲ ಅಂತಹ ದೇಶದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಮೂಲಕ ನೀಡಿದ ಸ್ವಾತಂತ್ರ್ಯದ ಮೂಲಕ ಇವತ್ತು ಮಲ್ಲೇಪುರಂ ಜಿ ವೆಂಕಟೇಶ್ ಅವರು ಇವತ್ತು ಸಂಸ್ಕೃತ ಪಾಳಿ ಭಾಷೆಯಲ್ಲಿ ಪಾಂಡಿತ್ಯ ಪಡೆದು ನಮ್ಮ ನಡುವೆ ಇದ್ದಾರೆ ಎಂದು ಪ್ರೊ ಎಚ್ ಟಿ ಪೋತೆ ಅವರು ಹೇಳಿದರು.     ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಾದಿ ಶರಣರ ಆತ್ಮಗಳು ಬೀದಿಯಲ್ಲಿ ಅಲೆದಾಡುತ್ತಿವೆ ಅವರ ಫೋಟೋಗಳಿಗೆ ಮಠಗಳಲ್ಲಿ ಜಾಗ ಸಿಕ್ಕಿದೆ ಎಂದು ಇಂದಿನ ಸಮಾಜದಲ್ಲಿ ಬುದ್ಧ ಬಸವ ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳ ಬಗ್ಗೆ ವಹಿಸುತ್ತಿರುವ ನಿರ್ಲಕ್ಷ್ಯದ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.         ದಲಿತ ಸಾಹಿತಿಗಳು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಇಂದು ದಲಿತ ಸಾಹಿತ್ಯ ಬಹಳ ವಿಶಾಲವಾಗಿ ಬೆಳದಿದೆ. ಅಸ್ಪೃಶ್ಯತೆ ಕಾರಣಕ್ಕೆ ಭಾರತ ಅಂಗವಿಕಲ ಭಾರತವಾಗಿ ಜಗತ್ತಿನ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ ಭಾರತದ ಮಣಿಪುರದಲ್ಲಿ ಈಚೆಗೆ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಂತ ಖಂಡನೀಯ ವಿಷಯ ಇದರ ವಿರುದ್ಧ ಸಂಘಟಿತ ಹೋರಾಟ ಅವಶ್ಯಕತೆಯಿದೆ ಎಂದರು.

ದಲಿತ ಸಾಹಿತ್ಯ ಸಮಾಜದಲ್ಲಿ ಒಂದು ಹೊಸ ಚಳುವಳಿ ಕಟ್ಟುತ್ತಿರುವುದು ಹೆಮ್ಮೆಯ ವಿಷಯ : ಡಿ.ಜಿ.ಸಾಗರ


ಈ ದಿವಸ ವಾರ್ತೆ

 ವಿಜಯಪುರ: ಪ್ರಬುದ್ಧ ಭಾರತ ಮುನ್ನೊಟದೊಂದಿಗೆ ನಡೆಯುತ್ತಿರುವ ದಲಿತ ಸಾಹಿತ್ಯ ಸಮ್ಮೇಳನ ಸಮಾಜದಲ್ಲಿ ಬೆರೂರಿರುವ ಅಸಮಾನತೆಯನ್ನು ತೊಡೆದು ಹಾಕುವ ಕಾರ್ಯವನ್ನು ಮಾಡುತ್ತಿರುವ ದಲಿತ ಸಾಹಿತ್ಯ ಪರಿಷತ್ತು ಸಮ್ಮೇಳನದಲ್ಲಿ ಸಾಮಾಜಿಕ ಸಮಾನತೆಯ ಬಗ್ಗೆ ಚಿಂತನೆ ಮಾಡುವ ಮೂಲಕ ಪ್ರಬುದ್ಧ ಭಾರತ ಕಟ್ಟಲಿಕ್ಕೆ ಶ್ರಮಿಸುತ್ತಿದೆ. ದಲಿತರ ನೋವಿನ ಕಥೆಗಳು ಹೇಳುವ ದಲಿತ ಸಾಹಿತ್ಯ ಸಮಾಜದಲ್ಲಿ ಒಂದು ಹೊಸ ಚಳುವಳಿ ಕಟ್ಟುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ ಜಿ ಸಾಗರ ಅವರು ಹೇಳಿದರು.                            ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದ ಕುಮಾರ ಕಕ್ಕಯ್ಯ ಪೋಳ ವೇದಿಕೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಪುಸ್ತಕ ಮಳಿಗೆ ಉದ್ಘಾಟಿಸಿ  ಮಾತನಾಡಿದರು.                          ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ, 

 ರಾಜ್ಯಾಧ್ಯಕ್ಷ ಡಾ. ಅರ್ಜುನಗೊಳಸಂಗಿ , ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಸ ಹೊದ್ಲೂರ, ಉಪಾಧ್ಯಕ್ಚ ಡಾ. ವೈ.ಎಂ.ಭಜಂತ್ರಿ, ದಸಾಪ ವಿಜಯಪುರ ಜಿಲ್ಲಾಧ್ಯಕ್ಷ ಸಂಯೋಜಕ ಬಸವರಾಜ ಜಾಲವಾದಿ,ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ, ಸುಜಾತಾ ಚಲವಾದಿ, ಡಾ.ಗಾಂಧೀಜಿ ಮೊಳಕೇರಿ ಇದ್ದರು.

ಪ್ರಬುದ್ಧ ಭಾರತ ಕಲ್ಪನೆಯಲ್ಲಿ ಮಾಡುತ್ತಿರುವ ಈ ಸಮ್ಮೇಳನ ಯಶಸ್ವಿಯಾಗಲಿ ; ಸಚಿವ ಎಂ.ಬಿ.ಪಾಟೀಲ


ಈ ದಿವಸ ವಾರ್ತೆ

ವಿಜಯಪುರ: ನೈಜಯವಾಗಿರುವ ಸಾಹಿತ್ಯ ದಲಿತ ಸಾಹಿತ್ಯ ಅದು ದಲಿತರ ಸಾಮಾಜಿಕ ಸಮಸ್ಯೆಗಳ ಸುತ್ತ ರಚನೆ ಆಗಿರುವಂತಹದು 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದಂತಹ ಸಾಮಾಜಿಕ ಕ್ರಾಂತಿಯನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೆರವೇರಿಸಿದ್ದಾರೆ ದಲಿತ ಸಾಹಿತ್ಯ ಬಹಳ ಶ್ರೇಷ್ಠವಾದುದು ಪ್ರಬುದ್ಧ ಭಾರತ ಕಲ್ಪನೆಯಲ್ಲಿ ಮಾಡುತ್ತಿರುವ ಈ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಬೃಹತ್  ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದರು.        ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಇದರ ಬೆಳ್ಳಿ ಸಂಭ್ರಮ ನಿಮಿತ್ಯ ಹಮ್ಮಿಕೊಂಡಿರುವ10ನೇ ಅಖಿಲ ಭಾರತ ದಲಿತ ಸಮ್ಮೇಳನವನ್ನು ಕುಮಾರ ಕಕ್ಕಯ್ಯ ಪೋಳ ವೇದಿಕೆಯಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.         ಪ್ರಾಸ್ತವಿಕವಾಗಿ ದಸಾಪ ರಾಜ್ಯ ಉಪಾಧ್ಯಕ್ಷ ವೈ ಎಂ ಭಜಂತ್ರಿ ಅವರು ಮಾತನಾಡಿ 25 ವರ್ಷಗಳ ಸಂಘಟನೆಯಲ್ಲಿ ಬೆವರು ಹನಿಗಳಿವೆ ಅವು ಸಸಿಯಾಗಿ ಮರವಾಗಿ ನಮ್ಮವರಿಗೆ ಫಲ ನೀಡಿದರೆ ನಮ್ಮ ದಲಿತ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಸಂಘಟನೆ ಸಾರ್ಥಕವಾಗುತ್ತದೆ ಎಂದರು. ದಲಿತ ಸಾಹಿತ್ಯ ಪರಿಷತ್ತು ಉತ್ತರ ಕರ್ನಾಟಕದ ಕೌದಿಯಂತಿದೆ ಅದರೊಳಗೆ ತುಂಡು ತುಂಡು ಬಟ್ಟೆಗಳಿವೆ ಅವುಗಳನ್ನು ಜೋಡಿಸುವ ಕಾರ್ಯವನ್ನು ನಮ್ಮ ರಾಜ್ಯಾಧ್ಯಕ್ಷರಾದ ಡಾ ಅರ್ಜುನ ಗೊಳಸಂಗಿ ಅವರು ಮಾಡಿದ್ದಾರೆ ಎಂದರು. 


ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ, ನಾಗಠಾಣ ಶಾಸಕ ವಿಠ್ಠಲ ಕಟಧೋಂಡ, ಮಾಜಿ ಶಾಸಕ ರಾಜು ಆಲಗೂರ, ಮುತ್ತಪ್ಪ ಪೋತೆ, ದಸಂಸ ರಾಜ್ಯ ಸಂಚಾಲಕ ಡಿ.ಜಿಸಾಗರ,  ಬಿ ಎಚ್ ನಾಡಗೇರಿ, ರಾಜ್ಯಾಧ್ಯಕ್ಷ ಡಾ. ಅರ್ಜುನಗೊಳಸಂಗಿ , ಖಜಾಂಚಿ ಡಾ.ಎಚ್.ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಸ ಹೊದ್ಲೂರ, ವಿಜಯಪುರ ಜಿಲ್ಲಾಧ್ಯಕ್ಷ ಸಂಯೋಜಕ ಬಸವರಾಜ ಜಾಲವಾದಿ,ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ,  ಸುಜಾತಾ ಚಲವಾದಿ, ತಾಲೂಕು ಅಧ್ಯಕ್ಷೆ ಡಾ ಪೂರ್ಣಿಮಾ ಧಾಮಣ್ಣವರ ಡಾ.ಗಾಂಧೀಜಿ ಮೊಳಕೇರಿ,ಹೇಮಲತಾ ವಸ್ತ್ರದ  ಸಿದ್ದು ರಾಯಣ್ಣವರ  ಇದ್ದರು.

Friday, July 28, 2023

ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದ ಹಿರಿಯ ಸಾಹಿತಿ ದೊದ್ದಣ್ಣ ಭಜಂತ್ರಿ


ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದದ ಬೆಳ್ಳಿ ಸಂಭ್ರಮದ ನಿಮಿತ್ಯ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಹಾಗೂ 30 ಎರಡು ದಿನಗಳ ಕಾಲ  ಹಮ್ಮಿಕೊಂಡಿರುವ  10ನೇಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ 

ಪರಿಷತ್ತಿನ ಧ್ವಜಾರೋಹಣ ವನ್ನು ಹಿರಿಯ ಸಾಹಿತಿ ಶ್ರೀ ದೊಡ್ಡಣ್ಣ ಭಜಂತ್ರಿ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.



ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಣರಾದ ಪ್ರೊ. ಎಚ್.ಟಿ.ಪೋತೆ ಹಾಗೂ ಅವರ ಧರ್ಮಪತ್ನಿ ಲಲಿತಾ ಪೋತೆ , ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಜಿಲ್ಲಾಧ್ಯಕ್ಷ ಸವರಾಜ ಜಾಲವಾದಿ,  ಕಾರ್ಯದರ್ಶಿ ಸುಬಾಸ ಹುದ್ಲೂರ, అತಿಥಿಗಳಾದ ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕರಮೇಶ ಆಸಂಗಿ,  ದ.ಸಂ.ಸರಾಜ್ಯ ಸಂಚಾಲಕ ಅಭಿಷೇಕ ಚಕ್ರವರ್ತಿ,  ಮಂಜುನಾಥ ಹಿರೇಮನಿ , ಸುಜಾತಾ ಚಲವಾದಿ, ಡಾ. ಪೂರ್ಣಿಮಾ ದಾಮಣ್ಣವರ,ಎಚ್. ಎಂ. ದೊಡಮನಿ, ಉಮೇಶ ಶಿವಶರಣ, ತ್ರಿವೇಣಿ ಬನಸೋಡೆ , ವಿಜು ಕಾಳಶೆಟ್ಟಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ , ಯಶವಂತ ದೊಡಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

29-07-2023 EE DIVASA KANNADA DAILY NEWS PAPER

ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಎಚ್.ಟಿ.ಪೋತೆ ಅವರಿಗೆ ಅದ್ಧೂರಿ ಸ್ವಾಗತ

ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದಗ ಬೆಳ್ಳಿ ಸಂಭ್ರಮದ ನಿಮಿತ್ಯ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಹಾಗೂ 30 ರಂದು ನಡೆಯಲಿರುವ 10ನೇಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ ಹಾಗೂ ಅವರ ಧರ್ಮಪತ್ನಿ ಲಲಿತಾ ಲಲಿತಾ ಪೋತೆ ಅವರು ವಿಜಯಪುರ ನಗರಕ್ಕೆ ಆಗಮಿಸಿದ ನಿಮಿತ್ಯ ವಿಜಯಪುರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಅದ್ಧೂರಿಯಾಗಿ ಪುಸ್ತಕ ನೀಡಿ ಆತ್ಮೀಯವಾಗಿ ಸ್ವಾಗತಿಸಿಕೊಂಡರು.

ಈ ಸಂದರ್ಭದಲ್ಲಿ ದ.ಸಾ.ಪ ರಾಜ್ಯಾಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ, ಉಪಾಧ್ಯಕ್ಷ ಡಾ.ಎಚ್.ಬಿ.ಕೋಲಕಾರ, ಕಾರ್ಯದರ್ಶಿ ಸುಭಾಸ ಹುದ್ಲೂರ, ಸಮ್ಮೇಳನದ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ, ದ.ಸಾ.ಪ ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ, ಬೆಳಗಾವಿ ವಿಭಾಗೀಯ ಅಧ್ಯಕ್ಷೆ ಡಾ. ಸುಜಾತಾ ಚಲವಾದಿ, ಸಾಹಿತಿ ದೊಡ್ಡಣ್ಣ ಭಜಂತ್ರಿ, ಹಿರಿಯ ಪತ್ರಕರ್ತ ಅನೀಲ ಹೊಸಮನಿ, ಪ್ರಭುಗೌಡ ಪಾಟೀಲ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಮೋಹನ ಕಟ್ಟಿಮನಿ, ಚೆನ್ನು ಕಟ್ಟಿಮನಿ, ಫಯಾಜ ಕಲಾದಗಿ, ಡಾ.ಭುವನೇಶ್ವರಿ ಕಾಂಬಳೆ, ತ್ರಿವೇಣಿ ಬನಸೋಡೆ, ವನಜಾಕ್ಷಿ ನಿಡೋಣಿ, ಹೇಮಲತಾ ವಸ್ತ್ರದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Thursday, July 27, 2023

28-07-2023 EE DIVASA KANNADA DAILY NEWS PAPER

ನಾಳೆ ( ಜು.28) ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ; ಜಿಲ್ಲಾಧಿಕಾರಿ ಟಿ.ಭೂಬಾಲನ ಆದೇಶ

 

ಈ ದಿವಸ ವಾರ್ತೆ

ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ  ಮುಂಜಾಗೃತಾ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು,ಸರ್ಕಾರಿ ಹಾಗೂ ಖಾಸಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ಶುಕ್ರವಾರ (ಜುಲೈ-28) ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಆದೇಶಿಸಿದ್ದಾರೆ.


ಎಲ್ಲ ಪದವಿ,ಸ್ನಾತಕೋತ್ತರ ಪದವಿ,ಡಿಪ್ಲೋಮಾ, ಇಂಜಿನೀಯರಿಂಗ್ ಮತ್ತು ಐಟಿಐ ಕಾಲೇಜುಗಳಿಗೆ ರಜೆ ಘೊಷಿಸಿರುವುದಿಲ್ಲ.

 ಎಂದಿನಂತೆ ತರಗತಿ ನಡೆಯಲಿವೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಸಕಲಾ ಕಲಾ ವಲ್ಲಭ ಪ್ರಕಾಶ ಕುಂಬಾರ ಸಾವು

ಈ ದಿವಸ ವಾರ್ತೆ

ವಿಜಯಪುರ: ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಜಿಲ್ಲೆಯ ಕನ್ನಡಪರ ಹೋರಾಟಗಾರ ಪ್ರಕಾಶ ಕುಂಬಾರ ದಾರುಣ ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ನಾಗಠಾಣ ಬಳಿ ಗುರುವಾರ ನಡೆದಿದೆ‌.

ಇಲ್ಲಿನ ಸೊಲ್ಲಾಪುರ ರಸ್ತೆಯ ಶಾಂತಿ ನಗರದ ನಿವಾಸಿ ಪ್ರಕಾಶ ಕುಂಬಾರ (56) ಮೃತಪಟ್ಟ ದುರ್ದೈವಿ.


ಪ್ರಕಾಶ ಕುಂಬಾರ ಈತ ಕನ್ನಡಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಜಿಲ್ಲೆ ಹಾಗೂ ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಹೋರಾಟ ನಡೆಸಿದ್ದರು. ನಗರ ಹೃದಯ ಭಾಗವಾದ ಗಾಂಧಿ ವೃತ್ತದಲ್ಲಿರುವ ಶತಮಾನ ಕಂಡ ಐತಿಹಾಸಿಕ ಕನ್ನಡ ಬಾಲಕಿಯರ ಶಾಲೆ ನಂ. 1 ರ ಉಳುವಿಕೆಗಾಗಿ, ತಮ್ಮ ಹೋರಾಟದ ಮೂಲಕ ಶ್ರಮಿಸಿದ್ದರು. ಅದರಂತೆ ವಿಜಯಪುರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ, ಪ್ರಕಾಶ ಕುಂಬಾರ ಅವರು ಕದಂಬ ಕಿಡಿ  ಪತ್ರಿಕೆಯ ಸಂಪಾದಕರಾಗಿದ್ದರು.

ಅದರಂತೆ ಪ್ರಗತಿ ಪರ ಚಿಂತಕರಾಗಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ- ತಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೋರಾಟಗಾರ ಪ್ರಕಾಶ ಕುಂಬಾರ ಅಗಲಿಕೆಗೆ ಶಿವಶರಣ ಗ್ರಾಫಿಕ್ಸ್ & ಸುಶಾಂತ ಪ್ರಿಂಟರ್ಸ್ ವಿಜಯಪುರ ಹಾಗೂ  ವಿವಿಧ ಸಂಘಟನೆ ಮುಖಂಡರು, ಗಣ್ಯರು, ಗೆಳೆಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Sunday, July 23, 2023

ಜು.29, 30 ರಂದು ಹಮ್ಮಿಕೊಂಡಿರುವ 10 ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆ ಭರದಿಂದ ಸಾಗಿದೆ: ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ ಹೇಳಿಕೆ

ಈ ದಿವಸ ವಾರ್ತೆ

ವಿಜಯಪುರ: ಪ್ರಬುದ್ಧ ಭಾರತದ ಆಶಯದೊಂದಿಗೆ ವಿಜಯಪುರ ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ ೨೯ ಮತ್ತು ೩೦ ರಂದು ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರು ಹೇಳಿದರು. 

ಅವರು ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸಮ್ಮೇಳನದ ಪೂರ್ವ ಸಿದ್ಧತೆಗಳ ಕುರಿತು ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಹಾಗೂ ಬೆಳ್ಳಿ ಸಂಭ್ರಮದ ವಿಶೇಷವಾಗಿ ಮೂಡಿ ಬರುತ್ತಿರುವ ಪ್ರೊ. ಎಚ್.ಟಿ. ಪೋತೆ ಅವರ ಜನಪ್ರಿಯ ನಾಟಕ ರಮಾಯಿ ಆಧಾರಿತ ಸುನೀಲ ಸುಧಕಾರ ನಿರ್ದೇಶನದ ರಮಾಸಾಹೇಬಾ ಕಿರು ಚಲನ ಚಿತ್ರದ ಟೀಜರ ಬಿಡುಗಡೆ ಮಾಡಿ ಮಾತನಾಡಿದರು. 

ಕರ್ನಾಟಕ ರಾಜ್ಯದ ವಿವಿದ ವಿಶ್ವವಿದ್ಯಾಲಯಗಳ ಉಪನ್ಯಾಸಕರು ಹಾಗೂ ನಾಡಿನ ಬುದ್ಧ, ಬಸವ ಹಾಗೂ ಅಂಬೇಡ್ಕರ ಚಿಂತನೆಯ ಲೇಖಕರು ಸಾಹಿತಿಗಳು ವಿವಿಧ ಗೋಷ್ಠಿಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ. ದಲಿತ ಸಾಹಿತ್ಯ ಪರಿಷತ್ತು, ಯಾವುದೇ ಒಂದು ಸಮಾಜಕ್ಕೆ ಸೀಮಿತವಾದುದ್ದಲ್ಲ. ಇದು ತುಳಿತಕ್ಕೊಳಗಾದ ಎಲ್ಲಾ ಸಮಾಜಗಳ ಧ್ವನಿಯಾಗಿ ಕೆಲಸ ಮಾಡುವಂತಹದು, ಸುಮಾರು ೨೯ ವರ್ಷಗಳ ಕಾಲ ನಿರಂತರವಾಗಿ ರಾಜ್ಯದಲ್ಲಿ ಬುದ್ಧ, ಬಸವ, ಹಾಗೂ ಅಂಬೇಡ್ಕರ್ ಚಿಂತನೆಯನ್ನು ಪ್ರಸಾರ ಮಾಡುವ ಕೆಲಸ ದ.ಸಾ.ಪ ಮಾಡಿಕೊಂಡು ಬರುತ್ತಿದೆ. ಬೆಳ್ಳಿ ಸಂಭ್ರಮದ ನಿಮಿತ್ಯ ವಿಜಯಪುರದಲ್ಲಿ ಅಖಿಲ ಭಾರತ ಮಟ್ಟದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸಮ್ಮೇಳನ ಬಹು ವೈಶಿಷ್ಟಗಳು ಹೊಂದಿದೆ ಎಂದರು. 

ಸಮ್ಮೇಳನದ ಮೊದಲ ದಿನ ೨೯-೦೭-೨೦೨೩ ರಂದು ಬೆಳಿಗ್ಗೆ ೮ ಗಂಟೆಗೆ ಕಂದಗಲ್ ಹನುಮಂತರಾಯ ರಂಗಮAದಿರದ ಮುಂದೆ ಸಾಹಿತಿ ದೊಡ್ಡಣ್ಣ ಭಜಂತ್ರಿಯವರು ಪರಿಷತ್ತಿನ ಧ್ವಜಾರೋಹಣ ನೇರವೇರಿಸುವುದೊಂದಿಗೆ ಸಮ್ಮೇಳನಕ್ಕೆ ಚಾಲನೆ ಸಿಗಲಿವೆ. ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರುಗಳಾದ ರಮೇಶ ಆಸಂಗಿ, ಅಭಿಷೇಕ ಚಕ್ರವರ್ತಿ, ಭಾಗವಹಿಸಲಿದ್ದಾರೆ. 

ಅಂದು ಬೆಳಿಗ್ಗೆ ೮.೩೦ಕ್ಕೆ ನಗರದ ಹೃದಯ ಭಾಗ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜರುಗುವ ಸಮ್ಮೇಳಾಧ್ಯಕ್ಷರ ಮೆರವಣಿಗೆಗೆ ನಾಗಠಾಣ ಕ್ಷೇತ್ರದ ಮಾಜಿ ಶಾಸಕ ರಾಜು ಆಲಗೂರ ಅವರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ಸಂಚಾಲಕರುಗಳಾದ ಅಡಿವೆಪ್ಪ ಸಾಲಗಲ್, ಚಂದ್ರಕಾAತ ಸಿಂಗೆ, ಶೇಷರಾವ್ ಮಾನೆ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಕಾರ್ಯಕ್ರಮದ ಮುಖ್ಯ ಘಟ್ಟ,  ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿ ಮತ್ತು ಬಿಟಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ.

ವಿಜಯಪುರ ಬುದ್ಧ ವಿಹಾರದ ಪೂಜ್ಯ ಸಂಘಪಾಲ ಬಂತೇಜಿಯವರು ನೇತೃತ್ವ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಸಚಿವರಾದ ಪ್ರಿಯಾಂಕ ಖರ್ಗೆಯವರು ರಮಾ ಸಾಹೇಬಾ ಕಿರು ಚಿತ್ರ ಹಾಗೂ ಪರಿಷತ್ತಿನ ಗ್ರಂಥಗಳ ಬಿಡುಗಡೆ ಮಾಡಲಿದ್ದಾರೆ. 

ಚಿಂತಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಮ್ಮೇಳನದ ಆಶಯ ನುಡಿ ಆಡಲಿದ್ದಾರೆ. ಗಜಲ್ ಕವಿ ಅಲ್ಲಾಗಿರಿರಾಜ್ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರ ನುಡಿ ಆಡಲಿದ್ದಾರೆ. ಸಮ್ಮೇಳನಾಧ್ಯಕ್ಷ ಪ್ರೊ.ಎಚ್.ಟಿ ಪೋತೆ ಅವರು ಸಮ್ಮೇಳನ ಅಧ್ಯಕ್ಷ ನುಡಿ ಆಡಲಿದ್ದಾರೆ. ಜವಳಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಪುಸ್ತಕ ಮಳಿಗೆ ಉದ್ಘಾಟನೆ, ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಜಿ ವಿಧಾನ ಪರಿಷತ್ತ ಸದಸ್ಯ ಡಿ.ಎಸ್. ವೀರಯ್ಯ ಅವರು ದಸಾಪ ಬೆಳ್ಳಿ ಸಂಭ್ರಮ ಕೈಪಿಡಿ ಬಿಡುಗಡೆ, ಸಿಂದಗಿ ಶಾಸಕ ಅಶೋಕ ಮನಗೂಳಿ, ಇತರ ಲೇಖಕರ ಕೃತಿ ಬಿಡುಗಡೆ ನೇರವೇರಿಸಲಿದ್ದಾರೆ. 

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ, ಸರ್ವಾಧ್ಯಕ್ಷರ ಪುಸ್ತಕ ಮಳಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ದ.ಸಾ.ಪ. ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬುದ್ಧ ಎಜುಕೇಶನ್ ಸಮಿತಿ ಪ್ರ. ಕಾರ್ಯದರ್ಶಿ ತುಕಾರಾಮ ಚಂಚಲಕರ, ಕನ್ನಡ ಸಂಸ್ಕೃತಿ ಸಹಾಯಕ ನಿರ್ದೇಶಕ ಬಿ.ನಾಗರಾಜ, ಲೇಖಕೀಯರ ಸಂಘದ ಅಧ್ಯಕ್ಷೆ ಹೇಮಲತಾ ವಸ್ತçದ ಭಾಗವಹಿಸಲಿದ್ದಾರೆ. 

ಮಧ್ಯಾಹ್ನ ೧ ಗಂಟಗೆ ಜರುಗುವ ಗೋಷ್ಠಿ-೧ ವಿಶೇಷ ಉಪನ್ಯಾಸ ಮತ್ತು ಸಂವಾದದ ನೇತೃತ್ವವನ್ನು ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದ ಪೂಜ್ಯ ಡಾ. ಕಲ್ಯಾಣಸಿರಿ ಬಂತೇಜಿಯವರು ವಹಿಸಿಕೊಳ್ಳಲಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಮ್. ಪುಟ್ಟಯ್ಯನವರು ಪ್ರಬುದ್ಧ ಭಾರತ ನಿರ್ಮಾಣ ಎಂಬ ವಿಷಯ ಮಂಡಿಸಲಿದ್ದಾರೆ. ಸಾಹಿತಿಗಳಾದ ಅರುಣ ಜೋಳದ ಕೂಡ್ಲಗಿ, ಕರಿಗೂಳಿ ಶಂಕೇಶ್ವರ, ಡಾ.ಸೋಮಕ್ಕ, ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಡಾ. ಸೂರ್ಯಕಾಂತ ಸುಜ್ಯಾತ, ಬಿ.ಎಂ.ಗುರುನಾಥ, ಪ್ರತಿಕ್ರಿಯೆ ನೀಡಲಿದ್ದಾರೆ. ಮಹಿಳಾ ವಿವಿ ಪ್ರಾಧ್ಯಾಪಕ ಡಾ. ನಾರಾಯಣ ಪವಾರ, ಡಾ. ಸಿದ್ಧಲಿಂಗಪ್ಪ ಕೋಟ್ನೇಕಲ್ಲ, ವೈ.ಸಿ. ಮಯೂರ, ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಮಧ್ಯಾಹ್ನ ೨.೩೦ ಗಂಟೆಗೆ ಜರುಗುವ ಗೊಷ್ಠಿ-೨ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ಧಣಗೌಡ ಪಾಟೀಲ ವಿಷಯ ಮಂಡಿಸಲಿದ್ದಾರೆ. ಸಾಹಿತಿಗಳಾದ ಡಾ.ಸುಜಾತ ಚಲವಾದಿ, ಡಾ.ಓಬಳೇಶ, ಡಾ. ಪ್ರೇಮ ಅಪಚಂದ, ಡಾ. ರಾಮಚಂದ್ರ ಗಾಣಪೂರೆ, ಶ್ರೀದೇವಿ ಉತ್ಲಾಸರ ಅವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಾಹಿತಿ ಸಂಘಟಕ ಅನೀಲ ಹೊಸಮನಿ, ಸಿ.ಎಸ್. ಆನಂದ, ಸಂದೀಪ ವಿಶ್ವನಾಥ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಸಂಜೆ -೪ ಗಂಟೆಗೆ ಜರುಗುವ ಗೋಷ್ಠಿ - ೩ ಸಮ್ಮೇಳನಾಧ್ಯಕ್ಷರ ಸಾಹಿತ್ಯ- ಅಧ್ಯಕ್ಷತೆಯನ್ನು ಸಾಹಿತಿ ಡಾ. ಚನ್ನಪ್ಪ ಕಟ್ಟಿ ವಹಿಸಲಿದ್ದಾರೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ವಿಕ್ರಮ ವಿಸಾಜಿ ಯವರು ಸೃಜನ ಸಾಹಿತ್ಯ ಕುರಿತು ಮಾತನಾಡಲಿದ್ದಾರೆ. ಕ.ವಿ.ವಿ ಧಾರವಾಡ ಪ್ರಾಧ್ಯಾಪಕರಾದ ಡಾ. ಮುದೇನೂರು ನಿಂಗಪ್ಪ ಅವರು ಸೃಜನೇತರ ಸಾಹಿತ್ಯ ಕುರಿತು ವಿಷಯ ಮಂಡಿಸಲಿದ್ದಾರೆ. ಕಲಬುರಗಿಯ ಸಾಹಿತಿ ಡಾ. ಕಿರಣ ಗಾಜನೂರ ಅವರು ಜೀವನ ಚರಿತ್ರೆಗಳ ಕುರಿತು ಮಾತನಾಡಲಿದ್ದಾರೆ. ಬೆಂಗಳೂರಿನ ಸಾಹಿತಿ ಡಾ. ಶಿವರಾಜ ಬ್ಯಾಡರ ಹಳ್ಳಿಯವರು ಸಂಶೋಧನೆ ಕುರಿತು ಮಾತನಾಡಲಿದ್ದಾರೆ. ಡಾ. ಶಿವಗಂಗಾ ಬಲಗುಂದಿ, ಪ್ರೊ. ಅಂಜನಪ್ಪ ಅವರು ಪ್ರತಿಕ್ರಿಯೆ ನೀಡಲಿದ್ದಾರೆ. ವಿಜಯಪುರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ, ಡಾ. ಜೈನೇಸ್ ಪ್ರಸಾದ, ಡಾ.ಬಸವರಾಜ ಪೂಜಾರ, ಮಹಿಳಾ ವಿ.ವಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಓಂಕಾರ ಕಾಕಡೆ ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಸಂಜೆ -೫.೩೦ ಗಂಟೆಗೆ ಜರುಗುವ ಗೋಷ್ಠಿ - ೪ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಕವಿಗಳಾದ ಡಾ.ಟಿ. ಯಲ್ಲಪ್ಪ ವಹಿಸಲಿದ್ದಾರೆ. ರಾಯಚೂರಿನ ಕವಿಗಳಾದ ಡಾ. ಆರೀಫರಾಜಾ ಆಶಯನುಡಿಯಾಡಲಿದ್ದಾರೆ. ವಿಜಯಪುರ ಕವಯತ್ರಿ ಇಂದುಮತಿ ಲಮಾಣಿ ಅತಿಥಿಗಳಾಗಿ ಹಾಗೂ ಕೋಲಾರದ ದ.ಸಾ.ಪ ಅಧ್ಯಕ್ಷ ಡಾ.ಜಯಮಂಗಲ ಚಂದ್ರಶೇಖರ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ನಾಡಿನ ಸುಮಾರು ೨೪ ಹೆಸರಾಂತ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಸಲಿದ್ದಾರೆ. 

ದಿನಾಂಕ : ೩೦-೦೭-೨೦೨೩ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಬೆಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭ ಶರಣ ಕಲಾ ಬಳಗದವರ ಸಮತಾ ಗೀತೆಗಳ ಮೂಲಕ ಪ್ರಾರಂಭವಾಗಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕ.ವಿ.ವಿ ಹಂಪಿಯ ಪ್ರಾಧ್ಯಾಪಕ ಡಾ. ಚಲುವರಾಜು ಅಭಿನಂದನ ನುಡಿ ಆಡಲಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ವಿವಿಧ ಭಾಗದ ಸಾಹಿತಿಗಳಾದ ಆರ್. ದೊಡ್ಡೇಗೌಡ, ವೀರ ಹನುಮಾನ, ಶ್ರೀಶೈಲ ನಾಗರಾಳ, ಡಾ. ಗವಿಸಿದ್ದಪ್ಪ ಪಾಟೀಲ, ಮುರ್ತುಜಾ ಬೇಗಂ ಕೊಡಗಲಿ, ಹಾರೋಹಳ್ಳಿ ರವೀಂದ್ರ, ಪರುಶರಾಮ ಶಿವಶರಣ, ಸಮಾಜ ಸೇವೆಯಲ್ಲಿ ನರೇಂದ್ರ ನಾಗವಾಲ, ದಲಿತ ಚಳುವಳಿಯಲ್ಲಿ ಮಳ್ಳೂರ ಶಿವಮಲ್ಲು, ಪತ್ರಿಕಾರಂಗದಲ್ಲಿ ಡಾ. ಸಂಜೀವಕುಮಾರ ಮಾಲಗತ್ತಿ, ರಾಜು ವಿಜಯಪುರ, ಚಿತ್ರಕಕಲೆಯಲ್ಲಿ ಸೌಜನ್ಯ ಕರಡೋಣಿ, ಸಂಗೀತದಲ್ಲಿ ಸಿ.ಆರ್. ನಟರಾಜ, ಸಿನಿಮಾ ಕ್ಷೆತ್ರದಲ್ಲಿ ದೇವು ಕೆ. ಅಂಬಿಗ ಅವರಿಗೆ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಸಂಜೆ ೭ ಗಂಟೆಗೆ ಜೀವನ ಸಿನಿ ಕ್ರಿಯೇಷನ್ಸ್ ಅರ್ಪಿಸುವ ರಮಾಸಾಹೇಬಾ ಕಿರುಚಿತ್ರ ಪ್ರದರ್ಶನ ಜರುಗಲಿದೆ.

ಇದೇ ಸಂದರ್ಭದಲ್ಲಿ ಉರಿವ ಕರುಳ ದೀಪ (ಕಾವ್ಯದ)ಲೇಖಕರಾದ ಬಿದಲೋಟಿ ರಂಗನಾಥ ಹಾಗೂ ಇರುವುದು ಒಂದೇ ರೊಟ್ಟಿ (ಕಾವ್ಯ) ಅವರಿಗೆ ಶ್ರೀಮತಿ ಚಂದ್ರಕಲಾ ಇಟಗಿ ಮಠ ದತ್ತಿ ಪ್ರಶಸ್ತಿ, 

ತಾಂಡ ಕಾದಂಬರಿ ಲೇಖಕರಾದ ಡಾ. ಶಾಂತಾನಾಯಕ ಶಿರಗಾನಹಳ್ಳಿ ಬೋಳೇ ಬಂಡೆಪ್ಪ ದತ್ತಿ ಪ್ರಶಸ್ತಿ, ಕಿಟಕಿಯಂಚಿನ ಮೌನ (ಕಥೆ)ಗೆ ರೇನುಕಾ ಹೆಳವರ ಅವರಿಗೆ ತಿಪ್ಪಣ್ಣ ಪೋತೆ ದತ್ತಿ ಪ್ರಶಸ್ತಿ, ಸೈಂಧವ ಸಂಕಥನದ (ಸಂಶೋಧನೆ) ಲೇ. ಪಿ.ಆರ್.ಡಿ ಮಲ್ಲಯ್ಯಕಟೇರ ಅವರಿಗೆ ಡಾ. ಶರಣಮ್ಮ ಗೋರೆಭಾಳ ದತ್ತಿ ಪ್ರಶಸ್ತಿ, ನೆಲರೂಪಿ (ವಿಮರ್ಶೆ) ಲೇ.ಡಾ.ಪ್ರಸನ್ನ ನಂಜಾಪುರ ಹಾಗೂ ಅಕ್ಷರ ಮೈತ್ರಿ ಲೆ. ಡಾ.ಗಿರೀಶ ಮುಗತಿ ಹಳ್ಳಿಯವರಿಗೆ ಶ್ರೀಮತಿ ವೆಂಕಟಲಕ್ಷö್ಮಮ್ಮ ದತ್ತಿ ಪ್ರಶಸ್ತಿ, ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್ (ಅನುವಾದ) ಲೇ. ಪ್ರಭುಲಿಂಗ ನೀಲೂರೇ ಅವರಿಗೆ ರಾಧಾಭಾಯಿ ಭೋರಗಾಂವಕರ ದತ್ತಿ ಪ್ರಶಸ್ತಿ, ಮಾತಿನ ಮಂಟಪ (ಹರಟೆ) ಲೇ. ಗೌಡಗೇರ ಮಾಯುಶ್ರೀಯವರಿಗೆ ಸಂಜಯ ಕುರಣೆ ದತ್ತಿ ಪ್ರಶಸ್ತಿ, ಉರಿಪಾದ (ಅಂಕಣ) ಲೇ.ಡಾ.ಎಚ್.ಡಿ.ಉಮಾಶಂಕರ ಅವರಿಗೆ ಲಿಂಗಣ್ಣ ಜಂಗಮರ ಹಳ್ಳಿ ದತ್ತಿ ಪ್ರಶಸ್ತಿ, ಅಂಬೇಡ್ಕರ್ ಮಾರ್ಗ (ವೈಚಾರಿಕ) ಲೇ. ಸೋಮಲಿಂಗ ಗೆಣ್ಣೂರ ವೆಂಕಟಯ್ಯ ಅಪ್ಪಗೆರೆ ದತ್ತಿ ಪ್ರಶಸ್ತಿ, ನಾ ಯಾರಿಗಲ್ಲದವಳು (ಸಂಪಾದನೆ) ಲೇ. ಡಾ. ಹೊಂಬಯ್ಯ ಹೊನ್ನಲಗೆರೆ, ಸಾರ್ಥಕ ಬದುಕು ನ್ಯಾಯಮೂರ್ತಿ ಶಿವರಾಜ ಪಾಟೀಲರವರ ಕುರಿತು ಲೇ. ಡಾ.ಅಮರೇಶ ಯಾತಗಲ್, ವಿಜಯಪುರ ಪ್ರಾದೇಶಿಕ ಪದಕೋಶ (ಮೊದಲ ಕೃತಿ) ಡಾ.ಪೂರ್ಣಿಮಾ ಧಾಮಣ್ಣವರ, ಗಾಂಧಿ ನೇಯ್ದಿಟ್ಟ ಬಟ್ಟೆ (ಮೊದಲ ಕೃತಿ)ರಾಯಸಾಬ ದರ್ಗಾ ಅವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಇದೇ ಸಂಧರ್ಭದಲ್ಲಿ ಬೆಂಗಳೂರು ವಿಭಾಗೀಯ ಸಂಯೋಜಕರಾದ ಗಣಪತಿ ಚಲವಾದಿ, ರಾಯಚೂರ ಜಿಲ್ಲಾ ದ.ಸಾ.ಪ ಅಧ್ಯಕ್ಷ ತಾಯರಾಜ್ ಮರ್ಚಟಹಾಳ, ಸಿಂಧನೂರು ತಾಲೂಕಾಧ್ಯಕ್ಷ ಹುಸೇನಪ್ಪ ಅಮರಾಪೂರ ಅವರಿಗೆ  ದ.ಸಾ.ಪ ಅತ್ಯುತ್ತಮ ಸಂಘಟನಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಮಧ್ಯಾಹ್ನ ೧ ಗಂಟೆಗೆ ಗೋಷ್ಠಿ - ೫ ಹೊಸ ತಲೆಮಾರಿನ ದಲಿತ ಸಾಹಿತ್ಯ ಸಾಂಸ್ಕೃತಿ ಸಮಸ್ಯೆ ಸವಾಲುಗಳ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಬೆಂಗಳೂರಿನ ವಿವಿ. ಪ್ರಾಧ್ಯಾಪಕರಾದ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ವಹಿಸಲಿದ್ದಾರೆ, ದಲಿತ ಕಾವ್ಯ ಕುರಿತು ಡಾ. ಲಿಂಗಣ್ಣ ಜಂಗಮರ ಹಳ್ಳಿ ದಲಿತ ಕಥೆ ಕುರಿತು ಡಾ. ಸುಭಾಸ ರಾಜಮಾನೆ, ದಲಿತ ಕಾದಂಬರಿ ನಾಟಕ ಕುರಿತು ಡಾ. ನೆಲ್ಲಿಕಟ್ಟೆ ಸಿದ್ಧೇಶ ಅವರು ವಿಷಯ ಮಂಡಿಸಲಿದ್ದಾರೆ. ಡಾ. ಲಕ್ಷಿö್ಮÃ ದೇವಿ ವೈ. ಪ್ರೊ. ರಮೇಶ ರಾಠೋಡ, ಸಂಜು ಕಂಬಾಗಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಮಧ್ಯಾಹ್ನ – ೨.೩೦ ಗಂಟಗೆ ಗೋಷ್ಠಿ -೬ ಕಾವ್ಯ ಸಂಭ್ರಮ ೨ ಅಧ್ಯಕ್ಷತೆಯನ್ನು ಡಾ. ಜಯದೇವಿ ಗಾಯಕವಾಡ, ಅವರು ವಹಿಸಲಿದ್ದಾರೆ. ಡಾ. ದಸ್ತಗೀರ ಸಾಬ ದಿನ್ನಿ ಆಶಯನುಡಿ ಆಡಲಿದ್ದಾರೆ. 

ಅತಿಥಿಗಳಾಗಿ ಕ.ಸಾ.ಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ವಿದ್ಯಾವತಿ ಅಂಕಲಗಿಯವರು ಭಾಗವಹಿಸಲಿದ್ದಾರೆ.

ಕವಿಗೋಷ್ಠಿಯಲ್ಲಿ ನಾಡಿನ ಹೆಸರಾಂತ ಸುಮಾರು ೩೪ ಜನ ಕವಿಗಳು ಭಾಗವಹಿಸಿ ಕವನ ವಾಚಿಸಲಿದ್ದಾರೆ.

ಸಂಜೆ ೪ ಗಂಟೆಗೆ ಸಮಾರೋಪ ಹಾಗೂ ಸನ್ಮಾನ ನೇತೃತ್ವವನ್ನು ಬೀದರ ಅಣಗೂರ ಬೌದ್ಧವಿಹಾರದ ಪೂಜ್ಯವರಜ್ಯೋತಿ ಬಂತೇಜಿಯವರು ವಹಿಸಿಕೊಳ್ಳಲಿದ್ದಾರೆ. ದ.ಸಾ.ಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ಎಚ್.ಟಿ. ಪೋತೆಯವರು ಸಮ್ಮೇಳನ ಅಧ್ಯಕ್ಷರ ನುಡಿ ಆಡಲಿದ್ದಾರೆ. ಬೆಂಗಳೂರಿನ ಕವಿ ಸುಬ್ಬು ಹೊಲೆಯಾರ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಿಳಾ ವಿವಿಯ ಪ್ರೊ. ಸಕ್ಪಾಲ ಹೂವಣ್ಣ, ಸಿದ್ದು ರಾಯಣ್ಣವರ, ಅಶೋಕ ಚಲವಾದಿ, ಎಸ್.ಎಸ್.ಟಿ. ನೌಕರ ಸಂಘದ ಅಧ್ಯಕ್ಷ ಬಿ.ಎಚ್. ನಾಡಗೇರಿಯವರು ಭಾಗವಹಿಸಲಿದ್ದಾರೆ. 

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. 

ಅಂದು ಸಂಜೆ ೭ ಗಂಟೆಗೆ ನಾಡಿನ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. 

ಸಮ್ಮೇಳನದ ೨ ದಿನ ವಿನಾಯಕ ಕಮತದ ದ.ಸಾ.ಪ ಗದಗ, ಚಿತ್ರಕಲಾ ಹಾಗೂ ಛಾಯಾಚಿತ್ರ ಪ್ರದರ್ಶನ ವಿಜಯಪುರದ ಪೊನ್ನಪ್ಪ ಕಡೇಮನಿ ಚಿತ್ರಕಲೆ ಪ್ರದರ್ಶನ ಲಕ್ಷö್ಮಣ ಹಂದ್ರಾಳ ಹಾಗೂ ಸತೀಶ ಕೆ ಛಾಯಾಚಿತ್ರ ಪ್ರದರ್ಶನ ನಡೆಸಲಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿಯವರು ಪತ್ರಿಕಾ ಗೋಷ್ಠಿಯಲ್ಲಿ ಸುಧೀರ್ಗವಾಗಿ ಮಾತನಾಡಿದರು. 

ಪತ್ರಿಕಾ ಗೋಷ್ಠಿಯಲ್ಲಿ ದ.ಸಾ.ಪ ರಾಜ್ಯ ಘಟಕದ ಖಜಾಂಚಿ ಡಾ.ಎಚ್. ಬಿ. ಕೋಲಕಾರ, ಕಾರ್ಯದರ್ಶಿ ಸುಭಾಸ ಹುದ್ಲೂರ, ಸಮ್ಮೇಳನದ ಸಂಯೋಜಕ ದ.ಸಾ.ಪ ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ, ತಾಲೂಕಾ ದ.ಸಾ.ಪ ಅಧ್ಯಕ್ಷೆ ಡಾ. ಪೂರ್ಣಿಮಾ ದಾಮಣ್ಣವರ, ವಿಭಾಗೀಯ ಅಧ್ಯಕ್ಷೆ ಡಾ. ಸುಜಾತಾ ಚಲವಾದಿ, ಸಾಹಿತಿ ದೊಡ್ಡಣ್ಣ ಭಜಂತ್ರಿ, ಎಸ್.ಸಿ./ಎಸ್.ಟಿ. ನೌಕರ ಸಂಘದ ಅಧ್ಯಕ್ಷ ಬಿ.ಎಚ್. ನಾಡಗೇರಿ, ಸುರೇಖಾ ರಾಠೋಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Friday, July 21, 2023

ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಬೃಹತ್ ಪ್ರಮಾಣದ ಹೋರಾಟದ ಅಗತ್ಯ : ಕಾಂ. ನಾಡಗೌಡರು


ಈ ದಿವಸ ವಾರ್ತೆ

 ವಿಜಯಪುರ: ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಬೃಹತ್ ಪ್ರಮಾಣದ ಹೋರಾಟದ ಅಗತ್ಯ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಕಾಂ. ಎಂ. ಬಿ. ನಾಡಗೌಡರು ಹೇಳಿದರು.

ಅವರು ನಗರದ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ರಿ) (ಸಿಐಟಿಯು) ಸಂಯೋಜಿತ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ 10 ನೇ ಜಿಲ್ಲಾ ಸಮ್ಮೇಳನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ನೌಕರರು ಸಂಘಟಿತರಾಗಲು ಕರೆ ನಿಡಿದರು. ಹೋರಾಟದಿಂದ ವೇತನ ಹೆಚ್ಚಳ ಕಂಡಿದೆ. ಹೋರಾಟದಿಂದ ಅನೇಕರು ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಭೀಮಶಿ ಕಲಾದಗಿ  ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನ ಉದ್ದೇಶಿಸಿ ಹಿರಿಯ ಹೋರಾಟಗಾರರಾದ ಭೀಮಶಿ ಕಲಾದಗಿ ಮಾತನಾಡಿ, ಹೋರಾಟ ಫಲದಿಂದ ವೇತನ, ಬಡ್ತಿ ಸೇರಿದಂತೆ ನೌಕರರಿಗೆ ಅನುಕೂಲವಾಗಿದೆ. ಈಗಾಗಲೇ ಸಂಘಟನೆಯಿAದ ಸಂಘ ಬಲಿಷ್ಠವಾಗಿದೆ. ಇನ್ನು ಹೆಚ್ಚು ಹೆಚ್ಚಾಗಿ ಸಂಘವು ಬಲಿಷ್ಠಗೊಳ್ಳಲು ಎಲ್ಲರೂ ಕೈ ಜೋಡಿಸಬೇಕು ಎಂದರು. ಸಂಘದ ಅವಿರತ 1988 ರಿಂದ ಮಾಡಿದ ಹೋರಾಟ ನೌಕರರು ವೇತನ ಸರಿಯಾಗಿ ಪಡೆಯುವಂತಾಗಿದೆ.ಕನಿಷ್ಠ ವೇತನ,ಅನುಮೋದನೆ ಪಡೆಯಲು ಸಾಧ್ಯವಾಯಿತು ,ನೌಕರರು ಸಂಘಟಿತರಾಗಲು ಕರೆ ನೀಡಿದರು.

ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲರಜಾಕ ಎಂ ತಮದಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಅಣ್ಣಾರಾಯ ಈಳಗೇರ ಅವರನ್ನು ಸನ್ಮಾನಿಸಲಾಯಿತು.

ಜಿ.ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಸಿಐಟಿಯು ಜಿಲ್ಲಾಧ್ಯಕ್ಷರಾದ ಕಾಂ ಅಣ್ಣಾರಾಯ ಇಳಗೇರ, ಪ್ರಧಾನ ಕಾರ್ದಯರ್ಶಿ ಲಕ್ಷಣ ಹಂದ್ರಾಳ, ವಿಠ್ಠಲ ಹೊನಮೋರೆ, ಅಯ್ಯನಗೌಡ ಬಾಗೇವಾಡಿ, ಜಿ.ಎಸ್.ಗಂಗಶೆಟ್ಟಿ, ಶಿವನಗೌಡ ಬಿರಾದಾರ, ಮಲ್ಲು ತಳೆವಾಡ, ಯಲ್ಲನಗೌಡ ಬಿರಾದಾರ, ಶ್ರೀಶೈಲಕವಿ, ತುಕಾರಾಮ ಮಾರನೂರ, ಮಲ್ಲಿಕಾರ್ಜುನ ಮಾದರ, ಎಂ.ಕೆ.ಕಳ್ಳಗಿ, ಲಾಲಾಹ್ಮದ ಶೇಖ,ಕೆ.ಐ. ಮಡಿವಾಳರ, ಮುದಿಗೌಡರ ಮುಗಳಿ,  ಶ್ರೀಮತಿ ಕಾಳಮ್ಮ ಬಡಿಗೇರ, ಶ್ರೀಮತಿ ಭಾರತಿ ವಾಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಲಕ್ಷ್ಮಣ ಹಂದ್ರಾಳ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿವಾನಂದ ಬಿರಾದಾರ ಸ್ವಾಗತಿಸಿದರು. ಚಂದ್ರಶೇಖರ ವಾಲಿಕಾರ ನಿರೂಪಿಸಿದರು. ರಾಮಚಂದ್ರ ನಂದೂರ ವಂದಿಸಿದರು.

ಇದೇ ಸಂದರ್ಭ ದಲ್ಲಿ  ಹೋರಾಟಗಾರ್ತಿ ಭಾರತಿ ವಾಲಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ದಲ್ಲಿ  ಹೋರಾಟಗಾರ್ತಿ ಕಾಳಮ್ಮ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಕುವೆಂಪು ಪ್ರಶಸ್ತಿಗೆ ಹಿರಿಯ ಸಾಹಿತಿ ಮಲ್ಲಿಕಾ ಘಂಟಿ ಆಯ್ಕೆ

           

ಈ ದಿವಸ ವಾರ್ತೆ

ವಿಜಯಪುರ: ಕುವೆಂಪು ಕಲಾನಿಕೇತನ ಸಂಸ್ಥೆಯು ರಾಷ್ಟ್ರಕವಿ ಕುವೆಂಪುರವರ 119ನೇ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ 'ರಾಷ್ಟ್ರ ಕವಿ ಕುವೆಂಪು ಪ್ರಶಸ್ತಿ'ಗೆ ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಎಸ್‌.ಘಂಟಿ ಆಯ್ಕೆಯಾಗಿದ್ದಾರೆ. 

ಈ ಪ್ರಶಸ್ತಿಯು 25 ಸಾವಿರ ನಗದು, ಬೆಳ್ಳಿ ಪದಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಆ.8ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಸಾಹಿತಿ ಡಾ.ಮಲ್ಲಿಕಾ ಎಸ್‌.ಘಂಟಿ ಅವರಿಗೆ ಪ್ರದಾನ ಮಾಡಲಿದ್ದಾರೆಂದು ಸಂಸ್ಥೆ ಅಧ್ಯಕ್ಷ ಕುವೆಂಪು ಪ್ರಕಾಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹಿರಿಯ ಸಾಹಿತಿ ಮಲ್ಲಿಕಾ ಘಂಟಿ ಕುವೆಂಪು ಪ್ರಶಸ್ತಿಗೆ ಭಾಜನ ರಾದ ಹಿನ್ನೆಲೆ ವಿಜಯಪುರ ಜಿಲ್ಲೆಯ ಮಲ್ಲಿಕಾ ಘಂಟಿ ಅವರ ಅಭಿಮಾನಿ ಬಳಗದವರು ಅಭಿನಂದಿಸಿದ್ದಾರೆ.

22 ರಂದು ಗಾನಬನದಲ್ಲಿ ಗುರುವಂದನಾ ಕಾರ್ಯಕ್ರಮ


ವಿಜಯಪುರ : ಶ್ರೀ ಗುರು ಕುಮಾರೇಶ್ವರ ಪ್ರತಿμÁ್ಠನ (ರಿ) ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿμÁ್ಠನ (ರಿ) ವಿಜಯಪುರ ಇವರ ಸಹಯೋಗದಲ್ಲಿ ಶ್ರೀ ಶಿವಯೋಗಿ ಪುಟ್ಟರಾಜ ಗಾನಬನದ ಸಂಸ್ಥಾಪಕರಾದ ಗುರುಕಾರುಣ್ಯತೇಜ, ಗಾನಬನದ ಗಾನಗಂದರ್ವ, ಶ್ರೀ ಪಂ. ತೋಂಟದಾರ್ಯ ಕವಿಗವಾಯಿಗಳವರ 59ನೇ ಜನ್ಮದಿನದ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ದಿನಾಂಕ: 22-07-2023 ರಂದು ಶನಿವಾರ ರಂದು ಸಂಜೆ 6.30 ಗಂಟೆಗೆ ಶಿವಯೋಗಿ ಪುಟ್ಟರಾಜ ಗಾನಬನದ ಆವರಣ, ಎನ್.ಸಿ.ಸಿ. ಕಾರ್ಯಾಲಯದ ಹಿಂದುಗಡೆ, ಶ್ರೀ ಗಾನಯೋಗಿ ಪಂಚಾಕ್ಷರಿ ರಸ್ತೆ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿವ್ಯ ಸಾನ್ನಿಧ್ಯವನ್ನು ಬಸವನ ಬಾಗೇವಾಡಿ ಸಂಸ್ಥಾನ ಒಡೆಯರ ಹಿರೇಮಠದ ಶ್ರೀ ಷ.ಬ್ರ. ಶಿವಪ್ರಕಾಶ ಶೀವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಜ್ಞಾನ ಯೋಗಾಶ್ರಮದ ಅಧ್ಯಕ್ಷರಾದ ಪ.ಪೂ. ಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ (ರಿ) ಗೌರವಾಧ್ಯಕ್ಷರಾದ ಬಸವರಾಜ ಪಿ. ಕೆಂಗನಾಳ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲೆಯ ಉಪನೋಂದಣಾಧಿಕಾರಿಗಳಾದ ಬಿ.ಎಸ್.ಬಿರಾದಾರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಲಿಂಗರಾಜ ಹಿರೇಮಠ, ಚಿಕ್ಕಮಕ್ಕಳ ತಜ್ಞರಾದ ಡಾ. ಪರೀಕ್ಷಿತ ಕೋಟಿ ಭಾಗವಹಿಸಲಿದ್ದಾರೆ.

ಹಚ್ಯಾಳ ಹಿರೇಮಠದ ವೇ.ಮೂ. ವಿರುಪಾಕ್ಷಯ್ಯ ಶಾಶ್ತ್ರಿಗಳು ಪ್ರವಚನ ನುಡಿಗಳನ್ನಾಡಲಿದ್ದಾರೆ.

ತೊರವಿ ಹಿರೇಮಠದ ವೇ.ಮೂ. ಚಿದಾನಂದ ಶಾಸ್ತ್ರಿಗಳು ಉಪನ್ಯಾಸ ನೀಡಲಿದ್ದಾರೆ.

ಎಮ್.ವ್ಹಿ. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ, ಶಿಕ್ಷಕರಾದ ಕೈಲಾಸನಾಥ ಮದಭಾವಿ ನಿರೂಪಿಸಲಿದ್ದಾರೆ. ಪಿ.ಸಿ. ಅರಕೇರಿಮಠ ಸ್ವಾಗತಿಸಲಿದ್ದಾರೆ. ಸುಭಾಸಚಂದ್ರ ಕನ್ನೂರ ವಂದಿಸಲಿದ್ದಾರೆ.  ಪಂ. ತೋಂಟದಾರ್ಯ ಕವಿ ಗವಾಯಿಗಳು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಗುರು ಕಾರುಣ್ಯತೇಜ

 ಮನುಷ್ಯನ ಜೀವನ ಉನ್ನತ ಸ್ಥಿತಿಗೇರಬೇಕಾದರೆ ಅವನ ಸಾಧನೆ ಹಾಗೂ ಗುರುಕೃಪೆಯೇ ಕಾರಣವೆಂದು ಗ್ರಹಿಸಬೇಕಾಗುತ್ತದೆ. ಮನುಷ್ಯನ ಸಾಧನೆ ಯಾವ ಕ್ಷೇತ್ರದಲ್ಲಿಯೇ ಇರಲಿ ಅದು ಆಧ್ಯಾತ್ಮ ಕ್ಷೇತ್ರವಾಗಿರಲಿ, ಧಾರ್ಮಿಕ ಕ್ಷೇತ್ರವಾಗಿರಲಿ, ರಾಜಕೀಯ ಕ್ಷೇತ್ರವಾಗಿರಲಿ, ಸಂಗೀತ-ಚಿತ್ರಕಲೆಯಂತಹಾ ಯಾವುದೇ ಕ್ಷೇತ್ರವಾಗಿರಲಿ ಇವುಗಳಲ್ಲಿ ಸಾಧನೆ ಮಾಡಿ ಸಿದ್ಧಿ ಪಡೆಯಬೇಕಾದರೆ ಅದಕ್ಕೇಲ್ಲಾ ಸಮರ್ಥ ಗುರುವಿನ ಮಾರ್ಗದರ್ಶನ ಬೇಕೆಬೇಕು. ಅದಕ್ಕೇನೆ ಗುರು ಮತ್ತು ಶಿಷ್ಯನ ಸಂಬಂಧ ಅನ್ಯೋನ್ಯ ಹಾಗೂ ಅವರ್ನಿಯ. 

 ವೇದ ಕಾಲದ ಇತಿಹಾಸದೂದಕ್ಕು ಖ್ಯಾತಿವಂತರ ಚರಿತ್ರೆಗಳು ಗೋಚರವಾಗುತ್ತವೆ. ಗುರುವಿನಿಂದ ವಿದ್ಯೆ ಸಂಪಾದಿಸಿಕೊಂಡು ಶಿಷ್ಯರು ಗುರುಗಳ ಬಗೆಗೆ ಅಪಾರವಾದ ಗೌರವ ವಿನರ್ಮತೆ ಹೊಂದಿರುತ್ತಾರೆ. ಇದಕ್ಕೆ ಮಹಾಭಾರತದಲ್ಲಿ ಕಾಣಬರುವ ದ್ರೋಣಾಚಾರ್ಯ್ಯರ ಅವರ ಶಿಷ್ಯ ಏಕಲವ್ಯನಂತವರೇ ಸಾಕ್ಷಿ. ಶಿಷ್ಯರು ಜೀವನದಲ್ಲಿ ಯಾವತ್ತಿಗೂ ಗುರುವಿನನ್ನ ಮರೆಯಲಾರರು. ಅದಕ್ಕಾಗಿಯೇ ಪ್ರತಿ ಆಷಾಡ ಹುಣ್ಣಿಮೆಯನ್ನು ಗುರುಪೊರ್ಣಿಮೆ, ಬುದ್ಧ ಪೊರ್ಣಿಮೆಯೆಂದು ಆಚರಿಸುತ್ತಾ ಬರಲಾಗಿದೆ. ಶಿಷ್ಯರು ತಮ್ಮ ಗುರುಗಳಿಗೆ ವಿಶೇಷವಾಗಿ ಗೌರವ ಸಲ್ಲಿಸುವ ಉದೇಶಕ್ಕಾಗಿಯೇ ಗುರುವಂದನಾಯೆಂಬ ಭಕ್ತಿ ಸಮರ್ಪನಾ ಕಾರ್ಯಕ್ರಮವನ್ನು ನಾಡಿನಯಲ್ಲಡೆ ಆಚರಿಸುತ್ತಾರೆ. ಇಂತಹ ಕಾರ್ಯಕ್ರಮವೊಂದು ವಿಜಯಪುರ ನಗರದ ಗಾನಬನವೆಂಬ ಹೆಸರಿನ ಶ್ರೀ ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷದ ಸಂಗತಿ. ಗಾನಬನದ ರುವಾರಿಗಳಾದ ಶ್ರೀ ಪಂಡೀತ ತೋಂಟದಾರ್ಯ ಕವಿ ಗವಾಯಿಗಳವರ ಬದುಕು ಆವರ್ಣಿಯವಾದದ್ದು. ತಮ್ಮ ವಿದ್ಯಾಗುರುಗಳಾದ ಪೂಜ್ಯ ಲಿಂ. ಡಾ. ಪಂಡೀತ ಪುಟ್ಟರಾಜ ಗುರುವರ್ಯರ ಜೀವನವನ್ನೇ ಆದರ್ಶವಾಗಿ ಇಟ್ಟುಕೊಂಡು ಜೀವನ ನಡೆಸತಕ್ಕವಂತರು. ಗುರುಗಳ ಕೃಪಾಪೋಷಣೆಯಲ್ಲಿ ಗಾನಬನದ ಸಂಗೀತ ಗುರುಕುಲದಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಅವರಿಗೆ ಊಟ, ವಸತಿ, ವಿದ್ಯೆಯನ್ನು ನೀಡುತ್ತಾ ಬರುತ್ತಿದ್ದಾರೆ. ಇವರಿಂದ ಅನೇಕರು ಸಂಗೀತ ವಿದ್ಯೆಯನ್ನು ಪಡೆದು ತಮ್ಮ ಬದುಕಿನ ನೆಲೆಯನ್ನು ಕಂಡುಕೊಂಡಿದ್ದಾರೆ. ಹೀಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಸಮರ್ಪಿಸುವ ನಿಟ್ಟಿನಲ್ಲಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ. 

 ಇವರು ಶಿಷ್ಯರಿಗೆ ಸಂಗೀತ ಕಲೆಯನ್ನು ಧಾರಾಳವಾಗಿ ಅವರ ಅವರ ಅರ್ಹತೆ ಅನುಗುಣವಾಗಿ ಕೊಡುತ್ತಾ ಬಂದಿದ್ದಾರೆ. ತಮ್ಮ ಸ್ವಂತ ಜೀವನಕ್ಕೆ ಹೆಚ್ಚು ಗಮನ ಕೊಡದೇ ಸದಾ ಗಾನಬನದ ಶ್ರೇಯೋಭಿವೃದ್ಧಿಗಾಗಿ ವಿದ್ಯಾರ್ಥಿಗಳ ಯೋಗಕ್ಷೇಮದ ಬಗೆಗೆನೆ ಚಿಂತಿಸುತ್ತಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಸಂಗೀತ ಕಲಾಭಿಮಾನಿಗಳು ತಮ್ಮ ಸಹಾಯ ಸಹಕಾರವನ್ನು ನೀಡುತ್ತಾ ನಮ್ಮ ಭಾಗÀದಲ್ಲಿ ಇದೊಂದು ಸಂಗೀತ ಸೇವಾ ಸಂಸ್ಥೆ ಬೆಳೆಯಲೆಂದು ತಮ್ಮ ಮುಕ್ತ ಮನಸ್ಸಿನಿಂದ ಹಾರೈಸುತ್ತಿದ್ದಾರೆ. ಭಕ್ತರ ಹಾಗೂ ಮಠಾಧೀಶರ ದೇಣಿಗೆಯ ಕೊಡುಗೆಯಿಂದ ನಿರ್ಮಾಣಗೊಂಡ ಗುರುತ್ರಯರ ಮೂರ್ತಿಗಳ ಮಂದಿರ ಕಂಗೊಳಿಸುತ್ತಿದೆ. ಇದಕ್ಕೇಲ್ಲಾ ಕಾರಣರು ಗಾನಬನದ ನಿರ್ಮಾತೃಗಳಾದ ಶ್ರೀ ಪಂ. ತೋಂಟದಾರ್ಯ ಕವಿಗವಾಯಿಗಳವರು ಇಂತಹ ತೋಂಟದಾರ್ಯರ ಕಾರ್ಯಗಳನ್ನು ಮೆಚ್ಚಿ ಅವರ ಶಿಷ್ಯರೆಲ್ಲರೂ ಸೇರಿ ಶ್ರದ್ಧಾ-ಭಕ್ತಿಯಿಂದ "ಗುರುವಂದನಾ" ಎಂಬ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಇದೇ ತಿಂಗಳ ಅಂದರೆ 22-07-2023 ಶನಿವಾರದಂದು ಸಮಯ ಸಂಜೆ : 6-30ಕ್ಕೆ ಗಾನಬನದಲ್ಲಿ ಜರುಗಲಿದೆ. ಇಂತಹ ಯೋಗ್ಯ ಕಾರ್ಯಕ್ರಮಕ್ಕೆ ಸ್ವಾಗತ ಬಯಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸೋಣ.

 ರಚನೆ - ಶ್ರೀ ವೇ.ಮೂ. ವೀರುಪಾಕ್ಷಯ್ಯ ಶಾಸ್ತ್ರೀಗಳು, ಹಿರೇಮಠ, ಹಚ್ಚಾ್ಯಳ 


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.