Friday, April 28, 2023

ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳಿಗಣುಗುಣವಾಗಿ ಸಾಹಿತ್ಯ ರಚನೆಯಾಗುತ್ತಿವೆ: ಬಸವರಾಜ ಸೂಳಿಬಾವಿ

ಈ ದಿವಸ ವಾರ್ತೆ

ವಿಜಯಪುರ : ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳಿಗನುಗುಣವಾಗಿ ಇಂದು ಸಾಹಿತ್ಯ ರಚನೆ ಹಾಗೂ ಪ್ರಚಾರಗಳು ಆಗುತ್ತಿದೆ. ಸಾಹಿತ್ಯವನ್ನು ಜನತೆಯಿಂದ ದೂರ ಮಾಡಿ  ಕಾರ್ಪೋರೇಟಿಕರಣಗೊಳಿಸುವ ಕೆಲಸ ನಡೆಯುತ್ತಿದೆ. ಆ ಮೂಲಕ ಕನ್ನಡ ಸಾಹಿತ್ಯವನ್ನು ಬೂಸದ ಕಡೆ ಹೊರಳಿಸುವ ಪ್ರಯತ್ನ ವ್ಯಾಪಕವಾಗಿ ನಡೆಯುತ್ತಿದೆ. ನಮ್ಮ ಕನ್ನಡ ಸಾಹಿತ್ಯ ಪರಂಪರೆ ಜನಮುಖಿ, ಜನತೆಗೋಸ್ಕಕರ ಸಾಹಿತ್ಯ ಪರಂಪರೆಯನ್ನು ಮರುಕಳುಸುವ ಉದ್ದೇಶವನ್ನು ಹೊಂದಿ ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ, ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ, ಮೇ ಸಾಹಿತ್ಯ ಮೇಳ ಬಳಗ ವಿಜಯಪುರದ ವತಿಯಿಂದ ಮೇ 27, 28 ರಂದು ನಗರದ ಕಂದಗಲ್ಲ ಹನುಮಂತಾಯ ರಂಗಮಂದಿರದಲ್ಲಿ ರಾಷ್ಟ್ರ ಮಟ್ಟದ ಚಿಂತಕರು ಪ್ರತಿನಿಧಿಗಳು ಸೇರಿದಂತೆ ರಾಜ್ಯದ ಸಾಹಿತಿಗಳು ಚಿಂತಕರು ಪ್ರತಿನಿಧಿಗಳು ಭಾಗವಹಿಸುವ 9ನೇ ಮೇ ಸಾಹಿತ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಲಡಾಯಿ ಪ್ರಕಾಶನದ ಪ್ರಕಾಶಕರಾದ ಬಸವರಾಜ ಸೂಳಿಬಾವಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಗೂ ಪ್ರಗತಿಪರ ವಿಚಾರಕ್ಕೂ ಅವಿನಾಭಾವ ಸಂಬಂಧವಿದೆ. ವಿಜಯಪುರದಲ್ಲಿ ಹಿಂದೆ ಬಂಡಾಯ ಸಾಹಿತ್ಯ ಸಮ್ಮೇಳನ, ಸಮಾವೇಶ ಕೂಡ ಆಗಿತ್ತು. ದಲಿತ ಸಾಹಿತ್ಯ  ಸಮಾವೇಶ ಆಗಿದೆ. ಈಗ ಬಹುಮುಖ್ಯವಾಗಿ ಪ್ರಗತಿಪರವಾದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತಹ ಜನತೆಗಾಗಿ ಸಾಹಿತ್ಯದ ಉದ್ದೇಶವನ್ನು ಹೊಂದಿ ಈ ಮೇ 9ನೇ ಸಮ್ಮೇಳವನ್ನು ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.


ಈ ಸಾಹಿತ್ಯ ಮೇಳಕ್ಕೆ ಸರ್ಕಾರದಿಂದಾಗಲಿ ಯಾವುದೇ ಸಂಸ್ಥೆಗಳಿಂದಾಗಲಿ ರಾಜಕಾರಣಿಗಳಿಂದಾಗಲಿ ಯಾವುದೇ ರೀತಿಯ ಅನುದಾನವನ್ನು ನಾವು ತೆಗೆದುಕೊಳ್ಳುತ್ತಿಲ್ಲ. ಮುಖ್ಯವಾಗಿ ಸಮಾನ ಮನಸ್ಕ, ಸಹಭಾಗಿ ಗೆಳೆಯರು ಸ್ವತ ತಮ್ಮ ಕೈಲಾದ ತನು,ಮನ,ಧನ ಸಹಕಾರವನ್ನು ಪಡೆದು ಆಯೋಜಿಸಲಾಗಿದೆ ಎಂದರು.

ಈ ಸಮ್ಮೇಳನಕ್ಕೆ 1500 ಜನ ಪ್ರತಿನಿಧಿಗಳು ರಾಜ್ಯಾದ್ಯಂತ ಆಗಮಿಸುತ್ತಿದ್ದಾರೆ. ಈ ಸಮ್ಮೇಳನದಲ್ಲಿ ಕಲ್ಕತ್ತದ ಹರ್ಷ ಮಂದೇರ, ಟೀಸ್ಟ್ ಸೆತಲ್ವಾಡ ಮೊದಲಾದ ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ 9ನೇ ಮೇ ಸಮ್ಮೇಳನವನ್ನು ಹೋರಾಟ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪ್ರಕಾಶ ಹಿಟ್ನಳ್ಳಿ, ನಮ್ಜಾ ಬಾಂಗಿ, ಭೀಮಶಿ ಕಲಾದಗಿ, ಉಮಾ ಎಂ. ಕಲ್ಬುರ್ಗಿ, ತುಕಾರಾಂ ಚಂಚಲಕರ್, ವಿಹಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.

ದೇಶದ ಸಂವಿಧಾನವನ್ನು ಬದಲಾಯಿಸುವ, ಸಂವಿಧಾನವನ್ನೇ  ನಗಣ್ಯಗೊಳಿಸುವಂತಹ ಕೆಲಸ ಕೂಡ ನಡೆಯುತ್ತಿದೆ. ಇದು ಆಗಕೂಡದು. ಪ್ರಜೆಗಳು ಈ ದೇಶವನ್ನು ಆಳುವಂತಾಗಬೇಕು. ಇದು ಇಡೀ ಸ್ವಾತಂತ್ರ್ಯ ಹೋರಾಟಗಾರರ ಕನಸು ಕೂಡ ಆಗಿತ್ತು. ಆದರೆ ಇವತ್ತು ಕನಸುಗಾರಿಕೆಯ ತಳಹದಿಯು ಅಲ್ಲಾಡುಸುವ ಪರಿಸ್ಥಿತಿಗೆ ತಲೆದೋರಿದೆ. ಪತ್ರಕರ್ತರನ್ನು ಸಹ ಜೈಲಿಗೆ ಅಟ್ಟುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಲಾಗುತ್ತಿದೆ. ಧ್ವನಿ ಎತ್ತುವವರ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಈ ಸಮ್ಮೇಳನದಲ್ಲಿ ಭಾರತೀಯ ಪ್ರಜಾತಂತ್ರ ಚಾರಿತ್ರಿಕ ನೋಟ, ರಾಷ್ಟ್ರೀಯ ಹೋರಾಟ ಆಶಯಗಳು, ಸಮ ಸಮಾಜದ ಕನಸುಗಳು, ಸಂವಿಧಾನದ ಪರಿಕಲ್ಪನೆ ಮತ್ತು ಅಂಬೇಡ್ಕರ್ ಕನಸುಗಳು, ಪ್ರಜಾತಂತ್ರ ಸಾಗಿದ ದಾರಿ ಅಸ್ಮಿತೆ ರಾಜಕಾರಣ, ದಲಿತ , ಆದಿವಾಸಿ ಧಾರ್ಮಿಕ ಅಲ್ಪಸಂಖ್ಯಾತ ಹಿಂದುಳಿದ ವರ್ಗ, ಮಹಿಳಾ ನೆಲೆ, ಬೌದ್ಧ , ಸೂಫಿ, ಶರಣ ಪರಂಪರೆಯಲ್ಲಿ ಪ್ರಜಾತಂತ್ರದ ಆಶಯಗಳು, ಪ್ರಜಾಪ್ರಭುತ್ವ : ಯುವ ಸ್ಪಂದನ, ಪ್ರಜಾತಂತ್ರದ ಬಿಕ್ಕಟ್ಟುಗಳು, ಎದುರಿಸುವ ಬಗೆ ಕುರಿತು ವಿಶಿಷ್ಠ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅನೀಲ ಹೊಸಮನಿ, ಪ್ರಭುಗೌಡ ಪಾಟೀಲ, ವಾಸುದೇವ ಕಾಳೆ, ಅಭಿಷೇಕ ಚಕ್ರವರ್ತಿ, ಅಕ್ರಂ ಮಾಶ್ಯಾಳಕರ, ದೊಡ್ಡಣ್ಣ ಭಜಂತ್ರಿ, ಎ.ಎಲ್.ನಾಗೂರ,ಚಂದ್ರಶೇಖರ ಘಂಟೆಪ್ಪಗೋಳ,  ಅಬ್ದುಲರೆಹಮಾನ ಬಿದರಕುಂದಿ, ದ್ರಾಕ್ಷಾಯಿಣಿ ಬಿರಾದಾರ, ಚೆನ್ನು ಕಟ್ಟಿಮನಿ, ಸಿದ್ರಾಮ ಬಿರಾದಾರ, ಭರಮಣ್ಣ ತೋಳಿ,  ಎಂ.ಬಿ.ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.

Wednesday, April 26, 2023

27-04-2023 EE DIVASA KANNADA DAILY NEWS PAPER

ಬಬಲೇಶ್ವರ ತಾಲೂಕಿಗೆ ಭೇಟಿ : ವಿವಿಧ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಓ ರಾಹುಲ್ ಶಿಂಧೆ

 


ಈ ದಿವಸ ವಾರ್ತೆ

ವಿಜಯಪುರ : ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಬುಧವಾರ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.  

ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ‘ಸಖಿ’ ಬೂತ್ ಮತಗಟ್ಟೆ ಕೇಂದ್ರದ ಮುಂಭಾಗದಲ್ಲಿ ಬಿಡಿಸಿರುವ ಸುಂದರ ಕಲಾಕೃತಿಗಳನ್ನು ವೀಕ್ಷಿಸಿದರು. ಪ್ರಗತಿಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ   ಘಟಕ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಾಂತ್ರಿಕ  ಸಿಬ್ಬಂದಿಗಳಿಗೆ ಸೂಚಿಸಿದರು. 

ಕಂಬಾಗಿ ಗ್ರಾಮದ ಪ್ರಗತಿಯಲ್ಲಿರುವ ಅಮೃತ ಸರೋವರ ಯೋಜನೆಯ ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸುತ್ತಿರುವ ಹಿನ್ನೆಲೆಯಲ್ಲಿ,ಸುತ್ತ-ಮುತ್ತಲಿನ ರೈತರಿಗೆ ಅನುಕೂಲವಾಗಿರುವ ಕುರಿತು ರೈತರೊಂದಿಗೆ ಸಮಾಲೋಚಿಸಿದರು. ಕಾಮಗಾರಿಯಲ್ಲಿ ತೊಡಗಿರುವ ಕೂಲಿಕಾರ್ಮಿಕರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ಮತ್ತು ಕ್ಯಾಪ್ ವಿತರಿಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ  ಸೂಚಿಸಿದರು. ಮದರಕಂಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಿರುವ ಬಾಸ್ಕೆಟ್ ಬಾಲ್ ಕ್ರೀಡಾಂಗಣದ ಕಾಮಗಾರಿ ಪರಿಶೀಲನೆ ನಡೆಸಿ, ಬಾಸ್ಕೆಟ್ ಬಾಲ್ ಕಂಬಗಳಿಗೆ 3 ಎಂಎಂ ಫೈಬರ್ ಗ್ಲಾಸ್ ಅಳವಡಿಸುವಂತೆಯೂ, ಕ್ರೀಡಾಂಗಣದ ಸುತ್ತ  ಗುಣಮಟ್ಟದ ಕೆಂಪು ಮರಳು ಹಾಕುವ ವ್ಯವಸ್ಥೆ ಮಾಡುವಂತೆ          ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ಗ್ರಾಮೀಣ ಭಾಗದ 8 ರಿಂದ 15 ವರ್ಷದ ವಯೋಮಾನದ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ದೃಷ್ಠಿಯಿಂದ ಬೇಸಿಗೆ ಶಿಬಿರ ಹಮ್ಮಿಕೊಂಡು ಸ್ಕೇಟಿಂಗ್ ತರಬೇತಿ ಸೇರಿದಂತೆ, ವಿವಿಧ ಕ್ರೀಡಾ ತರಬೇತಿ ಕಲ್ಪಿಸಿಕೊಡುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಜೈನಾಪುರ ಗ್ರಾಮ ಪಂಚಾಯತಿಯ ಬೆಳ್ಳುಬ್ಬಿ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಮತದಾನ ಕೇಂದ್ರಕ್ಕೆ ಭೇಟಿ ನೀಡಿ,   ಮೂಲಭೂತ ಸೌಲಭ್ಯಗಳಾದ  ವಿದ್ಯುತ್ ದೀಪ, ಫ್ಯಾನ್, ಕಿಟಕಿ ಬಾಗಿಲುಗಳ ಮತ್ತು ವಿಕಲಚೇತನರಿಗೆ ಮತದಾನಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ರ್ಯಾಂಪ್ ಹಾಗೂ ಅಗತ್ಯ ದುರಸ್ತಿಯನ್ನು ಕೈಗೊಳ್ಳಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿದರು. ಗ್ರಾಮದ ಸರಕಾರಿ ಶಾಲೆಯಲ್ಲಿನ ಬೋಜನಾಲಯದಲ್ಲಿನ ಸೂಕ್ತ ಆಸನ  ವ್ಯವಸ್ಥೆ ಕಲ್ಪಿಸಬೇಕೆಂದೂ, ಜೈನಾಪುರ ಗ್ರಾಮದಲ್ಲಿನ ನೀರು ಸರಬರಾಜು ಕೇಂದ್ರದ ಕಾಮಗಾರಿಯನ್ನು ಉತ್ಕೃಷ್ಟ  ಗುಣ್ಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. 

ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೆ.ಎಸ್.ಪಠಾಣ, ಬಬಲೇಶ್ವರ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕಿ ಶ್ರೀಮತಿ ಭಾರತಿ ಹಿರೇಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನೀಯರ ಎಚ್.ಎಮ್. ಸಾರವಾಡ, ಪಂಚಾಯತ ರಾಜ್, ಇಂಜಿನಿಯರಿಂಗ ಉಪ ವಿಭಾಗದ ಎಇಇ ಪಿ.ಎಸ್.ಚವಾಣ್, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಗೀತಾ ಕಲ್ಲವಗೊಳ, ಶ್ರೀಮತಿ ರೇಖಾ ಪಾಟೀಲ,   ಮಹೇಶ ಕಗ್ಗೂಡ, ತಾಂತ್ರಿಕ ಸಂಯೋಜಕ ಕಲ್ಲನಗೌಡ ಪಾಟೀಲ, ಐಇಸಿ ಸಂಯೋಜಕ ಶಾಂತಪ್ಪ ಇಂಡಿ, ಶ್ರೀಧರ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿರೀಕ್ಷೆ ಮೀರಿ ಜನ ಬೆಂಬಲ; ಹೆಚ್ಚಿನ ಮತಗಳ ಅಂತರದಿಂದ ಗೆಲುವು ನಿಶ್ಚಿತ ; ರಾಮನಗೌಡ ಪಾಟೀಲ ಯತ್ನಾಳ

ವಿಜಯಪುರ ನಗರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಪರವಾಗಿ ಪುತ್ರ ಹಾಗೂ ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರು ಮತಯಾಚನೆ ಮಾಡಿದರು.

 ದಿವಸ ವಾರ್ತೆ

ವಿಜಯಪುರ: ತಂದೆಯ ಅಭಿವೃದ್ಧಿ ಮೆಚ್ಚಿರುವ ಜನ ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದು, ಅತೀ ಹೆಚ್ಚು ಮತಗಳಿಂದ ಗೆಲುವು ನಿಶ್ಚಿತ ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.

ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ ನಂ.29, 30 ಹಾಗೂ 24 ರ ಕಾಸಗೇರಿ, ಬಸವನಗರ, ಗೌಡರ ಓಣಿ, ಮಣೂರ ಕಾಲೊನಿ, ಸುಹಾಗ ಕಾಲೊನಿ, ಗಿರೀಶ ನಗರ, ಕುಂಬಾರ ಓಣಿ, ಕಮಾನಖಾನ ಬಜಾರ, ತೇಕಡೆ ಗಲ್ಲಿ, ಯಡವಣ್ಣವರ ಗಲ್ಲಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಅವರು ಮಾತನಾಡಿದರು.

ಕೊರೊನಾ ಮಹಾಮಾರಿಯಿಂದ ಎರಡು ವರ್ಷ ಅಭಿವೃದ್ಧಿ ಕುಂಠಿತಗೊಂಡರೂ, ಉಳಿದ ಕೇವಲ ಮೂರು ವರ್ಷಗಳಲ್ಲಿ ಎರಡೂವರೆ ಸಾವಿರ ಕೋಟಿಗೂ ಹೆಚ್ಚು ಅನುದಾನ ತರುವ ಮೂಲಕ ರಸ್ತೆ ಗಳ ಅಭಿವೃದ್ಧಿ, ಒಳಚರಂಡಿ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಸಮರ್ಪಕ ಕಸ ವಿಲೇವಾರಿ, ಉದ್ಯಾನಗಳ ಅಭಿವೃದ್ಧಿ, ಓಪನ್ ಜಿಮ್, ಚಿಲ್ಡ್ರನ್ ಪಾರ್ಕ್, ಮಹಾಪುರುಷರ ವೃತ್ತಗಳು ನಿರ್ಮಾಣ ಹಾಗೂ ಮಾರ್ಗಗಳಿಗೆ ಹೆಸರು ನಾಮಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜನರ ಸಮಸ್ಯೆಗೆ ಪರಿಹಾರ ಸಿಕ್ಕಿದ್ದರಿಂದ, ಪ್ರಚಾರಕ್ಕೆ ಬರುವ ಅಗತ್ಯವಿಲ್ಲ ತಮಗೆ ನಮ್ಮ ಬೆಂಬಲ ಎಂದು ಜನ ಮನಸಾರೆ ಹೇಳುತ್ತಿದ್ದಾರೆ. ಇದರಿಂದ ಅತೀ ಹೆಚ್ಚು ಮತಗಳಿಂದ ನಮ್ಮ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳ ಜೊತೆಗೆ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 250 ಕೋಟಿ ಅನುದಾನ ಸಿಕ್ಕಿರುವುದು,  ದ್ರಾಕ್ಷಿ ಬೆಳೆಗಾರರ ಬಹುದಿನಗಳ ಬೇಡಿಕೆಯಾದ ವೈನ್ ಪಾರ್ಕ್ ಮಂಜೂರು, ಉದ್ಯೋಗ ಸೃಷ್ಟಿಸಲು ಜವಳಿ ಪಾರ್ಕ್ ಮಂಜೂರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಟಿಟಿಸಿ ಕಾಲೇಜು ಮಂಜೂರು ಹೀಗೆ ಹತ್ತು ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿರುವ ಕೀರ್ತಿ ನಮ್ಮ ತಂದೆಗೆ ಸಲ್ಲುತ್ತದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯರು, ಕಾಲೊನಿ, ಬಡಾವಣೆಯ ಹಿರಿಯ ನಾಗರಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತ್ತಿತರರು ಇದ್ದರು.


Tuesday, April 11, 2023

12-04-2023 EE DIVASA KANNADA DAILY NEWS PAPER

ಕಟ್ಟಿ ಅವರ ಕಥೆಗಳ ಬೇರು ನಮ್ಮ ಬದುಕಿನ ನೆಲದಾಳಕ್ಕೆ ಇಳಿದಿವೆ : ರಾಘವೇಂದ್ರ ಪಾಟೀಲ


ಈ ದಿವಸ ವಾರ್ತೆ ವಿಜಯಪುರ : ಬಸವರಾಜ ಕಟ್ಟೀಮನಿ ‘ಕಥಾ ಪ್ರಶಸ್ತಿ'ಗೆ ಭಾಜನರಾದ ಕಥೆಗಾರ ಚನ್ನಪ್ಪ ಕಟ್ಟಿ ಅವರ ಕಥೆಗಳ ಬೇರುಗಳು ನಮ್ಮ ಬದುಕಿನ ನೆಲದಾಳಕ್ಕೆ ಇಳಿದಿವೆ' ಎಂದು ನಾಡಿನ ಹಿರಿಯ ಕಾದಂಬರಿಕಾರರಾದ ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು. 


ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಕೊಡಮಾಡುವ 'ಕಥಾ ಪ್ರಶಸ್ತಿ' ಪ್ರಧಾನಮಾಡಲಾಯಿತು.

ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಕೊಡಮಾಡುವ 'ಕಥಾ ಪ್ರಶಸ್ತಿ' ಹಾಗೂ 'ಯುವ ಪುಸ್ತಕ ಬಹುಮಾನ' ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು.

ಕಥಾ ಪ್ರಶಸ್ತಿಗೆ ಭಾಜನರಾದ ಡಾ.ಚನ್ನಪ್ಪ ಕಟ್ಟಿ ಅವರನ್ನು ಅಭಿನಂದಿಸಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಧ್ಯಾಪಕರಾದ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ‘ಕಥೆಗಾರ ಕಟ್ಟಿ ಅವರು ಸಿದ್ಧಾಂತಗಳ ಕನ್ನಡಿಯ ಮೂಲಕ ಬದುಕನ್ನು ಗ್ರಹಿಸದೆ ಅಂತಃಕರಣದ ಕಣ್ಣಿನಿಂದ ನೋಡಿ ಕತೆ ಕಟ್ಟತ್ತಾದ್ದರಿಂದ ಅವರ ಕತೆಗಳಿಗೆ ಅಪಾಂಥಿಕ ಚಹರೆ ಮೂಡಿದೆ ಹಾಗೂ ಕನ್ನಡ ಕಥಾಲೋಕದಲ್ಲಿ ಅವರ ಕತೆಗಳಿಗೆ ಒಂದು ಮಹತ್ವದ ಸ್ಥಾನವಿದೆ' ಎಂದು ವಿಶ್ಲೇಷಿಸಿದರು. 

‘ಬುದ್ಧನ ಕಿವಿ' ಕಥಾ ಸಂಕಲನ ಕೃತಿಗೆ ಯುವ ಸಾಹಿತ್ಯ ಪುರಸ್ಕಾರ ಪಡೆದ ದಯಾನಂದ ಅವರನ್ನು ಅಭಿನಂದಿಸಿ, ಯುವ ವಿಮರ್ಶಕರಾದ ಸಿ.ಎಸ್.ಭೀಮರಾಯ ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷರಾದ, ಕಾದಂಬರಿಕಾರ ಮಲ್ಲಿಕಾರ್ಜುನ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಪ್ರಶಸ್ತಿ ಸ್ವೀಕರಿಸಿದ ಚನ್ನಪ್ಪ ಕಟ್ಟಿ ಹಾಗೂ ದಯಾನಂದ ಅವರು ಕೃತಜ್ಞತೆಯ ಮಾತುಗಳನ್ನಾಡಿದರು.

ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿಗಳಾದ ಡಾ.ಎಂ.ಎಸ್.ಮದಭಾವಿ ಸ್ವಾಗತಿಸಿದರು. 

ಪ್ರತಿಷ್ಠಾನದ ಸದಸ್ಯ ಸಂಚಾಲಕ ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿಗಳಾದ ಡಾ. ಐಹೊಳ್ಳಿ ನಿರೂಪಿಸಿದರು. ಮನು ಪತ್ತಾರ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಇಮಾಂಬಿ ತತ್ವಪಗಳನ್ನು ಹಾಡಿದರು.