Wednesday, December 28, 2022

ನೌಕರ-ವಿರೋಧಿ NPS ಯೋಜನೆಯನ್ನು ರದ್ದುಗೊಳಿಸಿ : ಜಿಲ್ಲಾ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರು ಸುರೇಶ್ ಜೀಬಿ ಆಗ್ರಹ

 ಈ ದಿವಸ ವಾರ್ತೆ

ವಿಜಯಪುರ: ದಿನಾಂಕ: 01.04.2006 ರಿಂದ ರಾಜ್ಯದಲ್ಲಿ ಜಾರಿಗೆ ತರಲಾಗಿರುವ ಪಿ.ಎಫ್.ಆರ್.ಡಿ.ಎ ಕಾಯಿದೆ ಪ್ರಾಯೋಜಿತ ಎನ್.ಪಿ.ಎಸ್‌ಯೋಜನೆಯಿಂದಾಗಿ ರಾಜ್ಯ ಸರ್ಕಾರಿ ನೌಕರರಿಂದ ನಿಶ್ಚಿತ ಪಿಂಚಣ ಯನ್ನು ಕಸಿದುಕೊಳ್ಳಲಾಗಿರುತ್ತದೆ. ಎನ್.ಪಿ.ಎಸ್‌ಯೋಜನೆಯಡಿ ಸಂಗ್ರಹವಾಗುವ ಶೇ. 10ರಷ್ಟು ನೌಕರರ ವಂತಿಕೆ ಮತ್ತು ಶೇ. 12 ರಷ್ಟು ಸರ್ಕಾರದ ವಂತಿಕೆಯನ್ನು ಪಿ. ಎಫ್. ಆರ್. ಡಿ. ಎ ಸಂಸ್ಥೆಯು ಫಂಡ್‌ಮ್ಯಾನೇಜರುಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತಿದ್ದು, ಕಳೆದ 18 ವರ್ಷಗಳ ಅನುಭವ ತೋರಿಸಿಕೊಟ್ಟಿರುವುದೇನೆಂದರೆ, ಸರ್ಕಾರಿ ನೌಕರರ ಹಣ ಖಾಸಗೀ ಕಂಪನಿಗಳ ಷೇರು ಖರೀದಿಗೆ ವಿನಿಯೋಗವಾಗುತ್ತಿದ್ದು, ಷೇರು ಮಾರುಕಟ್ಟೆಯು ಜೂಜುಕೋರ ವ್ಯವಸ್ಥೆಯಾಗಿರುವುದರಿಂದ, ನಿವೃತ್ತಿಯಾಗುತ್ತಿರುವ ನೌಕರರಿಗೆ/ ಮರಣ ಹೊಂದಿರುವ ನೌಕರರ ಕುಟುಂಬಕ್ಕೆ ಮಾಸಿಕ ಪಿಂಚಣ  ಕೇವಲ ರೂ. 2,000 ದಿಂದ ರೂ. 3,000 ಮಾತ್ರವೇ ಬರುತ್ತಿದ್ದು, ಇದು ಮನೆಯ ಬಾಡಿಗೆಯಿರಲಿ, ವಿದ್ಯುತ್ ಮತ್ತು ನೀರಿನ ಶುಲ್ಕ ಕಟ್ಟಲು ಸಾಕಾಗುತ್ತಿಲ್ಲ ಎಂದು ಜಿಲ್ಲಾ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರು ಸುರೇಶ್ ಜೀಬಿ ಅವರು ತಿಳಿಸಿದ್ದಾರೆ.

ನೌಕರ-ವಿರೋಧಿ NPS ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ  ಪಿಂಚಣ  ಯೋಜನೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಓPS ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ನೌಕರ-ಪರ ಸಂಘಟನೆಗಳು ಒಡಗೂಡಿ ದಿನಾಂಕ: 19/12/2022 ರಿಂದ  ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣ  ಕಾರ್ಯಕ್ರಮವನ್ನು ನಡೆಸುತ್ತಿವೆ. ಇದಕ್ಕೆ ಬೆಂಬಲವಾಗಿ ಹಲವಾರು ನೌಕರ ಪರ ಸಂಘಟನೆಗಳು ಬೆಂಬಲವನ್ನು ವ್ಯಕ್ತಪಡಿಸಿ ನೌಕರ ಪರ ಈ  ಬೇಡಿಕೆಯನ್ನು ಈಡೇರಿಸುವಂತೆ  ಸರ್ಕಾರವನ್ನು ಚಂದ್ರಶೇಖರ ಎಚ್ ಲೆಂಡಿ ಜಿಲ್ಲಾ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣ ದಾರರ ಒಕ್ಕೂಟ ರಾಜ್ಯ ಉಪಾಧ್ಯಕ್ಷರು ಆಗ್ರಹಿಸಿದರು.    

ದೇಶದ ಸರ್ವೋಚ್ಛ ನ್ಯಾಯಾಲಯವು ಪಿಂಚಣ  ಎಂಬುವುದು ನೌಕರರಿಗೆ ನೀಡುವ ಭಿಕ್ಷೆಯಲ್ಲ, ನೌಕರರು ದೀರ್ಘಾವಧಿಗೆ ಮಾಡಿದ ಸೇವೆ ಹಾಗೂ ಸದರಿ ಸೇವಾವಧಿಯಲ್ಲಿ ನೌಕರರ ಶ್ರಮಕ್ಕೆ ಮಾರುಕಟ್ಟೆ ದರಕ್ಕಿಂತ ಕಡಿಮೆ ವೇತನ ನೀಡಿ ಉಳಿದ ಮೊತ್ತವನ್ನು ಪಿಂಚಣ ಯ ರೂಪದಲ್ಲಿ ಇಳಿವಯಸ್ಸಿನ ಸಾಮಾಜಿಕ-ಆರ್ಥಿಕ ಭದ್ರತೆಗಾಗಿ ನೀಡುವಂತಹುದ್ದಾಗಿದೆ. ಇದನ್ನು “ಆeಜಿeಡಿeಜ Wಚಿges”  ಎಂದು ಅರ್ಥೈಸಲಾಗಿದೆ. 'ಪಿಂಚಣ ' ಎಂಬುದು ನೌಕರರು ಮಾಡಿದ ಸರ್ಕಾರಿ ಸೇವೆಗಾಗಿ, ಇಳಿ ವಯಸ್ಸಿನಲ್ಲಿ ನೌಕರರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ನೀಡುವ ಹಕ್ಕಿನಂಶದ ಹಣವೆಂದು ಪರಿಗಣ ಸುವಂತೆ ಹೇಳಿದೆ (ಂIಖ- 1983-Sಅ-130) ಚಂದ್ರಶೇಖರ ಎಚ್ ಲೆಂಡಿ ಅವರು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ರಾಜ್ಯದ ಎನ್.ಪಿ.ಎಸ್ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮಕ್ಕಳು ಮತ್ತು ಕುಟುಂಬವರ್ಗದವರೊAದಿಗೆ ಸೇರಿ ಅಹೋರಾತ್ರಿ ಧರಣ ಯನ್ನು ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ರಾಜ್ಯ ಸರ್ಕಾರವು ಈ ಕುರಿತು ಗಮನ ಹರಿಸದೇ ಇರುವುದು ನೌಕರರ ಜ್ವಲಂತ ಬೇಡಿಕೆಯ ಕುರಿತು ಇರುವ ಉದಾಸೀನ ಎನ್ನಬೇಕಾಗುತ್ತದೆ. ಹಲವು ವರ್ಷಗಳ ನಂತರ ರಾಜಸ್ಥಾನ/ಛತ್ತೀಸ್ ಗಡ್/ ಜಾರ್ಖಂಡ್/ ಪಂಜಾಬ್ ರಾಜ್ಯ ಸರ್ಕಾರಗಳು ಮಹತ್ವದ ನಿರ್ಧಾರಗಳನ್ನು ಹೊರಡಿಸಿವೆ.  ಅದೇ ರೀತಿಯಲ್ಲಿ, ನಮ್ಮ ರಾಜ್ಯ ಸರ್ಕಾರವೂ ಸಹ ನೌಕರ-ವಿರೋಧಿ ಓPS ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ  ಪಿಂಚಣ  ಯೋಜನೆಯನ್ನು ಮರುಸ್ಥಾಪಿಸುವ ಬೇಡಿಕೆಯನ್ನು ಈಡೇರಿಸುವ ಮೂಲಕ ಮಾದರಿ ರಾಜ್ಯಗಳಲ್ಲೊಂದಾಗಬೇಕೆAದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು  ಸರ್ಕಾರವನ್ನು ಆಗ್ರಹಿಸುತ್ತದೆ ಎಂದು  ಅಶೋಕ ಇಲಕಲ್ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಅವರು ತಿಳಿಸಿದ್ದಾರೆ.

Saturday, December 24, 2022

ದಸಾಪ ಜಿಲ್ಲಾಧ್ಯಕ್ಷರಾಗಿ ಬಸವರಾಜ ಜಾಲವಾದಿ ಆಯ್ಕೆ



 ಈ ದಿವಸ ವಾರ್ತೆ

ವಿಜಯಪುರ: ನಗರದ ಬಸವರಾಜ ಜಾಲವಾದಿ ಅವರನ್ನು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ದಲಿತ ಸಾಹಿತ್ಯ ಪರಿಷತ್ ಬೆಳ್ಳಿ ಹಬ್ಬ ಆಚರಿಸುತ್ತಿರುವ ಈ ಸಂದರ್ಭ ರಾಜ್ಯದ ಜಿಲ್ಲಾ ಘಟಕಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಬಸವರಾಜ ಜಾಲವಾದಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಕಾರ್ಯದರ್ಶಿ ಸುಭಾಷ ಹೊದ್ಲೂರ, ದಲಿತ ಸಾಹಿತ್ಯ ಪರಿಷತ್ ಬೆಳಗಾವಿ ವಿಭಾಗೀಯ ಸಂಯೋಜಕ ಡಾ.ಸುಜಾತಾ ಚಲವಾದಿ ಅವರು ಜಂಟಿ ಪತ್ರಿಕಾ ಪ್ರಕಟನೆ ನೀಡಿದ್ದಾರೆ.

ವಿಜಯಪುರ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ವಿವಿಧ ತಾಲೂಕು ಅಧ್ಯಕ್ಷರಾಗ ಬಯಸುವವರು ದಲಿತ ಸಾಹಿತ್ಯ, ಸಂಸ್ಕೃತಿ, ಕಲೆಯ ಬಗೆಗೆ ಆಸಕ್ತಿಯುಳ್ಳವರು ಜಿಲ್ಲಾ ಅಧ್ಯಕ್ಷ ಬಸವರಾಜ ಜಾಲವಾದಿ ಅವರನ್ನು (ಮೊ.9449292062) ಸಂಪರ್ಕಿಸಬಹುದಾಗಿದೆ ಎಂದು ಕೋರಲಾಗಿದೆ.

Wednesday, December 21, 2022

೨೦೨೧-೨೨ನೇ ಸಾಲಿನ "ಬಹುತ್ವ ಭಾರತೀಯ" ಪ್ರಶಸ್ತಿ ಪ್ರಕಟ; ಅನೀಲ ಹೊಸಮನಿ, ಶಿವಾನಂದ ತಗಡೂರ, ಬಸವರಾಜ್ ಸೂಳಿಬಾವಿ, ದು.ಸರಸ್ವತಿ ಸೇರಿದಂತೆ ೬ ಜನರಿಗೆ ಪ್ರಶಸ್ತಿ


ಈ ದಿವಸ ವಾರ್ತೆ

ವಿಜಯಪುರ : ಕನ್ನಡನೆಟ್ ಡಾಟ್ ಕಾಂ, ಬಹುತ್ವ ಭಾರತ ಪತ್ರಿಕೆ ಹಾಗೂ ಬಹುತ್ವ ಭಾರತ ಬಳಗ ಕೊಪ್ಪಳ ಇವರಿಂದ ನೀಡಲಾಗುವ ೨೦೨೧-೨೨ನೇ ಸಾಲಿನ ಬಹುತ್ವ ಭಾರತೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇಡೀ ವಿಶ್ವಕ್ಕೆ ಮಾದರಿಯಾಗಿರುವ ಬಹುಸಂಸ್ಕೃತಿಯ ಭಾರತದ ಬಹುತ್ವವನ್ನು ಎತ್ತಿ ಹಿಡಿಯುವ ಮೂಲಕ ಇತರರಿಗೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿರುವ ವಿವಿಧ ಕ್ಷೇತ್ರಗಳ ಮಹನೀಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 

ಪತ್ರಿಕೋದ್ಯಮ, ಹೋರಾಟ ಮತ್ತು ಸಂಘಟನೆಯ  ಗಣನೀಯ ಸೇವೆಗಾಗಿ ಬೆಂಗಳೂರಿನ ಹಿರಿಯ  ಪತ್ರಕರ್ತರಾದ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ,   ಮಾನವ ಹಕ್ಕುಗಳ ಹೋರಾಟಗಾರರು, ಚಿಂತಕರಾದ ದಾವಣಗೆರೆಯ ಹಿರಿಯ ವಕೀಲರಾದ ಅನೀಸ್ ಪಾಷಾ,  ಧಾರವಾಡದ ಲಡಾಯಿ ಪ್ರಕಾಶನದ ಮೂಲಕ ಇಡೀ ನಾಡಿನಾದ್ಯಂತ ಹೆಸರಾಗಿರುವ ಜನಪರ ಹೋರಾಟಗಾರರು,ಚಿಂತಕರಾದ ಬಸವರಾಜ್ ಸೂಳಿಬಾವಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಬರಹಗಾರ್ತಿಯಾಗಿ, ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ದು.ಸರಸ್ವತಿ ಬೆಂಗಳೂರ, ಶಿಕ್ಷಣ ಸಂಸ್ಥೆಗಳ ಮೂಲಕ ಇಡೀ ನಾಡಿನಾದ್ಯಂತ ಮನೆ ಮಾತಾಗಿರುವ, ಸಮಾಜಮುಖಿ ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು ಗಂಗಾವತಿ ಹಾಗೂ ದಲಿತ ಚಿಂತಕರು,ಬರಹಗಾರರು,ಹಿರಿಯ ಪತ್ರಕರ್ತರಾದ ವಿಜಯಪುರದ ಅನಿಲ್ ಹೊಸಮನಿಯವರಿಗೆ ೨೦೨೧-೨೨ನೇ ಸಾಲಿನ ಬಹುತ್ವ ಭಾರತೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಡಿ.೨೪ರಂದು ಸಾಹಿತ್ಯ ಭವನದಲ್ಲಿ  ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘಟಕರಾದ ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಎಚ್.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಪ್ರೊ.ಓಂಕಾರ ಕಾಕಡೆ ಆಯ್ಕೆ


 ಈ ದಿವಸ ವಾರ್ತೆ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅವರನ್ನು ಪ್ರೆಸ್ ಕ್ಲಬ್ ಆಫ್ ಬೆಂಗಳೂರು- 2022ರ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ವಿಶೇಷ ಪ್ರಶಸ್ತಿಗೆ ಸಚಿವರಾದ ಮುರುಗೇಶ ನಿರಾಣ ಮತ್ತು ಎಸ್.ಟಿ.ಸೋಮಶೇಖರ್ ಅವರು ಆಯ್ಕೆಯಾಗಿದ್ದು ವಾರ್ಷಿಕ ಪ್ರಶಸ್ತಿಗೆ ಪ್ರೊ.ಓಂಕಾರ ಕಾಕಡೆ ಸೇರಿದಂತೆ ವಿವಿಧ ಮಾಧ್ಯಮಗಳ 33 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್ ಶ್ರೀಧರ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಅವರು ನೀಡಿರುವ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Sunday, December 18, 2022

ಊರ್ಧ್ವರೇತ ಟೆಲಿ ಫಿಲ್ಮಿಂಗೆ ಅತ್ಯುತ್ತಮ ಕಥಾ ಪ್ರಶಸ್ತಿ

 


ಧಾರವಾಡದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಊರ್ಧ್ವರೇತ ಟೆಲಿ ಫಿಲ್ಮಿಂಗೆ ಅತ್ಯುತ್ತಮ ಕಥಾ ಹಾಗೂ ಪೋಷಕ ನಟ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ದಿವಸ ವಾರ್ತೆ 

ವಿಜಯಪುರ: ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವ- 2022 ರ ಸ್ಪರ್ಧೆಯಲ್ಲಿ ಸಿಂದಗಿ ಹಿರಿಯ ಸಾಹಿತಿ ಡಾ.ಚನ್ನಪ್ಪ ಕಟ್ಟಿ ಅವರ ಊರ್ಧ್ವರೇತ ಕಥೆ ಆಧಾರಿತ ಟೆಲಿ ಫಿಲ್ಮಿಂಗೆ ಅತ್ಯುತ್ತಮ ಕಥೆ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿವೆ.

ಧಾರವಾಡದಲ್ಲಿ ಡಿ.15, 16 ಮತ್ತು 17 ರಂದು ಉತ್ತರ ಕರ್ನಾಟಕ ಚಲನಚಿತ್ರ ವಾಣ ಜ್ಯ ಮಂಡಳಿ ಹಮ್ಮಿಕೊಂಡ ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಕಿರು ಚಲನಚಿತೋತ್ಸವದಲ್ಲಿ ಪ್ರದರ್ಶನ ಕಂಡು, ಉರ್ಧ್ವರೇತ ಟೆಲಿ ಫಿಲ್ಮಿಂ ಪ್ರಶಸ್ತಿಗೆ ಭಾಜನವಾಗಿದ್ದು, ಶೇಷಾಚಲ ಹವಾಲ್ದಾರ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ (ನಾಮಿನಿ) ಲಭಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ನಿರ್ದೇಶಕ ಜಯತೀರ್ಥ, ಚಲನಚಿತ್ರ ಕಲಾವಿದೆ ರೂಪಿಕಾ, ದೂರದರ್ಶನ ನಿರ್ದೇಶಕಿ ಡಾ.ನಿರ್ಮಲಾ ಯಲಿಗಾರ, ನಿರ್ಮಾಪಕ ಮಾರುತಿ ಜಡಿ, ಜಾರ್ಜ್ ಸೊಲೊಮನ್, ಉತ್ತರ ಕರ್ನಾಟಕ ಚಲನಚಿತ್ರ ವಾಣ ಜ್ಯ ಮಂಡಳಿಯ ಅಧ್ಯಕ್ಷ ಶಂಕರ ಸುಗತೆ, ಮಂಜುನಾಥ ಹಗೆದಾರ, ರಾಹುಲ್ ದತ್ತಪ್ರಸಾದ ಇದ್ದರು.

ಊರ್ಧ್ವರೇತ ಟೆಲಿ ಫಿಲ್ಮಂ ಅನ್ನು ನೆಲೆ ಸಿನಿಕ್ರಿಯೆಷನ್ಸ್ ಅಡಿಯಲ್ಲಿ ಡಾ.ಎಂ.ಎಂ. ಪಡಶೆಟ್ಟಿ ನಿರ್ಮಿಸಿದ್ದಾರೆ. ಡಾ.ಚನ್ನಪ್ಪ ಕಟ್ಟಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ನೀಡಿದ್ದಾರೆ. ಸುನೀಲಕುಮಾರ ಸುಧಾಕರ ನಿರ್ದೇಶನ, ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ. ಡಾ. ಹರೀಶ ಹೆಗಡೆ ಸಂಗೀತ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಬಾಲಕ ಶಿಲ್ಪಕಲೆ ಬಗ್ಗೆ ಸಂಶೋಧನೆ ಆಸಕ್ತಿ ಬೆಳೆಸಿಕೊಂಡು, ಸಂಶೋಧನೆಯ ಜೊತೆಗೆ ಯೋಗಸಾಧಕನಾಗುವುದು ಕಥೆಯ ತಿರುಳಾಗಿದೆ. ಚಿತ್ರದಲ್ಲಿ ಶೇಷಾಚಲ ಹವಾಲ್ದಾರ, ಲಕ್ಷ್ಮೀ ಬಾಗಲಕೋಟಿ, ಪಲ್ಲವಿ ಪಾಟೀಲ, ಪೊನ್ನಪ್ಪ ಕಡೆಮನಿ, ಅಂಬಾದಾಸ ಜೋಶಿ, ಚಂದ್ರಶೇಖರ ಅಂಬಲಿ, ಕಾರ್ತಿಕ, ಸೃಜನ, ಕಾಶಿನಾಥ, ಕಲ್ಲಪ್ಪ ಶಿವಶರಣ , ಗೌಡಪ್ಪ ಶಹಾಪುರ, ವಿನೋದ ರಾಠೋಡ, ಮಂಜು ಕಟ್ಟಿಮನಿ, ಅಮೋಘ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಚಿತ್ರ ವೀಕ್ಷಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿರಿ.

https://youtu.be/AXms-M-09W4

ಸುಧಾರಾಣಿ, ತ್ರಿವೇಣಿಗೆ ಪಿಎಚ್‌ಡಿ ಪದವಿ

ಸುಧಾರಾಣಿ ಮಣೂರ
                        ಮಣೂರ ಸುಧಾರಾಣಿ ಶಿವಪ್ಪಾ

                                   ತ್ರಿವೇಣಿ ಬನಸೋಡೆ

ಈ ದಿವಸ ವಾರ್ತೆ

 ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಮಣೂರ ಸುಧಾರಾಣಿ  ಶಿವಪ್ಪಾ ಅವರು ಸಲ್ಲಿಸಿದ್ದ “ಪ.ಗು ಸಿದ್ದಾಪುರ ಅವರ ಜೀವನ ಮತ್ತು ಸಾಹಿತ್ಯ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.

ಮಣೂರ ಸುಧಾರಾಣಿ  ಶಿವಪ್ಪಾ ಅವರು ಕನ್ನಡ ವಿಭಾಗದ ಪ್ರೊ. ಮಹೇಶ ಚಿಂತಾಮಣಿ  ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. 

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ತ್ರಿವೇಣಿ  ಬನಸೋಡೆ ಅವರು ಸಲ್ಲಿಸಿದ್ದ “ಎ. ಪಿ. ಮಾಲತಿ ಅವರ ಜೀವನ ಮತ್ತು ಸಾಹಿತ್ಯ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.

ತ್ರಿವೇಣಿ   ಬನಸೋಡೆ ಅವರು ಕನ್ನಡ ವಿಭಾಗದ ಪ್ರೊ, ಮಹೇಶ ಚಿಂತಾಮಣಿ  ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.

ಡಾಕ್ಟರೇಟ್ ಪದವಿ ಪಡೆದಿರುವ ಮಣೂರ ಸುಧಾರಾಣಿ  ಶಿವಪ್ಪಾ ಹಾಗೂ ತ್ರಿವೇಣಿ ಬನಸೋಡೆ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ. ಬಿ.ಎಸ್.ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ್.ಕೆ. ಅಭಿನಂದಿಸಿದ್ದಾರೆ.

Saturday, December 10, 2022

ಫೆ.15ರೊಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವಂತೆ -ಸಚಿವ ಗೋವಿಂದ ಕಾರಜೋಳ ಸೂಚನೆ

ಈ ದಿವಸ‌ ವಾರ್ತೆ

ವಿಜಯಪುರ : ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗಳು ಭರದಿಂದ ಸಾಗಿದ್ದು, ಫೆ.15ರೊಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿಮಾನ ನಿಲ್ದಾಣ ಹಾಗೂ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ನವದೆಹಲಿಗೆ ತೆರಳಿ ಕೇಂದ್ರ ಸಚಿವ ಭೂಪೇಂದ್ರ ಯಾದವ ಅವರನ್ನು ಭೇಟಿ ಮಾಡಿ ಚರ್ಚಿಸಿ ಅನುಮತಿಯನ್ನು ಸಹ ಪಡೆದುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಶನಿವಾರ ವಿಜಯಪುರ ಹೊರವಲಯದ ಬುರಾಣಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಅವರು, ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, ಇ.ಟಿ.ಸಿ. ಬಿಲ್ಡಿಂಗ್, ಬೌಂಡ್ರಿ ವಾಲ್ಸ್, ಸೇರಿದಂತೆ ರನ್‍ವೇ ಕಾಮಗಾರಿ ಗಳನ್ನು ವೀಕ್ಷಿಸಿದ ಸಚಿವರು   ಸರ್ವೇ ಪೆÇೀಲ್‍ನ್ನು ವೀಕ್ಷಿಸಿ ಕಾಮಗಾರಿಯನ್ನು ತಾಂತ್ರಿಕವಾಗಿ ಪರಿಶೀಲನೆ ನಡೆಸಿದರು.

 


ಈ ಸಂದರ್ಭದಲ್ಲಿ ಮಾತನಾಡಿದ ಅವರು,  ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟವಾದ ನಿರ್ದೇಶನ ನೀಡಲಾಗಿದೆ, ಜಮೀನು ಸಮತಟ್ಟು ಮಾಡುವ ಕಾರ್ಯ ಕೈಗೊಳ್ಳುವ ಉದ್ದೇಶದಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ, ಆದರೂ ವೇಗದಿಂಧ ಕಾಮಗಾರಿ ಕೈಗೊಂಡು ಬರುವ ಫೆಬ್ರವರಿ 15ರೊಳಗೆ ಕಾಮಗಾರಿ ಸಂಪೂರ್ಣಗೊಂಡು ವಿಮಾನಗಳು ಹಾರಾಟ ನಡೆಸಲಿವೆ ಎಂದು ಹೇಳಿದರು.

ವಿಮಾನ ನಿಲ್ದಾಣ ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ 727 ಎಕರೆ ಜಮೀನನ್ನು ಡಿನೋಟಿಫಿಕೇಶನ್ ಮಾಡಲಾಗಿದೆ. ವಿಜಯಪುರ ತಾಲೂಕಿನ ಬುರಣಾಪುರ-ಮದಭಾವಿ ಜಿಲ್ಲಾ ಮುಖ್ಯ ರಸ್ತೆಯಿಂದ  ವಿಮಾನ ನಿಲ್ದಾಣದ ಕೂಡುವ ರಸ್ತೆಗೆ 4.95 ಕೋಟಿ ರೂ. ಲೋಕೋಪಯೋಗಿ ಇಲಾಖೆಯಿಂದ, ಇನ್ನೂ ಎರಡು ರಸ್ತೆಗಳಾದ ಮದಬಾವಿ ಲಂಬಾಣಿ ತಾಂಡಾದಿಂದ ದೊಡ್ಡಿ ದ್ಯಾಬೇರಿಯವರೆಗೆ ಪರಿಶಿಷ್ಟ ಜಾತಿ ಕಾಲನಿಗೆ ಕೂಡುವ ರಸ್ತೆ 4.50 ಕೋಟಿ ರೂ.ದಲ್ಲಿ, ಮತ್ತು ಬುರಣಾಪುರ ಎಸ್.ಸಿ. ಕಾಲೋನಿಯಿಂದ ಅಲಿಯಾಬಾದ್ ಎಸ್.ಸಿ. ಕಾಲೋನಿಯವರೆಗೆ ಹೋಗುವ ರಸ್ತೆ, ವಿಮಾನ ನಿಲ್ದಾಣದ ಸುತ್ತ-ಮುತ್ತ ಯಾವುದೇ ಅಡೆ-ತಡೆ ಉಂಟಾಗಬಾರದು ಎಂಬ  ದೃಷ್ಟಿಯಿಂದ ರಸ್ತೆ ನಿರ್ಮಾಣಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ ಕೂಡ 9.50 ಕೋಟಿ ರೂ.ಅನುದಾನಕ್ಕೆ ಮಂಜೂರಾತಿ ನೀಡಲಾಗಿದ್ದು, ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.



ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ದಿಂದ ಏರ್‍ ಬಸ್ 320 ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಸಹ ಭರದಿಂದ ಸಾಗಿದ್ದು,  ಒಟ್ಟು 347.92 ಕೋಟಿ ರೂ.ಗಳ ಕಾಮಗಾರಿಯನ್ನು ಎರಡು ಹಂತಗಳಲ್ಲಿ  ಅನುಷ್ಟಾನಗೊಳಿಸಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿಗಾಗಿ 222.92 ಕೋಟಿ ರೂ.ಗಳು ಹಾಗೂ ಎರಡನೇ ಹಂತದ ಕಾಮಗಾರಿಗೆ 125 ಕೊಟಿ ರೂ.ಗಳನ್ನು ನಿಗದಿಪಡಿಸಲಾಗಿದ್ದು, ಎಟಿಆರ್-72 ವಿಮಾನಗಳ ಹಾರಾಟಕ್ಕಾಗಿ 95 ಕೋಟಿ ರೂ.ಹಾಗೂ ಏರ್‍ಬಸ್-320 ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆಗೇರಿಸಿರುವುದರಿಂದ ಹೆಚ್ಚುವರಿಯಾಗಿ 127.92 ಕೋಟಿ ರೂ.ಗಳ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಹೇಳಿದರು.

ಮೊದಲನೇ ಹಂತದಲ್ಲಿ 222.92 ಕೋಟಿ ರೂ.ಗಳಲ್ಲಿ ರನ್‍ವೇ, ಟ್ಯಾಕ್ಸಿ ವೇ, ಎಪ್ರಾನ್, ಇಸೋಲೇಶನ್ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಪೆರಿಪೆರಲ್ ರಸ್ತೆಗಳು ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ದಿಪಡಿಸಲಾಗುತ್ತಿದೆ  ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ, ಟರ್ಮಿನಲ್ ಬಿಲ್ಡಿಂಗ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

 ನಿಸರ್ಗ ಸಂಪತ್ತಿನಿಂದ ಕೂಡಿರುವ ವಿಜಯಪುರ ಜಿಲ್ಲೆಯಲ್ಲಿ ಸಂಪನ್ಮೂಲ, ಹವಾಮಾನ, ನೀರು ಹೀಗೆ ಎಲ್ಲ ರೀತಿಯ ವ್ಯವಸ್ಥೆ ಇದೆ. ವಿಮಾನ ನಿಲ್ದಾಣ ಸ್ಥಾಪನೆಯಿಂದಾಗಿ ಉದ್ಯಮಪತಿಗಳು ಬೇರೆ-ಬೇರೆ ಸ್ಥಳಗಳಿಂದ  ಕೆಲವೇ ಗಂಟೆಗಳಲ್ಲಿ ವಿಜಯಪುರ ತಲುಪಲು ಸಾಧ್ಯವಾಗುತ್ತದೆ, ಹೀಗಾಗಿ ಈ ನಿಲ್ದಾಣ ಸ್ಥಾಪನೆಯಿಂದ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ದೊರಕಿ ಉದ್ಯೋಗ ಸೃಜನೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ವಿಜಯಪುರ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ ಮೊದಲಾದ ಬೆಳೆಗಳಿಗೆ ಹೆಸರುವಾಸಿ, ಈ ಎಲ್ಲ ಬೆಳೆಗಳನ್ನು ರಫ್ತು ಮಾಡಲು ಹಾಗೂ ವಿಶ್ವದ ಶ್ರೇಷ್ಠ ಸ್ಮಾರಕಗಳನ್ನು ಸಂದರ್ಶಿಸಲು ಪ್ರವಾಸಿಗರಿಗೆ ವಿಮಾನ ನಿಲ್ದಾಣ ಅನುಕೂಲವಾಗಲಿದ್ದು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಲೋಕೋಪಯೋಗಿ ಇಲಾಖೆ ಕಾರ್ಯನಿವಾಹಕ ಅಭಿಯಂತರ ರಾಜು ಮುಜುಂದಾರ, ಸಹಾಯಕ ಅಭಿಯಂತರ ರೇವಣ್ಣ ಮಸಳಿ, ಗುತ್ತಿಗೆದಾರ ಸಿ.ಬಿ.ಆಲೂರ, ಪ್ಯಾಕೇಜ್-2 ಪ್ರಾಜೆಕ್ಟ್ ಮ್ಯಾನೇಜರ್ ಸರವಣನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tuesday, November 15, 2022

ಸಿದ್ದಾಪುರವರಿಗೆ " ರಮಣಶ್ರೀ ಪ್ರಶಸ್ತಿ" ಪ್ರದಾನ

 


ಈ ದಿವಸ ವಾರ್ತೆ

ವಿಜಯಪುರ: ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತುˌ ˌಮೈಸೂರು ಹಾಗೂ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಕೊಡಮಾಡುವ ೨೦೨೨ನೆಯ ಸಾಲಿನ "ರಮಣಶ್ರೀ ಶರಣ ಹಿರಿಯ ಶ್ರೇಣಿ ಆಧುನಿಕ ವಚನರಚನೆ ಪ್ರಶಸ್ತಿ "ಯನ್ನು ಆಧುನಿಕ ವಚಕಾರ ˌಶರಣ ಸಾಹಿತಿ ಪ.ಗು.ಸಿದ್ದಾಪುರವರಿಗೆ ಇದೇ ೧೭ ರಂದು ಬೆಂಗಳೂರಿನ " ರಮಣಶ್ರೀ ಹೊಟೇಲ ಸಭಾಂಗಣ "ದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಪ್ರದಾನಮಾಡಲಿದ್ದಾರೆ.ಪ್ರಶಸ್ತಿಯು ೪೦ಸಾವಿರ ಗೌರವಧನದೊಂದಿಗೆ  ಪ್ರಶಸ್ತಿ ಫಲಕವನ್ನೊಳಗೊಂಡಿದೆ.ಸಮಾರಂಭದ ಅಧ್ಯಕ್ಷತೆಯನ್ನು  ಮಾನ್ಯ ಸಚಿವರಾದ ಶ್ರೀ ವಿ.ಸೋಮಣ್ಣ ವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

            ಸಾವಿರಾರು ಆಧುನಿಕ ವಚನಗಳನ್ನು ರಚಿಸಿ ಓದುಗರ ಮನಸೂರೆಗೊಳಿಸಿದ ಪ.ಗು.ಸಿದ್ದಾಪುರವರು ಅನುಭವದೀಪ್ತಿ ˌಮಕರಂದ ˌಹಣತೆ ಹಚ್ಚಿದವರು ಹಾಗೂ ಬಸವ ಬೆಳಗು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡುವುದರೊಂದಿಗೆ ಶರಣ ಸಾಹಿತ್ಯ ಕೃಷಿಗಾಗಿ ಕೊಡಮಾಡುವ ಇಳಕಲ್ ಚಿತ್ತರಗಿ ಮಹಾಂತಸ್ವಾಮಿ ಸಂಸ್ಥಾನಮಠದ  "ಬಸವಗುರುಕಾರುಣ್ಯ "ಪ್ರಶಸ್ತಿಯೊಂದಿಗೆ ಮಂಡ್ಯದ ಅಡ್ವೆೃಸರ್ ಪತ್ರಿಕೆಯ "ಅಡ್ವೈಸರ್ ೨೦೨೨ನ್ನೂ ತಮ್ಮ ಮುಡಿಗೇರಿಸಿಕೊಂಡದ್ದನ್ನಿಲ್ಲಿ ಸ್ಮರಿಸಬಹುದು.

16-11-2022 EE DIVASA KANNADA DAILY NEWS PAPER

ಜ್ಯೋತಿರ್ಲಿಂಗ ಹೊನಕಟ್ಟಿಗೆ ವಿಶ್ವ ಮಾನ್ಯ ಪ್ರಶಸ್ತಿ



 ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಪೊಲೀಸ್ ಇಲಾಖೆ ಸಿಪಿಐ ಅಧಿಕಾರಿ, ಜಾನಪದ ಹಿರಿಯ ಸಾಹಿತಿ ಜ್ಯೋತಿರ್ಲಿಂಗ ಚಂದ್ರಾಮಪ್ಪ ಹೊನಕಟ್ಟಿಯವರಿಗೆ ‘ವಿಶ್ವ ಮಾನ್ಯ ಪ್ರಶಸ್ತಿ’ ಲಭಿಸಿದೆ.

 ಕನ್ನಡ ಸಂಘ ಮಸ್ಕಟ್ ಮತ್ತು ಹೃದಯವಾಹಿನಿ- ಕರ್ನಾಟಕ ಆಶ್ರಯದಲ್ಲಿ 16ನೇ ವಿಶ್ವ ಕನ್ನಡ ಸಮ್ಮೇಳನ 2022 ಒಮಾನ್ ನ. 18 ಮತ್ತು 19 ರಂದು ಅಲ್ ಫಲಾಝ್ ಸಭಾಂಗಣ ಮಸ್ಕತ್ ಸುಲ್ತಾನೆಟ್ ಆಪ್ ಒಮಾನ ಹೋರ ದೇಶದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜ್ಯೋತಿರ್ಲಿಂಗ ಚಂದ್ರಾಮಪ್ಪ ಹೊನಕಟ್ಟಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

 16ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬದಪಟ್ಟ0ತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ. ಮಾದ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಗೋಷ್ಠಿ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತ ನಾಟ್ಯ ಜಾನಪದ ನೃತ್ಯ ರೂಪ ಯಕ್ಷಗಗಾನ ಹಾಗೂ ಮುಂತಾದ ಕಲೆಗಳು ಪ್ರದರ್ಶನಗೊಳ್ಳೂವವು ಕರ್ನಾಟಕ ಕಲೆ ಮತ್ತು ಸಂಸ್ಕೃತಿ ವಿದೇಶಿ ನೆಲವಾದ ಒಮಾನ ಪ್ರತಿ ಬಿಂಬಿಸಲಿದೆ.

ಜ್ಯೋತಿರ್ಲಿ0ಗ ಹೊನಕಟ್ಟಿಯವರು ಖ್ಯಾತ ಜಾನಪದ ಗಾಯಕರು ಹಾಗೂ ಬರಹಗಾರರು ತಾವು ಕನ್ನಡ ಮತ್ತು ಸಂಸ್ಕೃತಿ ಪ್ರೋತ್ಸಾಹಕರ ತಾವು ಕರುನಾಡಿನ ಕಲೆಗಳ ಮೆರಗು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಜಾನಪದ ಕ್ಷೇತ್ರದಲ್ಲಿ ತಮ್ಮ ಅನುಪಮ ಕೊಡುಗೆಯನ್ನು ಪರಿಗಣಿಸಿ ಜಾನಪದ ಹಾಡು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಕನ್ನಡ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್, ಎಸ್‌ಡಿಟಿ ಪ್ರಸಾದ್. ಡಾ.ಕದಂ ರಮೇಶ ಬೆಂಗಳೂರು. ರಾಜು ಅಡಕಳ್ಳಿ ಸಿರ್ಶಿ, ಪ್ರೊ.ಎಂ.ಕುದರಿ ಗೋಕಾಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಪ್ಯೂಟರ್ ಸಾಕ್ಷರತೆ ಕಾರ್ಯಾಗಾರ ಇದೇ ದಿ.17 ರಂದು




ಈ ದಿವಸ ವಾರ್ತೆ

 ವಿಜಯಪುರ : ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ನಿಯಮ 1(3) ರಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಹೊರತುಪಡಿಸಿ ಇನ್ನಿತರ ಎಲ್ಲಾ ಅಭ್ಯರ್ಥಿಗಳು ದಿನಾಂಕ 31-12 -2022 ರೊಳಗೆ  ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಇದೇ ದಿ.17 ರಂದು ವಿಜಯಪುರದ ಸರ್ಕಾರಿ ಬಾಲಕರ ಪದವಿಪೂರ್ವ  ಪ್ರೌಢಶಾಲೆಯಲ್ಲಿರುವ ಶ್ರೀ ವಿಶ್ವೇಶ್ವರಯ್ಯ ಸಭಾಭವನದಲ್ಲಿ ಕಂಪ್ಯೂಟರ್ ಸಾಕ್ಷರತೆ ಕುರಿತಾದ ಕಾರ್ಯಾಗಾರ ಆಯೋಜಿಸಲಾಗಿದೆ. ಶಿಕ್ಷಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಈ ಕಾರ್ಯಾಗಾರ ಸಂಘಟಿಸಲಾಗಿದೆ, ಭಾಗವಹಿಸುವ ಶಿಕ್ಷಕರಿಗೆ ಓಓಡಿ ಸೌಲಭ್ಯವಿದೆ. ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು.  ಮುಖ್ಯ ಉಪಾಧ್ಯರಾಗಿ ಭಡ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸಹ ನೆರವೇರಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಶಿವರಾಜ್ ಬಿರಾದಾರ ತಿಳಿಸಿದ್ದಾರೆ.

ಪಾಟೀಲ ಫೌಂಡೇಷನ್ ಸಂಸ್ಥೆಯ 8ನೇ ವಾರ್ಷಿಕೋತ್ಸವ




ಈ ದಿವಸ ವಾರ್ತೆ

ವಿಜಯಪುರ: ಮಾನವನ ಸೇವೆ ನಿಜವಾದ ದೇವರ ಸೇವೆ ಎಂದು ಪೀಟರ್ ಅಲೆಕ್ಸಾಂಡರ್ ಹೇಳಿದರು. ನಗರದಲ್ಲಿ ಹಮ್ಮಿಕೊಂಡ 8 ನೇ ವಾರ್ಷಿಕ ಸಮ್ಮೇಳನದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.




ಪಾಟೀಲ ಫೌಂಡೇಶನ್ ಸೇವೆ ನಿತಂತರವಾಗಿರಲಿ ನಾವು ಎಂದೆಂದು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ಸೇವೆ ಸಾಮಾನ್ಯ ಸೇವೆ ಅಲ್ಲ. ಅದು ದೇವರ ಸೇವೆಯಾಗಿದೆ. ಇಂದಿನ ಯುವಕರಿಗೆ ಸೇವೆ ಮಾಡುವ ಮನೋಭಾವ ಇಲ್ಲ. ಮುಂದಿನ ದಿನಗಳಲ್ಲಿ ಪಾಟೀಲ ಫೌಂಡೇಶನ್ ಇತಿಹಾಸ ನಿರ್ಮಿಸಲಿ. ೭ ನದಿ ಇದ್ದರು ವಿಜಯಪುರ ಜಿಲ್ಲೆ ಬರಗಾಲ ಪೀಡಿತವಾಗಿದೆ. ಪಂಚಭೂತಗಳನ್ನು ನಾವು ಸಂರಕ್ಷಿಸಬೇಕಾಗಿದೆ. ಅದು ನಮ್ಮ ಕರ್ತವ್ಯವಾಗಿದೆ. ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ಕರೆ ನೀಡಿದರು.



ಈ ಸಂದರ್ಭದಲ್ಲಿ ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿ ರಾಜ್ಯಾಧ್ಯಕ್ಷ ಮುರಳಿಧರ ಕೆ ಎಸ್ ಮಾತನಾಡಿ, ವಿಜಯಪುರ ಜಿಲ್ಲೆ ಎಲ್ಲ ಜಿಲ್ಲೆಗಳಿಗೆ ಮಾದರಿಯಾಗಲಿ ಪಾಟೀಲ ಫೌಂಡೇಶನ್ ನೊಂದಿಗೆ ಸದಾ ಇರುವೆ ಎಂದರು. ಈ ಸಂದರ್ಭದಲ್ಲಿ ಬಿ.ಎಂ.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ ಕಲ್ಪಿಸಿ ಒಳ್ಳೆಯ ಸಂದೇಶಗಳನ್ನು ನೀಡುತ್ತಿದ್ದಾರೆ. ಹಗಲಿರುಳು ಶ್ರಮಿಸುತ್ತಿದ್ದಾರೆ. ಸೃಷ್ಠಿ ಕಷ್ಟ ನಾಶ ಸುಲಭ. ಮಾಡಬೇಕು ಮಾಡದಂತಿರಬೇಕು.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದದೆ ಎಂದರು.ಯುವಕರು ಮುಂದೆ ಬರಬೇಕು.  ಅತಿ ಬಡತನದಲ್ಲಿ ಹಿಂದುಳಿದ ಮಕ್ಕಳನ್ನು ಮೇಲೆತ್ತಯವ ಕೆಲಸ ಮಾಡಬೇಕು. ಯುವಕರು ಜಾಗೃತರಾಗಬೇಕು ಎಂದರು. ಜಗತ್ತಿನಲ್ಲಿ ಹುಟ್ಟು ವಾಗ ಯಾರು ಜ್ಞಾನವಂತರಿರುವುದಿಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಮನುಷ್ಯನಿಗೆ ಸಾಧನೆಗೆ ಛಲ ಬೇಕು..ಛಲ ವಿದ್ದಾಗ ಯಶಸ್ಸು ಸಿಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪೂಜಾ ಟೆಲಿವ್ಹೀಜನ್ ಮಾಲಿಕರಾದ ವಿಜಯಕುಮಾರ ಚವ್ಹಾಣ, ಮಹಿಳಾ ಹೋರಾಟಗಾರ್ತಿ ಸುರೇಖಾ ರಜಪುತ, ಅನುಜಾ ತಾಳಿಕೋಟೆ, ಬಿ.ಡಿ.ಎ ಮಾಜಿ ಅಧ್ಯಕ್ಷರಾದ ಚಂದ್ರಕಾಂತ ಶೆಟ್ಟಿ ವೇದಿಕೆಯ ಮೇಲಿದ್ದರು.

ಈ ಸಂದರ್ಭದಲ್ಲಿ ನೂತನ ಮಹಾನಗರ ಪಾಲಿಕೆ ಸದಸ್ಯರಾದ ಕುಮಾರಿ ಆರತಿ ಶಾಹಾಪೂರ  ದಿನೇಶ್ ಹಳ್ಳಿ ಹಾಗೂ ಸಮಾಜಸೇವಕರಾದ  ಮಿಲಿಂದ್ ಚಂಚಲಕರ, ಡಾ:ರಮೇಶ ಸೂನಕಾಂಬಳೆ, ತಿಪ್ಪಣ್ಣ ದೊಡ್ಡಮನಿ. ಮಹ್ಮದಹಮ್ಮೀದ ಇನಾಮದಾರ, ಪಾಟೀಲ ಫೌಂಡೇಷನ್ ಅಧ್ಯಕ್ಷ ಪ್ರವೀಣಗೌಡ ಪಾಟೀಲ, ಉಪಾಧ್ಯಕ್ಷ  ಶ್ರೇಯಸ್ಸ ಶೆಟ್ಟಿ,  ನಿರ್ದೇಶಕ ಶ್ರೀಧರ ಇಳಗೇರ, ವಿಠ್ಠಲ ಚವ್ಹಾಣ, ಸಂದೇಶ ತಡಲಗಿ , ಮಾಹಂತೇಶ ಪಾಟೀಲ, ತಿಲಕ್ ಬೂದಿಹಳ, ವೀರೇಶ್ ಬಡಿಗೇರ, ಮಲ್ಲಿಕಾರ್ಜುನ ಪಾಟೀಲ, ಅಕ್ಷಯ ವಜ್ರದ್, ಶಂಕರ್ ಅಮರಣ್ಣನವರ, ಸಚಿನ ಸಜ್ಜನ, ಸಂಗಮೇಶ ಮನಗೂಳಿ, ಪೂರ್ಣಿಮಾ ಬರಿಮನಿ, ಶಿವು ಹಳ್ಳಿ, ಜೀವಿತಾ, ದಿವ್ಯಶ್ರೀ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಎಸ್ .ಸಿ.ಮ್ಯಾಗೇರಿ, ಲೆಕ್ಕ ಪರೀಶೋಧಕ ಕಮಲಾಕರ ಕದಮ್, ಕುಮಾರಿ ಪೂಜಾ ರಾಯಕರ್ ಹಾಗೂ ಪಾಟೀಲ ಫೌಂಡೇಶನ್ ೨೧ ಜಿಲ್ಲೆಯ ಕಾರ್ಯಕರ್ತರು ಮತ್ತು ಸಂಸ್ಥೆಯ ಧಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವಾಗತ ಮತ್ತು ಪ್ರಸ್ಥಾವಿಕವಾಗಿ ಪ್ರಭುಗೌಡ ಪಾಟೀಲ ಮಾತನಾಡಿದರು, ಯಶೋಧ ಜೋಶಿ ಕಾರ್ಯಕ್ರಮ ನಿರೂಪಿಸಿದರು. 

ಇದೆ ಸಂದರ್ಭದಲ್ಲಿ ಸಂಸ್ಥೆಯ ಮೂಲಕ ಗಣ್ಯರಿಗೆ, ಸ್ವಯಂ ಸೇವಕರಿಗೆ  ಗೌರವ ಸನ್ಮಾನ, ನೆನಪಿನ ಕಾಣಿಕೆಗಳನ್ನು ನೀಡಿ ಸತ್ಕರಿಸಲಾಯಿತು.

ಪ್ರಸನ್ನ ಕರ್ಪೂರ, ಪತ್ರಕರ್ತರು ಇವರು ಬರೆದ "ಕಾಡ ಕಸ್ತೂರಿ" ಪುಸ್ತಕವನ್ನು ಎಲ್ಲಾ ಅತಿಥಿಗಳಿಗೆ ನೀಡಲಾಯಿತು.

Wednesday, November 2, 2022

ಶೀಘ್ರ ಮನೆ ಮನೆಗೆ ಸಮಪ೯ಕ ಕುಡಿಯುವ ನೀರಿನ ಸೌಲಭ್ಶ: ಶಾಸಕ ಭೂಸನೂರ

 



ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಶಾಸಕ ರಮೇಶ ಭೂಸನೂರ ಮಾತನಾಡಿದರು.ಸಂತೋಷಗೌಡ ಪಾಟೀಲ,ಸಿದ್ದು ಬುಳ್ಳಾ ಇತರರಿದ್ದರು.


ಈ ದಿವಸ ವಾರ್ತೆ

ಬ್ರಹ್ಮದೇವನಮಡು : ಗ್ರಾಮೀಣ ಪ್ರದೇಶದ ಜನರಿಗೆ ಸಮಪ೯ಕ ಕುಡಿಯುವ ನೀರಿನ ಪೂರೈಸುವ ಮಹತ್ತರದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದು,ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ರಮೇಶ ಭೂಸನೂರ ಹೇಳಿದರು.

  ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಗೆ ಮಂಗಳವಾರ ಸಂಜೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿನ ಪ್ರತಿಯೊಂದು ಮನೆ ಮನೆಗೂ ನೀರಿನ ಸೌಲಭ್ಶ ಕಲ್ಪಿಸಲಾಗುವುದು.2021-22ನೇ ಸಾಲಿನ ಕೇಂದ್ರ ಹಾಗೂ ರಾಜ್ಶ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ಸಂಪಕ೯ ಯೋಜನೆ ಪೂಣ೯ಗೊಂಡರೆ ನೀರಿನ ಸಮಸ್ಶೆ ದೂರವಾಗಲಿದೆ ಎಂದರು.ಈ ವೇಳೆ ಚನ್ನಮಲ್ಲಯ್ಶ ಹಿರೇಮಠ, ಪ್ರಮುಖರಾದ ಸಂತೋಷಗೌಡ ಪಾಟೀಲ ಡಂಬಳ,ಸಿದ್ದು ಬುಳ್ಳಾ,ದೇವಿಂದ್ರ ತೋನಶ್ಶಾಳ,ಸಿದ್ದಪ್ಪ ಮನಗೂಳಿ,ನಾಗಣ್ಣ ಪಡೇಕನೂರ,ದೇವಿಂದ್ರ ಮನಗೂಳಿ,ಗುರುಸಿದ್ದಪ್ಪ ಮನಗೂಳಿ,ಪತ್ರಕತ೯ ಮಲ್ಲು ಕೆಂಭಾವಿ,ನಾನಾಗೌಡ ಪಾಟೀಲ, ಡಾ.ಎನ್.ಪಿ.ನಾಯ್ಕೋಡಿ,ಸಂತೋಷ ಕರಿಕಲ್ಲ್,ಶರಣು ಮನಗೂಳಿ,ನಡಗೇರೆಪ್ಪ ತಳವಾರ,ಕೆ.ಡಿ.ಸೀತನೂರ,ನಾಗಪ್ಪ ಪೂಜಾರಿ,ಇಪಾ೯ನ ಚಂಡ್ರಕಿ,ಪ್ರವೀಣ ರಾಠೋಡ,ದೇವಿಂದ್ರ ರತ್ಶಾಳ ಸೇರಿದಂತೆ ಇತರರಿದ್ದರು.

ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾಗಿ ಲೇಖಕಿ ಹೇಮಾ ವಸ್ತ್ರದ ಆಯ್ಕೆ

ಹೇಮಾ ವಸ್ತ್ರದ

ಲೇಖಕಿ ಹೇಮಾ ವಸ್ತ್ರದ

 ಈ ದಿವಸ ವಾರ್ತೆ

ವಿಜಯಪುರ: ಕರ್ನಾಟಕ ಲೇಖಕಿಯರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಲೇಖಕಿ ಹೇಮಾ ವಸ್ತ್ರದ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ರಚನೆ ಮಾಡಲಾಯಿತು. ಅಧ್ಯಕ್ಷರನ್ನಾಗಿ ಹೇಮಾ ವಸ್ತ್ರದ, ಉಪಾಧ್ಯಕ್ಷರಾಗಿ ವನಮಾಲಾ ರಾಠೋಡ, ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಚಲವಾದಿ, ಖಜಾಂಚಿಯಾಗಿ ದಾಕ್ಷಾಯಣಿ ಬಿರಾದಾರ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಲೇಖಕಿ ಡಾ. ಎಚ್ ಎಲ್ ಪುಷ್ಪಾ ಅವರು ಇದಕ್ಕೆ ಅನುಮೋದಿಸಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಲಾಯಿತು.

ಇದೇ ಸಂದರ್ಭದಲ್ಲಿ ಪ್ರಭಾವತಿ ದೇಸಾಯಿ, ಭಾರತಿ ಪಾಟೀಲ, ಇಂದುಮತಿ ಲಮಾಣಿ, ಕೆ ಸುನಂದಾ, ಶೋಭಾ ಗುನ್ನಾಪುರ ಇತ್ಯಾದಿ ಹಿರಿಯ ಲೇಖಕಿಯರಾದಿಯಾಗಿ ಕಲೇಸಂ ನ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

03-11-2022 EE DIVASA KANNADA DAILY NEWS PAPER

ನಂ. 6 ರಂದು ಪ್ರಶಸ್ತಿ ಪ್ರದಾನ ಹಾಗೂ ಊರ್ಧ್ವ ರೇತ ಕಿರುಚಿತ್ರ ಬಿಡುಗಡೆ

ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ
ಡಾ. ವೀರಣ್ಣ ದಂಡೆ 

ಡಾ. ಚನ್ನಪ್ಪ ಕಟ್ಟಿ
ಡಾ. ಚನ್ನಪ್ಪ ಕಟ್ಟಿ


ಈ ದಿವಸ ವಾರ್ತೆ ವಿಜಯಪುರ:

ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ (ರಿ) ಎಂ.ಎಂ. ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ ಅವರಿಗೆ 2022 ನೇ ಯ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನೆಲೆ ಸಿನಿ ಕ್ರಿಯೇಷನ್  ಅರ್ಪಿಸುವ 'ಊರ್ಧ್ವ ರೇತ' ಕಿರುಚಿತ್ರ ಬಿಡುಗಡೆ ಸಮಾರಂಭವು ನವೆಂಬರ್ 6 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಮಾಂಗಲ್ಯ ಭವನ ವಿಜಯಪುರ ರಸ್ತೆ ಸಿಂದಗಿಯಲ್ಲಿ ಜರುಗಲಿದೆ.



ಸಾನ್ನಿಧ್ಯ ಹಾಗೂ ಕಿರುಚಿತ್ರ ಬಿಡುಗಡೆಯನ್ನು ಸಾರಂಗಮಠದ ಪರಮಪೂಜ್ಯ ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ನೆರವೇರಿಸಲಿದ್ದಾರೆ.

ಬಿ.ಎಲ್.ಡಿ. ಇ. ಸಂಸ್ಥೆ ಯ ನಿರ್ದೇಶಕರಾದ ಅಶೋಕ ವಾರದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ವೀರಣ್ಣ ದಂಡೆ ಬದುಕು - ಬರಹ ಕೃತಿ ಬಿಡುಗಡೆ ಯನ್ನು  ಅಸ್ಕಿಯ ಪ್ರಗತಿಪರ ರೈತರಾದ  ಎಸ್.ಎಸ್.ಪಾಟೀಲ ಅವರ ನೆರವೇರಿಸಲಿದ್ದಾರೆ.

ಪತ್ರಕರ್ತರಾದ ಡಾ. ಶಿವರಂಜನ ಸಂತ್ಯಪೇಟೆ ಅವರು ಮಾತನಾಡಲಿದ್ದಾರೆ. ಕಾರ್ಯದರ್ಶಿ ಡಾ.ಎಂ.ಎಸ್. ಮದಭಾವಿ ಅಭಿನಂದನ ನುಡಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ  ಹಿರಿಯ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ, ಮುಖ್ಯ ಅತಿಥಿಗಳಾಗಿ ವಿಜಯಪುರ ಹಿರಿಯ ಚಿಂತಕರು ಡಾ. ಆರ್. ಕೆ. ಕುಲಕರ್ಣಿ, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕರಾದ ಎನ್.ಎಂ.ಬಿರಾದಾರ, ಚಲನಚಿತ್ರ ನಿರ್ದೇಶಕರಾದ ಸುನೀಲಕುಮಾರ ಸುಧಾಕರ ಅವರು ಭಾಗವಹಿಸಲಿದ್ದಾರೆ ಎಂದು ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ನೆಲೆ ಪ್ರಕಾಶನ ಸಂಸ್ಥೆಯ ಸಂಚಾಲಕರಾದ ಡಾ. ಚನ್ನಪ್ಪ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, October 29, 2022

ಅ.31ರಂದು ಮತ ಎಣಿಕೆಗೆ ಸಕಲ ಸಿದ್ಧತೆ : 7 ಕೊಠಡಿ-35 ಟೇಬಲ್‍ಗಳ ವ್ಯವಸ್ಥೆ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ


ಈ ದಿವಸ ವಾರ್ತೆ

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಅಕ್ಟೋಬರ್ 31ರಂದು ನಗರದ ವಿ.ಬಿ.ದರಬಾರ  ಹೈಸ್ಕೂಲ್‍ನಲ್ಲಿ ನಡೆಯಲಿದ್ದು,  ಮತ ಎಣಿಕೆಗಾಗಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಅಕ್ಟೋಬರ್ 31ರಂದು ಬೆಳಿಗ್ಗೆ 7-30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯನ್ನು ಆಯಾ ಚುನಾವಣಾಧಿಕಾರಿಗಳು ಹಾಗೂ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುವುದು. ಬೆಳಿಗ್ಗೆ 8 ಗಂಟೆಯವರೆಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ತದನಂತರ ವಿದ್ಯುನ್ಮಾನ ಮತಯಂತ್ರದಲ್ಲಿ ದಾಖಲಾಗಿರುವ ಮತಗಳ ಎಣಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತ ಎಣಿಕೆ ಕಾರ್ಯವು ಒಟ್ಟು 7 ಕೊಠಡಿಗಳಲ್ಲಿ ನಡೆಯಲಿದ್ದು, ಪ್ರತಿ ಕೊಠಡಿಯಲ್ಲಿ ಒಟ್ಟು 5 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ, 35 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ವಾರ್ಡಗೆ ಒಂದು ಟೇಬಲ್ ವ್ಯವಸ್ಥೆ ಮಾಡಿದ್ದು, ಎಲ್ಲ ವಾರ್ಡಗಳ ಮತ ಎಣಿಕೆ ಕಾರ್ಯ ಏಕಕಾಲದಲ್ಲಿ ಆರಂಭಿಸಲಾಗುವುದು.

ಮತ ಎಣಿಕೆ ಸುತ್ತು: ವಾರ್ಡ ಸಂಖ್ಯೆ 15ರ  ಒಂದು ವಾರ್ಡಗೆ 03 ಸುತ್ತುಗಳು, ವಾರ್ಡ ಸಂ.26ರ ಒಂದು ವಾರ್ಡಗೆ 05 ಸುತ್ತುಗಳು,  ವಾರ್ಡ ಸಂ.4,5,6,9 ಹಾಗೂ 17ರ ಐದು ವಾರ್ಡಗಳಿಗೆ  06 ಸುತ್ತುಗಳು,  ವಾರ್ಡ ಸಂ.10, 25, 27, 33, 34 ಹಾಗೂ 35ರ ಆರು ವಾರ್ಡಗಳಿಗೆ 07 ಸುತ್ತುಗಳು, ವಾರ್ಡ ಸಂ.01, 12, 24, 32ರ ನಾಲ್ಕು ವಾರ್ಡಗಳಿಗೆ  08 ಸುತ್ತುಗಳು, ವಾರ್ಡ ಸಂ.19, 28, 30 ಹಾಗೂ 31 ರ ನಾಲ್ಕು ವಾರ್ಡಗಳಿಗೆ  09 ಸುತ್ತುಗಳು, ವಾರ್ಡ ಸಂ.02, 03, 13, 16, 23 ಹಾಗೂ 29ರ ಆರು ವಾರ್ಡಗಳಿಗೆ 10 ಸುತ್ತುಗಳು, ವಾರ್ಡ ಸಂ.14 ಹಾಗೂ 20ರ ಎರಡು ವಾರ್ಡಗಳಿಗೆ 11 ಸುತ್ತುಗಳು, ವಾರ್ಡ ಸಂ. 7,8,11,18 ಹಾಗೂ 22ರ ಐದು ವಾರ್ಡಗಳಿಗೆ 12 ಸುತ್ತುಗಳು  ಹಾಗೂ ವಾರ್ಡ ಸಂಖ್ಯೆ. 21ರ ಒಂದು ವಾರ್ಡಿಗೆ 13 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಮತ ಎಣಿಕೆಗೆ 179

 ಅಧಿಕಾರಿ-ಸಿಬ್ಬಂದಿ: ಮಹಾನಗರ ಪಾಲಿಕೆಯ 35 ವಾರ್ಡಗಳ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ 35 ಮತ ಎಣಿಕೆ ಮೇಲ್ವಿಚಾರಕರು, 35 ಮತ ಎಣಿಕೆ ಸಹಾಯಕರು, 07 ಮತ ಎಣಿಕೆ ಡಾಟಾ ಎಂಟ್ರಿ ಮೇಲ್ವಿಚಾರಕರು, 07 ಕಂಪ್ಯೂಟರ್ ಆಪರೇಟರ್, 35 ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸುವ ಸಿಬ್ಬಂದಿಗಳು ಹಾಗೂ ಇತರೆ ಕಾರ್ಯಗಳಿಗಾಗಿ 60 ಜನರು ಸೇರಿದಂತೆ 179 ಜನರನ್ನು ನಿಯೋಜಿಸಲಾಗಿದೆ.

ಪೊಲೀಸ್ ಬಂದೋಬಸ್ತ್:  ಮತ ಎಣಿಕೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 3 ಡಿವೈಎಸ್‍ಪಿ, 8 ಸಿಪಿಐ, 32 ಪಿಎಸ್‍ಐ, 35 ಎಎಸ್‍ಐ, 76 ಹೆಡ್ ಕಾನ್ಸಟೇಬಲ್, 128 ಪೊಲೀಸ್ ಕಾನ್ಸಟೇಬಲ್, 17 ಮಹಿಳಾ ಪೊಲೀಸ್ ಕಾನ್ಸಟೇಬಲ್, 04 ಐ.ಆರ್.ಬಿ. ಹಾಗೂ 06 ಡಿಎಆರ್ ತುಕಡಿಗಳನ್ನು ಪೊಲೀಸ್ ಇಲಾಖೆಯಿಂದ ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರ ಪ್ರವೇಶ :  ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿಗಳು, ರಾಜ್ಯ ಚುನಾವಣಾ ಆಯೋಗದಿಂದ ಅನುಮತಿ ಹೊಂದಿದ ವ್ಯಕ್ತಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಕೃತ ಪಾಸ್ ಪಡೆದ ಮಾಧ್ಯಮದವರು, ಸ್ಪರ್ಧಿಸಿದ ಅಭ್ಯರ್ಥಿ, ಅವರ ಚುನಾವಣಾ ಏಜೆಂಟರು ಮತ್ತು ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ದಿನದಂದು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿಗಳು, ಅಭ್ಯರ್ಥಿ ಹಾಗೂ ಮತ ಎಣಿಕೆ ಏಜೆಂಟರುಗಳ ವಾಹನ ನಿಲುಗಡೆಗೆ ದರಬಾರ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Friday, October 28, 2022

ಗೋಳಗುಮ್ಮಟದ ಆವರಣದಲ್ಲಿ ಕನ್ನಡಾಭಿಮಾನದ ಪ್ರತಿಧ್ವನಿ

ಈ‌ ದಿವಸ ವಾರ್ತೆ

ವಿಜಯಪುರ  : ಕನ್ನಡ ನಾಡು, ನುಡಿ ಶ್ರೀಮಂತಿಕೆ ಸಾರುವ ಗೀತೆಗಳು ಗೋಳಗುಮ್ಮಟದ ಆವರಣಲ್ಲಿ ಮೊಳಗಿ ಕನ್ನಡಾಭಿಮಾನ ಅನಾವರಣಗೊಳಿಸಿದವು.

ಜಿಲ್ಲಾಡಳಿತ, ಜಿಲ್ಲಾ  ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ  'ಕೋಟಿ ಕಂಠ ಗಾಯನ'  'ನನ್ನ ನಾಡು- ನನ್ನ ಹಾಡು' ಯಶಸ್ವಿಯಾಗಿ ನಡೆಯಿತು. 

ಜಿಲ್ಲಾಧಿಕಾರಿ ಸೇರಿದಂತೆ, ವೇದಿಕೆಯ ಅತಿಥಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ನಗರದ ಸಾರ್ವಜನಿಕರು ಕರುನಾಡಿನ ಶ್ರೀಮಂತಿಕೆ ಸಾರುವ ಗೀತೆಗಳನ್ನು ಹಾಡುವ ಮೂಲಕ ಅಭಿಮಾನ ಪ್ರದರ್ಶಿಸಿದರು.

 ನಾಡಗೀತೆ ಜಯಭಾರತ ಜನನೀಯ ತನುಜಾತೆ, ಡಿ.ಎಸ್. ಕರ್ಕಿ ವಿರಚಿತ ಹಚ್ಚೇವು ಕನ್ನಡದ ದೀಪ, ಹುಯಿಲಗೋಳ  ನಾರಾಯಣರಾವ್ ವಿರಚಿತ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಕುವೆಂಪು ವಿರಚಿತ `ಬಾರಿಸು ಕನ್ನಡ ಡಿಂಡಿಮವ....', ಚೆನ್ನವೀರ ಕಣವಿ ವಿರಚಿತ 'ವಿಶ್ವ ವಿನೂತನ ವಿದ್ಯಾ ಚೇತನ' ಹಂಸಲೇಖ ವಿರಚಿತ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳು ನಗರದ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ಮೊಳಗಿದವು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ನಾಡಗೀತೆಯನ್ನು ಹುಯಿಲಗೋಳ ನಾರಾಯಣರಾವ್ ಅವರು ಕರ್ನಾಟಕದ ಏಕೀಕರಣ ಚಳುವಳಿ ಸಂದರ್ಭದಲ್ಲಿ ಈ ಗೀತೆ ಕನ್ನಡ,ನಾಡು-ನುಡಿ ಸಂಸ್ಕೃತಿ, ಭಾಷೆಯ ಐಕ್ಯತೆ ಆಶಯಕ್ಕೆ ಹೊಸ ಹುಮ್ಮಸ್ಸು ಮೂಡಿಸಿತ್ತು.  

 ನವಂಬರ್ ತಿಂಗಳಲ್ಲಿ ಎಲ್ಲಾ ಜನರ ಮನೆ- ಮನಗಳಲ್ಲಿ ಕನ್ನಡಾಂಬೆಯ ಹಬ್ಬದ ವಾತಾವರಣದ ಕಳೆಗಟ್ಟುತ್ತದೆ ಎಂದರು.

 ಕನ್ನಡವು ಸಂಪದ್ಭರಿತ ಭಾಷೆಯಾಗಿದೆ ಅಂತೆಯೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಅಷ್ಟೆ ಅಲ್ಲದೆ, ಈ ಸಮೃದ್ಧ ಹಾಗೂ ಪುರಾತನ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೂ ಸಂದಿದೆ ಎಂದರು.



ಸಾಹಿತ್ಯ ಸಮೃದ್ಧಿಯ ಚೆಲುವ ಕನ್ನಡ ಭಾಷೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಇದರ ಪ್ರಾಚೀನತೆಯನ್ನು ರಾಮಾಯಣ ಮತ್ತು ಮಹಾಭಾರತದಲ್ಲಿ ನಾವು ಗುರುತಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ದಾಸ ಪರಂಪರೆ, ಭಕ್ತಿ ಪರಂಪರೆ ಮತ್ತು ವಚನ ಸಾಹಿತ್ಯವು ಕನ್ನಡವನ್ನು ಶ್ರೀಮಂತಗೊಳಿಸಿದೆ. ದಾಸವರೇಣ್ಯರು, 12ನೇ ಶತಮಾನದ ಶರಣರು ಸಾಹಿತ್ಯ ಕ್ರಾಂತಿಯನ್ನು ಮಾಡುವ ಮೂಲಕ ನಾಡು ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು. 

ಇಂತಹ ಶ್ರೀಮಂತ ಸಂಸ್ಕೃತಿಯುಳ್ಳ ಭಾಷೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು. ನಾಡಿನ ಸಾಹಿತಿಗಳು, ಕವಿಗಳು ತಮ್ಮ ಬರಹ, ಸಾಹಿತ್ಯದ ಮೂಲಕ ಕವನಗಳ ಮೂಲಕ ನಾಡಿನ  ವರ್ಣನೆಯನ್ನ ಬಹು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಂಸ್ಕೃತಿ ಪರಂಪರೆಯು ಸಾಹಿತ್ಯದ ಮೂಲಕ ಹೆಚ್ಚಳವಾಗಿದೆ ಎಂದರು.

ಕನ್ನಡ ನಾಡು ಪವಿತ್ರ ಭಾವವಿದ್ದಂತೆ,

ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ನಮ್ಮ ಮೊದಲಾದ್ಯತೆ ಕನ್ನಡವೇ ಆಗಿದೆ. ವಿಶೇಷವಾಗಿ ಶಿಕ್ಷಣ ನೀತಿಯು ಮಾತೃಭಾಷೆಗೆ ಒತ್ತು ಕೊಡುತ್ತಿದೆ. ಕನ್ನಡ ಭಾಷೆ ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡಕ್ಕಾಗಿ ನಾವು ಎಂಬ ಅಭಿಯಾನದ ಮೂಲಕ ಕನ್ನಡ ನಾಡಿನ ಸಂಸ್ಕೃತಿ ಭಾಷೆ ಸಿರಿಯನ್ನು ಹೆಚ್ಚಿಸಿ ಅದು ಪಸರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಈ ದಿಸೆಯಲ್ಲಿ ಹಮ್ಮಿಕೊಂಡು ಆಚರಿಸಲಾಗುತ್ತಿದೆ ಎಂದರು.

ನಾಡು ನುಡಿ, ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಮೂಡಿಸುವ ಗೀತೆಗಳನ್ನು ನಮ್ಮ ನಾಡಿನ ಕವಿಗಳ ರಚಿಸಿದ್ದಾರೆ. ಇವುಗಳನ್ನು ಕೇಳುವ ಹಾಗೂ ಹಾಡುವ ಮೂಲಕ ನಮ್ಮ ಅಭಿಮಾನ ಹೆಚ್ಚಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ.ಆನಂದ ಕುಮಾರ್, ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜೆ. ಲಕ್ಕಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಜಿಲ್ಲೆಯ ಅಧಿಕಾರಿಗಳು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Thursday, October 27, 2022

ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಸರಳತೆ ಮೆರೆದ ದಕ್ಷ ಅಧಿಕಾರಿ, ಡಿಸಿ ದಾನಮ್ಮನವರ



ಈ ದಿವಸ ವಾರ್ತೆ

ವಿಜಯಪುರ : ಜಿಲ್ಲೆಯ ಚುನಾವಣೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ವಿಜಯ ಮಾಹಾಂತೇಶ ದಾನಮ್ಮನವರ ಮತ್ತು ಅವರ ಪತ್ನಿ ಶ್ರೀಮತಿ ಶ್ವೇತಾ ದಾನಮ್ಮನವರ  ಕುಟುಂಬ ಸಮೇತರಾಗಿ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದರಬಾರ ಶಾಲೆಯಲ್ಲಿ ಸ್ಥಾಪಿಲಾಗಿರುವ 219 ರ ಮತಗಟ್ಟೆಗೆ ತೆರಳಿ ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಮತದಾನ ಮಹತ್ವ ಸಾರಿದರು.



ಮತದಾನ ಒಂದು ಪವಿತ್ರವಾದ ಕರ್ತವ್ಯ, ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ ಕೂಡಾ. ನಮ್ಮ ಮತ ಪ್ರಗತಿಗೆ ಬರೆಯುವ ಮುನ್ನುಡಿ. ಮತದಾನ ನಮ್ಮೆಲ್ಲರ  ಜವಾಬ್ದಾರಿಯೂ ಸಹ ಆಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2022 : ಶಾಲಾ,‌ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ

 



ಈ ದಿವಸ ವಾರ್ತೆ

ವಿಜಯಪುರ:  ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡ್ ಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಿಸಿದ್ದು, ಅಕ್ಟೋಬರ್ 28 ರಂದು‌ ಮತದಾನ ಜರುಗಲಿದ್ದು, ಪಾಲಿಕೆ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಸರ್ಕಾರಿ ಸಂಸ್ಥೆಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆಗಳನ್ನು ಹೊಂದಿರುವ ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಸರ್ಕಾರಿ ಸಂಸ್ಥೆಗಳಿಗೆ ಅ.27ರ ಅಪರಾಹ್ನ ಮತ್ತು ಮತದಾನ ದಿನ ಅ.28ರಂದು ರಜೆಯನ್ನು ಘೋಷಿಸಿ,ಜಿಲ್ಲಾ‌ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.

ಈ ರಜೆ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Thursday, October 20, 2022

21-10-2022 EE DIVASA KANNADA DAILY NEWS PAPER

ಮತದಾನದ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗಲು ಜಾಗೃತಿ ಮೂಡಿಸಿ: ಪಿ.ಎಸ್.ವಸ್ತ್ರದ


ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಮಾತನಾಡಿರು 

ವಿಜಯಪುರ : ೧೮ ರಿಂದ ೨೦ ವಯೋಮಾನದ ನವ ಮತದಾರರು, ಮುಖ್ಯವಾಹಿನಿಯಿಂದ ದೂರವಿರುವ ಅಲೆಮಾರಿ ಜನಾಂಗದವರು, ವಿಕಲಚೇತನರು ಮತ್ತು ಹಿರಿಯ ನಾಗರೀಕರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸಲು  ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯಪುರ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ ೧೮ರಂದು ಸ್ವೀಪ್ ಹಾಗೂ ಇಎಲ್‌ಸಿ ಕಾರ್ಯಚಟುವಟಿಕೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮತದಾನ ಕೇಂದ್ರಕ್ಕೆ ಅಗತ್ಯವಾಗಿ ಕೊಂಡೋಯ್ಯಬೇಕಾದ ಇವಿಎಂಗಳ ಬಳಕೆ ಮತ್ತು ಚುನಾವಣೆ ಪ್ರಕ್ರಿಯೆಯ  ಪಾವಿತ್ರ‍್ಯತೆಯ ಪಾಲನೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಹ ನಿರಂತರವಾಗಿ ಸಂಘಟಿಸುವಂತೆ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಸಂಬಂಧಿಸಿದ ಘಟಕಗಳು, ಸಂಚಾಲನಾ ಸಮಿತಿ ಮತ್ತು ಕಾರ್ಯಪಡೆಗಳು ಅತ್ಯಗತ್ಯವಾಗಿ ಗಮನಿಸಬೇಕಾದ ಸಂಗತಿಗಳಾದ ಪಟ್ಟಿಯಲ್ಲಿನ ಹೆಸರು, ಸರಿಯಾದ ನಮೂದು, ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಮತದಾನದ ದಿನಾಂಕ, ಸಮಯ ಮೊದಲಾದ ವಿವರಗಳ ಬಗ್ಗೆ ಗಮನ ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಮತದಾರರು ಕಡ್ಡಾಯವಾಗಿ ತಮ್ಮ ಎಪಿಕ್ ಚೀಟಿಗೆ ಆಧಾರ್ ಜೋಡಣೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಆಧಾರ್ ಇಲ್ಲದಿದ್ದಲ್ಲಿ ಚುನಾವಣಾ ಆಯೋಗವು ಗುರುತಿಸಿದ ಯಾವುದಾದರೂ ಪೂರಕ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಿಕೊಳ್ಳುವಂತೆ ಮತದಾರರಲ್ಲಿ ಸೂಕ್ತ ಜಾಗೃತಿ ಮೂಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
೨೦೨೩ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಜಾಗೃತಿ, ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲ ಇಲಾಖೆ ಅಧಿಕಾರಿಗಳು, ವಿಶ್ವವಿದ್ಯಾಲಯದ ಉನ್ನತ ಅಧಿಕಾರಿ, ಸರ್ಕಾರೇತರ ಸಂಘ-ಸಂಸ್ಥೆಗಳ ಒಕ್ಕೂಟ ಪದಾಧಿಕಾರಿಗಳು, ಎನ್‌ಸಿಸಿ ಅಧಿಕಾರಿಗಳು, ಜಿಲ್ಲಾ ಅಗ್ರಣೀಯ ಬ್ಯಾಂಕ್ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವೀಪ್ ಚಟುವಟಿಕೆಗಳ ಭಾಗವಾಗಿ ೨೦೨೩ರ ಮಾರ್ಚ್ವರೆಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ವಾರ್ಷಿಕ ಕ್ರೀಯಾ ಯೋಜನೆ ಸಿದ್ಧಪಡಿಸಿ ಹಂಚಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಅನುದಾನ, ಅನುದಾನ ರಹಿತ ಎಲ್ಲ ಸಂಘ-ಸಂಸ್ಥೆಗಳು ಸಹ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಮತದಾರರಲ್ಲಿ ಜಾಗೃತಿ-ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಬೇಕು ಎಂದರು.  
ಮತದಾರ ಸಹಾಯವಾಣಿ ಸಂಖ್ಯೆ ೧೯೫೦ ಸಂಪರ್ಕಿಸಿ, ಮತದಾರರು ತಮ್ಮ ವಿವರವನ್ನು ಖಚಿತಪಡಿಸಿಕೊಳ್ಳಬೇಕು. ಈ ಸಹಾಯವಾಣಿಯನ್ನು ಸಂಪರ್ಕಿಸಿ ಮತದಾನದ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದ್ದು, ಮತದಾರರು ತಮ್ಮ ಮತಗಟ್ಟೆ, ಸೇರಿದಂತೆ ಮತದಾರರ ಸಮಸ್ಯೆಗಳ ಕುರಿತು ಈ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದಾಗಿದೆ ಎಂಬುದರ ಕುರಿತಾಗಿಯೂ ಜಾಗೃತಿ ಮೂಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ಮಾತನಾಡಿ, ಐಎಲ್‌ಓಗಳು ಸಹ ಮನೆ-ಮನೆಗೆ
ಭೇಟಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು, ಮತದಾನದ ಹಕ್ಕು ಚಲಾಯಿಸಲು ಬೇಕಾಗುವ ದಾಖಲೆಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮಕ್ಕಳಕಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

20-10-2022 EE DIVASA KANNADA DAILY NEWS PAPER

Friday, October 7, 2022

ಮಹಿಳಾ ವಿವಿ: ಎಂಫಿಲ್/ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ


ಈ ದಿವಸ ವಾರ್ತೆ

ವಿಜಯಪುರ: ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ 2022-13 ನೇ ಶೈಕ್ಷಣಿಕ ಸಾಲಿನ ಎಂಫಿಲ್ /ಪಿಎಚ್‌ಡಿ ಕೋರ್ಸುಗಳ ಪ್ರವೇಶಕ್ಕೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಕನ್ನಡ, ಇಂಗ್ಲೀಷ್, ಹಿಂದಿ, ಅರ್ಥಶಾಸ್ತç, ಸಮಾಜಶಾಸ್ತ್ರ, ಮಹಿಳಾ ಅಧ್ಯಯನ, ಸಮಾಜಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಬಯೋ ಇನ್ಪಾರ್ಮೆಟಿಕ್ಸ್, ಔಷಧೀಯ ರಸಾಯನಶಾಸ್ತç, ಆಹಾರ ಸಂಸ್ಕರಣೆ ಮತ್ತು ಪೋಷಣೆ, ವಿದ್ಯುನ್ಮಾನ, ಭೌತಶಾಸ್ತç, ಗಣಕಯಂತ್ರ ವಿಜ್ಞಾನ, ಶಿಕ್ಷಣ, ವ್ಯವಹಾರ ಅಧ್ಯಯನ, ವಾಣಿಜ್ಯ ಅಧ್ಯಯನ ಮತ್ತು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಷಯಗಳಲ್ಲಿ ಎಂಫಿಲ್ ಮತ್ತು ಪಿಎಚ್‌ಡಿ ಅಧ್ಯಯನಕ್ಕೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ವಿವರಗಳನ್ನು ಮಹಿಳಾ ವಿಶ್ವವಿದ್ಯಾನಿಲಯದ ವೆಬ್‌ಸೈಟ್:  www.kswu.ac.in ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ವಿವಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

08-10-2022 EE DIVASA KANNADA DAILY NEWS PAPER

Thursday, October 6, 2022

ಶಾಸಕ ಶಿವಾನಂದ ಪಾಟೀಲ ಪರಿವಾರದಿಂದ ಬನ್ನಿವಿನಿಮಯ

 


ಈ ದಿವಸ ವಾರ್ತೆ

ವಿಜಯಪುರ: ನಗರದ ರಿಂಗ ರಸ್ತೆ ಹತ್ತಿರ ಬಸವನ ಬಾಗೇವಾಡಿ ಶಾಸಕರ ಮನೆಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ. ಸಾರ್ವಜನಿಕರ ಸಾಲು ಸಾಲು ತಂಡೋಪ, ತಂಡವಾಗಿ ಅದ್ದೂರಿ ದಸರಾ ಹಾಗೂ ವಿಜಯ ದಶಮಿ ಹಬ್ಬದ ನಿಮಿತ್ಯವಾಗಿ, ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಬನ್ನಿವಿನಿಯಮ ಮಾಡಿಕೊಂಡು ಅರ್ಥಪೂರ್ಣ ದಸರಾ ಆಚರಿಸಿದರು.



ಇದೇ ಸಂದರ್ಭದಲ್ಲಿ ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ, ಶಾಸಕರ ಸಹೋದರರಾದ ಶಿವಶರಣ .ಎಸ್. ಪಾಟೀಲ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕಿಯಾದ ಸಂಯುಕ್ತ ಪಾಟೀಲ ಮತ್ತು ಅವರ ಪತಿ ಹಾಗೂ ಸಕಲ ಪಾಟೀಲ ಕುಟುಂಬದ ವತಿಯಿಂದ ಸರ್ವರಿಗೂ ಹಬ್ಬದ ಶುಭಕೋರಿ ಬನ್ನಿ ನೀಡಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

Friday, September 30, 2022

01-10-2022 EE DIVASA KANNADA DAILY NEWS PAPER

ಅನಾವರಣಗೊಂಡ ಪತ್ರಕರ್ತರ ಸಮ್ಮೇಳನ ಲಾಂಛನ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಿಎಂ ಲೋಕಾರ್ಪಣೆ


ವಿಜಯಪುರದಲ್ಲಿ ನಡೆಯಲಿರುವ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿಸಿದರು.

ಈ ದಿವಸ ವಾರ್ತೆ:

ವಿಜಯಪುರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದಲ್ಲಿ ನಡೆಯಲಿರುವ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು.

ನಗರದಲ್ಲಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಲೋಕಾರ್ಪಣೆ ಹಾಗೂ ವಿವಿಧ ಅಭಿವದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿಸಮ್ಮೇಳನಕ್ಕೆ ಶುಭಾಶಯ ಕೋರಿದರುಅಲ್ಲದೇ ಸಂಘದ ಸದಸ್ಯರು ಸಲ್ಲಿಸಿದ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳಜಿಲ್ಲಾಧಿಕಾರಿ ಡಾವಿಜಯಮಹಾಂತೇಶ ದಾನಮ್ಮನವರಎಸ್ಪಿ ಎಚ್.ಡಿಆನಂದಕುಮಾರಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿಲೋಕೇಶಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿಭವಾನಿಸಿಂಗ್ ಠಾಕೂರಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿಉಪಾಧ್ಯಕ್ಷ ಇಂದುಶೇಖರ ಮಣೂರಕಾರ್ಯದರ್ಶಿ ಅವಿನಾಶ ಬಿದರಿ ಮತ್ತಿತರರಿದ್ದರು.

Tuesday, September 20, 2022

ಟೆನಿಸ್‌ಬಾಲ್ ಕ್ರೀಕೇಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ



ಈ ದಿವಸ ವಾರ್ತೆ

 ವಿಜಯಪುರ : ವಿಜಯಪುರ ಜಿಲ್ಲಾ ಟೆನಿಸ್‌ಬಾಲ್ ಕ್ರೀಕೇಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಯಿತು. ರಾಜ್ಯಧ್ಯಕ್ಷರಾದ ಶ್ರೀಮತಿ ಶಾಯಿದಾ ಬೇಗಂ, ಕಾರ್ಯದರ್ಶಿಗಳಾ ಅಭೀದ ಹಕ್ಕೀಂ ಅವರು ಅಧಿಕಾರ ಹಸ್ತಾಂತರಿಸಿದರು. 



ಗೌರವ ಅಧ್ಯಕ್ಷರಾಗಿ ಡಾ. ಪ್ರಭುಗೌಡ ಪಾಟೀಲ, ಅಧ್ಯಕ್ಷರನ್ನಾಗಿ ಡಾ. ಬಾಬುರಾಜೇಂದ್ರ ನಾಯಕ, ಕಾರ್ಯಾಧ್ಯಕ್ಷರನ್ನಾಗಿ ಡಾ. ಅಶೋಕಕುಮಾರ ಜಾಧವ, ಎನ್.ಎಮ್. ಹೊಟಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಫಯಾಜ ಕಲಾದಗಿ, ಉಪಾಧ್ಯಕ್ಷರನ್ನಾಗಿ ಶ್ರವಣಕುಮಾರ ಮಹೇಂದ್ರಕರ,  ವಿದ್ಯಾರಾಣಿ ತುಂಗಳ, ಶ್ರೀಧರ ನಾಡಗೌಡ, ಎಂ.ಬಿ.ರಜಪೂತ, ಶಶಿಕಲಾ ಇಜೇರಿ, ವಿಜಯರಾಣಿ ನಿವರಗಿ, ಸಂಘಟನಾ ಕಾರ್ಯದರ್ಶಿಯಾಗಿ ಜಾಫರ ಅಂಗಡಿ, ಶ್ರೀಮತಿ ಪುಷ್ಪಾ ಮಹಾಂತಮಠ, ಶ್ರೀಕಾಂತ ಕಾಖಂಡಕಿ, ಜಂಟಿ ಕಾರ್ಯದರ್ಶೀಗಳಾಗಿ ಗಣೇಶ ಭೂಸಲೆ, ಅಬ್ಬಾಸಲಿ ತಡಲಗಿ, ಸೋಮಶೇಖರ ರಾಠೋಡ, ಪ್ರಕಾಶ ಬಳ್ಳಾರಿ, ಖಜಾಂಚಿ ಡಾ. ಸಂತೋಷ ದಂಡ್ಯಾಗೋಳ, ಜಂಟಿ ಖಜಾಂಚಿಗಳಾಗಿ ಮೋಹನ ಚವ್ಹಾಣ, ಅಪ್ಪು ರಾಠೋಡ, ಸಂಪರ್ಕ ಅಧಿಕಾರಿಗಳಾಗಿ ಚಾಂದ ವಸೀಮ  ಮುಕಾದಮ್, ತಾಂತ್ರಿಕ ಮೇಲ್ವಿಚಾರನ್ನಾಗಿ ಗಣೇಶ ಕಬಾಡೆ, ಸಲೀಂ ಬೇಪಾರಿ, ಆರೀಪ ಎಮ್. ಇನಾದಾರ, ಎಮ್.ಡಿ ಅತ್ತಾರ, ನಿರ್ದೇಶಕರುಗಳಾಗಿ ಅಶೋಕ ನಾಯಕ, ರಾಕೇಶ ರಜಪೂತ, ರವಿ ರಾಠೋಡ, ಸಂಜು ಶೀಳೀನ, ರಮೇಶ ಮಸಬಿನಾಳ, ರಾಜು ಕುಚಬಾಳ, ಜಿಲಾನಿ ನಾಟೀಕಾರ,  ಬಸವರಾಜ ಬಿ.ಕೆ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಫಯಾಜ ಕಲಾದಗಿ  ತಿಳಿಸಿದ್ದಾರೆ.

21-09-2022 EE DIVASA KANNADA DAILY NEWS PAPER

Sunday, September 18, 2022

ವಿಜಯಪುರ ಆಕಾಶವಾಣಿಯಿಂದ ನಾಡಿನಲ್ಲಿ ಜ್ಞಾನ ದಾಸೋಹ: ಡಾ.ವಿಜಯಮಹಾಂತೇಶ ದಾನಮ್ಮನವರ

 


ಈ ದಿವಸ ವಾರ್ತೆ

ವಿಜಯಪುರ : ವಿಜಯಪುರ ಆಕಾಶವಾಣಿ ಕೇಂದ್ರದ ರಜತ್ ಮಹೋತ್ಸವ ಸಂಭ್ರಮ ರಜತ ರವಿ ಕಾರ್ಯಕ್ರಮವು ಸೆಪ್ಟೆಂಬರ್ 18ರಂದು ಎಂಪಿ ಸ್ಟುಡಿಯೋದಲ್ಲಿ ಸಂಭ್ರಮದಿAದ ನಡೆಯಿತು.

ಪ್ರಸಾರ ಭಾರತಿ, ಭಾರತದ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, 1997ರ ಸೆಪ್ಟೆಂಬರ್ 18 ರಂದು ವಿಜಯಪುರ ಆಕಾಶವಾಣಿಯು ಜನ್ಮ ತಳೆಯಿತು. ಆ ದಿನ ವಿಜಯಪುರದ ಇತಿಹಾಸದಲ್ಲಿ ಒಂದು ಹೊಸ ಶಕೆ ಆರಂಭವಾಯಿತು. ಈ ಮೂಲಕ ಅವಿಭಜಿತ ವಿಜಯಪುರ ಜಿಲ್ಲೆಯ ಜನತೆಯ ಬಹುವರ್ಷಗಳ ನಿರೀಕ್ಷೆ, ಹಂಬಲ, ಹೋರಾಟ, ಕನಸುಗಳು ಆ ವೇಳೆಯಲ್ಲಿ ಸಾಕಾರಗೊಂಡಿತು ಎಂದು ತಿಳಿಸಿದರು.

ವಿಜಯಪುರ ಆಕಾಶವಾಣಿಯು 1997ರಿಂದಲೂ ತನ್ನ ಮೂಲ ಧೇಯೋದ್ದೇಶಗಳಾದ ಶಿಕ್ಷಣ, ಮಾಹಿತಿ ಮತ್ತು ಮನರಂಜನೆಗಳಿಗೆ ಅನುಗುಣವಾದ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸಿ, ಜ್ಞಾನ ದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.

ನಮ್ಮ ಸಂಸ್ಕೃತಿ, ಇತಿಹಾಸಗಳ ಎಲ್ಲಾ ಬೇರುಗಳು ಆಕಾಶವಾಣಿಯ ಧ್ವನಿ ಮುದ್ರಿಕೆಗಳಲ್ಲಿ ಭದ್ರವಾಗಿವೆ. ಇದೆ ಆಕಾಶವಾಣಿಯ ವಿಶೇಷತೆಯಾಗಿದೆ. ಈ ನೆಲದ ಜನಪದ ಸಿರಿಯದ ಗೀಗಿ, ಲಾವಣಿ, ಗೋಂಧಳಿ, ಲಂಬಾಣಿ, ಚೌಡಕಿ, ಪಾರಿಜಾತ, ಭಜನೆ, ಹಂತಿ ಪದಗಳು ಈಗಲೂ ಡಿಜಿಟಲ್ ಮಾಧ್ಯಮದಲ್ಲಿ ಸುರಕ್ಷಿತವಾಗಿರುವುದು ಆಕಾಶವಾಣಿ ಕೇಂದ್ರದ ಬಹುದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ಈಗ ಪ್ರತಿ ದಿನ ಅಂದಾಜು 15 ಲಕ್ಷ ಜನರಿಗೆ ಪ್ರಸಾರ ಸೇವೆ ಒದಗಿಸುತ್ತ ಕೇಂದ್ರವು ನಾಡಿನ ಸೇವೆಯಲ್ಲಿ ತೊಡಗಿದೆ ಎಂಬುದು ಜಿಲ್ಲೆಯ ಜನತೆಗೆ ಅಭಿಮಾನದ ಸಂಗತಿಯಾಗಿದೆ. ಕಳೆದ 25 ವರ್ಷಗಳಿಂದಲೂ ಕೇಂದ್ರದಿAದ ಅನೇಕ ಸೃಜನಶೀಲ ಹಾಗೂ ಕ್ರಿಯಾಶೀಲ ಕಾರ್ಯಕ್ರಮಗಳು ಸುಗಮವಾಗಿ ನಡೆದಿರುವುದರ ಹಿಂದೆ ಈ ಕೇಂದ್ರದ ತಾಂತ್ರಿಕ ಹಾಗೂ ಆಡಳಿತ ಅಧಿಕಾರಿಗಳು, ಸಿಬ್ಬಂದಿ ವರ್ಗದ ಶ್ರಮವಿದೆ. ಕೇಂದ್ರದಲ್ಲಿರುವ ಎಲ್ಲರೂ ಆಕಾಶವಾಣಿಯನ್ನು ಜನಸ್ನೇಹಿ ಹಾಗೂ ಜನಪರವಾಗಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಅವರ ಪ್ರಯತ್ನದಿಂದ ಅನೇಕ ಗೌರವ ಸನ್ಮಾನಗಳು ಕೇಂದ್ರಕ್ಕೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಉತ್ಸಾಹ, ಹುರುಪುಗಳೊಂದಿಗೆ ಈ ನಾಡಿನ ಜನಸೇವೆಯಲ್ಲಿ ತೊಡಗಿಕೊಂಡು ಸಕಾರಾತ್ಮಕ ಬದಲಾವಣೆಯ ಕಾರಣ ಕರ್ತನಾಗಿ ಹೊರಹೊಮ್ಮುವ ವಿಶ್ವಾಸವನ್ನು ವಿಜಯಪುರ ಆಕಾಶವಾಣಿ ಕೇಂದ್ರವು ಹೊಂದಿದೆ. ಕೇಳುಗ ಪ್ರಭುಗಳಾದ ನಾವುಗಳು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುತ್ತ ಸಂಪೂರ್ಣ ಸಹಕಾರ, ಬೆಂಬಲ ನೀಡೋಣ ಎಂದು ತಿಳಿಸಿದರು.



ಈ ವೇಳೆ ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಮಪೀರ ವಾಲೀಕಾರ ಅವರು ಮಾತನಾಡಿ, ವಿಜಯಪುರ ಆಕಾಶವಾಣಿಯು ಜನರ ಆಶೋತ್ತರಗಳಿಗೆ ಸ್ಪಂದಿಸಿ ಅವರಿಗೆ ಅವಶ್ಯಕವಾದ ಕಾರ್ಯಕ್ರಮಗಳನ್ನು ಕಳೆದ 25 ವರ್ಷಗಳಿಂದಲೂ ನೀಡುತ್ತ ಬಂದಿದೆ. ಆಕಾಶವಾಣಿ ಹಬ್ಬ, ರೈತರಿಗೆ ಸಾವಯವ ಕೃಷಿ ತರಬೇತಿ, ಜಿಲ್ಲೆಯ ಯುವ ಪ್ರತಿಭೆಗಳ ಅನಾವರಣ, ಬಿಎಲ್‌ಡಿಇ ಆರೋಗ್ಯದಂಗಳ ಕಾರ್ಯಕ್ರಮ, ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಿರುವುದು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸ್ವಾತಂತ್ರ‍್ಯ ಹೋರಾಟಗಾರರ ಬಗೆಗಿನ ಇತಿಹಾಸದ ಸರಣಿ ಜೊತೆಗೆ ಇನ್ನು ಅನೇಕ ಸರಣಿ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತ ಬಂದಿರುವುದು ಈ ಕೇಂದ್ರದ ವಿಶೇಷತೆಯಾಗಿದೆ ಎಂದು ತಿಳಿಸಿದರು

ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅವರು ಮಾತನಾಡಿ, ವಿಜಯಪುರ ಮತ್ತು ಬಾಗಲಕೋಟ ಅವಳಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕಲಾವಿದರನ್ನು, ಸಾಧಕ ಕೃಷಿಕರನ್ನು ಹುಡುಕಿ, ಗುರುತಿಸಿ ಅವರನ್ನು ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಆಕಾಶವಾಣಿ ಈಗಲೂ ನಿರಂತರ ಮಾಡುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಬಿ.ವಿ.ಶೀಧರ ಅವರು ಪ್ರಾಸ್ತಾವಿಕ ಮಾತನಾಡಿ, ವಿಜಯಪುರ ಆಕಾಶವಾಣಿಯು ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಜನರ ಆಪ್ತ ಮಿತ್ರನಾಯಿತು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕಳೆದ ಕೆಲವು ವರ್ಷಗಳ ಹಿಂದೆ ರೇಡಿಯೋ ಸೆಟ್ ಕೇಳುಗರ ಸಂಖ್ಯೆ ಶೇ.54ರಷ್ಟ್ಟು ಇತ್ತು. ಆದರೆ ಅವುಗಳ ಉತ್ಪಾದನೆ ಕಡಿಮೆ ಆಗಿರುವುದರಿಂದ ಅಲ್ಲದೆ ಮೊಬೈಲ್ ಮೂಲಕ ಕೇಳುವ ಸೌಲಭ್ಯ ದೊರೆತಿರುವುದರಿಂದ ರೇಡಿಯೋ ಸೆಟ್ ಕೇಳುಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮೊಬೈಲ್ ಮೂಲಕ ಕೇಳುವರ ಸಂಖ್ಯೆ ಶೇ.85 ರಷ್ಟಾಗಿದೆ. ಈಗ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ. ಆಕಾಶವಾಣಿಯು ತಂತ್ರಜ್ಞಾನದ ಎಲ್ಲ ಸಾಧ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ನ್ಯೂಸ್ ಆನ್ ಏರ್ ಆ್ಯಪ್ ಮೂಲಕ ಶ್ರೋತೃಗಳು ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳನ್ನು ವಿಶ್ವದ ಯಾವುದೇ ಭಾಗದಲ್ಲಿಯೂ ಕೇಳಬಹುದಾಗಿದೆ ಎಂದು ತಿಳಿಸಿದರು.

ಚಿಂತನ, ಭಕ್ತಿಗೀತೆ, ಚಿತ್ರಗೀತೆ, ವಾಟ್ಸಪ್ ಮೆಚ್ಚಿನ ಹಾಡು, ಜನಪದ ಹಾಡು, ಸುದ್ದಿ, ರೂಪಕ, ನಾಟಕ, ಸಂದರ್ಶನ, ಭಾಷಣ, ನೇರ ಪ್ರಸಾರ, ಫೋನ್–ಇನ್, ಕಿಸಾನ್ ವಾಣಿ, ಆರೋಗ್ಯ, ಯುವಕಾರಂಜಿ, ಯುವವಾಣಿ, ಬಾನುಲಿ ವರದಿ, ಚರ್ಚೆ, ಕವಿತಾ ವಾಚನ, ಸ್ವಾತಂತ್ರ‍್ಯ ಹೋರಾಟ ಹೆಜ್ಜೆಗಳು, ಮುಂತಾದ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಈಗಲೂ ಕೇಂದ್ರದಿಂದ ಪ್ರತಿದಿನ ಪ್ರಸಾರವಾಗುತ್ತಿವೆ ಎಂದು ತಿಳಿಸಿದರು.

ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸೋಮಶೇಖರ ರುಳಿ, ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್.ಎಸ್.ಶೇಖ ಮತ್ತು ಆಕಾಶವಾಣಿಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಾಹಕ ಡಾ.ಸೋಮಶೇಖರ ರುಳಿ ಅವರು ವಂದಿಸಿದರು. ಶಿವಕುಮಾರ ಮತ್ತು ಮಹಾನಂದ ಅವರು ನಿರೂಪಿಸಿದರು.

ಚಿಂತನ ಗೋಷ್ಠಿ: ಕಾರ್ಯಕ್ರಮದಲ್ಲಿ ಚಿಂತನ ಗೋಷ್ಠಿಗಳು ನಡೆದವು. ನಾಟಕಕಾರ, ಜನಪದ ಸಾಹಿತಿ ಬಿ.ಆರ್.ಪೊಲೀಸ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ.ಸೋಮಶೇಖರ ವಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಸಹಾಯವಾಣಿ ಸಂಯೋಜಕಿ ಸುನಂದಾ ತೋಳಬಂದಿ, ಕೃಷಿ ಇಲಾಖೆಯ ಆತ್ಮಾ ಯೋಜನೆಯ ಉಪ ಯೋಜನಾ ನಿರ್ದೇಶಕ ಡಾ.ಎಂ.ಬಿ.ಪಟ್ಟಣಶೆಟ್ಟಿ, ಪರಿಸರವಾದಿ ಅಂಬಾದಾಸ ಜೋಶಿ ಅವರು ಚಿಂತನಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ನಂತರ ಜರುಗಿದ ಕೇಳುಗರಿಂದ ಕೇಳುಗರಿಗೆ ಕಾರ್ಯಕ್ರಮದಲ್ಲಿ ನ್ಯಾಮತ್ ಭಾಷಾ ಹುಣಶ್ಶಾಳ, ಕಲ್ಯಾಣಿ ಪತ್ತಾರ, ಸಾಕ್ಷಿ ಬಿರಾದಾರ, ಅನಂತ ಟೀಕಾರೆ ಗುರುರಾಜ ಪತ್ತಾರ ಭಾಗವಹಿಸಿದ್ದರು.

ಮೋದಿ ಜನ್ಮ ದಿನಾಚರಣೆ ಹಿನ್ನೆಲೆ ದೇಶ ರಕ್ಷಕ ಪಡೆಯಿಂದ ರಕ್ತದಾನ ಶಿಬಿರ

 




ಈ‌ ದಿವಸ ವಾರ್ತೆ

ವಿಜಯಪುರ: ದೇಶ ರಕ್ಷಕರ ಪಡೆ ಆಕಾಶ ರಕ್ತ ಸಹಾಯವಾಣಿ ವತಿಯಿಂದ ವಿಜಯಪುರ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ 73 ನೆ ಜನ್ಮದಿನದ ಪ್ರಯುಕ್ತ ನಗರದ ಡೋಬಳೆ ಗಲ್ಲಿ ಈಶ್ವರ ಮಂದಿರ ದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು .



ಖ್ಯಾತ ಮಧುಮೇಹ ತಜ್ಞರಾದ ಬಾಬು ರಾಜೇಂದ್ರ ನಾಯಿಕ , ಸಮಾಜಸೇವಕರು ಶ್ರೀಶೈಲ ಹುಟಗಿ ಮತ್ತು ಖ್ಯಾತ ಉದ್ಯಮಿ ವಿಜಯ ಚವ್ಹಾಣ ಅವರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಿ, ದೇಶದ ಕಣ್ಮಣಿಗಳಾದ ನಮ್ಮಯುವಕರೇ ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸಲು ಸಾಧ್ಯ. ಆದ್ದರಿಂದ ಜಗಮೆಚ್ಚಿದ ದೇಶ ಕಂಡ ಅದ್ಭುತ ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮದಿನದ ಪ್ರಯುಕ್ತ ಇಂತಹ ಶಿಬಿರ ಆಯೋಜಿಸಿ ನಿಮ್ಮ ಸಾಮಾಜಿಕ ಜವಾಬ್ದಾರಿಯ ದರ್ಶನ ಮಾಡಿದ್ದೀರಿ ದೇಶ ರಕ್ಷಕರ ಪಡೆ ಸಂಘಟನೆ ಇನ್ನು ಬೆಳಿಯಲಿ ಇನ್ನು ಹೆಚ್ಚಿನ ಸಾಮಾಜಿಕ ಕೆಲಸ ಮಾಡಲು ಇನ್ನು ಹೆಚ್ಚಿನ ಶಕ್ತಿ ನಿಮಗೆ ದೊರೆಯಲಿ ಎಂದು ಹಾರೈಸಿದರು . ಈ ಸಂಧರ್ಭದಲ್ಲಿ ಸಂಘಟನೆಯ ದೇಶ ರಕ್ಷರ ಪಡೆ ಸಂಸ್ಥಾಪಕರಾದ ರೋಹನ ಆಪ್ಟೆ ಪದಾಧಿಕಾರಿಗಳಾದ ನ್ಯಾಯವಾದಿ ಅಜಯ ಸೂರ್ಯವಂಶಿ , ವಿಕ್ರಮ ತಾಂಬೇಕರ , ಪ್ರೇಮ ಕಲಕುಟಗಿ , ಕಿರಣ ಕೊಳುರಗಿ,ರಾಹುಲ ಪಾಟೀಲ , ಆದಿತ್ಯ ಬಡಿಗೇರ, ಸಿದ್ದು ಬರಗಿ , ಮಹಿಳಾ ಪಡೆ ಘಟಕದ ವಸುಂಧರಾ ದೇಶಪಾಂಡೆ, ಶ್ವೇತಾ ಕುಲಕರ್ಣಿ ,  ರಿಶಿತಾ ನಿಕ್ಕಮ ಜಯಶ್ರೀ ಕನ್ನೂರ ಸವಿತಾ ತಳವಾರ ಉಪಸ್ಥಿತರಿದ್ದರು.

Saturday, September 17, 2022

ಇಂದು ವಿಜಯಪುರ ಆಕಾಶವಾಣಿ ರಜತ್ ಮಹೋತ್ಸವ ಸಂಭ್ರಮ


ವಿಜಯಪುರ : ಪ್ರಸಾರ ಭಾರತಿ, ಭಾರತದ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ವಿಜಯಪುರ ಆಕಾಶವಾಣಿ ಕೇಂದ್ರದ ರಜತ್ ಮಹೋತ್ಸವ ಸಂಭ್ರಮ ರಜತ ರವಿ ಉದ್ಘಾಟನಾ ಸಮಾರಂಭವು ಎಂ.ಪಿ.ಸ್ಟುಡಿಯೋದಲ್ಲಿ ಸೆಪ್ಟೆಂಬರ್ 18ರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಸೋಮಶೇಖರ ರೂಳಿ


ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ, ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿಜಯಪುರ ಆಕಾಶವಾಣಿ ಎಂಜಿನಿಯರ್ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಶೇಖ್ ಅಧ್ಯಕ್ಷತೆ ವಹಿಸುವರು ಎಂದು ವಿಜಯಪುರ ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ಡಾ.ಸೋಮಶೇಖರ ರುಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿತ್ಯ ಓದಿನತ್ತ ಒಲವು ತೋರಿ: ಸಾತಿಹಾಳ




ವಿಜಯಪುರ: ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಓದಿನತ್ತ ಒಲವು ತೋರಿದರೆ ಗುರಿ ಮುಟ್ಟಲು ಸುಲಭ- ಸಾಧ್ಯವೆಂದು ಮಕ್ಕಳ ಸಾಹಿತಿ ಎಸ್. ಎಸ್. ಸಾತಿಹಾಳ ಅಭಿಪ್ರಾಯ ಪಟ್ಟರು. 

ಮುಳವಾಡದ ಸರಕಾರಿ ಕಿರಿಯ ಮಹಾ ವಿದ್ಯಾಲಯದಲ್ಲಿ ಸಿಂದಗಿಯ ವಿದ್ಯಾಚೇತನ ಪ್ರಕಾಶನ ಹಾಗೂ ಮಂಡ್ಯದ ಅಡ್ವೈಸರ್ ಮಾಸ ಪತ್ರಿಕೆ ಹಮ್ಮಿಕೊಂಡ ಪುಸ್ತಕ ಸಂಸ್ಕೃತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ನಿತ್ಯ ಪಠ್ಯದ ಜೊತೆಗೆ ಪಠ್ಯೇತರ ಗ್ರಂಥಗಳನ್ನು ಓದುವುದರಿಂದ ಜ್ಞಾನ ಸಂಪತ್ತು ವೃದ್ಧಿಯಾಗುತ್ತದೆ. ದಾರ್ಶನಿಕರ ಜೀವನ ಮೌಲ್ಯ ತಿಳಿದುಕೊಂಡು ಮುನ್ನಡೆಯಬೇಕೆಂದು ಹೇಳಿದರು.

ಕುಮಾರಿ ಅಕ್ಷತಾ ಜೋಗಿ, ವೇದಾ ಪತ್ತಾರ ನಾನು ಮೆಚ್ಚಿದ ಕಥೆ-ಕವನ ಕುರಿತು ಮಾರ್ಮಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಸ್. ಆರ್. ಪಾಟೀಲರು ಸಸಿಗೆ ನೀರೆರೆಯುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಂಡ್ಯದ ಅಡ್ವೈಸರ್ ಮಾಸ ಪತ್ರಿಕೆ ಕೊಡಮಾಡುವ 2021 ನೆಯ ಸಾಲಿನ ಅಡ್ವೈಸರ್ ಸಾಹಿತ್ಯ ಪ್ರಶಸ್ತಿಯನ್ನು ಖ್ಯಾತ ಮಕ್ಕಳ ಸಾಹಿತಿ ಪ. ಗು. ಸಿದ್ದಾಪುರ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಾಚಾರ್ಯರಾದ ಜಿ‌. ಎಸ್. ಟಕ್ಕಳಕಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಚೇತನ ಪ್ರಕಾಶನದ ಅಧ್ಯಕ್ಷರಾದ ಹ. ಮ. ಪೂಜಾರವರು ಪ್ರಾಸ್ತಾವಿಕ ನುಡಿಯಾಡಿದರು. ಡಾ. ಜಿ. ಎಸ್. ಭೂಸಗೊಂಡ, ಶಂಕರ ಬೈಚಬಾಳ ಕೆ. ಕೃಷ್ಣಮೂರ್ತಿ, ಸಿದ್ದು ಭೂಸರೆಡ್ಡಿ ಶಿವಕುಮಾರ ಶಿವಶಿಂಪಿ ಎಂ. ಬಿ. ಕಟ್ಟಿಮನಿ, ಬಸವರಾಜ ಸಿದ್ದಾಪುರ ಅರವಿಂದ ಸಿದ್ದಾಪುರ, ಅಡಿವೆಪ್ಪ ಬೀಳಗಿ ಪ್ರೊ ಎಲ್. ಟಿ. ಹುನಸಿಕಟ್ಟಿ, ಸುನಿತಾ ವಳಸಂಗ, ಕವಿತಾ ಸಂಕನೂರ,  ಮಣಿಹಾರ ಮುಂತಾದವರು ಉಪಸ್ಥಿತರಿದ್ದರು. ಪ್ರೊ ಎಸ್. ಎಲ್. ಬಾಡಗಿ ನಿರೂಪಿಸಿದರು. ಪ್ರಭಾವತಿ ಹೊಸಟ್ಟಿ ಪ್ರಾರ್ಥಿಸಿದರು. ಬಿ. ಎಸ್. ಚೌಧರಿ ವಂದಿಸಿದರು.