Friday, June 19, 2020

ಹಿರಿಯರು ಕಿರಿಯರ ಬಾಳ ದೀಪ



ಮೊಳಕೆ ಒಡೆಯಿತೊಂದು  ವಂಶ ವೃಕ್ಷದ ಚಿಗುರು 
ಅಪ್ಪ- ಅಮ್ಮನಾಗೋ ಭಾಗ್ಯವಂತರಾದರು 
ಕಂದನ ಆಗಮನದಿ ಖುಷಿ-ಖುಷಿಯಲಿ ದಿನ ಕಳೆಯುವರು  
ಹುಟ್ಟಿದ ಕೂಸಲಿ ಕನಸ ಕಟ್ಟಿಕೊಂಡರು ನೂರಾರು 
ಕಂದನ ನಗುವಲ್ಲಿ ಜೀವನದ  ಸಾರ್ಥಕ್ಯತೆ ಪಡೆದರು 
ಕಂದನ ಬಾಳು ಬೆಳಗಲು ಹಗಲು-ರಾತ್ರಿ ದುಡಿದರು..

ಹೆಗಲೆತ್ತರಕೆ ಬೆಳೆದು ನಿಂತ ಕಂದ..
ಸುಖದ ವ್ಯಾಮೋಹದಲ್ಲಿ ಬಿದ್ದ.. 
ಬಿಡಿಸಿಕೊಂಡ ಕರುಳ ಸಂಬಂಧ..
ಅಪ್ಪ- ಅಮ್ಮನ  ಅಂಧಕಾರದ ಮದದಿಂದ ತಾತ್ಸರಿದ..
ಹಿರಿಜೀವಗಳು ತಟ್ಟಿದವು ವೃದ್ಧಶ್ರಾಮದ ಕದ...

ಕಂದನೆಂಬ ಕಿರಿ ಜೀವದ ಮದದಲ್ಲಿ 
ಅಪ್ಪ-ಅಮ್ಮ ಅನ್ನೋ ಹಿರಿಜೀವಗಳಿಂದು ಬೀದಿಯಲಿ 
ಕಂದನ ಪಾಲಿಗೆ ಹಿರಿಜೀವ ಕೂಡಿ ಇಟ್ಟ ಆಸ್ತಿಯ  ಒಡೆತನ 
ಹೆತ್ತವರ ಪಾಲಿಗೆ ಕಂದನ ಹಗೆತನ..

ಅಂದು  ಇತ್ತು ಸುಖದ  ಕಣ್ಣೀರು 
ಕಂದನ ಹುಟ್ಟಲಿ
ಇಂದು ಇದೆ ದುಃಖದ  ಕಣ್ಣೀರು 
ಕಂದನ ನಡವಳಿಕೆಯಲಿ 

ಬುದ್ಧಿ ಹೇಳಿ ತಿದ್ದುವ ಹಿರಿಯರು 
ಎಲ್ಲಾ ದೊರೆತ ಮೇಲೆ ಬೇಡವಾದರು 
ನನಗೆ ನೀನು, ನಿನಗೆ ನಾನು ಅನ್ನುತಾ ಹಿರಿಯರು 
ವೃದ್ದಾಶ್ರಮದ ಪಾಲಾದರು.. 

ಅರಿಯೋ ನೀ ಹೆತ್ತವರೇ ನಿನ್ನ  ಆಸ್ತಿ.. 
ಉಳಿದೆಲ್ಲವೂ ಬರಿ ಶೂನ್ಯ
ಅವರ ಪ್ರೀತಿ ಒಂದೇ ಸ್ಥಿರಾಸ್ತಿ 
ಜಗದಲಿ  ಹೆತ್ತವರ ಪ್ರೀತಿಯೊಂದೇ ಅನನ್ಯ..
ವೃದ್ಧಶ್ರಾಮಕೆ ಹಿರಿಜೀವಗಳ ಅಟ್ಟದಿರೋಣ...
ಇದ್ದಷ್ಟು ದಿನ ಪ್ರೀತಿ – ಕಾಳಜಿ  ತೋರೋಣ... 
ನಮ್ಮ ಬಾಲ್ಯದಲಿ ನೀಡಿದ ಪ್ರೀತಿಯ ನೀಡೋಣ...
ಬಾಳಿಗೆ ಬೆಳಕಾದ ಹಿರಿಯರ ಗೌರವಿಸೋಣ.. 

ಸಮಿತ ಶೆಟ್ಟಿ 
ಸಿದ್ಧಕಟ್ಟೆ

ಪಿತೃ ದೇವೋಭವ



ನನ್ನಪ್ಪನೆಂದರೇ?
ನನ್ನ ಬಾಳ ನೇಕಾರ ಇವ
ಆತ್ಮವಿಶ್ವಾಸದ ಕಿಚ್ಚು ಹೊತ್ತಿಸಿದವ
ಅಪಾರ ನಂಬಿಕೆಯ ಜ್ವಾಲೆ ಉರಿಸಿದವ
ನನ್ನ ಬಾಳ ಬಂಗಾರದ ಕಳಶನಿವ।

ಅಗಾಧ ಪ್ರೀತಿಯ ಕಡಲಿವ
ಅಗಣ್ಯ ಗುಣಗಳ ಹೊಂದಿದವ 
ನನ್ನ ಸ್ಪೂರ್ತಿಯ ಸೆಲೆ ಇವ 
ನನ್ನ ಉನ್ನತ ಏಳಿಗೆಯ 
ಸಹಕಾರ ಮೂರ್ತಿ  ಇವ।

ನನ್ನ ಪ್ರತಿ ಹೆಜ್ಜೆಗೂ 
ಪ್ರೋತ್ಸಾಹಿಸುವ ಸನ್ಮೀತ್ರನಿವ 
ಆಗಸ ತಾರೆ ಹಿಡಿಯುವಾಸೆ ಮೂಡಿಸಿದವ 
ಕಾಮನ ಬಿಲ್ಲಿನ ಕನಸಿನ ಗೋಪುರವ ಕಟ್ಟಿಕೊಟ್ಟವ।

ನನ್ನಪ್ಪನ ಬಾಳಿಗೆ 
ಮೀನುಗುವ ತಾರೆಯು ನಾ
ಸದಾ ನನ್ನ ಖುಷಿಯ ಬಯಸೋ
ಮಮತಾಮಯಿ ಇವ
ಅಪ್ಪನ  ಪ್ರಪಂಚವೇ ಸದಾ ನಾನಾಗಿರಲು 
ಅವನ ಯೋಚನೆಯು ಸದಾ  
 ನನ್ನ  ಬಗ್ಗೆಯು।

ನನ್ನಪ್ಪನೆಂದರೆ ಇವ
ನನ್ನ ರಕ್ಷಣೆಯ ಹೊಣೆ ಹೊತ್ತವ 
ಇವನ ದಿನದಂದು 
ಶುಭಾಶಯ ಕೋರಲು ನಾ ಬರೆದೆ
ನನ್ನದೆ ಆದ ಸುಂದರ ಸಾಲುಗಳ ಕವನವು॥

-ಮಮತಾ ಗುಮಶೆಟ್ಟಿ
ವಿಜಯಪುರ

ನನ್ನ ಭಾಗದ ದೇವರು ನನ್ನ ಅಪ್ಪನು



ನನ್ನಪ್ಪನ ಪ್ರಪಂಚಕೆ 
ನಾನೇ ಮೇರು ನಾಯಕ
ಅಪ್ಪನ ಒಲವ ಧಾರೆಯ 
ಪ್ರತಿರೂಪ ನಾ...

ನನ್ನ ಜೀವನದ ನಗುವಿಗೆ 
ಸತತದಿ ಪರಿಶ್ರಮ ಪಟ್ಟವ
ನನ್ನ ಸೌಭಾಗ್ಯದಾತ ನನ್ನಪ್ಪ
ನನ್ನ ಒಲವ ಸುದೆ ಇವನಪ್ಪ।

ಏಳು ಜನುಮದ ಬಂಧದಲು
ಹೀಗೆ ಇರಲಿ ಅಪ್ಪ ಮಗನ ಸಂಬಂಧವು
ನನ್ನಪ್ಪನ ಮಗನಾಗಿ ಜನಿಸುವೇ 
 ಪುನರ್ಜನ್ಮವಿದ್ದರೆ ನನಗೆ।

ಅಪ್ಪನ ನೆರಳು 
ಮಹಾ ಪರ್ವತಗಿಂತಲು ಮಿಗಿಲು
ಆಗಸದಷ್ಟೆ ವಿಶಾಲತೆಯ ಹೊಂದಿದವನು
ನನ್ನಪ್ಪನ ಗುಣಗಾನ 
ಪದಗಳಿಗೆ ನಿಲುಕದ ಮಹಾ ಗೌರವಗಾನ।

ಸೂರ್ಯ ಚಂದ್ರರ ಸಾಕ್ಷಿ
ನನ್ನಪ್ಪನ ಬಾಳಿಗೆ ನಾನಾಗುವೇ
ಸಂಭ್ರಮದ ದಿನಚರಿಯ ಮಗನಂತೆ
ಅಪ್ಪನ ಖುಷಿಗಳಿಗೆ ನನ್ನೊಲವಿನ ಮನಸ್ಸಾಕ್ಷಿ ಧಾರೆಯೆರೆವೆ ಸತತದಿ।

ಅಪ್ಪನ ಕುರುಹು ನಾನಾಗಿರಲು
ಅಪ್ಪನಹಾಗೆ ಬದುಕುವದನು ಕಲಿತಿರುವೇ
ನನ್ನಪ್ಪ ನನ್ನ ಬಾಳ ಬೆಳಗಿದ 
ಮಹಾ ಮಾಹಾನ್ ಜ್ಯೋತಿ
ಅವರ ಪ್ರೀತಯ ಕಂದನು ನಾನು
ಋಣಿಯಗಿರುವೆ ನನ್ನಪ್ಪನ
ಆರೈಕೆಗೆ
ನನ್ನ ಭಾಗದ ದೇವರು
ನನ್ನ ಅಪ್ಪನು॥



ವಿಜುಗೌಡ ಕಾಳಶೆಟ್ಟಿ 
ಅಧ್ಯಕ್ಷರು , ತನು ಫೌಂಡೇಶನ್ ವಿಜಯಪುರ.

20-06-2020 EE DIVASA KANNADA DAILY NEWS PAPER

ವಿಜಯಪುರ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಲಿಂಗರಾಜ್ ಎನ್. ಬಳ್ಳಾರಿ ಅವರ ನೇತೃತ್ವ: ಅಶೋಕ ಗಸ್ತಿ ಅವರಿಗೆ ಸೇಬು ಹಣ್ಣಿನ ಹಾರ ಹಾಕುವುದರ ಮೂಲಕ ವಿಶೇಷವಾಗಿ ಸನ್ಮಾನ


ದಿವಸ ವಾರ್ತೆ

ವಿಜಯಪುರ : ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಾದ ಹಿಂದುಳಿದ ವರ್ಗದ ನಾಯಕರಾದ ಸರಳ ಸಜ್ಜಿನಿಕೆ ವ್ಯಕ್ತಿ ಪಕ್ಷದ ನಿಷ್ಠಾವಂತ ಪ್ರಮಾಣಿಕ ಕಾರ್ಯಕರ್ತರಾದ ಅಶೋಕ ಗಸ್ತಿ ಅವರಿಗೆ ರಾಜ್ಯಸಭೆಗೆ ಕರ್ನಾಟಕದಿಂದ (ಎಂ.ಪಿ)ಆಗಿ ಆಯ್ಕೆಗೊಂಡಿರುವ ಹಿನ್ನೆಲೆ ಅವರಿಗೆ ವಿಜಯಪುರ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಲಿಂಗರಾಜ್ ಎನ್. ಬಳ್ಳಾರಿ ಅವರ ನೇತೃತ್ವದೊಂದಿಗೆ ಅಶೋಕ ಗಸ್ತಿ ಅವರ ನಿವಾಸ ರಾಯಚೂರನಲ್ಲಿ ಮೆನೆಗೆ ತೆರಳಿ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುವುದರೊಂದಿಗೆ ಸೇಬು ಹಣ್ಣಿನ ಹಾರ ಹಾಕುವುದರ ಮೂಲಕ ವಿಶೇಷವಾಗಿ ಸನ್ಮಾನ ಮಾಡಲಾಯಿತು.

       ಸಂದರ್ಭದಲ್ಲಿ ಸವಿತಾ ಸಮಾಜದ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಘವೇಂದ್ರ ಇಟಗಿ, ವಿಠ್ಠಲ ಕಾಸೆದ್, ಮಲ್ಲೇಶ ನಾವಿ, ಗಣೇಶ ಬಳ್ಳಾರಿ, ಬಾಪು ಕ್ಷೀರಸಾಗರ, ಗಡ್ಡೆಪ್ಪ ನಾವಿ, ರಾಜಕುಮಾರ ನಾವಿ, ನರ್ಸಿಂಗ್ ಮೋತಕ್‌ಪಲ್ಲಿ, ಕಿರಣ ಹಡಪದ ಮುಂತಾದವರು ಇದ್ದರು.


ನೂತನ ಕುಲಪತಿಯಾಗಿ ಪ್ರೊ.ಓಂಕಾರ ಕಾಕಡೆ ನೇಮಕ



ಈ ದಿವಸ ವಾರ್ತೆ
ವಿಜಯಪುರ: ಹಾಲಿ ಕುಲಪತಿ ಪ್ರೊ..ಸಬಿಹಾ ಭೂಮಿಗೌಡ ಅವರು ನಾಲ್ಕು ವರ್ಷಗಳ ಸೇವೆಯ ನಂತರ ಜೂನ್ 19ರಂದು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಓಂಕಾರ ಕಾಕಡೆ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಹಾಗೂ ವಿವಿಯ ಕುಲಾಧಿಪತಿಯೂ ಆಗಿರುವ ಶ್ರೀ.ವಜುಬಾಯಿ ವಾಲಾ ಅವರು ಆದೇಶ ಹೊರಡಿಸಿದ್ದಾರೆ.  

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ- 2000ನ ಸೆಕ್ಷನ್ 16 (2) ರ ಅನ್ವಯ ಪ್ರದತ್ತವಾದ ಅಧಿಕಾರ ಬಳಸಿ ಈ ನೇಮಕ ಮಾಡಲಾಗಿದೆ. ಇವರ ಅಧಿಕಾರ ಅವಧಿ 20-6-2020ರಿಂದ 13-12-2020ರ ವರೆಗೆ ಅಥವಾ ನೂತನ ಕುಲಪತಿಗಳ ನೇಮಕ ಇದರಲ್ಲಿ ಯಾವುದು ಮೊದಲೋ ಅಲ್ಲಿಯ ವರೆಗೆ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಅಧಿಕಾರ ಹಸ್ತಾಂತರ: ರಾಜ್ಯಪಾಲರ ಆದೇಶದಂತೆ ಪ್ರೊ.ಸಬಿಹಾ ಭೂಮಿಗೌಡ ಅವರು ನೂತನ ಕುಲಪತಿ ಪ್ರೊ.ಓಂಕಾರ ಕಾಕಡೆ ಅವರಿಗೆ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಾಲ್ಕು ವರ್ಷಗಳ ಸೇವೆಯಿಂದ ನಿವೃತ್ತರಾದ ಪ್ರೊ.ಸಬಿಹಾ ಅವರನ್ನು ವಿಶ್ವವಿದ್ಯಾನಿಲಯದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರೊ.ಸಬಿಹಾ ಅವರು ತಮ್ಮ ಮಾತೃ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠಕ್ಕೆ ಮರಳಲಿದ್ದಾರೆ ಎಂದು ವಿವಿ ಪ್ರಕಟಣೆ ತಿಳಿಸಿದೆ.


ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ನೇಮಕವಾಗಿರುವ ಪ್ರ್ರೊ.ಓಂಕಾರ ಕಾಕಡೆ ಅವರು, ಪ್ರೊ.ಸಬಿಹಾ ಭೂಮಿಗೌಡ ಅವರಿಂದ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು.  ಚಿತ್ರದಲ್ಲಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ ಮತ್ತಿತರರು ಇದ್ದಾರೆ. 

ಡಾ.ಬಸವರಾಜ ಎಲ್. ಲಕ್ಕಣ್ಣನವರ ನೂತನ ಕುಲಸಚಿವರಾಗಿ ಅಧಿಕಾರ ಸ್ವೀಕಾರ


ಈ ದಿವಸ ವಾರ್ತೆ
ವಿಜಯಪುರ :  ಕರ್ನಾಟಕ ರಾಜ್ಯ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್  ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಜಯಪುರದಲ್ಲಿ ಶಿಕ್ಷಣ ಅಧ್ಯಯನ ವಿಭಾಗದ ಡೀನ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಬಸವರಾಜ ಎಲ್. ಲಕ್ಕಣ್ಣನವರ ಅವರು ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಕುಲಸಚಿವರಾದ ಪ್ರೊ.ಡಾ. ಸುರೇಶ ವಿ. ನಾಡಗೌಡರ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.
ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿಷ್ಣುಕಾಂತ ಎಸ್.ಚಟಪಲ್ಲಿ ಅವರು ನೂತನ ಕುಲಸಚಿವರನ್ನು ಬರಮಾಡಿಕೊಂಡರು.

ಟಿಕ್ ಟಾಕ್ ಖಾತೆ ಕ್ಲೋಜ್ ಮಾಡಿ ಚೀನಾದ ವಿರುದ್ದ ಆಕ್ರೋಶ ಹೊರಹಾಕಿದ ಕಲಾವಿದರು



ದಿವಸ ವಾರ್ತೆ ವಿಜಯಪುರ : ಟಿಕ್ ಟಾಕ್ ಖಾತೆ ಕ್ಲೋಜ್ ಮಾಡಿ ಚೀನಾದ ವಿರುದ್ದ ಆಕ್ರೋಶ ಹೊರಹಾಕಿದ ಗುಮ್ಮಟನಗರಿ ಗಾನಯೋಗಿ ಸಂಘದ  ಟಿಕ್ ಟಾಕ್ ಕಲಾವಿದರು.

ಕಾಲ್ಕೆರೆದು ಜಗಳಕ್ಕೆ ನಿಂತು ಭಾರತದ ವಿರುದ್ಧ ಮಸಲತ್ತು ನಡೆಸುತ್ತಿರುವ ಡ್ರ್ಯಾಗನ್ ದೇಶ ಚೀನಾದ ವಿರುದ್ಧ ದೇಶದ ಉತ್ಪನ್ನಗಳು ಹಾಗೂ ಆ್ಯಪ್ ಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚೀನಾ ವಿರುದ್ಧದ ಜನಸಾಮಾನ್ಯರ ಆಕ್ರೋಶ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಹೆಚ್ಚಾಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲೂ ಚೀನಾ ಆ್ಯಪ್ ಬ್ಯಾನ್ ಮಾಡಿ ಎನ್ನುವ ಸಂದೇಶ ವ್ಯಾಪಕವಾಗಿ ಹರಿದಾಡಿದೆ. ಸಾಮಾಜಿಕ ತಾಣದಲ್ಲಿ ಟ್ರೆಂಡ್  ಚೀನಾ ಆ್ಯಪ್ ವಿರುದ್ಧದ ಅಭಿಯಾನ ವಿವಿಧ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಸಾಫ್ಟ್ವೇರ್ ಇನ್ ವೀಕ್, ಹಾರ್ಡ್ವೇರ್ ಇನ್ ಇಯರ್ ಎನ್ನುವ ಹ್ಯಾಶ್ಟ್ಯಾಗ್ ಕೂಡ ಟ್ರೆಂಡ್ ಆಗಿದ್ದು, ಮೊದಲಿಗೆ ಚೀನಾದ ಆ್ಯಪ್, ಸಾಫ್ಟ್ವೇರ್ಗಳನ್ನು ಕಿತ್ತೊಗೆಯುವ ಮತ್ತು ನಂತರದಲ್ಲಿ ಹಂತಹAತವಾಗಿ ಒಂದೊAದೆ ಚೀನಾ ಸರಕುಗಳನ್ನು ನಿರ್ಬಂಧಿಸುವ ಸಂದೇಶವನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ಅಭಿಯಾನಕ್ಕೆ ಸಾಥ್ ನೀಡಿರುವ ಗುಮ್ಮಟನಗರಿ ಟಿಕಟಾಕ್ ಕಲಾವಿದರಾದ ಪ್ರಕಾಶ ಆರ್.ಕೆ, ರವಿ ಆರ್.ಎಸ್.ವಿಕಾಸ ಕೆ, ಶ್ರೀಶೈಲ, ಸಚಿನ್ ವಾಲಿಕರ್, ಸಚಿನ್ ಹಳ್ಳಿಕಟ್ಟಿ, ರಾಜಕುಮಾರ್ ಹೊಸಟ್ಟಿ, ಕಿರಣ್ ಶಿವಣ್ಣನವರ, ಸಂತೋಷ್ ಚವಾಣ್, ಪ್ರಮೋದ್ ಚವಾಣ್, ಮಹೇಶ್ ಕುಂಬಾರ್, ಮತ್ತಿತರರು ತಮ್ಮ ಟಿಕಟಾಕ್ ಖಾತೆ ಕ್ಲೋಜ್ ಮಾಡಿ ನಮಗೆ ದೇಶ ಮೊದಲು, ದೇಶಕ್ಕಿಂತ ಮೀಗಿಲಾದ್ದದ್ದು ಯಾವದು ಇಲ್ಲಾ,  ಪ್ರಕಾಶ್. ಆರ್. ಕೆ.ಯುಟ್ಯೂಬ್ ಚಾನೆಲ್ ನಲ್ಲಿ ತಮಗೆ ಎಂದಿನAತೆ ಮನೋರಂಜನೆ ಪಡಿಸುತ್ತೇವೆ ಎಂದರು.

ಆದ್ರೆ  ಚೀನಾ ಆ್ಯಪ್ ಗಳನ್ನು ಬಳಸೊದಿಲ್ಲಾ ಎಂದು ವಿಡಿಯೋ ಸಂದೇಶ ಕಳಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.