Saturday, December 16, 2023

"ಜಾತಿ ವ್ಯವಸ್ಥೆ ವಿರೋಧಿಸಿದ ದಾಸ ಶ್ರೇಷ್ಟ ಕನಕದಾಸರು "ವಿದ್ಯಾ ಕಲ್ಯಾಣಶೆಟ್ಟಿ


 ಈ ದಿವಸ ವಾರ್ತೆ

ಚಡಚಣ : ದಾಸ ಶ್ರೇಷ್ಠರಾದ ಕನಕದಾಸರು ಮಾನವ ಜನಾಂಗಕ್ಕೆ ಕೊಟ್ಟ ಕೊಡುಗೆ ಅದ್ಭುತವಾದದ್ದು. ಕುಲ ಕುಲ ಎಂದು ಬಡದಾಡದಿರಿ ಹುಟ್ಟಿಗೆ ಕುಲವಿಲ್ಲ ನಮಗೇಕೆ ಜಾತಿ ವ್ಯವಸ್ಥೆ ಅಂತ ಜಾತಿ ವ್ಯವಸ್ಥೆ ವಿರುದ್ಧ ಸಿಡಿದ್ದೆದವರು. ಕಡಿಮೆ ಕುಲದವರಿಗೆ ದೇವಾಲಯ ಪ್ರವೇಶ ಇಲ್ಲದ ಕಾಲದಲ್ಲಿ ದೇವರು ನಿಮ್ಮೊಳಗೆ ಇದ್ದಾನೆ, ದೇವಾಲಯ ಪ್ರವೇಶದಿಂದ ಯಾವುದೇ ಲಾಭವಿಲ್ಲ ಮನದಲ್ಲಿ ದೇವರ ಗುಡಿ ನಿರ್ಮಾಣ ಮಾಡಿ ಎಂದು ಜನರಿಗೆ ಸಾರಿ ಹೇಳಿದರು . ಕೇಳ ದರ್ಜೆಯ ಜನರಿಗಾಗಿ ಕ್ರಾಂತಿ ಮಾಡಿ ಅವರಿಗೆ ದೇವಸ್ಥಾನದ ಪ್ರವೇಶ ಮಾಡಿಕೊಟ್ಟರು. ಮುಂದೆ ದಂಡನಾಯಕನಾದ ಕನಕರು ತಮ್ಮ ಅಧಿಕಾರ ತ್ಯಾಗ ಮಾಡಿ ದಾಸಕೂಟ ರಚಿಸಿ ಮಹಾನ ದಾಸರೆನಿಸಿಕೊಂಡರು ಎಂದು ಕದಳಿ ವೇದಿಕೆ ಅಧ್ಯಕ್ಷೆ  ವಿದ್ಯಾ ಕಲ್ಯಾಣಶೆಟ್ಟಿ  ಅಭಿಪ್ರಾಯ ಪಟ್ಟರು. ಪಟ್ಟಣದ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ  ಕನ್ನಡ ವಿಭಾಗ ಮತ್ತು ಕನ್ನಡ ಸಂಘ ವತಿಯಿಂದ ಹಮ್ಮಿಕೊಂಡ ದಾಸ ಶ್ರೇಷ್ಠ  ಕನಕದಾಸರ ಜಯಂತಿಯ ನಿಮಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 


ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಬಿ. ರಾಠೋಡ ಮಾತನಾಡಿ ಕನಕದಾಸರು ಸರ್ವಕಾಲಿಕ ಶ್ರೇಷ್ಠರು. ಸರಳ ಬದುಕಿನ ಮೌಲ್ಯಗಳನ್ನು ಸಾರಿದ ಅವರು ಮೌಢ್ಯತೆಯ ವಿರುದ್ಧ ಹೋರಾಟಮಾಡಿದರು. ಅವರ ಕೀರ್ತನೆಗಳು ಪ್ರತಿಯೊಬ್ಬರ ಬಾಳಿಗೆ ದಾರಿದೀಪಗಳಾಗಿವೆ ಎಂದರು.

 ವೇದಿಕೆ ಮೇಲಿದ್ದ ನಿವೃತ್ತ ಪ್ರಾಂಶುಪಾಲರಾದ ಶ್ರೀ ಎಸ್. ಜಿ. ಜಂಗಮಶೆಟ್ಟಿ, ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಪ್ರೊ. ಎಂ. ಎ. ಜನವಾಡ ಸ್ವಾಗತಿಸಿದರೆ, ಪ್ರೊ. ಎಸ್. ಎಫ್. ಬಿರಾದಾರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಗ್ರಂಥಪಾಲಕರಾದ ಶ್ರೀ ಎಂ. ಕೆ. ಬಿರಾದಾರ, ಪ್ರೊ.ಸದಾನಂದ ಪಾಟೀಲ, ಪ್ರೊ.ಬಸವರಾಜ ನೀಲವಾಣಿ ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.