Tuesday, April 11, 2023

12-04-2023 EE DIVASA KANNADA DAILY NEWS PAPER

ಕಟ್ಟಿ ಅವರ ಕಥೆಗಳ ಬೇರು ನಮ್ಮ ಬದುಕಿನ ನೆಲದಾಳಕ್ಕೆ ಇಳಿದಿವೆ : ರಾಘವೇಂದ್ರ ಪಾಟೀಲ


ಈ ದಿವಸ ವಾರ್ತೆ ವಿಜಯಪುರ : ಬಸವರಾಜ ಕಟ್ಟೀಮನಿ ‘ಕಥಾ ಪ್ರಶಸ್ತಿ'ಗೆ ಭಾಜನರಾದ ಕಥೆಗಾರ ಚನ್ನಪ್ಪ ಕಟ್ಟಿ ಅವರ ಕಥೆಗಳ ಬೇರುಗಳು ನಮ್ಮ ಬದುಕಿನ ನೆಲದಾಳಕ್ಕೆ ಇಳಿದಿವೆ' ಎಂದು ನಾಡಿನ ಹಿರಿಯ ಕಾದಂಬರಿಕಾರರಾದ ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು. 


ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಕೊಡಮಾಡುವ 'ಕಥಾ ಪ್ರಶಸ್ತಿ' ಪ್ರಧಾನಮಾಡಲಾಯಿತು.

ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಕೊಡಮಾಡುವ 'ಕಥಾ ಪ್ರಶಸ್ತಿ' ಹಾಗೂ 'ಯುವ ಪುಸ್ತಕ ಬಹುಮಾನ' ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು.

ಕಥಾ ಪ್ರಶಸ್ತಿಗೆ ಭಾಜನರಾದ ಡಾ.ಚನ್ನಪ್ಪ ಕಟ್ಟಿ ಅವರನ್ನು ಅಭಿನಂದಿಸಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಧ್ಯಾಪಕರಾದ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ‘ಕಥೆಗಾರ ಕಟ್ಟಿ ಅವರು ಸಿದ್ಧಾಂತಗಳ ಕನ್ನಡಿಯ ಮೂಲಕ ಬದುಕನ್ನು ಗ್ರಹಿಸದೆ ಅಂತಃಕರಣದ ಕಣ್ಣಿನಿಂದ ನೋಡಿ ಕತೆ ಕಟ್ಟತ್ತಾದ್ದರಿಂದ ಅವರ ಕತೆಗಳಿಗೆ ಅಪಾಂಥಿಕ ಚಹರೆ ಮೂಡಿದೆ ಹಾಗೂ ಕನ್ನಡ ಕಥಾಲೋಕದಲ್ಲಿ ಅವರ ಕತೆಗಳಿಗೆ ಒಂದು ಮಹತ್ವದ ಸ್ಥಾನವಿದೆ' ಎಂದು ವಿಶ್ಲೇಷಿಸಿದರು. 

‘ಬುದ್ಧನ ಕಿವಿ' ಕಥಾ ಸಂಕಲನ ಕೃತಿಗೆ ಯುವ ಸಾಹಿತ್ಯ ಪುರಸ್ಕಾರ ಪಡೆದ ದಯಾನಂದ ಅವರನ್ನು ಅಭಿನಂದಿಸಿ, ಯುವ ವಿಮರ್ಶಕರಾದ ಸಿ.ಎಸ್.ಭೀಮರಾಯ ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷರಾದ, ಕಾದಂಬರಿಕಾರ ಮಲ್ಲಿಕಾರ್ಜುನ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಪ್ರಶಸ್ತಿ ಸ್ವೀಕರಿಸಿದ ಚನ್ನಪ್ಪ ಕಟ್ಟಿ ಹಾಗೂ ದಯಾನಂದ ಅವರು ಕೃತಜ್ಞತೆಯ ಮಾತುಗಳನ್ನಾಡಿದರು.

ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿಗಳಾದ ಡಾ.ಎಂ.ಎಸ್.ಮದಭಾವಿ ಸ್ವಾಗತಿಸಿದರು. 

ಪ್ರತಿಷ್ಠಾನದ ಸದಸ್ಯ ಸಂಚಾಲಕ ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿಗಳಾದ ಡಾ. ಐಹೊಳ್ಳಿ ನಿರೂಪಿಸಿದರು. ಮನು ಪತ್ತಾರ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಇಮಾಂಬಿ ತತ್ವಪಗಳನ್ನು ಹಾಡಿದರು.