Saturday, August 27, 2022

ರಾಷ್ಟ್ರ ಮಟ್ಟದ ರಾಯಣ್ಣ ಭೂಷಣ ಪ್ರಶಸ್ತಿಗೆ ರುದ್ರಪ್ಪ , ಪರಶುರಾಮ ಆಯ್ಕೆ



ರುದ್ರಪ್ಪ ಆಸಂಗಿ

ಪರಶುರಾಮ ಶಿವಶರಣ


ಈ ದಿವಸ ವಾರ್ತೆ

ವಿಜಯಪುರ: ಅಖಿಲ ಭಾರತ ಹಾಲುಮತ ಸಾಹಿತ್ಯ ಪರಿಷತ್ತು ಹಾಗೂ ಕನಕ ಸಾಹಿತ್ಯ ಪ್ರತಿಷ್ಠಾನ ವಿಜಯಪುರ ವತಿಯಿಂದ ಕೊಡಮಾಡುವ ರಾಷ್ಟ್ರಮಟ್ಟದ ರಾಯಣ್ಣ ಭೂಷಣ ಪ್ರಶಸ್ತಿಗೆ ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಹಾಗೂ ಪರಶುರಾಮ ಶಿವಶರಣ ಅವರು ಆಯ್ಕೆಯಾಗಿದ್ದಾರೆ . ಪತ್ರಿಕಾ ಕ್ಷೇತ್ರದಲ್ಲಿ ಅಪಾರವಾದ ಸಾಧನೆಗೈದ ಹಿನ್ನಲೆ ರಾಷ್ಟ್ರ ಮಟ್ಟದ ರಾಯಣ್ಣ ಭೂಷಣ ಪ್ರಶಸ್ತಿಯನ್ನು  ಆ.28 ರಂದು ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ‌ ವಿತರಣಾ ಕಾರ್ಯಕ್ರಮವು ಚೇತನಾ ಶಿಕ್ಷಣ ಸಂಸ್ಥೆ ಆವರಣ ವಿಜಯಪುರದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಕೊಳಮಲಿ ತಿಳಿಸಿದ್ದಾರೆ.



Thursday, August 11, 2022

12-08-2022 EE DIVASA KANNADA DAILY NEWS PAPER

ಲೋಕಾಯುಕ್ತರಿಗೆ ಪಿತೃವಿಯೋಗ

 


ಮುದ್ದೇಬಿಹಾಳ: ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಪಡೇಕನೂರ ಅವರ ತಂದೆ ಸಂಗನಗೌಡ ಭೀಮನಗೌಡ ಪಾಟೀಲ (98) ಅವರು   ಬುಧವಾರ  ನಿಧನರಾದರು. 

ಮೃತರಿಗೆ ಪತ್ನಿ ಚನ್ನಮ್ಮಗೌಡತಿ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬಿ.ಎಸ್.ಪಾಟೀಲರು ಏಕೈಕ ಪುತ್ರರಾಗಿದ್ದಾರೆ. ಸಂಗನಗೌಡರು ಮುದ್ದೇಬಿಹಾಳ ತಾಲೂಕು ಪಡೇಕನೂರ ಗ್ರಾಮದ ಪ್ರಗತಿಪರ ರೈತರಾಗಿದ್ದರು.  ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಪಡೇಕನೂರದಲ್ಲಿ ಗುರುವಾರ ಸಂಜೆ ನೆರವೇರಿತು. ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಸಿ.ಎಸ್.ನಾಡಗೌಡ, ವಿಜಯಪುರ ಅನುಗೃಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ| ಪ್ರಭುಗೌಡ ಬಿ.ಎಲ್. ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.