Saturday, January 28, 2023

ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ “ವಿಧಾನಸೌಧ ಚಲೋ”ಕಾರ್ಯಕ್ರಮ : ರಾಜ್ಯಾಧ್ಯಕ್ಷ ಜೈಕುಮಾರ ಹೆಚ್.ಎಸ್.



ಈ ದಿವಸ ವಾರ್ತೆ

ವಿಜಯಪುರ : ಪ್ರಸ್ತುತ ಸರ್ಕಾರವು 7ನೇ ವೇತನಆಯೋಗವನ್ನು ವಿಳಂಬವಾಗಿ ರಚನೆ ಮಾಡಿರುವುದಲ್ಲದೇ, ಇದುವರೆಗೂ ವೇತನಆಯೋಗವುಕ್ಷಿಪ್ರವಾಗಿ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಸಲ್ಲಿಸುವ ಮತ್ತುರಾಜ್ಯ ಸರ್ಕಾರವುಆಯವ್ಯಯ ಮಂಡನೆಯಲ್ಲಿ ಜಾರಿಗೊಳಿಸುವ ಕುರುಹುಗಳು ಕಂಡು ಬರದೇಇರುವುದು ನೌಕರರಲ್ಲಿತೀವ್ರಅಶಾಂತಿ ಮತ್ತುಅತೃಪ್ತಿಯನ್ನುಉಂಟು ಮಾಡಿದೆ. 7ನೇ ವೇತನಆಯೋಗ ರಚಿಸಿ ವೇತನ ಪರಿಷ್ಕರಣೆ ಮಾಡದೇಇರುವುದರಿಂದ ವಾರ್ಷಿಕವಾಗಿ ನೌಕರರಿಗೆರೂ.15,000 ಕೋಟಿ ನಷ್ಟವಾಗುತ್ತಿದೆ.ಎನ್.ಪಿ.ಎಸ್ ಪದ್ದತಿಯನ್ನು ರದ್ದುಪಡಿಸಿ ನಿಶ್ಚಿತ ಪಿಂಚಣ ಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಸರ್ಕಾರಿಎನ್.ಪಿ.ಎಸ್ ನೌಕರರು 2023ರ ಡಿಸೆಂಬರ್ 19ರಿಂದ 14 ದಿನಗಳ ಕಾಲ ಬೃಹತ್ ಮಟ್ಟದಲ್ಲಿ “ಮಾಡುಇಲ್ಲವೇ ಮಡಿ” ಹೆಸರಿನರಾಜ್ಯ ಮಟ್ಟದಧರಣ ಕಾರ್ಯಕ್ರಮವನ್ನು ನಡೆಸಿರುತ್ತಾರೆ.ಈ ಹೋರಾಟಕಾರ್ಯಕ್ರಮವನ್ನುಒಕ್ಕೂಟವು ಸೇರಿದಂತೆರಾಜ್ಯದಎಲ್ಲ ನೌಕರಪರ ಸಂಘಟನೆಗಳು ಬೆಂಬಲಿಸಿದ್ದವು.ಆದರೆ, ರಾಜ್ಯ ಸರ್ಕಾರವು ನೌಕರರ ಹೋರಾಟವನ್ನುಗಂಭೀರವಾಗಿ ಪರಿಗಣ ಸದೇ ಮಾತುಕತೆಗೆ ನೌಕರ ಮುಖಂಡರನ್ನುಕರೆಯದೇ ಉದಾಸೀನ ತೋರಿತು.ಇದುರಾಜ್ಯ ಸರ್ಕಾರಿ ನೌಕರರಲ್ಲಿತೀವ್ರಆಕ್ರೋಶವನ್ನು ಮೂಡಿಸಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ರಾಜ್ಯಾಧ್ಯಕ್ಷ ಜೈಕುಮಾರ ಹೆಚ್.ಎಸ್. ಹೇಳಿದರು.

ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅದರಂತೆ Pಈಖಆಂ ಕಾಯಿದೆ/ ಓPS ಪದ್ಧತಿ ರದ್ದುಗೊಳಿಸಿ ನಿಶ್ಚಿತ ಪಿಂಚಣ ಪದ್ದತಿ ಮರುಸ್ಥಾಪಿಸಬೇಕು. ಕೇಂದ್ರ ಹಾಗೂ ನೆರೆ ರಾಜ್ಯಗಳ ಮತ್ತು ಹೈಕೋರ್ಟ್ನ ನೌಕರರ ವೇತನಕ್ಕೂ ನಮ್ಮರಾಜ್ಯದ ನೌಕರರ ವೇತನಕ್ಕೂ ಕನಿಷ್ಠ 40% ವೇತನ ವ್ಯತಾಸವಾಗಿರುವ ಹಿನ್ನೆಲೆಯಲ್ಲಿತಕ್ಷಣವೇ ಶೇ. 25ರಷ್ಟು ಮಧ್ಯಂತರ ಪರಿಹಾರ ಘೋಷಿಸಬೇಕು. 7ನೇ ವೇತನಆಯೋಗದ ಪರಿಷ್ಕರಣೆ ಸಂಬAಧರಾಜ್ಯ ನೌಕರರಿಗೆ ನೀಡಬೇಕಾದ ಹೆಚ್ಚಿನ ವೇತನ ಪರಿಷ್ಕರಣೆಗಾಗಿ ವೇತನ 2023-24ನೇ ಆಯವ್ಯಯದಲ್ಲಿಅಂದಾಜುಅನುದಾನವನ್ನು ಕಾಯ್ದಿರಿಸಿ ಜಾರಿಗೊಳಿಸಬೇಕು. ರಾಜ್ಯದಲ್ಲಿ ಸುಮಾರು 2.80 ಲಕ್ಷಕ್ಕೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವುದು. ಆಡಳಿತ ಸುಧಾರಣೆ ನೆಪದಲ್ಲಿ ಶಿಫಾರಸ್ಸು ಮಾಡಲಾಗಿರುವ ಹುದ್ದೆಗಳ ಕಡಿತವನ್ನು ಕೈಬಿಡುವುದು ಮತ್ತು ಸರ್ಕಾರಿ ಸೇವೆಗಳ ಖಾಸಗೀಕರಣಕೈಬಿಡುವುದು ಹೊರಗುತ್ತಿಗೆ ನೌಕರರಿಗೆ ಸುಪ್ರೀಂಕೋರ್ಟ್ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಮತ್ತು ಎಲ್ಲಾ ನೇರ ನೇಮಕಾತಿಯಲ್ಲಿ ಪ್ರಾತಿನಿಧ್ಯ ನೀಡಬೇಕು. ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಬಾಕಿ ಇರುವ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆ ಸಮಸ್ಯೆಗಳು, ಶಿಕ್ಷಕರ ನೇಮಕಾತಿ, ವೃಂದ ಮತ್ತು ನೇಮಕಾತಿ ನಿಯಮಗಳ ರಚನೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸಬೇಕು. ಶಾಲೆಗಳನ್ನು ಮುಚ್ಚುವುದು, ಶಾಲೆಗಳ ವಿಲೀನ, ಹಾಸ್ಟೆಲ್‌ಗಳ ವಿಲೀನ, ಶಿಕ್ಷಕರ ಸಂಖ್ಯೆಗಳ ಕಡಿತ, ಶಿಕ್ಷಣದ ಖಾಸಗೀಕರಣ ಕೈ ಬಿಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕೈಬಿಡುವುದು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕೈಬಿಡಬೇಕೆಂದು ಆಗ್ರಹಿಸಿದರು.



ಕೇಂದ್ರ ಮತ್ತುರಾಜ್ಯ ಸರ್ಕಾರಗಳು 18 ತಿಂಗಳ ಬಾಕಿ ತುಟ್ಟಿಭತ್ಯೆಯನ್ನುಇದುವರೆಗೂ ಬಿಡುಗಡೆ ಮಾಡಿರುವುದಿಲ್ಲ. ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತರಕಲ್ಯಾಣ ಇಲಾಖೆ ಹಾಗೂ ಇನ್ನಿತರ ಹಲವು ಇಲಾಖೆಗಳಲ್ಲಿ ಶಿಕ್ಷಕರ ವರ್ಗಾವಣೆ ಸಮಸ್ಯೆಗಳು ತಾಂಡವವಾಡುತ್ತಿವೆ. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡದೇಇರುವುದರಿಂದಅವರಿಗೆ ಮುಂಬಡ್ತಿಯೇಇಲ್ಲವಾಗಿದೆ. ಇವೆಲ್ಲ ಸಮಸ್ಯೆಗಳ ಬಗ್ಗೆ ಶಿಕ್ಷಕರು ಹಲವು ಮನವಿಗಳನ್ನು ಸಲ್ಲಿಸಿದ್ದಾಗ್ಯೂ ಇಲಾಖೆಗಳು ದಿವ್ಯ ನಿರ್ಲಕ್ಷö್ಯ ವಹಿಸಿರುತ್ತವೆ. ರಾಜ್ಯದ 7 ಕೋಟಿಜನತೆಗೆಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 7.73 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 5.20 ಲಕ್ಷ. ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು 2.80 ಲಕ್ಷದಷ್ಟಿದೆ.ವೇತನ ಸೌಲಭ್ಯಗಳ ನಷ್ಟ ಮತ್ತು ಖಾಲಿ ಹುದ್ದೆಗಳ ಹೊರೆ ನೌಕರರ ಮೇಲೆ ಬಿದ್ದಿದೆ.ರಾಜ್ಯದ ವಿದ್ಯಾವಂತಯುವಜನತೆಉದ್ಯೋಗಕ್ಕಾಗಿ ಪರಿಪಾಟಲು ಪಡುತ್ತಿದ್ದಾರೆ. ಗುತ್ತಿಗೆ-ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಶೋಷಿಸಲಾಗುತ್ತಿದೆ.ಆಡಳಿತ ಸುಧಾರಣೆಗಳ ಆಯೋಗ-2ರ ಶಿಫಾರಸ್ಸುಗಳಲ್ಲಿ ಜೀವನಗುಣಮಟ್ಟ ಸುಧಾರಣೆ ಇತ್ಯಾದಿಗಳನ್ನು ಕೇಂದ್ರೀಕರಿಸುವ ಬದಲಿಗೆ ಇಲಾಖೆಗಳ ಖಾಸಗೀಕರಣ, ಇಲಾಖೆಗಳ ವಿಲೀನಾತಿ ಮೂಲಕ ಹುದ್ದೆಗಳ ರದ್ದತಿ, ಹೊರಗುತ್ತಿಗೆ ಕೇವಲ ತಂತ್ರಜ್ಞಾನಆಧಾರಿತಯಾಂತ್ರಿಕ ಧೋರಣೆಗಳಿಗೆ ಸೀಮಿತವಾಗಿದೆ.ದೇಶದ ಸಾರ್ವಜನಿಕರಂಗದ ಉದ್ದಿಮೆಗಳಾದ ರೈಲ್ವೇ, ವಿದ್ಯುಚ್ಛಕ್ತಿ, ವಿಮಾರಂಗ, ಬ್ಯಾಂಕ್ ಮತ್ತು ಹಣಕಾಸು ವಲಯ, ದೂರಸಂಪರ್ಕ, ವಿಮಾನ ವಲಯ, ಬಂದರುಗಳು ಮತ್ತು ಹೆದ್ದಾರಿಗಳು, ರಕ್ಷಣಾ ವಲಯ, ಎಲ್.ಐ.ಸಿ, ಇತ್ಯಾದಿ ಸಾರ್ವಜನಿಕ ಉದ್ದಿಮೆಗಳನ್ನು ಬೃಹತ್ ಪ್ರಮಾಣದಲ್ಲಿ ದೇಶೀಯ ಮತ್ತು ಪರದೇಶೀ ಕಂಪನಿಗಳಿಗೆ ಖಾಸಗೀಕರಣ ನೀತಿಗಳ ಮೂಲಕ ಹಸ್ತಾಂತರ ಮಾಡಲಾಗುತ್ತಿದ್ದುಖಾಸಗೀಕರಣವನ್ನುಕೈಬಿಡುವಂತೆ ಸರ್ಕಾರವನ್ನುಒತ್ತಾಯಿಸಬೇಕಾಗಿದೆ ಎಂದರು.

ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಇಟ್ಟಕೊಂಡು ಅಖಿಲ ಕರ್ನಾಟಕರಾಜ್ಯ ಸರ್ಕಾರಿಒಕ್ಕೂಟವುರಾಜ್ಯ ಸರ್ಕಾರದ ವಿವಿಧ ಇಲಾಖಾ ಮತ್ತು ವೃಂದ ಸಂಘಗಳು ಒಡಗೂಡಿ ಈ ಬೇಡಿಕೆಗಳ ಈಡೇರಿಕೆಗಾಗಿ 2023ರ ಫೆಬ್ರವರಿ 7ರಂದು “ವಿಧಾನಸೌಧ ಚಲೋ”ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಜ್ಯದಎಲ್ಲಾ ನೌಕರ ಬಾಂಧವರು ಸಾಮೂಹಿಕವಾಗಿ ಒಂದು ದಿನದರಜೆಯನ್ನು ಹಾಕುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಲೇಂಡಿ, ಜಿಲ್ಲಾಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಸುರೇಶ ಜೀಬಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಇಳಕಲ್, ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಎಸ್.ಮೆಣಸಗಿ, ಎನ್.ಪಿ.ಎಸ್ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಡಲಗಿ,ಜಿ.ಬಿ.ಅಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.