Sunday, May 28, 2023

ಮೇ 9 ಸಮ್ಮೇಳನದಲ್ಲಿ 8 ನಿರ್ಣಯಗಳು

 

ಈ ದಿವಸ ವಾರ್ತೆ
ವಿಜಯಪುರ: ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಕಾರ್ಯಕ್ರಮದ ಮುಖ್ಯ ಸಂಘಟಕ ಹಾಗೂ ಹಿರಿಯ ಚಿಂತಕರಾದ ಬಸವರಾಜು ಸೂಳಿಬಾವಿ ಅವರು ಮೇ 9 ಸಮ್ಮೇಳನದಲ್ಲಿ 8 ನಿರ್ಣಯಗಳನ್ನು ಕೈಗೊಂಡರು. ಅವುಗಳೆಂದರೆ...
1. ವಿಜಯಪುರ ಜಿಲ್ಲೆ ಪಂಚನದಿಗಳ ಬೀಡು, ಉತ್ಕೃಷ್ಟ ಮಣ್ಣಿನ ಗುಣಧರ್ಮ ಹೊಂದಿದ, ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಹೇಳಿ ಮಾಡಿಸಿದ ನಾಡು. ಇಂತಹ ಜಿಲ್ಲೆಯಲ್ಲಿ ಒಟ್ಟ ಫಾರ್ಮ ಎಂದೇ ಖ್ಯಾತಿಯಿಂದ 1933 ರಲ್ಲಿಯೇ ಸ್ಥಾಪನೆಯಾದ ಕೃಷಿ ಸಂಶೋಧನಾ ಸಂಶೋಧನೆಯಿAದ ಇಂದು ಅನೇಕ ಕೃಷಿ ಸಂಬAಧಿತ ಸಂಸ್ಥೆಗಳೊAದಿಗೆ ಬೆಳೆದು ಹೆಮ್ಮರವಾಗಿ ನಿಂತಿದೆ. ಈ ಭಾಗದ ರೈತರಿಗೆ ಕೃಷಿ ಸಂಶೋಧನೆ ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ವಿಜಯಪುರದಲ್ಲಿ ಕೃಷಿ ಸ್ವಾತಂತ್ರ‍್ಯ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಮತ್ತು ಜಿಲ್ಲೆಯಲ್ಲಿ ಈಗಾಗಲೇ ಹಿಟ್ನಳ್ಳಿಯಲ್ಲಿ ಆರಂಭಿಸಲಾದ ಬಿ.ಟೆಕ್ (ಕೃಷಿ) 'ಮಹಾವಿದ್ಯಾಲಯ ಮತ್ತು ಆಲಮೇಲದಲ್ಲಿ ಮಂಜೂರಾದ ತೋಟಗಾರಿಕೆ ಮಹಾವಿದ್ಯಾಲಯಗಳು ಜಿಲ್ಲೆಯಲ್ಲಿ ಮಾನರಾರಂಭಿಸಬೇಕು.
 2. ಜಿಲ್ಲೆಯಲ್ಲಿ ರೈತರು ವಿವಿಧ ಕೃಷಿ, ತೋಟಗಾರಿಕೆ ವೈವಿದ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಕೃಷಿಯಲ್ಲಿ ನಷ್ಟವನ್ನನುಭವಿಸಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅದಕ್ಕಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ನ್ಯಾಯಯುತ ಟೆಂಬಲ ಬೆಲೆ ಘೋಷಿಸಬೇಕು. ಸರಕಾರದಿಂದ ಕೊಲ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸಿ.
3. ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮಂಜೂರಾಗಿರುವ ವಿವಿಧ ಏತನೀರಾವರಿಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸುವದು ಹಾಗೂ ಭೀಮಾ ನದಿಯ ನೀರಿನ ಸಂಪೂರ್ಣ ಸದ್ಬಳಕೆ ಜಿಲ್ಲೆಯ ರೈತರಿಗಾಗಬೇಕು. ಅದೇ ರೀತಿ ಜಿಲ್ಲೆಯ ಜೀವನಾಡಿ ಡೋಣಿ ನದಿ ಹೊಳೆ ಅದರ ಸಂಪೂರ್ಣ ಸದ್ಬಳಕೆ ನದಿ ಪಾತ್ರದಲ್ಲಿರುವ ಜಿಲ್ಲೆಯ ರೈತರಿಗಾಗಬೇಕು.
4, ಜಿಲ್ಲೆಯಿಂದ ಅನೇಕ ಜನ ತಮ್ಮ ಜೀವನೋಪಾಯಕ್ಕಾಗಿ ಪಕ್ಕದ ಮಹಾರಾಷ್ಟ್ರ, ಗೋವಾ, ಆಂದ್ರ ಪ್ರದೇಶಗಳಿಗೆ ಪ್ರತಿ ವರ್ಷ ಗುಳೇ ಹೊಗುತ್ತಿದ್ದು, ಇದನ್ನು ತಪ್ಪಿಸಲು ಅವರ ಜೀವನೋಪಾಯಕ್ಕೆ ನಿರಂತರ ಉದ್ಯೋಗ ಕಲ್ಪಿಸುವಂತಾಗಬೇಕು. ಅದೇ ರೀತಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ವಿದ್ಯಾವಂತರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. 
5. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭೂರಹಿತ ದೀನದಲಿತರು ಬಡ ಕೃಷಿ ಕಾರ್ಮಿಕರು ಇದ್ದು ದುಡಿಯುವ ವರ್ಗಕ್ಕೆ ಕನಿಷ್ಟ 2 ಎಕರೆ ಪ್ರತಿ ಕುಟುಂಬಕ್ಕೆ ಜಮೀನು ಹಂಚಿಕೆ ಮಾಡಬೇಕು.
6. ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು ಮತ್ತು ಒಂದು ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಹಾಗೂ ಕನಿಷ್ಟ ಎರಡು ಜನಸ0ಖ್ಯೆಗಳಿಗುವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಬೇಕು.
7. ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಬಹಳದೊಡ್ಡ ಸಂಖ್ಯೆಯಲ್ಲಿ ವಸತಿ ನ ಕಾರ್ಮಿಕರಿದ್ದು ಇವರೆಲ್ಲರಿಗೂ ನಿವೇಶನ ಹಂಚುವ ಹಾಗೂ ಮನೆ ಕಟ್ಟಿಸಿಕೊಡುವ ಕೆಲಸವಾಗಬೇಕು.
8.5 ಕೆ.ಜಿ. ಗೋಧಿ 5 ಕೆಜಿ .ಜೋಳ ಕೊಡುವ ಕೆಲಸವಾಗಬೇಕು.

ಸರಕಾರ ಜನರಿಗೆ ಜಿಎಸ್‌ಟಿ ಹೆಸರಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ಹೊರೆ ಮಾಡುತ್ತಿದೆ: ನೀರಜ್ ಜೈನ್




ವಿಜಯಪುರ: ಶ್ರೀಮಂತರಿಗೆ ಸಬ್ಸಿಡಿ ನೀಡುವ ಮೂಲಕ 30 ಲಕ್ಷ ಕೋಟಿ ಸರಕಾರಕ್ಕೆ ಹೊರೆಮಾಡಿದ್ದಾರೆ. ಲಕ್ಷ ಕೋಟಿ ಬೆಲೆಯ ಏರ್ ಇಂಡಿಯಾ ವನ್ನು ಸರಕಾರ ಕಡಿಮೆ ಅಂದರೆ 2700 ಕೋಟಿ ಬೆಲೆಗೆ ಮಾರುವ ಮೂಲಕ ಜನರಿಗೆ ಪಂಗನಾಮ ಹಾಕಿದೆ. ಸರಕಾರ ಜನರಿಗೆ ಜಿಎಸ್‌ಟಿ ಹೆಸರಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ಹೊರೆ ಮಾಡುತ್ತಿದೆ. ರೈತರಗೆ ಸಿಗಬೇಕಾದ ಸವಲತ್ತು ಸಿಗದೆ ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪುಣೆಯ ಹಿರಿಯ ಪ್ರಗತಿಪರ ವಿಚಾರವಾದಿ ನೀರಜ್ ಜೈನ್ ಅವರು ಹೇಳಿದರು.
ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಸಮಾರೋಪ ಸಮಾರಂಭದ ಮಾತುಗಳನ್ನು ಆಡಿದರು.
ದೇಶದಲ್ಲಿ ಇಂತಹ ಅನಾಹುತಗಳಿಗೆ ಕಾರಣವಾದ ಬಿಜೆಪಿ ಒಮ್ಮೆ ಕರ್ನಾಟಕದಲ್ಲಿ ಸೋತರೆ ಸಾಲದು ಅದರ ಬುಡವನ್ನು ಕಿತ್ತು ಹಾಕಬೇಕು ಗಾಂಧಿ ಸ್ವಾತಂತ್ರ‍್ಯ ಚಳುವಳಿಯನ್ನು ಜನ ಅಂದೋಲನವಾಗಿ ಮಾಡಿದರು ಉಪ್ಪಿನ ಸತ್ಯಾಗ್ರಹ ಮೂಲಕ ಜನ ಬ್ರಿಟಿಷರ ವಿರುದ್ಧ ಪ್ರತಿಭಟಿಸುವಂತೆ ಮಾಡಿದರು ಇದಕ್ಕೆ ಬ್ರಿಟಿಷ್ ಪತ್ರಕರ್ತ ಭಾರತೀಯರಿಗೆ ಸ್ವಾಭಿಮಾನ ಬಂದಿದೆ ಎಂದು ಬರೆದದನ್ನು ನಾವು ಗಾಂಧಿಯ ಚಳುವಳಿಯ ಸಂಘಟನಾತ್ಮಕ ಶಕ್ತಿ ಏನು ಎಂದು ತಿಳಿದುಕೊಳ್ಳಬಹುದು. ಗಾಂಧಿ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛ ಮಾಡುತ್ತಿದ್ದರು ತಮ್ಮ ಆಶ್ರಮದಲ್ಲಿ ಎಲ್ಲ ವರ್ಗದ ಜನರಿಗೆ ಇರಲು ಅವಕಾಶ ಮಾಡಿ ಕೊಟ್ಟಿದ್ದರು. ಗಾಂಧಿ ರಾಮನನ್ನು ಸ್ಮರಿಸುತ್ತಿದ್ದರು ಆ ರಾಮ ಅಯೋಧ್ಯೆ ರಾಜಾ ರಾಮನಲ್ಲ ಗಾಂಧೀಜಿ ರಾಮ ರಾಮ ಚರಿತ ಮನಸದ ರಾಮನಾಗಿದ್ದಾನೆ. ಇದು ಗಾಂಧಿ ದೇಶ ಆಗಿದ್ದರಿಂದ ಎಲ್ಲ ರಾಜ್ಯಗಳು ಐಕ್ಯತೆ ಹೆಸರಲ್ಲಿ ಒಂದುಗೂಡಿದೆ ಇದು ನಮ್ಮ ಸಾಮರಸ್ಯವನ್ನು ಎತ್ತಿ ತೋರಿಸುತ್ತದೆ ನಮ್ಮಲ್ಲಿನ ವಿವಿಧತೆಯಲ್ಲಿನ ಏಕತೆ ಬೇರೆ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಗಾಂಧೀಜಿಯ ಸ್ವರಾಜದ ಬೇರುಗಳು ನಮ್ಮಲ್ಲಿ ಗಟ್ಟಿಯಾಗಿ ನೆಲೆಯೂರಿವೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ವಿಚಾರವಾದಿ ಜಾನಪದ ವಿದ್ವಾಂಸ ಕಾಳೇಗೌಡ ನಾಗವಾರ ಮಾತನಾಡಿ, ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪ್ರತಿ ಹಳ್ಳಿಗೆ ಕೆರೆ ಕಟ್ಟಿಸಿದರು.1947ರ ನಂತರ ಬಹು ಸಂಖ್ಯಾತರಿಗೆ ಶಿಕ್ಷಣ ದೊರೆಯಿತು ಹೆಣ್ಣುಮಕ್ಕಳ ವಿಚಾರದಲ್ಲಿ ಅಂಬೇಡ್ಕರ್ ಮತ್ತು ಲೋಹಿಯಾ ಅವರಿಗೆ ಇರುವಂತಹ ಕಾಳಜಿ ಮತ್ತೊಬ್ಬರಿಗಿಲ್ಲ ಇವತ್ತಿಗೂ ಕೂಡಾ ಹೆಣ್ಣುಮಕ್ಕಳು ತಮ್ಮ ನಿತ್ಯ ಕರ್ಮಗಳನ್ನು ಸೂರ್ಯೋದಯ ಮತ್ತು ಸೂರ್ಯಾಸ್ತ ನಂತರ ಮಾಡುವಂತಹ ದುಸ್ಥಿತಿ ಇದೆ. ಅಧಿಕಾರ ಮತ್ತು ಸಂಪತ್ತು ನಮಗೆ ದೊಡ್ಡ ಅಪಾಯ ಇದನ್ನು ತಲೆಗೆ ಹಚ್ಚಿಕೊಳ್ಳದೆ ವಸಂತ ಮಾಸದ ಕೋಗಿಲೆಯಂತೆ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಭೀಷೇಕ ಚಕ್ರವರ್ತಿ, ಫಾ. ಟಿಯೋಲ್, ಚಂದ್ರಶೇಖರ ಘಂಟೆಪ್ಪಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಂಕೇತಿಕ ಪ್ರತಿಭಟನೆ



ವಿಜಯಪುರ : ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಆರೋಪ ಎದಿರುಸುತ್ತಿರುವ ಸಂಸದ ಬ್ರಿಜೇಶ್ ಸಿಂಗ್ ರಾಜೀನಾಮೆ ಹಾಗೂ ಬಂಧನಕ್ಕೆ ಅಗ್ರಹಿಸಿ ಮೇ ಸಾಹಿತ್ಯ ಮೇಳದಲ್ಲಿ ಪಾಲ್ಗೊಂಡಿರುವ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ವಿವಿಧ ಪ್ರಗತಿಪರ ಚಿಂತಕರು ಹಾಗೂ ಗಣ್ಯರು ವಿಜಯಪುರ ನಗರದ ರಂಗಮAದಿರದ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿದರು. ಇದೆ ಸಂಧರ್ಭದಲ್ಲಿ ಇವತ್ತು ಕೇಂದ್ರ ಸರಕಾರ ಪ್ರತಿಭಟನಾ ನಿರತ ಕುಸ್ತಿ ಪಟಗಳನ್ನು ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ಸಂಧರ್ಭದಲ್ಲಿ ಬಸವರಾಜ ಸೂಳಿಭಾವಿ ಪ್ರಭುಗೌಡ ಪಾಟೀಲ ಭೀಮಶಿ ಕಲಾದಗಿ ಸುರೇಖಾ ರಜಪೂತ ಅನಿಲ ಹೊಸಮನಿ ಸೇರಿದಂತೆ ಸಾವಿರಾರು ಜನ ಪ್ರಗತಿಪರರು ಉಪಸ್ಥಿತರಿದ್ದರು.

ಸರಕಾರ ಹೊಸ ಸಂಸತ್ತು ಭವನ ಉದ್ಘಾಟನೆಗೆ ಕರೆಯಲು ಮೀನಾಮೇಷ : ಸುಕೀರ್ತ ರಾಣಿ

 

ಈ ದಿವಸ ವಾರ್ತೆ
ವಿಜಯಪುರ : ಭಾರತದ ರಾಷ್ಟ್ರಪತಿಗಳು ಬುಡಕಟ್ಟು ಜನಾಂಗದವರಾಗಿರುವುದರಿAದ ಅವರನ್ನು ಹೊಸ ಸಂಸತ್ತು ಭವನ ಉದ್ಘಾಟನೆಗೆ ಕರೆಯಲು ಸರಕಾರ ಮೀನಾಮೇಷ ಎಣಿಸುತ್ತಿದೆ ಎಂದು ತಮಿಳುನಾಡಿನ ಖ್ಯಾತ ಪ್ರಗತಿಪರ ಸಾಹಿತಿ ಸುಕೀರ್ತ ರಾಣಿ ಅವರು ಹೇಳಿದರು
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ 2ನೇ ದಿನದ 2ನೇ ಗೋಷ್ಠಿ ಕವಿ ಗೋಷ್ಠಿ ಯಲ್ಲಿ ಆಶಯ ಭಾಷಣ ಮಾಡಿ ಮಾತನಾಡಿದರು.
ಬಾಲ್ಯದ ಶಾಲಾದಿನಗಳಲ್ಲಿ ನನ್ನನ್ನು ದಲಿತಳು ಎಂಬ ಕಾರಣಕ್ಕೆ ಹಿಂದಿನ ಬೆಂಚಗಳಲ್ಲಿ ಕೂರಿಸಲಾಗುತಿತ್ತು. ಇದು ಭಾರತದ ಜಾತಿ ವ್ಯವಸ್ಥೆಯ ಕರಾಳ ಮುಖ ತೋರಿಸುತ್ತದೆ.ಇಂಡಿಯನ್ ಎಕ್ಸ್ಪ್ರೆಸ್ ನವರು ಕೊಡುವ ಅಧಾನಿ ಗ್ರೂಪ್ ಪ್ರಯೋಜಿತ ಎಂಬ ಕಾರಣಕ್ಕೆ 10 ಲಕ್ಷ ಮೌಲ್ಯದ ಸಾಹಿತ್ಯ ಪ್ರಶಸ್ತಿ ತಿರಸ್ಕರಿಸಿದೆ ಯಾಕೆಂದರೆ ಅಧಾನಿಯಿಂದ ನಮ್ಮ ಹಕ್ಕಗಳು ದಮನಿತವಾಗುತ್ತಿವೆ ನನ್ನ ಎಲ್ಲ ಕವನಗಳು ಸರಕಾರಿ ವ್ಯವಸ್ಥೆ ಪ್ರಶ್ನಿಸುತ್ತಿವೆ. ತುಳಿತಕ್ಕೆ ಒಳಗಾದವರ ಧ್ವನಿಯಾಗಿ ನನ್ನ ಕವನಗಳು ಮೂಡಿಬಂದಿವೆ. ಅದರಲ್ಲಿ ಮುಖ್ಯವಾದುದು ಎಲ್ಲರು ಹೇಳುತ್ತಾರೆ ಕೇರಿ ಊರ ಹೊರಗೆ ಇರುತ್ತೆ ಎಂದು ನಾನು ಹೇಳುತ್ತೇನೆ ಕೇರಿ ಊರಿನ ಹೆಬ್ಬಾಗಿಲು ಎಂದು ಅವರು ತಮ್ಮ ಕವನದ ಸಾಲುಗಳನ್ನು ಮಾರ್ಮಿಕವಾಗಿ ನುಡಿದರು.
ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ ಸಾಬಿತಾ ಬನ್ನಾಡಿ ಹಾಗೂ ವಿವಿಧ ಕವಿಗಳು ಇದ್ದರು. ವಾಣಿ ಪೆರಿಯೋಡಿ ಈರಪ್ಪ ಸುತಾರ ಕಾರ್ಯಕ್ರಮ ಸಂಯೋಜಿಸಿದರು. ಕವಿಗೋಷ್ಠಿಯಲ್ಲಿ ದೇವು ಮಾಕೊಂಡ ಫಾತಿಮಾ ರಾಲಿಯಾ ಶುಭಾ ಮರವಂತೆ ದೇವರಾಜ ಹುಣಸಿಕಟ್ಟೆ ಸುಧಾ ಆಡುಕಳ ಅಬ್ದುಲ್ ಹೈ ತೋರಣಗಲ್ಕ್ರ ಕವನ ವಾಚಿಸಿ ಪ್ರೇಕ್ಷಕರ ಜನಮನ ಸೆಳೆದರು. ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಎಚ್ ಎಸ್ ಅನುಪಮಾ ಪ್ರಭುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವ ಸಾಮಾಜಿಕ, ಆರ್ಥಿಕವಾಗಿ ಸಧೃಡಗೊಳಿಸದಿದ್ದರೆ ವಿಫಲ: ಸುಭಾಸ ರಾಜಮಾನೆ

ವಿಜಯಪುರ : ಕಳೆದ 75 ವರ್ಷಗಳಿಂದ ಪ್ರಜಾತಂತ್ರ ಉಸಿರಾಡುತ್ತ ಹಾಗೋ ಹೀಗೋ ಹಾರಾಡುತ್ತಾ ಬಂದಿದೆ ಎಂದು ವಿಚಾರವಾದಿ ಸುಭಾಸ ರಾಜಮಾನೆ ಹೇಳಿದರು.
ಅವರು ನಗರದ ಕಂದಗಲ್ ಹನುಮಂತರಾಯ ರಂಗAದಿರದಲ್ಲಿ ಹಮ್ಮಿಕೊಂಡ ಕುಮಾರ ಕಕ್ಕಯ್ಯ ಪೋಳ ಬಿ. ಗಂಗಾಧರ ವೇದಿಕೆಯಲ್ಲಿ ಪ್ರಜಾಪ್ರಭುತ್ವ : ಯುವ ಸ್ಪಂದನದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಪೀಠಿಕೆಯಲ್ಲಿನ ಆಶಯಗಳು ನಾಮಕೆ ವಾಸ್ತೆ ಸೇರಿಸಿದ್ದಾರೆ. ಅದು ಇಲ್ಲಿಯವರೆಗೆ ಜಾರಿಯಾಗಿಲ್ಲ ಎಂದು ಸ್ವತಃ ಅಂಬೇಡ್ಕರ ಅವರೇ ಹೇಳಿದ್ದರು. ಸಾಮಾಜಿಕ, ಆರ್ಥಿಕವಾಗಿ ಸಧೃಡಗೊಳಿಸದಿದ್ದರೆ ವಿಫಲವಾಗುತ್ತದೆ ಎಂದರು.
ರಾಜಕೀಯ ಪ್ರಜಾತಂತ್ರ ಬಡ ದೀನ ದಲಿತರ ಆರ್ಥಿಕ ಪದ್ದತಿಗಾಗಿ ಕೃಷಿ, ಶಿಕ್ಷಣ ಆರೋಗ್ಯ ಸ್ಟೇಟ್ ಒಡೆತನದಲ್ಲಿರಬೇಕು. ಸಾಮಾಜಿಕವಾಗಿ ಏಳ್ಗೆ ಬಯಸದೆ ಇಲ್ಲದಿದ್ದರೆ. ಬಡವರಾಗಿಯೇ ಇರುತ್ತಾರೆ. ಇಲ್ಲದಿದ್ರೆ ರಾಜಕಾರಣಿಗಳು ತಮ್ಮ ಸ್ವ ಹಿತಾಸಕ್ತಿ ಬೆಳೆಸಿಕೊಂಡು ಹೋಗುತ್ತಾರೆ ಎಂದರು. ಇಂದು ನಾವು ಆರ್ಥಿಕವಾಗಿ ಸಮಾನತೆ ತರಬೇಕಾಗಿದೆ. ಪ್ರಜಾಪ್ರಭುತ್ವ ಉಳಿಸಿಕೊಂಡು ಹೊಗಬೇಕಾಗಿದೆ. ಇದರಿಂದ ಸರ್ವಾಧಿಕಾರಕ್ಕೆ ಮೂಗುದಾರ ಹಾಕಬಹುದು ಎಂದರು. 
ಈ ಸಂದರ್ಭದಲ್ಲಿ ಕಲ್ಯಾಣಿ ಎಂ ಎಸ್ ಮೋಹನ ಮೇಟಿ ಚೆನ್ನು ಕಟ್ಟಿಮನಿ, ಪ್ರಿಯಾಂಕಾ ಮಾವಿನಕಾಯಿ ಇದ್ದರು.

ಕ್ರಾಂತಿಕಾರಿ ಹಾಡು

 


ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ 2ನೇ ದಿನದ ಬೆಳಗಿನ ಅಧಿವೇಶನದಲ್ಲಿ
ಧಾರವಾಡ ಜಿಲ್ಲೆಯ ಹರಾಲಾಪುರದ ಅಗಿಅಆ ಕಲಾತಂಡದ ಶಂಬಯ್ಯಾ ಹಿರೇಮಠ ಬಸವರಾಜ ಶಿಗ್ಗಾoವ ಶರೀಫ್ ದೊಡಮನಿ ಈಶ್ವರ ಅರಳಿ ನಾಗರಾಜ ಗೌಡಣ್ಣವರ ಬಸವರಾಜ ಕರಡಿ ಮಲ್ಲಪ್ಪ ಮುಳಗುಂದ ಹಾಗೂ ಸಂಗಡಿಗರು ಕ್ರಾಂತಿಕಾರಿ ಹಾಡುಗಳ ಕಾರ್ಯಕ್ರಮ ನಡೆಸಿಕೊಟ್ಟರು.
ಭಾರತೀಯ ಪ್ರಜಾತಂತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವಂತಿರುವ ಇವರ ಹಾಡುಗಳಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಕಲಾವಿದರನ್ನು ಪ್ರೋತ್ಸಾಹಿಸಿದರು.ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವದ ಮೌಲ್ಯಗಳು ಸರಿಯಾಗಿ ಅನುಷ್ಠಾನವಾಗದಿರುವುದು ದುರಂತ: ಕಲ್ಯಾಣಿ ಎಂ ಎಸ್


ವಿಜಯಪುರ:ಯುವಜನರ ಕನಸು ಪ್ರಜಾಪ್ರಭುತ್ವದ ಕುರಿತು ಕನಸು ಹೇಗಿರಬೇಕೆಂದರೆ ಪ್ರಜಾಪ್ರಭುತ್ವದ ಮೌಲ್ಯಗಳು ಸರಿಯಾಗಿ ಅನುಷ್ಠಾನವಾಗದಿರುವುದು ದುರಂತ ಎಂದು ಯುವ ವಿಚಾರವಾದಿ ಕಲ್ಯಾಣಿ ಎಂ ಎಸ್ ಅವರು ಹೇಳಿದರು.

ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಎರಡನೇ ದಿನದ ಮೊದಲ ಗೋಷ್ಠಿ ಪ್ರಜಾಪ್ರಭುತ್ವ ಯುವ ಸ್ಪಂದನದಲ್ಲಿ ಮಾತನಾಡಿದರು.

ಪ್ರಜಾಪ್ರಬುತ್ವದ ಆಶಯಗಳನ್ನು ಚೆನ್ನಾಗಿ ಹರಡಬೇಕಾಗಿತ್ತು. ಅತ್ಯುತ್ತಮ ಸ್ಥಾನಕ್ಕೆ ಕರೆದುಹೋಗುವುದಾಗಿದೆ. ರಾಜಕೀಯ ಪ್ರಭುತ್ವದಲ್ಲಿ ಪ್ರಜಾಪ್ರಭುತ್ವ ಬಹಳ ಮಹತ್ವವಾದ ಪಾತ್ರ ವಹಿಸುತ್ತದೆ

ಪ್ರಜಾಪ್ರಭುತ್ವದಲ್ಲಿ ಯುವಜನರ ಪಾತ್ರ ಅನನ್ಯವಾಗಿದೆ. ಬೆಲೆ ಏರಿಕೆ ಸೇರಿದಂತೆ ಅನೇಕ ಸವಾಲುಗಳು ನಮ್ಮ ಮುಂದೆ ಇವೆ. ಪ್ರಜಾಪ್ರಭುತ್ವದ ಆಶಯಗಳಿಗೆ ನೀರು ಹಾಕಬೇಕು. ನಮ್ಮ ಮಕ್ಕಳನ್ನು ಸ್ಬತಂತ್ರವಾಗಿ ಬಿಡಬೇಕು. ಆಯ್ಕೆ ಯ ಸ್ವಾತಂತ್ರವನ್ನು ನಾವು ಪಡೆಯಬೇಕು. ಹೊರತು ಯಾರು ನಮಗೆ ಕೊಡುವುದಿಲ್ಲ. ಮಹಿಳೆಯರು ಸ್ವತಂತ್ರ ಕೊಡೋದು ಅಲ್ಲ. ಪಡೆದುಕೊಳ್ಳೋದು ಎಂದರು. 

 ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಎಚ್ಸೇ ಎಸ್ರಿ ಅನುಪಮಾ ಪ್ರಭುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸೂ ಸುಭಾಷ ಮಾನೆ ಟಿ ಎಸ್ ಗೊರವರ ಮೋಹನ ಮೇಟಿ ಮತ್ತು ಚೆನ್ನು ಕಟ್ಟಿಮನಿ ಇದ್ದರು.