Sunday, July 23, 2023

ಜು.29, 30 ರಂದು ಹಮ್ಮಿಕೊಂಡಿರುವ 10 ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆ ಭರದಿಂದ ಸಾಗಿದೆ: ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ ಹೇಳಿಕೆ

ಈ ದಿವಸ ವಾರ್ತೆ

ವಿಜಯಪುರ: ಪ್ರಬುದ್ಧ ಭಾರತದ ಆಶಯದೊಂದಿಗೆ ವಿಜಯಪುರ ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ ೨೯ ಮತ್ತು ೩೦ ರಂದು ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರು ಹೇಳಿದರು. 

ಅವರು ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸಮ್ಮೇಳನದ ಪೂರ್ವ ಸಿದ್ಧತೆಗಳ ಕುರಿತು ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಹಾಗೂ ಬೆಳ್ಳಿ ಸಂಭ್ರಮದ ವಿಶೇಷವಾಗಿ ಮೂಡಿ ಬರುತ್ತಿರುವ ಪ್ರೊ. ಎಚ್.ಟಿ. ಪೋತೆ ಅವರ ಜನಪ್ರಿಯ ನಾಟಕ ರಮಾಯಿ ಆಧಾರಿತ ಸುನೀಲ ಸುಧಕಾರ ನಿರ್ದೇಶನದ ರಮಾಸಾಹೇಬಾ ಕಿರು ಚಲನ ಚಿತ್ರದ ಟೀಜರ ಬಿಡುಗಡೆ ಮಾಡಿ ಮಾತನಾಡಿದರು. 

ಕರ್ನಾಟಕ ರಾಜ್ಯದ ವಿವಿದ ವಿಶ್ವವಿದ್ಯಾಲಯಗಳ ಉಪನ್ಯಾಸಕರು ಹಾಗೂ ನಾಡಿನ ಬುದ್ಧ, ಬಸವ ಹಾಗೂ ಅಂಬೇಡ್ಕರ ಚಿಂತನೆಯ ಲೇಖಕರು ಸಾಹಿತಿಗಳು ವಿವಿಧ ಗೋಷ್ಠಿಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ. ದಲಿತ ಸಾಹಿತ್ಯ ಪರಿಷತ್ತು, ಯಾವುದೇ ಒಂದು ಸಮಾಜಕ್ಕೆ ಸೀಮಿತವಾದುದ್ದಲ್ಲ. ಇದು ತುಳಿತಕ್ಕೊಳಗಾದ ಎಲ್ಲಾ ಸಮಾಜಗಳ ಧ್ವನಿಯಾಗಿ ಕೆಲಸ ಮಾಡುವಂತಹದು, ಸುಮಾರು ೨೯ ವರ್ಷಗಳ ಕಾಲ ನಿರಂತರವಾಗಿ ರಾಜ್ಯದಲ್ಲಿ ಬುದ್ಧ, ಬಸವ, ಹಾಗೂ ಅಂಬೇಡ್ಕರ್ ಚಿಂತನೆಯನ್ನು ಪ್ರಸಾರ ಮಾಡುವ ಕೆಲಸ ದ.ಸಾ.ಪ ಮಾಡಿಕೊಂಡು ಬರುತ್ತಿದೆ. ಬೆಳ್ಳಿ ಸಂಭ್ರಮದ ನಿಮಿತ್ಯ ವಿಜಯಪುರದಲ್ಲಿ ಅಖಿಲ ಭಾರತ ಮಟ್ಟದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸಮ್ಮೇಳನ ಬಹು ವೈಶಿಷ್ಟಗಳು ಹೊಂದಿದೆ ಎಂದರು. 

ಸಮ್ಮೇಳನದ ಮೊದಲ ದಿನ ೨೯-೦೭-೨೦೨೩ ರಂದು ಬೆಳಿಗ್ಗೆ ೮ ಗಂಟೆಗೆ ಕಂದಗಲ್ ಹನುಮಂತರಾಯ ರಂಗಮAದಿರದ ಮುಂದೆ ಸಾಹಿತಿ ದೊಡ್ಡಣ್ಣ ಭಜಂತ್ರಿಯವರು ಪರಿಷತ್ತಿನ ಧ್ವಜಾರೋಹಣ ನೇರವೇರಿಸುವುದೊಂದಿಗೆ ಸಮ್ಮೇಳನಕ್ಕೆ ಚಾಲನೆ ಸಿಗಲಿವೆ. ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರುಗಳಾದ ರಮೇಶ ಆಸಂಗಿ, ಅಭಿಷೇಕ ಚಕ್ರವರ್ತಿ, ಭಾಗವಹಿಸಲಿದ್ದಾರೆ. 

ಅಂದು ಬೆಳಿಗ್ಗೆ ೮.೩೦ಕ್ಕೆ ನಗರದ ಹೃದಯ ಭಾಗ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜರುಗುವ ಸಮ್ಮೇಳಾಧ್ಯಕ್ಷರ ಮೆರವಣಿಗೆಗೆ ನಾಗಠಾಣ ಕ್ಷೇತ್ರದ ಮಾಜಿ ಶಾಸಕ ರಾಜು ಆಲಗೂರ ಅವರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ಸಂಚಾಲಕರುಗಳಾದ ಅಡಿವೆಪ್ಪ ಸಾಲಗಲ್, ಚಂದ್ರಕಾAತ ಸಿಂಗೆ, ಶೇಷರಾವ್ ಮಾನೆ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಕಾರ್ಯಕ್ರಮದ ಮುಖ್ಯ ಘಟ್ಟ,  ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿ ಮತ್ತು ಬಿಟಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ.

ವಿಜಯಪುರ ಬುದ್ಧ ವಿಹಾರದ ಪೂಜ್ಯ ಸಂಘಪಾಲ ಬಂತೇಜಿಯವರು ನೇತೃತ್ವ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಸಚಿವರಾದ ಪ್ರಿಯಾಂಕ ಖರ್ಗೆಯವರು ರಮಾ ಸಾಹೇಬಾ ಕಿರು ಚಿತ್ರ ಹಾಗೂ ಪರಿಷತ್ತಿನ ಗ್ರಂಥಗಳ ಬಿಡುಗಡೆ ಮಾಡಲಿದ್ದಾರೆ. 

ಚಿಂತಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಮ್ಮೇಳನದ ಆಶಯ ನುಡಿ ಆಡಲಿದ್ದಾರೆ. ಗಜಲ್ ಕವಿ ಅಲ್ಲಾಗಿರಿರಾಜ್ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರ ನುಡಿ ಆಡಲಿದ್ದಾರೆ. ಸಮ್ಮೇಳನಾಧ್ಯಕ್ಷ ಪ್ರೊ.ಎಚ್.ಟಿ ಪೋತೆ ಅವರು ಸಮ್ಮೇಳನ ಅಧ್ಯಕ್ಷ ನುಡಿ ಆಡಲಿದ್ದಾರೆ. ಜವಳಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಪುಸ್ತಕ ಮಳಿಗೆ ಉದ್ಘಾಟನೆ, ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಜಿ ವಿಧಾನ ಪರಿಷತ್ತ ಸದಸ್ಯ ಡಿ.ಎಸ್. ವೀರಯ್ಯ ಅವರು ದಸಾಪ ಬೆಳ್ಳಿ ಸಂಭ್ರಮ ಕೈಪಿಡಿ ಬಿಡುಗಡೆ, ಸಿಂದಗಿ ಶಾಸಕ ಅಶೋಕ ಮನಗೂಳಿ, ಇತರ ಲೇಖಕರ ಕೃತಿ ಬಿಡುಗಡೆ ನೇರವೇರಿಸಲಿದ್ದಾರೆ. 

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ, ಸರ್ವಾಧ್ಯಕ್ಷರ ಪುಸ್ತಕ ಮಳಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ದ.ಸಾ.ಪ. ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬುದ್ಧ ಎಜುಕೇಶನ್ ಸಮಿತಿ ಪ್ರ. ಕಾರ್ಯದರ್ಶಿ ತುಕಾರಾಮ ಚಂಚಲಕರ, ಕನ್ನಡ ಸಂಸ್ಕೃತಿ ಸಹಾಯಕ ನಿರ್ದೇಶಕ ಬಿ.ನಾಗರಾಜ, ಲೇಖಕೀಯರ ಸಂಘದ ಅಧ್ಯಕ್ಷೆ ಹೇಮಲತಾ ವಸ್ತçದ ಭಾಗವಹಿಸಲಿದ್ದಾರೆ. 

ಮಧ್ಯಾಹ್ನ ೧ ಗಂಟಗೆ ಜರುಗುವ ಗೋಷ್ಠಿ-೧ ವಿಶೇಷ ಉಪನ್ಯಾಸ ಮತ್ತು ಸಂವಾದದ ನೇತೃತ್ವವನ್ನು ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದ ಪೂಜ್ಯ ಡಾ. ಕಲ್ಯಾಣಸಿರಿ ಬಂತೇಜಿಯವರು ವಹಿಸಿಕೊಳ್ಳಲಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಮ್. ಪುಟ್ಟಯ್ಯನವರು ಪ್ರಬುದ್ಧ ಭಾರತ ನಿರ್ಮಾಣ ಎಂಬ ವಿಷಯ ಮಂಡಿಸಲಿದ್ದಾರೆ. ಸಾಹಿತಿಗಳಾದ ಅರುಣ ಜೋಳದ ಕೂಡ್ಲಗಿ, ಕರಿಗೂಳಿ ಶಂಕೇಶ್ವರ, ಡಾ.ಸೋಮಕ್ಕ, ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಡಾ. ಸೂರ್ಯಕಾಂತ ಸುಜ್ಯಾತ, ಬಿ.ಎಂ.ಗುರುನಾಥ, ಪ್ರತಿಕ್ರಿಯೆ ನೀಡಲಿದ್ದಾರೆ. ಮಹಿಳಾ ವಿವಿ ಪ್ರಾಧ್ಯಾಪಕ ಡಾ. ನಾರಾಯಣ ಪವಾರ, ಡಾ. ಸಿದ್ಧಲಿಂಗಪ್ಪ ಕೋಟ್ನೇಕಲ್ಲ, ವೈ.ಸಿ. ಮಯೂರ, ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಮಧ್ಯಾಹ್ನ ೨.೩೦ ಗಂಟೆಗೆ ಜರುಗುವ ಗೊಷ್ಠಿ-೨ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ಧಣಗೌಡ ಪಾಟೀಲ ವಿಷಯ ಮಂಡಿಸಲಿದ್ದಾರೆ. ಸಾಹಿತಿಗಳಾದ ಡಾ.ಸುಜಾತ ಚಲವಾದಿ, ಡಾ.ಓಬಳೇಶ, ಡಾ. ಪ್ರೇಮ ಅಪಚಂದ, ಡಾ. ರಾಮಚಂದ್ರ ಗಾಣಪೂರೆ, ಶ್ರೀದೇವಿ ಉತ್ಲಾಸರ ಅವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಾಹಿತಿ ಸಂಘಟಕ ಅನೀಲ ಹೊಸಮನಿ, ಸಿ.ಎಸ್. ಆನಂದ, ಸಂದೀಪ ವಿಶ್ವನಾಥ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಸಂಜೆ -೪ ಗಂಟೆಗೆ ಜರುಗುವ ಗೋಷ್ಠಿ - ೩ ಸಮ್ಮೇಳನಾಧ್ಯಕ್ಷರ ಸಾಹಿತ್ಯ- ಅಧ್ಯಕ್ಷತೆಯನ್ನು ಸಾಹಿತಿ ಡಾ. ಚನ್ನಪ್ಪ ಕಟ್ಟಿ ವಹಿಸಲಿದ್ದಾರೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ವಿಕ್ರಮ ವಿಸಾಜಿ ಯವರು ಸೃಜನ ಸಾಹಿತ್ಯ ಕುರಿತು ಮಾತನಾಡಲಿದ್ದಾರೆ. ಕ.ವಿ.ವಿ ಧಾರವಾಡ ಪ್ರಾಧ್ಯಾಪಕರಾದ ಡಾ. ಮುದೇನೂರು ನಿಂಗಪ್ಪ ಅವರು ಸೃಜನೇತರ ಸಾಹಿತ್ಯ ಕುರಿತು ವಿಷಯ ಮಂಡಿಸಲಿದ್ದಾರೆ. ಕಲಬುರಗಿಯ ಸಾಹಿತಿ ಡಾ. ಕಿರಣ ಗಾಜನೂರ ಅವರು ಜೀವನ ಚರಿತ್ರೆಗಳ ಕುರಿತು ಮಾತನಾಡಲಿದ್ದಾರೆ. ಬೆಂಗಳೂರಿನ ಸಾಹಿತಿ ಡಾ. ಶಿವರಾಜ ಬ್ಯಾಡರ ಹಳ್ಳಿಯವರು ಸಂಶೋಧನೆ ಕುರಿತು ಮಾತನಾಡಲಿದ್ದಾರೆ. ಡಾ. ಶಿವಗಂಗಾ ಬಲಗುಂದಿ, ಪ್ರೊ. ಅಂಜನಪ್ಪ ಅವರು ಪ್ರತಿಕ್ರಿಯೆ ನೀಡಲಿದ್ದಾರೆ. ವಿಜಯಪುರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ, ಡಾ. ಜೈನೇಸ್ ಪ್ರಸಾದ, ಡಾ.ಬಸವರಾಜ ಪೂಜಾರ, ಮಹಿಳಾ ವಿ.ವಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಓಂಕಾರ ಕಾಕಡೆ ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಸಂಜೆ -೫.೩೦ ಗಂಟೆಗೆ ಜರುಗುವ ಗೋಷ್ಠಿ - ೪ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಕವಿಗಳಾದ ಡಾ.ಟಿ. ಯಲ್ಲಪ್ಪ ವಹಿಸಲಿದ್ದಾರೆ. ರಾಯಚೂರಿನ ಕವಿಗಳಾದ ಡಾ. ಆರೀಫರಾಜಾ ಆಶಯನುಡಿಯಾಡಲಿದ್ದಾರೆ. ವಿಜಯಪುರ ಕವಯತ್ರಿ ಇಂದುಮತಿ ಲಮಾಣಿ ಅತಿಥಿಗಳಾಗಿ ಹಾಗೂ ಕೋಲಾರದ ದ.ಸಾ.ಪ ಅಧ್ಯಕ್ಷ ಡಾ.ಜಯಮಂಗಲ ಚಂದ್ರಶೇಖರ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ನಾಡಿನ ಸುಮಾರು ೨೪ ಹೆಸರಾಂತ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಸಲಿದ್ದಾರೆ. 

ದಿನಾಂಕ : ೩೦-೦೭-೨೦೨೩ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಬೆಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭ ಶರಣ ಕಲಾ ಬಳಗದವರ ಸಮತಾ ಗೀತೆಗಳ ಮೂಲಕ ಪ್ರಾರಂಭವಾಗಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕ.ವಿ.ವಿ ಹಂಪಿಯ ಪ್ರಾಧ್ಯಾಪಕ ಡಾ. ಚಲುವರಾಜು ಅಭಿನಂದನ ನುಡಿ ಆಡಲಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ವಿವಿಧ ಭಾಗದ ಸಾಹಿತಿಗಳಾದ ಆರ್. ದೊಡ್ಡೇಗೌಡ, ವೀರ ಹನುಮಾನ, ಶ್ರೀಶೈಲ ನಾಗರಾಳ, ಡಾ. ಗವಿಸಿದ್ದಪ್ಪ ಪಾಟೀಲ, ಮುರ್ತುಜಾ ಬೇಗಂ ಕೊಡಗಲಿ, ಹಾರೋಹಳ್ಳಿ ರವೀಂದ್ರ, ಪರುಶರಾಮ ಶಿವಶರಣ, ಸಮಾಜ ಸೇವೆಯಲ್ಲಿ ನರೇಂದ್ರ ನಾಗವಾಲ, ದಲಿತ ಚಳುವಳಿಯಲ್ಲಿ ಮಳ್ಳೂರ ಶಿವಮಲ್ಲು, ಪತ್ರಿಕಾರಂಗದಲ್ಲಿ ಡಾ. ಸಂಜೀವಕುಮಾರ ಮಾಲಗತ್ತಿ, ರಾಜು ವಿಜಯಪುರ, ಚಿತ್ರಕಕಲೆಯಲ್ಲಿ ಸೌಜನ್ಯ ಕರಡೋಣಿ, ಸಂಗೀತದಲ್ಲಿ ಸಿ.ಆರ್. ನಟರಾಜ, ಸಿನಿಮಾ ಕ್ಷೆತ್ರದಲ್ಲಿ ದೇವು ಕೆ. ಅಂಬಿಗ ಅವರಿಗೆ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಸಂಜೆ ೭ ಗಂಟೆಗೆ ಜೀವನ ಸಿನಿ ಕ್ರಿಯೇಷನ್ಸ್ ಅರ್ಪಿಸುವ ರಮಾಸಾಹೇಬಾ ಕಿರುಚಿತ್ರ ಪ್ರದರ್ಶನ ಜರುಗಲಿದೆ.

ಇದೇ ಸಂದರ್ಭದಲ್ಲಿ ಉರಿವ ಕರುಳ ದೀಪ (ಕಾವ್ಯದ)ಲೇಖಕರಾದ ಬಿದಲೋಟಿ ರಂಗನಾಥ ಹಾಗೂ ಇರುವುದು ಒಂದೇ ರೊಟ್ಟಿ (ಕಾವ್ಯ) ಅವರಿಗೆ ಶ್ರೀಮತಿ ಚಂದ್ರಕಲಾ ಇಟಗಿ ಮಠ ದತ್ತಿ ಪ್ರಶಸ್ತಿ, 

ತಾಂಡ ಕಾದಂಬರಿ ಲೇಖಕರಾದ ಡಾ. ಶಾಂತಾನಾಯಕ ಶಿರಗಾನಹಳ್ಳಿ ಬೋಳೇ ಬಂಡೆಪ್ಪ ದತ್ತಿ ಪ್ರಶಸ್ತಿ, ಕಿಟಕಿಯಂಚಿನ ಮೌನ (ಕಥೆ)ಗೆ ರೇನುಕಾ ಹೆಳವರ ಅವರಿಗೆ ತಿಪ್ಪಣ್ಣ ಪೋತೆ ದತ್ತಿ ಪ್ರಶಸ್ತಿ, ಸೈಂಧವ ಸಂಕಥನದ (ಸಂಶೋಧನೆ) ಲೇ. ಪಿ.ಆರ್.ಡಿ ಮಲ್ಲಯ್ಯಕಟೇರ ಅವರಿಗೆ ಡಾ. ಶರಣಮ್ಮ ಗೋರೆಭಾಳ ದತ್ತಿ ಪ್ರಶಸ್ತಿ, ನೆಲರೂಪಿ (ವಿಮರ್ಶೆ) ಲೇ.ಡಾ.ಪ್ರಸನ್ನ ನಂಜಾಪುರ ಹಾಗೂ ಅಕ್ಷರ ಮೈತ್ರಿ ಲೆ. ಡಾ.ಗಿರೀಶ ಮುಗತಿ ಹಳ್ಳಿಯವರಿಗೆ ಶ್ರೀಮತಿ ವೆಂಕಟಲಕ್ಷö್ಮಮ್ಮ ದತ್ತಿ ಪ್ರಶಸ್ತಿ, ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್ (ಅನುವಾದ) ಲೇ. ಪ್ರಭುಲಿಂಗ ನೀಲೂರೇ ಅವರಿಗೆ ರಾಧಾಭಾಯಿ ಭೋರಗಾಂವಕರ ದತ್ತಿ ಪ್ರಶಸ್ತಿ, ಮಾತಿನ ಮಂಟಪ (ಹರಟೆ) ಲೇ. ಗೌಡಗೇರ ಮಾಯುಶ್ರೀಯವರಿಗೆ ಸಂಜಯ ಕುರಣೆ ದತ್ತಿ ಪ್ರಶಸ್ತಿ, ಉರಿಪಾದ (ಅಂಕಣ) ಲೇ.ಡಾ.ಎಚ್.ಡಿ.ಉಮಾಶಂಕರ ಅವರಿಗೆ ಲಿಂಗಣ್ಣ ಜಂಗಮರ ಹಳ್ಳಿ ದತ್ತಿ ಪ್ರಶಸ್ತಿ, ಅಂಬೇಡ್ಕರ್ ಮಾರ್ಗ (ವೈಚಾರಿಕ) ಲೇ. ಸೋಮಲಿಂಗ ಗೆಣ್ಣೂರ ವೆಂಕಟಯ್ಯ ಅಪ್ಪಗೆರೆ ದತ್ತಿ ಪ್ರಶಸ್ತಿ, ನಾ ಯಾರಿಗಲ್ಲದವಳು (ಸಂಪಾದನೆ) ಲೇ. ಡಾ. ಹೊಂಬಯ್ಯ ಹೊನ್ನಲಗೆರೆ, ಸಾರ್ಥಕ ಬದುಕು ನ್ಯಾಯಮೂರ್ತಿ ಶಿವರಾಜ ಪಾಟೀಲರವರ ಕುರಿತು ಲೇ. ಡಾ.ಅಮರೇಶ ಯಾತಗಲ್, ವಿಜಯಪುರ ಪ್ರಾದೇಶಿಕ ಪದಕೋಶ (ಮೊದಲ ಕೃತಿ) ಡಾ.ಪೂರ್ಣಿಮಾ ಧಾಮಣ್ಣವರ, ಗಾಂಧಿ ನೇಯ್ದಿಟ್ಟ ಬಟ್ಟೆ (ಮೊದಲ ಕೃತಿ)ರಾಯಸಾಬ ದರ್ಗಾ ಅವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಇದೇ ಸಂಧರ್ಭದಲ್ಲಿ ಬೆಂಗಳೂರು ವಿಭಾಗೀಯ ಸಂಯೋಜಕರಾದ ಗಣಪತಿ ಚಲವಾದಿ, ರಾಯಚೂರ ಜಿಲ್ಲಾ ದ.ಸಾ.ಪ ಅಧ್ಯಕ್ಷ ತಾಯರಾಜ್ ಮರ್ಚಟಹಾಳ, ಸಿಂಧನೂರು ತಾಲೂಕಾಧ್ಯಕ್ಷ ಹುಸೇನಪ್ಪ ಅಮರಾಪೂರ ಅವರಿಗೆ  ದ.ಸಾ.ಪ ಅತ್ಯುತ್ತಮ ಸಂಘಟನಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಮಧ್ಯಾಹ್ನ ೧ ಗಂಟೆಗೆ ಗೋಷ್ಠಿ - ೫ ಹೊಸ ತಲೆಮಾರಿನ ದಲಿತ ಸಾಹಿತ್ಯ ಸಾಂಸ್ಕೃತಿ ಸಮಸ್ಯೆ ಸವಾಲುಗಳ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಬೆಂಗಳೂರಿನ ವಿವಿ. ಪ್ರಾಧ್ಯಾಪಕರಾದ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ವಹಿಸಲಿದ್ದಾರೆ, ದಲಿತ ಕಾವ್ಯ ಕುರಿತು ಡಾ. ಲಿಂಗಣ್ಣ ಜಂಗಮರ ಹಳ್ಳಿ ದಲಿತ ಕಥೆ ಕುರಿತು ಡಾ. ಸುಭಾಸ ರಾಜಮಾನೆ, ದಲಿತ ಕಾದಂಬರಿ ನಾಟಕ ಕುರಿತು ಡಾ. ನೆಲ್ಲಿಕಟ್ಟೆ ಸಿದ್ಧೇಶ ಅವರು ವಿಷಯ ಮಂಡಿಸಲಿದ್ದಾರೆ. ಡಾ. ಲಕ್ಷಿö್ಮÃ ದೇವಿ ವೈ. ಪ್ರೊ. ರಮೇಶ ರಾಠೋಡ, ಸಂಜು ಕಂಬಾಗಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಮಧ್ಯಾಹ್ನ – ೨.೩೦ ಗಂಟಗೆ ಗೋಷ್ಠಿ -೬ ಕಾವ್ಯ ಸಂಭ್ರಮ ೨ ಅಧ್ಯಕ್ಷತೆಯನ್ನು ಡಾ. ಜಯದೇವಿ ಗಾಯಕವಾಡ, ಅವರು ವಹಿಸಲಿದ್ದಾರೆ. ಡಾ. ದಸ್ತಗೀರ ಸಾಬ ದಿನ್ನಿ ಆಶಯನುಡಿ ಆಡಲಿದ್ದಾರೆ. 

ಅತಿಥಿಗಳಾಗಿ ಕ.ಸಾ.ಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ವಿದ್ಯಾವತಿ ಅಂಕಲಗಿಯವರು ಭಾಗವಹಿಸಲಿದ್ದಾರೆ.

ಕವಿಗೋಷ್ಠಿಯಲ್ಲಿ ನಾಡಿನ ಹೆಸರಾಂತ ಸುಮಾರು ೩೪ ಜನ ಕವಿಗಳು ಭಾಗವಹಿಸಿ ಕವನ ವಾಚಿಸಲಿದ್ದಾರೆ.

ಸಂಜೆ ೪ ಗಂಟೆಗೆ ಸಮಾರೋಪ ಹಾಗೂ ಸನ್ಮಾನ ನೇತೃತ್ವವನ್ನು ಬೀದರ ಅಣಗೂರ ಬೌದ್ಧವಿಹಾರದ ಪೂಜ್ಯವರಜ್ಯೋತಿ ಬಂತೇಜಿಯವರು ವಹಿಸಿಕೊಳ್ಳಲಿದ್ದಾರೆ. ದ.ಸಾ.ಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ಎಚ್.ಟಿ. ಪೋತೆಯವರು ಸಮ್ಮೇಳನ ಅಧ್ಯಕ್ಷರ ನುಡಿ ಆಡಲಿದ್ದಾರೆ. ಬೆಂಗಳೂರಿನ ಕವಿ ಸುಬ್ಬು ಹೊಲೆಯಾರ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಿಳಾ ವಿವಿಯ ಪ್ರೊ. ಸಕ್ಪಾಲ ಹೂವಣ್ಣ, ಸಿದ್ದು ರಾಯಣ್ಣವರ, ಅಶೋಕ ಚಲವಾದಿ, ಎಸ್.ಎಸ್.ಟಿ. ನೌಕರ ಸಂಘದ ಅಧ್ಯಕ್ಷ ಬಿ.ಎಚ್. ನಾಡಗೇರಿಯವರು ಭಾಗವಹಿಸಲಿದ್ದಾರೆ. 

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. 

ಅಂದು ಸಂಜೆ ೭ ಗಂಟೆಗೆ ನಾಡಿನ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. 

ಸಮ್ಮೇಳನದ ೨ ದಿನ ವಿನಾಯಕ ಕಮತದ ದ.ಸಾ.ಪ ಗದಗ, ಚಿತ್ರಕಲಾ ಹಾಗೂ ಛಾಯಾಚಿತ್ರ ಪ್ರದರ್ಶನ ವಿಜಯಪುರದ ಪೊನ್ನಪ್ಪ ಕಡೇಮನಿ ಚಿತ್ರಕಲೆ ಪ್ರದರ್ಶನ ಲಕ್ಷö್ಮಣ ಹಂದ್ರಾಳ ಹಾಗೂ ಸತೀಶ ಕೆ ಛಾಯಾಚಿತ್ರ ಪ್ರದರ್ಶನ ನಡೆಸಲಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿಯವರು ಪತ್ರಿಕಾ ಗೋಷ್ಠಿಯಲ್ಲಿ ಸುಧೀರ್ಗವಾಗಿ ಮಾತನಾಡಿದರು. 

ಪತ್ರಿಕಾ ಗೋಷ್ಠಿಯಲ್ಲಿ ದ.ಸಾ.ಪ ರಾಜ್ಯ ಘಟಕದ ಖಜಾಂಚಿ ಡಾ.ಎಚ್. ಬಿ. ಕೋಲಕಾರ, ಕಾರ್ಯದರ್ಶಿ ಸುಭಾಸ ಹುದ್ಲೂರ, ಸಮ್ಮೇಳನದ ಸಂಯೋಜಕ ದ.ಸಾ.ಪ ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ, ತಾಲೂಕಾ ದ.ಸಾ.ಪ ಅಧ್ಯಕ್ಷೆ ಡಾ. ಪೂರ್ಣಿಮಾ ದಾಮಣ್ಣವರ, ವಿಭಾಗೀಯ ಅಧ್ಯಕ್ಷೆ ಡಾ. ಸುಜಾತಾ ಚಲವಾದಿ, ಸಾಹಿತಿ ದೊಡ್ಡಣ್ಣ ಭಜಂತ್ರಿ, ಎಸ್.ಸಿ./ಎಸ್.ಟಿ. ನೌಕರ ಸಂಘದ ಅಧ್ಯಕ್ಷ ಬಿ.ಎಚ್. ನಾಡಗೇರಿ, ಸುರೇಖಾ ರಾಠೋಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.