Friday, September 30, 2022

01-10-2022 EE DIVASA KANNADA DAILY NEWS PAPER

ಅನಾವರಣಗೊಂಡ ಪತ್ರಕರ್ತರ ಸಮ್ಮೇಳನ ಲಾಂಛನ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಿಎಂ ಲೋಕಾರ್ಪಣೆ


ವಿಜಯಪುರದಲ್ಲಿ ನಡೆಯಲಿರುವ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿಸಿದರು.

ಈ ದಿವಸ ವಾರ್ತೆ:

ವಿಜಯಪುರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದಲ್ಲಿ ನಡೆಯಲಿರುವ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು.

ನಗರದಲ್ಲಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಲೋಕಾರ್ಪಣೆ ಹಾಗೂ ವಿವಿಧ ಅಭಿವದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿಸಮ್ಮೇಳನಕ್ಕೆ ಶುಭಾಶಯ ಕೋರಿದರುಅಲ್ಲದೇ ಸಂಘದ ಸದಸ್ಯರು ಸಲ್ಲಿಸಿದ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳಜಿಲ್ಲಾಧಿಕಾರಿ ಡಾವಿಜಯಮಹಾಂತೇಶ ದಾನಮ್ಮನವರಎಸ್ಪಿ ಎಚ್.ಡಿಆನಂದಕುಮಾರಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿಲೋಕೇಶಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿಭವಾನಿಸಿಂಗ್ ಠಾಕೂರಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿಉಪಾಧ್ಯಕ್ಷ ಇಂದುಶೇಖರ ಮಣೂರಕಾರ್ಯದರ್ಶಿ ಅವಿನಾಶ ಬಿದರಿ ಮತ್ತಿತರರಿದ್ದರು.

Tuesday, September 20, 2022

ಟೆನಿಸ್‌ಬಾಲ್ ಕ್ರೀಕೇಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ



ಈ ದಿವಸ ವಾರ್ತೆ

 ವಿಜಯಪುರ : ವಿಜಯಪುರ ಜಿಲ್ಲಾ ಟೆನಿಸ್‌ಬಾಲ್ ಕ್ರೀಕೇಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಯಿತು. ರಾಜ್ಯಧ್ಯಕ್ಷರಾದ ಶ್ರೀಮತಿ ಶಾಯಿದಾ ಬೇಗಂ, ಕಾರ್ಯದರ್ಶಿಗಳಾ ಅಭೀದ ಹಕ್ಕೀಂ ಅವರು ಅಧಿಕಾರ ಹಸ್ತಾಂತರಿಸಿದರು. 



ಗೌರವ ಅಧ್ಯಕ್ಷರಾಗಿ ಡಾ. ಪ್ರಭುಗೌಡ ಪಾಟೀಲ, ಅಧ್ಯಕ್ಷರನ್ನಾಗಿ ಡಾ. ಬಾಬುರಾಜೇಂದ್ರ ನಾಯಕ, ಕಾರ್ಯಾಧ್ಯಕ್ಷರನ್ನಾಗಿ ಡಾ. ಅಶೋಕಕುಮಾರ ಜಾಧವ, ಎನ್.ಎಮ್. ಹೊಟಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಫಯಾಜ ಕಲಾದಗಿ, ಉಪಾಧ್ಯಕ್ಷರನ್ನಾಗಿ ಶ್ರವಣಕುಮಾರ ಮಹೇಂದ್ರಕರ,  ವಿದ್ಯಾರಾಣಿ ತುಂಗಳ, ಶ್ರೀಧರ ನಾಡಗೌಡ, ಎಂ.ಬಿ.ರಜಪೂತ, ಶಶಿಕಲಾ ಇಜೇರಿ, ವಿಜಯರಾಣಿ ನಿವರಗಿ, ಸಂಘಟನಾ ಕಾರ್ಯದರ್ಶಿಯಾಗಿ ಜಾಫರ ಅಂಗಡಿ, ಶ್ರೀಮತಿ ಪುಷ್ಪಾ ಮಹಾಂತಮಠ, ಶ್ರೀಕಾಂತ ಕಾಖಂಡಕಿ, ಜಂಟಿ ಕಾರ್ಯದರ್ಶೀಗಳಾಗಿ ಗಣೇಶ ಭೂಸಲೆ, ಅಬ್ಬಾಸಲಿ ತಡಲಗಿ, ಸೋಮಶೇಖರ ರಾಠೋಡ, ಪ್ರಕಾಶ ಬಳ್ಳಾರಿ, ಖಜಾಂಚಿ ಡಾ. ಸಂತೋಷ ದಂಡ್ಯಾಗೋಳ, ಜಂಟಿ ಖಜಾಂಚಿಗಳಾಗಿ ಮೋಹನ ಚವ್ಹಾಣ, ಅಪ್ಪು ರಾಠೋಡ, ಸಂಪರ್ಕ ಅಧಿಕಾರಿಗಳಾಗಿ ಚಾಂದ ವಸೀಮ  ಮುಕಾದಮ್, ತಾಂತ್ರಿಕ ಮೇಲ್ವಿಚಾರನ್ನಾಗಿ ಗಣೇಶ ಕಬಾಡೆ, ಸಲೀಂ ಬೇಪಾರಿ, ಆರೀಪ ಎಮ್. ಇನಾದಾರ, ಎಮ್.ಡಿ ಅತ್ತಾರ, ನಿರ್ದೇಶಕರುಗಳಾಗಿ ಅಶೋಕ ನಾಯಕ, ರಾಕೇಶ ರಜಪೂತ, ರವಿ ರಾಠೋಡ, ಸಂಜು ಶೀಳೀನ, ರಮೇಶ ಮಸಬಿನಾಳ, ರಾಜು ಕುಚಬಾಳ, ಜಿಲಾನಿ ನಾಟೀಕಾರ,  ಬಸವರಾಜ ಬಿ.ಕೆ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಫಯಾಜ ಕಲಾದಗಿ  ತಿಳಿಸಿದ್ದಾರೆ.

21-09-2022 EE DIVASA KANNADA DAILY NEWS PAPER

Sunday, September 18, 2022

ವಿಜಯಪುರ ಆಕಾಶವಾಣಿಯಿಂದ ನಾಡಿನಲ್ಲಿ ಜ್ಞಾನ ದಾಸೋಹ: ಡಾ.ವಿಜಯಮಹಾಂತೇಶ ದಾನಮ್ಮನವರ

 


ಈ ದಿವಸ ವಾರ್ತೆ

ವಿಜಯಪುರ : ವಿಜಯಪುರ ಆಕಾಶವಾಣಿ ಕೇಂದ್ರದ ರಜತ್ ಮಹೋತ್ಸವ ಸಂಭ್ರಮ ರಜತ ರವಿ ಕಾರ್ಯಕ್ರಮವು ಸೆಪ್ಟೆಂಬರ್ 18ರಂದು ಎಂಪಿ ಸ್ಟುಡಿಯೋದಲ್ಲಿ ಸಂಭ್ರಮದಿAದ ನಡೆಯಿತು.

ಪ್ರಸಾರ ಭಾರತಿ, ಭಾರತದ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, 1997ರ ಸೆಪ್ಟೆಂಬರ್ 18 ರಂದು ವಿಜಯಪುರ ಆಕಾಶವಾಣಿಯು ಜನ್ಮ ತಳೆಯಿತು. ಆ ದಿನ ವಿಜಯಪುರದ ಇತಿಹಾಸದಲ್ಲಿ ಒಂದು ಹೊಸ ಶಕೆ ಆರಂಭವಾಯಿತು. ಈ ಮೂಲಕ ಅವಿಭಜಿತ ವಿಜಯಪುರ ಜಿಲ್ಲೆಯ ಜನತೆಯ ಬಹುವರ್ಷಗಳ ನಿರೀಕ್ಷೆ, ಹಂಬಲ, ಹೋರಾಟ, ಕನಸುಗಳು ಆ ವೇಳೆಯಲ್ಲಿ ಸಾಕಾರಗೊಂಡಿತು ಎಂದು ತಿಳಿಸಿದರು.

ವಿಜಯಪುರ ಆಕಾಶವಾಣಿಯು 1997ರಿಂದಲೂ ತನ್ನ ಮೂಲ ಧೇಯೋದ್ದೇಶಗಳಾದ ಶಿಕ್ಷಣ, ಮಾಹಿತಿ ಮತ್ತು ಮನರಂಜನೆಗಳಿಗೆ ಅನುಗುಣವಾದ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸಿ, ಜ್ಞಾನ ದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.

ನಮ್ಮ ಸಂಸ್ಕೃತಿ, ಇತಿಹಾಸಗಳ ಎಲ್ಲಾ ಬೇರುಗಳು ಆಕಾಶವಾಣಿಯ ಧ್ವನಿ ಮುದ್ರಿಕೆಗಳಲ್ಲಿ ಭದ್ರವಾಗಿವೆ. ಇದೆ ಆಕಾಶವಾಣಿಯ ವಿಶೇಷತೆಯಾಗಿದೆ. ಈ ನೆಲದ ಜನಪದ ಸಿರಿಯದ ಗೀಗಿ, ಲಾವಣಿ, ಗೋಂಧಳಿ, ಲಂಬಾಣಿ, ಚೌಡಕಿ, ಪಾರಿಜಾತ, ಭಜನೆ, ಹಂತಿ ಪದಗಳು ಈಗಲೂ ಡಿಜಿಟಲ್ ಮಾಧ್ಯಮದಲ್ಲಿ ಸುರಕ್ಷಿತವಾಗಿರುವುದು ಆಕಾಶವಾಣಿ ಕೇಂದ್ರದ ಬಹುದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ಈಗ ಪ್ರತಿ ದಿನ ಅಂದಾಜು 15 ಲಕ್ಷ ಜನರಿಗೆ ಪ್ರಸಾರ ಸೇವೆ ಒದಗಿಸುತ್ತ ಕೇಂದ್ರವು ನಾಡಿನ ಸೇವೆಯಲ್ಲಿ ತೊಡಗಿದೆ ಎಂಬುದು ಜಿಲ್ಲೆಯ ಜನತೆಗೆ ಅಭಿಮಾನದ ಸಂಗತಿಯಾಗಿದೆ. ಕಳೆದ 25 ವರ್ಷಗಳಿಂದಲೂ ಕೇಂದ್ರದಿAದ ಅನೇಕ ಸೃಜನಶೀಲ ಹಾಗೂ ಕ್ರಿಯಾಶೀಲ ಕಾರ್ಯಕ್ರಮಗಳು ಸುಗಮವಾಗಿ ನಡೆದಿರುವುದರ ಹಿಂದೆ ಈ ಕೇಂದ್ರದ ತಾಂತ್ರಿಕ ಹಾಗೂ ಆಡಳಿತ ಅಧಿಕಾರಿಗಳು, ಸಿಬ್ಬಂದಿ ವರ್ಗದ ಶ್ರಮವಿದೆ. ಕೇಂದ್ರದಲ್ಲಿರುವ ಎಲ್ಲರೂ ಆಕಾಶವಾಣಿಯನ್ನು ಜನಸ್ನೇಹಿ ಹಾಗೂ ಜನಪರವಾಗಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಅವರ ಪ್ರಯತ್ನದಿಂದ ಅನೇಕ ಗೌರವ ಸನ್ಮಾನಗಳು ಕೇಂದ್ರಕ್ಕೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಉತ್ಸಾಹ, ಹುರುಪುಗಳೊಂದಿಗೆ ಈ ನಾಡಿನ ಜನಸೇವೆಯಲ್ಲಿ ತೊಡಗಿಕೊಂಡು ಸಕಾರಾತ್ಮಕ ಬದಲಾವಣೆಯ ಕಾರಣ ಕರ್ತನಾಗಿ ಹೊರಹೊಮ್ಮುವ ವಿಶ್ವಾಸವನ್ನು ವಿಜಯಪುರ ಆಕಾಶವಾಣಿ ಕೇಂದ್ರವು ಹೊಂದಿದೆ. ಕೇಳುಗ ಪ್ರಭುಗಳಾದ ನಾವುಗಳು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುತ್ತ ಸಂಪೂರ್ಣ ಸಹಕಾರ, ಬೆಂಬಲ ನೀಡೋಣ ಎಂದು ತಿಳಿಸಿದರು.



ಈ ವೇಳೆ ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಮಪೀರ ವಾಲೀಕಾರ ಅವರು ಮಾತನಾಡಿ, ವಿಜಯಪುರ ಆಕಾಶವಾಣಿಯು ಜನರ ಆಶೋತ್ತರಗಳಿಗೆ ಸ್ಪಂದಿಸಿ ಅವರಿಗೆ ಅವಶ್ಯಕವಾದ ಕಾರ್ಯಕ್ರಮಗಳನ್ನು ಕಳೆದ 25 ವರ್ಷಗಳಿಂದಲೂ ನೀಡುತ್ತ ಬಂದಿದೆ. ಆಕಾಶವಾಣಿ ಹಬ್ಬ, ರೈತರಿಗೆ ಸಾವಯವ ಕೃಷಿ ತರಬೇತಿ, ಜಿಲ್ಲೆಯ ಯುವ ಪ್ರತಿಭೆಗಳ ಅನಾವರಣ, ಬಿಎಲ್‌ಡಿಇ ಆರೋಗ್ಯದಂಗಳ ಕಾರ್ಯಕ್ರಮ, ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಿರುವುದು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸ್ವಾತಂತ್ರ‍್ಯ ಹೋರಾಟಗಾರರ ಬಗೆಗಿನ ಇತಿಹಾಸದ ಸರಣಿ ಜೊತೆಗೆ ಇನ್ನು ಅನೇಕ ಸರಣಿ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತ ಬಂದಿರುವುದು ಈ ಕೇಂದ್ರದ ವಿಶೇಷತೆಯಾಗಿದೆ ಎಂದು ತಿಳಿಸಿದರು

ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅವರು ಮಾತನಾಡಿ, ವಿಜಯಪುರ ಮತ್ತು ಬಾಗಲಕೋಟ ಅವಳಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕಲಾವಿದರನ್ನು, ಸಾಧಕ ಕೃಷಿಕರನ್ನು ಹುಡುಕಿ, ಗುರುತಿಸಿ ಅವರನ್ನು ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಆಕಾಶವಾಣಿ ಈಗಲೂ ನಿರಂತರ ಮಾಡುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಬಿ.ವಿ.ಶೀಧರ ಅವರು ಪ್ರಾಸ್ತಾವಿಕ ಮಾತನಾಡಿ, ವಿಜಯಪುರ ಆಕಾಶವಾಣಿಯು ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಜನರ ಆಪ್ತ ಮಿತ್ರನಾಯಿತು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕಳೆದ ಕೆಲವು ವರ್ಷಗಳ ಹಿಂದೆ ರೇಡಿಯೋ ಸೆಟ್ ಕೇಳುಗರ ಸಂಖ್ಯೆ ಶೇ.54ರಷ್ಟ್ಟು ಇತ್ತು. ಆದರೆ ಅವುಗಳ ಉತ್ಪಾದನೆ ಕಡಿಮೆ ಆಗಿರುವುದರಿಂದ ಅಲ್ಲದೆ ಮೊಬೈಲ್ ಮೂಲಕ ಕೇಳುವ ಸೌಲಭ್ಯ ದೊರೆತಿರುವುದರಿಂದ ರೇಡಿಯೋ ಸೆಟ್ ಕೇಳುಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮೊಬೈಲ್ ಮೂಲಕ ಕೇಳುವರ ಸಂಖ್ಯೆ ಶೇ.85 ರಷ್ಟಾಗಿದೆ. ಈಗ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ. ಆಕಾಶವಾಣಿಯು ತಂತ್ರಜ್ಞಾನದ ಎಲ್ಲ ಸಾಧ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ನ್ಯೂಸ್ ಆನ್ ಏರ್ ಆ್ಯಪ್ ಮೂಲಕ ಶ್ರೋತೃಗಳು ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳನ್ನು ವಿಶ್ವದ ಯಾವುದೇ ಭಾಗದಲ್ಲಿಯೂ ಕೇಳಬಹುದಾಗಿದೆ ಎಂದು ತಿಳಿಸಿದರು.

ಚಿಂತನ, ಭಕ್ತಿಗೀತೆ, ಚಿತ್ರಗೀತೆ, ವಾಟ್ಸಪ್ ಮೆಚ್ಚಿನ ಹಾಡು, ಜನಪದ ಹಾಡು, ಸುದ್ದಿ, ರೂಪಕ, ನಾಟಕ, ಸಂದರ್ಶನ, ಭಾಷಣ, ನೇರ ಪ್ರಸಾರ, ಫೋನ್–ಇನ್, ಕಿಸಾನ್ ವಾಣಿ, ಆರೋಗ್ಯ, ಯುವಕಾರಂಜಿ, ಯುವವಾಣಿ, ಬಾನುಲಿ ವರದಿ, ಚರ್ಚೆ, ಕವಿತಾ ವಾಚನ, ಸ್ವಾತಂತ್ರ‍್ಯ ಹೋರಾಟ ಹೆಜ್ಜೆಗಳು, ಮುಂತಾದ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಈಗಲೂ ಕೇಂದ್ರದಿಂದ ಪ್ರತಿದಿನ ಪ್ರಸಾರವಾಗುತ್ತಿವೆ ಎಂದು ತಿಳಿಸಿದರು.

ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸೋಮಶೇಖರ ರುಳಿ, ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್.ಎಸ್.ಶೇಖ ಮತ್ತು ಆಕಾಶವಾಣಿಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಾಹಕ ಡಾ.ಸೋಮಶೇಖರ ರುಳಿ ಅವರು ವಂದಿಸಿದರು. ಶಿವಕುಮಾರ ಮತ್ತು ಮಹಾನಂದ ಅವರು ನಿರೂಪಿಸಿದರು.

ಚಿಂತನ ಗೋಷ್ಠಿ: ಕಾರ್ಯಕ್ರಮದಲ್ಲಿ ಚಿಂತನ ಗೋಷ್ಠಿಗಳು ನಡೆದವು. ನಾಟಕಕಾರ, ಜನಪದ ಸಾಹಿತಿ ಬಿ.ಆರ್.ಪೊಲೀಸ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ.ಸೋಮಶೇಖರ ವಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಸಹಾಯವಾಣಿ ಸಂಯೋಜಕಿ ಸುನಂದಾ ತೋಳಬಂದಿ, ಕೃಷಿ ಇಲಾಖೆಯ ಆತ್ಮಾ ಯೋಜನೆಯ ಉಪ ಯೋಜನಾ ನಿರ್ದೇಶಕ ಡಾ.ಎಂ.ಬಿ.ಪಟ್ಟಣಶೆಟ್ಟಿ, ಪರಿಸರವಾದಿ ಅಂಬಾದಾಸ ಜೋಶಿ ಅವರು ಚಿಂತನಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ನಂತರ ಜರುಗಿದ ಕೇಳುಗರಿಂದ ಕೇಳುಗರಿಗೆ ಕಾರ್ಯಕ್ರಮದಲ್ಲಿ ನ್ಯಾಮತ್ ಭಾಷಾ ಹುಣಶ್ಶಾಳ, ಕಲ್ಯಾಣಿ ಪತ್ತಾರ, ಸಾಕ್ಷಿ ಬಿರಾದಾರ, ಅನಂತ ಟೀಕಾರೆ ಗುರುರಾಜ ಪತ್ತಾರ ಭಾಗವಹಿಸಿದ್ದರು.

ಮೋದಿ ಜನ್ಮ ದಿನಾಚರಣೆ ಹಿನ್ನೆಲೆ ದೇಶ ರಕ್ಷಕ ಪಡೆಯಿಂದ ರಕ್ತದಾನ ಶಿಬಿರ

 




ಈ‌ ದಿವಸ ವಾರ್ತೆ

ವಿಜಯಪುರ: ದೇಶ ರಕ್ಷಕರ ಪಡೆ ಆಕಾಶ ರಕ್ತ ಸಹಾಯವಾಣಿ ವತಿಯಿಂದ ವಿಜಯಪುರ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ 73 ನೆ ಜನ್ಮದಿನದ ಪ್ರಯುಕ್ತ ನಗರದ ಡೋಬಳೆ ಗಲ್ಲಿ ಈಶ್ವರ ಮಂದಿರ ದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು .



ಖ್ಯಾತ ಮಧುಮೇಹ ತಜ್ಞರಾದ ಬಾಬು ರಾಜೇಂದ್ರ ನಾಯಿಕ , ಸಮಾಜಸೇವಕರು ಶ್ರೀಶೈಲ ಹುಟಗಿ ಮತ್ತು ಖ್ಯಾತ ಉದ್ಯಮಿ ವಿಜಯ ಚವ್ಹಾಣ ಅವರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಿ, ದೇಶದ ಕಣ್ಮಣಿಗಳಾದ ನಮ್ಮಯುವಕರೇ ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸಲು ಸಾಧ್ಯ. ಆದ್ದರಿಂದ ಜಗಮೆಚ್ಚಿದ ದೇಶ ಕಂಡ ಅದ್ಭುತ ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮದಿನದ ಪ್ರಯುಕ್ತ ಇಂತಹ ಶಿಬಿರ ಆಯೋಜಿಸಿ ನಿಮ್ಮ ಸಾಮಾಜಿಕ ಜವಾಬ್ದಾರಿಯ ದರ್ಶನ ಮಾಡಿದ್ದೀರಿ ದೇಶ ರಕ್ಷಕರ ಪಡೆ ಸಂಘಟನೆ ಇನ್ನು ಬೆಳಿಯಲಿ ಇನ್ನು ಹೆಚ್ಚಿನ ಸಾಮಾಜಿಕ ಕೆಲಸ ಮಾಡಲು ಇನ್ನು ಹೆಚ್ಚಿನ ಶಕ್ತಿ ನಿಮಗೆ ದೊರೆಯಲಿ ಎಂದು ಹಾರೈಸಿದರು . ಈ ಸಂಧರ್ಭದಲ್ಲಿ ಸಂಘಟನೆಯ ದೇಶ ರಕ್ಷರ ಪಡೆ ಸಂಸ್ಥಾಪಕರಾದ ರೋಹನ ಆಪ್ಟೆ ಪದಾಧಿಕಾರಿಗಳಾದ ನ್ಯಾಯವಾದಿ ಅಜಯ ಸೂರ್ಯವಂಶಿ , ವಿಕ್ರಮ ತಾಂಬೇಕರ , ಪ್ರೇಮ ಕಲಕುಟಗಿ , ಕಿರಣ ಕೊಳುರಗಿ,ರಾಹುಲ ಪಾಟೀಲ , ಆದಿತ್ಯ ಬಡಿಗೇರ, ಸಿದ್ದು ಬರಗಿ , ಮಹಿಳಾ ಪಡೆ ಘಟಕದ ವಸುಂಧರಾ ದೇಶಪಾಂಡೆ, ಶ್ವೇತಾ ಕುಲಕರ್ಣಿ ,  ರಿಶಿತಾ ನಿಕ್ಕಮ ಜಯಶ್ರೀ ಕನ್ನೂರ ಸವಿತಾ ತಳವಾರ ಉಪಸ್ಥಿತರಿದ್ದರು.

Saturday, September 17, 2022

ಇಂದು ವಿಜಯಪುರ ಆಕಾಶವಾಣಿ ರಜತ್ ಮಹೋತ್ಸವ ಸಂಭ್ರಮ


ವಿಜಯಪುರ : ಪ್ರಸಾರ ಭಾರತಿ, ಭಾರತದ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ವಿಜಯಪುರ ಆಕಾಶವಾಣಿ ಕೇಂದ್ರದ ರಜತ್ ಮಹೋತ್ಸವ ಸಂಭ್ರಮ ರಜತ ರವಿ ಉದ್ಘಾಟನಾ ಸಮಾರಂಭವು ಎಂ.ಪಿ.ಸ್ಟುಡಿಯೋದಲ್ಲಿ ಸೆಪ್ಟೆಂಬರ್ 18ರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಸೋಮಶೇಖರ ರೂಳಿ


ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ, ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿಜಯಪುರ ಆಕಾಶವಾಣಿ ಎಂಜಿನಿಯರ್ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಶೇಖ್ ಅಧ್ಯಕ್ಷತೆ ವಹಿಸುವರು ಎಂದು ವಿಜಯಪುರ ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ಡಾ.ಸೋಮಶೇಖರ ರುಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿತ್ಯ ಓದಿನತ್ತ ಒಲವು ತೋರಿ: ಸಾತಿಹಾಳ




ವಿಜಯಪುರ: ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಓದಿನತ್ತ ಒಲವು ತೋರಿದರೆ ಗುರಿ ಮುಟ್ಟಲು ಸುಲಭ- ಸಾಧ್ಯವೆಂದು ಮಕ್ಕಳ ಸಾಹಿತಿ ಎಸ್. ಎಸ್. ಸಾತಿಹಾಳ ಅಭಿಪ್ರಾಯ ಪಟ್ಟರು. 

ಮುಳವಾಡದ ಸರಕಾರಿ ಕಿರಿಯ ಮಹಾ ವಿದ್ಯಾಲಯದಲ್ಲಿ ಸಿಂದಗಿಯ ವಿದ್ಯಾಚೇತನ ಪ್ರಕಾಶನ ಹಾಗೂ ಮಂಡ್ಯದ ಅಡ್ವೈಸರ್ ಮಾಸ ಪತ್ರಿಕೆ ಹಮ್ಮಿಕೊಂಡ ಪುಸ್ತಕ ಸಂಸ್ಕೃತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ನಿತ್ಯ ಪಠ್ಯದ ಜೊತೆಗೆ ಪಠ್ಯೇತರ ಗ್ರಂಥಗಳನ್ನು ಓದುವುದರಿಂದ ಜ್ಞಾನ ಸಂಪತ್ತು ವೃದ್ಧಿಯಾಗುತ್ತದೆ. ದಾರ್ಶನಿಕರ ಜೀವನ ಮೌಲ್ಯ ತಿಳಿದುಕೊಂಡು ಮುನ್ನಡೆಯಬೇಕೆಂದು ಹೇಳಿದರು.

ಕುಮಾರಿ ಅಕ್ಷತಾ ಜೋಗಿ, ವೇದಾ ಪತ್ತಾರ ನಾನು ಮೆಚ್ಚಿದ ಕಥೆ-ಕವನ ಕುರಿತು ಮಾರ್ಮಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಸ್. ಆರ್. ಪಾಟೀಲರು ಸಸಿಗೆ ನೀರೆರೆಯುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಂಡ್ಯದ ಅಡ್ವೈಸರ್ ಮಾಸ ಪತ್ರಿಕೆ ಕೊಡಮಾಡುವ 2021 ನೆಯ ಸಾಲಿನ ಅಡ್ವೈಸರ್ ಸಾಹಿತ್ಯ ಪ್ರಶಸ್ತಿಯನ್ನು ಖ್ಯಾತ ಮಕ್ಕಳ ಸಾಹಿತಿ ಪ. ಗು. ಸಿದ್ದಾಪುರ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಾಚಾರ್ಯರಾದ ಜಿ‌. ಎಸ್. ಟಕ್ಕಳಕಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಚೇತನ ಪ್ರಕಾಶನದ ಅಧ್ಯಕ್ಷರಾದ ಹ. ಮ. ಪೂಜಾರವರು ಪ್ರಾಸ್ತಾವಿಕ ನುಡಿಯಾಡಿದರು. ಡಾ. ಜಿ. ಎಸ್. ಭೂಸಗೊಂಡ, ಶಂಕರ ಬೈಚಬಾಳ ಕೆ. ಕೃಷ್ಣಮೂರ್ತಿ, ಸಿದ್ದು ಭೂಸರೆಡ್ಡಿ ಶಿವಕುಮಾರ ಶಿವಶಿಂಪಿ ಎಂ. ಬಿ. ಕಟ್ಟಿಮನಿ, ಬಸವರಾಜ ಸಿದ್ದಾಪುರ ಅರವಿಂದ ಸಿದ್ದಾಪುರ, ಅಡಿವೆಪ್ಪ ಬೀಳಗಿ ಪ್ರೊ ಎಲ್. ಟಿ. ಹುನಸಿಕಟ್ಟಿ, ಸುನಿತಾ ವಳಸಂಗ, ಕವಿತಾ ಸಂಕನೂರ,  ಮಣಿಹಾರ ಮುಂತಾದವರು ಉಪಸ್ಥಿತರಿದ್ದರು. ಪ್ರೊ ಎಸ್. ಎಲ್. ಬಾಡಗಿ ನಿರೂಪಿಸಿದರು. ಪ್ರಭಾವತಿ ಹೊಸಟ್ಟಿ ಪ್ರಾರ್ಥಿಸಿದರು. ಬಿ. ಎಸ್. ಚೌಧರಿ ವಂದಿಸಿದರು.

ವಿಶ್ವಕರ್ಮ ದೇವತೆಗಳ ಇಂಜಿನಿಯರ್ ; ಪತ್ರಕರ್ತ ಕಲ್ಲಪ್ಪ‌ ಶಿವಶರಣ

 

ಈ ದಿವಸ ವಾರ್ತೆ

ವಿಜಯಪುರ: ಕಾರ್ಮಿಕ ಸಮುದಾಯದಲ್ಲಿ ವಿಶ್ವಕರ್ಮ ದಿನಾಚರಣೆಗೆ ಹೆಚ್ಚಿನ ಮಹತ್ವವಿದೆ. ಯಂತ್ರಗಳ ಸುಗಮ ಮತ್ತು ಸುರಕ್ಷಿತ ಕೆಲಸದ ಜೊತೆಗೆ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ವಿಶ್ವಕರ್ಮನನ್ನು ಪೂಜಿಸುವ ಸಂಪ್ರದಾಯ ಇದೆ ಎಂದು ಯುವ ಪತ್ರಕರ್ತರಾದ ಕಲ್ಲಪ್ಪ ಶಿವಶರಣ ಹೇಳಿದರು.

        ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ವಿಶ್ವಕರ್ಮ ಭೂಮಿಯಲ್ಲಿ ಅರಮನೆಗಳನ್ನು, ಮಹಲುಗಳನ್ನು, ವಾಹನಗಳನ್ನು, ಆಯುಧಗಳನ್ನು ಸೇರಿದಂತೆ ಇನ್ನಿತರ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದ್ದು ಮಾದರಿಯಾಗಿದೆ ಎಂದು ಹೇಳಿದರು.



         ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ವಿಶ್ವಕರ್ಮರು ದೈವಿಕ ಬಡಗಿ, ದೇವತೆಗಳ ಇಂಜಿನಿಯರ್ ಆಗಿ, ಯಂತ್ರಶಾಸ್ತ್ರ ಮತ್ತು ವಾಸ್ತುಶಿಲ್ಪದ ವಿಜ್ಞಾನವಾದದ ಪ್ರತಿಪಾದಕರಾಗಿದ್ದಾರೆ. ಅವರ ಪರಿಶ್ರಮ ಹಾಗೂ ಕೌಶಲ್ಯಯುತ ಜೀವನದ ಮಾರ್ಗವನ್ನು  ನಾವೆಲ್ಲರೂ ಅನುಸರಿಸಬೇಕಾಗಿದೆ ಎಂದು ಹೇಳಿದರು.

         ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಸ್ನೇಹಾ ಹಕ್ಕಿ, ಮಧುಮತಿ ನಿಕ್ಕಂ, ಸರೋಜಿನಿ ಕಟ್ಟಿಮನಿ, ಅಂಬಿಕಾ ಶಿರಕನಹಳ್ಳಿ, ರೇಣುಕಾ ಭಜಂತ್ರಿ, ಕಾವೇರಿ ಅಂಕಲಗಿ, ಚಂದು ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Wednesday, September 14, 2022

ಜನ ಹೋಗದೇ ಇರೋದಕ್ಕೆ ಆಸರೆ ಮನೆಗಳು ಪಾಳು ಬಿದ್ದಿವೆ, ಕಳಪೆ ಕಾಮಗಾರಿಯಿಂದಲ್ಲ: ಗೋವಿಂದ ಕಾರಜೋಳ




ಈ ದಿವಸ ವಾರ್ತೆ

ವಿಜಯಪುರ : ಸರ್ಕಾರ ಆಸರೆ ಎಂಬ ಯೋಜನೆಯಡಿ 2009ರಲ್ಲಿ ಪ್ರವಾಹ ಪೀಡಿತರಿಗೆ ಮನೆ ನಿರ್ಮಾಣ ಮಾಡಿತ್ತು. ಆದರೆ, ಜನ ತಮ್ಮ ಊರು ಬಿಟ್ಟು ಅಲ್ಲಿಗೆ ಹೋಗದೇ ಇರುವುದಕ್ಕೆ ಮನೆಗಳು ಪಾಳುಬಿದ್ದಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು,  2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 100 ವರ್ಷದ ಇತಿಹಾಸ ಮೀರಿದ ಮಳೆ ಆಯ್ತು. ಅನೇಕ ಹಳ್ಳ, ಕೊಳ್ಳ ನದಿಗಳು ಉಕ್ಕಿ ಹರಿದು, ಅನೇಕ ಮನೆಗಳಿಗೆ ನೀರು ಹೊಯ್ತು. ಆ ಸಂದರ್ಭದಲ್ಲಿ ಸರ್ಕಾರದಿಂದ ಹಾಗೂ ಕೊಡುವ ದಾನಿಗಳಿಂದ ಹಣ ಪಡೆದು ಕೆಲವು ಗ್ರಾಮಗಳನ್ನು ನಿರ್ಮಾಣ ಮಾಡಿದರು. ಸರ್ಕಾರಿ ಜಮೀನು ಇರ್ಲಿಲ್ಲ, ಜಮೀನು ಖರೀದಿ ಮಾಡಿ ಮನೆಗಳನ್ನು ಕಟ್ಟಿ ಕೊಟ್ವಿ ಎಂದರು.

ಜನ ಪ್ರವಾಹ ಕಮ್ಮಿಯಾದ ಸಂದರ್ಭದಲ್ಲಿ, ಮತ್ತೆ ಹಳೆಯ ಊರುಗಳಿಗೆ ಹೋದರು. ಆ ಮನೆಗಳಿಗೆ ವಾಸಕ್ಕೆ  ಯಾರು ಹೋಗದೇ ಇರುವುದರಿಂದ ಜನ ನೀರಿನ ವ್ಯವಸ್ಥೆ ಪೈಪ್‌ಗಳನ್ನು, ಮೋಟಾರ್‌ಗಳನ್ನು ಕಿತ್ತುಕೊಂಡು ಹೋದರು. ಸರ್ಕಾರ ಆಸರೆ ಎಂಬ ಯೋಜನೆಯಡಿ 35 ಅಳತೆಯ ಸೈಟ್ ಕೊಟ್ಟು, ಮನೆ ಮಾಡಿಕೊಟ್ಟರು. ಯಾರು ಹೋಗಿಲ್ಲ ಅಂತ ಅವು ಪಾಳುಬಿದ್ದಿವೆ. ದಾನಿಗಳು ಸ್ವತಃ ಕಟ್ಟಿಕೊಟ್ಟಿದ್ದಾರೆ, ಸರ್ಕಾರವು ಕಟ್ಟಿಕೊಟ್ಟಿದೆ ಎಂದು ಹೇಳಿದರು.

2019-20 ನೇ ಸಾಲಿನಲ್ಲಿ 1205 ಕೋಟಿ ಪರಿಹಾರವನ್ನ ಒಂದೇ ಜಿಲ್ಲೆಗೆ ಕೊಟ್ಟಿದ್ದೇವೆ. 46,959 ಮನೆಗೆ ಕೊಟ್ಟಿದ್ದೇವೆ. ದೇಶದ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಯಾರಾದ್ರೂ ಕೊಡಲು ಸಾಧ್ಯನಾ. ದಯವಿಟ್ಟು ಯಾರಾದ್ರೂ ಒಬ್ಬರು ಹೇಳಿದ್ರೆ ಅದು ಶಾಶ್ವತ ಅಲ್ಲ. ರೆಕಾರ್ಡ್ ಇದೆ ಬೇಕಾದ್ರೆ ನಾನು ಕಳುಹಿಸಿಕೊಡುತ್ತೇನೆ ಎಂದರು.

15-09-2022 EE DIVASA KANNADA DAILY NEWS PAPER

14-09-2022 EE DIVASA KANNADA DAILY NEWS PAPER

13-09-2022 EE DIVASA KANNADA DAILY NEWS PAPER

Sunday, September 4, 2022

05-09-2022 EE DIVASA KANNADA DAILY NEWS PAPER

"ಕುಯಿಲು" ವಿಮರ್ಶಾ ಕೃತಿ ಲೋಕಾರ್ಪಣೆ

 



ಬಾಗಲಕೋಟೆ : ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಬಾದಾಮಿ ಇವರ ಸಹಯೋಗದಲ್ಲಿ ತಿಂಗಳ ಅತಿಥಿ ಯಾಗಿ ಕಥೆಗಾರರು,ಕವಿಗಳು, ಸಂಶೋಧಕರು ಆದ ಡಾ. ಚನ್ನಪ್ಪ ಕಟ್ಟಿ ಅವ್ಹಾನಿತರಾಗಿದ್ದರು, ಅವರ ಸಾಹಿತ್ಯ ಅವಲೋಕನ ಮತ್ತು "ಕುಯಿಲು" ಕೃತಿ ಬಿಡುಗಡೆ ಸಮಾರಂಭವು ಬಾದಾಮಿ ಯ ಸಾಹಿತ್ಯ ಪರಿಷತ್ ನ ಡಾ. ಬಿ ಎಸ್ ಗದ್ದಗಿಮಠ ವೇದಿಕೆಯಲ್ಲಿ  ನಡೆಯಿತು. 

ಈ ಸಂದರ್ಭದಲ್ಲಿ ಡಾ. ಚನ್ನಪ ಕಟ್ಟಿ ಅವರ "ಕುಯಿಲು" ವಿಮರ್ಶಾ ಕೃತಿಯನ್ನು  ಲೋಕಾರ್ಪಣೆ ಗೊಳಿಸಿದ  ನಗರದ ಖ್ಯಾತ ವೈದ್ಯರಾದ ಡಾ.ಹೆಚ್ ಎಫ್ ಯೋಗಪ್ಪನವರ್ ಅವರು  ಮನುಷ್ಯನು ಪ್ರಾಮಾಣಿಕ ಪ್ರಯತ್ನ ಮತ್ತು ವಿವೇಕವನ್ನು ಜಾಗ್ರತವಾಗಿಟ್ಟು ಕೊಂಡು ಸಾಹಿತ್ಯ ರಚಿಸಬೇಕು ಈ ದಿಶೆಯಲ್ಲಿ ಚನ್ನಪ್ಪ ಕಟ್ಟಿ ಅವರು ಪ್ರಾಮಾಣಿಕ ಪ್ರಯತ್ನ ದಿಂದ ಸಾಹಿತ್ಯ ರಚಿಸಿದ್ದಾರೆ ಕಟ್ಟಿ ಅವರ ವಿಮರ್ಶೆ ಕತ್ತರಿಸಿ,ಆಡಿಸಿ ಹಿರಿದು ತೋರಿಸುವುದಲ್ಲ ಬದಲಿಗೆ ತೆರೆದು ತೋರಿಸುವುದಾಗಿದೆ ಎಂದರು. "ಕುಯಿಲು"  ಕೃತಿಯಲ್ಲಿ ನ ಹನ್ನೆರಡು ವಿಮರ್ಶಾ ಲೇಖನಗಳಿಗೆ ಹಳೆಗನ್ನಡ ಕೃತಿಗಳ ಬಗೆಗಿನ ಒಳನೋಟ ವಿಭಿನ್ನ ವಾಗಿದೆ ,ಅನುಭಾವ ಸಾಹಿತ್ಯದ ಕುರಿತಾದ ಲೇಖನಗಳು ದರ್ಶನ ಮಾದರಿಯಲ್ಲಿವೆ , ವಚನಗಳು ಅನುವಾದ ಗೊಂಡ ಇತಿಹಾಸ ದ ಅವಲೋಕನ,ಕನಕದಾಸರ ದೃಷ್ಟಿಯಲ್ಲಿ ಮಹಿಳೆ ಇಂತಹ ಮಹತ್ತರವಾದ ಲೇಖನಗಳಿವೆ ಇಲ್ಲಿನ ಬಹುತೇಕ ಲೇಖನಗಳು ಬಹು ಬಿನ್ನವಾಗಿ ವಸ್ತು ನಿಷ್ಠ ಮತ್ತು ವಿಷಯ ನಿಷ್ಠ ವಾಗಿವೆ ನಮ್ಮ ಓದಿಗೆ ಈ ಕೃತಿ ಹೊಸ ಆಯಾಮ ನೀಡುವುದು ಎಂದು ಹೇಳಿ ಡಾ. ಚನ್ನಪ ಕಟ್ಟಿ ಅವರು  ವಿಮರ್ಶಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೃಷಿ ಮಾಡಲಿ ಎಂದು ಶುಭ ಹಾರೈಸಿದರು   

 ಇದೇ ಸಂದರ್ಭದಲ್ಲಿ ಡಾ.ಚನ್ನಪ್ಪ ಕಟ್ಟಿ ಅವರ ಸಾಹಿತ್ಯ ಅವಲೋಕನ ಮಾಡಿದ ಬೀಳಗಿಯ ಸರಕಾರಿ ಪದವಿ ಮಹಾ ವಿದ್ಯಾಲಯ ಕನ್ನಡ ಪ್ರಾಧ್ಯಾಪಕರಾದ ಡಾ.ವಿಜಯಶ್ರೀ ಇಟ್ಟಣ್ಣವರ್ ಅವರು ಕಟ್ಟಿ ಅವರು ಬಹುಶೃತ ಲೇಖಕರು ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಸಾಹಿತ್ಯ ಕೃಷಿಯನ್ನು ಆರಂಭಿಸಿದ ಇವರು ಕಾವ್ಯ,ಕಥೆ, ವಿಮರ್ಶೆ, ಸಂಶೋಧನೆ, ಅನುವಾದ ಹಾಗೂ ಜೀವನ ಚರಿತ್ರೆಯ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಹಾಗೂ ಬರವಣಿಗೆ ಬಗೆಯ ಶೃದ್ಧೆಯನ್ನಿಟ್ಟು ಕೊಂಡವರು ,ನಿರಂತರ ಅಭ್ಯಾಸದೊಂದಿಗೆ, ನೆಲದ ಒಡಲಿಗೆ ನೀರುಣಿಸುವ ಕಾರ್ಯ ಮಾಡುತ್ತಲೆ ವಿಶೇಷ ಫಸಲನ್ನು ನಾಡಿಗೆ ನೀಡಿದವರು. ಇವರ ಸಾಹಿತ್ಯದ ಜೀವ ದ್ರವ್ಯ ಸಂಸ್ಕೃತಿಯ ಶೋಧ ಮಾಡುವುದಾಗಿದೆ ಹಾಗೂ ವರ್ತಮಾನದೊಂದಿಗೆ ಅನುಸಂಧಾನ ಗೊಳಿಸುವದಾಗಿದೆ ಈ ಕಾರಣವಾಗಿಯೇ ಇವರು ವಿಭಿನ್ನ ಲೇಖಕರಾಗಿ ಕಂಡು ಬರುತ್ತಾರೆ. 
ಸಂಸ್ಕೃತಿಯ ಬಹುತ್ವವನ್ನು ತೋರಿಸುವುದನ್ನು ಸೃಜನಶೀಲ ನೆಲೆಯಲ್ಲಿ ಮಾಡಿದ ಇವರು ಅಪರೂಪದ ಕನ್ನಡ ಲೇಖಕರು ಎಂದು ಹೇಳಿ ನಮ್ಮದನ್ನು ನಾವು ಒಳ ನೋಟದಿಂದ ಕಾಣುವ ಬಗೆಗೆ ಮಾದರಿ ಆಗಿರುವ ಇವರ ಕೃತಿಗಳು ಓದುಗರನ್ನು ಆಕರ್ಷಿಸುವುದರ ಜೊತೆಗೆ ಚಿಂತನೆಯ ಹೊಸ ಮಾರ್ಗ ದತ್ತ ನಮ್ಮನ್ನು ಕರೆದುಕೊಂಡು ಹೋಗುತ್ತವೆ ಹೀಗಾಗಿ ಎಲ್ಲರೂ ಎಲ್ಲಾ ಕಾಲದಲ್ಲೂ ಓದುವ ಹಾಗೆ ರಚಿಸಿದ್ದು  ಇವರ ಹೆಗ್ಗಳಿಕೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯುವ ಕಥೆಗಾರರಾದ ಕಲ್ಲೇಶ ಕುಂಬಾರ ಅವರು ಮಾತನಾಡಿ ಡಾ. ಕಟ್ಟಿ ಅವರು  ಹೊಸ ತಲೆಮಾರಿನ ಕಥೆಗಾರರಿಗೆ ಮಾದರಿ ಆಗಿದ್ದಾರೆ ಅವರ ಕಥೆಯನ್ನು ಓದುವದರ ಮೂಲಕ ನಮ್ಮ ಕಥನದ ಮಾದರಿಯನ್ನು  ನಾವು ಮರು ರೂಪಿಸಿಕೊಳ್ಳ ಬಹುದಾಗಿದೆ  ಇವರ ಕಥೆಗಳಿಗೆ ಲೋಕದ ಸಂಗತಿಯನ್ನು ಕಾಣಿಸುವ ಶಕ್ತಿಯಿದೆ   ಮತ್ತು ಲೌಕಿಕ ಬದುಕನ್ನು ಪರಿಚಯಿಸುವುದರೊಂದಿಗೆ ಅಲೌಕಿಕ ಲೋಕದತ್ತ ಕೊಂಡೊಯ್ಯುತ್ತವೆ , ಕನ್ನಡದ ಶ್ರೇಷ್ಠ ಕಥೆಗಳ ಸಾಲಿಗೆ ಅವರ ರತ್ನಗಿರಿಯ ಮಾಹೆ, ಏಕತಾರಿ,ಸುಖದ ನಾದ ಹೊರಡಿಸುವ ಕೊಳಲು ಕಥೆಗಳು ಸೇರಿಕೊಂಡಿವೆ ಎಂದು ಹೇಳಿ ಕಟ್ಟಿ ಅವರಿಂದ ಮುಂದಿನ ಕಥೆ ಯಾವುದಿರಬಹುದು? ಎಂಬುದರ ಬಗ್ಗೆ ಕುತೂಹಲಿಯಾಗಿರುವೆ ಎಂದು ಹೇಳಿದರು. 
ನಂತರ ನಡೆದ ಸಂವಾದದಲ್ಲಿ ಬಿ ಕೆ ವೀರಲಿಂಗನಗೌಡರ, ವಿ ಟಿ ಪೂಜಾರ, ಸಂತೋಷ ಕಾಳನ್ನವರ, ಬಸಮ್ಮ ನರಸಾಪುರ,ಗುರು ಗಾಣಿಗೇರ ಅವರು ಭಾಗವಹಿಸಿ ಡಾ. ಚನ್ನಪ ಕಟ್ಟಿ ಅವರ ಸಾಹಿತ್ಯದ ವಿವಿಧ ಮಜಲುಗಳ ಹೊಲಳುಗಳ ಕುರಿತಾಗಿ ಚರ್ಚಿಸಿದರು. 


ನಂತರ ಡಾ. ಚನ್ನಪ ಕಟ್ಟಿ ಅವರು ಮಾತನಾಡಿ ನನ್ನ ಬರಹಕ್ಕೆ ಬಾದಾಮಿಯ ಪರಿಸರವು ಪುಷ್ಟಿಯನ್ನು ನೀಡಿದೆ. ಪ್ರತಿಯೊಬ್ಬ ಲೇಖಕನು ಬರೆಯುತ್ತಾ  ಹೋದಂತೆ  ಇರುವ ಎಲ್ಲ ಮಿತಿಗಳನ್ನು ಮೀರುತ್ತಾ ಸಾಗುತ್ತಾನೆ ಆ ಕೆಲಸ ನನ್ನಿಂದ ಆಗಿರುವ ಬಗೆಯನು ಗ್ರಹಿಸಿದ ಓದುಗ ಮಿತ್ರರಿಗೆ ಅಭಿನಂದಿಸುವೆ ಎಂದರು.
 ಹಾಗೆಯೇ ಬಾಗಲಕೋಟೆ ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಸದಸ್ಯರೆಲ್ಲರಿಗೂ ಧನ್ಯವಾದ ಸಲ್ಲಿಸಿದರು. ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಮಾತನಾಡಿದರು .ಡಾ. ಜಿ ಜಿ ಹಿರೇಮಠ , ಬಾಗಲಕೋಟೆ ಯ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ರಾದ ಶಿವಾನಂದ ಶೆಲ್ಲಿಕೇರಿ ವೇದಿಕೆಯಲ್ಲಿದ್ದರು ಮತ್ತು  ಬಾದಾಮಿ ಯ ಸಾಹಿತ್ಯ ಆಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.