Saturday, September 17, 2022

ವಿಶ್ವಕರ್ಮ ದೇವತೆಗಳ ಇಂಜಿನಿಯರ್ ; ಪತ್ರಕರ್ತ ಕಲ್ಲಪ್ಪ‌ ಶಿವಶರಣ

 

ಈ ದಿವಸ ವಾರ್ತೆ

ವಿಜಯಪುರ: ಕಾರ್ಮಿಕ ಸಮುದಾಯದಲ್ಲಿ ವಿಶ್ವಕರ್ಮ ದಿನಾಚರಣೆಗೆ ಹೆಚ್ಚಿನ ಮಹತ್ವವಿದೆ. ಯಂತ್ರಗಳ ಸುಗಮ ಮತ್ತು ಸುರಕ್ಷಿತ ಕೆಲಸದ ಜೊತೆಗೆ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ವಿಶ್ವಕರ್ಮನನ್ನು ಪೂಜಿಸುವ ಸಂಪ್ರದಾಯ ಇದೆ ಎಂದು ಯುವ ಪತ್ರಕರ್ತರಾದ ಕಲ್ಲಪ್ಪ ಶಿವಶರಣ ಹೇಳಿದರು.

        ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ವಿಶ್ವಕರ್ಮ ಭೂಮಿಯಲ್ಲಿ ಅರಮನೆಗಳನ್ನು, ಮಹಲುಗಳನ್ನು, ವಾಹನಗಳನ್ನು, ಆಯುಧಗಳನ್ನು ಸೇರಿದಂತೆ ಇನ್ನಿತರ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದ್ದು ಮಾದರಿಯಾಗಿದೆ ಎಂದು ಹೇಳಿದರು.



         ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ವಿಶ್ವಕರ್ಮರು ದೈವಿಕ ಬಡಗಿ, ದೇವತೆಗಳ ಇಂಜಿನಿಯರ್ ಆಗಿ, ಯಂತ್ರಶಾಸ್ತ್ರ ಮತ್ತು ವಾಸ್ತುಶಿಲ್ಪದ ವಿಜ್ಞಾನವಾದದ ಪ್ರತಿಪಾದಕರಾಗಿದ್ದಾರೆ. ಅವರ ಪರಿಶ್ರಮ ಹಾಗೂ ಕೌಶಲ್ಯಯುತ ಜೀವನದ ಮಾರ್ಗವನ್ನು  ನಾವೆಲ್ಲರೂ ಅನುಸರಿಸಬೇಕಾಗಿದೆ ಎಂದು ಹೇಳಿದರು.

         ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಸ್ನೇಹಾ ಹಕ್ಕಿ, ಮಧುಮತಿ ನಿಕ್ಕಂ, ಸರೋಜಿನಿ ಕಟ್ಟಿಮನಿ, ಅಂಬಿಕಾ ಶಿರಕನಹಳ್ಳಿ, ರೇಣುಕಾ ಭಜಂತ್ರಿ, ಕಾವೇರಿ ಅಂಕಲಗಿ, ಚಂದು ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

No comments:

Post a Comment