Tuesday, June 30, 2020

ಕಣ್ಣಿಗೆ ಕಾಣುವ ಪರಮಾತ್ಮನೇ ವೈದ್ಯ



ರೋಗಿಯ ಪಾಲಿನ ದೇವನಿವನು
ಮನುಜನ ಶರೀರಕೆ ಪ್ರೇರಣೆಯ ನೀಡುವನು
ದೀರ್ಘ ಆಯುಷ್ಯ ಕರುಣಿಸಿ
ಮರುಜನ್ಮ ನೀಡಿ ಬದುಕುಳಿಸುವ ವೈದ್ಯನಾರಾಯಣನಿವನೇ ನೋಡಾ!                                                
                "ಜಯಶಾಂತಲಿಂಗೇಶ್ವರ"

 ಈ ವಚನದಂತೆ ವೈದ್ಯ  ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ವೈದ್ಯರನ್ನು ಸಾಕ್ಷಾತ್ ನಾರಾಯಣ ನೆಂದು, ರಕ್ಷಕರೆಂದು, ದೇವರ ಸಮಾನವೆಂದು ಅರ್ಥ. ವೈದ್ಯನು ಮಾನಸಿಕ ಶಾರೀರಿಕ ಕಾಯಿಲೆಗಳಿಂದ ಕಾಪಾಡುತ್ತಾನೆ ಆದ್ದರಿಂದ ಅವರಿಗೆ ದೇವರ ಸ್ಥಾನ ಕೊಡಲಾಗಿದೆ. 

ನಮ್ಮ ಸಾಮಾನ್ಯ ಜನರ ಮಾನಸಿಕ ಶಾರೀರಿಕ ಕಾಯಿಲೆಗಳಿಂದ ಉಪಶಮನವನ್ನು ನೀಡಬೇಕಾದರೆ ಒಬ್ಬ ವೈದ್ಯ ತಾಯಿ ತಂದೆ ಗುರುವಿನ ಪಾತ್ರವನ್ನು ವಹಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.
ಒಬ್ಬ ರೋಗಿ ತನ್ನ ಸಮಸ್ಯೆಯನ್ನು ಒಬ್ಬ ವೈದ್ಯನಿಗೆ ಹೇಳಿಕೊಳ್ಳಬೇಕಾದರೆ ಮುಂಚಿತವಾಗಿ ವೈದ್ಯನ ವ್ಯಕ್ತಿತ್ವ  ಮಹೊನ್ನತವಾಗಿರಬೇಕು. ಹಾಗೆ ಇದ್ದಾಗಲೇ ರೋಗಿಗೆ ವೈದ್ಯನ ಮೇಲೆ ವಿಶ್ವಾಸ ರೂಪಗೊಂಡು ಆಗ ತನ್ನ ಸಮಸ್ಯೆಗಳನ್ನು ವಿವರಿಸುತ್ತಾರೆ.

ಹೀಗಿದ್ದ ಮೇಲೆ ವೈದ್ಯನಾದವನು ನಮಗೆ ದೇವದೂತನಾಗಿರಲು ಯೋಗ್ಯವಾಗಿರುವನು.
ರೋಗಿಯ ರೋಗ ಅರಿತು ಸಾಂತ್ವನದಿಂದ ಚಿಕಿತ್ಸೆ ನೀಡಿದರೆ ಆ ರೋಗಿಯ ರೋಗದಿಂದ ವಿಮುಕ್ತನಾಗಿ  ಬೇಗನೆ ಗುಣಮುಖನಾಗುವ ಚೇತರಿಕೆ ಕಂಡುಕೋಳ್ಳುವನು.

 ನಿಜಕ್ಕೂ ವೈದ್ಯರ ಸಾಹಸಕ್ಕೆ ಮೆಚ್ಚಲೇ ಬೇಕು ಎಷ್ಟೋ ಜನ ಬಂಜೆತನದ ಅಪಮಾನ ಹೊತ್ತು ದುಃಖ ಪಡುತ್ತಿದ್ದ ಮಹಿಳೆಯರಿಗೆ ಅವರ ಬಂಜೆತನದ ನಿವಾರಣೆ ಮಾಡಿ ತಾಯಿಯಾಗುವ ಸದ್ಭಾಗ್ಯವ  ಕರುಣಿಸಿ ಬಂಜೆತನಕೆ ಮುಕ್ತಿನೀಡಿದ  ವೈದ್ಯರಿಗೆ ದೊಡ್ಡ ಸಲಾಂ ಸಲ್ಲಿಸಲೇಬೇಕು.  ನಿಜಕ್ಕೂ ದೇವರ ಸಮಾನರೇ ಈ ನಮ್ಮ ವೈದ್ಯರ ತಂಡವು.  ಜೀವನವೇ ಬರಡಾಯಿತು ಎಂದು ತಲೆ ಮೇಲೆ ಕೈ ಹೊತ್ತು ಚಿಂತೆಗೀಡಾದ ರೋಗಿಗಳಿಗೆ ಚಿಂತೆಯ ಬಯ ದೂರ ಮಾಡಿ ದೈರ್ಯ ತುಂಬಿ ಹೊಸ ಬದುಕು ಕಟ್ಟಿಕೊಡುವವನೇ ಈ ನಮ್ಮ ಡಾಕ್ಟರ್.

ನಯ ವಿನಯ ನಾಜೂಕಿನಿಂದ ರೋಗಿಯ ಸಮಸ್ಯೆ ತಿಳಿದು ತಾಯಿಯಂತೆ ಮಮತೆ ತೋರಿ ಗುರುವಿನಂತೆ ಬುದ್ಧಿ ತಿಳಿ ಹೇಳಿ ರೋಗಿಯ ರೋಗವನ್ನು ವಿಮುಕ್ತಿ ಗೊಳಿಸುವುದೇ ಈ ವೈದ್ಯನು.  ಈ ವೈದ್ಯನ ವೃತ್ತಿ  ಇದು ಮಹಾನ್ ಪವಿತ್ರವಾದ ವೃತ್ತಿ .
ಮನುಜ ಕುಲಕ್ಕೆ ಸಂಜೀವಿನಿಯು ಈ ವೈದ್ಯರುಗಳು. 
ಇವರ ದಿನವನ್ನು ಆಚರಿಸುವುದು ನಮ್ಮ ಕರ್ತವ್ಯವೆಂದೇ ಭಾವಿಸೋಣ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅದ್ಧೂರಿಯಾಗಿ ಸಂಭ್ರಮದಿ ಆಚರಿಸುತ್ತಾ ಗೌರವಿಸಲೇಬೇಕು.

ಭಗವಂತನ ಇನ್ನೊಂದು ರೂಪವೀ ವೈದ್ಯ
ಬೇಗನೆ ಯಮನ ಬಳಿ ಬಿಡದೆ ನಮ್ಮ ಕಾಪಾಡುವ
ಮಹಾನ್ ವೈದ್ಯ ನಾರಾಯಣನೇ ಇತ

 ಈ ವೈದ್ಯರ ದಿನಾಚರಣೆಯನ್ನು ಹೇಗೆ ಆಚರಿಸಲಾಯಿತು ಎಂಬುದು ಸ್ವಲ್ಪ ಹಿನ್ನೆಲೆ ಮಾಹಿತಿ ತಿಳಿಯೋಣವೇ*
 ಹಿರಿಯ ವೈದ್ಯ ಮತ್ತು ಪಶ್ಚಿಮ ಬಂಗಾಳದ 2 ನೇ ಮುಖ್ಯಮಂತ್ರಿಯಾದ 
ಡಾ॥ ಬಿಧಾನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವವು ಒಂದೇ ದಿನದಲ್ಲಿ ನಡೆಯುತ್ತದೆ. ಜುಲೈ 1 1882 ರಂದು ಜನನ,ಅದೆ ದಿನಾಂಕದಂದು 1962 ರಲ್ಲಿ ಮರಣ ಹೊಂದಿದರು ಅದಕ್ಕಾಗಿ ಅವರ ಸ್ಮರಣಾರ್ಥವಾಗಿ ಹಾಗೂ ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.
 ಈ ದಿನ ಇಡೀ ವೈದ್ಯಕೀಯ ವೃತ್ತಿಗೆ ಗೌರವ ಸೂಚಿಸುವಂತ ದಿನವಾಗಿದೆ. 1991 ರಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು  ಕೇಂದ್ರ ಸರ್ಕಾರದ  ಮಾನ್ಯತೆ  ಮತ್ತು ಪ್ರತಿ ವರ್ಷ ಜುಲೈ  1 ರಂದು ಆಚರಿಸಲಾಗುತ್ತದೆ.

ಬನ್ನಿ ನಾಡಿನ ಜನರೇ ಇಂದು ವೈದ್ಯಕೀಯ ವೃತ್ತಿಗೆ ಮತ್ತು ವೈದ್ಯರಿಗೆ ಗೌರವ ಸೂಚಿಸಿ ನಮ್ಮ ಬದುಕಿನ ಮೌಲ್ಯ ಆಧಾರಗಳೇ ಇವರೆಂದು ಅರಿತು ಇವರ ದಿನ ಅತ್ಯಂತ ಭವ್ಯತೆಯಲ್ಲಿ ಆಚರಿಸೋಣ.


ಮಮತಾ ಗುಮಶೆಟ್ಟಿ
ವಿಜಯಪುರ

ಪತ್ರಿಕೆ ಎಂಬುದು ಒಂದು ನಾಡಿನ ಸಾಕ್ಷಿ ಪ್ರಜ್ಞೆ



ವಿಶ್ವಾದ್ಯಂತದ ಮಾಹಿತಿ ಕಲೆ ಹಾಕಿ
ಸಮಾಜದ ಹಿತ ದೃಷ್ಟಿಯ ಬಯಸಿ
ದಿನ ಬೆಳಗಾದರೆ ಸಾಕು
ನಮ್ಮ ಮನೆಯ ಅಂಗಳದಲ್ಲಿಹುದು
ದಿನದಸುದ್ದಿ ತಿಳಿಸುವ  ಅತಿಥಿಯಾಗಿ
ಈ ದಿನ ಪತ್ರಿಕೆಯು
ಆಚರಿಸುವ ಬನ್ನಿ ಪತ್ರಿಕೆಯ ದಿನಾಚರಣೆ ನಾವೆಲ್ಲರೂ ಸೇರಿ ಇಂದು

ಪತ್ರಿಕೆ ಎಂಬುದು ಒಂದು ನಾಡಿನ ಸಾಕ್ಷಿ ಪ್ರಜ್ಞೆ ,ದೇಶದ ಅಭಿವೃದ್ಧಿ ಏಕತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾದದ್ದು ಬಂಡವಾಳ ಶಾಹಿಗಳ ಕಪಿ ಮುಷ್ಟಿಗೆ ಒಳಗಾಗದೆ ಸತ್ಯವನ್ನು ಸಮಾಜಕ್ಕೆ ತೋರಿಸುವಂತದ್ದು. ಪತ್ರಕರ್ತರು ಪ್ರಾಮಾಣಿಕ ನಿಷ್ಠೆ ವರದಿಗೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಸಮಾಜದಲ್ಲಿ ನೊಂದವರ ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪತ್ರಕರ್ತರಿಗೆ ನಮ್ಮದೊಂದು ಹೃದಯಪೂರ್ವಕ ಧನ್ಯವಾದಗಳನ್ನು & ಅಭಿನಂದನೆಗಳನ್ನು  ಅರ್ಪಿಸಲೇಬೇಕು. 

ಹೃದಯಗಳ ಪಿಸು ಮಾತಿಗೂ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಒಗ್ಗೂಡಿಸಲು ಮತ್ತು ದಾಖಲಿಸಲು ಇರುವ ವೇದಿಕೆಯೇ ಈ ಪತ್ರಿಕೆಯು.
 ಸಾಮಾನ್ಯ ಆಸಕ್ತಿಯ ಪತ್ರಿಕೆಗಳು ವಿಶಿಷ್ಟವಾಗಿ ಸುದ್ದಿ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು ಹಾಗೂ ಸ್ಥಳೀಯ ಸುದ್ದಿ ಪ್ರಕರಣಗಳು ರಾಜಕೀಯ ಘಟನೆಗಳು ವ್ಯಾಪಾರ ಮತ್ತು ಹಣಕಾಸು ಅಪರಾಧ ತೀವ್ರ ಹವಾಮಾನ ಮತ್ತು ನೈಸರ್ಗಿಕ ವಿಪತ್ತುಗಳು ಒಳಗೊಂಡಂತೆ ಆರೋಗ್ಯ ಔಷಧ ವಿಜ್ಞಾನ ಮತ್ತು ತಂತ್ರಜ್ಞಾನ ಕ್ರೀಡೆ ಮತ್ತು ಮನರಂಜನೆ ಸಮಾಜ ಆಹಾರ ಮತ್ತು ಅಡುಗೆ ಬಟ್ಟೆ ಮತ್ತು ಮನೆ ಸಾಮಾನ್ಯವಾಗಿ ಕಾಗದದ ಆ ಪ್ರಮುಖ ಗುಂಪುಗಳನ್ನು ಪ್ರತಿಯೊಂದು ಭಾಗಗಳಾಗಿ ವಿಂಗಡಿಸಿ ಪ್ರಕಟಿಸುವುದೇ ಈ ಪತ್ರಿಕೆಯು.

1843 ನೇ ಜುಲೈ 1 ರಂದು ಪ್ರಾರಂಭವಾದ *ಮಂಗಳೂರು ಸಮಾಚಾರ* ವೆಂಬ ಪತ್ರಿಕೆಯ ಕರ್ನಾಟಕದ ಪ್ರಥಮ ಪತ್ರಿಕೆ ಎಂದು ಪರಿಗಣಿಸಲಾಗಿದೆ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದದ್ದು ಪಾಶ್ಚಾತ್ಯರ ಸಂಪರ್ಕವಾದ ಮೇಲೆ ಅವರು ಮುದ್ರಣ ಯಂತ್ರವನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು ನಂತರ ಅವರಿಂದಲೇ ಪತ್ರಿಕೆಗಳು ಪ್ರಾರಂಭವಾದವು. 

ಸಮೃದ್ಧ ಪತ್ರಿಕೆಗಳು ಆ ನಾಡಿನ ಸಂಸ್ಕೃತಿ ಹಾಗೂ ಸಾಹಿತ್ಯ ಸಮೃದ್ಧಿಯ ಪತ್ರಿಕೆ ಒಂದು ನಾಡಿನ ಸಮೃದ್ಧತೆ ಕೇವಲ ಭೌತಿಕ ವಸ್ತುಗಳಲ್ಲಿರುವುದಿಲ್ಲ ಅದು ನಾಡಿನ ಸಮೃದ್ಧತೆಯನ್ನು  ಒಳಗೊಂಡಿರುತ್ತದೆ ಪತ್ರಿಕೆಗಳು ಒಂದು ವೇಳೆ ನಿಂತು ಹೋದರೆ ನಿಜಕ್ಕೂ ಸಾಂಸ್ಕೃತಿಕದ ಆತ್ಮಹತ್ಯೆ ಆಗುವುದು. 

ಇತ್ತೀಚಿನ ದಿನಮಾನಗಳಲ್ಲಿ ಪತ್ರಿಕೆಗಳ ಓದುಗರೂ ಹೆಚ್ಚು ಪತ್ರಿಕೆಗಳು ಹೆಚ್ಚಾಗಿರುವುದನ್ನು ಕಾಣುವೆವು.ಪತ್ರಿಕೆಯಲ್ಲಿ ಸುದ್ದಿಯನ್ನು ಹರಿಸಬೇಕಾದರೆ ಪತ್ರಕರ್ತರ ಶ್ರಮ ಬಹಳಷ್ಟು ಇರುವುದು ಗಮನಿಸಬೇಕಾಗುತ್ತದೆ. ಏಕೆಂದರೆ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯ ನಿಶ್ಚಿತವಾಗಿ ನೇರವಾಗಿ ಇರುವಂತಹ ವಿಷಯಗಳಾಗಿರುತ್ತವೆ ಹಾಗಾಗಿ ಸುಳ್ಳು ಕಲ್ಲುಗಳ ಸುದ್ದಿ ಪ್ರಕಟಿಸಲಾಗಿದೆ ಅಂತಹ ಪತ್ರಿಕೆಗಳು ಜನಮನ್ನಣೆ ಪಡೆಯಲಾಗದು. ಜನಮನ್ನಣೆಗೆ ಪಾತ್ರವಾಗಬೇಕಾದರೆ ಆ ಪತ್ರಿಕೆಯಲ್ಲಿ ತುಂಬಾ ಅಗತ್ಯ ಮತ್ತು ಮುಖ್ಯ  ಸುದ್ದಿಗಳನ್ನು ಪ್ರಕಟಿಸಬೇಕು. ವಿಶ್ವಾದ್ಯಂತದ ಸುದ್ದಿಗಳನ್ನು ಒಗ್ಗೂಡಿಸಿ ಸತ್ಯನಿಷ್ಠೆ ಆದ ವಿಷಯವನ್ನು ಪ್ರಕಟಣೆ ಮಾಡಿ ಓದುಗರಿಗೆ ಜ್ಞಾನ ತುಂಬುವ ಕಾರ್ಯ ಪತ್ರಕರ್ತರದ್ದಾಗಿದೆ. ಒಂದು ವಿಷಯವನ್ನು ಸಂಗ್ರಹಣೆ ಮಾಡಬೇಕಾದರೆ ಅದಕ್ಕೆ ಅಲೆದಾಟ ಓಡಾಟ ತುಂಬಾ ಶ್ರಮದ ಕಾರ್ಯವಾಗಿರುವುದು. ದಿನ ಬೆಳಗಾದರೆ ಜನರಿಗೆ ಸುದ್ದಿ ಮುಟ್ಟಿಸುವ ಕಾರ್ಯ ಪತ್ರಿಕೆಯದ್ದಾಗಿದೆ.ಪತ್ರಿಕೆಯ ಮಹತ್ವ ಅಪಾರವಾದದ್ದು ಎಂಬುದು ಜನರಿಗೆ ಈಗಾಗಲೇ ಅರಿವಾಗಿದೆ. ಸಮಾಜದ ಒಡಕು ತೊಡಕುಗಳ ನಿರ್ಮೂಲನೆಗೆ ಧ್ವನಿ ಎತ್ತಿ ನಿಲ್ಲುವುದೇ  ಈ ಪತ್ರಿಕೆ. ಅದರಲ್ಲೂ ಜನರ ಕಷ್ಟಗಳಿಗೆ ಅವರ  ಭಾವಮಿಡಿತಕ್ಕೆ  ಅವರ ಸ್ಪಂದನೆಗೆ ಮೊದಲು ಓ ಗೊಡುವ  ಕಾರ್ಯ ಈ ಪತ್ರಿಕೆಯದ್ದೆ. ಹಾಗಾಗಿ ಈ ಪತ್ರಿಕೆಯ ಪತ್ರಕರ್ತರಿಗೆ  ನಾವು ಬಹು ದೊಡ್ಡ ಸಲಾಂ ನ್ನು ಹೇಳಲೇಬೇಕು. ತಮ್ಮ ಮನೆಯ ಚಿಂತೆಯನ್ನು ಬದಿಗೊತ್ತಿ ಸಮಾಜದ ಚಿಂತೆಯನ್ನು ಮಾಡುವ ಪತ್ರಕರ್ತರಿಗೆ ಧನ್ಯವಾದಗಳು ತಿಳಿಸುತ್ತಾ .
ಹಲವಾರು ಪತ್ರಿಕೋದ್ಯಮಿಗಳಿಗೆ ಪತ್ರಿಕೆಗಳಿಗೆ ಜುಲೈ 1 ಪತ್ರಿಕಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲೇಬೇಕು ನಾವೆಲ್ಲ ಒಗ್ಗೂಡಿ.

ಮಮತಾ ಗುಮಶೆಟ್ಟಿ
ವಿಜಯಪುರ

ವಿಜಯಪುರ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಶ್ರೀಮತಿ ಸುಜಾತಾ ಕಳ್ಳಿಮನಿ ಆಯ್ಕೆ




ಈ ದಿವಸ ವಾರ್ತೆ
ವಿಜಯಪುರ  : ವಿಜಯಪುರ ಜಿಲ್ಲಾ ಪಂಚಾಯತನ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಅಭ್ಯರ್ಥಿ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರು ಚುನಾಯಿತರಾಗಿದ್ದಾರೆ.

ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿ.ಪಂ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣಾ ಸಭೆಯಲ್ಲಿ ಒಟ್ಟು 22 ಸದಸ್ಯರು ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿ ಚುನಾಯಿತಗೊಳಿಸಿದರು. ಇವರ ವಿರುದ್ಧವಾಗಿ ಯಾವುದೇ ಮತಗಳು ಚಲಾಯಿಸಲ್ಪಡಲಿಲ್ಲ.


ಇವರ ಸಮೀಪದ ಪ್ರತಿಸ್ಫರ್ಧಿ ಬಿಜೆಪಿ ಪಕ್ಷದ ಶ್ರೀ ಭೀಮಾಶಂಕರ ಮಹಾದೇವಪ್ಪ ಬಿರಾದಾರ ಅವರ ಪರವಾಗಿ ಒಟ್ಟು 20 ಮತಗಳು ಮಾತ್ರ ಚಲಾವಣೆಗೊಂಡು ವಿರುದ್ಧವಾಗಿ 22 ಮತಗಳು ಚಲಾವಣೆಗೊಂಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರು ಪರಭಾವಗೊಂಡರು.

ಚುನಾವಣಾ ಪ್ರಕ್ರಿಯೆಯನ್ನು ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲನ್ ಬಿಸ್ವಾಸ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಇಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಈ ಇಬ್ಬರು ಮಾತ್ರ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದರು. ಶ್ರೀ ಭೀಮಾಶಂಕರ ಬಿರಾದಾರ ಅವರ ಎರಡು ನಾಮಪತ್ರಗಳು ಮತ್ತು ಸುಜಾತಾ ಕಳ್ಳಿಮನಿ ಅವರ ಒಂದು ನಾಮಪತ್ರ ಸಿಂಧುವಾಗಿದ್ದವು. ಒಟ್ಟು 42 ಸದಸ್ಯ ಬಲದ ಜಿಲ್ಲಾ ಪಂಚಾಯತನ ಚುಕ್ಕಾಣಿಯೂ ಕಾಂಗ್ರೇಸ್ ಕೈಗೆ ದಕ್ಕಿದ್ದು, ಬಿಜೆಪಿ ಅಭ್ಯರ್ಥಿ ಪರಾಭವಗೊಂಡಿದ್ದಾರೆ.

ಚುನಾವಣಾ ಸಭೆ ನಡೆಯುವ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಭೀಮಾಶಂಕರ ಪರವಾಗಿ ಮತ ಚಲಾವಣೆ ಸಂದರ್ಭದಲ್ಲಿ ಸ್ವಲ್ಪ ಸಮಯ ಗೊಂದಲವಾಗಿದ್ದರೂ ಪ್ರಾದೇಶಿಕ ಆಯುಕ್ತರ ಎಚ್ಚರಿಕೆ ಅನ್ವಯ ಚುನಾವಣಾ ಪ್ರಕ್ರಿಯೆ ಮುಂದುವೆರಸಲಾಯಿತು. ಇದೇ ಸಂದರ್ಭದಲ್ಲಿ ಪ್ರಥಮ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಅವರ ಪರವಾಗಿ ಮತ ಚಲಾವಣೆ ನಂತರ ಪರವಾಗಿದ್ದ ಅಭ್ಯರ್ಥಿಗಳು ಹೊರ ನಡೆದರು.
 
ಚುನಾವಣಾ ಸಮಯ ನಿಗದಿಪಡಿಸಿದ್ದ ಹಿನ್ನೆಲೆಯಲ್ಲಿ ಮತ್ತು ಮತದಾನಕ್ಕೆ ಅವಧಿ ನಿಗದಿ ಪಡಿಸಿದ್ದರ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ನಿಲ್ಲಿಸಲು ಅಸಾಧ್ಯ ಎಂದು ಪರಿಗಣಿಸಿ ಪ್ರಾದೇಶಿಕ ಆಯುಕ್ತರು ಮತ್ತು ಅಧ್ಯಕ್ಷಾಧಿಕಾರಿಗಳು ನಂತರದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಿದರು. ನಂತರ ನಡೆದ ಮತದಾನದಲ್ಲಿ ಸಾರವಾಡದ ಜಿಲ್ಲಾ ಪಂಚಾಯತ ಸದಸ್ಯರು ಆಗಿರುವ ಕಾಂಗ್ರೇಸ್ ಪಕ್ಷದ ಶ್ರೀಮತಿ ಸುಜಾತಾ ಸೋಮನಾಥ ಕಳ್ಳಿಮನಿ ಅವರು 22 ಮತಗಳನ್ನು ಪಡೆಯುವ ಮೂಲಕ ವಿಜಯಭವಿಯಾದರು.

ಜಿಲ್ಲಾ ಪಂಚಾಯತ ಅಧ್ಯಕ್ಷರ ಸ್ಥಾನವನ್ನು “ಹಿಂದುಳಿದ ವರ್ಗ – ಅ” ಗೆ ಮೀಸಲಿಡಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಉಪಸ್ಥಿತರಿದ್ದರು.

Friday, June 26, 2020

27-06-2020 EE DIVASA KANNADA DAILY NEWS PAPER

ಜಿಲ್ಲಾದ್ಯಂತ 40 ಚಾಲ್ತಿಯಲ್ಲಿರುವ ಕಂಟೇನ್ಮೆಂಟ್ ವಲಯಗಳು : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್



ಈ ದಿವಸ ವಾರ್ತೆ
  ವಿಜಯಪುರ : ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತಂತೆ ಅವಶ್ಯಕ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕಂಟೇನ್ಮೆಂಟ್ ವಲಯಗಳಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ತಹಶಿಲ್ದಾರರು ಮತ್ತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್-19 ಕುರಿತು ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳಬೇಕು. 60ಕ್ಕಿಂತ ಮೇಲ್ಪಟ್ಟ ವಯೋಮಾನದ ವಯೋವೃದ್ಧರು, 10 ವರ್ಷದೊಳಗಿನ ಮಕ್ಕಳು ಯಾವುದೇ ಪರಿಸ್ಥಿತಿಯಲ್ಲಿ ಹೊರಗೆ ಬರದಂತೆ ಮುನ್ನೆಚ್ಚರಿಕೆ ವಹಿಸಲು ಅವರು ಮನವಿ ಮಾಡಿದ್ದಾರೆ.
 
ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಾಥಮಿಕ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಲಕ್ಷಣ ಕಂಡುಬಂದಲ್ಲಿ ಯಾವುದೇ ರೀತಿಯ ಸ್ವಯಂ ಧ್ಯಾನಕ್ಕೆ ಒಳಗಾಗದೆ ಸೂಕ್ತ ಚಿಕಿತ್ಸೆಗೆ ಒಳಪಡಬೇಕು. ಮಳೆಗಾಲ ಇರುವುದರಿಂದ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟ ತೊಂದರೆಗಳು ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು. ತೀವ್ರ ಉಸಿರಾಟ ತೊಂದರೆ ಆಗುವವರೆಗೆ ವಿಳಂಬ ಮಾಡದೇ ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ಸಂಪರ್ಕಿಸುವಂತೆ ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. 

ಅತಿಹೆಚ್ಚು ಜನಸಂದಣಿ, ಕೊಳಗೇರಿ ಪ್ರದೇಶಗಳಲ್ಲಿ ಸಾರ್ವಜನಿಕರೆಲ್ಲರು ಎಚ್ಚರಿಕೆ ಇಂದ ಇದ್ದು ಸೂಕ್ತ ಮುಂಜಾಗೃತೆ ವಹಿಸಿಕೊಳ್ಳಬೇಕು. ಜಿಲ್ಲಾದ್ಯಂತ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವಂತೆ ತಿಳಿಸಿರುವ ಅವರು ತೀರಾ ಅವಶ್ಯಕ ಕಾರ್ಯಗಳಿದ್ದಾಗ ಮಾತ್ರ ಮನೆಯಿಂದ ಹೊರ ಬರುವಂತೆ ಮತ್ತು ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದ್ದಾರೆ. 

ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದವರು ತಕ್ಷಣ ಆಯಾ ಪಟ್ಟಣಗಳ ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ಮತ್ತು ಸ್ಥಳಿಯ ಆಡಳಿತ ವರ್ಗಕ್ಕೆ ಹಾಗೂ ಆಯಾ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗೆ ಮಾಹಿತಿ ಒದಗಿಸಬೇಕು. ಕಡ್ಡಾಯವಾಗಿ 14 ದಿನಗಳ ಕಾಲ ಹೋಮ್‍ಕ್ವಾರಂಟೈನ್‍ಗೆ ಒಳಪಡುವಂತೆಯೂ ಅವರು ತಿಳಿಸಿದ್ದು, ಇಂತಹ ವ್ಯಕ್ತಿಗಳು ಬಂದ ತಕ್ಷಣ ಸಹಾಯವಾಣಿ 1077 ಗೂ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ. 

ಜಿಲ್ಲಾದ್ಯಂತ ಕೋವಿಡ್-19 ಮುನ್ನೆಚ್ಚರಿಕೆಯಾಗಿ ಕಂಟೇನ್ಮೆಂಟ್ ವಲಯಗಳಲ್ಲಿ ತೀವ್ರ ಕಟ್ಟೆಚ್ಚರ ಒಹಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 85 ಕಂಟೇನ್ಮೆಂಟ್ ವಲಯಗಳನ್ನು ಗೊತ್ತುಪಡಿಸಿದ್ದು, ಚಾಲ್ತಿಯಲ್ಲಿರುವ 40 ಕಂಟೇನ್ಮೆಂಟ್ ಝೋನ್‍ಗಳಿವೆ. ಈವರೆಗೆ ಒಟ್ಟು 45 ಕಂಟೇನ್ಮೆಂಟ್ ವಲಯಗಳನ್ನು ಡಿ ನೋಟಿಫಿಕೇಶನ್ ಮಾಡಲಾಗಿದೆ. ವಿಜಯಪುರ ನಗರದಲ್ಲಿ 20, ವಿಜಯಪುರ ಗ್ರಾಮಾಂತರದಲ್ಲಿ 2, ಬಬಲೇಶ್ವರದಲ್ಲಿ 1, ತಿಕೋಟಾದಲ್ಲಿ 1, ಬ,ಬಾಗೇವಾಡಿಯಲ್ಲಿ ಯಾವುದೇ ಕಂಟೇನ್ಮೆಂಟ್ ವಲಯಗಳಿಲ್ಲ, ನಿಡಗುಂದಿಯಲ್ಲಿ 2, ಕೋಲ್ಹಾರ-ಇಲ್ಲ, ಇಂಡಿ-7, ಚಡಚಣ-1, ಮುದ್ದೇಬಿಹಾಳ-4, ತಾಳಿಕೋಟೆ-ಇಲ್ಲ, ಸಿಂದಗಿ-2, ದೇವರ ಹಿಪ್ಪರಗಿ-ಇಲ್ಲ ಹೀಗೆ ಒಟ್ಟು 40 ಕಂಟೇನ್ಮೆಂಟ್ ವಲಯಗಳು ಚಾಲ್ತಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾದ್ಯಂತ ಇರುವ ಕಂಟೇನ್ಮೆಂಟ್ ವಲಯಗಳ ವಿವರ ಈ ರೀತಿಯಾಗಿದೆ. ವಿಜಯಪುರ ನಗರದ ಅಲ್ಲಾಪುರ ಬೇಸ್, ಗ್ಯಾಂಗ್ ಬಾವಡಿ, ತಾಜ್ ಬಾವಡಿ, ರಾಜಾಜಿನಗರ, ಮೇಹಬೂಬ್‍ನಗರ(ಕೆ.ಎಚ್.ಬಿ), ಹರಣಶಿಕಾರ ಗಲ್ಲಿ, ಗೋಳಗುಮ್ಮಟ ಎದರು, ಆದರ್ಶನಗರ, ಗಿಸಾಡಿ ಓಣಿ(ಇಂಡಿ ರಸ್ತೆ), ಮಿಷನ್ ಕಂಪೌಂಡ್, ರೈಲ್ವೆ ನಿಲ್ದಾಣ, ಅಪ್ಸರಾ ಥೇಟರ್, ಸಕಾಫ್ ರೋಜಾ, ಹಬೀಬನಗರ(ಅಥಣಿ ರಸ್ತೆ), ನವಬಾಗ, ನಾಗರಬೌಡಿ, ಜುಮ್ಮಾ ಮಸಿದಿ ಹಿಂಬಾಗ, ಎಸ್.ಪಿ ಕಾಲೋನಿ, ಶಿಕಾರಖಾನೆ, ಅಕ್ಕಿ ಕಾಲೋನಿ, ವಿಜಯಪುರ ಗ್ರಾಮಾಂತರದಲ್ಲಿ ಹೆಗಡಿಹಾಳ ತಾಂಡಾ, ಅದರಂತೆ ಬಬಲೇಶ್ವರ ತಾಲೂಕಿನ ತೋನಶಾಳ, ತಿಕೋಟಾ ತಾಲೂಕಿನ ಇಟ್ಟಂಗಿಹಾಳ, ನಿಡಗುಂದಿ ತಾಲೂಕಿನ ಬಳಬಟ್ಟಿ, ವಡವಡಗಿ ತಾಂಡಾ, ಇಂಡಿ ತಾಲೂಕಿನ ಅಥರ್ಗಾ, ಮಿರಗಿ, ಸಾಲೋಟಗಿ ರಸ್ತೆ ಇಂಡಿ, ಹಿರೆದೇವಣೂರ, ಕೋರ್ಟ ಹತ್ತಿರ ಇಂಡಿ, ಹಿಂಗಣಿ, ಹಿಂಗಣಿ(ತೋಟ), ಚಡಚಣ ತಾಲೂಕಿನ ಹಲಸಂಗಿ, ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ನಗರ, ಗಣೇಶ ನಗರ, ಮುದ್ದೇಬಿಹಾಳ, ದೋಟೆಗಲ್ಲಿ, ಮುದ್ದೇಬಿಹಾಳ, ಎರಗಲ್, ಸಿಂದಗಿ ತಾಲೂಕಿನ ಆಲಮೇಲ್, ಮತ್ತು ವಾರ್ಡ್ ನಂಬರ 07 ಹಾಗೂ ಸಿಂದಗಿಗಳಲ್ಲಿ ಕಂಟೇನ್ಮೆಂಟ್ ವಲಯಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಅದರಂತೆ ವಿಜಯಪುರ ನಗರದ 5, ಬಬಲೇಶ್ವರದ 2, ತಿಕೋಟಾದ 3, ಬ.ಬಾಗೇವಾಡಿಯ 6, ನಿಡಗುಂದಿಯ 1, ಇಂಡಿಯ 3, ಚಡಚಣದ 3, ಮುದ್ದೇಬಿಹಾಳದ 3, ತಾಳಿಕೊಟೆಯ 7, ಸಿಂದಗಿಯ 6, ದೇವರ ಹಿಪ್ಪರಗಿಯ 6 ಕಂಟೇಂನ್ಮೆಂಟ್ ವಲಯಗಳು ಸೇರಿದಂತೆ ಒಟ್ಟು 45 ವಲಯಗಳನ್ನು ಡಿ ನೋಟಿಫಿಕೇಶನ್ ಮಾಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Monday, June 22, 2020

23-06-2020 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಸೋಮವಾರ ಮತ್ತೆ 15 ಕೋವಿಡ್-19 ಪಾಸಿಟಿವ್ : ತ್ರಿಶತಕ ದಾಟಿದ ಕೋರೋನಾ


ಈ ದಿವಸ ವಾರ್ತೆ
ವಿಜಯಪುರ  : ಜಿಲ್ಲೆಯಲ್ಲಿ ಈವರೆಗೆ ಒಟ್ಟು 301 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 74 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ 15 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ 9170 (60 ವರ್ಷದ ಹೆಣ್ಣು) ರೋಗಿ ಸಂಖ್ಯೆ 9171 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9172 (32 ವರ್ಷದ ಹೆಣ್ಣು) ರೋಗಿ ಸಂಖ್ಯೆ 9173 (28 ವರ್ಷದ ಹೆಣ್ಣು) ರೋಗಿ ಸಂಖ್ಯೆ 9175 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9176 (70 ವರ್ಷದ ಗಂಡು) ಇವರಿಗೆ ರೋಗಿ ಸಂಖ್ಯೆ 6246 ದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ.

ರೋಗಿ ಸಂಖ್ಯೆ 9168 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9169 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9177 (30 ವರ್ಷದ ಗಂಡು) ರೋಗಿ ಸಂಖ್ಯೆ 9178 (20 ವರ್ಷದ ಗಂಡು) ರೋಗಿ ಸಂಖ್ಯೆ 9179 (52 ವರ್ಷದ ಹೆಣ್ಣು) ರೋಗಿ ಸಂಖ್ಯೆ 9182 (50 ವರ್ಷದ ಗಂಡು) ಇವರಿಗೆ ಐಎಲ್‍ಐ ಸೋಂಕು ತಗುಲಿರುವುದು ದೃಢಪಟ್ಟಿದೆ.

 ರೋಗಿ ಸಂಖ್ಯೆ 9174 (68 ವರ್ಷದ ಹೆಣ್ಣು) ರೋಗಿ ಸಂಖ್ಯೆ 9181 (56 ವರ್ಷದ ಗಂಡು) ಇವರಿಗೆ ತೀವ್ರ ಉಸಿರಾಟದ ತೊಂದರೆ - ಸಾರಿ ಹಾಗೂ  ರೋಗಿ ಸಂಖ್ಯೆ 9180 (33 ವರ್ಷದ ಗಂಡು) ಇವರಿಗೆ ರೋಗಿ ಸಂಖ್ಯೆ 6588 ದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 34132 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು 301 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 12808 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 21097 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 7 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 220 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 76 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 26989 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 26612 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 76 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Sunday, June 21, 2020

22-06-2020 EE DIVASA KANNADA DAILY NEWS PAPER

ಸೂರ್ಯಗ್ರಹಣವಂತೆ!

ಭೂಮಿ -ಭಾನು ಸಹಜ ಪಥದಲ್ಲಿ 
ಚಲಿಸುತ್ತಿರಲು ಸರಳ ಚಲನೆಯಲ್ಲಿ
ಚಂದ್ರ ಬರಲು ಮಧ್ಯದಲ್ಲಿ
ಸೂರ್ಯಗ್ರಹಣವಂತೆ! ಧರಣಿಯಲಿ

ಬೆಳಕಿಗೆ ನೆರಳು ನೆರಳಾಗುವ ನೋಟ, 
ನೆರಳು- ಬೆಳಕಿನಾಟ. 
ಬಾನಬೆರಗು 'ಅವನಿ'ಗೆ ಬೆರಗಿನ ನೋಟ, 
ಶಶಿ -ಭಾಸ್ಕರರಾಟ. 

ಹಗಲೊಳಗೆ ಕತ್ತಲಾಗುವ
ಗಗನದ ಅದ್ಭುತ. 
ಮನದೊಳಗೆ ದಿಗಿಲಾಗುವ 
ಕೌತುಕದ ದಿಗಂತ. 

ಮುಗಿಲ ಮೇಲಣ ಚೆಲುವು, 
ಕಣ್ತುಂಬುವ ಬದಲು.
ಹೇಳುವರು ಗೊಂದಲ ಹಲವು, 
ವಿವೇಕತೆಯೇ ಅದಲು-ಬದಲು. 

ನೀರು ಕುಡಿಯದ ನಿರಾಹಾರ, 
ಉಪವಾಸವಂತೆ. 
ಭವಿಷ್ಯವೇ ಗೊತ್ತಿರದವರ
ರಾಶಿಫಲವಂತೆ. 

ಬೆಡಗಿನಲ್ಲಿ ಭಾನುತೋರುವ 
ಬಾನಾಟ, 
ಕತ್ತಲೆ -ಬೆಳಕಿನಾಟ. 
ಮುಗಿಲ ಮೇಲೆ ತೋರುವ. 
ಮಿಗಿಲಾಟ, 
ಅಂಧತೆಯೇ ಮೇಲಾಟ. 

ಅಂಬರೀಷ ಎಸ್. ಪೂಜಾರಿ. 

Saturday, June 20, 2020

ಒಬ್ಬ ಮಾದರಿ ವ್ಯಕ್ತಿ ನನ್ನ ತಂದೆ



“ಒಬ್ಬ ತಂದೆಯ ಮನಸ್ಸು ನಿಸರ್ಗದ ಮೇರುಕೃತಿಯಿದ್ದಂತೆ”
                ಹಾಗೆ ನನ್ನ ತಂದೆ ನನ್ನ ಜೀವನದ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು. ಅದೇ ತರಹ ಒಬ್ಬ ನಾಯಕನೂ ಮತ್ತು ಸ್ನೇಹಿತನೂ ಕೂಡ. ಅವರ ಆ ಒಂದು ಹೆಸರೇ ನನ್ನ ಜೀವನದ ಸ್ಪೂರ್ಥಿಯ ಚಿಲುಮೆ. 
                 ನನ್ನ ತಂದೆಯ ಹೆಸರು ಬಾಬು ತಾಳಿಕೋಟಿ. ನಾನು ಯಾವಾಗಲು ಅವರನ್ನು ಅಪ್ಪಾಜಿ ಅಂತಾನೆ ಕರೆಯೋದು. ಅವರು ಒಬ್ಬ ಯಶಶ್ವಿ ಉದ್ಯಮಿಯಾಗಿದ್ದರು. ಅವರ ಸಮಯಪ್ರಜ್ಞೆ, ಪ್ರಾಮಾಣಿಕತೆ, ಕರುಣಾಮಯೀ ಹೃದಯ, ಅವರನ್ನು ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಒಬ್ಬ ಅತ್ಯುನ್ನತ ಗೌರವಯುತ ವ್ಯಕ್ತಿಯನ್ನಾಗಿಸಿದ್ದವು. ಅವರು ನನ್ನ ಜೀವನದ ಬಹು ವಿಶೇಷ ವ್ಯಕ್ತಿಯಾಗಿದ್ದರು. ಈಗ ಅವರು ನನ್ನೊಂದಿಗೆ ಇಲ್ಲದಿದ್ದರೂ ಅವರು ನೆನಪುಗಳು ಹಾಗೆ ನಮ್ಮೊಂದಿಗಿವೆ. 
              ಅವರು ಜೀವನದಲ್ಲಿ ಏನೂ ಹೇಳದೆ ಹೋದರು ಒಬ್ಬ ಒಳ್ಳೆಯ ಮನುಷ್ಯನಾಗಿ ಹೇಗೆ ಬದುಕಬೇಕೆಂಬುದ್ದನ್ನು ಕಲಿಸಿ ಹೋದರು. ಅದೇ ತರಹ ನನ್ನ ಶಿಕ್ಷಣದ ಅಭಿರುಚಿಯಲ್ಲಿ ಯಾವುದೇ ತರಹ ವಿರೋಧ ತೋರದೆ ನನ್ನ ಶೈಕ್ಷಣಿಕ ಜೀವನ ನಾನೇ ಆಯ್ಕೆ ಮಾಡಿಕೊಳ್ಳುವಲ್ಲಿ ಸಹಾಯ ಮಾಡಿದರು. ಅವರೊಂದಿಗಿನ ಆ ನನ್ನ ಅನುಭನದ ಯಾವಾಗಲೂ ಮರೆಯಲಾಗದು. ಇಂತಹ ತಂದೆಯನ್ನು ಕೊಟ್ಟ ಆ ದೇವರಿಗೆ ನಾನು ಯಾವಾಗಲೂ ಕೃತಜ್ಞಳಾಗಿದ್ದೇನೆ. 
                 ಅವರು ನನಗೆ ತುಂಬಾ ಸಲುಗೆ ಕೊಟ್ಟಿರುವ ಕಾರಣ ನಾನು ಅವರಿಗೆ ಯಾವದೆ ಸತ್ಯ ಹೇಳಲು ಹೆದರುತ್ತಿರಲಿಲ್ಲ. ಅವರು ಯಾಕೆ ಇಷ್ಟೊಂದು ಒಡನಾಡಿಯಾಗಿದ್ದರು ಎಂಬುದು ನಮಗೆ ಇವಾಗ ಅರ್ಥವಾಗುತ್ತಿದೆ. ಅವರಷ್ಟು ನನಗೆ ಅರ್ಥ ಮಾಡಿಕೊಂಡವರು ಭಹುಷ: ಯಾರು ಇಲ್ಲ ಎನ್ನಬಹುದು. ತಪ್ಪು ಮಾಡಿದಾಗ ತಿಳಿಸಿ ಹೇಳಿದರು. ನನ್ನ ಜೀವನದ ಗುರಿಯ ಕಡೆ ನಾನು ಯಾವಾಗಲು ಲಕ್ಷ್ಯವಿರಿಸಲು ಅವರ ಪಾತ್ರ ಬಹು ಮುಖ್ಯವಾದದ್ದು. ಆದ್ದರಿಂದ ಅವ್ರು ನನ್ನ ಜೀವನದ ಒಬ್ಬ ಶಿಕ್ಷಕನೂ ಕೂಡ ಆಗಿದ್ದರು. 
            ಅವರ ಬಗ್ಗೆ ಹೇಳಲು ಇಷ್ಟು ಪದಗಳು ಬಹಳ ಕಡಿಮೆ. ಸಮಾಜದಲ್ಲಿ ನಾಲ್ಕು ಜನ ನೋಡಿ ಕಲಿಯುವಂತೆ ನೈತಿಕವಾಗಿ ಬದುಕಿ ತೋರಿಸಿದವರು. ಅವರು ನನ್ನೊಂದಿಗೆ ಇಲ್ಲ ಎಂದರೂ ಅವರು ಕಳಿಸಿದ ಪಾಠ, ನೈತಿಕತೆ, ಜೀವನದ ಉದ್ದೇಶಗಳು ಎಲ್ಲವನ್ನೂ ಅನುಸರಿಸುತ್ತಿದ್ದೇನೆ. ಒಬ್ಬ ಮಗಳು ಒಬ್ಬ ತಂದೆಯ ಹೆಸರು ಎತ್ತಿ ಹಿಡಿಯಲು ಏನು ಅವಶ್ಯವೋ ಎಲ್ಲವನ್ನು ಮಾಡುತ್ತಿದ್ದೇನೆ. ಅಂತಹ ತಂದೆಯ ಹಸಿ ನೆನಪುಗಳು ನನಗೆ ತುಂಬಾ ಸಂತೋಷ ಮತ್ತು ಭಾವುಕ ಮೂಕವಿಸ್ಮಯನನ್ನಾಗಿಸವೆ. 
                “ಅಪ್ಪನ ಕೈಗಳು ಶ್ರಮಪಟ್ಟಾಗಲೇ 
 ಮಕ್ಕಳ ಕೈಗಳು ಸುಂದರವಾಗಿ ಕಾಣುತ್ತವೆ."

ಸ್ಮೀ ತಾ ತಾಳಿಕೋಟಿ
ವಿಜಯಪುರ

ಫಾದರ್ ಡೇ ಸೆಲೆಬ್ರೇಶನ್ ಫೋಟೋ ವಿತ್ ಅಪ್ಪ



ತಂದೆ ಶರಣಬಸಪ್ಪಾ ಕೋಲಾರ ಜೊತೆ ಮಗ ರೋಹಿತ ಕೋಲಾರ ಹಾಗೂ ಮಗಳು ವರ್ಷಾ ಕೋಲಾರ, ಕಲ್ಯಾಣ ನಗರ 
💐💐💐💐💐💐💐💐💐💐💐💐💐💐💐

ತಂದೆ ಶರಣಬಸಪ್ಪಾ ಕೋಲಾರ ಜೊತೆ ಮಗಳು ವರ್ಷಾ ಕೋಲಾರ, ಕಲ್ಯಾಣ ನಗರ 
💐💐💐💐💐💐💐💐💐💐💐💐💐💐

 
ತಂದೆ ಮಲ್ಲಿಕಾರ್ಜುನ ಕಾಳ ಶೆಟ್ಟಿ ಯೊಂದಿಗೆ ಮಗ ವಿಜುಗೌಡ 
💐💐💐💐💐💐💐💐💐💐💐💐💐💐💐


ಮಿಸ್ತಿ ವಿತ್ ಅಪ್ಪ  ಸಂದೀಪ ಅವರೊಂದಿಗೆ ಮುಂಬೈ


ತಂದೆ ಯೊಂದಿಗೆ ಮಂದಾಕಿನಿ ಬಿರಾದರ್, ವಿಜಯಪುರ 
💐💐💐💐💐💐💐💐💐💐💐💐💐💐💐💐


ತಂದೆಯೊಂದಿಗೆ ಮಕ್ಕಳಾದ ಪಲ್ಲವಿ ಮತ್ತು ಸ್ವಾತಿ 
💐💐💐💐💐💐💐💐💐💐💐💐💐💐💐💐



ತಂದೆ ಬಸನಗೌಡ ಅ. ಪಾಟೀಲ ಜೊತೆ ಮಗ ಅಪ್ಪುಗೌಡ ಪಾಟೀಲ ಯತ್ನಾಳ,ವಿಜಯಪುರ 

💐💐💐💐💐💐💐💐💐💐💐💐💐💐💐💐💐

ತಂದೆ ಚಂದ್ರಕಾಂತ ಬ ಶೆಟ್ಟಿ ಯೊಂದಿಗೆ ಮಗ ಶ್ರೇಯಸ್ ಶೆಟ್ಟಿ

💐💐💐💐💐💐💐💐💐💐💐💐💐💐💐💐💐



ತಂದೆ ಶರಣಪ್ಪ ಅಮರನ್ನವರ್ ಜೊತೆ ಮಗ ಶಂಕರ್ ಅಮರನ್ನವರ್,ಬಾಗಲಕೋಟ 
💐💐💐💐💐💐💐💐💐💐💐💐💐



ತಂದೆ ಸೋಮನಗೌಡ ಪಾಟೀಲ ಜೊತೆ ಮಗ ಸೌರಭಗೌಡ ಪಾಟೀಲ, ಐಶ್ವರ್ಯ ನಗರ 
💐💐💐💐💐💐💐💐💐💐💐💐💐


ತಂದೆ ಡಾ|| ದಯಾನಂದ ಜುಗತಿ ಜೊತೆ ಮಗ ರೋಹಿತ ಜುಗತಿ, ವಿಜಯಪುರ
💐💐💐💐💐💐💐💐💐💐💐💐💐



ತಂದೆ ಗುಂಡೂರಾವ್ ಅವರೊಂದಿಗೆ ಮಗಳು ಭಾಗ್ಯ
💐💐💐💐💐💐💐💐💐💐💐💐💐💐💐




ತಂದೆ ಪ್ರಭುಗೌಡ ಪಾಟೀಲ ಜೊತೆ ಮಗ ಪ್ರವೀಣಗೌಡ ಪಾಟೀಲ, ಆನಂದ ನಗರ ವಿಜಯಪುರ 
💐💐💐💐💐💐💐💐💐💐💐💐💐💐💐



ಅಪ್ಪನೊಂದಿಗೆ ಮಗ ಶಶಿ ಗೆಣ್ಣೂರ


ತಂದೆ ಶಂಕರ್ ಬೋಲಕೋಟಾಗಿ ಜೊತೆ ಮಗ ಶಾಂತು ಬೋಲಕೋಟಾಗಿ, ಕಲ್ಯಾಣ ನಗರ 
💐💐💐💐💐💐💐💐💐💐💐💐💐



ಮಕ್ಕಳೊಂದಿಗೆ ಅಪ್ಪ ಪಂಜೇಸಾಬ್ ಜಾತಗಾರ  

💐💐💐💐💐💐💐💐💐💐💐💐💐💐💐💐💐




ತಂದೆ ರವಿಕಾಂತ ಪಾಟೀಲ ಜೊತೆ ಮಗ ವಿರಾಜ ಪಾಟೀಲ, ಇಂಡಿ 
💐💐💐💐💐💐💐💐💐💐💐💐💐💐💐



ತಂದೆ ಶಂಕರಲಿಂಗ ಬಸರಕೋಡ ರೊಂದಿಗೆ ಮಗ ಗುರು ಬಸರಕೋಡ ಮೀನಾಕ್ಷಿ ಚೌಕ ವಿಜಯಪುರ 
💐💐💐💐💐💐💐💐💐💐💐💐💐



ತಂದೆ ಚಂದ್ರಶೇಖರ್ ಸಾಗರ್ ಜೊತೆ ಮಗ ಪೃಥ್ವಿರಾಜ ಸಾಗರ್ Sindhanur,  Raichur Dist. 
💐💐💐💐💐💐💐💐💐💐💐💐💐💐


ತಂದೆ ಭೀಮಸಿಂಗ್ ರಾಠೋಡ ಜೊತೆ ಮಗ ನವನೀತ ರಾಠೋಡ, ಆನಂದ ನಗರ ವಿಜಯಪುರ

💐💐💐💐💐💐💐💐💐💐💐💐💐💐


ತಂದೆ ಅಶೋಕ ಬಣ್ಣದ ಜೊತೆ ಮಗ ವಿನೂತ ಬಣ್ಣದ, ಸಜ್ಜನ ಬಡಾವಣೆ 
💐💐💐💐💐💐💐💐💐💐💐💐💐💐💐


ಅಪ್ಪನೊಂದಿಗೆ ಕಳೆದ ಕೆಲ ಕ್ಷಣಗಳು ಮಾತ್ರ  ನೆನಪಾಗಿ ಉಳಿದಿವಿ, ಮಿಸ್ ಯು ಅಪ್ಪ:  ಅಕ್ಷತಾ 
💐💐💐💐💐💐💐💐💐💐💐💐💐💐


ತಂದೆ ಡಾ|| ಎಂ ಬಿ ಪಾಟೀಲ ಜೊತೆ ಮಗ ಬಸನಗೌಡ ಪಾಟೀಲ 
💐💐💐💐💐💐💐💐💐💐💐💐💐


ತಂದೆ ರಾಜು ಹಿರೇಮಠ ಜೊತೆ ಮಕ್ಕಳಾದ ವಿನಯ, ವಿಜಯ, ರೋಹನ ಹಿರೇಮಠ 
💐💐💐💐💐💐💐💐💐💐💐💐💐💐💐


ತಂದೆ ಧೋಂಡಿಬಾ ಕ್ಷೀರಸಾಗರ, ಚಿಕ್ಕಪ್ಪಾ ಕಶಿನಾಥ ಹಾಗೂ ತಾಯಿ ಶೋಭಾ ಜೊತೆ ಮಗಳು ರೊಪಾ ಮಗ ಸಂತೋಷ್ ಕ್ಷೀರಸಾಗರ ಮೊಮ್ಮಗಳು ಖುಷಿ. 

💐💐💐💐💐💐💐💐💐💐💐💐💐💐



ತಂದೆ ಮಕ್ಕಳ ಅನುಭಂದ,
 ಶ್ವೆತಾ.,ಶಿಲ್ಪಾ.ತಂದೆ ಭರತೇಶ.ಕಲಗೊಂಡ.  ವಿಜಯಪುರ
💐💐💐💐💐💐💐💐💐💐💐💐💐



ತಂದೆ ಗುರುರಾಜ ಕಟಗೇರಿ ಜೊತೆ ಮಗ ಮುರಗೇಶ್ ಕಟಗೇರಿ 
💐💐💐💐💐💐💐🙏💐💐💐💐💐💐💐



ಮುದ್ದಿ ನ ಮಗನೊಂದಿಗೆ  ಶ್ರೀಕಾಂತ ನಾಟಿ ಕಾರ
💐💐💐💐💐💐💐💐💐💐💐💐💐💐



ತಂದೆ ಅಪ್ಪು ಕಲ್ಯಾಣಶೆಟ್ಟಿ, ತಾಯಿ  ಗಾಯತ್ರಿ ಕಲ್ಯಾಣಶೆಟ್ಟಿ ಜೊತೆ ಮಗಳು ಮೋನಿಕಾ ಕಲ್ಯಾಣಶೆಟ್ಟಿ, ಮಗ ತುಷಾರ್
ಕಲ್ಯಾಣಶೆಟ್ಟಿ, ಕಲ್ಯಾಣಶೆಟ್ಟಿ ಚೌಕ, ವಿಜಯಪುರ 
💐💐💐💐💐💐💐💐💐💐💐💐💐💐💐


ಆಕಾಶ ಬಸವರಾಜ ಕಿರಣಗಿ
💐💐💐💐💐💐💐💐💐💐💐💐💐💐💐



ನೀವು ನನ್ನ ಜೀವನದ ಪ್ರಮುಖ ವ್ಯಕ್ತಿ. ನೀವು ರಕ್ಷಣೆ ಮತ್ತು ಕಾಳಜಿಯನ್ನು ಒದಗಿಸಿದ್ದೀರಿ ಮತ್ತು ನನ್ನ ಜೀವನಕ್ಕೆ ಸ್ಥಿರತೆಯನ್ನು ತಂದಿದ್ದೀರಿ. ವಿಶ್ವದ ಅತ್ಯುತ್ತಮ ತಂದೆಗೆ ತಂದೆಯ ದಿನಾಚರಣೆಯ ಶುಭಾಶಯಗಳು..From Akshata 
💐💐💐💐💐💐💐💐💐💐💐💐💐💐💐


ಮಹಾಂತೇಶ ದ್ಯಾಮಣ್ಣವರ
ಅವರ ಮಕ್ಕಳೊಂದಿಗೆ
💐💐💐💐💐💐💐💐💐💐💐💐💐💐💐


ತಂದೆ ಡಾ|| ಎಂ ಬಿ ಪಾಟೀಲ ಜೊತೆ ಮಗ ದ್ರುವ ಪಾಟೀಲ 
💐💐💐💐💐💐💐💐💐💐💐💐💐💐


ತಂದೆಯೊಂದಿಗೆ ಮಮತಾ ಗುಮಶೆಟ್ಟಿ
💐💐💐💐💐💐💐💐💐💐💐💐💐💐💐







ನನ್ನ ಜೀವನದ ಜ್ಯೋತಿ ನನ್ನಪ್ಪ

 

'ಅಪ್ಪ' ಅನ್ನೊ ಅದ್ಭುತ 
ನನ್ನೊಂದಿಗಿದ್ದರೆ ಅದೇ ನನ್ನ ಜಗತ್ತು
 ಇವರು ಊಹಿಸಲಾಗದಂತ ಸಂಪತ್ತು .

ಕೇಳಿದ ತುಂಟ  ಪ್ರಶ್ನೆಗಳಿಗೆಲ್ಲ ತಾಳ್ಮೆಯಿಂದ ಉತ್ತರಿಸುವ 
ಕೈ ಮಾಡಿದ್ದನ್ನೆಲ್ಲ ಕೊಡಿಸುವ
 ನನ್ನ ಜೀವನದ ಜ್ಯೋತಿ ಇವರು 'ಅಪ್ಪ' .

ಗುರಿಯನ್ನು ಸೃಷ್ಟಿಸಿದ ಗುರು ಇವರು 
ಗುರಿಯತ್ತ ಸಾಗುವ ದಾರಿಯನ್ನು ತೋರಿಸಿದವರು 
ಪ್ರತಿ ಹೆಜ್ಜೆ ಗೂ ಜೋತೆಗಿರುವರು 'ಅಪ್ಪ '.

ಮೌನ ವಾಗಿರುವ ಮನದ ಮಾತನ್ನು ತಿಳಿದುಕೊಳ್ಳುವರು
ನೋವುನ್ನು ಬಚ್ಚಿಟ್ಟು ನಗುವಿನ ಸುರಿಮಳೆ ಸುರಿಸುವರು' ಅಪ್ಪ'.

ಗೆಲುವಿನ ಮೆಟ್ಟಿಲನ್ನು ಕಟ್ಟಿದವರು 
ಕಾಣದ ದೇವರನ್ನು ಅಡಗಿಸಿಕೊಂಡ 
ಸದಾ ಜೋತೆ-ಜೋತೆಯಾಗಿರುವ ಜ್ಯೋತಿ ಇವರು 'ನನ್ನಪ್ಪ'.  
           
 ✍️   - ಬಿಸ್ಮಿಲ್ಲಾ ಚಾ ಪಿಂಜಾರ 
         ವಿಜಯಪುರ.

ಅಪ್ಪಾ ನೀನೆ ಸರ್ವಸ್ವ


ಪ್ರತಿ ಮಗಳಿಗೂ 
ಅವರಪ್ಪನೇ ಹೀರೋ
ಮಗಳೆಂದು ಹೀಯಾಳಿಸುವವರ 
ನಡುವೆಯೂ
ತನಗೆ ಮಗಳು ಹುಟ್ಟಿದಳೆಂದು 
ಹಿಗ್ಗಿನಿಂದ ನಲಿವನು ಅಪ್ಪಾ.

ಮೊದಲ ಬಾರಿ ಮಗಳ
ಮುಖ ನೋಡುತ್ತಲೇ
ತನ್ನಮ್ಮ ಮಗುವಾಗಿಹಳೆಂದು
ಕಣ್ಣಂಚು ಒದ್ದೆಯಲ್ಲೇ
ಮೀಸೆ ಮರೆಯಲಿ ಹೆಮ್ಮೆಯಿಂದ ನಗುವನು.

ಕೈ ಹಿಡಿದು 
ಹೆಜ್ಜೆಯ ಮೇಲೆ ಹೆಜ್ಜೆ ಹಾಕಿಸಿ
ನಡೆಯುವುದನ್ನ ಕಲಿಸಿದೆ
ನೀ ಜೊತೆಗಿರು ಧೈರ್ಯದಿಂದ
ಮುಂದೆ ನಡೆಯುತ್ತಿರುವೆ ಅಪ್ಪಾ.

ಆಟ ಪಾಠವ ಕಲಿಸಿ
ಜೀವನ ತಿಳಿಸಿದೆ
ನೀ ನನ್ನ ಮೇಲೆ ಜೀವ ಇಟ್ಟರೂ
ಜೀವನ ಮಾಡು ಎಂದು
ಇನ್ನೊಂದು ಮನೆ ಬೆಳಗಲು ಕಳುಹಿಸಿದೆ.

ನಾ ಮದುವೆಯಾಗಿ
ನಿನಗೆ ಮೊಮ್ಮಗು ಸಿಕ್ಕರೂ
ನೀ ಇನ್ನು ನನ್ನನ್ನು 
ಮಗುವಂತೆ ಕಾಣುವೆ
ನೀನೆ ಪ್ರೀತಿ ಅಪ್ಪಾ.

ನನ್ನ ಜೀವ ಇರುವವರೆಗೂ
ನಿನ್ನನ್ನು ಹೊರತುಪಡಿಸಿ
ಬೇರೆಯಾರೂ ಸಿಗಲಿಲ್ಲ ನನಗೆ
ರಾಜಕುಮಾರಿಯಂತೆ ಕಾಣಲು
ಅಪ್ಪಾ ನೀನೆ ಸರ್ವಸ್ವ.

ಶುಭಾ ಹತ್ತಳ್ಳಿ
ವಿಜಯಪುರ

Friday, June 19, 2020

ಹಿರಿಯರು ಕಿರಿಯರ ಬಾಳ ದೀಪ



ಮೊಳಕೆ ಒಡೆಯಿತೊಂದು  ವಂಶ ವೃಕ್ಷದ ಚಿಗುರು 
ಅಪ್ಪ- ಅಮ್ಮನಾಗೋ ಭಾಗ್ಯವಂತರಾದರು 
ಕಂದನ ಆಗಮನದಿ ಖುಷಿ-ಖುಷಿಯಲಿ ದಿನ ಕಳೆಯುವರು  
ಹುಟ್ಟಿದ ಕೂಸಲಿ ಕನಸ ಕಟ್ಟಿಕೊಂಡರು ನೂರಾರು 
ಕಂದನ ನಗುವಲ್ಲಿ ಜೀವನದ  ಸಾರ್ಥಕ್ಯತೆ ಪಡೆದರು 
ಕಂದನ ಬಾಳು ಬೆಳಗಲು ಹಗಲು-ರಾತ್ರಿ ದುಡಿದರು..

ಹೆಗಲೆತ್ತರಕೆ ಬೆಳೆದು ನಿಂತ ಕಂದ..
ಸುಖದ ವ್ಯಾಮೋಹದಲ್ಲಿ ಬಿದ್ದ.. 
ಬಿಡಿಸಿಕೊಂಡ ಕರುಳ ಸಂಬಂಧ..
ಅಪ್ಪ- ಅಮ್ಮನ  ಅಂಧಕಾರದ ಮದದಿಂದ ತಾತ್ಸರಿದ..
ಹಿರಿಜೀವಗಳು ತಟ್ಟಿದವು ವೃದ್ಧಶ್ರಾಮದ ಕದ...

ಕಂದನೆಂಬ ಕಿರಿ ಜೀವದ ಮದದಲ್ಲಿ 
ಅಪ್ಪ-ಅಮ್ಮ ಅನ್ನೋ ಹಿರಿಜೀವಗಳಿಂದು ಬೀದಿಯಲಿ 
ಕಂದನ ಪಾಲಿಗೆ ಹಿರಿಜೀವ ಕೂಡಿ ಇಟ್ಟ ಆಸ್ತಿಯ  ಒಡೆತನ 
ಹೆತ್ತವರ ಪಾಲಿಗೆ ಕಂದನ ಹಗೆತನ..

ಅಂದು  ಇತ್ತು ಸುಖದ  ಕಣ್ಣೀರು 
ಕಂದನ ಹುಟ್ಟಲಿ
ಇಂದು ಇದೆ ದುಃಖದ  ಕಣ್ಣೀರು 
ಕಂದನ ನಡವಳಿಕೆಯಲಿ 

ಬುದ್ಧಿ ಹೇಳಿ ತಿದ್ದುವ ಹಿರಿಯರು 
ಎಲ್ಲಾ ದೊರೆತ ಮೇಲೆ ಬೇಡವಾದರು 
ನನಗೆ ನೀನು, ನಿನಗೆ ನಾನು ಅನ್ನುತಾ ಹಿರಿಯರು 
ವೃದ್ದಾಶ್ರಮದ ಪಾಲಾದರು.. 

ಅರಿಯೋ ನೀ ಹೆತ್ತವರೇ ನಿನ್ನ  ಆಸ್ತಿ.. 
ಉಳಿದೆಲ್ಲವೂ ಬರಿ ಶೂನ್ಯ
ಅವರ ಪ್ರೀತಿ ಒಂದೇ ಸ್ಥಿರಾಸ್ತಿ 
ಜಗದಲಿ  ಹೆತ್ತವರ ಪ್ರೀತಿಯೊಂದೇ ಅನನ್ಯ..
ವೃದ್ಧಶ್ರಾಮಕೆ ಹಿರಿಜೀವಗಳ ಅಟ್ಟದಿರೋಣ...
ಇದ್ದಷ್ಟು ದಿನ ಪ್ರೀತಿ – ಕಾಳಜಿ  ತೋರೋಣ... 
ನಮ್ಮ ಬಾಲ್ಯದಲಿ ನೀಡಿದ ಪ್ರೀತಿಯ ನೀಡೋಣ...
ಬಾಳಿಗೆ ಬೆಳಕಾದ ಹಿರಿಯರ ಗೌರವಿಸೋಣ.. 

ಸಮಿತ ಶೆಟ್ಟಿ 
ಸಿದ್ಧಕಟ್ಟೆ

ಪಿತೃ ದೇವೋಭವ



ನನ್ನಪ್ಪನೆಂದರೇ?
ನನ್ನ ಬಾಳ ನೇಕಾರ ಇವ
ಆತ್ಮವಿಶ್ವಾಸದ ಕಿಚ್ಚು ಹೊತ್ತಿಸಿದವ
ಅಪಾರ ನಂಬಿಕೆಯ ಜ್ವಾಲೆ ಉರಿಸಿದವ
ನನ್ನ ಬಾಳ ಬಂಗಾರದ ಕಳಶನಿವ।

ಅಗಾಧ ಪ್ರೀತಿಯ ಕಡಲಿವ
ಅಗಣ್ಯ ಗುಣಗಳ ಹೊಂದಿದವ 
ನನ್ನ ಸ್ಪೂರ್ತಿಯ ಸೆಲೆ ಇವ 
ನನ್ನ ಉನ್ನತ ಏಳಿಗೆಯ 
ಸಹಕಾರ ಮೂರ್ತಿ  ಇವ।

ನನ್ನ ಪ್ರತಿ ಹೆಜ್ಜೆಗೂ 
ಪ್ರೋತ್ಸಾಹಿಸುವ ಸನ್ಮೀತ್ರನಿವ 
ಆಗಸ ತಾರೆ ಹಿಡಿಯುವಾಸೆ ಮೂಡಿಸಿದವ 
ಕಾಮನ ಬಿಲ್ಲಿನ ಕನಸಿನ ಗೋಪುರವ ಕಟ್ಟಿಕೊಟ್ಟವ।

ನನ್ನಪ್ಪನ ಬಾಳಿಗೆ 
ಮೀನುಗುವ ತಾರೆಯು ನಾ
ಸದಾ ನನ್ನ ಖುಷಿಯ ಬಯಸೋ
ಮಮತಾಮಯಿ ಇವ
ಅಪ್ಪನ  ಪ್ರಪಂಚವೇ ಸದಾ ನಾನಾಗಿರಲು 
ಅವನ ಯೋಚನೆಯು ಸದಾ  
 ನನ್ನ  ಬಗ್ಗೆಯು।

ನನ್ನಪ್ಪನೆಂದರೆ ಇವ
ನನ್ನ ರಕ್ಷಣೆಯ ಹೊಣೆ ಹೊತ್ತವ 
ಇವನ ದಿನದಂದು 
ಶುಭಾಶಯ ಕೋರಲು ನಾ ಬರೆದೆ
ನನ್ನದೆ ಆದ ಸುಂದರ ಸಾಲುಗಳ ಕವನವು॥

-ಮಮತಾ ಗುಮಶೆಟ್ಟಿ
ವಿಜಯಪುರ

ನನ್ನ ಭಾಗದ ದೇವರು ನನ್ನ ಅಪ್ಪನು



ನನ್ನಪ್ಪನ ಪ್ರಪಂಚಕೆ 
ನಾನೇ ಮೇರು ನಾಯಕ
ಅಪ್ಪನ ಒಲವ ಧಾರೆಯ 
ಪ್ರತಿರೂಪ ನಾ...

ನನ್ನ ಜೀವನದ ನಗುವಿಗೆ 
ಸತತದಿ ಪರಿಶ್ರಮ ಪಟ್ಟವ
ನನ್ನ ಸೌಭಾಗ್ಯದಾತ ನನ್ನಪ್ಪ
ನನ್ನ ಒಲವ ಸುದೆ ಇವನಪ್ಪ।

ಏಳು ಜನುಮದ ಬಂಧದಲು
ಹೀಗೆ ಇರಲಿ ಅಪ್ಪ ಮಗನ ಸಂಬಂಧವು
ನನ್ನಪ್ಪನ ಮಗನಾಗಿ ಜನಿಸುವೇ 
 ಪುನರ್ಜನ್ಮವಿದ್ದರೆ ನನಗೆ।

ಅಪ್ಪನ ನೆರಳು 
ಮಹಾ ಪರ್ವತಗಿಂತಲು ಮಿಗಿಲು
ಆಗಸದಷ್ಟೆ ವಿಶಾಲತೆಯ ಹೊಂದಿದವನು
ನನ್ನಪ್ಪನ ಗುಣಗಾನ 
ಪದಗಳಿಗೆ ನಿಲುಕದ ಮಹಾ ಗೌರವಗಾನ।

ಸೂರ್ಯ ಚಂದ್ರರ ಸಾಕ್ಷಿ
ನನ್ನಪ್ಪನ ಬಾಳಿಗೆ ನಾನಾಗುವೇ
ಸಂಭ್ರಮದ ದಿನಚರಿಯ ಮಗನಂತೆ
ಅಪ್ಪನ ಖುಷಿಗಳಿಗೆ ನನ್ನೊಲವಿನ ಮನಸ್ಸಾಕ್ಷಿ ಧಾರೆಯೆರೆವೆ ಸತತದಿ।

ಅಪ್ಪನ ಕುರುಹು ನಾನಾಗಿರಲು
ಅಪ್ಪನಹಾಗೆ ಬದುಕುವದನು ಕಲಿತಿರುವೇ
ನನ್ನಪ್ಪ ನನ್ನ ಬಾಳ ಬೆಳಗಿದ 
ಮಹಾ ಮಾಹಾನ್ ಜ್ಯೋತಿ
ಅವರ ಪ್ರೀತಯ ಕಂದನು ನಾನು
ಋಣಿಯಗಿರುವೆ ನನ್ನಪ್ಪನ
ಆರೈಕೆಗೆ
ನನ್ನ ಭಾಗದ ದೇವರು
ನನ್ನ ಅಪ್ಪನು॥



ವಿಜುಗೌಡ ಕಾಳಶೆಟ್ಟಿ 
ಅಧ್ಯಕ್ಷರು , ತನು ಫೌಂಡೇಶನ್ ವಿಜಯಪುರ.

20-06-2020 EE DIVASA KANNADA DAILY NEWS PAPER

ವಿಜಯಪುರ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಲಿಂಗರಾಜ್ ಎನ್. ಬಳ್ಳಾರಿ ಅವರ ನೇತೃತ್ವ: ಅಶೋಕ ಗಸ್ತಿ ಅವರಿಗೆ ಸೇಬು ಹಣ್ಣಿನ ಹಾರ ಹಾಕುವುದರ ಮೂಲಕ ವಿಶೇಷವಾಗಿ ಸನ್ಮಾನ


ದಿವಸ ವಾರ್ತೆ

ವಿಜಯಪುರ : ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಾದ ಹಿಂದುಳಿದ ವರ್ಗದ ನಾಯಕರಾದ ಸರಳ ಸಜ್ಜಿನಿಕೆ ವ್ಯಕ್ತಿ ಪಕ್ಷದ ನಿಷ್ಠಾವಂತ ಪ್ರಮಾಣಿಕ ಕಾರ್ಯಕರ್ತರಾದ ಅಶೋಕ ಗಸ್ತಿ ಅವರಿಗೆ ರಾಜ್ಯಸಭೆಗೆ ಕರ್ನಾಟಕದಿಂದ (ಎಂ.ಪಿ)ಆಗಿ ಆಯ್ಕೆಗೊಂಡಿರುವ ಹಿನ್ನೆಲೆ ಅವರಿಗೆ ವಿಜಯಪುರ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಲಿಂಗರಾಜ್ ಎನ್. ಬಳ್ಳಾರಿ ಅವರ ನೇತೃತ್ವದೊಂದಿಗೆ ಅಶೋಕ ಗಸ್ತಿ ಅವರ ನಿವಾಸ ರಾಯಚೂರನಲ್ಲಿ ಮೆನೆಗೆ ತೆರಳಿ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುವುದರೊಂದಿಗೆ ಸೇಬು ಹಣ್ಣಿನ ಹಾರ ಹಾಕುವುದರ ಮೂಲಕ ವಿಶೇಷವಾಗಿ ಸನ್ಮಾನ ಮಾಡಲಾಯಿತು.

       ಸಂದರ್ಭದಲ್ಲಿ ಸವಿತಾ ಸಮಾಜದ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಘವೇಂದ್ರ ಇಟಗಿ, ವಿಠ್ಠಲ ಕಾಸೆದ್, ಮಲ್ಲೇಶ ನಾವಿ, ಗಣೇಶ ಬಳ್ಳಾರಿ, ಬಾಪು ಕ್ಷೀರಸಾಗರ, ಗಡ್ಡೆಪ್ಪ ನಾವಿ, ರಾಜಕುಮಾರ ನಾವಿ, ನರ್ಸಿಂಗ್ ಮೋತಕ್‌ಪಲ್ಲಿ, ಕಿರಣ ಹಡಪದ ಮುಂತಾದವರು ಇದ್ದರು.