Sunday, June 14, 2020

ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಕಾರ್ಯಕ್ಕೆ ಸಿದ್ದೇಶ್ವರ ಶ್ರೀ ಮೆಚ್ಚುಗೆ



ಈ ದಿವಸ ವಾರ್ತೆ
ವಿಜಯಪುರ:  ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಾಕಷ್ಟು ಉತ್ತಮ ಕೆಲಸಗಳು ನಡೆದಿವೆ ಎಂದು ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅವರ ಕಾರ್ಯಕ್ಕೆ ಸಿದ್ದೇಶ್ವರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಜ್ಞಾನಯೋಗಾಶ್ರಮಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸಿ, ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಉತ್ತರೋತ್ತರ ಬೆಳವಣಿಗೆಯಾಗಬೇಕು.  ಮಹಿಳಾ ವಿವಿಯಲ್ಲಿರುವ ಭಾಸ್ಕಾರಾಚಾರ್ಯ ಪೀಠದವತಿಯಿಂದ ಗಣಿತದ ಕುರಿತ ಚಟುವಟಕೆಗಳು ಹೆಚ್ಚಬೇಕು. ವಿವಿಯ ಆವರಣದಲ್ಲಿ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳಸಬೇಕು. ಹಸುರೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಮಹಿಳಾ ವಿಶ್ವವಿದ್ಯಾಲಯದಲ್ಲಿ ಸದ್ಯ 35 ಸಾವಿರಕ್ಕೂ ಹೆಚ್ಚು ಸ್ನಾತಕ ಮತ್ತು 2700ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿನಿಯರು ಹಾಗೂ 364 ಸಂಶೋಧನಾ ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ 1,500 ಆಸನಗಳುಳ್ಳ ಬೃಹತ್ ಹಾಗೂ ಅತ್ಯಾಧುನಿಕ ಸೌಲಭ್ಯ ಉಳ್ಳ ಸಭಾಂಗಣ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಕ್ಯಾಂಪಸ್‍ನಲ್ಲಿ ಹಸುರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ವಿವರಣೆ ನೀಡಿದ್ದಾರೆ.
ಕುಲಸಚಿವೆ ಪ್ರೊ.ಆರ್. ಸುನಂದಮ್ಮ ಉಪಸ್ಥಿತರಿದ್ದರು ಎಂದು ಮಹಿಳಾ ವಿವಿ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಭಾನುವಾರ ಮತ್ತೆ ೧ ಕೋವಿಡ್-೧೯ ಪಾಸಿಟಿವ್ ದೃಢ ಸೋಂಕಿತರ ಸಂಖ್ಯೆ ೨೨೯ ಕ್ಕೆ ಏರಿಕೆ : ೧೦ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ



ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೨೯ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ ೬೧ ರೋಗಿಗಳು ಕೋವಿಡ್-೧೯ ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ ೧ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ ೬೮೨೬ (೩ ವರ್ಷದ ಬಾಲಕ) ಇವರಿಗೆ ಕಂಟೇನ್ಮೆಂಟ್ ಜೋನ್ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ ರೋಗಿ ಸಂಖ್ಯೆ ೨೭೧೪ (೩೦ ವರ್ಷದ ಪುರುಷ) ರೋಗಿ ಸಂಖ್ಯೆ ೩೧೭೯ (೨೨ ವರ್ಷದ ಮಹಿಳೆ) ರೋಗಿ ಸಂಖ್ಯೆ ೩೧೮೦ (೨೫ ವರ್ಷದ ಮಹಿಳೆ) ರೋಗಿ ಸಂಖ್ಯೆ ೩೧೭೩ (೩೭ ವರ್ಷದ ಪುರುಷ) ರೋಗಿ ಸಂಖ್ಯೆ ೩೦೧೩ (೧೫ ವರ್ಷದ ಪುರುಷ ಬಾಲಕ) ರೋಗಿ ಸಂಖ್ಯೆ ೩೯೭೫ (೫೫ ವರ್ಷದ ಮಹಿಳೆ) ರೋಗಿ ಸಂಖ್ಯೆ ೩೯೯೬ (೩೯ ವರ್ಷದ ಪುರುಷ) ರೋಗಿ ಸಂಖ್ಯೆ ೪೮೨೨ (೫೬ ವರ್ಷದ ಪುರುಷ) ರೋಗಿ ಸಂಖ್ಯೆ ೪೮೩೨ (೩೩ ವರ್ಷದ ಮಹಿಳೆ) ರೋಗಿ ಸಂಖ್ಯೆ ೫೦೧೨ (೩೮ ವರ್ಷದ ಪುರುಷ ಪುರುಷ)  ಸೋಂಕಿನಿAದ ಗುಣಮುಖರಾಗಿ ಜಿಲ್ಲಾಸ್ಪತೆಯಿಂದ ಬಿಡುಗಡೆ ಆಗಿದ್ದಾರೆ. 

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ೨೯೬೫೬ ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು ೨೨೯ ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. ೮೯೧೪ ಜನರು ೨೮ ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ೨೦೫೭೪ ಜನರು (೧ ರಿಂದ ೨೮ ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ೬ ಜನ ಕೋವಿಡ್-೧೯ ರೋಗಿಗಳು ಮೃತಪಟ್ಟಿದ್ದಾರೆ. ೧೬೨ ಜನರು ಕೋವಿಡ್-೧೯ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ೬೧ ಜನರು ಆಸ್ಪತ್ರೆಯಲ್ಲಿರುವ ಕೋವಿಡ್-೧೯ ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ ೨೬೯೦೫ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, ೨೬೩೯೮ ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ ೨೭೮ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೈಕ್‌ ಕಳ್ಳನನ್ನು ಬಂಧಿಸಿದ ಖಾಕಿ ಪಡೆ


ಈ ದಿವಸ ವಾರ್ತೆ
ವಿಜಯಪುರ: ನಗರದಲ್ಲಿ ಬೈಕ್‌ ಮತ್ತು ಮೊಬೈಲ್‌ ಕಳವು ಮಾಡುತ್ತಿದ್ದ ಆರೋಪಿಯನ್ನು ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಜಮಖಂಡಿ ನಿವಾಸಿ ಇಮ್ರಾನ್‌ ಮೆಹಬೂಬ ಕಾಟಿಕ್‌(28) ಬಂಧಿತ ಆರೋಪಿಯಾಗಿದ್ದಾನೆ. ಈತನು ಶನಿವಾರ ನಗರ ಸಮೀಪದ ಮಹಲ್‌ ಐನಾಪುರದ ಬಳಿ ಅಡ್ಡಾಡುತ್ತಿರುವಾಗ ಪೊಲೀಸರು ಅನುಮಾನ ಬಂದು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ.
ಬಂಧಿತ ಆರೋಪಿಯಿಂದ ಸುಮಾರು ₹ 50 ಸಾವಿರ ಮೊತ್ತದ ವಿವಿಧ ಕಂಪನಿಗಳ ಒಟ್ಟು ನಾಲ್ಕು ಮೊಬೈಲ್‌ ಸೆಟ್‌ಗಳು ಹಾಗೂ ರೂ. 1ಲಕ್ಷ ಮೊತ್ತದ ಐದು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.
ಗ್ರಾಮೀಣ ವಿಭಾಗದ ಸಿಪಿಐ ಎಂ.ಕೆ.ದಾಮಣ್ಣವರ, ಪಿಎಸ್‌ಐ ಆನಂದ ಠಕ್ಕನ್ನವರ, ಆರ್‌.ಎ.ದಿನ್ನಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.