Thursday, May 11, 2023

ಮೇ.13ರಂದು ನಗರದ ಸೈನಿಕ ಶಾಲೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಈ ದಿವಸ ವಾರ್ತೆ

ವಿಜಯಪುರ:  ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ.10ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ  ಸುಸೂತ್ರವಾಗಿ ಮತದಾನ ನಡೆದಿದ್ದು, ಮತ ಎಣಿಕೆ ಕಾರ್ಯ ಮೇ.13ರಂದು  ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ. 

26-ಮುದ್ದೇಬಿಹಾಳ ಹಾಗೂ 27-ದೇವರಹಿಪ್ಪರಗಿ ಮತಕ್ಷೇತ್ರದ ಇವಿಎಂ ಮತಯಂತ್ರಗಳನ್ನು ಒಡೆಯರ ಸದನ, 28-ಬಸವನಬಾಗೇವಾಡಿ ಹಾಗೂ ಬಬಲೇಶ್ವರ ಮತಕ್ಷೇತ್ರದ ಇವಿಯಂ ಮತಯಂತ್ರಗಳನ್ನು  ಆದಿಲ್‍ಶಾಹಿ ಸದನ, 30-ಬಿಜಾಪುರ ನಗರ ಹಾಗೂ 31-ನಾಗಠಾಣ ಮತಕ್ಷೇತ್ರದ ಇವಿಎಂ ಮತಯಂತ್ರಗಳನ್ನು ಹೊಯ್ಸಳ ಸದನ ಹಾಗೂ 32-ಇಂಡಿ ಮತ್ತು 33-ಸಿಂದಗಿ ಮತಕ್ಷೇತ್ರದ ಇವಿಎಂ ಮತಯಂತ್ರಗಳನ್ನು ವಿಜಯ ನಗರ ಸದನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಮೇ.13 ರಂದು ಬೆಳಿಗ್ಗೆ 7-30ಕ್ಕೆ ಆಯಾ ಚುನಾವಣಾಧಿಕಾರಿಗಳು ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. 

14 ಟೇಬಲ್‍ಗಳಲ್ಲಿ ಮತ ಎಣಿಕೆ:  

ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲ್‍ಗಳಲ್ಲಿ ಇವಿಎಂ ಮತ ಎಣಿಕೆ ಹಾಗೂ 4 ಟೇಬಲ್‍ಗಳಲ್ಲಿ ಅಂಚೆ ಮತಪತ್ರದ ಎಣಿಕೆ ಮತ್ತು ಸೇವಾ ಮತದಾರರ ಅಂಚೆ ಮತಪತ್ರಗಳನ್ನು ಚುನಾವಣಾಧಿಕಾರಿಗಳ ಟೇಬಲ್‍ನಲ್ಲಿ  ಎಣಿಕೆ ಕಾರ್ಯ ಮಾಡಲಾಗುವುದು. 

ಮತ ಎಣಿಕೆ ಸುತ್ತುಗಳು : 

 ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಪೈಕಿ ಮತಗಟ್ಟೆಗಳನುಸಾರವಾಗಿ  ಬಸವನಬಾಗೇವಾಡಿ ಮತಕ್ಷೇತ್ರದ 17 ಸುತ್ತುಗಳು,  ಮುದ್ದೇಬಿಹಾಳ, ದೇವರಹಿಪ್ಪರಗಿ ಹಾಗೂ ಬಬಲೇಶ್ವರ ಮತಕ್ಷೇತ್ರದ 18 ಸುತ್ತುಗಳು ಹಾಗೂ ಬಿಜಾಪುರ ನಗರ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ 20 ಸುತ್ತುಗಳು ಹಾಗೂ ನಾಗಠಾಣ ಮತಕ್ಷೇತ್ರದ 22 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ಮಾಡಲಾಗುವುದು. 

408 ಮತ ಎಣಿಕೆ ಸಿಬ್ಬಂದಿ: ಮತ ಎಣಿಕೆ ಕಾರ್ಯಕ್ಕಾಗಿ  ಪ್ರತಿ ವಿಧಾನಸಭಾವಾರು 14 ಟೇಬಲ್‍ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ವಿಧಾನಸಭೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು 17 ಮೈಕ್ರೋ ಆಬ್ಸರವರ್ ಒಳಗೊಂಡಂತೆ ಒಟ್ಟು 51  ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿಗೆ 112 ಟೇಬಲ್, 136 ಎಣಿಕೆ ಮೇಲ್ವಿಚಾರಕರು, 136 ಎಣಿಕೆ ಸಹಾಯಕರು, 136 ಮೈಕ್ರೋ ಆಬ್ಸರವರ್ ಸೇರಿದಂತೆ ಒಟ್ಟು 408 ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 

224 ಅಂಚೆ ಮತ ಪತ್ರ ಎಣಿಕೆ ಸಿಬ್ಬಂದಿ : 

ಅದರಂತೆ ಅಂಚೆ ಮತಪತ್ರಗಳ ಎಣಿಕೆಯನ್ನು ಪ್ರತಿ ವಿಧಾನಸಭಾ ವಾರು 4 ಟೇಬಲ್‍ಗಳಲ್ಲಿ ಜಿಲ್ಲೆಯ 8 ವಿಧಾನಸಭೆಗಳಿಗೆ 32 ಟೇಬಲ್‍ಗಳ ವ್ಯವಸ್ಥೆ, ಹಾಗೂ ಪ್ರತಿ ವಿಧಾನಸಭಾವಾರು 5 ಎಣಿಕೆ ಮೇಲ್ವಿಚಾರಕರು, 10 ಎಣಿಕೆ ಸಹಾಯಕರು, 5 ಮೈಕ್ರೋ ಆಬ್ಸರ್‍ವರ್ ಹಾಗೂ 4 ಎಆರ್‍ಓ ಸೇರಿದಂತೆ ಒಟ್ಟು 28 ಜನ ಪ್ರತಿ ವಿಧಾನಸಭೆಗೆ  ನಿಯೋಜಿಸಲಾಗಿದೆ. ಜಿಲ್ಲೆಯ 8 ವಿಧಾನಸಭೆ ಮತಕ್ಷೇತ್ರಗಳಿಗೆ ಅಂಚೆ ಮತ ಪತ್ರ ಎಣಿಕೆಗಾಗಿ 32 ಟೇಬಲ್‍ಗಳ ವ್ಯವಸ್ಥೆ, 40 ಎಣಿಕೆ ಮೇಲ್ವಿಚಾರಕರು, 80 ಎಣಿಕೆ ಸಹಾಯಕರು, 40 ಮೈಕ್ರೋ ಆಬ್ಸರವರ್, 32 ಎಆರ್‍ಓ ಸೇರಿದಂತೆ ಒಟ್ಟು 224 ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 

ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ಆಯೋಗದಿಂದ ಅನುಮತಿ ಪಡೆದ ಅಧಿಕಾರಿಗಳು, ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಕೃತ ಪಾಸ್ ಪಡೆದ ಮಾಧ್ಯಮದವರು, ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿ, ಸ್ಪರ್ಧಿಸಿದ ಅಭ್ಯರ್ಥಿ ಹಾಗೂ ಅವರ ಚುನಾವಣಾ ಏಜೆಂಟರು ಮತ್ತು ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

12-05-2023 EE DIVASA KANNADA DAILY NEWS PAPER

11-05-2023 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಸುಸೂತ್ರ ಮತದಾನ : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಇವಿಎಂ ಮತಯಂತ್ರ ಭದ್ರತಾ ಕೊಠಡಿಯಲ್ಲಿ ಸುರಕ್ಷಿತ


ಈ ದಿವಸ ವಾರ್ತೆ

ವಿಜಯಪುರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ.10ರಂದು  ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸುಸೂತ್ರವಾಗಿ ಮತದಾನ  ನಡೆದಿದ್ದು, ಜಿಲ್ಲೆಯಾದ್ಯಂತ ಒಟ್ಟು ಶೇ 71.34 ರಷ್ಟು ಮತದಾನವಾಗಿದೆ. 

ಇವಿಎಂ ಮತಯಂತ್ರಗಳು ಭದ್ರತಾ ಕೊಠಡಿಯಲ್ಲಿ ಸುರಕ್ಷಿತ : ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ಮತಯಂತ್ರಗಳನ್ನು ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಸ್ಥಾಪಿಸಲಾದ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ಎಲ್ಲ ಮತಕ್ಷೇತ್ರಗಳಿಂದ ಬಂದ ಇವಿಎಂ ಮತಯಂತ್ರಗಳನ್ನು  ಸುರಕ್ಷಿತವಾಗಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಭದ್ರತಾ ಕೊಠಡಿಗೆ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿದೆ. 

ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಶೇಕಡಾವಾರು ಮತದಾನದ ವಿವರದಂತೆ 26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇ 70.91 ರಷ್ಟು ಮತದಾನವಾಗಿದೆ. 27-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ           ಶೇ.68.65 ರಷ್ಟು ಮತದಾನವಾಗಿದೆ. 28-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ  ಶೇ. 75.18 ರಷ್ಟು ಮತದಾನವಾಗಿದೆ. 29-ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಶೇ 81.79 ರಷ್ಟು ಮತದಾನವಾಗಿದೆ.        

30-ಬಿಜಾಪೂರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 64.59 ರಷ್ಟು ಮತದಾನವಾಗಿದೆ. 31-ನಾಗಠಾಣ (ಎಸ್ಸಿ) ಮೀಸಲು  ವಿಧಾನಸಭಾ ಕ್ಷೇತ್ರದಲ್ಲಿ ಶೇ 66.48  ರಷ್ಟು ಮತದಾನವಾಗಿದೆ. 32-ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 73.62 ರಷ್ಟು ಮತದಾನವಾಗಿದೆ. 33-ಸಿಂದಗಿ  ವಿಧಾನಸಭಾ ಕ್ಷೇತ್ರದಲ್ಲಿ ಶೇ 72.46 ರಷ್ಟು ಮತದಾನವಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಶೇ 71.34ರಷ್ಟು ಮತದಾನವಾಗಿದೆ.  

ಜಿಲ್ಲೆಯಲ್ಲಿ 9,66,535 ಪುರುಷ ಮತದಾರರು, 9,26,096 ಮಹಿಳಾ ಮತದಾರರು ಹಾಗೂ 221 ಇತರೆ ಮತದಾರರು ಸೇರಿದಂತೆ ಒಟ್ಟು 18,92,852 ಮತದಾರರಿದ್ದಾರೆ. ಈ ಪೈಕಿ ಮೇ.10ರಂದು ನಡೆದ ಮತದಾನದಲ್ಲಿ  6,99,701 ಪುರುಷರು, 650643 ಮಹಿಳೆಯರು, 26 ಇತರೆ ಮತದಾರರು ಸೇರಿದಂತೆ ಒಟ್ಟು 13,50,370 ಮತದಾರರು ಮತ ಚಲಾಯಿಸಿದ್ದಾರೆ. 

ವಿಧಾನಸಭಾ ಕ್ಷೇತ್ರವಾರು ವಿವರದಂತೆ 26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 1,53,887 ಮತದಾರರು ಮತ ಚಲಾಯಿಸಿದ್ದಾರೆ. 27-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ  150442 ಮತದಾರರು ಮತ ಚಲಾಯಿಸಿದ್ದಾರೆ.  28-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ 157728 ಮತದಾರರು ಮತ ಚಲಾಯಿಸಿದ್ದಾರೆ.                         29-ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 177601 ಮತದಾರರು ಮತ ಚಲಾಯಿಸಿದ್ದಾರೆ. 30-ಬಿಜಾಪೂರ ನಗರ ವಿಧಾನಸಭಾ ಕ್ಷೇತ್ರದಲ್ಲಿ 181911 ಮತದಾರರು ಮತ ಚಲಾಯಿಸಿದ್ದಾರೆ.31-ನಾಗಠಾಣ  ವಿಧಾನಸಭಾ ಕ್ಷೇತ್ರದಲ್ಲಿ 178915 ಮತದಾರರು ಮತ ಚಲಾಯಿಸಿದ್ದಾರೆ. 32-ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ 178511 ಮತದಾರರು ಮತ ಚಲಾಯಿಸಿದ್ದಾರೆ. 33-ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ 171375 ಮತದಾರರು ಸೇರಿದಂತೆ ಒಟ್ಟು 13,50,370 ಮತದಾರರು ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.