Saturday, December 30, 2023

ಪರಮಾಣು ವಿಕಿರಣಗಳಿಂದ ಮಾನವನ ಆರೋಗ್ಯದ ಮೇಲೆ ಪರಿಣಾಮ: ಡಾ.ಸುರೇಖಾ ಹೊರ್ತಿಕರ್

 

ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ,ಬಿಸಿಎ, ಬಿ ಎಸ್ ಡಬ್ಲ್ಯೂ, ಬಿ,ಎಸ್ ಸಿ ಮತ್ತು ಸ್ನಾತಕೋತ್ತರ ಕಾಲೇಜಿನ (ಎಮ್.ಕಾಂ ಮತ್ತು ಎಮ್,ಎಸ್ ಡಬ್ಲ್ಯೂ,) ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದ ವತಿಯಿಂದ  "ಪರಮಾಣು ವಿಕಿರಣದ ಅಪಾಯಗಳಿಂದ ಮಾನವನ ಆರೋಗ್ಯದ ಮೇಲೆ ಪರಿಣಾಮ  ಮತ್ತು ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ‌" ಎಂಬ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಸುರೇಖಾ ಹೊರ್ತಿಕರ್, ಪ್ರಾಂಶುಪಾಲರು, ಎಸಿಎಸ್ ಕಾಲೇಜು, ಉಮದಿ (ಮಹಾರಾಷ್ಟ್ರ)  ಇವರು ಮಾತನಾಡಿ 

ಪರಮಾಣು ಅಪಾಯಗಳಿಂದ ವಿಕಿರಣ ಸಂಬಂಧಿಸಿದಂತೆ ರೋಗ, ಅಂಗಾಂಶ ಹಾನಿ, ಅಕಾಲಿಕ ವಯಸ್ಸು  ಮುಂತಾದ ರೋಗಗಳು ಬರುತ್ತವೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಎಸ್.ಬಿ.ರಾಠೋಡ ಮಾತನಾಡಿ ಪರಮಾಣುವಿನಿಂದ ಮಾನವನ ಆರೋಗ್ಯದ ಜೊತೆಗೆ ಪರಿಸರ ಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ ಮುಂತಾದ   ತೊಂದರೆಗಳು ಬರುತ್ತವೆ ಎಂದರು.

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ  ಎಸಿಎಸ್ ಕಾಲೇಜು, ಉಮದಿ (ಮಹಾರಾಷ್ಟ್ರ)ಯ ಸಿಬ್ಬಂದಿಯಾದ ಪ್ರೊ.ಮೇಘಾ ಖಾನಾಪುರ,  ಮತ್ತು ಪ್ರೊ.ವೀಣಾ ಬಿರಾದಾರ ಆಗಮಿಸಿ ಪರಮಾಣು ವಿಕಿರಣದಿಂದ ಆಗುವ ಅನಾಹುತಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ   ಶ್ರೀ ಎಂ.ಕೆ.ಬಿರಾದಾರ, ಐಕ್ಯೂಎಸಿ ಸಂಯೋಜಕರಾದ ಡಾ.ಎಸ್.ಎಸ್.ದೇಸಾಯಿ

ಪ್ರೊ.ಎ.ಎಸ್.ಜಂಗಮಶೆಟ್ಟಿ, ಪ್ರೊ.ಎ.ಎ.ಬಿಡಗೇರ್, ಪ್ರೊ.ಅಶ್ವಿನಿ ಹಿರೇಮಠ,ಬಿಎಸ್ಸಿ ಮತ್ತು ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಪ್ರೊ.ಎ.ಆರ್.ಪಾಟೀಲ ನಿರೂಪಿಸಿದರು, ಪ್ರೊ.ದಿವ್ಯಶ್ರೀ ಬೋಗಾರ ಸ್ವಾಗತಿಸಿದರು, ಪ್ರೊ. ನೇಹಾ ಉಮರಾಣಿ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.