Tuesday, June 16, 2020

17-06-2020 EE DIVASA KANNADA DAILY NEWS PAPER

‘’ಕೋವಿಡ್-19 ಹಿನ್ನಲೆ ಸಂಕಷ್ಟಕ್ಕೆ ಒಳಗಾದ ಉದ್ಯಮಿದಾರರಿಗೆ ಸಾಲ ಸೌಲಭ್ಯ ಕಲ್ಪಿಸಿ’’ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ




ಈ ದಿವಸ ವಾರ್ತೆ
ವಿಜಯಪುರ : ಕೋವಿಡ್-19 ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಉತ್ಪಾದನಾ ಮತ್ತು ಸೇವಾ ಘಟಕಗಳ ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಉದ್ಯಮಿದಾರರಿಗೆ ಸಕಾಲಕ್ಕೆ ಸಾಲ ನೀಡುವಲ್ಲಿ ನೆರವಾಗುವಂತೆ ಖಾಸಗಿ ಬ್ಯಾಂಕ್‍ಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸೂಚಿಸಿದ್ದಾರೆ. 

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ಆತ್ಮನಿರ್ಭರ ಮತ್ತು ಎಮರ್ಜನ್ಸಿ ಕ್ರೇಡಿಟ್ ಲೈನ್ ಗ್ಯಾರೆಂಟಿ ಯೋಜನೆ ಕುರಿತು ಆಯೋಜಿಸಲಾಗಿದ್ದ ವಿವಿಧ ಉದ್ಯಮೆಗಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋವಿಡ್-19 ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಉದ್ಯಮಿದಾರರ ಪುನಶ್ಚೇತನಕ್ಕಾಗಿ ಆತ್ಮನಿರ್ಭರ ಮತ್ತು ಎಮರ್ಜನ್ಸಿ ಕ್ರೇಡಿಟ್ ಲೈನ್ ಗ್ಯಾರೆಂಟಿ ಈ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದು ಜಿಲ್ಲೆಯಲ್ಲಿ ಒಟ್ಟು 253 ಕೋಟಿ ರೂ,ಗಳನ್ನು ಸಾಲಕ್ಕಾಗಿ ಮೀಸಲಿಡಲಾಗಿದೆ. ಅರ್ಹರಿಗೆ ಇದರ ಸದುಪಯೋಗ ದೊರಕುವಂತೆ ನೋಡಿಕೊಳ್ಳಲು ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಅದರಂತೆ ಕೋವಿಡ್-19 ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಜಿಲ್ಲೆಯ ಉದ್ಯಮಿದಾರರಿಗೆ ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೇನೆರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಒವರ್‍ಸಿಸ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯು.ಸಿ.ಓ ಬ್ಯಾಂಕ್ ಮತ್ತು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾಗಳ ಮೂಲಕ ಸಾಲ ಮಂಜೂರಾತಿ ಮಾಡಲಾಗುತ್ತಿದ್ದು, ಈವರಗೆ ಒಟ್ಟು 28 ಕೋಟಿ ರೂಗಳ ಸಾಲ ವಿತರಿಸಲಾಗಿದೆ ಎಂದು ಹೇಳಿದರು.

ಕೋವಿಡ್-19 ತೀವ್ರ ಸಂಕಷ್ಟ ಮತ್ತು ವಿಷಮ ಪರಿಸ್ಥಿತಿ ಇದಾಗಿದ್ದು ಆರ್.ಬಿ.ಐ ಮಾರ್ಗಸೂಚಿ ಮತ್ತು ನಿರ್ದೇಶನಗಳಂತೆ ಖಾಸಗಿ ಬ್ಯಾಂಕ್‍ಗಳು ಕೂಡಾ ಸಕಾಲಕ್ಕೆ ಅರ್ಹ ಫಲಾನುಭವಿ ಉದ್ಯಮಿದಾರರಿಗೆ ಸಾಲ ಮಂಜೂರಾತಿಗೆ ಕ್ರಮಕೈಗೊಳ್ಳಬೇಕು. ಕಷ್ಟದ ಈ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸಿದ ಗ್ರಾಹಕರಿಗೆ ಸಕಾಲಕ್ಕೆ ನೆರವಾಗಬೇಕು. ಇದಕ್ಕೆ ಸ್ಪಂದಿಸದ ಬ್ಯಾಂಕ್‍ಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾತಿಗೆ ಕ್ರಮಕೈಗೊಳ್ಳುವುದರ ಜೊತೆಗೆ ಸರ್ಕಾರದ ಗಮನಕ್ಕೂ ಸಹ ತರುವುದಾಗಿ ಎಚ್ಚರಿಕೆ ನೀಡಿದರು.

ಈ ಯೋಜನೆಯ ರೋಪುರೇಷೆಗಳ ಬಗ್ಗೆ ಖಾಸಗಿ ಬ್ಯಾಂಕ್‍ಗಳಿಗೆ ಮನವರಿಕೆ ಮಾಡುವಂತೆ ತಿಳಿಸಿದ ಅವರು ಆರ್.ಬಿ.ಐ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸುವಂತೆ ಸೂಕ್ತ ತಿಳುವಳಿಕೆ ನೀಡಲು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು 2020ರ ಅಕ್ಟೋಬರ್ 31ರ ರೊಳಗೆ ಈ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಅವಕಾಶ ಇರುವುದರಿಂದ ಮತ್ತು ವ್ಯಾಪಾರ ವಹಿವಾಟಿಗೆ ಪ್ರೋತ್ಸಾಹದಾಯಕ ವಾಗಿರುವುದರಿಂದ ಇವುಗಳ ಲಾಭ ದೊರಕಿಸುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀ ಸೋಮನಗೌಡ ಅವರು ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ 3 ಲಕ್ಷ ರೂಗಳ ವರೆಗೆ ಸಾಲ ಪಡೆಯಲು ಅವಕಾಶವಿದ್ದು, ಅರ್ಹ ಸಣ್ಣ, ಅತೀ ಸಣ್ಣ ಮತ್ತು ಮದ್ಯಮ (ಎಂ.ಎಸ್.ಎಂ.ಇ) ಉದ್ಯಮಿದಾರರು ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಿಗೆ ಸಂಪರ್ಕಿಸಿ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಬರುವ ಅಕ್ಟೋಬರ್ 31 ರೊಳಗೆ ಮೊದಲು ಬಂದವರಿಗೆ ಪ್ರಥಮ ಆಧ್ಯತೆ ಮೇಲೆ ಸಾಲ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ. 

ಇದೇ ಸಂದರ್ಭದಲ್ಲಿ ವಿವಿಧ ಉದ್ಯಮಿಗಳೊಂದಿಗೆ ಸಂವಾದ ನಡೆಸಿ ವಿವಿಧ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು. ಸಭೆಯಲ್ಲಿ ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ಲೀಡ್ ಬ್ಯಾಂಕ್ ಮ್ಯಾನೇಜರ್ ಸೋಮನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು. 

‘’ದ್ವಿತೀಯ ಪಿಯುಸಿಯ ಇಂಗ್ಲೀಷ ಪರೀಕ್ಷೆಗೆ 41 ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ’’ : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ



ವಿಜಯಪುರ : ದ್ವಿತೀಯ ಪಿಯುಸಿಯ ಇಂಗ್ಲೀಷ ವಿಷಯದ ವಾರ್ಷಿಕ ಪರೀಕ್ಷೆಯು ದಿನಾಂಕ : 18-06-2020 ರಂದು ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಪರೀಕ್ಷಾಕೇಂದ್ರದ ಸುತ್ತಮುತ್ತಲು 200 ಮೀಟರ್‌ಅಂತರದಲ್ಲಿ 144 ಕಲಂ ಜಾರಿಮಾಡಿ ಪರೀಕ್ಷಾಕೇಂದ್ರದ ಸುತ್ತಮುತ್ತಲಿರುವಝರಾಕ್ಸ್, ಸೈಬರ್‌ಕೆಫೆ, ಕೋಚಿಂಗ್ ಕ್ಲಾಸ್‌ಗಳನ್ನು ಬಂದು ಮಾಡಲುಕ್ರಮ ಕೈಗೊಳ್ಳಲಾಗಿದೆ. ಕೊವಿಡ್-19 ಕರೋನಾ ವೈರಸ್ ಹರಡಿರುವ ಪ್ರಯುಕ್ತ ಪರೀಕ್ಷೆಗೆ ಬರುವ ಪ್ರತಿ ವಿದ್ಯಾರ್ಥಿಯುಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌ತಮಗೆಕುಡಿಯಲು ನೀರಿನ ಬಾಟಲ್‌ಎರಡು ಪೆನ್ನುಗಳು ತೆಗೆದುಕೊಂಡು ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್ ಸ್ಕಾö್ಯನರ್‌ನಿಂದ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ಮಾಡಿ ಸಾಮಾಜಿಕಅಂತರವನ್ನು ಪಾಲಿಸಲು ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಮಾಡಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಬೆಳಗ್ಗೆ 8:00 ಗಂಟೆಗೆ ಹಾಜರಿರಲು ತಿಳಿಸಿದೆ. ಯಾವುದೇಕಾರಣಕ್ಕೂ ನಿಗದಿತ ಸಮಯವನ್ನು ಮೀರಿ ಪರೀಕ್ಷಾಕೇಂದ್ರಕ್ಕೆಆಗಮಿಸುವುದನ್ನುಕಡ್ಡಾಯವಾಗಿ ನಿಷೇಧಿಸಿದೆ ಎಂದರು.

ದ್ವೀತಿಯ ಪಿಯು ಪರೀಕ್ಷಾ ಅಂಗವಾಗಿ ಜಿಲ್ಲೆಯ ವಿಜಯಪುರ ನಗರದಲ್ಲಿ 12 ಪರೀಕ್ಷಾ ಕೇಂದ್ರಗಳು, ಬಬಲೇಶ್ವರ ನಗರದಲ್ಲಿ 01, ತಿಕೋಟಾದಲ್ಲಿ 01, ಚಡಚಣತಾಲ್ಲೂಕಿನಲ್ಲಿ 03, ಇಂಡಿತಾಲ್ಲೂಕಿನಲ್ಲಿ 04, ಸಿಂದಗಿ ನಗರದಲ್ಲಿ 03, ದೇವರ ಹಿಪ್ಪರಗಿತಾಲ್ಲೂಕಿನಲ್ಲಿ 01, ತಾಳಿಕೋಟಿ ತಾಲ್ಲೂಕಿನಲ್ಲಿ 04, ಬಸವನ ಬಾಗೇವಾಡಿತಾಲ್ಲೂಕಿನಲ್ಲಿ 04, ನಿಡಗುಂದಿ ತಾಲ್ಲೂಕಿನಲ್ಲಿ 02,ಮುದ್ದೇಬಿಹಾಳ ತಾಲ್ಲೂಕಿನಲ್ಲಿ 04 ಹಾಗೂ ಆಲಮೇಲ ತಾಲ್ಲೂಕಿನಲ್ಲಿ 02 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 23556 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಬಾಲಕರ ಸರಕಾರಿ ಪದವಿ ಪೂರ್ವಕಾಲೇಜು, ವಿಜಯಪುರಇಲ್ಲಿ 1370 ವಿದ್ಯಾರ್ಥಿಗಳು ಇರುವುದರಿಂದ ಹೆಚ್ಚುವರಿ ಬ್ಲಾಕ್‌ನ್ನು ಸಿಕ್ಯಾಬ ತಾಂತ್ರಿಕ ಮಹಾವಿದ್ಯಾಲಯದಲ್ಲಿ 504 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದ್ದು, ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ 734343 ರಿಂದ 734930 ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಿಕ್ಯಾಬ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬರೆಯಬೇಕಾಗಿರುವುದರಿಂದ ಈ ನೋಂದಣಿ ಸಂಖ್ಯೆಯಲ್ಲಿ ಬರತಕ್ಕಂತಹ ವಿದ್ಯಾರ್ಥಿಗಳು ಖಚಿತ ಪಡಿಸಿಕೊಳ್ಳಲು ಶ್ರೀ ಬಿ.ಬಿ. ಗಂಗನಹಳ್ಳಿ, ಪ್ರಾಚಾರ್ಯರು, ಬಾಲಕರ ಸರಕಾರಿ ಪದವಿ ಪೂರ್ವಕಾಲೇಜು, ವಿಜಯಪುರಇವರ ಮೊಬೈಲ್ ಸಂ : 7760212470 ಕರೆ ಮಾಡಿ ಮಾಹಿತಿ ಪಡೆಯತಕ್ಕದ್ದು ಹಾಗೂ ಶ್ರೀ ಬಿ.ಕೆ ಉಂಬರ್ಜೆ, ಮುಖ್ಯಅಧೀಕ್ಷಕರು, ಬಾಲಕರ ಸರಕಾರಿ ಪದವಿ ಪೂರ್ವಕಾಲೇಜು, ವಿಜಯಪುರಇವರ ಮೊಬೈಲ್ ಸಂ : 9449169025 ಮತ್ತು ಶ್ರೀ ಎನ್.ಎಸ್ ಭೂಸನೂರ, ಪ್ರಾಚಾರ್ಯರು, ಸಿಕ್ಯಾಬ ಬಾಲಕರ ಪದವಿ ಪೂರ್ವಕಾಲೇಜು, ವಿಜಯಪುರಇವರ ಮೋಬೈಲ್ ಸಂ : 9341613241 ಈ ಮೊಬೈಲ್ ಸಂಖ್ಯೆಗಳಿಗೆ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಕರೆ ಮಾಡಿ ತಿಳಿದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಇಲಾಖೆಯ ನಿಯಮಾನುಸಾರ ಈ ಕಛೇರಿಯಿಂದ ಪ್ರಾಚಾರ್ಯರು / ಉಪನ್ಯಾಸಕರುಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸದರಿ ನೊಡಲ್ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಮಾಡಿದ ಬಗ್ಗೆ ಪರೀಕ್ಷಾ ಕೊಠಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೋಗುವಂತೆ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ, ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕಾö್ಯನರ್‌ನಿಂದ ತಪಾಸಣೆ ಮಾಡಲು ಕ್ರಮ ಕೈಗೊಂಡ ಬಗ್ಗೆ  ಪರಿಶೀಲಿಸಿ ವರದಿ ನೀಡುವುದು ಹಾಗೂ ಇದರಂತೆಯೇಕ್ರಮ ಕೈಗೊಳ್ಳುಬೇಕು ಎಂದು ತಿಳಿಸಿದ್ದಾರೆ.

ಕಂಟೋನ್ಮೇAಟ್‌ಜೋನ್‌ನಿAದ ಬಂದAತಹ ವಿದ್ಯಾರ್ಥಿಗಳನ್ನು ಪ್ರತ್ಯೇಕಕೊಠಡಿಯಲ್ಲಿ ಪರೀಕ್ಷೆ ಬರೆಯಲುಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಗೆ ಹೋರ ರಾಜ್ಯಗಳಿಂದ 04 ವಿದ್ಯಾರ್ಥಿಗಳು (ಮುಂಬೈಠಾಣೆ, ಪುಣೆ, ಸೊಲ್ಲಾಪೂರ) ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 917 ಜನ ವಿದ್ಯಾರ್ಥಿಗಳು ಈ ಜಿಲ್ಲೆಯಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷಾ ಅವಧಿಗಾಗಿ ಸಹಾಯವಾಣಿ ಕೇಂದ್ರದ ಸಹಾಯಕರಾಗಿ ಶ್ರೀ ಕೆ.ಎ. ಉಪ್ಪಾರ, ಪ್ರಾಚಾರ್ಯರು, ಸರಕಾರಿ ಪದವಿ ಪೂರ್ವಕಾಲೇಜು, ಲಚ್ಯಾಣ (9449645489), ಶ್ರೀ ಬಿ.ಎಸ್. ಗೌರಿ, ಉಪನ್ಯಾಸಕರು, ಸರಕಾರಿ ಪದವಿ ಪೂರ್ವಕಾಲೇಜು, ಹಳಗುಣಕಿ (9448186493) ಶ್ರೀ ವಿ.ಎ. ಕುದರಿ, ಉಪನ್ಯಾಸಕರು, ಬಿ.ಎಸ್ ಪವಾರ ಪದವಿ ಪೂರ್ವಕಾಲೇಜು, ಗೊಳಸಂಗಿ (9611464346) ಸದರಿ ಸಹಾಯವಾಣಿಕೇಂದ್ರದ ಸಹಾಯಕರು ವಿದ್ಯಾರ್ಥಿಗಳು ಮತ್ತು ಪಾಲಕರು ಪರೀಕ್ಷೆಯ ಬಗ್ಗೆ ಮಾಹಿತಿ ಕೇಳಿದಲ್ಲಿ ಮಾಹಿತಿಯನ್ನು ನೀಡಲಿರುತ್ತಾರೆ. ದಿನಾಂಕ : 16-06-2020 ರಿಂದ 18-06-2020 ರ ವರೆಗೆ 24*7 ಕಾರ್ಯನಿರ್ವಹಿಸಲಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.