Thursday, December 7, 2023

ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು : ಸಿಎಂ ಸಿದ್ಧರಾಮಯ್ಯ

ಈ ದಿವಸ ವಾರ್ತೆ

ಬೆಳಗಾವಿ: ಮಹಿಳೆಯರು  ತಯಾರಿಸಿದ ವಸ್ತುಗಳಿಗೆ ಮಾರಾಟ ವ್ಯವಸ್ಥೆ ದೊರೆತಾಗ ಮಾತ್ರ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಪಡೆಯಲು ಸಾಧ್ಯ. ಗುಣಮಟ್ಟದ ವಸ್ತುಗಳನ್ನು ತಯಾರಿಸುವ ಶಕ್ತಿ ಉತ್ಪಾದಕರಿಗೆ ಇರಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ಅವರು ಇಂದು ಸ್ವಸಹಾಯ ಸಂಘಗಳು ತಯಾರಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಮಾರಾಟ ಹೆಚ್ಚಾದರೆ ಉತ್ಪನ್ನಗಳ ಉತ್ಪಾದನೆಯೂ ಹೆಚ್ಚಾಗಲು ಸಾಧ್ಯ. ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಕ್ಕು ಅದರಿಂದ ಜೀವನ ನಡೆಯಬೇಕು. ಮಹಿಳೆಯರು ಕುಟುಂಬದ ಜವಾಬ್ದಾರಿಯನ್ನು ವಹಿಸುತ್ತಾರೆ. ಅವರು ಶ್ರಮಜೀವಿಗಳು. ಶೇ 50 ರಷ್ಟಿರುವ ಮಹಳೆಯರು ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಮಹಿಳೆಯರು ದೌರ್ಜನ್ಯ, ಶೋಷಣೆಗೆ ಒಳಗಾಗಿರುವ ವರ್ಗ.  ಈ ವರ್ಗ ಶಿಕ್ಷಣ ದೊರೆತು ಆರ್ಥಿಕವಾಗಿ ಸಬಲರಾಗಬೇಕು. ಶಕ್ತಿ ವೃದ್ಧಿ ಮಾಡಲು ವಸ್ತು ಪ್ರದರ್ಶನ ಮಾರಾಟ ಮೇಳಗಳನ್ನು ಸರ್ಕಾರ ಏರ್ಪಾಡು ಮಾಡಿದೆ. ಉದ್ಯೋಗ ಸೃಷ್ಟಿಸಲು ಆರ್ಥಿಕ ನೆರವು , ತರಬೇತಿ, ಸ್ವಯಂ ಉದ್ಯೋಗಕ್ಕೆ ಶಕ್ತಿ ಅಗತ್ಯ. ಗುಣಮಟ್ಟದ ವಸ್ತುಗಳನ್ನು ತಯಾರಿಸುವ ಶಕ್ತಿ ಉತ್ಪಾದಕರಿಗೆ ಇರಬೇಕು. ಸ್ಪರ್ಧಾತ್ಮಕ ಸಮಾಜದಲ್ಲಿ ನಾವೂ ನಮ್ಮ ಅಸ್ತಿತ್ವ ಕಾಪಾಡಿಕೊಳ್ಳಬೇಕು. ರಾಜ್ಯದಲ್ಲಿ 3.48 ಲಕ್ಷ ಸ್ವಸಹಾಯ ಸಂಘಗಳಿವೆ. 39.30 ಲಕ್ಷ ಕುಟುಂಬಗಳು ಗ್ರಾಮೀಣ ಜೀವನೋಪಾಯಡಿಯಲ್ಲಿ  ಬರುತ್ತವೆ. ನಗರ ಪ್ರದೇಶದಲ್ಲಿ 33 ಸಾವಿರ ಸ್ವಸಹಾಯ ಸಂಘಗಳಿವೆ. 3.96 ಲಕ್ಷ ಕುಟುಂಬಗಳು ತೊಡಗಿಸಿಕೊಂಡಿವೆ. ಇಷ್ಟೊಂದು ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ಸರ್ಕಾರ ನೀಡಿದೆ ಎಂದರು.

12600 ಗುಂಪುಗಳಿಗೆ 1 ಕೋಟಿ ರೂ.ಗಳು:

ಸ್ವಸಹಾಯ ಸಂಘಗಳಿಗೆ ಪ್ರತಿ ಸ್ವಸಹಾಯ ಸಂಘಗಳಿಗೆ 1 ಲಕ್ಷ ರೂ.ಗಳ ನೆರವು ನೀಡುತ್ತದೆ. 131 ಕೋಟಿ ರೂ.ಗಳನ್ನು ವ್ಯಯ ಮಾಡಿ 12600 ಗುಂಪುಗಳಿಗೆ ಈ ವರ್ಷ ಸಹಾಯ ಮಾಡಿದೆ. ಕಳೆದ ವರ್ಷ ವ್ಯಾಪಾರ ಮೇಳದಲ್ಲಿ 3 ಕೋಟಿ ರೂ.ಗಳ ವಹಿವಾಟು ನಡೆದಿದೆ. ಮಹಿಳೆಯರನ್ನು ಸಬಲರನ್ನಾಗಿ ಮಾಡಲು ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ. ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣವನ್ನು ನೀಡಿದ್ದು ಮಹಿಳೆಯರು ಮನೆಗಳಿಗೆ ಸೀಮಿತವಾಗದೆ ರಾಜ್ಯದ ಮೂಲೆ ಮೂಲೆಗಳಿಗೂ ಹೋಗಬೇಕು. 100 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಓಡಾಡಿದ್ದಾರೆ. ಪ್ರತಿ ದಿನ 50-60 ಲಕ್ಷ ಜನ ಮಹಿಳೆಯರು ಬಸ್ಸುಗಳಲ್ಲಿ ಓಡಾಡಿದ್ದಾರೆ ಎಂದು ವಿವರಿಸಿದರು.

ಗೃಹ ಲಕ್ಷ್ಮೀ ಯೋಜನೆಯಡಿ 2000 ರೂ.ಗಳನ್ನು ಈವರೆಗೆ 1.17 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. 1.14 ಲಕ್ಷ ಮಹಿಳೆಯರಿಗೆ 2000 ರೂ.ಗಳನ್ನು ನೀಡಲಾಗುತ್ತಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 170 ರೂ.ಗಳನ್ನು ಪ್ರತಿಯೊಬ್ಬರಿಗೂ ಅಕ್ಕಿಗೆ ಬದಲಾಗಿ ಕೊಡುತ್ತಿದ್ದೇವೆ. ಯುವನಿಧಿ ಯೋಜನೆಯ ಪ್ರಕ್ರಿಯೆ ನಡೆಯುತ್ತಿದ್ದು ಜನವರಿಯಲ್ಲಿ ಕೊಡಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಮಹಿಳೆಯರು ದೇಶದ ಜಿಡಿಪಿಗೆ  ಕೊಡುಗೆಯನ್ನು ನೀಡಬೇಕು:

 ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು. ಅವರೂ ದೇಶದ ಜಿಡಿಪಿಗೆ  ಕೊಡುಗೆಯನ್ನು ನೀಡಬೇಕು ಎಂದರು. ಆರು ತಿಂಗಳಲ್ಲಿ ಇವೆಲ್ಲವನ್ನೂ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ಹೆಚ್ಚು ಲಾಭ ಸಿಗಲು ಗುಣಮಟ್ಟದ ವಸ್ತುಗಳನ್ನು ತಯಾರು ಮಾಡಬೇಕು. ಅದಕ್ಕೆ ಅಗತ್ಯವಿರುವ ತಾಂತ್ರಿಕ ಜ್ಞಾನವನ್ನು ಕೊಡುವ ಕೆಲಸವನ್ನು ಇಲಾಖೆ ಮಾಡುತ್ತದೆ.   ಯುವಕ, ಯುವಕರಿಗೆ  ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯಾಭಿವೃದ್ಧಿ ಮಾಡಿದರೆ 2 ವರ್ಷಗಳಲ್ಲಿ ಉದ್ಯೋಗ ಸಿಗುವುದು ಸುಲಭವಾಗುತ್ತದೆ. ತರಬೇತಿ  ಮತ್ತು ಯುವನಿಧಿ ಎರಡೂ ಆದರೆ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಬದಲಾವಣೆ ತರಲು ಸಾಧ್ಯವಾಗುತ್ತದೆ. ಯುವ ಶಕ್ತಿ, ಮಹಿಳೆಯರು ರಾಜ್ಯದ ಸಂಪತ್ತು. ಆದ್ದರಿಂದ ನಿಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್ ಪಾಟೀಲ್, ಅಧ್ಯಕ್ಷತೆಯನ್ನು ಶಾಸಕ ಆಸಿಫ್ ಸೇಠ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಅಧಿಕಾರಿಗಳು ಉಪಸ್ಥಿತರಿದ್ದರು.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.

08-12-2023 EE DIVASA KANNADA DAILY NEWS PAPER

ನ್ಯೂಯಾರ್ಕ್‍ನ ಬ್ರಾಂಕ್ಸ್‍ನ ಆಲ್ಬರ್ಟ್ ಐನ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್‍ನಲ್ಲಿ ಪೋಸ್ಟ್ ಡಾಕ್ಟರಲ್ ರಿಸರ್ಚ್ ಫೆಲೋ ಆಗಿ ಡಾ. ನಿವೇದಿತಾ ಎಸ್. ಪೂಜಾರಿ ಆಯ್ಕೆ

ಈ ದಿವಸ ವಾರ್ತೆ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಬಯೋ ಇನ್ಫಮ್ರ್ಯಾಟಿಕ್ಸ್‍ನಲ್ಲಿ ಪಿಎಚ್‍ಡಿ ಗಳಿಸಿದ ಡಾ. ನಿವೇದಿತಾ ಎಸ್. ಪೂಜಾರಿ ನ್ಯೂಯಾರ್ಕ್‍ನ ಬ್ರಾಂಕ್ಸ್‍ನ ಆಲ್ಬರ್ಟ್ ಐನ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್‍ನಲ್ಲಿ ಪೆÇೀಸ್ಟ್ ಡಾಕ್ಟರಲ್ ರಿಸರ್ಚ್ ಫೆಲೋ ಆಗಿ ಆಯ್ಕೆಯಾಗಿದ್ದಾರೆ.   

ಡಾ.ನಿವೇದಿತಾ ಅವರು ಡಾಕ್ಟರೇಟ್ ಸಂಶೋಧನೆಯನ್ನು ಡಾ. ಜಾಯ್ ಎಚ್. ಹೊಸಕೇರಿ ಅವರ ಮಾರ್ಗದರ್ಶನದಲ್ಲಿ ಕೈಕೊಂಡಿದ್ದು, ಮೈನರ್ ಮಿಲೆಟ್‍ಗಳ ಆಂಟಿ-ಹೈಪರ್ಲಿಪಿಡೆಮಿಕ್ ಪರಿಣಾಮಗಳನ್ನು ಮತ್ತು ಅವುಗಳ ಮಾಲ್ಟ್ ಪೆÇ್ರೀಟೀನ್‍ಗಳನ್ನು ಪ್ರತಿಲೇಖನ ವಿಶ್ಲೇಷಣೆಯ ಮೂಲಕ ಸಂಶೋಧನೆ ಕೈಕೊಂಡಿದ್ದರು. 

ಈಗ, ಆಲ್ಬರ್ಟ್ ಐನ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್‍ನಲ್ಲಿ, ಡಾ. ನಿವೇದಿತಾ ಅವರು ನ್ಯೂರೋಟ್ರೋಪಿಕ್ ಹರ್ಪಿಸ್ ವೈರಸ್ ಅಸೆಂಬ್ಲಿ ಮತ್ತು ಟ್ರಾಫಿಕಿಂಗ್‍ನ ಮೈಕ್ರೋಸ್ಕೋಪಿಕ್ ಇಮೇಜಿಂಗ್ ವಿಶ್ಲೇಷಣೆ ಕುರಿತು ಸಂಶೋಧನೆ ನಡೆಸಲಿದ್ದು, ಪ್ರಾಯೋಜಕ ಸಂಸ್ಥೆಯಾದ ಆಲ್ಬರ್ಟ್ ಐನ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್ ಡಾ.ನಿವೇದಿತಾ ಅವರಿಗೆ $58,179 ಡಾಲರ್ ಫೆಲೋಶಿಪ್ ನೀಡಿದೆ. 

ಡಾ. ನಿವೇದಿತಾ ಅವರು ವೈಜ್ಞಾನಿಕ ಜ್ಞಾನವನ್ನು ಮುಂದುವರೆಸಲು ಅವರ ಸಮರ್ಪಣೆ, ಅವರ ಅಲ್ಮಾ ಮೇಟರ್ ಮತ್ತು ಆಲ್ಬರ್ಟ್ ಐನ್‍ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್‍ನ ಬೆಂಬಲದೊಂದಿಗೆ, ಬಯೋಇನ್‍ಫಮ್ರ್ಯಾಟಿಕ್ಸ್ ಮತ್ತು ನ್ಯೂರೋಟ್ರೋಪಿಕ್ ವೈರಸ್ ಸಂಶೋಧನೆಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುವ ಭರವಸೆ ಇದೆ ಎಂದು ಡಾ.ಜಾಯ್ ಹೊಸಕೇರಿ ಆಶಯ ವ್ಯಕ್ತಪಡಿಸಿದ್ದಾರೆ. 

ಡಾ.ನಿವೇದಿತಾ ಅವರ ಸಾಧನೆಗೆ ವಿವಿಯ ಕುಲಪತಿ ಡಾ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ ಅವರು ಅಭಿನಂದಿಸಿದ್ದಾರೆ. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.

ರೇಖಾಗೆ ಪಿಎಚ್.ಡಿ ಪದವಿ

ಈ ದಿವಸ ವಾರ್ತೆ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರೇಖಾ ಗಣಿಹಾರ ಅವರು ಸಲ್ಲಿಸಿದ್ದ “ಚೈಲ್ಡ್ ಮ್ಯಾರೇಜ್ ಆಂಡ್ ರಿಪ್ರೊಡಕ್ಟಿವ್ ಹೆಲ್ತ್: ಎ ಸೋಷಿಯೊಲಾಜಿಕಲ್ ಸ್ಟಡಿ ಇನ್ ವಿಜಯಪುರ ಡಿಸ್ಟ್ರಿಕ್ಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‍ಡಿ  ಪದವಿ ನೀಡಿದೆ. 

ರೇಖಾ ಗಣಿಹಾರ ಅವರು ಸಮಾಜಶಾಸ್ತ್ರ ವಿಭಾಗದ ಡಾ.ಎಮ್.ಪಿ.ಬಳಿಗಾರ ಅವರ ಮಾರ್ಗದರ್ಶನದಲ್ಲಿ  ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ರೇಖಾ ಗಣಿಹಾರ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಕರ  ಅಭಿನಂದಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.