Monday, June 8, 2020

ಬಿಕ್ಕಳಿಸಿದ ಅವ್ವ



ನವಮಾಸ ಹೊತ್ತು
ರಕ್ತ ಮಾಂಸ ತುಂಬಿ
ಆಕಾರ ಕೊಟ್ಟ 
ಗರ್ಭಕೆ ಕಪ್ಪನೆ
ಕಾರ್ಮೊಡ ಕವಿದು 
ಬದುಕಿನ ಕ್ಷಣ ಕ್ಷಣವು
ದುರಗಮನವಾಗಿ
ಸಂಚಾರಿಸುತ್ತಿರಲು
ಬೇಡಾ ತಾಯಿ
ಸಾಕು ಮಾಡು 
ಗರ್ಭಧರಿಸಿ
ಧರೆಯನ್ನು ಕಾಣಿಸುವದು

ಹಾಲುಣಿಸುವಾಗ
ಕಚ್ಚಿಕಚ್ಚಿ ಹೀರಿದ ಮೊಲೆ ತೊಟ್ಟು
ಆಕಾಶಕ್ಕೆ ಬಾಯತೆರೆದು
ನಿಂತರು ಹಸಿದ ಹೊಟ್ಟೆಗೆ 
ಮಾಂಸದ ಹಾಲುಣಿಸಿ
ನಗುವ ಹಾಗೆ ಮಾಡಿದ 
ನಿನಗೆ ಇವತ್ತು ಬೀದಿಗೆ
ತಂದಿಕ್ಕಿದ್ದಾರೆ ಮರುಳರು

ನೆತ್ತಿಯ ಬಡಿತ ಹೆಚ್ಚಸಬಾರದೆಂದು
ಗಂಧ ಮಿಶ್ರಿತ ದ್ರವ್ಯವನ್ನು
ಸವರಿ ಮುದ್ದಾಗಿ ತಿಡಿದ 
ನಿನ್ನ ಕೊಮಲ ಬೆರಳಿಗೆ
ಹಾದಿ ಬೀದಿ ಕಸಗುಡಿಸಲು 
ಹಚ್ಚಿ ಮೆರೆಯುತ್ತಿದ್ದಾರೆ
ಸಾಕು ತಾಯಿ ಧರೆಗೆ ಎಂದು
ಕರೆಯಬೇಡ  

ಮೆತ್ತನೆಯ ಹಾಸಿಗೆ ಹೊದಿಕೆ ಮಾಡಿ  ಮಲಗಲೆಂದು
ಕೈಯನ್ನೆ ದಿಂಬವಾಗಿಸಿ ಪಕ್ಕಕ್ಕೆ ಜಾರಿ ನಿದ್ರೆಮಾಡಿದ ನಿನಗೆ ಸ್ವಾರ್ಥ ತುಂಬಿದ 
ಮನುಜ  ಹುಚ್ಚಿ ಪಟ್ಟಕಟ್ಟಿ
ರೈಲ್ವೆ ಬಸ್ಸಸ್ಟಾಂಡಗಳಲ್ಲಿ
ದಿನ ನಿತ್ಯ ಮಲಗುವಂತೆ
ಮಾಡಿ ಹೆಂಡರ ಮಕ್ಕಳಜೊತೆ
ಕುರ್ಲಾನ ಹಾಸಿಗೆಯಲ್ಲಿ
ಮೂಢತ್ವದಿಂದ ಕಾಲು ಚಾಚಿ 
ಮಲಗಿದ್ದಾನೆ ತಾಯೇ

ಹಾಲುಂಡ ಎದೆಗೆ
ಚೂರಿಇರಿಸಿದ ಮನುಷ್ಯ
ಇನ್ನೆಂದು ಬದಲಾದಾನು
ದಯವಿಟ್ಟು ಬಿಕ್ಕಳಿಸಬೇಡ
ಮತ್ತೆ ಮರುಕಳಿಸುತ್ತೆ
ಬಿಕ್ಕಳಿಕೆಯ ನಾದ
ಹೊರಬರುವ ಕಾಲ


ಡಾ.ಸುಜಾತಾ.ಸಿ 

ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಗೇ ನೇಮಕ


ಈ ದಿವಸ ವಾರ್ತೆ
ವಿಜಯಪುರ:
ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯ
ವಿಜಯಪುರ ಜಿಲ್ಲೆಯ  ನಿರ್ದೇಶಕರಾಗಿ ಪ್ರವೀಣಗೌಡ ಪಾಟೀಲ, ತಾಲೂಕು ನಿರ್ದೇಶಕರಾಗಿ  ಪ್ರಶಾಂತ ಬಡಿಗೇರ ಹಾಗೂ ಜಿಲ್ಲಾ ಜಂಟಿ ನಿರ್ದೇಶಕರನ್ನಾಗಿ ಮುಖೇಶ ದಂಡಿನ  ಅವರನ್ನು ನೇಮಕ ಮಾಡಲಾಗಿದೆ ಎಂದು ಬೆಂಗಳೂರಿನ  ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯ ಸ್ಥಾಪಕ, ಮಹಾ ನಿರ್ದೇಶಕ ಮುರಳೀಧರ
 ಕೆ.ಎಸ್. ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ಇಂದಿನಿಂದ ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಜಾರಿ -ಎಸ್.ಪಿ. ಅನುಪಮ್ ಅಗರವಾಲ್


ಈ ದಿವಸ ವಾರ್ತೆ
ವಿಜಯಪುರ: ಕೋವಿಡ್-19 ಸಾಂಕ್ರಾಮಿಕ ರೋಗದ ಸಂಕಷ್ಠದ ಪರಿಸ್ಥಿತಿಯಲ್ಲಿ ಸಾರ್ವಜನಿಕರೊಂದಿಗೆ ಬೆರೆಯುವುದರ ಜೊತೆಗೆ ರಕ್ಷಣೆಗೆ ಶ್ರಮಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದ್ಧಿಗಳಿಗೆ ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಇಂದಿನಿಂದ ಜಾರಿಗೆ ತಂದಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್.ಓ.ಪಿ ಬಿಡುಗಡೆ ಸಮಾರಂಭ ಅಂಗವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೋವಿಡ್-19 ಸಾಂಕ್ರಮಿಕ ರೋಗದ ವಿರುದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಹಗಲು ರಾತ್ರಿ ಹೋರಾಡುತ್ತಿದ್ದು, ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಇಂದಿನಿಂದ ಜಾರಿಗೆ ತಂದ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದ್ಧಿಗಳ ಕಾರ್ಯಾಚರಣೆ ವಿಭಿನ್ನವಾಗಲಿದೆ ಎಂದರು.
ಈ ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ. ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರ ದೂರುಗಳಿಗೆ, ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳು ಸೇರಿದಂತೆ ಶಾಂತಿ ಸೂವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಿ ತಮ್ಮ ಸುರಕ್ಷತೆಯು ಗಮನದಲ್ಲಿಡುವ ಅಗತ್ಯವಿದೆ. ಕಾರಣ ಈ ವಿಧಾನ ಕೋವಿಡ್ ಪರಿಸ್ಥಿತಿಯ ಈ ಸಂದರ್ಭದಲ್ಲಿ ಹೆಚ್ಚು ನೆರವಾಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಜಿಲ್ಲಾ ಪ್ರಮಾಣಿತ ಕಾರ್ಯಾಚರಣೆ ವಿಧಾನ ಇಂದಿನಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಸ್.ಓ.ಪಿ ರಾಜ್ಯಾದ್ಯಂತ ಪ್ರಾರಂಭವಾದ ನಂತರ ಮತ್ತಷ್ಟು ಮುತುವರ್ಜಿ ವಹಿಸಲಾಗುವುದು. ಈವರೆಗೆ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಮಾಧ್ಯಮ ಸ್ನೆಹಿತರು ತೋರಿರುವ ಸಹಕಾರ ಅಮೋಘವಾಗಿದೆ. ಸಾರ್ವಜನಿಕರ ನೆಮ್ಮದಿಯ ಜೀವನಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಮಾತನಾಡಿ ಕೋವಿಡ್-19 ಸಂಕಷ್ಠದ ಪರಿಸ್ಥಿತಿಯಲ್ಲಿ ಎಲ್ಲ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾರ್ವಜನಿಕರು ಸಮಾಜದಲ್ಲಿ ನೆಮ್ಮದಿ ಬದುಕು ಸಾಗಿಸಲು ಎಲ್ಲರು ನೀಡುತ್ತಿರುವ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ್ ರೆಡ್ಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರು ಆಸ್ಪತ್ರೆಯಿಂದ ಚೇತರಿಕೆಯಾಗಿ ಇಂದು ಕಚೇರಿಗೆ ಹಾಜರಾದ ಹಿನ್ನಲೆಯಲ್ಲಿ ಸರಳ ಸಮಾರಂಭ ಏರ್ಪಡಿಸಿ ಅವರನ್ನು ಆತ್ಮಿಯವಾಗಿ ಸ್ವಾಗತಿಸಲಾಯಿತು. ಡಿ.ವೈ.ಎಸ್.ಪಿಗಳು, ಸಿ.ಪಿ.ಐ ಅಧಿಕಾರಿಗಳು, ಮತ್ತು ಇತರೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಕ್ರೋಪೈನಾನ್ಸ ಸಂಸ್ಥೆ ವತಿಯಿಂದ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಮಾಸ್ಕ ಮತ್ತು ಸ್ಯಾನಿಟೈಸರ್ ವಿತರಣೆ

  
 ಈ ದಿವಸ ವಾರ್ತೆ
ಬಸವನ ಬಾಗೇವಾಡಿ: ತಾಲೂಕಿನ ಗ್ರಾಮೀಣ ಕೂಟ ಮೈಕ್ರೋಪೈನಾನ್ಸ ಸಂಸ್ಥೆ ವತಿಯಿಂದ ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ  ಮಾಸ್ಕ ಮತ್ತು ಸ್ಯಾನಿಟೈಸರ್ ನ್ನು ವಿತರಿಸಲಾಯಿತು. ಕೋರನಾ ವಿರುದ್ದ ತಮ್ಮ ಜೀವ ಪಣಕ್ಕೀಟು ಹಗಲು ರಾತ್ರಿ ಶ್ರಮಿಸುತ್ತಿರುವ ಪೋಲಿಸರಿಗೆ ಸಂಸ್ಥೆ ಯ ವತಿಯಿಂದ ಈ ಸೇವೆ ಸಲ್ಲಿಸಲಾಗಿದೆ ಎಂದು ವಲಯ ಮುಖ್ಯಸ್ಥರು ಆನಂದ ಲಮಾಣಿ ತಿಳಿಸಿದರು.ಪಿಸೈಐ ಚಂದ್ರಶೇಖರ ಹರಳೆಕರ ಶಾಖಾ ವ್ಯವಸ್ಥಾಪಕ ಅಜ್ಜುರುದ್ದಿನ,ಗಂಗಾಧರ ಕಲ್ಯಾಣಿ, ಖಾಜು ಪಡೆಕನೂರ,ವಿಜಯ,ಹೋನ್ನಪ್ಪ ಇತರರು ಇದ್ದರು.