Monday, October 2, 2023

03-10-2023 EE DIVASA KANNADA DAILY NEWS PAPER

ಜೆಪಿ ಪಾರ್ಕ್ ಟೇಕ್ವಾಂಡೋ ತರಬೇತಿ ಕೇಂದ್ರದಿಂದ 'ಸ್ವಚ್ಛತಾ ಹೀ ಸೇವಾ' ಅಭಿಯಾನಕ್ಕೆ ಚಾಲನೆ


ಬೆಂಗಳೂರು ನಗರದ ಜೆಪಿ ಪಾರ್ಕ್ ಟೇಕ್ವಾಂಡೋ ತರಬೇತಿ ಕೇಂದ್ರದ ಕ್ರೀಡಾಪಟುಗಳ'ಸ್ವಚ್ಛತಾ ಹೀ ಸೇವಾ' ಅಭಿಯಾನದ ಜಾಥಾ ನಡೆಸುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.

ಈ ದಿವಸ ವಾರ್ತೆ

ಬೆಂಗಳೂರು: ನೆಹರು ಯುವಕೇಂದ್ರ ಬೆಂಗಳೂರು ನಗರ ಹಾಗೂ ಯುವ ಚಟುವಟಿಕೆಗಳ ಮತ್ತು ಕ್ರೀಡಾ ಇಲಾಖೆ ಭಾರತ ಸರ್ಕಾರ, ಜೆಪಿ ಪಾರ್ಕ್ ಟೇಕ್ವಾಂಡೋ ತರಬೇತಿ ಕೇಂದ್ರದ ಕ್ರೀಡಾಪಟುಗಳ ಸಂಯುಕ್ತಾಶ್ರದಲ್ಲಿ 'ಸ್ವಚ್ಛತಾ ಹೀ ಸೇವಾ' ಅಭಿಯಾನದ ಜಾಥಾ ನಡೆಸುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯಕ್ರಮಕ್ಕೆ ಟೇಕ್ವಾಂಡೋ ತರಬೇತಿ ಕೇಂದ್ರದ ಹಿರಿಯ ಬೋಧಕ ಸಿ.ಪಿ. ಪಿಂಚನಾಹಿಯಾ ಅವರು ಚಾಲನೆ ನೀಡಿದರು.


ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಟೇಕ್ವಾಂಡೋ ತರಬೇತಿ ಕೇಂದ್ರದ ಹಿರಿಯ ಬೋಧಕರಾದ ಸಿ.ಪಿ. ಪಿಂಚನಾಹಿಯಾ ಅವರು ಭಾರತದಲ್ಲಿನ ಪ್ರಮುಖ ಯುವ ಸಂಸ್ಥೆಯಾಗಿದ್ದು, ಯುವ ವ್ಯಕ್ತಿಗಳ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಸಮುದಾಯ ನಿರ್ಮಾಣ ಉಪಕ್ರಮಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕೇಂದ್ರೀಕರಿಸಿದೆ ಎಂದರು.


ನಂತರದಲ್ಲಿ "ಸ್ವಚ್ಛತೆಗಾಗಿ ಶ್ರಮದಾನ"  ಇದು ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.  ಈ ಉಪಕ್ರಮವು ಮುಖ್ಯ ಟೇಕ್ವಾಂಡೋ ಬೋಧಕ ಸಿ.ಪಿ. ಪಿಂಚನಾಹಿಯಾ ಅವರು ಅವರ ಮಾರ್ಗದರ್ಶನದಲ್ಲಿ ಜೆಪಿ ಪಾರ್ಕ್‌ನಿಂದ ಸರಿಸುಮಾರು 100 ಟೇಕ್ವಾಂಡೋ ಕ್ರೀಡಾಪಟುಗಳನ್ನು ಒಳಗೊಂಡಿದೆ ಎಂದು ಹೇಳಿದರು.


ಇದರ ಪ್ರಮುಖ ಉದ್ದೇಶ ಸ್ವಚ್ಛತೆಯ ಪ್ರಾಮುಖ್ಯತೆ, ಪ್ಲಾಸ್ಟಿಕ್ ಮಾಲಿನ್ಯದ ದುಷ್ಪರಿಣಾಮಗಳು ಮತ್ತು ಇಂಗಾಲದ ಹೊರ ಸೂಸುವಿಕೆಯನ್ನು ಕಡಿಮೆ ಮಾಡುವ ಅಗತ್ಯತೆಯ ಬಗ್ಗೆ ಸ್ಥಳೀಯ ಸಮುದಾಯವನ್ನು ವಿಶೇಷವಾಗಿ ಯುವಕರನ್ನು ಜಾಗೃತಗೊಳಿಸುವುದು "ಸ್ವಚ್ಛತೆಗಾಗಿ ಶ್ರಮದಾನ" ಉಪಕ್ರಮದ ಪ್ರಾಥಮಿಕ ಉದ್ದೇಶವಾಗಿದೆ.  ಇದು ಸ್ವಚ್ಛ ಮತ್ತು ಹಸಿರು ಪರಿಸರವನ್ನು ಕಾಪಾಡಿಕೊಳ್ಳಲು ಯುವಜನರಲ್ಲಿ ಜವಾಬ್ದಾರಿಯ ಪ್ರಜ್ಞೆ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ತುಂಬಲು ಪ್ರಯತ್ನಿಸಿದೆ ಎಂದರು.


 ಈ ಕಾರ್ಯಕ್ರಮದ ತೀರ್ಮಾನ ವೆಂದರೆ: ನೆಹರು ಯುವ ಕೇಂದ್ರ ಬೆಂಗಳೂರು ನಗರ ನೇತೃತ್ವದಲ್ಲಿ ಜೆಪಿ ಪಾರ್ಕ್‌ನ ಟೇಕ್ವಾಂಡೋ ಕ್ರೀಡಾಪಟುಗಳ ಸಹಯೋಗದೊಂದಿಗೆ "ಸ್ವಚ್ಛತೆಗಾಗಿ ಶ್ರಮದಾನ" ಉಪಕ್ರಮವು ಸ್ವಚ್ಛತೆಯನ್ನು ಉತ್ತೇಜಿಸಲು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಸಮುದಾಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಶ್ಲಾಘನೀಯ ಪ್ರಯತ್ನವಾಗಿದೆ.


ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಆಯೋಜಕರಾದ

 ತರಬೇತಿ ಕೇಂದ್ರದ ಹಿರಿಯ ಬೋಧಕ ಸಿ.ಪಿ. ಪಿಂಚನಾಹಿಯಾ,  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಟೇಕ್ವಾಂಡೋ ಕ್ರೀಡಾಪಟುಗಳಾದ ಡೆಲಿಪ್, ಅಜಪ್, ದ್ಯಾಕರ್ ಮತ್ತು ವಿನೋದ್ ಕುಮಾರ್ ಡಿ. ಚವಾಣ್ ಮತ್ತಿತರರು ಭಾಗವಹಿಸಿದ್ದರು.


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ 3ನೇ ನವೆಂಬರ್ 2023 ದೆಹಲಿ ಚಲೋ ವಿಜಯಪುರದಲ್ಲಿ ಜಾಥಾಗೆ ಚಾಲನೆ ನೀಡಿದ ರಾಜ್ಯಾಧ್ಯಕ್ಷರಾದ ಜೈಕುಮಾರ ಹೆಚ.ಎಸ್.

ಈ ದಿವಸ ವಾರ್ತೆ

ವಿಜಯಪುರ: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ಎಕೆಎಸ್‌ಜಿಇಎಫ್) (ರಿ), ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಪಿಎಫ್‌ಆರ್‌ಡಿಎ ಕಾಯ್ದೆ / ಎನ್‌ಪಿಎಸ್ ರದ್ದುಗೊಳಿಸಿ ನಿಶ್ಚಿತ ಪಿಂಚಣಿ (ಓಪಿಎಸ್) ಮರುಸ್ಥಾಪಿಸುವಂತೆ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಿ ನೌಕರರುಗಳು ಲಕ್ಷೋಪಕ್ಷ ಸಂಖ್ಯೆಯಲ್ಲಿ ಸೇರಿ ನಡೆಸುತ್ತಿರುವ ಬೃಹತ್ ಮಟ್ಟದ ಪ್ರತಿಭಟನಾ ಕಾರ್ಯಕ್ರಮ ದೆಹಲಿ ಚಲೋ 3ನೇ ನವೆಂಬರ್ 2023 ಬೆಳಿಗ್ಗೆ 10 ಗಂಟೆಗೆ ರಾಮಲೀಲಾ ಮೈದಾನ, ನವದೆಹಲಿಯಲ್ಲಿ ಜರುಗಲಿರುವ ಹಿನ್ನೆಲೆ ವಿಜಯಪುರ ನಗರದ ಕರ್ನಾಟಕ ಸರ್ಕಾರ ವಾಣಿಜ್ಯ ತೆರಿಗೆಗಳ ಸಂಕೀರ್ಣದ ಆವರಣದಲ್ಲಿ ದೆಹಲಿ ಚಲೋಗೆ ರಾಜ್ಯಾಧ್ಯಕ್ಷರಾದ ಜೈಕುಮಾರ ಹೆಚ.ಎಸ್. ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ಎಕೆಎಸ್‌ಜಿಇಎಫ್) (ರಿ) ರಾಜ್ಯಾಧ್ಯಕ್ಷರಾದ ಜೈಕುಮಾರ ಹೆಚ.ಎಸ್. ಮಾತನಾಡಿದ ಅವರು, ಕೇಂದ್ರ ಸರ್ಕಾರವು ದೇಶದ ಎಲ್ಲಾ ವಲಯಗಳಲ್ಲೂ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿದ್ದು ರಾಜ್ಯ ಸರ್ಕಾರಗಳೂ ಸಹ ಅದೇ ನೀತಿಗಳನ್ನು ಅನುಸಿರಿಸುವ ಅನಿವಾರ್ಯತೆಗೆ ಸಿಲುಕಿದೆ. ನೌಕರಿ ವಿರೋಧಿ ನೀತಿಗಳಾದ ಪಿಎಫ್ ಆರ್‌ಡಿಎ ಕಾಯಿದೆ ಮುಲಕ ಷೇರು ಮಾರುಕಟ್ಟೆ ಆಧಾರಿತ ಎನ್‌ಪಿಎಸ್ ಪದ್ಧತಿ, ಕಾಲಕಾಲಕ್ಕೆ ವೇತನ ಪರಿಷ್ಕರಣೆ ಮಾಡದೇ ಇರುವುದು, ಆಡಳಿತ ಸುಧಾರಣೆ ನೆಪದಲ್ಲಿ ಹುದ್ದೆಗಳ ಕಡಿತ, ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದ, ಬದಲಿಗೆ ಹೋರಗುತ್ತಿದೆ/ ಗುತ್ತಿಗೆ/ ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡುವುದು, ಸಾರ್ವಜನಿಕ ಉದ್ದೆಮೆಗಳ ಖಾಸಗೀಕರಣ, ತುಟ್ಟಿಭತ್ಯೆ ತಡೆಹಿಡಿದಿರುವುದು, ಇಂತಹ ನೀತಿಗಳನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಮೇಲೆ ಬಲವಂತವಾಗಿ ಹೇರುತ್ತಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಹಾಗೂ ಮಾದರಿ ಉದ್ಯೋಗದಾತ ಸಂಸ್ಥೆಯಾಗಿ ಸರ್ಕಾರದ ಮಾತ್ರ ಬಹು ಮುಖ್ಯವಾದರೂ ಆದರಿಂದ ಕೇಂದ್ರ ಸರ್ಕಾರವು ಹಿಂದೆ ಸರಿಯುತ್ತಿದೆ. ದೇಶಾದ್ಯಂತ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ಒಟ್ಟಾರೆ 60 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡದೇ ಹೊರಗುತ್ತಿಗೆ/ ಗುತ್ತಿಗೆ/ ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರಗಳಿಗೆ ತೆರಿಗೆ ಸಂಗ್ರಹದಲ್ಲೂ ಸೀಮಿತ ಅವಕಾಶಗಳು ಮಾತ್ರವಿದ್ದು, ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಹೊಂದಿಸುವಲ್ಲಿ ಸಂಕಷ್ಟದಲ್ಲಿ ಎಂದರು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಎನ್. ಶೋಭಾ ಲೋಕನಾಗಣ್ಣ ಮಾತನಾಡಿ, ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಕೆಲವು ರಾಜ್ಯ ಸರ್ಕಾರಗಳು ಎನ್‌ಪಿಎಸ್ ಪದ್ದತಿಯನ್ನು ರದ್ದುಗೊಳಿಸಿ ಓಪಿಎಸ್ ಅನ್ನು ಜಾರಿಗೊಳಿಸಲು ಆದೇಶ ಮಾಡಿವೆ. ಆದರೆ, ನೌಕರರಿಗೆ ನಿಶ್ಚಿತ ಪಿಂಚಣಿ ನೀಡಲು ಈಗಾಗಲೇ ಪಿಎಫ್ ಆರ್‌ಡಿಎ ಪ್ರಾಧಿಕಾರದಲ್ಲಿ ಸಂಗ್ರಹವಾಗಿರುವ ಸರ್ಕಾರದ ಮತ್ತು ನೌಕರರ ವಂತಿಗೆಯ ಮೊತ್ತವನ್ನು ಹಿಂದಿರುಗಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ತಿಳಿಸಿದೆ. 20 ವರ್ಷಗಳಿಂದಲೂ ಪಿಎಫ್‌ಆರ್‌ಡಿಎ ಪ್ರಾಧಿಕಾರದಲ್ಲಿ 85 ಲಕ್ಷ ಕೆಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಹಾಗೂ ಸರ್ಕಾರದ ವಂತಿಗೆ ಹಣ ಒಟ್ಟು ರೂ.7 ಲಕ್ಷ ಕೋಟಿ ಸಂಗ್ರಹವಾಗಿದ್ದು, ಇದನ್ನು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗುತ್ತಿದೆ. ಇದನ್ನು ವಾಪಸ್ ನೀಡದೇ ನೌಕರರಿಗೆ ಹಳೇಯ ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಗಳು ಹೇಳಿವೆ. ರಾಜಸ್ತಾನದಲ್ಲಿ ಎನ್.ಪಿ.ಎಸ್. ರದ್ದುಪಡಿಸಿದ್ದು, ಎನ್.ಪಿ.ಎಸ್. ಅಡಿ ನೇಮಕವಾಗಿದ್ದ ನೌಕರರಿಗೆ ಮತ್ತು ಹೊಸದಾಗಿ ಸರ್ಕಾರಿ ಸೇವೆಗೆ ನೇಮಕಾತಿಯಾಗುವವರಿಗೆ ನೌಕರರು ಮತ್ತು ಸರ್ಕಾರದ ವಂತಿಗೆ ಕಟಾವಣೆ ನಿಲ್ಲಿಸಲಾಗಿದ್ದು, ಓಪಿಎಸ್ ನಿಡಲಾಗುತ್ತಿದೆ. ಹೊಸದಾಗಿ ನೇಮಕಾತಿಯಾಗುವ ನೌಕರರಿಗೆ ಮಾತ್ರ ಓಪಿಎಸ್ ಮತ್ತು ಭವಿಷ್ಯನಿಧಿ ಸೌಲಬ್ಯ ನೀಡಲಾಗುತ್ತಿದೆ. ಆದರೆ ಎನ್.ಪಿ.ಎಸ್. ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೆ ಸೇವೆಗೆ ಸೇರಿ, ಎನ್‌ಪಿಎಸ್ ರದ್ದಾದ ನಂತರ ನಿವೃತ್ತರಾಗುತ್ತಿರುವ ನೌಕರರಿಗೆ ಗ್ರಾಚ್ಯುಯಿಟಿ ಮೊತ್ತ ನೀಡದೆ ಕೇವಲ ಮಾಸಿಕ ಪಿಂಚಣಿ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮತ್ತೊಂದೆಡೆ ಕೆಲವು ರಾಜ್ಯಗಳಲ್ಲಿ ಓಪಿಎಸ್ ಪದ್ದತಿಯಡಿ ವಂತಿಗೆ ಕಟಾವನೆಯಾಗಿರುವ ನೌಕರರಿಗೆ ಓಪಿಎಸ್ ನೀಡಲಾಗದೆಂದು ಮಹಾಲೇಖಪಾಲರು ಆಕ್ಷೇಪಿಸಿದ್ದಾರೆ. ಓಪಿಎಸ್ ಜಾರಿಗೊಳಿಸಿರುವ ರಾಜ್ಯಗಳ ನಡೆ ಶ್ಲಾಘನೀಯವಾದರೂ ಆ ರಾಜ್ಯಗಳಲ್ಲಿಕ ಓಪಿಎಸ್ ನೀಡುವ ಪ್ರಕ್ರಿಯೆ ಗೊಂದಲ ಗೂಡಾಗಿದೆ. ಅಲ್ಲದೇ ಓಪಿಎಸ್ ಅನ್ನು ಮರುಜಾರಿಗೊಳಿಸಿರುವ ರಾಜ್ಯಗಳಲ್ಲಿ ಸರ್ಕಾರಗಳು ಬದಲಾದಾಗ ಮತ್ತೆ ಎನ್‌ಪಿಎಸ್ ಮರುಸ್ಥಾಪಿಸಲು ಅವಕಾಶಗಳಿರುತ್ತವೆ ಎಂಬುದನ್ನು ಅರಿಯಬೇಕು. ಪ್ರಸ್ತುತ ಓಪಿಎಸ್ ಅಡಿ ಬರುವ ನೌಕರರುಗಳಿಗೂ ಮುಂದೆ ಓಪಿಎಸ್ ಬರುವ ಸಾಧ್ಯತೆಯು ಪಿಎಫ್ ಆರ್‌ಡಿಎ ಕಾಯಿದೆ ನಿಯಮಗಳಲ್ಲಿವೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುರೇಶ ಜೀಬಿ ಮಾತನಾಡಿ, ಸಂಸತ್ತಿನ ಅಧಿವೇಶನದಲ್ಲಿ ಓಪಿಎಸ್ ಮರುಸ್ಥಾಪಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಕೇಂದ್ರದ ಹಣಕಾಸು ಮಂತ್ರಿಗಳು ಪಿಎಫ್ ಆರ್‌ಡಿಎ ಪ್ರಾಧಿಕಾರದಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಹಿಂತಿರುಗಿಸಲು ನಿಯಮಗಳಲ್ಲಿ ಎಂದು ತಿಳಿಸಿದ್ದಾರೆ. ಅಲ್ಲದೇ, ನೌಕರರ ಪಿಂಚಣಿ ಹಣವನ್ನು ರಾಜ್ಯ ಸರ್ಕಾರಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮುಂದುವರೆದು, ಮಾನ್ಯ ಪ್ರಧಾನಮಂತ್ರಿಯವರು ಓಪಿಎಸ್ ಪಿಂಚಣಿ ಪದ್ಧತಿಯನ್ನು ಮರುಜಾರಿಗೊಳಿಸುವುದು ಪಾಪದ ಕೆಲಸ ಎಂದು ಹೇಳಿದ್ದಾರೆ, ಇದರಿಂದ ಆರ್ಥಿಕ ವ್ಯವಸ್ಥೆ ಹಾಳಾಗಿ ನಮ್ಮ ದೇಶದ ಮಕ್ಕಳ ಭವಿಷ್ಯ ಹಾನಿಯಾಗುತ್ತದೆ ಎಂದು ಹೇಳಿರುವುದು ವರದಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಚಂದ್ರಶೇಖರ ಲೆಂಡಿ ಮಾತನಾಡಿದರು. ಈ ಸಂದರ್ಭದಲ್ಲಿ ಆರ.ಎಸ್.ಮಿಣಸಗಿ, ಚನ್ನರಡ್ಡಿ ಏಮಂಟಿ, ಬಸವರಾಜ ಜೀಬಿ, ನೀಲಮ್ಮ ಹಂದ್ರಾಳ, ಶಾಂತ ಗೌಡ ಬಿರಾದಾರ, ಅನೀಲ ಕುಂಬಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಜಾಥಾ ನಂತರ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆವಣರದಲ್ಲಿ ಹಾಗೂ ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಂಘನೆಯ ಧ್ಯೇಯೋದ್ದೇಶಗಳನ್ನು ಹೋರಾಟದ ರೂಪುರೇಷೆಗಳನ್ನು ಸಂಘದ ಸದಸ್ಯರಿಗೆ ಬಹಿರಂಗ ಸಭೆ ನಡೆಸಿ, ಮನವರಿಕೆ ಮತ್ತು ತಿಳುವಳಿಕೆ ನೀಡಲಾಯಿತು.


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಭಾರತಕ್ಕೆ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಕೊಡುಗೆ ಅವಿಸ್ಮರಣೀಯ

 ಈ ದಿವಸ ವಾರ್ತೆ

ವಿಜಯಪುರ: ಭಾರತ ದೇಶ ಸ್ವಾತಂತ್ರ್ಯಗೊಳ್ಳಲು ಗಾಂಧೀಜಿಯವರ ಹೋರಾಟ ಹಾಗೂ ಸ್ವಾತಂತ್ರ ನಂತರ ಭಾರತದ ಅಭಿವೃದ್ಧಿಗೆ ಶಾಸ್ತ್ರೀಯವರ ಕೊಡುಗೆಗಳು ಅವಿಸ್ಮರಣೀಯವಾಗಿವೆ. ಒಬ್ಬರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ,ಬ್ರಿಟಿಷರಿಂದ ನಮ್ಮ ದೇಶವನ್ನು ಬಿಡುಗಡೆಗೊಳಿಸಿದರೆ,ಇನ್ನೊಬ್ಬರು ಸ್ವತಂತ್ರ ಭಾರತದ ಏಳಿಗೆಗಾಗಿ ಹಗಲಿರಳು ದುಡಿದರು ಎಂದು ಪ್ರಾಂಶುಪಾಲ ಶ್ರೀ ಸಿ ಬಿ ನಾಟಿಕಾರ್ ಹೇಳಿದರು. ಮಹಾತ್ಮ ಗಾಂಧೀಜಿಯವರ ಸತ್ಯ, ತ್ಯಾಗ, ಅಹಿಂಸೆಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ನಾವು ಕೇವಲ ಜಯಂತಿಗಳನ್ನು ಆಚರಣೆ ಮಾಡಿದ ಮಾತ್ರಕ್ಕೆ ಅವರಿಗೆ ಗೌರವ ತೋರಿಸಿದಂತೆ ಅಲ್ಲ.ಅವರು ಹೇಳಿದ ತತ್ವಗಳನ್ನು ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು ಎಂದರು. ಇಂದು ನಡೆದ ಗಾಂಧೀಜಿಯವರ 154 ನೇ ಜಯಂತಿ ಹಾಗೂ ಶಾಸ್ತ್ರಿ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮವು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದರೊಂದಿಗೆ ಪ್ರಾರಂಭವಾಯಿತು. ನಂತರ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಕುರಿತು ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಎಸ್ ಬಿ ಸಾವಳಸಂಗ ವಚನಗಳನ್ನು ಓದಿದರು. ಬಿ ಎಸ್ ಬೇವಿನೂರು ವಚನಗಳ ಜೊತೆಗೆ ಬೈಬಲ್ ಮಂತ್ರಗಳನ್ನು ಪಠಿಸಿದರು.ಆರ್ ಎಂ ಜೋಶಿ ಭಗವದ್ಗೀತೆಯ ಮಂತ್ರವನ್ನು ಪಠಿಸಿದರು ಹಾಗೂ ಸಿ ಐ ದ್ಯಾಪುರ್ ಎಂ ವಿ ಸಿಂಗಾರೆ ಸರ್ವಧರ್ಮ ಪ್ರಾರ್ಥನೆಯನ್ನು ನಡೆಸಿಕೊಟ್ಟರು.

ಈ ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕರಾದ ಶ್ರೀ ಎಸ್ ಬಿ ಸಾವಳಸಂಗ ನಡೆಸಿಕೊಟ್ಟರು. ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.