Friday, June 5, 2020

ಶುಕ್ರವಾರ ಮತ್ತೆ 53 ಜನರಿಗೆ ಕೋವಿಡ್-19 ಸೋಂಕು ದೃಢ : ಸೋಂಕಿತರ ಸಂಖ್ಯೆ 187ಕ್ಕೆ ಏರಿಕೆ



ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ ಒಟ್ಟು 187 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 117 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು 53 ಜನರಿಗೆ ಕೋವಿಡ್-19 ಸೋಂಕು ತಗುಲಿದ್ದು, 39 ಜನರಿಗೆ ಮಹಾರಾಷ್ಟ್ರದ ಸಂಪರ್ಕದಿಂದ ಹಾಗೂ 14 ಜನರಿಗೆ ಜಿಲ್ಲೆಯ ಕಂಟೇನ್ಮೆಂಟ್ ಜೋನ್‍ದಿಂದ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಅದರಂತೆ ರೋಗಿ ಸಂಖ್ಯೆ 4579 (12 ವರ್ಷದ ಬಾಲಕ), ರೋಗಿ ಸಂಖ್ಯೆ 4580 (21 ವರ್ಷದ ಯುವಕ), ರೋಗಿ ಸಂಖ್ಯೆ 4581 (40 ವರ್ಷದ ಗಂಡು) ರೋಗಿ ಸಂಖ್ಯೆ 4582 (28 ವರ್ಷದ ಮಹಿಳೆ), ರೋಗಿ ಸಂಖ್ಯೆ 4583 (50 ವರ್ಷದ ಪುರುಷ), ರೋಗಿ ಸಂಖ್ಯೆ 4584 (8 ವರ್ಷದ ಬಾಲಕಿ) ರೋಗಿ ಸಂಖ್ಯೆ 4585 (35 ವರ್ಷದ ಮಹಿಳೆ), ರೋಗಿ ಸಂಖ್ಯೆ 4586 (25 ವರ್ಷದ ಯುವಕ), ರೋಗಿ ಸಂಖ್ಯೆ 4587 (24 ವರ್ಷದ ಯುವಕ) ರೋಗಿ ಸಂಖ್ಯೆ 4588 (28 ವರ್ಷದ ಯುವಕ), ರೋಗಿ ಸಂಖ್ಯೆ 4589 (16 ವರ್ಷದ ಯುವತಿ), ರೋಗಿ ಸಂಖ್ಯೆ 4590 (23 ವರ್ಷದ ಯುವತಿ) ರೋಗಿ ಸಂಖ್ಯೆ 4591 (9 ವರ್ಷದ ಬಾಲಕಿ), ರೋಗಿ ಸಂಖ್ಯೆ 4592 (27 ವರ್ಷದ ಯುವತಿ), ರೋಗಿ ಸಂಖ್ಯೆ 4593 (16 ವರ್ಷದ ಯುವಕ) ರೋಗಿ ಸಂಖ್ಯೆ 4594 (23 ವರ್ಷದ ಯುವಕ), ರೋಗಿ ಸಂಖ್ಯೆ 4595 (30 ವರ್ಷದ ಯುವಕ) ಆಗಿದ್ದಾನೆ.

ರೋಗಿ ಸಂಖ್ಯೆ 4596 (35 ವರ್ಷದ ಪುರುಷ) ರೋಗಿ ಸಂಖ್ಯೆ 4597 (35 ವರ್ಷದ ಮಹಿಳೆ), ರೋಗಿ ಸಂಖ್ಯೆ 4598 (26 ವರ್ಷದ ಯುವತಿ), ರೋಗಿ ಸಂಖ್ಯೆ 4599 (23 ವರ್ಷದ ಯುವಕ) ರೋಗಿ ಸಂಖ್ಯೆ 4600 (20 ವರ್ಷದ ಯುವತಿ), ರೋಗಿ ಸಂಖ್ಯೆ 4601 (39 ವರ್ಷದ ಪುರುಷ), ರೋಗಿ ಸಂಖ್ಯೆ 4602 (31 ವರ್ಷದ ಮಹಿಳೆ) ರೋಗಿ ಸಂಖ್ಯೆ 4603 (20 ವರ್ಷದ ಯುವತಿ), ರೋಗಿ ಸಂಖ್ಯೆ 4808 (26 ವರ್ಷದ ಯುವಕ), ರೋಗಿ ಸಂಖ್ಯೆ 4809 (60 ವರ್ಷದ ಪುರುಷ) ರೋಗಿ ಸಂಖ್ಯೆ 4810 (30 ವರ್ಷದ ಯುವಕ), ರೋಗಿ ಸಂಖ್ಯೆ 4811 (36 ವರ್ಷದ ಪುರುಷ), ರೋಗಿ ಸಂಖ್ಯೆ 4812 (8 ವರ್ಷದ ಬಾಲಕಿ) ರೋಗಿ ಸಂಖ್ಯೆ 4813 (19 ವರ್ಷದ ಯುವಕ), ರೋಗಿ ಸಂಖ್ಯೆ 4814 (28 ವರ್ಷದ ಯುವಕ), ರೋಗಿ ಸಂಖ್ಯೆ 4815 (45 ವರ್ಷದ ಪುರುಷ) ರೋಗಿ ಸಂಖ್ಯೆ 4816 (34 ವರ್ಷದ ಯುವಕ), ರೋಗಿ ಸಂಖ್ಯೆ 4817 (45 ವರ್ಷದ ಮಹಿಳೆ), ರೋಗಿ ಸಂಖ್ಯೆ 4818 (51 ವರ್ಷದ ಪುರುಷ) ರೋಗಿ ಸಂಖ್ಯೆ 4819 (35 ವರ್ಷದ ಯುವಕ), ರೋಗಿ ಸಂಖ್ಯೆ 4820 (35 ವರ್ಷದ ಮಹಿಳೆ), ರೋಗಿ ಸಂಖ್ಯೆ 4835 (25 ವರ್ಷದ ಯುವತಿ) ಇವರಿಗೆ ಮಹಾರಾಷ್ಟ್ರದ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ ರೋಗಿ ಸಂಖ್ಯೆ 4821 (69 ವರ್ಷದ ಪುರುಷ), ರೋಗಿ ಸಂಖ್ಯೆ 4822 (56 ವರ್ಷದ ಪುರುಷ), ರೋಗಿ ಸಂಖ್ಯೆ 4823 (39 ವರ್ಷದ ಪುರುಷ) ರೋಗಿ ಸಂಖ್ಯೆ 4824 (70 ವರ್ಷದ ಮಹಿಳೆ), ರೋಗಿ ಸಂಖ್ಯೆ 4825 (65 ವರ್ಷದ ಮಹಿಳೆ), ರೋಗಿ ಸಂಖ್ಯೆ 4826 (47 ವರ್ಷದ ಮಹಿಳೆ) ರೋಗಿ ಸಂಖ್ಯೆ 4827 (58 ವರ್ಷದ ಮಹಿಳೆ), ರೋಗಿ ಸಂಖ್ಯೆ 4828 (60 ವರ್ಷದ ಮಹಿಳೆ), ರೋಗಿ ಸಂಖ್ಯೆ 4829 (58 ವರ್ಷದ ಪುರುಷ) ರೋಗಿ ಸಂಖ್ಯೆ 4830 (25 ವರ್ಷದ ಯುವತಿ), ರೋಗಿ ಸಂಖ್ಯೆ 4831 (70 ವರ್ಷದ ಪುರುಷ), ರೋಗಿ ಸಂಖ್ಯೆ 4832 (33 ವರ್ಷದ ಯುವತಿ) ರೋಗಿ ಸಂಖ್ಯೆ 4833 (58 ವರ್ಷದ ಮಹಿಳೆ), ರೋಗಿ ಸಂಖ್ಯೆ 4834 (70 ವರ್ಷದ ಪುರುಷ) ಇವರಿಗೆ ಜಿಲ್ಲೆಯ ಕಂಟೇನ್ಮೆಂಟ್ ಜೋನ್‍ದಿಂದ ಕೋವಿಡ್-19 ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 27884 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 187 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 7919 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 19895 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 5 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 

65 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 117 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 25422 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 23035 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 2200 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. 

ಹನ್ನೊಂದು ಗುಣಮುಖ ರೋಗಿಗಳ ಬಿಡುಗಡೆ : ಜಿಲ್ಲೆಯಲ್ಲಿ ಇಂದು 11 ರೋಗಿಗಳು ಗುಣಮುಖರಾಗಿದ್ದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ರೋಗಿ ಸಂಖ್ಯೆ 1183 (10 ವರ್ಷದ ಬಾಲಕ), ರೋಗಿ ಸಂಖ್ಯೆ 1727 (36 ವರ್ಷದ ಮಹಿಳೆ), ರೋಗಿ ಸಂಖ್ಯೆ 2203 (10 ವರ್ಷದ ಬಾಲಕ) ರೋಗಿ ಸಂಖ್ಯೆ 2207 (15 ವರ್ಷದ ಬಾಲಕ), ರೋಗಿ ಸಂಖ್ಯೆ 2784 (32 ವರ್ಷದ ಯುವಕ), ರೋಗಿ ಸಂಖ್ಯೆ 2836 (20 ವರ್ಷದ ಯುವಕ) ರೋಗಿ ಸಂಖ್ಯೆ 2838 (30 ವರ್ಷದ ಮಹಿಳೆ), ರೋಗಿ ಸಂಖ್ಯೆ 2840 (14 ವರ್ಷದ ಬಾಲಕಿ), ರೋಗಿ ಸಂಖ್ಯೆ 2924 (55 ವರ್ಷದ ಪುರುಷ) ರೋಗಿ ಸಂಖ್ಯೆ 2925 (55 ವರ್ಷದ ಮಹಿಳೆ), ರೋಗಿ ಸಂಖ್ಯೆ 2926 (38 ವರ್ಷದ ಪುರುಷ) ಒಟ್ಟು ಹನ್ನೊಂದು ಕೋವಿಡ್ ಪಾಸಿಟಿವ್ ರೋಗಿಗಳು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯು ಸಮಗ್ರ ಅಂಕಿ-ಅಂಶಗಳ ವಾರ್ಷಿಕ ಕೈಪಿಡಿ ಬಿಡುಗಡೆ


ಈ ದಿವಸ ವಾರ್ತೆ
ವಿಜಯಪುರ : ವಿಜಯಪುರ ಜಿಲ್ಲೆಯ ಆರ್ಥಿಕ ಮತ್ತು ಶೈಕ್ಷಣಿಕ ಸೇರಿದಂತೆ ಮತ್ತಿತರ ಚಟುವಟಿಕೆಗಳ 2018-19 ನೇ ಸಾಲಿನ ಅಂಕಿ ಅಂಶಗಳ ನೋಟ ವಾರ್ಷಿಕ ಕೈಪಿಡಿಯನ್ನು ಇಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಬಿಡುಗಡೆ ಮಾಡಿದರು.

ಈ ಅಂಕಿ-ಆಂಶಗಳ ವಾರ್ಷಿಕ ಕೈಪಿಡಿಯಲ್ಲಿ ವಿಜಯಪುರ ಜಿಲ್ಲೆಯ ವಿವಿಧ ಕಚೇರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಜನಸಂಖ್ಯೆಗೆ ಸಂಭಂಧಿಸಿದ ಅಂಕಿ-ಅಂಶಗಳು 2011ರ ಜನಗಣತಿ, ಮಳೆಗೆ ಸಂಬಂಧಿಸಿದ ಅಂಕಿ ಅಂಶಗಳು 2018ಕ್ಕೆ ಸಂಬಂಧಿಸಿದ್ದು ಹಾಗೂ 2012ರ ಜಾನುವಾರು ಗಣತಿ, 2015-16ನೇ ಸಾಲಿನ ಕೃಷಿಗಳ ಅಂಕಿ ಅಂಶ ಒಳಗೊಂಡಿದ್ದು, ಶಿಕ್ಷಣ, ಸಂಶೋಧನೆ, ಯೋಜನೆ ಹೀಗೆ ವಿವಿಧ ಉದ್ದೇಶಗಳಿಗೆ ಈ ಅಂಕಿ ಆಂಶಗಳು ಆಧಾರವಾಗಲಿದ್ದು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಕೈಪಿಡಿಯಾಗಿದೆ.
  
ಈ ಜಿಲ್ಲಾ ಅಂಕಿ-ಅಂಶಗಳ ನೋಟ ಕೈಪಿಡಿಯಲ್ಲಿ ಜಿಲ್ಲೆಯ ತಾಲೂಕಾ ನಕ್ಷೆ, ಭೂಬಳಕೆ ಮತ್ತು ಭೂಕವಚ ನಕ್ಷೆ, ಮಣ್ಣಿನ ನಕ್ಷೆ ಹಾಗೂ ಒಳಚರಂಡಿ ಮತ್ತು ಜಲಮೂಲಗಳ ನಕ್ಷೆ ಮಾಹಿತಿ, ತಾಲೂಕು, ಹೋಬಳಿ, ಗ್ರಾ.ಪಂ, ಗ್ರಾಮಲೆಕ್ಕಿಗರ ವೃತ್ತಗಳು, ಜನವಸತಿ ಇರುವ, ಇಲ್ಲದ ಮತ್ತು ಒಟ್ಟು ಗ್ರಾಮಗಳ 2011ರ ಜನಗಣತಿ, ನಗರ ಸ್ಥಳಿಯ ಸಂಸ್ಥೆಗಳ ವಿವರ, ಅಗ್ನಿಶಾಮಕ ಠಾಣೆಗಳ ವಿವರ ಹಾಗೂ ಪಡಿತರ ಅಂಗಡಿಗಳು ಮತ್ತು ಆದ್ಯತಾ ಪಡಿತರ ಚೀಟಿದಾರರು ವಿವರ ನೀಡಲಾಗಿದೆ. 

ಜಿಲ್ಲೆಯ ವಿಸ್ತಿರ್ಣ, ಜನಸಂಖ್ಯೆ, ಲಿಂಗಾಣುಪಾತ, ಮಕ್ಕಳ ಶೇಕಡಾವಾರು, ಮಕ್ಕಳ ಲಿಂಗಾಣುಪಾತ, ಪರಿಶಿಷ್ಠ ಪಂಗಡ, ಪರಿಶಿಷ್ಠಜಾತಿ ಶೇಕಡಾವಾರು ಜನಸಂಖ್ಯೆ, ಕೃಷಿ ಸಾಗುವಳಿದಾರರು, ಕೃಷಿ ಕಾರ್ಮಿಕರು, ಗೃಹ ಕೈಗಾರಿಕೆ ಕೆಲಸಗಾರರು, ಕೃಷಿಯೇತರ ಕೆಲಸಗಾರರು ಹೀಗೆ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರ ಅಂಕಿ-ಅಂಶಗಳನ್ನು ನೀಡಲಾಗಿದೆ.

ಜಿಲ್ಲೆಯ ಮಳೆಗೆ ಸಂಬಂಧಿಸಿದಂತೆ ಮಳೆ ಮಾಪನಕೇಂದ್ರಗಳು, ವಾರ್ಷಿಕ ವಾಡಿಕೆ ಮಳೆ ಮತ್ತು ಮಳೆ ದಿನಗಳು, ವಾರ್ಷಿಕ ವಾಸ್ತವಿಕ ಮಳೆ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆಗೆ ಸಂಬಂಧಿಸಿದಂತೆ ಇರುವ ಭೂ ಪ್ರದೇಶಗಳ ಮಾಹಿತಿ, ವಿವಿಧ ಬೆಳಗಳ ಭೂ ಪ್ರದೇಶ ಹಾಗೂ ಮಾಹಿತಿ, ಪಶುಪಾಲನೆಯ ಜಾನುವಾರು ಗಣತಿ 2012ರ ಸಂಪೂರ್ಣ ಜಿಲ್ಲೆಯ ಮಾಹಿತಿ, ಪಶುವೈದ್ಯ ಸಂಸ್ಥೆಗಳು, ಮೀನುಗಾರಿಕೆ ಹಾಗೂ ಹೈನುಗಾರಿಗೆ, ಜಿಲ್ಲೆಯ ವಿವಿಧ ಕೈಗಾರಿಕೆಗಳ ಸಂಖ್ಯೆ ಹಾಗೂ ಮಾಹಿತಿ, ವಿವಿಧ ಬ್ಯಾಂಕುಗಳ ಮಾಹಿತಿ, ಸಹಕಾರ ಮತ್ತು ಕೃಷಿ ಮಾರಾಟ ಕೇಂದ್ರಗಳ ಬಗ್ಗೆ ಮಾಹಿತಿ ಹಾಗೂ ಅಂಕಿ-ಸಂಖ್ಯೆ, ಸಾರಿಗೆ ಸಂಪರ್ಕ, ಶಿಕ್ಷಣ, ಸಾಕ್ಷರತೆ ಹಾಗೂ ಅನಕ್ಷರತೆಯ ಮಾಹಿತಿ ಮಾಹಿತಿ ಸಂಗ್ರಹಿಸಿ ಹಾಕಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮಾಹಿತಿ, ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳ ಅಂಕಿ ಸಂಖ್ಯೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಹಿತಿ, ಅಂಗನವಾಡಿ ಕೇಂದ್ರಗಳ ಸಂಖ್ಯೆ, ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮಾಹಿತಿ, ಜಿಲ್ಲೆಯ ವಸತಿಗಳ ಮಾಹಿತಿ, ಕೃಷಿ ಹಿಡುವಳಿ ಹಾಗೂ ವಿಸ್ತಿರ್ಣ, ಜನನ ಮತ್ತು ಮರಣ ನೊಂದಣಿ ಸಂಖ್ಯೆ ಸೇರಿದಂತೆ ವಿವಿಧ ವಿಷಯಗಳ ಮಾಹಿತಿಯನ್ನು ಈ ವಾರ್ಷಿಕ ಕೈಪಿಡಿಯಲ್ಲಿ ನೀಡಲಾಗಿದೆ   
  
ಈ ವಾರ್ಷಿಕ ಕೈಪಿಡಿ ಬಿಡುಗಡೆ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ.ಎಂ. ಕುಲಕರ್ಣಿ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಸಂತೋಷ ಇನಾಂದಾರ್ ಸೇರಿದಂತೆ ಇತರರಿದ್ದರು.

ತೋಟಗಾರಿಕಾ ಬೆಳೆ ಸಮೀಕ್ಷೆಯಿಂದ ಹೆಸರು ಬಿಟ್ಟುಹೋದಲ್ಲಿ, ಮಾಹಿತಿ ಸಲ್ಲಿಸಿ - ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ


ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈಗಾಗಲೆ ಹಿಂಗಾರಿನಲ್ಲಿ ಕೈಗೊಳ್ಳಲಾದ ತೋಟಗಾರಿಕಾ ಬೆಳೆ ಸಮೀಕ್ಷೆಯಲ್ಲಿ ಕಲ್ಲಂಗಡಿ ಮತ್ತು ಕರಬೂಜ್‍ಗೆ ಸಂಬಂಧಿಸಿದಂತೆ ಹೆಸರು ಬಿಟ್ಟುಹೋಗಿದಲ್ಲಿ ಅಂತಹವರು ಇದೇ ಜೂನ್ 15ರೊಳಗೆ ಆಯಾ ತಾಲೂಕಾ ತೋಟಗಾರಿಕೆ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು 2020-21ನೇ ಸಾಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರಧನ ವಿತರಿಸುವ ಕುರಿತು ಜಿಲ್ಲಾಮಟ್ಟದ ಸಮಿತಿ ಸಭೆ ಅಧ್ಯಕ್ಷತೆವಹಿಸಿದ್ದ ಅವರು ಈಗಾಗಲೆ ತೋಟಗಾರಿಕೆ ಬೆಳೆಗಳಾದ ನಿಗದಿತ ಹಣ್ಣು ಮತ್ತು ತರಕಾರಿಗಳಿಗೆ ಸರ್ಕಾರವು 15 ಸಾವಿರ ರೂಗಳ ಸಹಾಯಧನ ಘೋಷಿಸಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಹಿಂಗಾರಿನಲ್ಲಿ ಕೈಗೊಳ್ಳಲಾದ ಬೆಳೆ ಸಮಿಕ್ಷೆಯಿಂದ ಕಲ್ಲಂಗಡಿ ಮತ್ತು ಕರಬೂಜ್‍ಗೆ ಸಂಬಂಧಿಸಿದಂತೆ ಸಮಿಕ್ಷೆಯಿಂದ ಕೈಬಿಟ್ಟು ಹೋಗಿದ್ದಲ್ಲಿ ತಕ್ಷಣ ಅರ್ಜಿ ಸಲ್ಲಿಸಬೇಕು. ಅದರಂತೆ ಇದಕ್ಕಾಗಿ ಯಾವುದೇ ರೀತಿಯ ದಾಖಲಾತಿ ಸಲ್ಲಿಸುವ ಅವಶ್ಯಕತೆ ಕೂಡಾ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈಗಾಗಲೆ ಕೈಗೊಂಡ ಬೆಳೆ ಸಮಿಕ್ಷೆಗೆ ಸಂಬಂಧಪಟ್ಟಂತೆ ಹಣ್ಣುಗಳಾದ ಬಾಳೆ, ಪಪ್ಪಾಯಿ, ಅಂಜೂರ, ಅನಾನಸ್, ಕಲ್ಲಂಗಡಿ ಮತ್ತು ಕರಬೂಜ್‍ಗಳಿಗೆ ಸರ್ಕಾರ ಬೆಳೆಹಾನಿ ಪರಿಹಾರ ಘೋಷಿಸಿದೆ. ಅದರಂತೆ ತರಕಾರಿ ಬೆಳೆಗಳಾದ ಸಿಹಿಕುಂಬಳ, ಎಲೆಕೋಸು, ದಪ್ಪುಮೆಣಸಿನಕಾಯಿ, ಹೂಕೋಸು, ಹಸಿರುಮೆಣಸಿನಕಾಯಿ, ಟೊಮ್ಯಾಟೊ, ಈರುಳ್ಳಿ ಹಾಗೂ ಕ್ಯಾರೆಟ್‍ಗಳ ತರಕಾರಿ ಬೆಳೆಗಾರರಿಗೆ ಪರಿಹಾರಧನ ಕಾರ್ಯಕ್ರಮದಡಿಯಲ್ಲಿ ಸರ್ಕಾರ ಪರಿಹಾರ ನೀಡಲು ಘೋಷಿಸಿದೆ. ಸಧ್ಯ ಸಮಿಕ್ಷೆಯನ್ವಯ 285.67 ಹೆಕ್ಟೆರ್ ತರಕಾರಿಬೆಳೆ ಮತ್ತು 910.54 ಹೆಕ್ಟೆರ್ ವಿಸ್ತಿರ್ಣದಲ್ಲಿ ಹಣ್ಣು ಬೆಳೆ ಇದ್ದು ಅರ್ಹರಿಗೆ ಪರಿಹಾರ ದೊರೆಯಲಿದೆ. 

ಅದರಂತೆ ಈರುಳ್ಳಿ ಮತ್ತು ಇತರೆಬೆಳೆಗಳ ಸಮಿಕ್ಷೆ ಈಗಾಗಲೇ ಕೈಗೊಂಡಿದ್ದು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಈ ಸೌಲಭ್ಯ ದೊರೆಯಲು ಸಮಿಕ್ಷಾ ವರದಿಯನ್ನು ಮರು ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಬೇಕು. ಆಯಾ ಗ್ರಾಮಪಂಚಾಯತವಾರು ಬೆಳೆಸಮಿಕ್ಷಾ ವರದಿಯನ್ನು ಪ್ರಕಟಿಸಿದ್ದು, ಈ ಕುರಿತಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಆಯಾ ತಾಲೂಕಾ ತೋಟಗಾರಿಕೆ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಭೇಟಿಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. 

ತೋಟಗಾರಿಕಾ ಬೆಳೆ ಸಮೀಕ್ಷೆಯಲ್ಲಿ ಹೆಸರುಗಳು ಬಿಟ್ಟುಹೊದಲ್ಲಿ ವಿಜಯಪುರ ತಾಲೂಕಾ ತೋಟಗಾರಿಕೆ ಅಧಿಕಾರಿ ಶ್ರೀಮತಿ ಶಾಲಿನಿ ಎಸ್ ಮೋ.ಸಂ: 9535185999, ಇಂಡಿ ತಾಲೂಕಿನ ಶ್ರೀ. ಆರ್.ಡಿ ಹಿರೇಮಠ ಮೋ.ಸಂ: 8123194479, ಸಿಂದಗಿ ತಾಲೂಕಿನ ಅಧಿಕಾರಿ ಶ್ರೀ ಅಮೋಘ ಹಿರೆಕುರುಬರ ಮೋ.ಸಂ: 8971766033, ಬ.ಬಾಗೇವಾಡಿ ಅಧಿಕಾರಿ ಶ್ರೀ. ಸಿ.ಬಿ ಪಾಟೀಲ ಮೋ.ಸಂ: 9845215362, ಮುದ್ದೆಬಿಹಾಳ ಅಧಿಕಾರಿ ಶ್ರೀ ಸುಭಾಸ ಟಾಕಳೆ ಮೋ.ಸಂ: 9972719844 ಇವರಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು. 

ಸಭೆಯಲ್ಲಿ ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.