Saturday, July 4, 2020

ಅನಕ್ಷರಸ್ಥ ಅಭಿಜಾತ ಕಾಮೇಗೌಡ



ಕುರಿಗಳು ಮಾರಿ ಕಟ್ಟೆ ಕಟ್ಟಿಸಿದ
ಕರುನಾಡಿನ ಭಗೀರಥ
ಪ್ರಕೃತಿ ರಕ್ಷಣೆಗೆಂದೆ ಪಣತೊಟ್ಟ
ಕಾಮೇಗೌಡ ಅನಿಕೇತ

ಅಕ್ಷರ ಕಲಿಯದ ಓದು ಬಾರದ
ಅನಕ್ಷರಸ್ಥ ಈ ತಾತಾ
ಮೂಕ ಜೀವಿಗಳ ನರಳಾಟವ
ಅರಿತ ಅಭಿಜಾತ

ಪ್ರಾಣಿ, ಪಕ್ಷಿಗಳ ಉಳಿವಿಗಾಗಿ
ತನ್ನ ಮನದ ಇಂಗಿತ
ಸಮಾಜಕ್ಕೆ ತಿಳಿಸಿ, ಜನರಿಂದ
ಎನಿಸಿಕೊಂಡ ಉನ್ಮತ

ಅವಮಾನ ಸಹಿಸಿ, ಪರಿಸರ
ಸಂರಕ್ಷಣೆಗಾಗಿ ನಿರತ
ಕೂಡಿಟ್ಟ ಹಣದಿ ಕೆರೆ, ಕಟ್ಟೆ 
ನಿರ್ಮಿಸಿದ ಪಂಡಿತ 

ಕಾಮೇಗೌಡರ ನಿಸ್ವಾರ್ಥತೆ 
ಕಾಡು ಇಂದು ಚೈತ್ರರಥ
ಪ್ರಾಣಿ ಸಂಕುಲ ವರ್ಷವೀಡಿ
ಇಲ್ಲಿವೇ ನಲಿಯುತ

ಅಜ್ಜನ ಈ ಅದ್ಭುತ ಕಾರ್ಯಕ್ಕೆ
ಪ್ರಶಂಸೆಗಳ ಅನವರತ
ಇತಿಹಾಸದಲ್ಲಿ ಹಸಿರಾಯಿತು
ಇವರ ಉಸಿರು ಅಮೃತ.

ಮೌಲಾಲಿ ಕೆ ಆಲಗೂರ (ಬೋರಗಿ)
ಸಾ.ಸಿಂದಗಿ ಜಿ.ವಿಜಯಪುರ

ಗುರು ಕೃಪೆ



ಕತ್ತಲೆಯ ಗೆದ್ದು ನಿಲ್ಲುವಂತ
ಸಾಮರ್ಥ್ಯವ ಒದಗಿಸಿದವನಾತ
ಜ್ಞಾನಿಯಾಗಿ ಮುನ್ನಡೆಸುವನು
ಈ ಮನುಜಕುಲಕೆ ಎಂದೆಂದು।

 ಮನುಜ ಬಾಳಿನ ಪ್ರತಿ ಹೆಜ್ಜೆಗೂ ಸ್ಪೂರ್ತಿದಾಯಕನಿತ
ಗೆದ್ದೆಗೆಲ್ಲುವೆ ನೀ ಎಂದು ಹರಸಿದವನಿತ
ಅಚಲ ನಂಭಿಕೆಯನು ತುಂಬಿದಾತ।

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
 ಎಂಬ ಈ ಮಾತು 
ಅರಿತು ನಡೆದವರು ಖ್ಯಾತಿಯಾಗಿ ಮೆರೆದರಣ್ಣ।

ನಿಶ್ಕಲ್ಮಷ ಭಾವದಿ ಭೋಧಿಸುವನಾತ
ಶಿಷ್ಯನ ಮನಕೆ ನಾಟುವಂತೆ
ಬೆಳಕಿನ ಹಾದಿಯ ತೋರುವನಿತ।

ಬಿಳಿಹಾಳೆಯಾಗಿದ್ದ ಮನಕೆ 
ಸುಂದರ ಚಿತ್ರವನು ಬಿಡಿಸಿ
ಉನ್ನತ ವ್ಯಕ್ತಿತ್ವದೆಡೆಗೆ
ಕೊಂಡೊಯ್ಯುವನೇ ಈ ಗುರು।

ಬಾಳಿನ ಸಮಸ್ಯೆಗಳ ಗಂಟನು 
ಬಿಚ್ಚುತ ಭವ್ಯ ಬದುಕಿನ 
ಸುಂದರ ನೋಟವ ಕಾಣುವಂತೆ
ಕೃಪೆಯ ತೋರಿ ಸಲಹುವನಿತ।

ನಾ ಪಡೆದ ಜ್ಞಾನವು
ಗುರು ಕೊಟ್ಟ ಭಿಕ್ಷೆಯು
ನಂಬಿ ನಡೆವೆ ನಾ 
ಸದಾ ಗುರುವು ತೋರಿದ ಹಾದಿಯನಿಡಿದು।

ಕೈ ಬಿಡದೆ ಕಾಪಾಡುತ
ಶಿಷ್ಯನ ಏಳ್ಗೆಯ ನೋಡುತ
ಸಂತಸ ಪಡುವನೆ ನನ್ನ ಗುರು
ಈ ಉಸಿರು ನಿಲ್ಲುವ ತನಕ ಬಿಡೆನು ಗುರುವಿನಾ ಸ್ಮರಣೆಯು।

ನಮ್ಮ ಬಾಳ ಜ್ಯೋತಿ ಬೆಳಗಿದಾ ಗುರುವಿಗೆ 
ವಂದಿಸುವೆ ನಾ
ಶಿರಸಾಸ್ಟಾಂಗದಿ
ಗುರುಪೌರ್ಣಿಮೆಯ ದಿನದಂದು॥

ಮಮತಾ ಗುಮಶೆಟ್ಟಿ
*ವಿಜಯಪುರ

‌ಅಪ್ಪನ ಅಂಗಿ ಮತ್ತು ನಾನು



‌ಅಪ್ಪ  ಬೆಳಗಾದರೆ ಎದ್ದು ಸ್ನಾನ ಮುಗಿಸಿ ಹಣಿಗೆ ಮೂರು ಬೆರಳು ವಿಭೂತಿ ಬಳಿದು ಶಾಂತ ಚಿತ್ತನಾಗಿ ಧ್ಯಾನ ಮಾಡಿ ಎದ್ದು, ಚಹಾ ಕುಡಿದು ಸ್ವಲ್ಪ ಹೊತ್ತು ವಿಶ್ರಮಿಸಿ. ಆಸ್ಪತ್ರೆ ಕಡೆ ದಾಪು ಗಾಲು ಹಾಕಿ ಓಡುತ್ತಿದ್ದ. ಅವ್ವ ಅಪ್ಪನ ಹಿಂದೆ ಮುಂದೆ ಸುತ್ತೊದು, ಹೊರಟರೆಂದರೆ 'ಬೇಗ ಬಾ 'ಎಂದು ಹೇಳುವುದು. ಸಾಯಂಕಾಲವಾದರೆ ಅವ್ವನಿಗೆ ವಾಚಮನ ಡ್ಯೂಟಿ . ಐದುವರೆ ಆದರೆ ಸಾಕು ಗೇಟ ಹತ್ತಿರ ಹಾಜರಿ ಹಾಕಲು ಬಂದು ನಿಲ್ಲುತ್ತಿದ್ದಳು. ಸಾಯಂಕಾಲದ ಹೊತ್ತಲ್ಲಿ ಅಪ್ಪನ ಕೈಯಲ್ಲಿ ಲಕ್ಕುಂಡಿಯ ದುಂಡುಮಲ್ಲಿಗೆ ,  ಗದಗಿನ ತೊಂಟದಾರ್ಯ ಮಠದ ಮುಂದಿನ ತರಾವರಿ ಬಜಿ , ಹಾಗೆ ಬೆಳಗ್ಗಿನಿಂದ ಸಾಯಂಕಾಲ ಊಟ, ಟಿಫನ  ಚಹಾ ಏನೇ  ತಿಂದ ನಂತರ ಮೆಲುಕು ಹಾಕಲು ಎಲೆ ಅಡಿಕೆ, ಒಂದಿಷ್ಟು ಹೊಗೆಸೂಪ್ಪು , ಒಂದು ಚೀಲ ಹಿಡಿದುಕೊಂಡು ಅಪ್ಪಾ ಬರುವದನ್ನು ಕಂಡ ಅವ್ವನ ಕಣ್ಣುಗಳು ಮೊಗ್ಗು ಅರಳಿದಂತೆ ಅರಳುತ್ತಿತ್ತು. ಅದನ್ನು ನೊಡಿನ ನಾನು ಕೂಡಾ ಎದ್ದು ಓಡಿ ಹೋಗಿ ಅಪ್ಪನ ಎದುರುಗೊಂಡು , ಕೈಯಲ್ಲಿಯ ಚೀಲವನ್ನು ತಂದು ಅವ್ವನ ಕೈಗಿರಿಸಿ ಮತ್ತೇ ಅಪ್ಪನ ಹತ್ತಿರ ಓಡುತ್ತಿದ್ದೆ. ಎಷ್ಟೆ ದಣಿವಾದರೂ ಒಂದು ದಿನವೂ ತೊರಗಡದ ಸದಾ ಹಸನ್ಮುಖಿಯಾಗಿರುತ್ತಿದ್ದ. ಮುಖ ತೊಳೆದು ಚಹಾ ಕುಡಿದು ಆರಾಮ ಚೇರ ಮೇಲೆ ಅಪ್ಪ ಕುಳಿತು ಕೊಳ್ಳುವದನ್ನೇ ಕಾಯುತ್ತಿದ್ದ ನಾನು ಓಡಿಹೊಗಿ ಅವನನ್ನು  ಬಾಚಿ ತಬ್ಬಿ ಅವನ ಎದೆಗೆ ತಲೆಕೊಟ್ಡು ಅಪ್ಪನ ಮೇಲೆ ಮಲಗಿ ಮಾತು ಪ್ರಾರಂಭಿಸುತ್ತಿದ್ದೆ. ನಗುತ್ತಲೇ ಅಪ್ಪ ಎಲ್ಲ ಮಾತು ಕೇಳುತ್ತ ಹುಂ ಗುಡುತ್ತಿದ್ದ.ನಿಧಾನಕ್ಕೆ ಎದ್ದು ಅಪ್ಪ ಹಾಕಿಕೊಂಡು ಬಿಚ್ಚಿಟ್ಟ ಶಟ್೯ ಮತ್ತು ಪ್ಯಾಂಟ ಹಾಕಿಕೊಂಡು ಬಂದು ಅವನ ಎದುರಿಗೆ ನಿಂತು 'ಹೇಗಿದೆ ನೊಡು' ಎಂದು ಕೇಳುತ್ತಿದ್ದೆ.ಅಪ್ಪನಿಗೊ ಎಲ್ಲಿಲ್ಲದ ಸಂಭ್ರಮ .ಎಷ್ಟ ದೊಡ್ಡವಳು ಆಗಿ ಬಿಟ್ಟಳು ನಮ್ಮ ಅವ್ವಿ ಎಂದು , ಹಾಕಿಕೊಂಡ ಬಟ್ಟೆಯನ್ನು ನಿಟಾಗಿ ತಿಡಿ ತಮ್ಮ ಪ್ಯಾಂಟಿನ ಬೆಲ್ಟನ್ನು  ತಗೆದು ನನ್ನ ಸೊಂಟಕ್ಕೆ ಜೊರಾಗಿ ಬಿಗಿದು, ಈಗ ಪ್ಯಾಂಟ ಬಿಚ್ಚಲ್ಲ ಹೊಗು ಆಟ ಆಡು ಎಂದು ಹೇಳಿ ಕಳಿಸುತ್ತಿದ್ದ. ಖುಷಿಯಿಂದ ಜಿಗಿಯುತ್ತಲೇ ಹೊರ ಓಡುತ್ತಿದ್ದೆ. ಒಂದು ದಿನ ಹೀಗೆ ಅಪ್ಪ ಬರುವ ಹೊತ್ತಲ್ಲಿ ಮುಖ ಊದಿಸಿಕೊಂಡು ಹೊಸ್ತಲ ಮೆಲೆ ಕುಳಿತು ಬಿಟ್ಟಿದ್ದೆ " ಯಾಕೊ ಹಿಂಗ ಕುಂತಿ, ಎ ಏನಾಯಿತು ಅವ್ವಿ ಯಾಕ ಹಿಂಗ ಕುಂತಾಳ ಎಂದು ಕೇಳುತ್ತಲೇ, ಓಡಿ ಹೊಗಿ 'ಕೈ ಎಲ್ಲಾ ನೋವು ಬಾಬಾ. ನನಗೆ ಇವತ್ತು ಕಸ ಗುಡಿಸಲು ಅವ್ವ ಹೇಳದ್ದಳು ಎನ್ನುತ್ತಲೆ ಕೈ ತೊರಿಸುತ್ತ ಅಳತೊಡಗಿದೆ. ಅಯ್ಯೊ ಇದೆನು ಯಾವತ್ತು ಇಲ್ಲದೆ ಇವತ್ತೊಂದು ದಿನ ಕಸ ಗುಡಿಸಿದ್ದಕ್ಕೆ ಅಳೊದಾ ,ಕೈ ನೊಯತಾ ಎಂದು ಪಕ್ಕದ ಮನೆಯ ಆಂಟಿ ಕಿಟಲೆ ಶುರು ಹಚ್ಚಗೊಂಡರು. ಅಪ್ಪನಿಗೆ ತುಂಬಾ ಕೊಪ ಬಂದಿತ್ತು . ಅವ್ವನಿಗೆ " ಕರೆದು ನಿನಗೆ ಆದರೆ ಕೆಲಸ ಮಾಡು ಇಲ್ಲ ಅಂದ್ರೆ ಬಿಡು , ಅವಳಿಗೆ ಹೇಳಬೇಡಾ ಎಂದು ಗದರಿದರು, ಅವ್ವ ಮಾತನಾಡದೆ ನಗುತ್ತಲೇ " ಅಪ್ಪಾ ಮಗಳು ಚಲೊ" ಇದಿರಿ ಎಂದು ಹೊರನಡೆದಳು. ಮುಗಿತು ನೊಡಿ ಅಲ್ಲಿಗೆ ಮೊದಲ ದಿನದ ಕೆಲದ ಕೊನೆ ದಿನವಾಯಿತು. ಅಪ್ಪ ಸುಮ್ಮೆನೆ ಕುಳಿತ ಎಂದರೆ ಸಾಕು ಅವನೊಟ್ಟಿಗೆ ಮನೆಯ ಎಲ್ಲರೂ ಸೇರಿ ಆಟವಾಡುತ್ತಿದ್ದೆವು. ಆಗ ನನಗೆ ಕ್ರಿಕೇಟಿನ ಹುಚ್ಚು ಅಪ್ಪನಿಗೊ ನ್ಯೂಜ ನೊಡುವ ಕಾತರ, ಹಾಗೂ ಹೀಗೂ ಒಬ್ಬರಿಂದ ಒಬ್ಬರನ್ನು ಕ್ರಿಕೇಟ ಆಟಗಾರರನ್ನು ತೊರಿಸುತ್ತ ಕ್ರಿಕೇಟಿನ ಹುಚ್ಚು ಹಿಡಿಸಿಯೇ ಬಿಟ್ಟೆ .ನಾ ನೊಡದಿದ್ದರು ಅಪ್ಪ ನನ್ನನ್ನು ಕರೆದು ತಾವು ಕುಳಿತು ನೋಡುತ್ತಿದ್ದರು. ಈಗಲೂ ಮರೆಯಲು ಸಾಧ್ಯವಾಗದ ದಿನಗಳವು. ಎಷ್ಟು ಸಲುಗೆ ಇತ್ತೊ ಅಷ್ಟೇ ಕೋಪ ಕೂಡಾ ಇತ್ತು. ಒಂದು ದಿನ ಶಾಲೆಗೆ ಬಂಕ ಮಾಡಿ ಸಿನಿಮಾ ನೋಡಲು ಹೋಗಿದ್ದೆ, ಬರುವಷ್ಟರಲ್ಲಿ ವೇದಿಕೆ ಸಿದ್ದವಾಗಿತ್ತು, ಕಿಟಕಿಯಲ್ಲಿ ಇಣುಕುತ್ತಲೇ ನೋಡಿದೆ, ಅವ್ವ ಹಣಿಗೆ ಕೈ ಹಚ್ಚಿ ಕುಂತಿದ್ದಳು, ಅಪ್ಪ ಚೇರ ಮೇಲೆ ಕುಳಿತು ವಜ್ರಮುನಿಯ ಹಾಗೆ ಬುಸುಗುಟ್ಟುತ್ತಿದ್ದ ನೊಡಿದ ಕೂಡಲೇ ಕಾಲು ಕಿತ್ತೆ, ಅದನ್ನು ನೊಡಿದ ಅಪ್ಪ 'ಬಾ ಒಳಗೆ ಓಡ ಬೇಡಾ' ಎಂದು ಗದರಿದರು . ಹುಂ ಎಂದು ಅಳುತ್ತಲೇ ಒಳನಡೆದೆ, " ಎಲ್ಲಿಗೆ ಹೋಗಿದ್ದೆ ಎಂದು ಕೇಳಿದ ಅಪ್ಪ, ನಿಧಾನಕ್ಕೆ ಬಿಕ್ಕಳಿಸುತ್ತ, ಸೀ...ನಿಮಾ ಕ್ಕ ಎಂದು ಹೇಳಿದೆ, ಸೀನಿಮಾಕ್ಕ ಹೇಳದ ಹೊಗಿದ್ದಿ, ಅಂದಾ ಗದರುತ್ತಲೇ ಕೆಂಪು ಕಣ್ಣುಗಳು ನನ್ನನ್ನೆ ತಿನ್ನುವ ಹಾಗೆ ಇತ್ತು . ನನ್ನ ಅಳು ಇನ್ನೂ ಜೊರಾಯಿತು. ಕೈಯಲ್ಲಿದ್ದ ಒಡಗಟೆಗೆ ಇಂದ ಎರಡು ದೊಡ್ಡ ಎಟು ಬಿತ್ತು ".ಸತ್ತನೊ ,ಇನ್ನೊಮ್ಮೆ ಹಿಂಗ ಹೇಳದ ಹೊಗಂಗಿಲ್ಲ ಬಾಬಾ "ಎಂದು ಮತ್ತೊಂದು ಕೊಣಿಯಿಂದ ಓಡಿ ಹೊದೆ. ಅಪ್ಪ ಓಣಿಯಲ್ಲಾ ತಿರುಗಾಡಿ ಬಂದರು ನಾನು ಸಿಗಲೇ ಇಲ್ಲ . ಮರುದಿನ ಬೆಳಿಗ್ಗೆ 'ಅವ್ವಿ ಬಾ ಇಲ್ಲಿ ಎಂದು ಕರೆದರು ಮೆತ್ತಗೆ ಮುಖ ಕುವುಚುತ್ತಲೇ ಹೊದೆ , ಅಪ್ಪ ನನ್ನನ್ನು ತಬ್ಬಿ ಅಳ ತೊಡಗಿದ ಅಪ್ಪನೊಟ್ಟಿಗೆ ನಾನು ಮತ್ತು ಅವ್ವ ಅಳತೊಡಗಿದೆವು. ಬೆಳೆದು ಅಷ್ಟು ದೊಡ್ಡವಳಾದರು ಅಪ್ಪ ಅವ್ಬ ಒಂದು ದಿನವಾದರೂ ಹೊಡೆದದ್ದು ಗೊತ್ತೇ ಇಲ್ಲ . ಅವತ್ತು ಹೊಡೆದದ್ದಕ್ಕೆ ಅಪ್ಪನಿಗೆ ಅದು ಎಲ್ಲಿತ್ತೊ "ಅಳು" ಹೇಳದೆ ಕೇಳದೆ ಆಚೆ ಬಂದಿತ್ತು. ಅಪ್ಪನ್ನು ಅಳಿಸಿದ್ದಕ್ಕೆ ನಾನು ಅತ್ತಿದ್ದೆ. ನಮ್ಮಿಬ್ನರನ್ನು ನೊಡಿ ಅವ್ವ ಅತ್ತಿತ್ತು.  ಸಮಾಧಾನಿಸುತ್ತಲೆ ತಿಳಿ ಹೇಳಿ 'ಹೊಗುವಾಗ ಹೇಳಿ ಹೊಗು' ಎಂದು ಹೇಳಿ, ಶಾಲೆಗೆ ಚಕ್ಕರ ಹಾಕಿದರೆ ಮುಂದೆ ಇದೆ ತರಹ ಶಿಕ್ಷೆಯೆಂದು ಹೇಳಿ ನಗ ತೊಡಗಿದ ಅಪ್ಪ. ಆವತ್ತಿನಿಂದ ಶಾಲೆಗೆ ಚಕ್ಕರ ಹೊಡೆದದ್ದೆ ಇಲ್ಲ. ಅಪ್ಪ ಶಿಸ್ತನ್ನು ಕಲಿಸಿದ ನನ್ನ ಮೊದಲ ಗುರುವಾದ . ದಿನ ಬೆಳಗಾದರೆ ಅಪ್ಪ ಒಂದು ಪೇಜ ನಾನು ಒಂದು ಪೇಜ ಪೇಪರ ಓದುತ್ತಿದ್ದೇವು. ತಮ್ಮನಿಗೆ ಬೈಗುಳ ತಪ್ಪುತ್ತಿರಲಿಲ್ಲ. ಮನೆಯಲ್ಲಿ ಬಿದ್ದ ಪೇಪರ ಮೇಲೆ ಎಂದಾದರೂ ನಿನ್ನ ಕಣ್ಣು ಹೊಗಿದೆಯೆ ಎಂದು ಓದುವಂತೆ ಬೈಯ್ಯುತ್ತಿದ್ದ. ತಮ್ಮ ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಅಪ್ಪನ ಅಂಗಿಯ ವಾಸನೆ ಇನ್ನು ಮನದಲ್ಲಿ ಹಸಿ ಹಸಿಯಾಗಿದೆ. ನೆನಪಾದಾಗ ಅವನ ಕೊಟಿನ, ಅಂಗಿಯ ತೊಳನು ಏರಿಸಿದಾಗ ಅದೇ ಖುಷಿ ಇಮ್ಮಡಿಯಾಗುತ್ತೆ ಅಪ್ಪನ ಮುಗುಳು ನಗೆ ಕಣ್ಣಮುಂದೆ ಬಂದು ಹೊಗುತ್ತೆ. ಇವತ್ತು ಅಪ್ಪ ನನ್ನೊಂದಿಗಿಲ್ಲ ನಾನು ಮಾಡುವ ಪ್ರತಿ ಕೆಲಸದಲ್ಲಿ ಅವನ ಶಿಸ್ತು , ಸಂಯಮ ನನ್ನನ್ನು ಸದಾ ಎಚ್ಚರಿಸುತ್ತಲೇ ಇರುತ್ತೆ.ಮಿಸ್ ಯು ಅಪ್ಪಾ 
‌ಡಾ.ಸುಜಾತಾ.ಸಿ

05-07-2020 EE DIVASA KANNADA DAILY NEWS PAPER