Monday, January 30, 2023

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮ್ಮೇಳನದ ಪೂರ್ವಭಾವಿ ಸಭೆ

 


ಈ ದಿವಸ ವಾರ್ತೆ

ವಿಜಯಪುರ: ನಗರದಲ್ಲಿ ಇದೇ ಮೊದಲ ಬಾರಿಗೆ ೩೭ನೇ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದ್ದು, ಸಮ್ಮೇಳನ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವುದು ಖಚಿತವಾಗಿದ್ದು, ಹಾಗಾಗಿ ಸಮ್ಮೇಳನ ಯಶಸ್ಸಿಗೆ ಖಾಸಗಿ ಹಾಗೂ ಸರಕಾರಿ ವಸತಿ ಗೃಹಗಳನ್ನು ಕಾಯ್ದಿರಿಸುವ ಮೂಲಕ ಜಿಲ್ಲಾಡಳಿತ ಸಂಪೂರ್ಣ ಕೈಜೋಡಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸಮ್ಮೇಳನ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳು ಹಾಗೂ ಸಮ್ಮೇಳನದ ನಾನಾ ಸಮಿತಿಗಳ ಸದಸ್ಯರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಮ್ಮೇಳನಕ್ಕೆ ರಾಜ್ಯಾದ್ಯಂತ ಆಗಮಿಸುವ ಪತ್ರಕರ್ತರ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಖಾಸಗಿ ಹಾಗೂ ಸರಕಾರಿ ವಸತಿ ಗೃಹಗಳನ್ನು ಕಾಯ್ದಿರಿಸುವಂತೆ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷರಿಗೆ ಹಾಗೂ ಆಯಾ ಸರಕಾರಿ ವಸತಿ ಗೃಹಗಳ ಮುಖ್ಯಸ್ಥರಿಗೆ ಸಲಹೆ ಮಾಡಿದರು.

ಸಮ್ಮೇಳನ ನಡೆಯಲಿರುವ ರಂಗಮಂದಿರದ ಆವರಣದಲ್ಲಿರುವ ರಸ್ತೆಯನ್ನು ಡಾಂಬರೀಕರಣ ಮಾಡಿ ಮುಗಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಿದ ಜಿಲ್ಲಾಧಿಕಾರಿ, ಜೊತೆಗೆ ರಂಗಮಂದಿರದಲ್ಲಿ ಫೋಕಸ್ ವಿದ್ಯುತ್ ದೀಪ ಅಳವಡಿಸುವಂತೆಯೂ ಸಲಹೆ ಮಾಡಿದರು.

ನಗರದ ಹೃದಯ ಭಾಗ ಸೇರಿದಂತೆ ನಗರ ಸಂಪರ್ಕಿಸುವ ರಸ್ತೆಗಳಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರವಿರುವ ಬೃಹದಾಕಾರದ ಸ್ವಾಗತ ಕಮಾನುಗಳನ್ನು ಅಳವಡಿಸಲು ಪಾಲಿಕೆ ಹಾಗೂ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಗಾಂಧಿವೃತ್ತದಲ್ಲಿರುವ ಫ್ಲೈ ಓವರ್‌ಗೆ ಬೃಹತ್ ಬ್ಯಾನರ್ ಅಳವಡಿಸುವಂತೆ ಸೂಚಿಸಿದರು.

ವಾಹನ ಪೂರೈಸಲು ಸೂಚನೆ : ಜೊತೆಗೆ ನಗರಕ್ಕೆ ಆಗಮಿಸುವ ಪತ್ರಕರ್ತರ ಸಂಚಾರಕ್ಕೆ ನಗರದ ನಾನಾ ಶಿಕ್ಷಣ ಸಂಸ್ಥೆಗಳಿಂದ ಬಸ್ ಒದಗಿಸಿಕೊಡಲು ಜಿಲ್ಲಾಧಿಕಾರಿ ಆರ್‌ಟಿಓ ಅಧಿಕಾರಿಗೆ ಸೂಚಿಸಿದರಲ್ಲದೇ, ನಗರಕ್ಕೆ ಆಗಮಿಸಿದ ಪತ್ರಕರ್ತರು ಜಿಲ್ಲೆಯಲ್ಲಿ ಪ್ರವಾಸಕ್ಕೆ ತೆರಳಲು ಸಾರಿಗೆ ಸಂಸ್ಥೆ ಬಸ್‌ಗಳನ್ನು ಪೂರೈಸಲು ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ಡಿ.ಬಿ. ವಡವಡಗಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಫಿರೋಜ್ ರೋಜಿನದಾರ, ನಾಮನಿರ್ದೇಶಿತ ಸದಸ್ಯರಾದ ಕೆ.ಕೆ. ಕುಲಕರ್ಣಿ, ಕೌಶಲ್ಯಾ ಪನಾಳಕರ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಗುರು ಲೋಕುರೆ, ಸುರೇಶ ತೇರದಾಳ, ಸಮೀರ ಇನಾಂದಾರ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ಸಂಘದ ಸದಸ್ಯರಾದ ಅಶೋಕ ಯಡಳ್ಳಿ, ಗುರು ಗದ್ದನಕೇರಿ, ರಶ್ಮಿ ಪಾಟೀಲ, ಆಹಾರ ಸಮಿತಿಯ ಪ್ರದೀಪ ಕುಲಕರ್ಣಿ, ವಸತಿ ಸಮಿತಿಯ ಶರಣು ಸಬರದ, ಸೀತಾರಾಮ ಕುಲಕರ್ಣಿ, ಚಿದಂಬರ ಕುಲಕರ್ಣಿ, ಶಿವಾನಂದ ಭುಂಯ್ಯಾರ, ನಿಂಗಪ್ಪ ನಾವಿ,  ದೇವೇಂದ್ರ ಹೆಳವರ, ಸಾರಿಗೆ ಸಮಿತಿಯ ಇರ್ಫಾನ್ ಶೇಖ್, ವಿಠ್ಠಲ ಲಂಗೋಟಿ, ಇಸ್ಮಾಯಿಲ್ ಮುಲ್ಲಾ, ಎಸ್.ಬಿ. ಪಾಟೀಲ, ಗೋಪಾಲ ಕನ್ನಿಮನಿ, ಆರೋಗ್ಯ ಸಮಿತಿಯ ರವಿ ಜಹಾಗೀರದ, ರವಿ ಕಿತ್ತೂರ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಬಾಲಪ್ಪ ಸಾರವಾಡ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳಿದ್ದರು.

Saturday, January 28, 2023

ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ “ವಿಧಾನಸೌಧ ಚಲೋ”ಕಾರ್ಯಕ್ರಮ : ರಾಜ್ಯಾಧ್ಯಕ್ಷ ಜೈಕುಮಾರ ಹೆಚ್.ಎಸ್.



ಈ ದಿವಸ ವಾರ್ತೆ

ವಿಜಯಪುರ : ಪ್ರಸ್ತುತ ಸರ್ಕಾರವು 7ನೇ ವೇತನಆಯೋಗವನ್ನು ವಿಳಂಬವಾಗಿ ರಚನೆ ಮಾಡಿರುವುದಲ್ಲದೇ, ಇದುವರೆಗೂ ವೇತನಆಯೋಗವುಕ್ಷಿಪ್ರವಾಗಿ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಸಲ್ಲಿಸುವ ಮತ್ತುರಾಜ್ಯ ಸರ್ಕಾರವುಆಯವ್ಯಯ ಮಂಡನೆಯಲ್ಲಿ ಜಾರಿಗೊಳಿಸುವ ಕುರುಹುಗಳು ಕಂಡು ಬರದೇಇರುವುದು ನೌಕರರಲ್ಲಿತೀವ್ರಅಶಾಂತಿ ಮತ್ತುಅತೃಪ್ತಿಯನ್ನುಉಂಟು ಮಾಡಿದೆ. 7ನೇ ವೇತನಆಯೋಗ ರಚಿಸಿ ವೇತನ ಪರಿಷ್ಕರಣೆ ಮಾಡದೇಇರುವುದರಿಂದ ವಾರ್ಷಿಕವಾಗಿ ನೌಕರರಿಗೆರೂ.15,000 ಕೋಟಿ ನಷ್ಟವಾಗುತ್ತಿದೆ.ಎನ್.ಪಿ.ಎಸ್ ಪದ್ದತಿಯನ್ನು ರದ್ದುಪಡಿಸಿ ನಿಶ್ಚಿತ ಪಿಂಚಣ ಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಸರ್ಕಾರಿಎನ್.ಪಿ.ಎಸ್ ನೌಕರರು 2023ರ ಡಿಸೆಂಬರ್ 19ರಿಂದ 14 ದಿನಗಳ ಕಾಲ ಬೃಹತ್ ಮಟ್ಟದಲ್ಲಿ “ಮಾಡುಇಲ್ಲವೇ ಮಡಿ” ಹೆಸರಿನರಾಜ್ಯ ಮಟ್ಟದಧರಣ ಕಾರ್ಯಕ್ರಮವನ್ನು ನಡೆಸಿರುತ್ತಾರೆ.ಈ ಹೋರಾಟಕಾರ್ಯಕ್ರಮವನ್ನುಒಕ್ಕೂಟವು ಸೇರಿದಂತೆರಾಜ್ಯದಎಲ್ಲ ನೌಕರಪರ ಸಂಘಟನೆಗಳು ಬೆಂಬಲಿಸಿದ್ದವು.ಆದರೆ, ರಾಜ್ಯ ಸರ್ಕಾರವು ನೌಕರರ ಹೋರಾಟವನ್ನುಗಂಭೀರವಾಗಿ ಪರಿಗಣ ಸದೇ ಮಾತುಕತೆಗೆ ನೌಕರ ಮುಖಂಡರನ್ನುಕರೆಯದೇ ಉದಾಸೀನ ತೋರಿತು.ಇದುರಾಜ್ಯ ಸರ್ಕಾರಿ ನೌಕರರಲ್ಲಿತೀವ್ರಆಕ್ರೋಶವನ್ನು ಮೂಡಿಸಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ರಾಜ್ಯಾಧ್ಯಕ್ಷ ಜೈಕುಮಾರ ಹೆಚ್.ಎಸ್. ಹೇಳಿದರು.

ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅದರಂತೆ Pಈಖಆಂ ಕಾಯಿದೆ/ ಓPS ಪದ್ಧತಿ ರದ್ದುಗೊಳಿಸಿ ನಿಶ್ಚಿತ ಪಿಂಚಣ ಪದ್ದತಿ ಮರುಸ್ಥಾಪಿಸಬೇಕು. ಕೇಂದ್ರ ಹಾಗೂ ನೆರೆ ರಾಜ್ಯಗಳ ಮತ್ತು ಹೈಕೋರ್ಟ್ನ ನೌಕರರ ವೇತನಕ್ಕೂ ನಮ್ಮರಾಜ್ಯದ ನೌಕರರ ವೇತನಕ್ಕೂ ಕನಿಷ್ಠ 40% ವೇತನ ವ್ಯತಾಸವಾಗಿರುವ ಹಿನ್ನೆಲೆಯಲ್ಲಿತಕ್ಷಣವೇ ಶೇ. 25ರಷ್ಟು ಮಧ್ಯಂತರ ಪರಿಹಾರ ಘೋಷಿಸಬೇಕು. 7ನೇ ವೇತನಆಯೋಗದ ಪರಿಷ್ಕರಣೆ ಸಂಬAಧರಾಜ್ಯ ನೌಕರರಿಗೆ ನೀಡಬೇಕಾದ ಹೆಚ್ಚಿನ ವೇತನ ಪರಿಷ್ಕರಣೆಗಾಗಿ ವೇತನ 2023-24ನೇ ಆಯವ್ಯಯದಲ್ಲಿಅಂದಾಜುಅನುದಾನವನ್ನು ಕಾಯ್ದಿರಿಸಿ ಜಾರಿಗೊಳಿಸಬೇಕು. ರಾಜ್ಯದಲ್ಲಿ ಸುಮಾರು 2.80 ಲಕ್ಷಕ್ಕೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವುದು. ಆಡಳಿತ ಸುಧಾರಣೆ ನೆಪದಲ್ಲಿ ಶಿಫಾರಸ್ಸು ಮಾಡಲಾಗಿರುವ ಹುದ್ದೆಗಳ ಕಡಿತವನ್ನು ಕೈಬಿಡುವುದು ಮತ್ತು ಸರ್ಕಾರಿ ಸೇವೆಗಳ ಖಾಸಗೀಕರಣಕೈಬಿಡುವುದು ಹೊರಗುತ್ತಿಗೆ ನೌಕರರಿಗೆ ಸುಪ್ರೀಂಕೋರ್ಟ್ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಮತ್ತು ಎಲ್ಲಾ ನೇರ ನೇಮಕಾತಿಯಲ್ಲಿ ಪ್ರಾತಿನಿಧ್ಯ ನೀಡಬೇಕು. ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಬಾಕಿ ಇರುವ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆ ಸಮಸ್ಯೆಗಳು, ಶಿಕ್ಷಕರ ನೇಮಕಾತಿ, ವೃಂದ ಮತ್ತು ನೇಮಕಾತಿ ನಿಯಮಗಳ ರಚನೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸಬೇಕು. ಶಾಲೆಗಳನ್ನು ಮುಚ್ಚುವುದು, ಶಾಲೆಗಳ ವಿಲೀನ, ಹಾಸ್ಟೆಲ್‌ಗಳ ವಿಲೀನ, ಶಿಕ್ಷಕರ ಸಂಖ್ಯೆಗಳ ಕಡಿತ, ಶಿಕ್ಷಣದ ಖಾಸಗೀಕರಣ ಕೈ ಬಿಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕೈಬಿಡುವುದು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕೈಬಿಡಬೇಕೆಂದು ಆಗ್ರಹಿಸಿದರು.



ಕೇಂದ್ರ ಮತ್ತುರಾಜ್ಯ ಸರ್ಕಾರಗಳು 18 ತಿಂಗಳ ಬಾಕಿ ತುಟ್ಟಿಭತ್ಯೆಯನ್ನುಇದುವರೆಗೂ ಬಿಡುಗಡೆ ಮಾಡಿರುವುದಿಲ್ಲ. ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತರಕಲ್ಯಾಣ ಇಲಾಖೆ ಹಾಗೂ ಇನ್ನಿತರ ಹಲವು ಇಲಾಖೆಗಳಲ್ಲಿ ಶಿಕ್ಷಕರ ವರ್ಗಾವಣೆ ಸಮಸ್ಯೆಗಳು ತಾಂಡವವಾಡುತ್ತಿವೆ. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡದೇಇರುವುದರಿಂದಅವರಿಗೆ ಮುಂಬಡ್ತಿಯೇಇಲ್ಲವಾಗಿದೆ. ಇವೆಲ್ಲ ಸಮಸ್ಯೆಗಳ ಬಗ್ಗೆ ಶಿಕ್ಷಕರು ಹಲವು ಮನವಿಗಳನ್ನು ಸಲ್ಲಿಸಿದ್ದಾಗ್ಯೂ ಇಲಾಖೆಗಳು ದಿವ್ಯ ನಿರ್ಲಕ್ಷö್ಯ ವಹಿಸಿರುತ್ತವೆ. ರಾಜ್ಯದ 7 ಕೋಟಿಜನತೆಗೆಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 7.73 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 5.20 ಲಕ್ಷ. ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು 2.80 ಲಕ್ಷದಷ್ಟಿದೆ.ವೇತನ ಸೌಲಭ್ಯಗಳ ನಷ್ಟ ಮತ್ತು ಖಾಲಿ ಹುದ್ದೆಗಳ ಹೊರೆ ನೌಕರರ ಮೇಲೆ ಬಿದ್ದಿದೆ.ರಾಜ್ಯದ ವಿದ್ಯಾವಂತಯುವಜನತೆಉದ್ಯೋಗಕ್ಕಾಗಿ ಪರಿಪಾಟಲು ಪಡುತ್ತಿದ್ದಾರೆ. ಗುತ್ತಿಗೆ-ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಶೋಷಿಸಲಾಗುತ್ತಿದೆ.ಆಡಳಿತ ಸುಧಾರಣೆಗಳ ಆಯೋಗ-2ರ ಶಿಫಾರಸ್ಸುಗಳಲ್ಲಿ ಜೀವನಗುಣಮಟ್ಟ ಸುಧಾರಣೆ ಇತ್ಯಾದಿಗಳನ್ನು ಕೇಂದ್ರೀಕರಿಸುವ ಬದಲಿಗೆ ಇಲಾಖೆಗಳ ಖಾಸಗೀಕರಣ, ಇಲಾಖೆಗಳ ವಿಲೀನಾತಿ ಮೂಲಕ ಹುದ್ದೆಗಳ ರದ್ದತಿ, ಹೊರಗುತ್ತಿಗೆ ಕೇವಲ ತಂತ್ರಜ್ಞಾನಆಧಾರಿತಯಾಂತ್ರಿಕ ಧೋರಣೆಗಳಿಗೆ ಸೀಮಿತವಾಗಿದೆ.ದೇಶದ ಸಾರ್ವಜನಿಕರಂಗದ ಉದ್ದಿಮೆಗಳಾದ ರೈಲ್ವೇ, ವಿದ್ಯುಚ್ಛಕ್ತಿ, ವಿಮಾರಂಗ, ಬ್ಯಾಂಕ್ ಮತ್ತು ಹಣಕಾಸು ವಲಯ, ದೂರಸಂಪರ್ಕ, ವಿಮಾನ ವಲಯ, ಬಂದರುಗಳು ಮತ್ತು ಹೆದ್ದಾರಿಗಳು, ರಕ್ಷಣಾ ವಲಯ, ಎಲ್.ಐ.ಸಿ, ಇತ್ಯಾದಿ ಸಾರ್ವಜನಿಕ ಉದ್ದಿಮೆಗಳನ್ನು ಬೃಹತ್ ಪ್ರಮಾಣದಲ್ಲಿ ದೇಶೀಯ ಮತ್ತು ಪರದೇಶೀ ಕಂಪನಿಗಳಿಗೆ ಖಾಸಗೀಕರಣ ನೀತಿಗಳ ಮೂಲಕ ಹಸ್ತಾಂತರ ಮಾಡಲಾಗುತ್ತಿದ್ದುಖಾಸಗೀಕರಣವನ್ನುಕೈಬಿಡುವಂತೆ ಸರ್ಕಾರವನ್ನುಒತ್ತಾಯಿಸಬೇಕಾಗಿದೆ ಎಂದರು.

ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಇಟ್ಟಕೊಂಡು ಅಖಿಲ ಕರ್ನಾಟಕರಾಜ್ಯ ಸರ್ಕಾರಿಒಕ್ಕೂಟವುರಾಜ್ಯ ಸರ್ಕಾರದ ವಿವಿಧ ಇಲಾಖಾ ಮತ್ತು ವೃಂದ ಸಂಘಗಳು ಒಡಗೂಡಿ ಈ ಬೇಡಿಕೆಗಳ ಈಡೇರಿಕೆಗಾಗಿ 2023ರ ಫೆಬ್ರವರಿ 7ರಂದು “ವಿಧಾನಸೌಧ ಚಲೋ”ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಜ್ಯದಎಲ್ಲಾ ನೌಕರ ಬಾಂಧವರು ಸಾಮೂಹಿಕವಾಗಿ ಒಂದು ದಿನದರಜೆಯನ್ನು ಹಾಕುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಲೇಂಡಿ, ಜಿಲ್ಲಾಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಸುರೇಶ ಜೀಬಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಇಳಕಲ್, ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಎಸ್.ಮೆಣಸಗಿ, ಎನ್.ಪಿ.ಎಸ್ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಡಲಗಿ,ಜಿ.ಬಿ.ಅಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Wednesday, January 25, 2023

26-01-2023 EE DIVASA KANNADA DAILY NEWS PAPER

25-01-2023 EE DIVASA KANNADA DAILY NEWS PAPER

24-01-2023 EE DIVASA KANNADA DAILY NEWS PAPER

23-01-2023 EE DIVASA KANNADA DAILY NEWS PAPER

22-01-2023 EE DIVASA KANNADA DAILY NEWS PAPER

21-01-2023 EE DIVASA KANNADA DAILY NEWS PAPER

20-01-2023 EE DIVASA KANNADA DAILY NEWS PAPER

19-01-2023 EE DIVASA KANNADA DAILY NEWS PAPER

18-01-2023 EE DIVASA KANNADA DAILY NEWS PAPER

17-01-2023 EE DIVASA KANNADA DAILY NEWS PAPER

16-01-2023 EE DIVASA KANNADA DAILY NEWS PAPER

15-01-2023 EE DIVASA KANNADA DAILY NEWS PAPER

Tuesday, January 24, 2023

ಯಶಸ್ವಿಯಾಗಿ ಮತದಾರರಲ್ಲಿ ಜಾಗೃತಿ ಮೂಡಿಸಿದ ಜಿ.ಪಂ.ಸಿಇಒ ರಾಹುಲ್ ಸಿಂಧೆ ರಾಜ್ಯ ಪ್ರಶಸ್ತಿಗೆ ಆಯ್ಕೆ


ಈ ದಿವಸ ವಾರ್ತೆ
ವಿಜಯಪುರ: ಜಿಲ್ಲೆಯ ಮತದಾರರಲ್ಲಿ ಯಶಸ್ವಿಯಾಗಿ ಜಾಗೃತಿ ಮೂಡಿಸಲು ಉತ್ತಮವಾಗಿ ಕಾರ್ಯನಿರ್ವಹಿಸಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರನ್ನು ರಾಜ್ಯ ಚುನಾವಣಾ ಆಯೋಗ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜಿಲ್ಲೆಯ ಮತದಾರರಲ್ಲಿ ಮತದಾನದ ಮಹತ್ವ, ಪ್ರತಿಯೊಬ್ಬ ಅರ್ಹ ಮತದಾರ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ನಿರಂತರವಾಗಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವಿಕೆ, ನಗರದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡ ಕಾಲ್ನಡಿಗೆ ಜಾಥಾ, ಮತದಾರರಲ್ಲಿ ಅರಿವು, ತಿಳಿವಳಿಕೆ ಮೂಡಿಸಲು ವಿವಿಧ ಪ್ರಚಾರ ಸಾಮಗ್ರಿಗಳನ್ನು ವಿತರಿಸುವುದೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಿಕೊಳ್ಳಲು ಹಾಗೂ ಮತದಾನದ ಮಹತ್ವ ಕುರಿತು ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವುದನ್ನು ರಾಜ್ಯ ಚುನಾವಣಾ ಆಯೋಗ ಈ ಉತ್ತಮ ಕಾರ್ಯವನ್ನು ಪರಿಗಣಿಸಿ, ರಾಜ್ಯಮಟ್ಟದ ಪ್ರಶಸ್ತಿಗೆ ರಾಹುಲ್ ಶಿಂಧೆ ಅವರನ್ನು ಆಯ್ಕೆ ಮಾಡಲಾಗಿದೆ. ಜ.25ರಂದು ಆಚರಿಸಲಾಗುವ 13ನೇ ರಾಷ್ಟ್ರಿಯ ಮತದಾರರ ದಿನಾಚರಣೆಯಲ್ಲಿ ಬೆಂಗಳೂರಿನ ರಾಜ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರು ರಾಹುಲ್ ಶಿಂಧೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಅಧಿಕಾರಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಮಾಧ್ಯಮದವರು ಹಾಗೂ ಸಾರ್ವಜನಿಕರು ಸಕ್ರೀಯವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕೈ ಜೋಡಿಸಿದ್ದರಿಂದ ಉತ್ತಮ ಕಾರ್ಯನಿರ್ವಹಿಸಲು ಸಾಧ್ಯವಾಗಿ ಯಶಸ್ಸು ಸಾಧಿಸಿದ್ದು, ಈ ಪ್ರಶಸ್ತಿ ಲಭಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Monday, January 2, 2023

03-01-2023 EE DIVASA KANNADA DAILY NEWS PAPER

 

ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ : ಸಕಲ ಸರ್ಕಾರಿ ಗೌರವಗಳೊಂದಿಗೆ ಜ.3ರಂದು ಪೂಜ್ಯರ ಅಂತಿಮ ಕ್ರಿಯೆ - ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

 ಈ ದಿವಸ ವಾರ್ತೆ

ವಿಜಯಪುರ :  ನಡೆದಾಡುವ ದೇವರೆಂದೆ ಖ್ಯಾತರಾದ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮಿಜೀಗಳು, ಜ್ಞಾನಯೋಗಾಶ್ರಮ ವಿಜಯಪುರ ಇವರು ದಿನಾಂಕ: 02-01-2023 ರಂದು ಲಿಂಗೈಕ್ಯರಾದರೆಂದು ತಿಳಿಸಲು ತೀವ್ರ ವಿಷಾಧಿಸುತ್ತೇವೆ. ಈ ಪ್ರಯುಕ್ತ ರಾಜ್ಯ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಪೂಜ್ಯರ ಅಂತಿಮ ಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ನಿರ್ದೇಶಿರುತ್ತದೆ ಮತ್ತು  ಪೂಜ್ಯರ ಅಂತಿಮ ದರ್ಶನಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗೆ ಸರ್ಕಾರ ರಜೆ ಘೋಷಿಸಿದೆ ಎಂದು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. 

ಜಿಲ್ಲಾಡಳಿತವು ಪೂಜ್ಯರ ಪಾರ್ಥಿವ ಶರೀರವನ್ನು ಶ್ರೀ ಜ್ಞಾನಯೋಗಾಶ್ರಮದಲ್ಲಿ  ಈ ರಾತ್ರಿಯಿಂದ ನಾಳೆ ಬೆಳಗ್ಗೆ 4.30ರವರೆಗೆ ಭಕ್ತಾದಿಗಳ ದರ್ಶನಕ್ಕಾಗಿ ಇಡಲಾಗುವುದು. ನಂತರ ಪೂಜ್ಯರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಶ್ರೀ ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಯವರೆಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಭಕ್ತಾದಿಗಳಿಗೆ ಪೂಜ್ಯರ ಅಂತಿಮ ದರ್ಶನವನ್ನು ದಿನಾಂಕ: 03-01-2023 ರ ಬೆಳಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ. ಪೂಜ್ಯರ ಅಂತಿಮ ದರ್ಶನಕ್ಕಾಗಿ ಸೋಲಾಪುರ, ಕಲಬುರಗಿ, ಸಿಂದಗಿ, ಬಾಗಲಕೋಟೆ, ಜಮಖಂಡಿ, ಅಥಣಿಯಿಂದ ಆಗಮಿಸುವ ಭಕ್ತಾದಿಗಳು ನೇರವಾಗಿ ವಿಜಯಪುರ ನಗರದ ರಿಂಗ್ ರೋಡ್ ಮೂಲಕ (ಇಟಗಿ ಪೆಟ್ರೋಲ್ ಪಂಪ್) ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸ್ಥಳದಲ್ಲಿಯೇ ಭಕ್ತಾದಿಗಳಿಗೆ ಪ್ರಸಾದ, ನೀರು, ಇನ್ನಿತರೆ  ವ್ಯವಸ್ಥೆ ಮಾಡಲಾಗಿದೆ.


ಭಕ್ತಾದಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸೈನಿಕ ಶಾಲೆಯ ಎದುರುಗಡೆ ಇರುವ ನೇತಾಜಿ ಸುಭಾಷ ಚಂದ್ರ ಬೋಸ್, ರಸ್ತೆಯ ಮೂಲಕ ನಡೆದುಕೊಂಡು ಸೈನಿಕ ಶಾಲೆಯ ಮುಖ್ಯ ದ್ವಾರದ ಮೂಲಕ ಪ್ರವೇಶಿಸಬೇಕು. ದರ್ಶನದ ನಂತರ ಸೈನಿಕ ಶಾಲೆಯ 2ನೇ ಗೇಟ್ ಮೂಲಕ (ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರಕರ ದ್ವಾರ) ಹೊರಗಡೆ ಬಂದು ತಮ್ಮ ವಾಹನ ಮೂಲಕ ವಾಪಸ  ತೆರಳಬೇಕು. ಸೈನಿಕ ಶಾಲೆಯಲ್ಲಿ ಮಧ್ಯಾಹ್ನ 3.00 ಗಂಟೆಯಿಂದ ಸಾಯಂಕಾಲ 4.00 ಗಂಟೆಯ ಅವಧಿಯಲ್ಲಿ ಸರ್ಕಾರದ ವತಿಯಿಂದ ಸಕಲ ಗೌರವಗಳೊಂದಿಗೆ ಪೂಜ್ಯರಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂಜೆ 4.00 ಗಂಟೆಯಿಂದ ಪುನಃ ತೆರೆದ ವಾಹನದಲ್ಲಿ ಪೂಜ್ಯರ ಪಾರ್ಥೀವ ಶರೀರವನ್ನು ಸೈನಿಕ ಶಾಲೆಯಿಂದ ಶ್ರೀ ಜ್ಞಾನಯೋಗಾಶ್ರಮಕ್ಕೆ ತರಲಾಗುವುದು. (ಮಾರ್ಗ: ಗೋದಾವರಿ-ಶ್ರೀ ಶಂಕರಲಿಂಗ ದೇವಸ್ಥಾನ-ಶಿವಾಜಿವೃತ್ತ - ಗಾಂಧಿವೃತ್ತ- ಶ್ರೀ ಸಿದ್ದೇಶ್ವರ ದೇವಸ್ಥಾನ-ಬಿ.ಎಲ್.ಡಿ.ಇ. ಆಸ್ಪತ್ರೆ-ಶ್ರೀ ಜ್ಞಾನಯೋಗಾಶ್ರಮ), ಭಕ್ತಾದಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡು ಪೂಜ್ಯರ ಪಾರ್ಥೀವ ಶರೀರಕ್ಕೆ ಅಂತಿಮ ನಮನವನ್ನು ಸಲ್ಲಿಸಬಹುದಾಗಿದೆ. ಪೂಜ್ಯರ ಅಂತಿಮ ಕ್ರಿಯೆಯನ್ನು ಸಂಜೆ 5.00 ಗಂಟೆಗೆ ಶ್ರೀ ಜ್ಞಾನಯೋಗಾಶ್ರಮದ ಆವರಣದಲ್ಲಿ ವಿಧಿವಿಧಾನಗಳಂತೆ ನೇರವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಶ್ರೀ ಜ್ಞಾನಯೋಗಾಶ್ರಮದ ಆವರಣದಲ್ಲಿ ಸ್ಥಳಾವಕಾಶದ ಅಭಾವವಿರುವುದರಿಂದ ಭಕ್ತಾದಿಗಳು ಸೈನಿಕ ಶಾಲೆಯಲ್ಲಿಯೇ ಅಂತಿಮ ದರ್ಶನ ಪಡೆಯಲು ಮನವಿ ಮಾಡಿಕೊಂಡ ಜಿಲ್ಲಾಧಿಕಾರಿಗಳು, ಭಕ್ತಾದಿಗಳು ಯಾವುದೇ ಆತಂತಕ್ಕೆ ಒಳಗಾಗದೇ ಶಾಂತ ರೀತಿಯಿಂದ ವರ್ತಿಸಿ, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ.