Saturday, May 27, 2023

ಡಾ ಎಂ ಎಂ ಕಲಬುರಗಿ ಅವರ ಹತ್ಯೆ ಯನ್ನು ಖಂಡಿಸುತ್ತೇವೆ : ತೀಸ್ತಾ ಸೆಟಲ್ವಾಡ್



ಈ ದಿವಸ ವಾರ್ತೆ

 ವಿಜಯಪುರ : ಡಾ ಎಂ ಎಂ ಕಲಬುರಗಿ ಅವರ ಹತ್ಯೆ ಯನ್ನು ಖಂಡಿಸುತ್ತೇವೆ ಎಂದು ಖ್ಯಾತ ವಿಚಾರವಾದಿ ಮುಂಬಯಿಯ ತೀಸ್ತಾ ಸೆಟಲ್ವಾಡ್ ಅವರು ಹೇಳಿದರು.ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಮೇ 9 ನೇ ಸಮ್ಮೇಳನದಲ್ಲಿ ಮಾತನಾಡಿದರು. ಭಾರತದ ಸಂತ ಪರಂಪರೆ ಪ್ರಮುಖರಾದ ಬಸವಣ್ಣ ಅಲ್ಲಮ ಸೇರಿದಂತೆ ಎಲ್ಲರ ತತ್ವಗಳು ಇಂದು ಬಹಳ ಪ್ರಸ್ತುತವಾಗಿವೆ. ದುಸ್ಕಾಲ ಸಮಯದಲ್ಲಿ ಬೆಳೆದು ಬಂದ ಈ ಪರಂಪರೆಗಳು ನಮಗೆ ಉತ್ತಮ ಚಿಂತನೆಗಳನ್ನು ಕೊಟ್ಟಿವೆ. ಮುಸ್ಲಿಂ ಸಮುದಾಯದ ಝಾಕೀರ ಹುಸೇನ್ ಮೌಲನಾ ಅಬುಲ್ ಕಲಾಂರು ಈ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಯಾರು ಮರೆಯುವಂತಿಲ್ಲ. ಕೆಲವು ದೃಶ್ಯ ಮಾಧ್ಯಮಗಳು ಜಾತಿ ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ.ಇದರ ವಿರುದ್ಧ ಒಗ್ಗಟ್ಟಿನ ಹೋರಾಟ ಇಂದು ಅನಿವಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ 

ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ ತುಕಾರಾಂ ಚಂಚಲಕರ ವಿಹಾನ್ ಪ್ರಕಾಶ ಅಂಬೇಡ್ಕರ್ ಬಸವರಾಜ ಸೂಳಿಭಾವಿ ರಿಯಾಜ್ ಫಾರುಕಿ ಮಲ್ಲಮ್ಮ ಯಾಳವಾರ ಭಗವಾನ ರೆಡ್ಡಿ  ಕೋಣೇಶ್ವರ ಸ್ವಾಮೀಜಿ ಅಬ್ದುಲ್ ರೆಹಮಾನ್ ಬಿದರಕುಂದಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಖ್ಯಾತ ಹೋರಾಟಗಾರರಿಂದ ಪ್ರಜ್ವಲಿಸುವ ಪಂಜುಗಳನ್ನು ಒಟ್ಟುಗೂಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ



ಈ ದಿವಸ ವಾರ್ತೆ

 ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಮೇ 9 ನೇ ಸಮ್ಮೇಳನವನ್ನು ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ ತುಕಾರಾಂ ಚಂಚಲಕರ ವಿಹಾನ್ ಅವರು ,  ಪ್ರಜ್ವಲಿಸುವ ಪಂಜನ್ನು ಕೈಯಲ್ಲಿ ಹಿಡಿದುಕೊಂಡು ವೇದಿಕೆಗೆ ತೆರಳಿ ಒಂದುಗೂಡಿಸುವ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಕಾಶ ಅಂಬೇಡ್ಕರ್ ಬಸವರಾಜ ಸೂಳಿಭಾವಿ ರಿಯಾಜ್ ಫಾರುಕಿ ಮಲ್ಲಮ್ಮ ಯಾಳವಾರ ಭಗವಾನ ರೆಡ್ಡಿ  ಕೋಣೇಶ್ವರ ಸ್ವಾಮೀಜಿ ಅಬ್ದುಲ್ ರೆಹಮಾನ್ ಬಿದರಕುಂದಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದಲಿತರಲ್ಲಿ ರಾಜಕೀಯ ಸಬಲೀಕರಣದ ಅವಶ್ಯಕತೆ ಇಂದು ಅನಿವಾರ್ಯ ವಾಗಿದೆ :ಪ್ರಗತಿಪರ ವಿಚಾರವಾದಿ ಕೃಷ್ಣಮೂರ್ತಿ ಚಮರಂ

ಈ ದಿವಸ ವಾರ್ತೆ

ವಿಜಯಪುರ: ಮೀಸಲಾತಿಯ ಒಳ ಹೊಡೆತಗಳು ದಲಿತ ರಾಜಕೀಯ ಅಸ್ಮಿತೆ ತೊಡೆದು ಹಾಕಿದವು. ಅಖಂಡ  ಭಾರತದ ಉದ್ದಗಳಕ್ಕೂ ದಲಿತರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ದಲಿತರಲ್ಲಿ ರಾಜಕೀಯ ಸಬಲೀಕರಣದ ಅವಶ್ಯಕತೆ ಇಂದು ಅನಿವಾರ್ಯ ವಾಗಿದೆ ಎಂದು ಪ್ರಗತಿಪರ ವಿಚಾರವಾದಿ ಕೃಷ್ಣಮೂರ್ತಿ ಚಮರಂ ಅವರು ಹೇಳಿದರು. ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಜಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ ಪ್ರಜಾತಂತ್ರ ಸಾಗಿದ ದಾರಿ ಅಸ್ಮಿತೆ ರಾಜಕಾರಣ ಎಂಬ ಮೂರನೇ ಗೋಷ್ಠಿ ಯ ಆದಿವಾಸಿ ಮತ್ತು ಅಲೆಮಾರಿ ನೆಲೆ ಎಂಬ ವಿಷಯ ಮಂಡಿಸಿ ಮಾತನಾಡಿದರು.ವೇದಿಕೆಯಲ್ಲಿ ಬಿ ಎಂ ಹನೀಫ್ ರಂಗನಾಥ ಕಂಟನಕುಂಟೆ ಶೈಲಜಾ ಹಿರೇಮಠ ಶಾಂತೇಶ ದುರ್ಗಿ ನಾಗರಾಜ ಲಂಬು ಸಿದ್ರಾಮ ಬಿರಾದಾರ ಇದ್ದರು.ನಾರಾಯಣ ಪವಾರ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಯ ಪಕ್ಷ ಬೇಕು: ಹಿರಿಯ ವಿಚಾರವಾದಿ ಪ್ರಕಾಶ ಅಂಬೇಡ್ಕರ

ಈ ದಿವಸ ವಾರ್ತೆ

ವಿಜಯಪುರ: ವಿಜಯಪುರ: ಇಂದಿನ ಜಾತಿ ಆಧಾರಿತ ಪ್ರಜಾಪ್ರಭುತ್ವ ನಿರ್ಮೂಲನೆ ಮಾಡಬೇಕು. ಹೀಗಾಗಿ ನಮ್ಮ ಬಳಿ ಜ್ಯೋತಿಬಾ ಫುಲೆ, ಶಾಹುಮಹಾರಾಜ, ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯ ಒಂದು ಪಕ್ಷ ಬೇಕು. ಆಗ ಅದನ್ನು ತೊಡೆದುಹಾಕಲು ಪ್ರಯತ್ನಿಸಬಹುದು ಎಂದು ಹಿರಿಯ ವಿಚಾರವಾದಿ, ಮಾಜಿ ಸಂಸದ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದರು. ಎಂದು ಹಿರಿಯ ವಿಚಾರವಾದಿ ಮಾಜಿ ಸಂಸದ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ ಅವರು ಹೇಳಿದರು. 

ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಬಳಗ ವಿಜಯಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಮಾರ ಕಕ್ಕಯ್ಯ ಪೋಳ, ಬಿ.ಗಂಗಾಧರ ಮೂರ್ತಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 9ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.


ಇಂದಿನ ವಿಚಾರ ಸಂವಿಧಾನದ ಕುರಿತಾಗಿದೆ. ಭಾರತದ ಸಂಸ್ಕೃತಿಯೆಂದು ಹೇಳುವ ಪರಿಪಾಠ ಆರಂಭವಾಗಿದೆ. ಹಾಗಿಲ್ಲ, ಇಲ್ಲಿ ಎರಡು ಬಗೆಯ ಪರಂಪರೆಗಳುವೆ. ಒಂದು ಯಾಜಮಾನ್ಯ ಆಳ್ವಿಕೆಯ ದಬ್ಬಾಳಿಕೆಯ ಪರಂಪರೆ ಮತ್ತೊಂದು ಇಂದು ವೇದಿಕೆಯ ಮೇಲೆ ಕುರಿತಿರುವ ಸಂತರು ಶರಣರ ಪರಂಪರೆ, ಇದು ಮಹಾರಾಷ್ಟçದ ಕಬೀರನಿಂದ ಆರಂಭಿಸಿ ಕೇರಳದ ತನಕ ಸಾಗುತ್ತದೆ.

ಮೊದಲನೇದ್ದು ಹಿಟ್ಲರ್ ಶಾಹಿಯಾದದ್ದು, ಇದರಲ್ಲಿ ನಿಮಗೆ ಚಿಂತಿಸುವ ಅವಕಾಶವಿಲ್ಲ. ಇದನ್ನು ವಿವರಿಸುವಾಗ ನಾವು ಮನುಸ್ಮೃತಿಯನ್ನು ನಾವು ಉದಾಹರಣೆಯಾಗಿ ನೀಡುತ್ತೇವೆ. ಅಂದರೆ ಇಲ್ಲಿ ಯಾಜಮಾನ್ಯ ಮಾತ್ರವಲ್ಲ, ಅಸಹಿಷ್ಣುತೆ ಇದೆ ಎಂಬುದು,.

ಮತ್ತೊAದೆಡೆ ಸಂತರ ಪರಂಪರೆಯಿದೆ, ಇಲ್ಲಿ ಶಾಂತಿಯಿದೆ, ಪರಸ್ಪರರನ್ನು ಒಪ್ಪಿಕೊಳ್ಳುವುದಿದೆ, ಸಹಬಾಳ್ವೆಯಿದೆ. ಜಾತಿ ಪದ್ಧತಿಯ ವಿರುದ್ಧ ಹೋರಾಟವಿದೆ. ಉದಾಹರಣೆಗೆ- ಸಂತರ ಸಂಸ್ಕೃತಿಯಲ್ಲಿ ಪುನರ್ವಿವಾಹವಿದೆ, ಇದನ್ನು ಗಾಂಧರ್ವ ವಿವಾಹದ ರೂಪದಲ್ಲೂ ನಡೆಯುತ್ತದೆ

ವೈದಿಕಶಾಹಿಯಲ್ಲಿ ಮಹಿಳೆಯರಿಗೆ ಮರುವಿವಾಹದ ಅವಕಾಶವಿಲ್ಲ.

ಸಂವಿಧಾನ ಇವುಗಳಲ್ಲಿ ಯಾವ ಸಂಸ್ಕೃತಿಯ ಪ್ರತಿನಿಧೀ? ನಾವು ಸಂವಿಧಾನದ ಪೀಠಿಕೆ ಓದಿದೆವು, ಆದರೆ ಇದರಲ್ಲಿ ಒಂದು ದೋಷವಿದೆ ಎಂದು ನಾನು ಭಾವಿಸುತ್ತೀನಿ, ಈ ಶಪಥಗ್ರಹಣದ ಪದ್ಧತಿ ಯಾರು ಆರಂಭಿಸಿದರು? ನನ್ನ ಅಧ್ಯಯನದ ಪ್ರಕಾರ ಇದನ್ನು ಹಿಟ್ಲರ್ ಆರಂಭಿಸಿದ್ದು ನಂತರ ಆರೆಸ್ಸೆಸ್ ಮುಂದುವರೆಸಿದ್ದು, ನಾವು ಕೈಮುಂದೆ ಮಾಡುತ್ತೇವೆ, ಇಲ್ಲಿ ಕೈ ಶಪಥ ತೆಗೆದುಕೊಳ್ಳುವಿದಿಲ್ಲ, ಮನಸ್ಸು ತೆಗೆದುಕೊಳ್ಳುವುದು, ಇದು ಅನುಕರಣೆಯ ಸಂಗತಿ.

ಇಲ್ಲಿ ಯಾಜಮಾನ್ಯದ ವಿಷಯಗಳು ಚಿಹ್ನೆಗಳ ಮೂಲಕ ಸಾಗುತ್ತವೆ, ಇಲ್ಲಿ ಚಿಹ್ನೆ ಗಮನಿಸಿ, ಪಗಡಿ ಹಾಕುವ ಪರಂಪರೆ, ಇದು ಮೊದಲು ಯಾರ ಪದ್ಧತಿಯಾಗಿತ್ತು? ಪಗಡಿಯನ್ನು ಮೊದಲು ಮೇಲಿನ ವರ್ಗಗಳಷ್ಟೇ ಧರಿಸಲು ಸಾಧ್ಯವಿತ್ತು, ಉಳಿದವರಿಗೆ ಅವಕಾಶ ಇರಲಿಲ್ಲ, ಒಂದು ವೇಳೆ ಸಮಾನತೆಯೇ ತರುವುದಾದ್ರೆ, ನೀವು ಏಣ ಶ್ರೇಣ ಯಲ್ಲಿ ಸಮಾಜದ ಕಟ್ಟಕಡೆಯಲ್ಲಿರುವವರ ಪದ್ಧತಿಯಲ್ಲಿ ಪಗಡಿಯನ್ನು ಎಲ್ಲರೂ ಧರಿಸುವುದನ್ನು ಆರಂಭಿಸಿದರೆ ಅದನ್ನು ನಾನು ಸಮಾನತೆಯ ಪ್ರಯೋಗವೆಂದು ಒಪ್ಪುತ್ತೇನೆ


1990ರಲ್ಲಿ ಒಂದು ಪುಸ್ತಕ- ಕ್ಲಾಶ್ ಆಫ್ ಸಿವಿಲೈಸೇಶನ್, ಅದೇ ರೀತಿ ಇಂದು ಸಂವಿಧಾನದ ಮಾಧ್ಯಮದ ಮೂಲಕ ಮತ್ತೊಮ್ಮೆ ಕ್ಲಾಶ್ ಆಫ್ ಸಿವಿಲೈಶೇನ್ ಆರಂಬವಾಗುತ್ತಿದೆ. ಒಂದು ವೈದಿಕಶಾಹಿ, ಅದನ್ನು ನಾವು ಒಪ್ಪುವುದಿಲ್ಲ, ಇನ್ನೊಂದು ಸಂತರ ಪರಂಪರೆ. ಸಂವಿಧಾನವಾಗಲೀ ಪ್ರಜಾತಂತ್ರವಾಗಲೀ ನಮ್ಮ ಜೀವನ ಅಂಗವಾಗಿ ಇನ್ನೂ ಬದಲಾಗಿಲ್ಲ, ಅವಿನ್ನೂ ಅಂಗವಾಗುವ ಪ್ರಕ್ರಿಯೆಯಲ್ಲಿವೆ, ಇದರಲ್ಲಿ ನಮಗೆ ಸ್ಪಷ್ಟತೆಯಿರುವುದು ಬಹಳ ಮುಖ್ಯ. ನಮ್ಮ ಬದುಕಿನಲ್ಲಿ ಈ ವಿಚಾರಗಳು ಪ್ರವೇಶದಿದ್ದರೆ ನಾವು ಸಂವಿಧಾನವನ್ನೂ ರಕ್ಷಿಸಲು ಆಗುವುದಿಲ್ಲ, ಪ್ರಜಾತಂತ್ರವನ್ನೂ ಕೂಡಾ. ಈಗ ನಾವು ಮೀಸಲಾತಿ ವಿಚಾರವನ್ನು ತೆಗೆದುಕೊಂಡರೆ, ಯಾರು ನಗರಪಾಲಿಕೆ ಅಥವಾ ಸರ್ಕಾರಿ ಶಾಲೆಗಳಲ್ಲಿ ಕಲಿತು ಬಂದಿದ್ದಾರೋ, ಅವರೇ ಅವುಗಳನ್ನು ಹೀನವಾಗಿ ಕಾಣುತ್ತಾರೆ, ಇದೇ ಶಾಲೆಗಳಿಲ್ಲದಿದ್ದರೆ ನೀವು ಓದಲು ಸಾಧ್ಯವಿತ್ತೇ? ಈಗ ಓದಿದ ನಂತರ ನಿಮಗೆ ಸಾಮಾಜಿಕ ಆರ್ಥಿಕ ಸುಭದ್ರತೆ ಬಂದ ನಂತರ ಈಗ ಬೇರೆ ವಿಷಯಗಳ ಕಾಣುತ್ತಿವೆ, ಖಾಸಗೀಕರಣ ಎಂದು ಯಾವುದನ್ನು ಹೇಳುತ್ತೇವೋ ಅದರ ಸಮರ್ಥಕರಾಗಿಬಿಟ್ಟಿದ್ದೀರಿ.

ಮೊದಲೂ ಕೂಡಾ ಶಿಕ್ಷಣ ಖಾಸಗೀಕರಣದಲ್ಲೇ ಇತ್ತು, ಅದರಿಂದಲೇ ಅದನ್ನು ಧರ್ಮದ ಅಡಿಯಾಳಾಗಿ ಮಾಡಲಾಗಿತ್ತು, ಈ ಸಮುದಾಯ ಓದಬಹುದು, ಇವರು ಓದಬಾರದು ಎಂದು, ಧಾರ್ಮಿಕ ಯಥಾಸ್ಥಿತಿ- ಇದನ್ನು ಮುರಿದವರು ಯಾರು? ಇದನ್ನು ಬ್ರಿಟೀಶ್ ಸರ್ಕಾರ ಇಲ್ಲಿ ಬಂದದ್ದು ಮುರಿಯಿತು, ಅವರು ಸರ್ಕಾರಿ ಶಾಲೆಗಳನ್ನು, ನಗರಪಾಲಿಕೆ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಎಲ್ಲ ಶಾಲೆಗಳನ್ನು ಮುಕ್ತಗೊಳಿಸಿದರು. 400, 600 ವರ್ಷಗಳ ಹಿಂದೆ ಧರ್ಮದ ಆಧಾರದಲ್ಲಿ ಸಮುದಾಐಗಳನ್ನು ಶಿಕ್ಷಣವನ್ನು ವಂಚಿತಗೊಳಿಸಿದರು, ಈಗ ಹೊಸ ವÀ್ಯವಸ್ಥೆಯಲ್ಲಿ ಬೇರೆ ಪದ್ಧತಿ ತರಲು ಸಾಧ್ಯವೇ? ಈಗಿನ ವ್ಯವಸ್ಥೆ ಹೇಳುತ್ತದೆ- ನೀವು ಎಷ್ಟು ಬೇಕಾದರೂ ಓದಿ ನಾವು ಬೇಡ ಎನ್ನುವುದಿಲ್ಲ, ಆದರೆ ಅದರ ಖರ್ಚು ನೀವು ಭರಿಸಬೇಕು. ಈಗ ಯೋಚಿಸಿ ಒಂದುವೇಳೆ ಎಲ್ಲ ಸರ್ಕಾರಿ ವ್ಯವಸ್ಥೆಯ ಶಿಕ್ಷಣ ನಿಂತುಹೋದರೆ ವೆಚ್ಚ ಭರಿಸಿ ನಾವು ನಮ್ಮ ಮಕ್ಕಳನ್ನು ಓದಿಸಲು ಸಾಧ್ಯವೇ? 

ಬಾಬಾಸಾಹೇಬರು ಹೇಳಿದರು, ಪ್ರತಿ ತಲೆಮಾರು ಒಂದು ಹೊಸ ಮಿಶನ್, ಈಗ ಈ ತಲೆಮಾರಿನ ಸಮಸ್ಯೆಗಲ ಜೊತೆ ನಾವು ಗುರುತಿಸಿಕೊಳ್ಳದಿದ್ದರೆ ಅವರ ಮಿಶನ್ ನಮ್ಮ ಉದ್ದೇಶ ಹೇಗಾಗುತ್ತದೆ? ನಮಗೆ ನಿಜಕ್ಕೂ ಸಂವಿಧಾನ ಮತ್ತು ಪ್ರಜಾತಂತ್ರ ಉಳಿಸಬೇಕಾದರೆ, ಈಗಿನ ಸಂದರ್ಭದ ಪರಿಸ್ಥಿತಿಗಳ ಜೊತೆ ಹೊಂದಾಣ ಕೆಯಾಗುವಂತಹ ವಿಚಾರಗಳನ್ನು ಹೊಂದಿರಬೇಕು, ಈಗಿನ ತಲೆಮಾರಿಗೆ ಬೇಕಾದ ವಿಷಯಗಳು.


ಜಾತಿ ಇಂದು ಸಮಸ್ಯೆ ಅಲ್ಲ ಎಂದಲ್ಲ, ಅದಲ್ಲದೆ ಇನ್ನೂ ಎರಡು ವಿಷಯಗಳು ಮುಖ್ಯವಾಗಿವೆ, 

ಮೀಸಲಾತಿಯಿಂದ ಸರ್ಕಾರದ ಖಜಾನೆಯಲ್ಲಿ ಒಂದು ಅಂಶ- ಸಿಬ್ಬಂದಿಯ ವೇತನ, ಇದು ಒಟ್ಟು ಬೊಕ್ಕಸದ 35% ಇದೆ. ಇದರಲ್ಲಿ ಮೀಸಲಾತಿಯಿಂದ ದೊರೆಯುವ ಸಂಬಳ ಕೂಡಾ ಇದರಿಂದಲೇ ಬರಬೇಕು, ಈ ವೇತನದಲ್ಲಿ ಎಷ್ಟು ಪರಿಶಿಷ್ಟ ಜಾತಿ, ವರ್ಗ, ಸಮುದಾಯಗಳ ಪಾಲೂ ಅಲ್ಲಿಂದಲೇ ಬರುತ್ತದೆ, ಆರ್ಥಿಕವಾಗಿ ಸಂಬಳದಾರ ವರ್ಗಗಳಿಂದ ಮಾರುಕಟ್ಟೆಯ ನಿಯಂತ್ರಣವಿತ್ತು. ಇವತ್ತು ಸರ್ಕಾರಿ ನೌಕರಿಗಳು ಕುಂಠಿತವಾಗುತ್ತಿವೆ, ಇಂತಹ ಉದ್ಯೋಗಗಳು ಕಡಿಮೆಯಾದಂತೆ, ಮೀಸಲು ಉದ್ಯೋಗಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅದರಿಂದಾಗಿ ವೇತನದ ಮೂಲಕ ಆರ್ಥಿಕ ವಿನಿಮಯದ ಪ್ರಮಾಣವೂ ಕಡಿಮೆಉಯಾಗಿದೆ, ನಾಳೆ ಮೀಸಲಾತಿ ನಿಂತೇ ಹೋದರೆ ಬೊಕ್ಕಸ ಮತ್ತು ಆರ್ಥಿಕ ವಿನಿಮಯದ ಮೇಲೂ ನಮ್ಮ ನಿಯಂತ್ರಣ ಪೂರ್ತಿ ಇಲ್ಲವಾಗುತ್ತದೆ. ಶೀಕ್ಷಣದ ಜೊತೆಗೆ ಬಾಬಾಸಾಹೇಬರು ಇನ್ನೆರಡು ವಿಚಾರ ಹೇಳಿದರು, ಸಂಘಟನೆ ಮತ್ತು ಹೋರಾಟ. ಎಲ್ಲಿಯತನಕ ಸಂಘಟನೆ ಇಲ್ಲ, ಅಲ್ಲಿಯತನಕ ನಮ್ಮ ದನಿಯಿಲ್ಲ. ಕರ್ನಾಟಕದ ಚುನಾವಣೆಯಲ್ಲಿ ಬದಲಾವಣೆ ಬಂದಿದೆ, ಬಿಜೆಪಿ ಹೋಗಿ ಕಾಂಗ್ರೆಸ್ ಬಂದಿದೆ, ಆದರೆ ಫುಲೆ ಮತ್ತು ಅಂಬೇಡ್ಕರ್‌ವಾದಿಗಳ ದೃಷ್ಟಿಯಿಂದ, ಎಷ್ಟೆಲ್ಲ ವಿಶ್ಲೇಷಣೆಗಳು ಇಲ್ಲಿನ ಈ ಸಮುದಾಯಗಳ ಪಾತ್ರ ಏನು ಎಂಬುದನ್ನು ತೋರಿಸುತ್ತಿವೆಯಾ? ಯಾಕೆ ತೋರಿಸುತ್ತಿಲ್ಲ, 

ರಾಜನೈತಿಕ ಒಪ್ಪಂದ ಬೇರೆ ವಿಚಾರ, ಆದರೆ ಈ ವಿಚಾರಧಾರೆಯ ಮೇಲೆ ನಿಯಂತ್ರಣ ಇಡುವುದು, ಸರ್ಕಾರ ಯಾವ ಹಾದಿಯಲ್ಲಿ ಹೋಗಬೇಕೆಂಬುದನ್ನು ನಿರ್ಧರಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ, ಮುಸ್ಲಿಮರಿಗೆ ಅತ್ಯಂತ ಮುಖ್ಯವಾದ ಸಂಗತಿ ಪೈಗಂಬರರು ಮತ್ತು ಮಸೀದಿ, ಅದು ಅವರ ಹೃದಯಕ್ಕೆ ಹತ್ತಿರಾದ ಸಂಗತಿ, ಇದನ್ನು ಯಾವುದೇ ಪಕ್ಷವೂ ಮುಟ್ಟಲು ಸಿದ್ಧರಿಲ್ಲ, ಈ ವಿಷಯಮುಂದೊಡುವ ಕೆಲಸ ಯಾವಾಗ ಆಗುತ್ತದೆ, ಸಂಘಟನೆ ಇದ್ದಾಗ ಆಗುತ್ತದೆ,ಅದಕ್ಕೇ ಬಾಬಾಸಾಹೇಬರು ಹೇಳಿದರು, ನೀವು ನಿಮ್ಮನ್ನು ನೀವು ಉಳಿಸಿಕೊಳ್ಳಬೇಕು ಸರಿ ಆದರೆ ಈ ವ್ಯವಸ್ಥೆಯನ್ನೂ ಉಳಿಸಿಕೊಳ್ಳಬೇಕು, ಇದು ನಿಮ್ಮ ರಾಜನೈತಿಕ ನೆಲೆ, ಅದನ್ನು ರಕ್ಷಿಸಿಕೊಳ್ಳಬೇಕು ಎಂದು, ಆಧರೆ ಇಲ್ಲಿ ನಮ್ಮ ರಾಜನೈತಿಕ ನೆಲೆ ಏನು? ಬೇರೆಯವರ ಝೋಪಡಿಯಲ್ಲಿ ನಾವು ಇದ್ದಷ್ಟು ದಿನ ಅವರು ಬೇಕೆಂದಾಗ ಇರಿಸಿಕೊಳ್ಳಬಹುದು ಬೇಡವಾದಾಗ ಹೊರದೂಡಬಹುದು, ಅದಕ್ಕೆ ನಮ್ಮದೇ ಮನೆ ಕಟ್ಟಿಕೊರ್ಳಳಬೇಕು

ಈಗ ಹೊಸ ವ್ಯವಸ್ಥೆ ಏನು? ಈಗಿನ ರಾಝನೈತಿಕ ಪರಿಸ್ಥಿತಿಯಲ್ಲಿ ಪಾತ್ರವಹಿಸಬೇಕು ಇದರಲ್ಲೇನೂ ಪ್ರಶ್ನೆಯಿಲ್ಲ, ಈಗ ಸತ್ತೆಯಲ್ಲಿ ಕೂತವರನ್ನು ನಾವು 40 ವರ್ಷಗಳಿಂಧ ನೋಡಿದ್ದೇವೆ, ಇವರು ಪರಿಶಿಷ್ಟ ಜಾತಿ ವರ್ಗಗಳನ್ನು, ಅಲ್ಪಸಂಖ್ಯಾತರನ್ನು ಊಟದಲ್ಲಿ ಉಪ್ಪಿನಕಾಯಿಯ ರೂಪದಲ್ಲಿ ಪರಿಗಣ ಸುವವರು, ಇದೇ ಪರಿಸ್ಥಿತಿ ಉಳಿದರೆ, ಆರೆಸ್ಸೆಸ್ ಆಟವಾಡಿಸುವವರು, ಅವರಿಗೆ ವೈದಿಕ ವಿಚಾರಧಾರೆ ತರಬೇಕು ಸಂತರ ವಿಚಾರಧಾರೆ ಮುಗಿಸಬೇಕು ಅದಕ್ಕೆ ಸಂವಿಧಾನ ತೆಗೆಯಬೇಕು.

ಬಾಬಾಸಾಹೇಬರ ಕಾಲ ಬೇರೆ ಇತ್ತು, ಆ ಕಾಲದ ಎರಡು ಪಕ್ಷಗಳ ಪದಧತಿ ಬೇರೆಯಿತ್ತು, ಇಂದು ಆರೆಸ್ಸೆಸ್ ಪರಿಸ್ಥಿತಿ ಬೇರೆ, ಆಗ ಅವರು ಹಳ್ಳಿಗೆ ಹೋದರೆ ಜನರು ಮಹಾತ್ಮ ಗಾಂಧಿಯನ್ನು ಕೊಂಧವರೆAದು ಅವರನ್ನು ಸೇರಿಸುತ್ತಿರಲಿಲ್ಲ ಇಂದಿನ ಸ್ಥಿತಿ ಬೇರೆ.

ಇಂದು ಅವರ ಪೂರ್ತಿ ಬಹುಮತ ಇದೆ, ವಾಸ್ತವವನ್ನು ಅರಿಯದಿದ್ದರೆ ನಾವು ಹೋರಾಡಲು ಸಾಧ್ಯವಿಲ್ಲ, ಇಂದಿನ ಪರಿಸ್ಥಿತಿ ಕೇಂದ್ರದ ಸರ್ಕಾರವು, ಅನೇಕ ರಾಜಕೀಯ ನಾಯಕರನ್ನು ಇಡಿ, ಸಿಬಿಐ ಇತ್ಯಾದಿಗಳ ಮೂಲಕ ನಿಯಂತ್ರಿಸಲು ನೋಡುತ್ತದೆ, ಒಂದು ಪ್ರಶ್ನೆಗೆ ಉತ್ತರಿಸಬೇಕು, ಎಲ್ಲ ರಾಜಕೀಯ ನಾಯಕರೂ ಸೇರಿ ಒಂದು ತಂಢವಾಗಬೇಕು

ಇAದು ಹೊಸ ದೇವಸ್ಥಾನ, ಹೊಸ ಪೂಜಾರಿ, ಅದು ಸಂಸತ್ ಭವನ ಮತ್ತು ಅದರ ಹೊಸ ಪೂಜಾರಿಗಳು

ರಸ್ತೆಯಲ್ಲಿ ಕೂಗಾಡುವುದರಿಂದ ಪ್ರಯೋಜನವಿಲ್ಲ, ಜನರು ಎಚ್ಚರಗೊಂಡಿದ್ದಾರೆ, ಅವರಿಗೆ ಹೆಚ್ಚಿನದೇನನ್ನಾದರೂ ತಿಳಿಸುತ್ತಿದ್ದೀರಾ? ಅವರಿಗೆ ವಿಷಯ ಗೊತ್ತಿದೆ, ಅದನ್ನು ವ್ಯಕ್ತಪಡಿಸುವ ಸಾಧನ ಅವರ ಬಳಿ ಇಲ್ಲ, ಇಂದು ಬೇಕಿರುವುದು ಕಾರ್ಯಾಚರಣೇಯ ಸಾಧನವನ್ನು ತಯಾರಿಸುವುದು ಇಂದಿನ ಕೆಲಸ, ಅದನ್ನು ಸಿದ್ಧಪಡಿಸುವ ಯೋಜನೆ ನಮ್ಮ ಬಳಿಯಿರಬೇಕು, ಇಲ್ಲವಾದರೆ ಈ ಬಗ್ಗೆ ಚರ್ಚಿಸುವುದು ವ್ಯರ್ಥ ಎಂದೆನಿಸುತ್ತದೆ

ಇAದು ಏನು ಪರಿಸ್ಥಿತಿಯಲ್ಲೀದ್ದೇವೆಂಧರೆ ಒಂದೋ ಸಂವಿಧಾನ ಉಳಿಯುತ್ತದೆ ಅಥವಾ ಉಳಿಯುವುದಿಲ್ಲ, ಪ್ರಾದೇಶಿಕ ಪಕ್ಷಗಳಿಗೆ ಸಂವಿಧಾನದ ಅಗತ್ಯ ಇರಬಹುದು, ಆದರೆ ರಾಷ್ಟಿçÃಯ ಪಕ್ಷಗಳ ಬದ್ಧತೆ ಸಾಂವಿಧಾನಿಕ ಪ್ರಜಾತಂತ್ರದ ಕಡೆಗಿಲ್ಲ,. ಸಾಂವಿಧಾನಿಕ ಪ್ರಜಾತಂತ್ರದ ಸೌಂದರ್ಯ ಇರುವುದು ಎಷ್ಟೇ ಸಣ್ಣ ಸಮುದಾಯಗಳ ವ್ಯಕ್ತಿಯೂ ನಿಲ್ಲಬಹುದು, ಆದರೆ ರಾಷ್ಟಾçಧ್ಯಕ್ಷರ ಪ್ರಜಾತಂತ್ರದ ಮಾದರಿಯಲ್ಲಿ ಅದು ಸಾಧ್ಯವಿಲ್ಲ, ಇಲ್ಲಿನ ಲಿಂಗಾಯತ ಸಮುದಾಯ ಬೇರೆ ಕಡೆ ನಿಮಗೆ ಕಾಣುತ್ತದೆಯೇ? ರಾಷ್ಟಾçಧ್ಯಕ್ಷರ ಮಾದರಿ ಪ್ರಜಾತಂತ್ರ ಜಾತಿ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ, ನಾವು ಈಗಲೂ ಮತದಾನವನ್ನು ಅಡ್ಡಡ್ಡಕ್ಕೆ ಮಾಡುತ್ತೇವೆ, ನೇರವಾದ ಮತದಾನ ಮಾಡುವುದೇ ಇಲ್ಲ ಮತ್ತು ಮೇಲಿನಿಂದ ಕೆಳಕ್ಕೆ ಮತದಾನದ ಪದ್ಧತಿಯಂತೂ ಇಲ್ಲೇ ಇಲ್ಲ, ಸಣ್ಣ ಸಣ್ಣ ಸಮುದಾಯಗಳು ಕುಂಬಾರ ಕಮ್ಮಾರ ಅಕ್ಕಸಾಲಿಗ ಇಂತಹ ಯಾರಿಗಾದರೂ ಅಭ್ಯರ್ಥಿ ಪಟ್ಟ ಸಿಕ್ಕಿದೆಯಾ? ಇದೇ ಪ್ರಶ್ನೆ ಬರುತ್ತದೆ, ನಿನ್ನ ಸಮುದಾಯದ ಮತ ಎಷ್ಟಿದೆ? 300 ಮನೆ ಅಂಧರೆ 1000 ಓಟು, ಹೇಗೆ ಗೆಲ್ಲುತ್ತೀ ಎಂಬ ಪ್ರಶ್ನೆ. ಪ್ರಜಾತಂತ್ರ ಬೇಕು ಇದರಲ್ಲಿ ಅನುಮಾನವಿಲ್ಲ, ಆದರೆ ಜಾತಿ ಆಧಾರಿತ ಪ್ರಜಾತಂತ್ರವನ್ನು ನಿರ್ಮೂಳನೆ ಮಾಡಬೇಕು, ಅದಕ್ಕೆ ನಿಮ್ಮ ಹತ್ತಿರ ಇರುವ ಸಾಧನ ಏನು? ನಿಮ್ಮ ಹತ್ತಿರ ಇಂತಹ ಒಂದು ಸಾಧನ ಇರಬೇಕು ಅದರ ಆಧಾರದಲ್ಲಿ ನೀವು ಟಿಕೆಟ್ ಹಂಚಬೇಕು, ಅದಕ್ಕೆ ನಿಮ್ಮ ಬಳಿ ಒಂದು ಪಕ್ಷ ಇರಬೇಕು

ಅಭ್ಯರ್ಥಿಯ ಪ್ರಜಾತಾಂತ್ರೀಕರಣದ ಒಂದು ಹೊಸ ಮಾನದಂಡವನ್ನೂ ನಾವು ಸೇರಿಸಬೇಕು, ಅದನ್ನು ನಾವು ಪ್ರತಿಪಾದಿಸಿದರೆ ಧರ್ಮವು ರಾಜನೀತಿಯಿಂದ ಹೊರಗಾಗುತ್ತದೆ, ಆಗ ರಾಜಕೀಯದ ಕೇಂದ್ರ ಪ್ರಶ್ನೆ ಅಭಿವೃದ್ಧಿ ಮತ್ತು ಜನಸಮುದಾಯಗಳ ಮುನ್ನಡೆ.

ಚರ್ಚೆಗಳು ದೇಶದ ರಾಜ್ಯದ ಆರ್ಥಿಕತೆ ಎಷ್ಟು ಬೆಳೆಯಿತು ಎಂಬ ವಿಷಯದ ಸುತ್ತ ನಡೆಯುವುದಿಲ್ಲ, ಕುಟುಂಬಗಳ ಕ್ಷೇಮ ಯಾವ ಮಟ್ಟದಲ್ಲಿದೆ ಎಂಬುದರ ಸುತ್ತ ಚರ್ಚೆ ನಡೆಯುತ್ತದೆ, ಜಿಡಿಪಿ ಸುತ್ತ ಅಲ್ಲ, ಮನುಷ್ಯರ ಮುಖಗಳ ಮೇಲೆ ಸಂತೃಪ್ತಿಯ ಸುತ್ತ ವಿಚಾರ ಇರುತ್ತದೆ. ಎಷ್ಟು ಕಾರ್ಖಾನೆಗಳು ಬಂದವೆAಬುದಲ್ಲ, ಒಂದು ಕುಟುಂಬ ಸಂತೋಷವಾಗಿದೆಯೇ ಎಮಭುದು ಮುಖ್ಯವಾಗುತ್ತದೆ, ನಾವು ಮಾನದಂಡಗಳನ್ನು ಬದಲಿಸಬಹುದು, ಅದಕ್ಕೆ ಬದ್ಧತೆ ಇರಬೇಕು

ಇನ್ನೊಂದು ವಿಷಯ ಬರುತ್ತದೆ, ಕುಟುಂಬದ ದೃಷ್ಟಿಯಿಂದ ನಾನು ಖುಷಿಯಾಗಿದ್ದೇನೆ ಎಂಬುದು, ಅದನ್ನು ಒಪ್ಪೋಣ, ಆದರೆ ನೀವು ಬದುಕುತ್ತಿರುವ ಸಮಾಜದಲ್ಲಿ ನೀವು ಸುರಕ್ಷಿತರಾಗಿದ್ದೀರಾ? ಯಾಕಿಲ್ಲ ಎಂದರೆ ಅದು ಕುಂಠಿತಗೊಳ್ಳುತ್ತಾ ಹೋಗುತ್ತಿದೆ. ಇಂದು ಸುಪ್ರೀಮ್ ಕೋರ್ಟ್ ಕೂಡಾ ಜಾತ್ಯಾಧಾರಿತ ಜನಗಣತಿ ಬೇಡ ಎನ್ನುತ್ತಿದೆ, ಯಾಕೆ ಬೇಡ? ಯಾಕೆ ನಿಮಗೆ ಭಯ? 

ಏಕೆಂದರೆ 50ರ ದಶಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ, ಆರ್ಥಿಕ ಜನಾಂಗಹತ್ಯೆಯ ವಿಚಾರದ ಬಗ್ಗೆ ನಾವು ಮಾತಾಡುವುದಿಲ್ಲ, ನಂತರ 90ರ ದಶಕದಲ್ಲಿ ಖಾಸಗೀಕರಣ ಬಂತು, 1930ರ ಸಮಯದಲ್ಲಿ ಎಷ್ಟು ಜಾತಿಗಳಿದ್ದವೋ ಅಷ್ಟೇ ಜಾತಿಗಳು ಈಗಲೂ ಗುರುತಿಸಲ್ಪಟ್ಟವು

ನೀವು ಯಾವ ಗ್ರಾಮದಿಂದ ಬಂದಿದ್ದೀರೋ ಅಲ್ಲಿ ಎಷ್ಟು ಜಾತಿಗಳಿದ್ದವೆಂದು ಕೇಳಿರಿ, ಈಗ ಅಷ್ಟೇ ಜಾತಿಗಳು ಸಿಗುತ್ತವಾ ನೋಡಿ, 1950ರ ಸಮಯದಲ್ಲಿ 15 ಜಾತಿಗಳಿದ್ದವು ಎಂದುಕೊಳ್ಲಿ, ಈಗ 10 ಮಾತ್ರ ಇವೆ, ಅಂದರೆ ಉಳಿದವು ಎಲ್ಲಿ ಹೋದವು, ಯಾಕೆ ಜಾತಿಗಣತಿ ಬೇಡ ಎನ್ನುತ್ತಿದ್ದಾರೆಂದರೆ, 50ರಲ್ಲಿ ಆರ್ಥಿಕ ಕ್ರಾಂತಿಯ ಸಮಯದಲ್ಲಿ ಅನೇಕ ಸಮುದಾಯಗಳ ಆರ್ಥಿಕ ಮೂಲಗಳನ್ನು ಇಲ್ಲವಾಗಿಸಿ ಅವರುಗಳು ನಾಶವಾಗುವಂತೆ ಮಾಡಲಾಯಿತು, ಹಸಿವಿನ ಸಾವುಗಳಾದವು, ಇದೆಲ್ಲ ಇಂದು ಸರ್ಕಾರಕ್ಕಾಗಲೀ ನ್ಯಾಯಾಲಯಕ್ಕಾಗಲೀ ಬೇಕಿಲ್ಲ ಎಂದರು.

ಇAದು ಸಂವಿಧಾನವನ್ನು ಉಳಿಸಬೇಕೆಂದರೆ ಅದನ್ನು ಉಳಿಸುವುದು ಯಾರು? ಫುಲೆ, ಬಾಬಾಸಾಹೇಬ್ ಶಾಹು ಮಹಾರಾಜ್ ಮುಂತಾದವರ ಚಿಂತನೆಗಲು ಮುಂದಕ್ಕೆ ಹೋಗಬೇಕು, ನಾನು ಉಳಿದವರ ಸಮಯ ತೆಗೆದುಕೊಂಡು ಅವರಿಗೆ ಅನ್ಯಾಯ ಮಾಡದೆ ಇಲ್ಲಿಗೇ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೀನಿ.

ಈ ಸಂಧರ್ಭದಲ್ಲಿ ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ, ತುಕಾರಾಂ ಚಂಚಲಕರ, ಬಸವರಾಜ ಸೂಳಿಭಾವಿ, ರಿಯಾಜ್ ಫಾರೂಕಿ, ಮಲ್ಲಮ್ಮ ಯಾಳವಾರ, ಭಗವಾನ ರೆಡ್ಡಿ, ಕೋಣೇಶ್ವರ ಸ್ವಾಮೀಜಿ, ಅಬ್ದುಲ್ ರೆಹಮಾನ್ ಬಿದರಕುಂದಿ, ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.