Friday, March 8, 2024

ಇಡೀ ಸಮಾಜವನ್ನೇ ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ : ಹೇಮಲತಾ ವಸ್ತ್ರದ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಮಹಿಳಾ ಸಾಂಸ್ಕøತಿಕ ಹಬ್ಬದ’ ಕವಿಗೋಷ್ಠಿಯನ್ನು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಲತಾ ವಸ್ತ್ರದ ಹಾಗೂ ಗಣ್ಯಮಾನ್ಯರು ಉದ್ಘಾಟಿಸಿದರು. 

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

 ವಿಜಯಪುರ: ಪ್ರಸ್ತುತ ದಿನಮಾನದಲ್ಲಿ ಸಾಹಿತ್ಯ ಎನ್ನುವುದು ವೈಯಕ್ತಿಕ ಲಾಭ ಹಾಗೂ ಪ್ರಶಸ್ತಿಗಳ ಬೆನ್ನತ್ತಿ ಹೋಗುವ ಹೀನಾಯ ಸ್ಥಿತಿ ಬಂದಿದ್ದು, ಇದನ್ನು ನಾವು ಬರಹಗಳ ಮೂಲಕವೇ ಖಂಡಿಸಬೇಕು ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಲತಾ ವಸ್ತ್ರದ ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಮಹಿಳಾ ಸಾಂಸ್ಕøತಿಕ ಹಬ್ಬದ’ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಎನ್ನುವುದು ಅಪಾರ ಶಕ್ತಿ ಹೊಂದಿದಂತಹ ಕ್ಷೇತ್ರ ಅದನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಬಾರದು. ಇಡೀ ಸಮಾಜವನ್ನೇ ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಮಾಜದ ತಲ್ಲಣಗಳು ಲೇಖಕರನ್ನು ನಿದ್ದೆ ಮಾಡಲು ಬಿಡಬಾರದು ಎಂದರು.

ಇನ್ನು ಕವಿತೆ ಎಂಬುವುದು ನಮ್ಮ ವ್ಯಕ್ತಿಗತ ಭಾವನೆಗೆ ಸ್ಪಂದನೆ ನೀಡುವಂತಿರಬೇಕು. ಕವಿತ್ರಿಯರು ಸಮಾಜದ ಭಾವನೆಗೆ ಸ್ಪಂದಿಸಬೇಕು. ಹೆಣ್ಣಿನ ಬಗ್ಗೆ ಅಪಾರವಾದ ಪ್ರೀತಿ ಕಾಳಜಿ ಎಲ್ಲವು ಇರಬೇಕು. ಯಾರಿಗೆ ಸಮಾಜದ ತಲ್ಲಣಗಳು ಸಮಸ್ಯೆಗಳು ನಿದ್ದೆ ಮಾಡಿಸದೇ ಅದರ ಬಗ್ಗೆ ವಿಚಾರಿಸಲು ದಾರಿ ಮಾಡಿಕೊಡುತ್ತವೆಯೋ ಅವರು ಮಾತ್ರ ನಿಜವಾದ ಕವಿ. ಓದು ಇದ್ದರೆ ಮಾತ್ರ ಒಬ್ಬ ಕವಿ ಎಲ್ಲ ವಿಷಯಗಳಿಗೂ ನ್ಯಾಯ ಕೊಡಲು ಸಾಧ್ಯ. ಕವಿಗೆ ಓದು ಎಷ್ಟು ಮುಖ್ಯವೂ ಅಷ್ಟೇ ಗ್ರಹಿಕೆ ಕೂಡಾ ಮುಖ್ಯವಾಗುತ್ತದೆ. ಜೊತೆಗೆ ಓದುವ ಕಲೆ ಕೂಡಾ ಸಿದ್ಧಿಸಬೇಕು ಎಂದರು. 

ಅತ್ಯುತ್ತಮ ಕವಿತೆಗಳು ಯಾವಾಗಲೂ ಏಕಾಂತದಲ್ಲಿ ಇದ್ದಾಗಲೇ ಬರುತ್ತವೆ. ಏಕಾಂತದಲ್ಲಿ ಸೃಷ್ಟಿಯಾದ ಕವಿತೆ ಲೋಕಾಂತಕ್ಕೆ ಅರ್ಪಣೆಯಾಗುತ್ತದೆ. ಕಾವ್ಯದ ರಚನೆಗೆ ಏಕಾಗ್ರತೆ ಅವಶ್ಯಕತೆ ಇದೆ ಮತ್ತು ಏಕಾಗ್ರತೆಯಿಂದ ಮಾತ್ರ ನಾವು ಕವಿತೆ ರಚನೆ ಮಾಡಲು ಸಾಧ್ಯ ಎಂದು ಹೇಳಿದರು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಮಹಿಳಾ ಸಾಂಸ್ಕøತಿಕ ಹಬ್ಬದ’ ಕವಿಗೋಷ್ಠಿಯನ್ನು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಲತಾ ವಸ್ತ್ರದ ಉದ್ಘಾಟಿಸಿ ಮಾತನಾಡಿದರು. 

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ನಾಮದೇವಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕವಿತೆಗಳಿಂದ ತಮ್ಮ ಮನಸ್ಸಿನ ಭಾವನೆಗಳನ್ನು ಅತ್ಯಂತ ಸುಂದರವಾಗಿ ವ್ಯಕ್ತಪಡಿಸಿದ್ದು ಖುಷಿಯ ವಿಚಾರ. ಈ ಕವಿಗೋಷ್ಠಿಯಲ್ಲಿ ಅತೀ ಹೆಚ್ಚಿನ ಕವಿತೆಗಳು ತಾಯಿ ಮತ್ತು ಹೆಣ್ಣಿನ ಮೇಲೆ ಮೂಡಿ ಬಂದಿದ್ದು, ಹೆಣ್ಣಿನ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತದೆ. ನೀವು ಬರೆದ ಕವಿತೆಗಳು ಬರೀ ಇಲ್ಲಿಗೆ ಮಾತ್ರ ಸೀಮಿತವಾಗಬಾರದು ಈ ಬರಹ ನಿಮ್ಮ ಜೀವನದೂದ್ದಕ್ಕೂ ಸಾಗಲಿ. ಮುಂಬರುವ ದಿನಗಳಲ್ಲಿ ನೀವು ಮಹಿಳಾ ವಿವಿಯ ರತ್ನಗಳಾಗಲು ಸಂಶಯವಿಲ್ಲ ಎಂದು ಆಶಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ 30 ಕ್ಕೂ ಹೆಚ್ಚು ವಿವಿಧ ವಿಭಾಗದ ವಿದ್ಯಾರ್ಥಿನಿಯರು ಸ್ವರಚಿತ ಕವನ ವಾಚನ ಮಾಡಿದರು. 

ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಲಕ್ಷ್ಮೀದೇವಿ ವೈ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಮಹೇಶ ಚಿಂತಾಮಣಿ, ವಿವಿಧ ವಿಭಾಗದ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ನಾರಾಯಣ ಬಿ. ಪವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರಾದ ಮಹಾಲಕ್ಷ್ಮೀ ಹಾಗೂ ರಾಗಿಣಿ ಪ್ರಾರ್ಥನಾ ಗೀತೆ ಹಾಡಿದರು. ಡಾ.ಸುಧಾರಾಣಿ ಮಣೂರ ಅತಿಥಿಗಳನ್ನು ಪರಿಚಯಿಸಿದರು. ಪದ್ಮಾವತಿ ಯತಗಲ್ ವಂದಿಸಿದರು. ಡಾ. ಚೇತನಾ ಸಂಕೊಂಡ ಹಾಗೂ ನಿಕಿತಾ ಚೆನ್ನಾಳ ಕಾರ್ಯಕ್ರಮವನ್ನು ನಿರೂಪಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.