Tuesday, January 9, 2024

10-01-2024 EE DIVASA KANNADA DAILY NEWS PAPER

ಕಬ್ಬು ಕಟಾವು ಗ್ಯಾಂಗ್‌ನವರಿAದ ಲಗಾಣಿ ವಸೂಲಾತಿಗೆ ಕಡಿವಾಣ ಹಾಕಲು ಅಖಂಡ ಕರ್ನಾಟಕ ರೈತ ಸಂಘದ ಮನವಿ


 ವಿಜಯಪುರ ಕಬ್ಬು ಕಟಾವು ಗ್ಯಾಂಗ್‌ನವರಿAದ ಲಗಾಣಿ ವಸೂಲಾತಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ವಿಜಯಪುರ ಜಿಲ್ಲೆ ಮೊದಲೇ ಬರಗಾಲ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ಕಟ್ಟಿಕೊಂಡಿದ್ದು ಸಕಾಲಕ್ಕೆ ಮಳೆಯಾಗದೆ ರೈತರು ಎಲ್ಲ ರೀತಿಯಿಂದಲೂ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲಿ ಜಿಲ್ಲೆಯಲ್ಲಿ ಕಬ್ಬು ಬೆಳೆದ ರೈತರು Pಠಾವು ಮಾಡುವ ಸಂದರ್ಭದಲ್ಲಿ ಗ್ಯಾಂಗಿನವರು ಬೇಕಾ ಬಿಟ್ಟಿ ಲಗಾಣಿ ಕೇಳುತ್ತಿರುವುದರಿಂದ ಕಬ್ಬು ಬೆಳೆದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಬ್ಬು ಬೆಳೆಗಾರರು ಅಂದು ಕೊಂಡ ಹಾಗೆ ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಆರಂಭವಾಗಿದ್ದರೆ ಜಿಲ್ಲೆಯಲ್ಲಿ ಈಗಾಗಲೇ ಶೇ 40 ರಿಂದ 50 ರಷ್ಟು ಕಬ್ಬು ಕಟಾವು ಆಗಿ ಕ್ರಸ್ಸಿಂಗ್ ಆಗಬೇಕಾಗಿತ್ತು ಆದರೆ ಕಬ್ಬು ಕಟಾವು ಮಾಡುವ ಗ್ಯಾಂಗಿನವರು ಅಂದಾಜು 20 ರಿಂದ 25 ಟನ್ ಕಟಾವು ಮಾಡಲು ನಾಲ್ಕರಿಂದ ಐದು ಸಾವಿರ ರೂಪಾಯಿ ವರೆಗೆ ಲಗಾಣಿ ಕೇಳುತ್ತಾರೆ. ಯಂತ್ರದ ಮುಖಾಂತರ ಕಟಾವು ಮಾಡಿಸಿದರೆ ಅವರು ಕೂಡ ಪ್ರತಿ ಎಕರೆಗೆ 7 ಸಾವಿರದಂತೆ ಹಣ ಕೇಳುತ್ತಾರೆ. ಇದರಿಂದ ಕಬ್ಬು ಬೆಳೆದ ರೈತರು ಗ್ಯಾಂಗಿನವರಿAದ ಶೋಷಣೆಗೆ ಒಳಗಾಗುತ್ತಿದ್ದಾರೆ. ಒಂದು ವೇಳೆ ಲಗಾಣಿ ಕೊಡದಿದ್ದರೆ ಕಬ್ಬು ಕಟಾವು ಮಾಡುವುದಿಲ್ಲ ಎಂದು ಹೇಳುತ್ತಾರೆ. ಆ ಗ್ಯಾಂಗಿನವರಿಗೆ ಸಕ್ಕರೆ ಕಾರ್ಖಾನೆಯವರೇ ನೋಡಿಕೊಳ್ಳಬೇಕು. ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಗ್ಯಾಂಗಿನವರಿAದ ಒಂದು ರೀತಿ ಲಗಾಣಿ ವಿಷಯದಲ್ಲಿ ಕಬ್ಬು ಬೆಳೆದ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ. ಪ್ರತಿ ಸಲ ಆರಂಭದಲ್ಲಿ ಕಡಿಮೆ ಲಗಾಣಿ 1000 ದಿಂದ 1500 ರೂಪಾಯಿ ವರೆಗೆ ಕೊಡುತ್ತಿದ್ದ ರೈತರಿಗೆ ಇದೀಗ ಕಟಾವು ತಡವಾಗಿ ಆರಂಭಿಸಿದ್ದರಿAದ ಕಟಾವು ಮಾಡುವ ಕಾರ್ಮಿಕರು ಒಂದು ಟ್ರಾö್ಯಕ್ಟರ್ (ಡಬಲ್ ಟ್ರೆöÊಲರಿಗೆ) ಕನಿಷ್ಠ 7 ಸಾವಿರ ರೂಪಾಯಿ ಲಗಾಣಿ ಕೇಳುತ್ತಿದ್ದಾರೆಂದು ಕಬ್ಬು ಬೆಳೆದ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದರಿಂದ 10 ಟನ್ ಕಬ್ಬಿಗೆ ಒಂದು ಟನ್ ಕಬ್ಬಿನ ಬೆಲೆಗಿಂತಲೂ ಹೆಚ್ಚಿಗೆ ಕೊಡಬೇಕಾಗುತ್ತದೆ. ಇದು ರೈತರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಲಗಾಣಿ ಕೊಡಲು ಒಪ್ಪದಿದ್ದರೆ. ಬೇರೆ ರೈತನ ಹೊಲಕ್ಕೆ ಹೋಗುತ್ತಾರೆ. ಹೀಗಾಗಿ ರೈತರು ಜಿದ್ದಿಗೆ ಬಿದ್ದು ಲಗಾಣಿ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅವಧಿ ಮೀರಿದ ಕಬ್ಬಿಗೆ ಗರಿ ಮೂಡಿದೆ. ಇದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸೇರಿದಂತೆ ನಾನಾ ಕಾರಣಗಳಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಆಳೆತ್ತರಕ್ಕೆ ಬೆಳೆದು ನಿಂತ ಕಬ್ಬು ಬೆಂಕಿಗೆ ಆಹುತಿಯಾಗುತ್ತಿವೆ. ಈ ರೀತಿಯಾದ ಕಬ್ಬನ್ನು ಮರುದಿನವೇ ಕಾರ್ಖಾನೆಗೆ ಸಾಗಿಸಬೇಕು. ಇಲ್ಲದಿದ್ದರೆ ಕಬ್ಬಿನಲ್ಲಿನ ಸಕ್ಕರೆ ಅಂಶ ಸೋರಿಕೆಯಾಗಿ ಇಳುವರಿ ಕಡಿಮೆಯಾಗುತ್ತದೆ. ಕಬ್ಬಿಗೆ ಬೆಂಕಿ ಬಿದ್ದ ತಕ್ಷಣವೇ ಸಕ್ಕರೆ ಕಾರ್ಖಾನೆಯವರಿಗೆ ತಿಳಿಸಿದರು ಎರಡ್ಮೂರು ದಿನಗಳ ನಂತರ ಕಬ್ಬು ಕಟಾವು ಮಾಡಲು ಗ್ಯಾಂಗ್ ಕಳುಹಿಸಿಕೊಡುತ್ತಾರೆ. ಹೀಗಾಗಿ ಸಾಲ ಮಾಡಿ ಕಬ್ಬು ಬೆಳೆದರೂ ಮಾಡಿದ ಖರ್ಚು ಬಾರದ ಸ್ಥಿತಿ ನಿರ್ಮಾಣವಾಗುತ್ತಿದೆ. ಒಟ್ಟಾರೆಯಾಗಿ 14 ತಿಂಗಳು ಕಷ್ಟ ಪಟ್ಟು ಕಬ್ಬು ಬೆಳೆದಿರುವ ರೈತರಿಗೆ ಒಂದಿಲ್ಲೊAದು ಸಮಸ್ಯೆಗಳು ಎದುರಾಗುತ್ತಿವೆ. ಇದೀಗ ಲಗಾಣಿ ಬಿಸಿಗೆ ಕಬ್ಬು ಬೆಳೆದ ರೈತರು ನಲಗುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಎಲ್ಲ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರ ಸಭೆ ನಡೆಸಬೇಕು ಹಾಗೂ ಸಭೆ ದಿನಾಂಕ ನಿಗಧಿಪಡಿಸಿ ಸಭೆಯಲ್ಲಿ ರೈತ ಮುಖಂಡರನ್ನು ಆಹ್ವಾನಿಸಬೇಕು. ಕಬ್ಬು ಬೆಳೆದ ರೈತರಿಂದ ಗ್ಯಾಂಗಿನವರು ಲಗಾಣಿ ಕೇಳದಂತೆ ಕಡಿವಾಣ ಹಾಕಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಒತ್ತಾಯಿಸುತ್ತದೆ.

ಈ ಸಂದರ್ಭದಲ್ಲಿ ಹೊನಕೇರೆಪ್ಪ ತೆಲಗಿ, ಬಾಲಪ್ಪಗೌಡ ಲಿಂಗದಳ್ಳಿ, ಸೋಮನಗೌಡ ಕೋಳೂರ, ರಾಮನಗೌಡ ಹಾದಿಮನಿ, ಬಸನಗೌಡ ಪಾಟೀಲ, ಯಂಕನಗೌಡ ಪಾಟೀಲ, ಹಣಮಂತರಾಯ ಗುಣಕಿ, ಅಪ್ಪಾಸಾಹೇಬಗೌಡ ಕೊಳಗೇರಿ, ಮಲ್ಲಿಕಾರ್ಜುನ ನಾವಿ, ಹಣಮಗೌಡ ಮಂಗ್ಯಾಳ, ಶಿವನಗೌಡ ಪಾಟೀಲ, ರುದ್ರಗೌಡ ಬಿರಾದಾರ, ಬಸನಿಂಗಪ್ಪಗೌಡ ಬಿರಾದಾರ, ಶರಣಪ್ಪಗೌಡ ನರಸಲಗಿ, ಭೀಮಶಪ್ಪಗೌಡ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.