Sunday, July 16, 2023

ಸುಳಿವಿಗೆ ಸಿಕ್ಕ ಜೀವ

 



ಜೀವನದ ಹಾದಿಯಲ್ಲಿ ಅದೆಷ್ಟೋ

ನೋವು ನಲಿವುಗಳು

ಬಡತನ ಎಂಬ ಬಂಧನದಿಂದ

ಸೋರುಗುತ್ತಿವೆ ಅದೆಷ್ಟೋ ಮುಗ್ಧ ಜೀವಗಳು


ಉಂಡವರೆಸ್ಟೋ ಹೊಟ್ಟೆಗೆ ಬಟ್ಟೆ ಕಟ್ಟಿ

ಉಪವಾಸ ಮಲಗಿದವರೆಷ್ಟೋ

ಅಡವಿಯಲ್ಲಿ ಅಲೆಯುತ್ತ ಅದೆಷ್ಟೋ

ಜೀವಗಳು ಬಿಸಿಲಿಗೆ ಬೆಂದಿರುವದೆಷ್ಟೋ


ಹರಕು ಬಟ್ಟೆಯ ತೊಟ್ಟು

ಮುರುಕಲು ಪಾಟಿ ಚೀಲ ಹೊತ್ತು

ಅಕ್ಷರ ಕಲಿಯಬೇಕೆಂಬ ಹಠದಿ ಹೊರಟು

ಜವಾಬ್ದಾರಿ ಹೊತ್ತು ಕೂಲಿಗೆ ಸೇರಿದ ಮಕ್ಕಳೆಷ್ಟೋ


ಬೀದಿಯಲ್ಲಿ ಬಿಕ್ಷೆ ಬೇಡುತ್ತಾ

ಅರೆ ಹೊಟ್ಟೆಯಲ್ಲಿ ಅಲೆಯುವರೆಷ್ಟೋ

ಸರಿಯಾದ ವಾಸಸ್ಥಳ ಇಲ್ಲದಿರಲು

ರೋಗರುಜಿನಗಳಿಂದ ಬಳಲುವರೆಷ್ಟೋ


ಸಣ್ಣಂದಿರಲ್ಲಿ ತಂದೆ ತಾಯಿಯರನ್ನು

ಕಳೆದುಕೊಂಡ ಶಿಶುಗಳೆಷ್ಟೋ

ಹಸಿವಿನಿಂದ ಕೊರಗಿ

ಮರೆಯಲ್ಲಿ ಕಣ್ಣಿರ ಒರೆಸುವರೆಷ್ಟೋ


ತಿಳುವಳಿಕೆ ಇದ್ದು ತಿದ್ದಲಾಗದೆ

ಮುನ್ನುಗುತ್ತಿರುವರೆಷ್ಟೋ

ವಿಧಿಯಿರದೆ ಶ್ರಮಿಸುತ್ತಿರುವ

ಚಿಗುರುವ ಕುಡಿಗಳೆಷ್ಟೋ


ದಿಕ್ಕೆತೋಚದ ಪಯಣಗಳೆಷ್ಟೋ

ಬಂದ ದಾರಿಯಲ್ಲಿ ಕಲ್ಲುಮುಳ್ಳುಗಳೆಷ್ಟೋ

ತಿಳಿಯುತ್ತಿದ್ದರು ಎಲ್ಲವೂ

ಹೊರೆಯಾಗಿ ಹೊರಳಾಡುವರೆಷ್ಟೋ


ಪಟ್ಟ ಬಂದ ಮೇಲೆ ಏರಿ ಬಂದ ಅಟ್ಟವನ್ನು

ಮರೆತು ಹೊದವರೆಷ್ಟೋ

ಹಲವು ತೆರನಾಗಿ ಸುಳಿವಿಗೆ ಸಿಕ್ಕಿ

ಅದೆಷ್ಟೋ ಜೀವಗಳು ಮರುಗುತ್ತಿರುವದೆಷ್ಟೋ


ಭಾಗ್ಯ ಸಕನಾದಗಿ 

ಜಿಲ್ಲೆ: ವಿಜಯಪುರ

ತಾಲೂಕು: ಕೊಲ್ಹಾರ 

ಗ್ರಾಮ: ಹಿರೇಗರಸಂಗಿ 

ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿ


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಬೆಗಳಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

 ಮೊ: 720427 9187/9900 37 8892

eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಭಾನುವಾರ ರಜಾ - ಮಜಾದಲ್ಲಿ ಜನರ ಮನಸೆಳೆದ ಆಕರ್ಷಕ, ಮನಮೋಹಕ ತಾರೆಯ ನೋಡುವ ತವಕ....


ಈ ದಿವಸ ವಿಶೇಷ ಲೇಖನ: ಶುಭಲಕ್ಷ್ಮೀ ಹೊಸಮನಿ

ವಿಜಯಪುರ : ಹಸಿರು ಹಾಸಿಗೆಯ ಪ್ರಕೃತಿ ಮಡಿಲಲ್ಲಿ, ತಂಪು ಗಾಳಿಯ ಇಂಪಿನಲ್ಲಿ ಗರ್ವದಿಂದ ಮೆರೆಯುತ್ತ, ಎಲ್ಲೆಡೆ ಹೆಸರಾಗಿ, ನಾಡಿನ ನಗರ ಪ್ರಕೃತಿ ಸೌಂದರ್ಯ ಸವಿಯುವ ಬೃಹತ್ ಗಾತ್ರದ ನಲುಮೆಯ ಚಿಲುಮೆ.

ಈಕೆ ಅದ್ಭುತ ಮನಮೋಹಕ ತಾರೆ, ಇವಳ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ, ಜನರ ಮನಸೆಳೆದ ಆಕರ್ಷಕ ತಾರೆಯನೊಮ್ಮೆ ನೋಡಿದರೆ ಸಾಕು, ಅವಳ ಬಾಹ್ಯ ಸೌಂದರ್ಯಕ್ಕೆ ಮನಸೋತು ಬೆರಗಾಗದವರಿಲ್ಲ, ಇನ್ನು ಇವಳಿಗೆ ಯಾರು ಸರಿಸಾಟಿ ನೀವೇ ಹೇಳಿ ? ಇವಳ ಬಾಹ್ಯ ಸೌಂದರ್ಯವನ್ನು ನೀವು ಅನುಭವಿಸ ಬಲ್ಲಿರಾ?.......

ಇಷ್ಟಕ್ಕೂ ನಾನು ಹೇಳ ಹೊರಟಿರುವುದು ಏನು ಅಂತೀರಾ? ಇವಳನ್ನು ನೀವೆಲ್ಲರೂ ಕಂಡಿರುವಿರಿ, ಕಾಣದವರು ಆದಷ್ಟು ಬೇಗ ನೋಡುವ ಹಂಬಲ ಹುಮ್ಮಸ್ಸು ಮೂಡಿಸುವುದು ಮಾಯಗಾತಿ ಸೌಂದರ್ಯದಲ್ಲಿದೆ.

ಅವಳದು ಕಣ್ಣು ಕುಕ್ಕಿಸುವ ನೋಟ, ಇತಿಹಾಸಕ್ಕೆ ಮೆರಗು, ಬೆರಗು ಮೂಡಿಸಿದ ಐತಿಹಾಸಿಕ ತಾಣಗಾತಿ, ನಗರದ ಹತ್ತಾರು ಐತಿಹಾಸಿಕ ತಾಣಗಾತಿಯರಲ್ಲಿ ಇವಳೇ ರಾಣಿ, ತನ್ನ ಸುಂದರ ಮನಮೋಹಕ ವೈಯ್ಯಾರದಿಂದ ಎಲ್ಲರನ್ನು ತನ್ನತ್ತ ಸೆಳೆಯುವ ಕಲೆಗಾರ್ತಿ, ಈಕೆಯನ್ನು ನೋಡಲು ಮನವೇಕೋ ಹಂಬಲಿಸುವುದು.

ಹಳೆಯ ಕಾಲದ ರಾಣಿಗೆ ಹೊಸ ಮೆರಗು ನೀಡಿದ ಕಲಾವಿದ ಕೈ ಚಳಕ ಸಾಮಾನ್ಯವಲ್ಲ. ಅಂದು ಶೃಂಗಾರ ಧರಿಸದ ಶೃಂಗಾರಗಿತ್ತಿಗೆ ಕಪ್ಪು ವರ್ಣದಿಂದ ಶೃಂಗಾರಗೊಳಿಸಿದರು.

ಅಷ್ಟಕ್ಕೂ ನಾನು ಹೇಳುತ್ತಿರುವುದು ನಮ್ಮ ಜಿಲ್ಲೆಯ ಬಹು ಪ್ರವಾಸಿ ತಾಣಗಳಲ್ಲಿ ಅತೀ ಹೆಮ್ಮೆಯ ಗರಿ, ಗುಮ್ಮಟ ನಗರಿ ಹೆಸರಿನ ಹಿನ್ನಲೆ ಒಡತಿ ಬಗ್ಗೆ ಅವಳು ಮತ್ತಾರಲ್ಲ, ನಮ್ಮ ನಗರದ ಸೌಂದರ್ಯವತಿ ಲೋಕ ದೃಷ್ಟಿಯ ತನ್ನ ಕಪಿಮುಷ್ಟಿಯಲ್ಲಿ ಸೆರೆ ಹಿಡಿದ ಗೋಳ ಗುಮ್ಮಟ ತಾರೆ.....

ರಾಜ್ಯದ ಮಹಿಳಾ ಮಣಿಗಳಿಗಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿರುವುದು ಸಂತಸದ ಸಂಗತಿ.

ಶಕ್ತಿ ಯೋಜನೆ ಸದುಪಯೋಗ ಪಡಿಸಿಕೊಳ್ಳುತ್ತಿರುವ ರಾಜ್ಯದ ಸುತ್ತ ಮುತ್ತಲಿನ ಮಹಿಳೆಯರ ದಂಡು ಇಂದು ಐತಿಹಾಸಿಕ ತಾಣ ಗೋಳ ಗುಮ್ಮಟದಲ್ಲಿತ್ತು ಎಂದು ಹೇಳಲು ಹೆಮ್ಮೆ ಎನಿಸುವುದು.

ತನ್ನ ಕುಟುಂಬಕ್ಕಾಗಿ ಹಗಲಿರುಳು ಕೊನೆವರೆಗೂ ದುಡಿಯುವ ಏಕೈಕ ಶ್ರಮಜೀವಿ ಮಹಿಳೆ. ಸುಖ- ದುಃಖ, ಆಸೆ - ಆಕಾಂಕ್ಷೆಗಳನ್ನು ಬದಿಗೊತ್ತಿ, ತನ್ನವರ ಸುಖದಲ್ಲಿಯೇ ತನ್ನ ಸುಖವನ್ನು ಕಾಣುವ ಶಕ್ತಿ, ತಾಳ್ಮೆ ಯನ್ನು ಹೊಂದಲು ಒಬ್ಬ ಹೆಣ್ಣಿನಿಂದ ಮಾತ್ರ ಸಾಧ್ಯ ಎಂದು ಹೇಳಬಹುದು.

ಮನೆಯ ಹಿರಿತನ ಸಿರಿತನವೆಲ್ಲ ಇವಳಿಂದಲೇ, ಹೆಣ್ಣು ಹೊರ ಜಗತ್ತನ್ನು ಕಾಣಬೇಕು, ನೂರಾರು ಮೈಲಿಗಳನ್ನು ಸುತ್ತಿ ಹೊಸ ಜಗತ್ತಿನಲ್ಲಿರುವ ಹೊಸ ಹೊಸ ವಿಚಾರಗಳನ್ನು ಅರಿತರೆ ಮುಂದಿನ ಪೀಳಿಗೆಗಳ ಬಾಳಿಗೆ ದಾರಿದೀಪವಾಗುವಳು ಎಂಬ ಮನೋಭಾವನೆ ಹೊಂದಿರುವ ಸರ್ಕಾರ ಅವರಿಗಾಗಿ ಹೊಸ ಯೋಜನೆ ನಿರ್ಮಿಸಿದೆ.

ಹಾಗಾಗಿ ಹೆಣ್ಣು ಮಕ್ಕಳು, ವೃದ್ಧರು, ವಿದ್ಯಾರ್ಥಿನಿಯರು ರಾಜ್ಯ, ಜಿಲ್ಲೆ, ನಗರಗಳಲ್ಲಿರುವ ಐತಿಹಾಸಿಕ ತಾಣಗಳಾದ ಪ್ರೇಕ್ಷಣಿಕ ಸ್ಥಳಗಳನ್ನು ನೋಡಲು ಪ್ರವಾಸ ಕೈಗೊಂಡಿದ್ದಾರೆ.

ಭಾನುವಾರ ರಜಾ- ಮಜಾ ಎನ್ನುವ ಹಾಗೇ ತಮ್ಮ ಸ್ವ ಕುಟುಂಬದೊಂದಿಗೆ ನಗದಲ್ಲಿರುವ ಗೋಳ ಗುಮ್ಮಟ, ಶಿವಗಿರಿ, ಇಬ್ರಾಹಿಂ ರೋಜಾ, ಬರಾಕಮಾನ್, ಜೋಡ ಗುಮ್ಮಟವನ್ನು ನೋಡಲು  ಕಿಕ್ಕಿರಿದು ಹರಿದು ಬಂದ ಜನ ಸಾಗರ ನೋಡಿ ಕಣ್ಣು ತಂಪಾಯಿತು.

ಗೋಳ ಗುಮ್ಮಟ : ರಾಜ್ಯದ ಐತಿಹಾಸಿಕ ತಾಣಗಳನ್ನು ಮೀರಿಸುವ ಶಕ್ತಿ ಸಾಮರ್ಥ್ಯ ಹೊಂದಿರುವ ಈ ಪ್ರೇಕ್ಷಣೀಯ ಸ್ಥಳಕ್ಕೆ ಹರಿದು ಬಂದ ಜನಸಾಗರ.

ಟಿಕೆಟ್ ಕೌಂಟರ್ ಫುಲ್ ರೇಶ್: ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಟಿಕೆಟ್ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಗುಮ್ಮಟ ವೀಕ್ಷಣೆಗೆ 25 ರೂ. ಹಾಗೂ ಮ್ಯೂಜಿಯಂ ಗೆ 05 ರೂ. ಗಳಂತೆ ಟಿಕೆಟ್ ದರ ನಿಗದಿಪಡಿಸಿರುವುದು ಹಾಗಾಗಿ ಟಿಕೆಟ್ ಪಡೆದವರಿಗೆ ಮಾತ್ರ ಒಳಗಡೆ ಪ್ರವೇಶಕ್ಕೆ ದಾರಿ ಮಾಡಿಕೊಡಲಾಗುವುದು.

ಗೋಳ ಗುಮ್ಮಟದ ಒಳಭಾಗದ ವೀಕ್ಷಣೆಯ ಮೇಲ್ ಮೆಟ್ಟಿಲುಗಳನ್ನು ಹತ್ತಿ ಗುಮ್ಮಟದ ತುದಿ ಮೇಲೆ ಹೋಗಲು ನಿಂತಿರುವ ಸರತಿ ಸಾಲು ಜನ ಸಾಗರದ ಮುಳುಗಿತ್ತು.

ಗುಮ್ಮಟ ವೀಕ್ಷಣೆಗೆ ಬಂದ ಜನರನ್ನು ನಿಯಂತ್ರಣದಲ್ಲಿರಿಸುವುದೇ ಸೆಕ್ಯೂರಿಟಿ ಗಾರ್ಡ್ ಗಳಿಗೆ ದೊಡ್ಡ ಸವಾಲಾಗಿತ್ತು.

ಆದರೂ ಸಹ ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ಮಾತನಾಡಿಸಿ ಐತಿಹಾಸಿಕ ತಾಣದ  ಬಗ್ಗೆ ಮಾರ್ಗದರ್ಶನ ನೀಡಿ ಮುಂದೆ ಸಾಗಿಸುತ್ತಿದ್ದರು.

ಒಟ್ಟು 45 ಜನ ಸೆಕ್ಯೂರಿಟಿ ಗಾರ್ಡ್ ಹಾಗೂ 4 ಜನ ಹೋಮ್ ಗಾರ್ಡ್ ಗಳು ಬಹಳ ಅಚ್ಚುಕಟ್ಟಾಗಿ ತಮ್ಮ ಕಾರ್ಯವೈಖರಿಯನ್ನು ಶಿಸ್ತುಬದ್ಧವಾಗಿ ಮಾಡುತ್ತಾರೆ.

ಶಿವಗಿರಿ : ವಿಜಯಪುರದ ಹೊರವಲಯದಲ್ಲಿರುವ 85 ಅಡಿ ಎತ್ತರದ ಶಿವನ ಮೂರ್ತಿ ನೋಡುವುದೇ ಕಣ್ಣಿಗೆ ಒಂದು ಅದ್ಭುತ ಆಕರ್ಷಕ ದೃಶ್ಯವೆಂದು ಅರಿಯಬಹುದು.

ಶಿವಗಿರಿಯಲ್ಲಿ ನಗರ ಪ್ರದೇಶದ ಜನರಷ್ಟೇ ಅಲ್ಲದೇ ಗ್ರಾಮೀಣ ಭಾಗದ ಸುತ್ತ ಮುತ್ತಲಿನ ಜನದಟ್ಟಣೆಯೇ ಶಿವನನ್ನು ನೋಡಲು ಮುಗಿ ಬಿದ್ದಿದೆ.

ಪ್ರತಿಯೊಬ್ಬರಿಗೆ 20 ರೂ. ನಂತೆ ಟಿಕೆಟ್ ಪಡೆದು ಒಳಗಿರುವ 85 ಅಡಿ ಎತ್ತರದ ಶಿವನ ಮೂರ್ತಿ, ಜೊತೆಗೆ ಇಲ್ಲಿನ ಸುಂದರ ಅದ್ಭುತ ಕಲಾ ಪ್ರದರ್ಶನ ಪ್ರತಿಮೆಗಳು, ಯಕ್ಷಗಾನ ವಿಗ್ರಹ, ರಾಧಾ ಕೃಷ್ಣರ ಗೋಕುಲ ಉದ್ಯಾನವನ, ಸಾಕ್ಷಾತ್ ದೇವಿ ವಿಗ್ರಹ, ಚಿಣ್ಣರ ಅಂಗಳದಲ್ಲಿ ಜೋಕಾಲಿ, ಜಾರು ಬಂಡಿ ಆಟೋಟಗಳ ಜೊತೆಗೆ ಕುಟುಂಬದ ಸದಸ್ಯರು, ಮಕ್ಕಳೊಂದಿಗೆ ತಂದೆ ತಾಯಿಯರ ಸಂಭ್ರಮ ಮುಗಿಲು ಮುಟ್ಟಿರುವುದನ್ನು ಕಣ್ಣಾರೆ ಕಂಡು ಅದರ ಸವಿರುಚಿಯನ್ನು ಸವಿಯುವುದೇ ಮನಸ್ಸಿಗೆ ಆನಂದದ ಮುದ ನೀಡುವುದು ಎನ್ನುವ ಕಟು ಸತ್ಯವನ್ನು ಇಂದು ಅನುಭವಿಸಿದೆ.


ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆ ಪ್ರಭಾವದಿಂದ ಇಂದು ಗೋಳ ಗುಮ್ಮಟ ಐತಿಹಾಸಿಕ ತಾಣವನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದು, ಅದರಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಸಾರ್ವಜನಿಕರಿಗೆ,  ಅನುಕೂಲವಾಗುವ ರೀತಿಯಲ್ಲಿ ಇಲ್ಲಿರುವ ಸುಮಾರು 45 ಜನ ಸೆಕ್ಯೂರಿಟಿಗಳು, ಮತ್ತು 4 ಜನ ಹೋಮ್ ಗಾರ್ಡ್ ಸಿಬ್ಬಂದಿಗಳು ಅಚ್ಚುಕಟ್ಟಿನಿಂದ ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ.

- ರಮಾ ಎಸ್. ರಾಠೋಡ್

ಸೆಕ್ಯೂರಿಟಿ ಗಾರ್ಡ್, ಗೋಳ ಗುಮ್ಮಟ ವಿಜಯಪುರ


ರಾಜ್ಯ ಸರ್ಕಾರದ ಶಕ್ತಿಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣ ಮಾಡಿರುವುದು ಖುಷಿ ಸಂಗತಿ ಹೇಗೆಂದರೆ ಮಕ್ಕಳು ಅವರ ಸಹೋದರಿಯರೊಂದಿಗೆ ಶಾಲಾ ಕಾಲೇಜು ಪ್ರವಾಸಕ್ಕೆ  ಹೋದರೆ, ತಂದೆಯವರು, ಅಣ್ಣಂದಿರು ಕೆಲಸದ ನಿಮಿತ್ಯ ಯಾವುದೋ ಕಾರಣಕ್ಕೆ ಪ್ರವಾಸ ಮಾಡುವುದು ಸಹಜ. ಅಮ್ಮಂದಿರು ಅಪರೂಪಕ್ಕೆ ತಮ್ಮ ತವರು ಮನೆಗೆ ಹೋಗುವುದು ಆದರೆ ಉಚಿತ ಪ್ರಯಾಣದಿಂದ ಅಮ್ಮಂದಿರು ಕೂಡ ಪ್ರವಾಸಕ್ಕೆ ಸಜ್ಜಾಗಿರುವುದು ಹೆಮ್ಮೆಯ ವಿಷಯ. ರವಿವಾರ ಸರ್ಕಾರಿ ರಜೆ ಹಿನ್ನಲೆಯಲ್ಲಿ ನಮ್ಮ ತಾಯಿಯನ್ನು ವಿಜಯಪುರದಲ್ಲಿರುವ ಐತಿಹಾಸಿಕ ತಾಣಗಳ ದರ್ಶನಕ್ಕೆ ಕರೆದುಕೊಂಡು ಬಂದಿರುವೆ.

- ದ್ರೌಪದಿ ಹೊನಕಟ್ಟಿ, ಇಂಡಿ

ಗೋಳ ಗುಮ್ಮಟ ವೀಕ್ಷಣೆ ಪ್ರವಾಸಿಗರು


ವಿಶೇಷ ಸೂಚನೆ:

ಯುವ ಪ್ರತಿಬೆಗಳಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು 

ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ವ್ಯವಸ್ಥಾಪಕ ಸಂಪಾದಕ 

ಕಲ್ಲಪ್ಪ ಶಿವಶರಣ

 ಮೊ: 720427 9187/9900 37 8892

eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಫ.ಗು.ಹಳಕಟ್ಟಿ ಅವರ ಕೊಡುಗೆ ಅನನ್ಯ : ಪ್ರಕಾಶ ಬಗಲಿ

ಈ ದಿವಸ ವಾರ್ತೆ

ವಿಜಯಪುರ: ಫ.ಗು.ಹಳಕಟ್ಟಿ ವ್ಯಕ್ತಿತ್ವ ಅಗಾಧವಾದ್ದು, ಅವರ ಕೊಡುಗೆ ಅನನ್ಯವಾಗಿದೆ ಎಂದು ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶ ಎಸ್. ಬಗಲಿ ಹೇಳಿದರು.

ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಡಾ.ಫ.ಗು ಹಳಕಟ್ಟೀಯವರ 143 ನೇ ಜನ್ಮದಿನದ ಅಂಗವಾಗಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಶಿಯೇಷನ್ ಅವರು ಹಮ್ಮಿಕೊಂಡಿದ್ದ ಮುದ್ರಣ ಸಾಧಕರಿಗೆ ಮುದ್ರೋಧ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮವನ್ನು ಮಾಡಿದ ಅಸೋಸಿಯೇಶನ್‌ದವರು ಇತಿಹಾಸ ಸೃಷ್ಟಿಸಿದ್ದಾರೆ. ಫ.ಗು.ಹಳಕಟ್ಟಿಯವರ ಪುಣ್ಯದಿಂದಲೆ ಸಿದ್ಧೇಶ್ವರ ಬ್ಯಾಂಕ್ ಬೆಳೆಯಲು ಕಾರಣವಾಗಿದೆ. ಫ.ಗು.ಹಳಕಟ್ಟಿಯವರು ಸೈಕನಲ್ಲಿ ತಿರುಗಾಡಿ ಶಿಕ್ಷಣ ಸಂಸ್ಥೆಯಾದ ಬಿ.ಎಲ್.ಡಿ.ಸೇರಿದಂತೆ ಅನೇಕ ಸಂಸ್ಥೆಗಳನ್ನು ಅಭಿವೃದ್ಧಿಯ ಹೊಸ ಶೆಖೆ ಪ್ರಾರಂಭಿಸಲು ಫ.ಗು. ಹಳಕಟ್ಟಿಯವರ ಅಪಾರವಾಗಿ ಶ್ರಮಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂಗಮೇಶ ಚೂರಿ ಮಾತನಾಡಿ, ವಚನ ಪಿತಾಮಹ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತಿರುವಿರಿ. ಅವರು ಇಡೀ ಜಗತ್ತಿಗೆ ಚಿರಪರಿಚಿತರಾಗಿದ್ದಾರೆ. ಡಿಜಿಟಲ್ ಮಾಧ್ಯಮ ಬಂದಿದೆ ಈಗ ಎಲ್ಲರಿಗೂ ಸರಳವಾಗಿದೆ. ನಿಮ್ಮನ್ನು ಬಳಸಿಕೊಳ್ಳದ ಯಾರೂ ಇಲ್ಲ. ಪ್ರಿಟಿಂಗ್ ಪ್ರೆಸ್ ಕೆಲಸ ಶ್ರೇಷ್ಠ ಕಾಯಕವಾಗಿದೆ. ಕಾಯಕಮಾಡಿದವರಿಗೆ ಮುದ್ರೋದ್ಯಮ ಪ್ರಶಸ್ತಿ ನೀಡಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.


ಈ ಸಂದರ್ಭದಲ್ಲಿ ಉಪನ್ಯಾಸಕ ಹಾಗೂ ಖ್ಯಾತ ವಾಗ್ಮಿ ವಿಷ್ಣು ಎಂ.ಶಿಂಧೆ ಉಪನ್ಯಾಸ ನೀಡಿ ಮಾತನಾಡಿ, ನನಗೂ ಕೂಡಾ ಮುದ್ರಣ ಮಾಧ್ಯಮದ ಅನುಭವ ಇದೆ. ಇಂದು ನಾವು ಮುದ್ರಣ ಮಾಧ್ಯಮ ಅವಲಂಬಿಸಿದ್ದೇವೆ. ನಮ್ಮ ಹಿರಿಯರು ರಾಜ್ಯರ ಕಾಲದಲ್ಲಿ ಕಲ್ಲಿನ ಮೇಲೆ ಶಾಸನಗಳನ್ನು ಕೆತ್ತುತಿದ್ದರು ನಂತರ ತಾಮ್ರದ ಪತ್ರ ಅದ ನಂತರ ಬಂದಿದ್ದು ಕಾಗದ ಮೇಲೆ ಮುದ್ರಿಸುವುದು. ಅದು ಬಂದಿದ್ದು ಪೋರ್ಚು ಗೀಜರ್ ಕಾಲದಲ್ಲಿ. ಮೊಬೈಲ್ ಬಂದ ಮೇಲೆ ಇಂದು ಎಲ್ಲರೂ ಮುದ್ರಕರು ಮತ್ತು ಫೋಟೋಗ್ರಾಫರ್ ಆಗಿದ್ದಾರೆ. ಇಂದು ಮುದ್ರಣ ಮಾಧ್ಯಮ ಬಹಳಷ್ಟು ವಿಶಾಲವಾಗಿ ಬೆಳೆದಿದೆ. ಜೊತೆಗೆ ಮುದ್ರಕರು ಅಷ್ಟೇ ಸಮಸ್ಯೆ ಎದುರಿಸುತ್ತಿದ್ದಾರೆ ಹಳಕಟ್ಟಿಯವರು ಮುದ್ರಣ ಮಾಧ್ಯಮದಲ್ಲಿ ತೊಡಗಿಸಿಕೊಂಡಾಗ ಮೈಯೊಳಗಿನ ಅಂಗಿ ಹರದಿತ್ತು ಅದರ ಮೇಲೆ ಕೋಟು ಧರಿಸಿದ್ದರಿಂದ ಹರಿದ ಅಂಗಿ ಸಮಾಜಕ್ಕೆ ಕಾಣುತ್ತಿರಲ್ಲಿಲ್ಲ ಅದೇ ಪರಸ್ಥಿತಿ ಇಂದಿನ ಮುದ್ರಾಕರದ್ದಾಗಿದೆ. ಇಂದು ಮುದ್ರಣ ಮಾಧ್ಯಮ ಹಲವು ಸಂಕಟ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ನಾವು ಹಿಂದಿನ ಕಾಲದಲ್ಲಿ ಹೇಳುತ್ತಿದ್ದೆವು ಇಂದು ಚಿಕ್ಕ ಮಕ್ಕಳು ಕೈಗೆ ಮೊಬೈಲ್ ಕೊಡದಿದ್ದರೆ ಮಕ್ಕಳು ಊಟ ಮಾಡುವುದಿಲ್ಲ ಇಂದು ಮಕ್ಕಳು ಮೊಬೈಲ್ ಗೀಳಿಗೆ ಬಿದ್ದಿದ್ದಾರೆ ಮುಂದೊಂದು ದಿನ ಇದು ದೊಡ್ಡ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಇಂದು ಜನ ದೃಶ್ಯ ಮಾಧ್ಯಮದಿಂದ ಕಲಿಯುತ್ತಿದ್ದಾರೆ ಮುದ್ರಣ ಮಾಧ್ಯಮದಿಂದ ದೂರ ಸರಿಯುತ್ತಿದ್ದಾರೆ ಮುದ್ರಣ ಮಾಧ್ಯಮ ಸಂಕಷ್ಟ ಎದುರಿಸುತ್ತಿರುವುದರಿಂದ ಸರ್ಕಾರ ಮುದ್ರಕರಿಗೆ ವಿಶೇಷ ಯೋಜನೆ ರೂಪಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಮುಂದಾಗಬೇಕು ಎಂದರು. ಈ ಸಂಘಟನೆ ತಾಲೂಕು ಮಟ್ಟದಲ್ಲಿ ವಿಸ್ತರಿಸಿ ಗ್ರಾಮೀಣ ಭಾಗದ ಮುದ್ರಕರ ಸಮಸ್ಯೆಗಳ ಡಾಟಾ ಸಂಗ್ರಹಿಸುವ ಕಾರ್ಯ ಮಾಡಬೇಕು ಜೊತೆಗೆ ಇದು ಸರ್ಕಾರಕ್ಕೆ ತಲುಪಿಸಿದರೆ ಸರಕಾರ ತಮ್ಮ ಪರಿಹಾರ ಒದಗಿಸಬಹುದೆಂದು ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕಲಬುರ್ಗಿ ವಿಭಾಗ ಸಂಚಾಲಕರಾದ ಕಲಬುರ್ಗಿ ವಿಭಾಗ ಸಂಚಾಲಕರಾದ ರವಿ ಮುಕ್ಕಾ ಮಾತನಾಡಿ, ಒಳ್ಳೆಯ ಮನುಷ್ಯರಾದರೆ ಏನೆಲ್ಲ ಸಾಧಸಬಹುದಾಗಿದೆ. ವಿಜಯಪುರ ಜಿಲ್ಲೆ ಭೂಮಿ ಪುಣ್ಯಭೂಮಿಯಾಗಿದೆ.

ಇದೇ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಸಾಹಿತಿ ಕಲ್ಲಪ್ಪ ಶಿವಶರಣ ಅವರ ಸಂಪಾದಕತ್ವದ ಅಚ್ಚುಮೆಚ್ಚು ಪುಸ್ತಕದ ಮುಖಪುಟವನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಶಿಯೇಷನ್ (ರಿ) ಸಂಘದ ಅಧ್ಯಕ್ಷ ಚಿದಾನಂದ ವಾಲಿ, ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವಕರ‍್ಸ್ ಅಸೋಸಿಯೇಶನ್ (ರಿ) ಗೌರವಾದ್ಯಕ್ಷರಾದ ಚಂದ್ರಶೇಖರ ಸಿ.ಬುರಾಣಪೂರ ಮಾತನಾಡಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಉಮೇಶ ವಂದಾಲ, ಪ್ರಭು ಮಲ್ಲಿಕಾರ್ಜುನಮಠ, ಹೆಚ್.ಎಂ.ಬಾಗವಾನ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ಟ್ರೆಡಲ್ ಮಶೀನ್ ನಲ್ಲಿ 30 ರಿಂದ 40 ವರ್ಷ ಮುದ್ರಕ, ಮಾಲಿಕರಾಗಿ ಸೇವೆ ಸಲ್ಲಿಸಿದ ಮಹನೀಯರಾದ ಶ್ರೀಮಹಾಂತೇಶ ಪ್ರಭು, ಬಸವರಾಜ ಅಶೋಕ ಹೆಬ್ಬಳ್ಳಿ, ಮುದ್ದೇಬಿಹಾಳದ ಅಂಬಿಕಾ ಆಫಸೆಟ್, ಬಾಗೇವಾಡಿಯ ಚನ್ನಬಸವೇಶ್ವರ ಆಫ್ ಸೆಟ್ ಪ್ರಿಂರ‍್ಸ, ಪ್ರಿಂಟರ್ ರಾಹುಲ ಠೋಣೆ ಸೇರಿದಂತೆ ಇನ್ನಿತರ ಮುದ್ರಕ, ಮಾಲಿಕ ಸಾಧಕರಿಗೆ ಮದ್ರೋದ್ಯಮಿ ಪ್ರಶಸ್ತಿಯನ್ನು ನೀಡಿ ಸಾಲು, ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಐಶ್ವರ್ಯ ಗಾಯಕವಾಡ ಭರತನಾಟ್ಯ ಹಾಗೂ ನಿಜಗುಣಿ ಶಿವಶರಣ ಬಾನಿನಲ್ಲಿ ಮೂಡಿಬಂದ ಚೆಂದಾಮಾಮಾ ನೃತ್ಯ ಎಲ್ಲರನ್ನು ಮನ ಸೂರೆಗೊಳಿಸಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ವೆಂಕಟೇಶ ಕಪಾಳೆ, ನಿರ್ದೇಶಕರುಗಳಾದ ಮಹ್ಮದ ಹನೀಫ ಮುಲ್ಲಾ, ಮೃತ್ಯುಂಜಯ ನಿ.ಶಾಸ್ತಿç, ಜಗದೀಶ ಶಹಾಪುರ, ನಾಗರಾಜ ಬಿಸನಾಳ, ಬಸವರಾಜ ಹಾವಿನಾಳ, ದೀಪಕ ಜಾಧವ, ಉಮೇಶ ಶಿವಶರಣ, ನಬಿಲಾಲ ಮಕಾನದಾರ, ಮಂಜುನಾಥ ರೂಗಿ, ಸುರೇಶ ಗೊಳಸಂಗಿ, ಶ್ರೀಮಂತ ಬೂದಿಹಾಳ, ತೇಜಶ್ವಿನಿ ಕುಲಕರ್ಣಿ ಹಾಗೂ ಲಾಯಪ್ಪ ಇಂಗಳೆ, ಕು.ಕೃತಿಕಾ ವಾಲಿ, ಶಶಿಕಲಾ ವಾಲಿ, ಅಂಬಿಕಾ ಜಾಧವ, ನಾಗರಾಜ ಬಿದರಿ, ದೀಪಿಕಾ ಬಿದರಿ, ಸಂತೋಷ ಹುಣಶ್ಯಾಳ ಸೇರಿದಂತೆ ಮುದ್ರಣ ಮಾಲೀಕರು ಹಾಗೂ ಮುದ್ರಣ ಕಾರ್ಮಿಕರು-ಬಂಧುಬಳಗದವರು ಅಪಾರ ಜನರು ಉಪಸ್ಥಿತರಿದ್ದರು.

ಶ್ರೀಮಂತ ಬೂದಿಹಾಳ ನಿರೂಪಿಸಿದರು. ಉಮೇಶ ಕುಲಕರ್ಣಿ ವಂದಿಸಿದರು.

ವಿಶೇಷ ಸೂಚನೆ : ಶಾಲಾ ಕಾಲೇಜಿನ, ಹೋರಾಟ , ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತಿಗಾಗಿ ಪ್ರಕಟಿಸಲು ಸಂಪರ್ಕಿಸಿರಿ.

ವ್ಯವಸ್ಥಾಪಕ ಸಂಪಾದಕ ಕಲ್ಲಪ್ಪ ಶಿವಶರಣ

 ಮೊ: 720427 9187/9900 37 8892

eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.