Sunday, July 16, 2023

ಸುಳಿವಿಗೆ ಸಿಕ್ಕ ಜೀವ

 



ಜೀವನದ ಹಾದಿಯಲ್ಲಿ ಅದೆಷ್ಟೋ

ನೋವು ನಲಿವುಗಳು

ಬಡತನ ಎಂಬ ಬಂಧನದಿಂದ

ಸೋರುಗುತ್ತಿವೆ ಅದೆಷ್ಟೋ ಮುಗ್ಧ ಜೀವಗಳು


ಉಂಡವರೆಸ್ಟೋ ಹೊಟ್ಟೆಗೆ ಬಟ್ಟೆ ಕಟ್ಟಿ

ಉಪವಾಸ ಮಲಗಿದವರೆಷ್ಟೋ

ಅಡವಿಯಲ್ಲಿ ಅಲೆಯುತ್ತ ಅದೆಷ್ಟೋ

ಜೀವಗಳು ಬಿಸಿಲಿಗೆ ಬೆಂದಿರುವದೆಷ್ಟೋ


ಹರಕು ಬಟ್ಟೆಯ ತೊಟ್ಟು

ಮುರುಕಲು ಪಾಟಿ ಚೀಲ ಹೊತ್ತು

ಅಕ್ಷರ ಕಲಿಯಬೇಕೆಂಬ ಹಠದಿ ಹೊರಟು

ಜವಾಬ್ದಾರಿ ಹೊತ್ತು ಕೂಲಿಗೆ ಸೇರಿದ ಮಕ್ಕಳೆಷ್ಟೋ


ಬೀದಿಯಲ್ಲಿ ಬಿಕ್ಷೆ ಬೇಡುತ್ತಾ

ಅರೆ ಹೊಟ್ಟೆಯಲ್ಲಿ ಅಲೆಯುವರೆಷ್ಟೋ

ಸರಿಯಾದ ವಾಸಸ್ಥಳ ಇಲ್ಲದಿರಲು

ರೋಗರುಜಿನಗಳಿಂದ ಬಳಲುವರೆಷ್ಟೋ


ಸಣ್ಣಂದಿರಲ್ಲಿ ತಂದೆ ತಾಯಿಯರನ್ನು

ಕಳೆದುಕೊಂಡ ಶಿಶುಗಳೆಷ್ಟೋ

ಹಸಿವಿನಿಂದ ಕೊರಗಿ

ಮರೆಯಲ್ಲಿ ಕಣ್ಣಿರ ಒರೆಸುವರೆಷ್ಟೋ


ತಿಳುವಳಿಕೆ ಇದ್ದು ತಿದ್ದಲಾಗದೆ

ಮುನ್ನುಗುತ್ತಿರುವರೆಷ್ಟೋ

ವಿಧಿಯಿರದೆ ಶ್ರಮಿಸುತ್ತಿರುವ

ಚಿಗುರುವ ಕುಡಿಗಳೆಷ್ಟೋ


ದಿಕ್ಕೆತೋಚದ ಪಯಣಗಳೆಷ್ಟೋ

ಬಂದ ದಾರಿಯಲ್ಲಿ ಕಲ್ಲುಮುಳ್ಳುಗಳೆಷ್ಟೋ

ತಿಳಿಯುತ್ತಿದ್ದರು ಎಲ್ಲವೂ

ಹೊರೆಯಾಗಿ ಹೊರಳಾಡುವರೆಷ್ಟೋ


ಪಟ್ಟ ಬಂದ ಮೇಲೆ ಏರಿ ಬಂದ ಅಟ್ಟವನ್ನು

ಮರೆತು ಹೊದವರೆಷ್ಟೋ

ಹಲವು ತೆರನಾಗಿ ಸುಳಿವಿಗೆ ಸಿಕ್ಕಿ

ಅದೆಷ್ಟೋ ಜೀವಗಳು ಮರುಗುತ್ತಿರುವದೆಷ್ಟೋ


ಭಾಗ್ಯ ಸಕನಾದಗಿ 

ಜಿಲ್ಲೆ: ವಿಜಯಪುರ

ತಾಲೂಕು: ಕೊಲ್ಹಾರ 

ಗ್ರಾಮ: ಹಿರೇಗರಸಂಗಿ 

ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿ


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಬೆಗಳಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

 ಮೊ: 720427 9187/9900 37 8892

eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

No comments:

Post a Comment