Saturday, May 13, 2023

ನಾಳೆ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ: ಸಿಎಂ ಆಯ್ಕೆ ಬಗ್ಗೆ ಚರ್ಚೆ

ಬೆಂಗಳೂರು: ನಾಳೆ ಸಂಜೆ 5.30ಕ್ಕೆ ಕಾಂಗ್ರೆಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಆಯ್ಕೆಯ ಬಗ್ಗೆ ಚರ್ಚೆ ನಡೆಯಲಿದ್ದು, ಸಿ ಎಲ್ ಪಿ ನಾಯಕರು ಯಾರು ಎಂಬುದಾಗಿ ಘೋಷಣೆ ಮಾಡಲಿದೆ.

ಈ ಕುರಿತಂತೆ ಮಾಹಿತಿ ನೀಡಿದಂತ ಕರ್ನಾಟಕ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ ಪಿ) ಮೊದಲ ಸಭೆಯನ್ನು ನಾಳೆ ಸಂಜೆ 5:30 ಕ್ಕೆ ಕರೆಯಲಾಗಿದೆ' ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election 2023 ) ಕಾಂಗ್ರೆಸ್ ಪಕ್ಷ ( Congress Party ) ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಅದರಲ್ಲೂ ದಾಖಲೆ ಎನ್ನುವಂತೆ 42 ಹೊಸಬರಿಗೆ ನೀಡಿದ್ದಂತ ಕ್ಷೇತ್ರಗಳಲ್ಲಿ 35 ಮಂದಿ ಗೆಲುವು ಸಾಧಿಸಿದ್ದಾರೆ.

ಇನ್ನೂ ಬಿಜೆಪಿಯಿಂದ ಗುಜರಾತ್ ಮಾಡಲ್ ಎನ್ನುವಂತೆ 75 ಮಂದಿ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಇವರಲ್ಲಿ 19 ಜನರು ಸೋಲನ್ನು ಕಂಡಿದ್ದಾರೆ.

ಇನ್ನೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಲಿ 13 ಸಚಿವರು ಸೋಲು ಕಂಡಿದ್ದಾರೆ. ಬಳ್ಳಾರಿ ಗ್ರಾಮೀಣದಿಂದ ಸ್ಪರ್ಧಿಸಿದ್ದಂತ ಬಿ.ಶ್ರೀರಾಮುಲು ಸೋಲು ಕಂಡಿದ್ದರೇ, ಮುಧೋಳ ಕ್ಷೇತ್ರದಿಂದ ಸ್ಪರ್ಧಿಸಿದ್ದಂತ ಗೋವಿಂದ ಕಾರಜೋಳ ಸೋತಿದ್ದಾರೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆಸಿ ಮಾಧುಸ್ವಾಮಿ, ಹಿರೆಕೆರೂರು ಕ್ಷೇತ್ರದಲ್ಲಿ ಬಿ.ಸಿ ಪಾಟೀಲ್, ನವಲಗುಂದದಲ್ಲಿ ಸಿಸಿ ಪಾಟೀಲ್ ಸೇರಿದಂತೆ 17 ಮಂದಿ ಹಾಲಿ ಸಚಿವರು ಸೋಲು ಕಂಡಿದ್ದಾರೆ.

ಮತ್ತೊಂದೆಡೆ ನಾಳೆ ಸಂಜೆ 5.30ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಆಯ್ಕೆ ಬಗ್ಗೆ ಚರ್ಚೆ ಕೂಡ ನಡೆಯಲಿದ್ದು, ಸಿಎಂ ಯಾರು ಎಂಬುದಾಗಿ ಘೋಷಣೆಯನ್ನು ಮಾಡಲಾಗುತ್ತದೆ.

14-05-2023 EE DIVASA KANNADA DAILY NEWS PAPER