Saturday, May 30, 2020

ಪಟ್ಟಣಶೆಟ್ಟಿಗೆ ಎಂಎಲ್‍ಸಿ ಮಾಡುವಂತೆ ಅಭಿಯಾನ


ಈ ದಿವಸ ವಾರ್ತೆ
ವಿಜಯಪುರ: ಬಿಜೆಪಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರನ್ನು ವಿಧಾನ ಪರಿಷತ್‍ಗೆ ನಾಮನಿರ್ದೇಶನ ಮಾಡಬೇಕು ಎಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದು, ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.
ಈ ಹಿಂದೆ ಎರಡು ಬಾರಿ ವಿಜಯಪುರ ವಿಧಾನಸಭಾ ನಗರ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿ, ಒಮ್ಮೆ ಜವಳಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿರುವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂಬ ಕೂಗಿ ಕೇಳಿ ಬರುತ್ತಿದೆ.

11 ಜನರಲ್ಲಿ ಸೋಂಕು ಪತ್ತೆ, ಸೋಂಕಿತರ ಸಂಖ್ಯೆ 96 ಕ್ಕೆ ಏರಿಕೆ



ಈ ದಿವಸ ವಾರ್ತೆ 
ವಿಜಯಪುರ: ಜಿಲ್ಲೆಯಲ್ಲಿ ಶನಿವಾರ 11 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಸಾವಿಗೀಡಾಗಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 96 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದಿಂದ ಆಗಮಿಸಿದ ಕಾರ್ಮಿಕರಾದ ರೋಗಿ ಸಂಖ್ಯೆ 2784ರ 32 ವರ್ಷದ ಪುರುಷ, ರೋಗಿ ಸಂಖ್ಯೆ 2835ರ 28 ವರ್ಷದ ಪುರುಷ, ರೋಗಿ ಸಂಖ್ಯೆ 2836ರ 20 ವರ್ಷದ ಯುವಕ, ರೋಗಿ ಸಂಖ್ಯೆ 2837ರ 35 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 2838ರ 30 ವರ್ಷದ ಮಹಿಳೆ, ರೋಗಿ ಸಂಖ್ಯೆ 2839ರ 37 ವರ್ಷದ ಮಹಿಳೆ, ರೋಗಿ ಸಂಖ್ಯೆ 2840ರ 14 ವರ್ಷದ ಬಾಲಕಿ, ರೋಗಿ ಸಂಖ್ಯೆ 2841ರ 28 ವರ್ಷದ ಯುವಕ, ರೋಗಿ ಸಂಖ್ಯೆ 2842ರ 35 ವರ್ಷದ ಮಹಿಳೆ, ರೋಗಿ ಸಂಖ್ಯೆ 2843ರ 18 ವರ್ಷದ ಯುವಕ, ರೋಗಿ ಸಂಖ್ಯೆ 2844ರ 15 ವರ್ಷದ ಬಾಲಕ ಸೇರಿದಂತೆ ಒಟ್ಟು 11 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಈಗಾಗಲೇ ಸೋಂಕಿನಿಂದ ಬಳಲುತ್ತಿದ್ದವರಲ್ಲಿ 54 ಸೋಂಕಿತರು ಗುಣಮುಖಗೊಂಡು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

31-05-2020 EE DIVASA KANNADA DAILY NEWS PAPER

ವಿಜಯಪುರ: ಒಟ್ಟು 55 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ



ಈ ದಿವಸ ವಾರ್ತೆ
ವಿಜಯಪುರ : ಕೋವಿಡ್ -19 ದಿಂದ ಗುಣಮುಖರಾದ ಓರ್ವ ಮಹಿಳೆ ರೋಗಿ ಸಂಖ್ಯೆ – 2136 (28 ವರ್ಷ ಮಹಿಳೆ) ಅವರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈವರೆಗೆ ಜಿಲ್ಲೆಯ 55 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 96 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 36 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು 11 ಜನರಿಗೆ ಕೋವಿಡ್-19 ಸೋಂಕು ತಗುಲಿದ್ದು, ಮಹಾರಾಷ್ಟ್ರದ ಸಂಪರ್ಕದಿಂದ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ. 

ಅದರಂತೆ ರೋಗಿ ಸಂಖ್ಯೆ 2784 (32 ವರ್ಷ - ಪುರುಷ), ರೋಗಿ ಸಂಖ್ಯೆ 2835 (28 ವರ್ಷ - ಪುರುಷ), ರೋಗಿ ಸಂಖ್ಯೆ 2836 (20 ವರ್ಷ ಯುವಕ), ರೋಗಿ ಸಂಖ್ಯೆ 2837 (35 ವರ್ಷ ಪುರುಷ), ರೋಗಿ ಸಂಖ್ಯೆ 2838 (30 ವರ್ಷ ಮಹಿಳೆ), ರೋಗಿ ಸಂಖ್ಯೆ 2839 (37 ವರ್ಷ ಮಹಿಳೆ), ರೋಗಿ ಸಂಖ್ಯೆ 2840 (14 ವರ್ಷ ಬಾಲಕಿ), ರೋಗಿ ಸಂಖ್ಯೆ 2841 (28 ವರ್ಷ ಪುರುಷ), ರೋಗಿ ಸಂಖ್ಯೆ 2842 (35 ವರ್ಷ ಮಹಿಳೆ), ರೋಗಿ ಸಂಖ್ಯೆ 2843 (18 ವರ್ಷ ಯುವಕ), ರೋಗಿ ಸಂಖ್ಯೆ 2844 (15 ವರ್ಷ ಬಾಲಕ) ಇವರಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 27383 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಟ್ಟು 96 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 6828 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 20496 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 5 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 55 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 36 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 24511 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 14263 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 10152 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.