Tuesday, January 4, 2022

ಇಂಡಿಯಲ್ಲಿ ಕರಾಟೆ ಶಿಕ್ಷಕರ ಸಭೆ ನಾಳೆ


ಈ ದಿವಸ ವಾರ್ತೆ

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಎಲ್ಲ ಕರಾಟೆ ಶಿಕ್ಷಕರ ಸಮಾಲೋಚನಾ ಸಭೆಯನ್ನು ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜ.6 ರಂದು ಬೆಳಿಗ್ಗೆ 10ಕ್ಕೆ ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಗೃಹಗಳಲ್ಲಿರುವ ವಿದ್ಯಾರ್ಥಿನಿಯರಿಗೆ ಹಾಗೂ ಮುಂಬರುವ ವಿವಿಧ ಸರ್ಕಾರಿ ಪ್ರೌಢಶಾಲೆಗಳ 4000ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡುವ ಕುರಿತು ಸರ್ಕಾರದ ತೀರ್ಮಾನ ಕುರಿತು ಚರ್ಚಿಸಲಾಗುತ್ತದೆ. ಈ ಸಭೆಯಲ್ಲಿ ಜಿಲ್ಲೆಯ ಎಲ್ಲ ಕರಾಟೆ ಶಿಕ್ಷಕರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಬೆಂಬಲ ಕೊಡಬೇಕು. ಈ ಸಭೆಯಲ್ಲಿ ವಿಜಯಪುರದ ಹಿರಿಯ ಕರಾಟೆ ತರಬೇತುದಾರ ಹಾಗೂ ಬೋಡೋಕಾನ್ ಕರಾಟೆ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಎ.ಎಸ್.ಪಟೇಲ, ಇಂಡಿಯ ಯಮಾಗುಚ್ಚಿ ಕಿಕ್ ಬಾಕ್ಸಿಂಗ್ ಸಂಸ್ಥೆಯ ಮುಖ್ಯಸ್ಥರಾದ ಎಂ.ಎಲ್.ಚೌಧರಿ, ಉತ್ತರ ಕರ್ನಾಟಕ ಟೈಕೊಂಡೊ ಮುಖ್ಯಸ್ಥ ವಿಜಯಕುಮಾರ ರಾಠೋಡ ಹಾಗೂ ಎಲ್ಲ ತಾಲೂಕುಗಳ ಪ್ರಮುಖ ಕರಾಟೆ ತರಬೇತುದಾರರು ಪಾಲ್ಗೊಂಡು ಸಲಹೆ, ಸೂಚನೆ ನೀಡಲಿದ್ದಾರೆ. ಜಿಲ್ಲೆಯ ಎಲ್ಲ ಕರಾಟೆ ತರಬೇತಿ ನೀಡುವ ಶಿಕ್ಷಕರು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಬೇಕು ಎಂದು ಕರ್ನಾಟಕ ಕರಾಟೆ ಡೂ ಸಂಸ್ಥೆಯ ರಾಜ್ಯಾಧ್ಯಕ್ಷ ಶಿವಕುಮಾರ ಶಾರದಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.