Friday, May 19, 2023

ಹೃದಯಾಘಾತದಿಂದ ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ ನಿಧನ

ಬೆಂಗಳೂರು: ನಾರಾಯಣ ನೇತ್ರಾಲಯ ಮುಖ್ಯಸ್ಥ ಹಾಗೂ ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ (69) ಅವರು ಇಂದು ನಿಧನರಾಗುವು ಮೂಲಕ ಇನ್ನಿಲ್ಲವಾಗಿದ್ದಾರೆ.

ಇಂದು ಸಂಜೆ 6 ಗಂಟೆಯ ವೇಳೆಯಲ್ಲಿ ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ ಅವರು ನಾರಾಯಣ ನೇತ್ರಾಲಯಕ್ಕೆ ತೆರಳಿ, ರೋಗಿಗಳಿಗೆ ಕಣ್ಣಿನ ಚಿಕಿತ್ಸೆ ನೀಡಿ ಬಂದಿದ್ದರು.

ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾದಂತ ಅವರಿಗೆ, ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಯಶವಂತಪುರದಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಅಂದಹಾಗೇ, ಡಾ.ಕೆ ಭುಜಂಗಶೆಟ್ಟಿ ಅವರು, ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿ ಅವರು 1978ರಲ್ಲಿ ಎಂಬಿಬಿಎಸ್ ಮಾಡಿದರು. ಅವರು 1982ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ನೇತ್ರ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ರೆಸಿಡೆನ್ಸಿ ಮಾಡಿದರು. ಅವರು ಎಂಬತ್ತರ ದಶಕದಲ್ಲಿ ಒಂದು ಸಣ್ಣ ಚಿಕಿತ್ಸಾಲಯದಲ್ಲಿ ನೇತ್ರಶಾಸ್ತ್ರ ಅಭ್ಯಾಸವನ್ನು ಪ್ರಾರಂಭಿಸಿದರು.

ನಾರಾಯಣ ನೇತ್ರಾಲಯದಲ್ಲಿ ವಿವಿಧ ಉಪ ವಿಶೇಷತೆಗಳ ಅಭಿವೃದ್ಧಿಗೆ ಅವರು ಸಕ್ರಿಯವಾಗಿ ಪ್ರೋತ್ಸಾಹಿಸಿದ್ದಾರೆ ಮತ್ತು ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಅವರು ಒಬ್ಬ ನಿಪುಣ ಕಣ್ಣಿನ ಪೊರೆ ಮತ್ತು ಫಾಕೋಇಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. ಅವರು ನಾರಾಯಣ ನೇತ್ರಾಲಯದ ಅಧ್ಯಕ್ಷರಾಗಿದ್ದರು. ಇಂತಹ ಅವರು ಈಗ ಇನ್ನಿಲ್ಲವಾಗಿದ್ದಾರೆ.

ಅಕ್ಟೋಬರ 1 ರಿಂದ 2000 ರೂ. ನೋಟು ಚಲಾವಣೆಯಲ್ಲಿ ಸ್ಥಗಿತ



ಈ ದಿವಸ ವಾರ್ತೆ

ದೇಶದಲ್ಲಿ ನೋಟು ಅಮಾನ್ಯಕರಣದ ಬಳಿಕ ಹೊಸ ನೋಟುಗಳಾಗಿ 2000 ರೂ. ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಕ್ ಪರಿಚಯಿಸಿತ್ತು. ಇದೀಗ ಚಲಾವಣೆಯಿಂದ 2,000 ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಕ್ ಹಿಂಪಡೆಯುವ ಘೋಷಣೆ ಮಾಡಿದೆ.

ಸೆಪ್ಟೆಂಬರ್ 30ರ ಒಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ನೋಟನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ.

20-05-2023 EE DIVASA KANNADA DAILY NEWS PAPER