Friday, March 11, 2022

ವಿಜಯಪುರ ಎ.ಡಿ.ಎಲ್.ಆರ್ ಕಚೇರಿಯಲ್ಲಿನ ಭ್ರಷ್ಠಾಚರ ಕಡಿವಾಣಕ್ಕೆ ಕರ್ನಾಟಕ ಯುವಗರ್ಜನೆ ಸಂಘಟನೆ ಆಗ್ರಹ

 


ಈ ದಿವಸ ವಾರ್ತೆ

ವಿಜಯಪುರ: ವಿಜಯಪುರ ಜಿಲ್ಲೆಯ ಎ.ಡಿ.ಎಲ್.ಆರ್ ಕಚೇರಿಯಲ್ಲಿನ ಭ್ರಷ್ಠಾಚಾರವನ್ನು ಖಂಡಿಸಿ ಕರ್ನಾಟಕ ಯುವಗರ್ಜನೆ ಸಂಘಟನೆಯಿ0ದ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ ಎಂ. ಖಂಡೇಕರ ಮಾತನಾಡುತ್ತಾ ಎ.ಡಿ.ಎಲ್.ಆರ್ ಕಚೇರಿಗೆ ದಿನಂಪ್ರತಿ ನೂರಾರು ಜನರು ತಮ್ಮ ಆಸ್ತಿಗಳಿಗೆ ಸಂಬ0ಧಿಸಿದ ಕಡತಗಳನ್ನು (ಪತ್ರಗಳನ್ನು) ತೆಗೆಯುವ ಸಲುವಾಗಿ ಬರುತ್ತಿರುತ್ತಾರೆ. ಅದರಂತೆ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರು ತಮಗೆ ಸಂಬAಧಿಸಿದ ಕೆಲಸವನ್ನು ಮಾಡುವುದು ಬಿಟ್ಟು ಹಣದ ದಾಹಕ್ಕಾಗಿ ಕಚೇರಿಗೆ ಬರುವ ಜನರಿಗೆ ಅವರಿಗೆ ಬೇಕಾದ ಕಡತಗಳನ್ನು ಸರ್ಕಾರಿಯ ನಿಯಮಾನುಸಾರ ಕೊಡಬೇಕಿರುವ ದಾಖಲೆಗಳನ್ನು ಹೆಚ್ಚಿಗೆ ಹಣ ಪಡೆದುಕೊಂಡು ಸರ್ಕಾರಿ ನಿಯಮ ಉಲ್ಲಂಘಿಸಿ ಅರ್ಜಿಕೊಟ್ಟ ಒಂದು ಘಂಟೆಯಲ್ಲಿ ಅಥವಾ ಒಂದು ದಿನದಲ್ಲಿ ಅವರಿಗೆ ಬೇಕಾಗುವ ಆಸ್ತಿ ದಾಖಲೆಗಳನ್ನು ತೆಗೆದುಕೊಡುತ್ತಾರೆ. ಅದು ಅಲ್ಲದೇ ಅವರು ತೆಗೆಯುವ ದಾಖಲೆಗಳಿಗೆ ಸಹಿ ಮಾಡುವ ಅಧಿಕಾರಿಗಳು ಕೂಡಾ ಅರ್ಜಿದಾರನ ರಶೀದಿಯಲ್ಲಿ ಅರ್ಜಿ ಕೊಟ್ಟ ದಿನಾಂಕವನ್ನು ನೋಡಿಯು ಆ ದಾಖಲೆಗಳಿಗೆ ಸಹಿ ಮಾಡಿಕೊಡುವುದು ಗಮನಿಸಿದರೆ ಅಧಿಕಾರಿಗಳು ಸಹ ಈ ಗುತ್ತಿಗೆ ನೌಕರರ ಜೊತೆ ಶಾಮೀಲಾಗಿರುವುದು ಕಂಡು ಬರುತ್ತದೆ. ಈ ಕಚೇರಿಯಲ್ಲಿ ಯಾವೊಬ್ಬ ಅಧಿಕಾರಿ ಕೂಡಾ ತಮ್ಮ ಇಲಾಖೆಯ ಗುರುತಿನ ಚೀಟಿಯನ್ನು ಸಹ ತಮ್ಮ ಕೊರಳಲ್ಲಿ ಹಾಕಿಕೊಳ್ಳುವುದಿಲ್ಲ, ಹಾಗೂ ಯಾವೊಬ್ಬ ಅಧಿಕಾರಿಯ ಟೇಬಲ್‌ಗಳ ಮೇಲೆ ಅವರಿಗೆ ಸಂಬAಧಿಸಿದ ಹುದ್ದೆಯ ನಾಮಫಲಕವನ್ನು ಕೂಡಾ ಹಾಕಿರುವುದಿಲ್ಲ. ಈ ಎಲ್ಲಾ ಘಟನೆಗಳಿಗೆ ಸಂಬAಧಿಸಿದ ಹಾಗೂ ಗುತ್ತಿಗೆ ನೌಕರರು ಜನರಿಂದ ದುಡ್ಡು ತೆಗೆದುಕೊಳ್ಳುವ ಸಾಕಷ್ಟು ವಿಡಿಯೋಗಳು ನಮ್ಮಲ್ಲಿ ಇದ್ದು, ಒಂದು ವೇಳೆ ಇವರ ಮೇಲೆ ಕ್ರಮ ತೆಗೆದುಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಮಾಳು ದೊಡಮನಿ, ಪರಶುರಾಮ ಪಾರಣ್ಣವರ, ಧರೆಪ್ಪ ಗುದಳೆ, ವಿಕಾಸ ಅವದಿ, ರಾಮು ಧನ್ಯಾಳ, ಗಿರಿಶ ಬಡಿಗೇರ, ಸುನೀಲ ಬಾಗೇವಾಡಿ, ಸಂತೋಷ ಜುಮನಾಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಫುಟ್ ಬಾಲ್ ಆಟಗಾರರಿಗೆ ಒಂದು ಸುವರ್ಣವಕಾಶ

ಅಪ್ಪಾಸಾಹೇಬ ಎಂ ಪಟ್ಟಣಶೆಟ್ಟಿ, ಮಾಜಿ ಸಚಿವರು

ಈ ದಿವಸ ವಾರ್ತೆ

ವಿಜಯಪುರ: ಅಂತರ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು,ರಾಜ್ಯದ 5 ಗ್ರೂಪ್ ಮಾಡಲಾಗಿದ್ದು,ವಿಜಯಪುರ, ಯಾದಗಿರಿ, ಕಲಬುರ್ಗಿ,ಹಾಗೂ ಬೀದರ್ ಒಳಗೊಂಡಿರುತ್ತದೆ. ಕಾರಣ ವಿಜಯಪುರ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನದ ವಿಜಯಪುರ ಜಿಲ್ಲೆಯ ತಂಡಗಳು ಆಯ್ಕೆ ಮಾಡಲಾಗುತ್ತದೆ. 

ಮಾ.13 ರಂದು ಎಸ್ ಎಸ್ ಹೈಸ್ಕೂಲ್ ಮೈದಾನದಲ್ಲಿ 14 ವರ್ಷದ ಒಳಗಿನ(ಅಂಡರ್ 14ಣh)ಬಾಲಕ, ಬಾಲಕಿಯರ ತಂಡಗಳು ಹಾಗೂ 19 ವರ್ಷದ ಒಳಗಿನ (ಅಂಡರ್ 19ಣh) ಬಾಲಕ ,ಬಾಲಕಿಯರು ತಂಡಗಳು ಹಾಗೂ ಪುರುಷ ಮತ್ತು ಮಹಿಳಾ ಮುಕ್ತ ತಂಡಗಳ ಆಯ್ಕೆ ಆಗಲಿವೆ.

ನಗರದ ಎಸ್ ಎಸ್ ಹೈಸ್ಕೂಲ್ ಮೈದಾನದಲ್ಲಿ ಬೆಳಿಗ್ಗೆ 9.00 ಗಂಟೆಗೆ ಆಯ್ಕೆ ಆರಂಭಿಸಲಾಗುವುದು.ಕಾರಣ ಆಸಕ್ತಿಯುಳ್ಳ ಆಟಗಾರರು ಭಾಗವಹಿಸಿ ಎಂದು ವಿಜಯಪುರ ಜಿಲ್ಲಾ ಫುಟ್ಬಾಲ್  ಅಸೋಸಿಯೇಷನ್ ಅಧ್ಯಕ್ಷರಾದ ಅಪ್ಪಾಸಾಹೇಬ ಎಂ ಪಟ್ಟಣಶೆಟ್ಟಿ(ಮಾಜಿ ಸಚಿವರು) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


12-03-2022 EE DIVASA KANNADA DAILY NEWS PAPER