Thursday, July 20, 2023

ದೇಶಭಕ್ತಿ. ಮೂಡಿಸುವ ಸೇವಾದಳ :ನಾಗೇಶ ಡೋಣೂರ

ಈ ದಿವಸ ವಾರ್ತೆ

ವಿಜಯಪುರ:  ಮಕ್ಕಳಲ್ಲಿ, ಯುವಕರಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯ, ಶಿಸ್ತು, ಕ್ರಿಯಾಶೀಲತೆ ಪರಿಕಲ್ಪನೆ ಮೂಡಿಸುವ ಉದ್ದೇಶದಿಂದ ದಿ,ಡಾ,ನಾ,ಸು, ಹಡೀ೯ಕರ ಅವರು ಭಾರತ ಸೇವಾದಳ ಸ್ಥಾಪಿಸಿದ್ದಾರೆ ಎಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.              ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನ್ನಾಳ ಗ್ರಾಮದಲ್ಲಿ ಎಸ್,ಬಿ, ಕಲಾ ಹಾಗೂ ಕೆ, ಸಿ, ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರುಗಳ ಸಹಯೋಗದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.                         ಇಂದಿನ ಯುವಕರಲ್ಲಿ ರಾಷ್ಟ್ರಾಭಿಮಾನ ಕಡಿಮೆ ಆಗುತ್ತಿದೆ,ಆ ನಿಟ್ಟಿನಲ್ಲಿ ಭಾರತ ದೇಶದ ಪ್ರಜೆಗಳಾದ ನಾವುಗಳು ನನ್ನ ರಾಷ್ಟ್ರ, ನನ್ನ ರಾಷ್ಟ್ರಧ್ವಜ, ನನ್ನ ರಾಷ್ಟ್ರಗೀತೆಯ ಬಗ್ಗೆ ಅಭಿಮಾನ ಹೊಂದಬೇಕು ಎಂದರು. ಹಾಗೇ ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಹಾಗೂ ವಂದೇಮಾತರಂ ಕುರಿತು ಉಪನ್ಯಾಸ ನೀಡಿದರು.                               ರಾಜ್ಯ ಸಂಪನ್ಮೂಲ ಶಿಕ್ಷಕ ಸೋಮಶೇಖರ್ ರಾಠೋಡ ಬ್ಯಾಂಡ ವಾದನ ಹಾಗೂ ರಾಷ್ಟ್ರಧ್ವಜದ ಪ್ರಾಯೋಗಿಕ ತರಬೇತಿ ನೀಡಿದರು.                   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ,ಸಿ,ಪಿ ಕಾಲೇಜಿನ ಪ್ರೊಫೆಸರ್ ಡಾ, ಹೆಚ್ ಎಮ್ ಮುಜಾವರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆರಂಭದಿಂದಲೇ ದೇಶಭಕ್ತಿ, ಶಿಸ್ತು ಬೆಳೆಸಬೇಕು ಹಾಗಾದಾಗ ಮಾತ್ರ ದೇಶಾಭಿಮಾನ ಮೂಡಿಸುಲು ಸಾದ್ಯ, ದೇಶಕ್ಕೆ ವಿಪತ್ತು ಸಂಭವಿಸಿದಾಗ ಸೇವಾದಳ ಯುವಕರ ತಂಡ ದೇಶಸೇವೆ ಮಾಡುವಂತ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ನಾನು ಕೂಡಾ ಭಾರತ ಸೇವಾದಳ ತರಬೇತಿ ಪಡೆದವನಾಗಿದ್ದು ಸಂಸ್ಥೆಯ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ಧೇನೆ ಎಂದರು.         

                        ಇದೇ ಸಂದರ್ಭದಲ್ಲಿ ಕೆ,ಸಿ,ಪಿ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಪ್ರೊಫೆಸರ್ ಕ್ರಷ್ಣಾ, ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ವರ್ಗ ಹಾಗೂ ೧೦೦ ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

21-07-2023 EE DIVASA KANNADA DAILY NEWS PAPER

ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣರಿಗೆ ರಾಜ್ಯಮಟ್ಟದ ಬೆಳ್ಳಿ ಸಂಭ್ರಮ ಪ್ರಶಸ್ತಿ

               ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ

 ಈ ದಿವಸ ವಾರ್ತೆ

ವಿಜಯಪುರ: ನೇರ ನಡೆ ನುಡಿಯ ದಿಟ್ಟ ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಅವರಿಗೆ ರಾಜ್ಯ ಮಟ್ಟದ ಬೆಳ್ಳಿ ಸಂಭ್ರಮ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಾನವೀಯ ಪ್ರಜ್ಞೆ ಅಳವಡಿಸಿಕೊಂಡಿರುವ ಪರಶುರಾಮ ಶಿವಶರಣ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 

ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಅವರು ‘ಸತ್ಯಕಾಮ, ಮಧುರವಾಣಿ, ನಾಡೋಜ’ ಮುಂತಾದ ಸ್ಥಳೀಯ ದಿನ ಪತ್ರಿಕೆಯಲ್ಲಿ ಹಾಗೂ ರಾಜ್ಯ ಮಟ್ಟದ ಕನ್ನಡ ಪ್ರಭ ಪತ್ರಿಕೆ ವಿಜಯಪುರ ಜಿಲ್ಲಾ ಸಹಾಯಕ ವರದಿಗಾರನಾಗಿ, ‘ಕರ್ನಾಟಕ ಸಂಧ್ಯಾಕಾಲ’ ಪ್ರಾದೇಶಿಕ ಸಂಜೆ ದಿನ ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರನಾಗಿ, ‘ವಿಜಯವಾಣಿ’ ದಿನ ಪತ್ರಿಕೆಯಲ್ಲಿ ಉಪ ಸಂಪಾದಕನಾಗಿ, ‘ವಿಶ್ವವಾಣಿ’ ವಿಜಯಪುರ ಜಿಲ್ಲಾ ವರದಿಗಾರನಾಗಿ, ಉತ್ತರ ಕರ್ನಾಟಕ ಪ್ರಾದೇಶಿಕ ಪತ್ರಿಕೆಯಾದ ನವನಾಡು ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರನಾಗಿ, ಸದ್ಯ ರಾಜ್ಯ ಮಟ್ಟದ ಪತ್ರಿಕೆಯಾದ ಹೊಸ ದಿಗಂತ ಕನ್ನಡ ದಿನ ಪತ್ರಿಕೆಯಲ್ಲಿ ವಿಜಯಪುರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆಕಾಶವಾಣಿ ಕೇಂದ್ರದಲ್ಲಿ ವರದಿ ವಾಚನ ಸೇರಿದಂತೆ ಶೈಕ್ಷಣಿಕ, ರಾಜಕೀಯ, ಕೃಷಿ, ಸಾಮಾಜಿಕ ಇತರೆ ಕಾರ್ಯಕ್ರಮಗಳ ಬರವಣಿಗೆಯಲ್ಲಿ ಪ್ರಭುತ್ವ ಸಾಧಿಸಿದ್ದಾರೆ.

ಈಗಾಗಲೇ ಇವರು ಜೀವ ಪೀಠ ಕವನ ಸಂಕಲನ, ರಾಣಿ ಬಗೀಚ್ ಕಥಾ ಸಂಕಲನ, ವಾರನೋಟ ಅಂಕಣ ಸಂಕಲನ, ನೀಲಿಮಿಂಚು ಕವನ ಸಂಕಲನ ಕೃತಿಗಳು ಪ್ರಕಟವಾಗಿವೆ.

ವಿಜಯಪುರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಹಮ್ಮಿಕೋಂಡ ರಾಷ್ಟçಕವಿ ಕುವೆಂಪು ಅವರ ಜನ್ಮ ದಿನಾಚರಣೆ ಹಿನ್ನೆಲೆ ರಾಷ್ಟçಕವಿ ಕುವೆಂಪು ಅವರ ಕುರಿತು ಉಪನ್ಯಾಸ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕೂಡ ಉಪನ್ಯಾಸ ನೀಡಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಈಗಾಗಲೇ ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಅವರ ವಿರಚಿತ ಜೀವ ಪೀಠ ಕವನ ಸಂಕಲನಕ್ಕೆ ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ‘ಅರಳು ಪ್ರಶಸ್ತಿ’ ಲಭಿಸಿದೆ. ‘ನೀಲಿಮಿಂಚು’ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸಹಾಯಧನದಡಿಯಲ್ಲಿ ಈ ಕವನ ಸಂಕಲನ ಪ್ರಕಟಗೊಂಡಿದೆ.

ಅದರಂತೆ ಜೀವಪೀಠ, ರಾಣಿ ಬಗೀಚ, ವಾರನೋಟ ಕೊಲ್ಕತ್ತಾ, ಚೈನೈ ಜೀವಪೀಠ, ರಾಣಿ ಬಗೀಚ, ವಾರನೋಟ ಪುಸ್ತಕಗಳು ಗ್ರಂಥಾಲಯದಲ್ಲಿ ಇವರ ಪುಸ್ತಕಗಳು ಆಯ್ಕೆಯಾಗಿವೆ. ಇವರ ಈ ಮಹತ್ತರ ಮಾದರಿ ಸಾಧನೆಗಳನ್ನು ಗುರುತಿಸಿ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ, ಬೆಳ್ಳಿ ಸಂಭ್ರಮದ ನಿಮಿತ್ಯವಾಗಿ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಹಾಗೂ 30 -2023 ರಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಪ್ರಕಟಣೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.