Monday, October 9, 2023

ಬಾಗೇವಾಡಿ ತಾ.ಪಂ.ಗೆ ಸಿಇಓ ರಾಹುಲ್ ಶಿಂಧೆ ಭೇಟಿ ಸಮರ್ಪಕವಾಗಿ ಕಾರ್ಯನಿರ್ವಹಣೆಗೆ ಸೂಚನೆ

ವಿಜಯಪುರ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಜಿಲ್ಲೆಯ ಬಸವನಬಾಗೇವಾತಿ ತಾಲೂಕಾ ಪಂಚಾಯತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಸೋಮವಾರ ತಾಲೂಕಾ ಪಂಚಾಯತಿಯ ವಿವಿಧ ವಿಭಾಗಗಳ ಪರಿಶೀಲನೆ ನಡೆಸಿದ ಅವರು, ಕಚೇರಿಗೆ ವಿವಿಧ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಕಾರ್ಯಕ್ಕಾಗಿ ವಿಳಂಭ ಧೋರಣೆ ಅನುಸರಿಸದೇ ನಿಗದಿತ ಕಾಲಾವಧಿಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಎಲ್ಲ ಅಧಿಕಾರಿ-ಸಿಬ್ಬಂದಿಗಳು ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. 

ನಂತರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಅವರು,  ಆಸ್ಪತ್ರೆಯ ವಿವಿಧ ವಿಭಾಗಗಳಾದ ಪ್ರಯೋಗಾಲಯ, ರಕ್ತ ಶೇಖರಣೆ ಕೇಂದ್ರ, ಡಯಾಲಸಿಶ, ನೋಂದಣಿ ವಿಭಾಗ, ಆಪರೇಷನ್ ಕೊಠಡಿ, ಚಿಕ್ಕಮಕ್ಕಳ ಪ್ರಸೂತಿ ಕೇಂದ್ರ, ಹೀಗೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮತ್ತು ಆಸ್ಪತ್ರೆಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳ ಕುರಿತು ಪಂಚಾಯತ ರಾಜ್ ಇಂಜಿನಿಯರ ವಿಭಾಗಕ್ಕೆ ಬೇಡಿಕೆ ಸಲ್ಲಿಸುವಂತೆ ತಾಲೂಕ ಅರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿ ನೋಂದಣಿಯಾದ ರೋಗಿಗಳ ಜೊತೆ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ದಾಖಲಾದ ರೋಗಿಗಳಿಂದ ಮತ್ತು ರೋಗಿಗಳ ಪಾಲಕರೊಡನೆ ಚರ್ಚೆ ನಡೆಸಿ ಮಾಹಿತಿಯನ್ನು ಪಡೆದುಕೊಂಡರು. ಹಾಗೂ ಆರೋಗ್ಯ ಸಿಬ್ಬಂದಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ  ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ. ಯುವರಾಜ ಹನಗಂಡಿ,  ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್ ಎಸ್ ಒತಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ

 ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಡೆಂಗೀ ರಥ ಅಭಿಯಾನಕ್ಕೆ ಚಾಲನೆ

ವಿಜಯಪುರ : ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾದಿಕಾರಿಗಳ ಕಾರ್ಯಾಲಯ ವಿಜಯಪುರ ವತಿಯಿಂದ ಆಯೊಜಿಸಲಾಗಿರುವ ಡೆಂಗೀ ರಥ ಅಭಿಯಾನಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡೆಂಗೀ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಅತಿಮುಖ್ಯವಾಗಿದೆ. ಸಾರ್ವಜನಿಕರೂ ಸಹ ತಮ್ಮ ಅಕ್ಕ-ಪಕ್ಕದ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.  ಡೆಂಗೀ ರೋಗ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು  ಕೈಗೊಳ್ಳಬೇಕು ರೋಗ ಕುರಿತು  ಜಾಗೃತಿ ಮೂಡಿಸಲು ರಥ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ಸಂಚರಿಸಿ ಈ ರಥ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು. 

ಜಿಲ್ಲಾ ಆರೋಗ್ಯಾಧಿಕಾರಿಗಳಾದ ಬಸವರಾಜ ಹುಬ್ಬಳ್ಳಿ ಮಾತನಾಡಿ ಡೆಂಗೀ ಜಾಗೃತಿ  ರಥವು ಜಿಲ್ಲೆಯ ಎಲ್ಲ ಕಡೆ ಸಂಚರಿಸಿ ಡೆಂಗೀ ರೋಗ ಲಕ್ಷಣಗಳು ರೋಗ ಬರುವ ಕುರಿತು ರೋಗ ಬಾರದಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಲಿದೆ  ಸಾರ್ವಜನಿಕರು ಇದರ ಕುರಿತು ತಿಳಿದುಕೊಂಡು ಡೆಂಗೀ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕರೆ ನೀಡಿದರು.

ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾದಿಕಾರಿಗಳಾದ ಜೆಬುನ್ನಿಸಾಬೇಗಂ ಬೀಳಗಿ ಮಾತನಾಡಿ ಡೆಂಗೀ ರಥ ಅಭಿಯಾನ ಜಿಲ್ಲೆಯಾದ್ಯಂತ ಸಂಚರಿಸಿ ಆರೋಗ್ಯ  ಶಿಕ್ಷಣ ನೀಡಲು ಕ್ರಿಯಾ ಯೋಜನೆ ತಯಾರಿಸಲಾಗಿದೆ ಸಾರ್ವಜನಿಕರು ಮನೆ ಹಾಗೂ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಲು ಹಾಗೂ ನೀರಿನ ಸಂಗ್ರಹಕಾರಕಗಳ ಮೇಲೆ ಸೊಳ್ಳೆಗಳು ಮೊಟ್ಟಯಿಡದಂತೆ ಭದ್ರವಾಗಿ ಮುಚ್ಚಳದಿಂದ ಮುಚ್ಚುವಂತೆ ಹಾಗೂ ವಾರಕ್ಕೊಮ್ಮೆ ನೀರಿನ ಸಂಗ್ರಹಕಾರಕಗಳನ್ನು ಸ್ವಚ್ಛವಾಗಿ ತಿಕ್ಕಿ ತೊಳೆದು ನೀರನ್ನು ತುಂಬುವ ಮೂಲಕ ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂದು ಹೇಳಿದರು. 

          ಜಿಲ್ಲಾ ಆರ ಸಿ ಹೆಚ್ ಅಧಿಕಾರಿಗಳಾದ ಕೆ.ಡಿ.ಗುಂಡಬಾವಡಿ  ಜಿಲ್ಲಾ   ಸರ್ವೆಕ್ಷಣಾಧಿಕಾರಿಗಳಾದ ಡಾ. ಕವಿತಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ವರಿ ಗೊಲಗೆರಿ ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಸಂಪತ ಗುಣಾರಿ ತಾಲೂಕಾ ಆರೋಗ್ಯಾಧಿಕಾರಿ ಪಿ.ಎ.ಹಿಟ್ನಳ್ಳಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ ಎಂ ಕೊಲೂರ ಉಪ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುರೇಶ ಹೊಸಮನಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ

 ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಅ.11ರಂದು ಲೋಕಾಯುಕ್ತ ಅಧಿಕಾರಿಗಳಿಂದ ದೂರು ಸ್ವೀಕಾರ

ವಿಜಯಪುರ  : ವಿಜಪುರ ಲೋಕಾಯುಕ್ತ ಪೋಲಿಸ್ ಅಧಿಕಾರಿಗಳಿಂದ ಅಕ್ಟೋಬರ್ 11 ರಂದು  ವಿಜಯಪುರ ಜಿಲ್ಲೆಯ ಚಡಚಣ ತಾಲೂಕಾ ಕೇಂದ್ರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.  

ಅಂದು ಬೆಳಿಗ್ಗೆ 10-30 ಗಂಟೆಯಿಂದ ಪೋಲಿಸ್ ಅಧೀಕ್ಷಕರು (ಮೊ:9364062528), ಪೋಲಿಸ್ ಉಪಾಧೀಕ್ಷಕರು (ಮೊ:9364062557), ಪೋಲಿಸ್ ಇನ್ಸಪೆಕ್ಟರ್-1 (ಮೊ:9364062640), ಪೋಲಿಸ್ ಇನ್ಸಪೆಕ್ಟರ್-2(ಮೊ:9364062639) ಚಡಚಣ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಸಾರ್ವಜನಿಕರಿಮದ ಭರ್ತಿ ಮಾಡಿದ ಮತ್ತು ನೋಟರಿನಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. 

ಸರ್ಕಾರಿ ಕಚೇರಿಗಳಲ್ಲಿ ಅಧಿಕೃತವಾಗಿ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಲಂಚದ ಬೇಡಿಕೆ, ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ-ನೌಕರರ ವಿರುದ್ದ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದ್ದು, ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಸ್ಥಳೀಐ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು.  ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಸಂಪಾದನೆ ಸರಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ಹಾಗೂ ಇತರೆ ಯಾವುದೇ ರೀತಿಯ ಭ್ರಷ್ಟಾಚಾರ ದೂರುಗಳಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಲೋಕಾಯುಕ್ತ ಕಚೇರಿ ದೂ: 08352-255333, 257786, 295074 ಸಂಖ್ಯೆಗೆ ಸಂಪರ್ಕಿಸುವಂತೆ ಕರ್ನಾಟಕ ಲೋಕಾಯುಕ್ತ ವಿಜಯಪುರ ಪೋಲಿಸ್ ಅಧೀಕ್ಷಕರು ತಿಳಿಸಿದ್ದಾರೆ. 

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
 ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಮುದ್ರಕರು ಹೊಸದಾಖಲೆ ನಿರ್ಮಿಸಬೇಕು : ಚಿದಾನಂದ ವಾಲಿ

ಈ ದಿವಸ ವಾರ್ತೆ

ವಿಜಯಪುರ: ಇತ್ತೀಚಿನ ದಿನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಚಟುವಟಿಕೆ ನಡೆಯುತ್ತಿದೆ. ಅದು ಪ್ರಿಂಟಿಂಗ್ ಕ್ಷೇತ್ರದಲ್ಲಿಯೂ ಚಾಲ್ತಿಯಲ್ಲಿದೆ. ಇದರ ನಿಮಿತ್ಯವಾಗಿ ನಾವೆಲ್ಲರೂ ಸೇರಿಕೊಂಡು ಮುದ್ರಣ ಕ್ಷೇತ್ರದಲ್ಲಿ ಹೊಸದೊಂದು ದಾಖಲೆಯತ್ತ ಓಡುವುದು ಅನಿವಾರ್ಯವಾಗಿದೆ ಎಂದು ಪ್ರಿಂಟಿಂಗ್ ಪ್ರೆಸ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಚಿದಾನಂದ ವಾಲಿ ಹೇಳಿದರು.

ನಗರದ ಖಾಸಗಿ ಹೊಟೇಲ್‍ವೊಂದರಲ್ಲಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ವರ್ಕರ್ಸ್ ಅಸೋಸಿಯೇಷನ್ ವಿಜಯಪುರ (ರಿ) ಹಾಗೂ ಎ.ಎಸ್. ಡಿಜಿಟಲ್ ಪ್ರಿಂಟಿಂಗ್ ಸಲ್ಯೂಸೆನ್ಸ್ ವತಿಯಿಂದ ಥಿಂಕ್ ಡಿಜಟಲ್ ಯೋಜನೆಯಡಿಯಲ್ಲಿ ಡಿಜಟಲ್ ಪ್ರಿಂಟ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದಲಾಗುತ್ತಿರುವ ಭೌತಿಕ ಬದುಕು. ಸಂಘರ್ಷಕ್ಕೊಳಗಾಗಿದ್ದು, ಇದರಿಂದ ಹೊರಬರಬೇಕಾದರೆ, ಡಿಜಟಲ್ ತುಂಬಾ ಮುಖ್ಯ ಪಾತ್ರವಹಿಸುತ್ತದೆ. ನಾವು ಪಸ್ತುದ ದಿನಗಳಿಗೆ ಅಪಡೇಟ್ ಆಗಬೇಕಿದೆ ಎಂದರು.

ಈ ಸಂದರ್ಭ ಆನಂದ ಬಾಗಾದಿ ಮಾತನಾಡಿ, ಮುದ್ರಣ ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಉದ್ಯೋಗ ಮಾಡುತ್ತ, ಹೊಸಬರಿಗೆ ಅವಕಾಶಗಳನ್ನು ನೀಡಲು ಮುಂದಾಗಬೇಕೆಂದರು ಎಂದರು.

ಅಲ್ತಾಫ್ ಹುಸೇನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಇದೇ ಸಂದರ್ಭ ಎ.ಎಸ್. ಡಿಜಿಟಲ್ ಪ್ರಿಂಟಿಂಗ್ ಸೆಲ್ಯೂಷನ್ ಮಾಲೀಕರಾದ ಅಬ್ದುಲ್ ಲತಿಪ್, ಖಜಾಂಚಿ ಹನೀಫ್ ಮುಲ್ಲಾ, ನಿರ್ದೇಶಕರುಗಳಾದ ನಾಗರಾಜ ಬಿಸನಾಳ, ನಬಿ ಮಕಾಂದಾರ, ಉಮೇಶ ಶಿವಶರಣ, ಈರಣ್ಣ ರೇಶ್ಮಿ, ಶ್ರೀಮಂತ ಬೂದಿಹಾಳ, ಮಾನಿಂಗಪ್ಪ ಗುಬ್ಬಿ, ಕಿರಣ ಅಲಿಯಾಬಾದ, ರಾಜಶೇಖರ ಮುತ್ತಿನಪೆಂಡಿಮಠ, ಆನಂದ ಪಾರಜಣ್ಣವರ, ಮಲ್ಲು ಆಲಗೂರ, ವಿರೇಶ ಗಂಗಾವತಿ, ಮಾಂತಯ್ಯ ಹಿರೇಮಠ, ಬಸವರಾಜ ಗೊಳಸಂಗಿಮಠ, ಬಸವರಾಜ ಬಿಜ್ಜರಗಿ, ವೀರಣ್ಣ ಸಜ್ಜನ, ರಾಹುಲ ಟೋಣೆ, ರಾಘು ಕುಲಕರ್ಣಿ, ಅನ್ವರ ಆಲಮೇಲ, ಶಣ್ಣೀರ ಬೇಪಾರಿ, ಮಾಜೀದ ಕೂಡಗಿ, ಉಬೇದ ಜಾಹಗೀರದಾರ ಮುಂತಾದ ಪ್ರಿಂಟಿಂಗ್ ಪ್ರಸ್ ಮಾಲೀಕರು ಉಪಸ್ಥಿತರಿದ್ದರು.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
 ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

ಜಾಗತಿಕ ಶ್ರೇಷ್ಠ ವಿಜ್ಞಾನಿಗಳ ಪಟ್ಟಿ: ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಈರಯ್ಯ ಅವರಿಗೆ ಸ್ಥಾನ

 ಈ ದಿವಸ ವಾರ್ತೆ

ಬೆಂಗಳೂರು: 2023 ನೇ ವರ್ಷದ ವಿಶ್ವ ಅಗ್ರಮಾನ್ಯ ಶೇ. 2ರಷ್ಟು  ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಈರಯ್ಯ ಅವರನ್ನು ಆಯ್ಕೆಮಾಡಲಾಗಿದೆ.

ಅಮೆರಿಕದ ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾಲಯ ಮತ್ತು ನೆದರ್ ಲ್ಯಾಂಡಿನ ಎಲ್ಸೆ ವಿಯರ್ ಪ್ರಕಾಶನ ಸಂಸ್ಥೆಯ 2023 ನೇ ಜಾಗತಿಕ ಉನ್ನತ ಮಟ್ಟದ ಶೇ. 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ (Glass Science and Technology) ಗಾಜಿನ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿನ ಸಂಶೋಧನೆಗಾಗಿ  ಬಿಡುಗಡೆ ಮಾಡಿರುವ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗುರುತಿಸಿ ಕೊಂಡಿದ್ದಾರೆ.

ಪ್ರತಿವರ್ಷ ಸೈಟೇಷನ್ ಇಂಡೆಕ್ಸ್‌ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಶ್ರೇಷ್ಠ ಶೇ. 2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ.

ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಈರಯ್ಯ ಅವರು ಅಂತರಾಷ್ಟ್ರೀಯವಾಗಿ ಪ್ರಕಟವಾದ 145 ಸಂಶೋಧನಾ ಪ್ರಕಟಣೆಗಳು,1653 ಸೈಟೇಷನ್, 24 ಹೆಚ್ ಇಂಡೆಕ್ಸ್), 37 ಐ 10 ಇಂಡೆಕ್ಸ್ (i 10-index), (Glass Science and Technology) ಗಾಜಿನ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇವರು 145 ಸಂಶೋಧನಾ ಲೇಖನಗಳನ್ನು 

ಪರಿಶೀಲಿಸಿದ ನಂತರ ಜಾಗತಿಕ ಶ್ರೇಷ್ಠದ ಶೇ.2ರಷ್ಟು ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸೇರಿರುವುದು ವಿಶೇಷವಾಗಿದೆ.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ:
ಈ ದಿವಸ ಕನ್ನಡ ದಿನ ಪತ್ರಿಕೆ
 ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

10-10-2023 EE DIVASA KANNADA DAILY NEWS PAPER

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಪೀರಬಾಶಾ ಗಚ್ಚಿನಮಹಲ್ ನೇಮಕ

ಈ ದಿವಸ ವಾರ್ತೆ

ವಿಜಯಪುರ: ಪೀರಬಾಶಾ ಶಮಶೋದ್ದೀನ ಗಚ್ಚಿನಮಹಲ್ ಅವರನ್ನು ವಿಜಯಪುರ ಜಿಲ್ಲಾ ಜನತಾದಳ (ಜಾತ್ಯಾತೀತ) ಪಕ್ಷದ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜನತಾದಳ (ಜಾತ್ಯಾತೀತ) ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿಯವರ ಸೂಚನೆ ಮೇರೆಗೆ ನೇಮಕಮಾಡಿ ಆದೇಶ ಹೊರಡಿಸಿದೆ.

ಕೂಡಲೇ ತಾವು ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ದರಾಗಿ, ಪಕ್ಷದ ಎಲ್ಲ ಮುಖಂಡರನ್ನು ಹಾಗೂ ಅಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವಿಜಯಪುರ ಜಿಲ್ಲೆಯ ಜನತಾದಳ (ಜಾತ್ಯಾತೀತ) ವಿಭಾಗವನ್ನು ಪರಿಣಾಮಕಾರಿಯಾಗಿ ಸಂಘಟಿಸಿ, ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಕಲ್ಲಪ್ಪ ಶಿವಶರಣ
ವ್ಯವಸ್ಥಾಪಕ ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
 ಮೊ: 7204279187/     
          9900378892

ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.