Thursday, January 4, 2024

ನೂತನ ಶಾಲಾ ಸುದಾರಣ ಸಮಿತಿ ರಚನೆ


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ 

ವಿಜಯಪುರ:

ಮೋರಟಗಿ ಸ್ಥಳಿಯ ಗ್ರಾಮದ ಜನತಾ ಕಾಲೂನಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಸುದಾರಣ ಸಮಿತಿ ರಚನೆ ಮಾಡಲಾಯಿತು.
ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಹತ್ತು ಹಲವು ವಿಧಗಳಲ್ಲಿ ಅನುದಾನ ಒದಗಿಸಿ ಮಕ್ಕಳ ಕಲಿಕಾ ವೃತ್ತಿಗೆ ಸಹಕಾರ ನೀಡುತ್ತಿದ್ದು ಇದನ್ನು ಸದ್ಭಳಕೆ ಮಾಡಲು ಸರಕಾರಿ ಶಾಲೆಯಲ್ಲಿ ವಿದ್ಯ ಕಲಿಯುವಂತ ಮಕ್ಕಳ ಪಾಲಕರು ಉಸ್ತುವಾರಿ ವಹಿಸಿದರೆ ಸರಕಾರದ ಕನಸು ನನಸಾಗುವುದು ಎಂದು ಮಕ್ಕಳ ಪಾಲಕರಿಗೆ ಅಧೀಕಾರ ಕೊಡುವಂತ ದಿಟ್ಟ ನಿರ್ಧಾರ ಕೈಗೊಂಡಿತು.ಅದರಂತೆ ಜನತಾ ಕಾಲೂನಿ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾಗಿ ಬಸವರಾಜ ಸುಂಟ್ಯಾಣ (ಮ್ಯಾಗೇರಿ) ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸಂತೋಷ ಕೆರಿಗೊಂಡ ಅವಿರೋಧವಾಗಿ ಆಯ್ಕೆಯಾದರು.
ಶಿಕ್ಷಣ ಸಂಯೋಜಕರಾದ ರವಿ ಬಿರಾದಾರ ಮುಖ್ಯಗುರುಗಳಾದ ವೈಜನಾಥ ಅಂಕಲಗಿ ಅರುಣಕುಮಾರ ಸಿಂಗೆ ರವಿಕಾಂತ ನಡುವಿನಕೆರಿ ಸಹ ಶಿಕ್ಷಕರಾದ ಶ್ರೀಶೈಲ ನಾಟೀಕಾರ ಸೇರಿದಂತೆ ಹಲವರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

05-01-2024 EE DIVASA KANNADA DAILY NEWS PAPER

ಶತಕಂಠ ಗಾಯನ ಕಾರ್ಯಕ್ರಮ ಅದ್ಧೂರಿ ಯಶಸ್ವಿ

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ 

ವಿಜಯಪುರ: ನೂರುಕಂಠಗಳಲ್ಲಿ ಒಂದೇ ಧ್ವನಿಯಾಗಿ ಗಾಯನ ಹೊರಹೊಮ್ಮುತ್ತಿದ್ದರೆ ಕೇಳಲು ಮಧುರವೋ ಮಧುರ. ಅಂತಹ ಒಂದು ಮಾಧುರ್ಯ ಪೂರ್ಣವಾದ ಶತಕಂಠ ಗಾಯನ ಕಾರ್ಯಕ್ರಮ ನಡೆದದ್ದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರದ ಆಡಳಿತ ಭವನದ ಎದುರಿನಲ್ಲಿ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳು ಸೇರಿಕೊಂಡು ಸಂಗೀತ ವಿಭಾಗದ ಮುಂದಾಳತ್ವದಲ್ಲಿ ಶತಕಂಠ ಗಾಯನ ಎಂಬ ನೂರು ವಿದ್ಯಾರ್ಥಿನಿಯರ ಗಾಯನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಆರಂಭದಲ್ಲಿ ವಿಶ್ವವಿದ್ಯಾನಿಲಯದ ಧ್ಯೇಯಗೀತೆಯಾದ ನಾವೆಲ್ಲರೂ ಒಂದೇ ಜಾತಿ ಎಂಬ ಗೀತೆಯನ್ನು ಮಧುರವಾಗಿ ಪ್ರಸ್ತುತಪಡಿಸಿದರು. 

ನಂತರ ಬಸವಣ್ಣನವರ ವಚನವಾದ ದಯವಿಲ್ಲದ ಧರ್ಮ ಅದಾವುದಯ್ಯ ಎಂದು ಹಾಡಿದರು. ಇತನಿ ಶಕ್ತಿ ಹಮೆ ದೇನಾ ದಾತಾ ಎಂಬ ಜಾಗೃತ ಗೀತೆಯನ್ನು ಹಾಡುವುದರ ಮೂಲಕ ನೆರೆದಿದ್ದ ಕಲಾಎಸಿಕರ ಪ್ರಶಂಸೆಗೆ ಒಳಗಾದರು. ಕೊನೆಯದಾಗಿ ವಿಶ್ವ ವಿನೂತನ ವಿದ್ಯಾ ಚೇತನ ಎಂಬ ಗೀತೆಯನ್ನು ಹಾಡುವುದರ ಮೂಲಕ ದೂರದ ಊರಿನಿಂದ ಆಗಮಿಸಿದ್ದ ನ್ಯಾಕ್ ಸದಸ್ಯರ ಪ್ರಶಂಸೆಗೆ ಒಳಗಾದರು. ಇದಕ್ಕೆ ತರಬೇತಿಯನ್ನು ಡಾ. ಗಂಗಾಧರ ಸೋನಾರ್ ಅವರ ನೇತೃತ್ವದಲ್ಲಿ ಡಾ. ಹರೀಶ ಹೆಗಡೆ, ಶ್ರೀಮತಿ ಸಂಗೀತಾ ಹಿರೇಮಠ ಮತ್ತು ಶ್ರೀ ವಿನಯ್ ಕುಲಕರ್ಣಿ ಅವರು ನೀಡಿದ್ದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಬಿ ಕೆ ತುಳಸಿಮಾಲಾ, ಕುಲಸಚಿವರಾದ ಎಸ್ ಎಸ್ ಸೋಮನಾಳಕ, ಕುಲಸಚಿವ ಮೌಲ್ಯಮಾಪನ, ಆರ್ಥಿಕ ಅಧಿಕಾರಿಗಳು, ಡೀನರು, ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು ಮತ್ತು ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.