Wednesday, June 17, 2020

18-06-2020 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಬುಧವಾರ ಯಾವುದೇ ಕೋವಿಡ್-೧೯ ಪಾಸಿಟಿವ್ ದೃಢಪಟ್ಟಿಲ್ಲ : ೧೪ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ


ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೩೬ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ ೩೪ ರೋಗಿಗಳು ಕೋವಿಡ್-೧೯ ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ.  ಯಾಡ್ವುhದೇ ಕೋವಿಡ್-೧೯ ಪಾಸಿಟಿವ್ ಪ್ರಕರಣ ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಅದರಂತೆ ರೋಗಿ ಸಂಖ್ಯೆ ೧೧೮೪ (೨೦ ವರ್ಷದ ಹೆಣ್ಣು), ರೋಗಿ ಸಂಖ್ಯೆ ೩೯೨೭ (೭೦ ವರ್ಷದ ಹೆಣ್ಣು), ರೋಗಿ ಸಂಖ್ಯೆ ೪೮೩೩ (೫೮ ವರ್ಷದ ಹೆಣ್ಣು), ರೋಗಿ ಸಂಖ್ಯೆ ೫೦೧೧ (೩೦ ವರ್ಷದ ಗಂಡು), ರೋಗಿ ಸಂಖ್ಯೆ ೫೦೧೩ (೪೨ ವರ್ಷದ ಹೆಣ್ಣು), ರೋಗಿ ಸಂಖ್ಯೆ ೫೪೨೭ (೮ ವರ್ಷದ ಬಾಲಕಿ), ರೋಗಿ ಸಂಖ್ಯೆ ೫೪೨೮ (೨೮ ವರ್ಷದ ಹೆಣ್ಣು), ರೋಗಿ ಸಂಖ್ಯೆ ೫೪೨೯ (೨೨ ವರ್ಷದ ಹೆಣ್ಣು), ರೋಗಿ ಸಂಖ್ಯೆ ೫೯೮೪ (೨೫ ವರ್ಷದ ಹೆಣ್ಣು), ರೋಗಿ ಸಂಖ್ಯೆ ೬೧೧೪ (೩೫ ವರ್ಷದ ಗಂಡು), ರೋಗಿ ಸಂಖ್ಯೆ ೪೫೯೮ (೨೬ ವರ್ಷದ ಹೆಣ್ಣು), ರೋಗಿ ಸಂಖ್ಯೆ ೪೮೧೧ (೩೬ ವರ್ಷದ ಗಂಡು), ರೋಗಿ ಸಂಖ್ಯೆ ೫೯೭೭ (೨೫ ವರ್ಷದ ಗಂಡು), ರೋಗಿ ಸಂಖ್ಯೆ ೫೯೭೮ (೨೪ ವರ್ಷದ ಗಂಡು), ಸೋಂಕಿನಿAದ ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
 
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ೩೦೩೬೧ ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು ೨೩೬ ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. ೯೩೦೦ ಜನರು ೨೮ ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. ೨೦೮೫೯ ಜನರು (೧ ರಿಂದ ೨೮ ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು ೬ ಜನ ಕೋವಿಡ್-೧೯ ರೋಗಿಗಳು ಮೃತಪಟ್ಟಿದ್ದಾರೆ. ೧೯೬ ಜನರು ಕೋವಿಡ್-೧೯ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ೩೪ ಜನರು ಆಸ್ಪತ್ರೆಯಲ್ಲಿರುವ ಕೋವಿಡ್-೧೯ ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ ೨೬೯೪೨ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, ೨೬೫೫೮ ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ ೧೪೮ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

25 ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಕ, ಸ್ಯಾನಿಟೈಜರ್ ವಿತರಿಸಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ



ಈ ದಿವಸ ವಾರ್ತೆ
ಮುದ್ದೇಬಿಹಾಳ:
ಬುಧವಾರದಂದು ಮುದ್ದೇಬಿಹಾಳ ಪಟ್ಟಣದ ದಾಸೋಹ ನಿಲಯದಲ್ಲಿ   ದೇವರಹಿಪ್ಪರಗಿ ಕ್ಷೇತ್ರದ ಬಸವನಬಾಗೇವಾಡಿ ತಾಲೂಕಿನ ವ್ಯಾಪ್ತಿ, ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷಾ ಕೇಂದ್ರಗಳ ಮುಖ್ಯೋಪಾಧ್ಯಾಯರು ಹಾಗೂ ಮುಖ್ಯಸ್ಥರ  ಸಭೆ ನಡೆಸಿ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮಾಸ್ಕ ಮತ್ತು 100 ಎಮ್‌ಎಲ್ ಸ್ಯಾನಿಟೈಜರ್‌ವನ್ನು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಶಾಲಾ ಆಡಳಿತಾಧಿಕಾರಿಗಳಿಗೆ ವಿತರಿಸಿದರು.


ದಿವ್ಯ ಸಾನ್ನಿಧ್ಯವನ್ನು ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು.
ಶಾಸಕ ಎ.ಎಸ್. ಪಾಟೀಲ ಅವರ ತಂದೆಯವರಾದ ಸಂಗನಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸೋಮನಗೌಡ ಪಾಟೀಲ, ಬಿ.ಇ.ಓ ರೇಣುಕಾ ಕಲ್ಬುರ್ಗಿ, ಪಿ.ಎಸ್.ಐ. ಮಲ್ಲಪ್ಪ ಮಡ್ಡಿ, ಶಂಕರಗೌಡ ಹಿರೇಗೌಡ, ಗೋಪಾಲ ಹೂಗಾರ, ಸ್ಕೌಟ್ಸ್ & ಗೌಡ್ಸ್ ಉಪಾಧ್ಯಕ್ಷರಾದ ಜಿ.ಎಚ್.ಚವ್ಹಾಣ, ಎಲ್.ಕೆ.ನದಾಫ್, ಎಸ್.ಆರ್. ಸುಲ್ಪಿ, ಎಸ್.ಜಿ. ಮುತ್ತಪ್ಪನವರ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಿದ್ದಮ್ಮ ಸಿದರಡ್ಡಿ, ಯು.ಬಿ.ಧರಿಕಾರ, ಎ.ಎಸ್. ಬಾಗವಾನ, ಎಚ್.ಎಲ್.ಕರಂಡೆ, ಪ್ರೊ. ಎಸ್.ಎಸ್.ಹೂಗಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾ.ನಿ.ಪ. ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಡಿ.ಬಿ.ವಡವಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೋನಾ ಮಹಾಮಾರಿ ರೋಗದ ಮಧ್ಯೆಯೇ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಸಕ ನಡಹಳ್ಳಿ ಅವರು ಇಡೀ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾಸ್ಕ್, ಸಾನಿಟೈಜರ್ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಎ.ಎಸ್. ಬಾಗವಾನ ಪ್ರಾರ್ಥಿಸಿದರು. ಜಿ.ಎಚ್. ಚವ್ಹಾಣ ಸ್ವಾಗತಿಸಿದರು. ಗೋಪಾಲ ಹೂಗಾರ ನಿರೂಪಿಸಿದರು. 

ಕೃಷಿ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ಕಾಲುಜಾರಿ ಬಿದ್ದು, ಮೃತಪಟ್ಟ ಯುವಕ


ಈ ದಿವಸ ವಾರ್ತೆ
ವಿಜಯಪುರ: ಕೃಷಿ ಹೊಂಡದಲ್ಲಿ ಯುವಕನೊಬ್ಬ ಬಿದ್ದು ಸಾವಿಗೀಡಾದ ಘಟನೆ ಜಿಲ್ಲೆಯ ನಿಡಗುಂದಿ ಸಮೀಪದ ಹೆಬ್ಬಾಳ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಮೃತನನ್ನು ಹೆಬ್ಬಾಳ ಗ್ರಾಮದ ಹುಸನಪ್ಪ ಹನುಮಂತ ತಳವಾರ (24) ಎಂದು ಗುರುತಿಸಲಾಗಿದೆ.
ಹುಸನಪ್ಪ ತಳವಾರ ಈತನು ಕೃಷಿ ಹೊಂಡದಲ್ಲಿ ಸ್ನಾನ ಮಾಡಲು ಹೋಗಿ ಕಾಲುಜಾರಿ ಬಿದ್ದು, ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.