Wednesday, January 3, 2024

04-01-2024 EE DIVASA KANNADA DAILY NEWS PAPER

ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ : ಭಾರತೀಯ ಜನತಾ ಪಾರ್ಟಿ ಪ್ರತಿಭಟನಾ ಮೆರವಣಿಗೆ


 ವಿಜಯಪುರ : ರಾಮ ಭಕ್ತರ ಮೇಲೆ ನಕಲಿ ಕೇಸ್ ಹಾಕಿರುವ ಹಿಂದೂ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಘಟಕದವತಿಯಿಂದ ನಗರದ ಗಾಂಧಿವೃತ್ತದಿAದ ಹಲಗಿ ಬಾರಿಸುವ ಮೂಲಕ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಗಾಂಧಿವೃತ್ತದಿAದ ನಗರ ಪ್ರಮುಖ ರಸ್ತೆಗಳಾದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಮೆರವಣಿಗೆ ಮೂಲಕ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಕಳೆದ ಮೂವತ್ತು ವರ್ಷ ಹಳೆಯದಾದ ಕೇಸನ್ನು ಮತ್ತೆ ಪ್ರಾರಂಭಿಸಿ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಎಂಬ ಹಿಂದು ಕಾರ್ಯಕರ್ತನನ್ನು ಬಂಧಿಸಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ತಾನು ಹಿಂದೂ ವಿರೋಧಿಯೆಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದೆ. ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುವ ಶುಭ ಸಂದರ್ಭದಲ್ಲಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇರುವುದು ಕಾಂಗ್ರೆಸ್ಸಿಗರಿಗೆ ನೋಡಲಾಗುತ್ತಿಲ್ಲ. ಮೊದಲಿನಿಂದಲೂ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ಈಗ ಅಯೋಧ್ಯೆಯಲ್ಲಿನ ಭವ್ಯ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ದೇಶದ ವಾತಾವರಣ ಕೆಡಿಸಲು ಹುನ್ನಾರ ನಡೆಸಿದೆ ಎಂದರು.

ಮೊದಲಿನಿAದಲೂ ಮೊಘಲರು, ಡಚ್ಚರು, ಪೋರ್ಚುಗೀಸರು ಹಾಗೂ ಬ್ರಿಟೀಷರು ಈ ದೇಶದ ಸಂಪತ್ತು ಹಾಗೂ ನಮ್ಮ ಸಂಸ್ಕೃತಿಯನ್ನು ಹಾಳುಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ, ಸ್ವಾತಂತ್ರಾನAತರ ಕಾಂಗ್ರೆಸ್ ಈ ಕೆಲಸವನ್ನು ದೇಶವಿರೋಧಿ ಶಕ್ತಿಗಳ ಜೊತೆಗೂಡಿ ಮಾಡುವ ಮೂಲಕ ಅಸಂಖ್ಯಾತ ಹಿಂದುಗಳಿಗೆ ಅಪಮಾನ ಮಾಡುತ್ತಿದೆ. ಆದಿಕಾಲದಲ್ಲಿ ಒಳ್ಳೆಯ ಕೆಲಸವಾಗುತ್ತಿರುವಾಗ ಅಸುರ ಶಕ್ತಿಗಳು ಅದನ್ನು ಹಾಳುಗೆಡುವಲು ಪ್ರಯತ್ನಿಸುತ್ತಿದ್ದವು. ಹಾಗೆಯೇ ಪ್ರಸ್ತುತ ಕಾಂಗ್ರೆಸ್ ಸರ್ಕಾರ ರಾಮಜನ್ಮಭೂಮಿಯ ಉದ್ಘಾಟನೆಯ ಸಮಯದಲ್ಲಿ ಈ ರೀತಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿ ದಬ್ಬಾಳಿಕೆ ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಸುರೇಶ ಬಿರಾದಾರ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಬಸವರಾಜ ಬಿರಾದಾರ, ಸಂಜೀವ ಐಹೊಳ್ಳಿ, ಸಂಜಯ ಪಾಟೀಲ ಕನಮಡಿ, ಭೀಮಾಶಂಕರ ಹದನೂರ, ಉಮೇಶ ಕೋಳಕೂರ, ಬಾಬುರಾಜೇಂದ್ರ ನಾಯಕ, ಕೃಷ್ಣಾ ಗುನಾಳಕರ, ವಿಜಯ ಜೋಶಿ, ಶಿಲ್ಪಾ ಕುದರಗೊಂಡ, ಮಲ್ಲಮ್ಮ ಜೋಗುರ, ಲಕ್ಷಿö್ಮÃ ಕನ್ನೊಳ್ಳಿ, ಮಹಾನಗರ ಪಾಲಿಕೆ ಸದಸ್ಯ ರಾಜು ಕುರಿಯವರ, ರಾಹುಲ ಜಾಧವ, ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ಹಾಗೂ ಈರಣ್ಣ ರಾವುರ, ಭೀಮನಗೌಡ ಸಿದ್ದರಡ್ಡಿ, ಬಸವರಾಜ ಹೂಗಾರ, ರಾಜೇಶ ತವಸೆ, ಸಂದೀಪ ಪಾಟೀಲ, ಕಾಂತು ಶಿಂಧೆ, ಶ್ರೀಧರ ಬಿಜ್ಜರಗಿ, ಪಾಪುಸಿಂಗ ರಜಪೂತ, ಸಂಗಮೇಶ ಹೌದೆ, ವಿಜಯಕುಮಾರ ಕುಡಿಗನೂರ, ವಿಕ್ರಮ ಗಾಯಕವಾಡ, ಜಗದೀಶ ಮುಚ್ಚಂಡಿ, ವಿಠ್ಠಲ ನಡುವಿನಕೇರಿ, ವಿನಾಯಕ ದಹಿಂಡೆ, ಆನಂದ ಮುಚ್ಚಂಡಿ, ವಿಕಾಸ ಪದಕಿ, ಸಂಪತ್ ಕೋಹಳ್ಳಿ, ಎ.ಎಸ್.ಪಾಟೀಲ, ಶರಣು ಕಾಖಂಡಕಿ, ವಿಜಯ ಹಿರೇಮಠ, ಮಧು ಕಲಾದಗಿ, ಗುರು ದೇಶಪಾಂಡೆ, ರವಿ ಬಿರಾದಾರ ನಾಗಠಾಣ, ಸುಶ್ಮಿತಾ ವಾಡಕರ, ವಿಜಯಲಕ್ಷಿö್ಮÃ ರೂಗಿಮಠ, ಗಾಯತ್ರಿ ದೇವೂರ, ಮಿತಾ ದೇಸಾಯಿ, ಶರಣಬಸು ಕುಂಬಾರ , ವಾರೀಶ ಕುಲಕರ್ಣಿ, ಉದಯ ಕನ್ನೊಳ್ಳಿ, sಸೈನಾಜ, ಮಾಯಾ ಚೌಧರಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.