Monday, October 16, 2023

ದಸರಾ ಸಿಎಂ ಕಪ್ 2023 ಸ್ಪರ್ಧೆಯಲ್ಲಿ ಅಶ್ವಿನಿ ಪ್ರಥಮ

ಈ ದಿವಸ ವಾರ್ತೆ

ವಿಜಯಪುರ: ದಸರಾ ಕ್ರೀಡಾ ಕೂಟದಲ್ಲಿ ವಿಜಯಪುರ ನಗರದ ಅಶ್ವಿನಿ ವಾಸುದೇವ ಕಾಳೆ ಭಾಗವಹಿಸಿ ಸಿಎಂ ಕಪ್ 2023 ಪಡೆದು ವಿಜಯಪುರದ ಕೀರ್ತಿ ಹೆಚ್ಚಿಸಿದ್ದಾಳೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಸರಾ ಕ್ರೀಡಾ ಉಪ ಸಮಿತಿ ವತಿಯಿಂದ ಮೈಸೂರಿನಲ್ಲಿ  ಹಮ್ಮಿಕೊಂಡ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ದಸರಾ ಸಿಎಂ ಕಪ್ 2023 ಮಹಿಳಾ ವಿಭಾಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.

ಕುಮಾರಿ ಅಶ್ವಿನಿ ಕಾಳೆ ಸಾಧನೆಗೆ ಪಾಲಕರು ಪೋಷಕರು, ವಿಜಯಪುರ ಜನತೆ ಅಭಿನಂದಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.

17-10-2023 EE DIVASA KANNADA DAILY NEWS PAPER

'ಮೂಲ'-ಕೃತಿ ಲೋಕಾರ್ಪಣೆ ಮಕ್ಕಳಲ್ಲಿ ಪುಸ್ತಕ ಪ್ರೀತಿಯ ಜೊತೆಗೆ ಉತ್ತಮ ಸಂಸ್ಕಾರ ಬೆಳೆಸಿ : ಡಾ ಸಂಗಮೇಶ ಮೇತ್ರಿ

ವಿಜಯಪುರ: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಪೋಷಕರು ಮಕ್ಕಳನ್ನು ಒಳ್ಳೆಯ ಸಂಸ್ಕಾರಯುತ ವಾತಾವರಣದಲ್ಲಿ ಬೆಳೆಸಬೇಕು. ಮಕ್ಕಳು ಬಾಲ್ಯದಲ್ಲಿ ಕಲಿತುಕೊಳ್ಳುವ ಸಂಸ್ಕಾರ ಅವರ ಬದುಕಿಗೆ ಮುನ್ನುಡಿಯಾಗುತ್ತದೆ ಎಂದು ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷರಾದ ಡಾ ಸಂಗಮೇಶ ಮೇತ್ರಿ ಹೇಳಿದರು.

ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಂತೋಷ ಬಂಡೆ ಅವರ ಮಕ್ಕಳಾದ ಅನುಶ್ರೀ-ಶ್ರೀನಿಧಿ ಅವರ 5ನೇ ವರ್ಷದ ಜನ್ಮದಿನದ ನಿಮಿತ್ತ 'ಮೂಲ'-ಕಥಾ ಸಂಕಲನದ ಲೋಕಾರ್ಪಣೆ, ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಜಯಂತಿ,ವಿಶ್ವ ಕೈತೊಳೆಯುವ ದಿನ ಹಾಗೂ ಒಂದು ನೂರು ಸಸಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 'ಮೂಲ' ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ನಾದ ಕೆ ಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಚಿದಂಬರ ಬಂಡಗರ,ಒಳ್ಳೆಯ ಪುಸ್ತಕಗಳು ನಮ್ಮ ಮನೆಯ ಸಂಪತ್ತು ಎಂಬ ಭಾವನೆ ಬೆಳೆದು ನಾಡಿನಾದ್ಯಂತ ಪುಸ್ತಕ ಸಂಸ್ಕ್ರತಿ ವ್ಯಾಪಿಸಬೇಕು ಎಂದು ಹೇಳುತ್ತಾ, ಎಪಿಜೆ ಅಬ್ದುಲ್ ಕಲಾಂ ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ. ಅವರು ದೇಶದ ಯುವಕರಿಗೆ ಉತ್ತಮ ಪಾಠಗಳನ್ನು ನೀಡಿ ಆದರ್ಶಪ್ರಾಯರಾಗಿದ್ದಾರೆ 
ಎಂದು ಹೇಳಿದರು.
 ಕೃತಿ ಪರಿಚಯಿಸಿ ಮಾತನಾಡಿದ ಸಾಹಿತಿ ಸಂಗೀತಾ ಮಠಪತಿ, ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಪತ್ತನ್ನು ಉಳಿಸಿ, ಬೆಳೆಸುವ ಕಾಳಜಿ ಈ ಮೂಲ ಕಥಾ ಸಂಕಲನದಲ್ಲಿದೆ.
ಒಂದೊಂದು ಕಥೆಗಳು ಜೀವನಕ್ಕೆ ಹೊಸ ಕಾಯಕಲ್ಪ ನೀಡುತ್ತವೆ ಎಂದು ಹೇಳಿದರು.
 ಹಿರಿಯರಾದ ಸುಭಾಷ ಬಂಡೆ ಅಧ್ಯಕ್ಷತೆ ವಹಿಸಿದ್ದರು. ರಾಯಚೂರಿನ ಅಂಚೆ ಸಹಾಯಕ ರಾಮಣ್ಣ ವಾಲ್ಮೀಕಿ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಮಾತನಾಡಿದರು.   
   ಶಿಕ್ಷಕ ಸಂತೋಷ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ಶಿಕ್ಷಕ ಸಂಗಮೇಶ ಬಂಡೆ ಸ್ವಾಗತಿಸಿ, ಪರಿಚಯಿಸಿದರು. ಶರಣು ಮಸಳಿ, ಇಂಡಿ ಪಟ್ಟಣದ ಸಮಾಜ ಸೇವಕ ಹಸನ ಮುಜಾವರ, ಬಂಡೆ ಕುಟುಂಬದ ಈರಣ್ಣ, ಶ್ರೀಧರ, ಭುವನೇಶ್ವರಿ, ಸವಿತಾ, ಸುರೇಖಾ, ಸುಹಾಸಿನಿ, ಗಾಯಿತ್ರಿ  ಸೇರಿದಂತೆ ಗ್ರಾಮಸ್ಥರು,ಗೆಳೆಯರು ಭಾಗವಹಿಸಿದ್ದರು. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.

ಮೈಸೂರು ದಸರಾ ಕವಿಗೋಷ್ಠಿಗೆ ಹೇಮಲತಾ ಆಯ್ಕೆ

ಈ ದಿವಸ ವಾರ್ತೆ

ವಿಜಯಪುರ: ಕವಯಿತ್ರಿ ಶ್ರೀಮತಿ.ಹೇಮಲತಾ ವಸ್ತ್ರದ ಅವರನ್ನು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ.

ಅಕ್ಟೋಬರ್ ೧೮ರಂದು ಮೈಸೂರಿ ವಿವಿಯ ಸಭಾಂಗಣದಲ್ಲಿ ನಡೆಯುವ ಮಹಿಳಾ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸುವ ಸದವಕಾಶ ಕಲ್ಪಿಸಲಾಗಿದೆ ಎಂದು ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯಾಧ್ಯಕ್ಷೆ ಡಾ.ವಿಜಯಕುಮಾರಿ ಕರಿಕಲ್ ತಿಳಸಿದ್ದಾರೆ.