Sunday, August 2, 2020

ರಕ್ಷಾಬಂಧನದ ಬೆಸುಗೆ



ಅಣ್ಣನ ಶ್ರೀರಕ್ಷೆ
ತಂಗಿಯ ಮೇಲಿರಲೆಂದು
ತಂಗಿಯ ಬಂಧನವ ಎಂದಿಗೂ
ಅಣ್ಣ ತೊರೆಯ ಬಾರದೆಂದು
ರಕ್ಷಾ ಬಂಧನಕೆ
ನಾಂದಿಯಾಯಿತು ನೋಡಿ ಇಂದು

ಅತ್ಯಂತ ಅಗಾಧ ಪ್ರೀತಿಯ ಬಂಧನವಿದು, ಈ  ಅಣ್ಣ ತಂಗಿಯ ಸಂಬಂಧವು. ಒಡಹುಟ್ಟಿದವರಾಗಿ ಹೆತ್ತವರ ಖುಷಿಯ ಕಡಲಿವರು. 
ಈ ಭವ್ಯ ಬಂಧನವು ಇಡಿ ದೇಶದಾದ್ಯಂತ ಆಚರಿಸಲ್ಪಡುವ    ಮಹತ್ವದ ಹಬ್ಬವೆಂದೆ ಪರಿಗಣಿಸಲಾಗಿದೆ.

ಈ ಆಚರಣೆಯು ಹಿಂದು ಧರ್ಮಗಳಲ್ಲಿ ಒಂದಾಗಿದ್ದರು ಸಹ, ಎಲ್ಲ ಧರ್ಮಿಯರು ಅತೀವ ಸಂಭ್ರಮದಿಂದ ಆಚರಿಸುತ್ತಾರೆ. 
ಹಾಗಾದರೆ ಈ ರಕ್ಷಾಬಂದನ ಎಂದರೆ ಏನು? ಎಂಬುವುದು ತಿಳಿಯಲೇಬೇಕಾದದ್ದು
*ರಕ್ಷಾ-ರಕ್ಷಣೆ* *ಬಂಧನ-ಬಂಧ* ಅಂದರೆ ರಕ್ಷಣೆಯ ಬಂಧನದ ಬೆಸುಗೆ ಎಂತಲೆ ಹೇಳಬಹುದು. ಅಣ್ಣನಾದವನು ತಂಗಿಯ ರಕ್ಷಾ ಕವಚವಿದ್ದಂತೆ. ತಂಗಿಯ ಕಷ್ಟಕೆ ಓ ಗೊಡುವ ಮೊದಲ ದೇವರೆ ಈ ಅಣ್ಣನು.
*ತಂಗಿಯ ಬೆನ್ನ ಹಿಂದೆ ಸದಾ ಅಣ್ಣನ ದೈರ್ಯವಿದ್ದು ಅವಳ ಮೇಲೆ ಅಪಾರ ಪ್ರೀತಿ ಇದ್ದೊಡೆ ಅಲ್ಲಿ ಯಾವ ಬಯದ ಅಂಕುಶವು ಸುಳಿಯದು ತಂಗಿಯ ಬಾಳಿನೊಲು* ತಂಗಿಯ ಜೀವನವು ಭವ್ಯತೆಯ ಹಾದಿಯಲಿ ಮುನ್ನುಗ್ಗುವದೆಂಬ ಆತ್ಮವಿಶ್ವಾಸ ಸದೃಡಗೊಳ್ಳುವುದೆಂದರೆ ನಿಜಕ್ಕೂ ತಪ್ಪಾಗಲಾರದು. ಅಣ್ಣನ  ಪ್ರೀತಿ ತಂಗಿಯ ಮೇಲೆ ಸದಾ ಹಚ್ಚಹಸಿರಂತಿದ್ದರೆ ಅವಳ ಬಾಳು ಎಂದೆಂದಿಗೂ ಸುಂದರವು.

ಒಂದೇ ಒಡಲಿನ ಹೂ ಬಳ್ಳಿಗಳು
ಈ ಅಣ್ಣ-ತಂಗಿಯು
ಒಂದೇ ರಕ್ತದ ಮಾದರಿಯ
ಮುದ್ದು ಕೂಸುಮರಿಗಳಿವರು
ಅಣ್ಣನ ದೀರ್ಘಾಯುಶ್ಯದಿ ಬಾಳೆಂದು ಹಾರೈಸಿ ಕಟ್ಟುವಳು ತಂಗಿ
ಅಣ್ಣನ ಕೈಗೆ ರಾಖಿಯು
ಅತೀವ ಸಂಭ್ರಮದಿ ತೆಲಾಡುತ
ಅಣ್ಣ ತಂಗಿಗೆ ನೀಡುವನು
ಸವಿನೆನಪಿನ ಉಡುಗೊರೆಯು

ಸಹೋದರ ಸಹೋದರಿಯರ ಪ್ರೀತಿ ಹಂಚಿಕೊಳ್ಳುವ ಸಡಗರದ ಸುದಿನವಾಗಿದೆ ಈ ರಕ್ಷಾ ಬಂಧನ ದಿನವೂ. ಈ ಬಂಧನದ ಆಚರಣೆಯು ಅನೇಕ ಪೌರಾಣಿಕ ಕಥೆಗಳಿಂದ ತಿಳಿಯಬಹುದಾಗಿದೆ.

ಒಂದು ಸಲ ಬಲಿ ರಾಕ್ಷಸನು ತನ್ನೊಂದಿಗೇ ಇರಬೇಕು ಎಂದು ವಿಷ್ಣು ವಿನೊಂದಿಗೆ ಮಾತು ಪಡೆಯುತ್ತಾನೆ ವಿಷ್ಣು ದೀರ್ಘ ಕಾಲ ವೈಕುಂಠಕ್ಕೆ ಬರದೇ ಇದ್ದಾಗ ಲಕ್ಷ್ಮೀದೇವಿ ಚಿಂತಿತಳಾಗುತ್ತಾಳೆ ಆಗ ಲಕ್ಷ್ಮಿ ದೇವಿಗೆ ಈ ವಿಚಾರ ತಿಳಿದಾಗ ಲಕ್ಷ್ಮಿಯು ಬಲಿರಾಕ್ಷಸನ ಕೈಗೆ ರಾಖಿಯನ್ನು ಕಟ್ಟಿ ಸಹೋದರನ್ನಾಗಿ ಮಾಡಿಕೊಂಡು, ತನಗೆ ಉಡುಗೊರೆಯಾಗಿ ವಿಷ್ಣುವನ್ನು ಕೊಡಬೇಕು ಎಂದು ಕೇಳಿಕೊಳ್ಳುತ್ತಾಳೆ. ಆಗ ಬಲಿ ರಾಕ್ಷಸನು ಅವಳ ಮಾತಿನಂತೆ ವಿಷ್ಣುವನ್ನು ವೈಕುಂಠಕ್ಕೆ ಕಳಿಸುತ್ತಾನೆ. ಇದೆ ಅಣ್ಣ ತಂಗಿಯ ಸಂಬಂಧವು. 

ಹಾಗೇ ಇನ್ನೊಂದು ಪೌರಾಣಿಕ ಕಥೆ ಉಂಟು ವೃತ್ರಅರಸು ನಿಂದ ಸೋಲಿಸಲ್ಪಟ್ಟಂತ ಇಂದ್ರನಿಗೆ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದರೆ ತನ್ನ ಕೈಗೆ ರಾಖಿ ಕಟ್ಟಿಕೊಳ್ಳಬೇಕು ಎಂದು ಗುರು ಬ್ರಹಸ್ಮತಿ ಹೇಳುತ್ತಾರೆ. ಆಗ ಇಂದ್ರನ ಒಡನಾಡಿ ಸಚ್ಚಿದಾ ದೇವಿಯು ಇಂದ್ರನಿಗೆ  ತಿಲಕವನಿಟ್ಟು ರಾಖಿ ಕಟ್ಟುವುದು ಎಂದು ಭವಿಷ್ಯ ಪುರಾಣದಲ್ಲಿ ತಿಳಿಯಲಾಗಿದೆ.
ಹೀಗೆ ಅನೇಕ ಪೌರಾಣಿಕ ಕಥೆಗಳು ಉಂಟು ಈ ರಕ್ಷಾ ಬಂಧನದ ಆಚರಣೆಗೆ.

ಒಟ್ಟಾರೆಯಾಗಿ ಈ ರಕ್ಷಾ ಬಂಧನವು ಅಣ್ಣ ತಂಗಿಯರ ಸ್ನೇಹ ಬಂಧನದ ಸಂಕೇತವಾಗಿದೆ.ತಂಗಿ ಅಣ್ಣನ ಹಣೆಗೆ ತಿಲಕವನ್ನಿಟ್ಟು ಅವನ ಕೈಗೆ ಈ ರಕ್ಷಾ ಬಂಧನದ ರಾಖಿಯನ್ನು ಕಟ್ಟಿ ಅಣ್ಣನ ಸಕಲ ಜಯಾ ಜಯಗಳು ದೊರೆಯಲಿ, ಸುದೀರ್ಘದಿ ಬಾಳಲೆಂದು  ಹಾರೈಸುತ  ಕಳಸವನ್ನು ಬೆಳಗಿ ತಂಗಿ ತನ್ನ ಆಸೆಯನ್ನು ಪೂರೈಸಿಕೊಳ್ಳುವ ಸುದಿನವೆಂದೆ ಹೇಳಬಹುದು.
ಇದುವೆ ರಕ್ಷಾ ಬಂಧನದ ವಿಶೇಷತೆ. 
ಸಹೋದರರಿಗೆ ರಾಖಿ ಕಟ್ಟಿ ರಕ್ಷಾ ಬಂಧನವ  ಆಚರಿಸುವ ಬನ್ನಿ..


ಮಮತಾ ಗುಮಶೆಟ್ಟಿ
ವಿಜಯಪುರ

03-08-2020 EE DIVASA KANNADA DAILY NEWS PAPER