Saturday, September 17, 2022

ಇಂದು ವಿಜಯಪುರ ಆಕಾಶವಾಣಿ ರಜತ್ ಮಹೋತ್ಸವ ಸಂಭ್ರಮ


ವಿಜಯಪುರ : ಪ್ರಸಾರ ಭಾರತಿ, ಭಾರತದ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ವಿಜಯಪುರ ಆಕಾಶವಾಣಿ ಕೇಂದ್ರದ ರಜತ್ ಮಹೋತ್ಸವ ಸಂಭ್ರಮ ರಜತ ರವಿ ಉದ್ಘಾಟನಾ ಸಮಾರಂಭವು ಎಂ.ಪಿ.ಸ್ಟುಡಿಯೋದಲ್ಲಿ ಸೆಪ್ಟೆಂಬರ್ 18ರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಸೋಮಶೇಖರ ರೂಳಿ


ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ, ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿಜಯಪುರ ಆಕಾಶವಾಣಿ ಎಂಜಿನಿಯರ್ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಶೇಖ್ ಅಧ್ಯಕ್ಷತೆ ವಹಿಸುವರು ಎಂದು ವಿಜಯಪುರ ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ಡಾ.ಸೋಮಶೇಖರ ರುಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿತ್ಯ ಓದಿನತ್ತ ಒಲವು ತೋರಿ: ಸಾತಿಹಾಳ




ವಿಜಯಪುರ: ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಓದಿನತ್ತ ಒಲವು ತೋರಿದರೆ ಗುರಿ ಮುಟ್ಟಲು ಸುಲಭ- ಸಾಧ್ಯವೆಂದು ಮಕ್ಕಳ ಸಾಹಿತಿ ಎಸ್. ಎಸ್. ಸಾತಿಹಾಳ ಅಭಿಪ್ರಾಯ ಪಟ್ಟರು. 

ಮುಳವಾಡದ ಸರಕಾರಿ ಕಿರಿಯ ಮಹಾ ವಿದ್ಯಾಲಯದಲ್ಲಿ ಸಿಂದಗಿಯ ವಿದ್ಯಾಚೇತನ ಪ್ರಕಾಶನ ಹಾಗೂ ಮಂಡ್ಯದ ಅಡ್ವೈಸರ್ ಮಾಸ ಪತ್ರಿಕೆ ಹಮ್ಮಿಕೊಂಡ ಪುಸ್ತಕ ಸಂಸ್ಕೃತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ನಿತ್ಯ ಪಠ್ಯದ ಜೊತೆಗೆ ಪಠ್ಯೇತರ ಗ್ರಂಥಗಳನ್ನು ಓದುವುದರಿಂದ ಜ್ಞಾನ ಸಂಪತ್ತು ವೃದ್ಧಿಯಾಗುತ್ತದೆ. ದಾರ್ಶನಿಕರ ಜೀವನ ಮೌಲ್ಯ ತಿಳಿದುಕೊಂಡು ಮುನ್ನಡೆಯಬೇಕೆಂದು ಹೇಳಿದರು.

ಕುಮಾರಿ ಅಕ್ಷತಾ ಜೋಗಿ, ವೇದಾ ಪತ್ತಾರ ನಾನು ಮೆಚ್ಚಿದ ಕಥೆ-ಕವನ ಕುರಿತು ಮಾರ್ಮಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಸ್. ಆರ್. ಪಾಟೀಲರು ಸಸಿಗೆ ನೀರೆರೆಯುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಂಡ್ಯದ ಅಡ್ವೈಸರ್ ಮಾಸ ಪತ್ರಿಕೆ ಕೊಡಮಾಡುವ 2021 ನೆಯ ಸಾಲಿನ ಅಡ್ವೈಸರ್ ಸಾಹಿತ್ಯ ಪ್ರಶಸ್ತಿಯನ್ನು ಖ್ಯಾತ ಮಕ್ಕಳ ಸಾಹಿತಿ ಪ. ಗು. ಸಿದ್ದಾಪುರ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಾಚಾರ್ಯರಾದ ಜಿ‌. ಎಸ್. ಟಕ್ಕಳಕಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾ ಚೇತನ ಪ್ರಕಾಶನದ ಅಧ್ಯಕ್ಷರಾದ ಹ. ಮ. ಪೂಜಾರವರು ಪ್ರಾಸ್ತಾವಿಕ ನುಡಿಯಾಡಿದರು. ಡಾ. ಜಿ. ಎಸ್. ಭೂಸಗೊಂಡ, ಶಂಕರ ಬೈಚಬಾಳ ಕೆ. ಕೃಷ್ಣಮೂರ್ತಿ, ಸಿದ್ದು ಭೂಸರೆಡ್ಡಿ ಶಿವಕುಮಾರ ಶಿವಶಿಂಪಿ ಎಂ. ಬಿ. ಕಟ್ಟಿಮನಿ, ಬಸವರಾಜ ಸಿದ್ದಾಪುರ ಅರವಿಂದ ಸಿದ್ದಾಪುರ, ಅಡಿವೆಪ್ಪ ಬೀಳಗಿ ಪ್ರೊ ಎಲ್. ಟಿ. ಹುನಸಿಕಟ್ಟಿ, ಸುನಿತಾ ವಳಸಂಗ, ಕವಿತಾ ಸಂಕನೂರ,  ಮಣಿಹಾರ ಮುಂತಾದವರು ಉಪಸ್ಥಿತರಿದ್ದರು. ಪ್ರೊ ಎಸ್. ಎಲ್. ಬಾಡಗಿ ನಿರೂಪಿಸಿದರು. ಪ್ರಭಾವತಿ ಹೊಸಟ್ಟಿ ಪ್ರಾರ್ಥಿಸಿದರು. ಬಿ. ಎಸ್. ಚೌಧರಿ ವಂದಿಸಿದರು.

ವಿಶ್ವಕರ್ಮ ದೇವತೆಗಳ ಇಂಜಿನಿಯರ್ ; ಪತ್ರಕರ್ತ ಕಲ್ಲಪ್ಪ‌ ಶಿವಶರಣ

 

ಈ ದಿವಸ ವಾರ್ತೆ

ವಿಜಯಪುರ: ಕಾರ್ಮಿಕ ಸಮುದಾಯದಲ್ಲಿ ವಿಶ್ವಕರ್ಮ ದಿನಾಚರಣೆಗೆ ಹೆಚ್ಚಿನ ಮಹತ್ವವಿದೆ. ಯಂತ್ರಗಳ ಸುಗಮ ಮತ್ತು ಸುರಕ್ಷಿತ ಕೆಲಸದ ಜೊತೆಗೆ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ವಿಶ್ವಕರ್ಮನನ್ನು ಪೂಜಿಸುವ ಸಂಪ್ರದಾಯ ಇದೆ ಎಂದು ಯುವ ಪತ್ರಕರ್ತರಾದ ಕಲ್ಲಪ್ಪ ಶಿವಶರಣ ಹೇಳಿದರು.

        ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ವಿಶ್ವಕರ್ಮ ಭೂಮಿಯಲ್ಲಿ ಅರಮನೆಗಳನ್ನು, ಮಹಲುಗಳನ್ನು, ವಾಹನಗಳನ್ನು, ಆಯುಧಗಳನ್ನು ಸೇರಿದಂತೆ ಇನ್ನಿತರ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದ್ದು ಮಾದರಿಯಾಗಿದೆ ಎಂದು ಹೇಳಿದರು.



         ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ವಿಶ್ವಕರ್ಮರು ದೈವಿಕ ಬಡಗಿ, ದೇವತೆಗಳ ಇಂಜಿನಿಯರ್ ಆಗಿ, ಯಂತ್ರಶಾಸ್ತ್ರ ಮತ್ತು ವಾಸ್ತುಶಿಲ್ಪದ ವಿಜ್ಞಾನವಾದದ ಪ್ರತಿಪಾದಕರಾಗಿದ್ದಾರೆ. ಅವರ ಪರಿಶ್ರಮ ಹಾಗೂ ಕೌಶಲ್ಯಯುತ ಜೀವನದ ಮಾರ್ಗವನ್ನು  ನಾವೆಲ್ಲರೂ ಅನುಸರಿಸಬೇಕಾಗಿದೆ ಎಂದು ಹೇಳಿದರು.

         ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಸ್ನೇಹಾ ಹಕ್ಕಿ, ಮಧುಮತಿ ನಿಕ್ಕಂ, ಸರೋಜಿನಿ ಕಟ್ಟಿಮನಿ, ಅಂಬಿಕಾ ಶಿರಕನಹಳ್ಳಿ, ರೇಣುಕಾ ಭಜಂತ್ರಿ, ಕಾವೇರಿ ಅಂಕಲಗಿ, ಚಂದು ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.