Thursday, October 12, 2023

15ರಂದು ವಿಜಯಪುರ ಜಿಲ್ಲೆಗೆ ಡಾ‌. ಮುಖ್ಯಮಂತ್ರಿ ಚಂದ್ರು ಆಗಮನ

 ಈ ದಿವಸ ವಾರ್ತೆ

ವಿಜಯಪುರ: ಆಮ್ ಆದ್ಮ ಪಕ್ಷದ ರಾಜ್ಯಾಧ್ಯಕ್ಷರಾದ   ಡಾ‌. ಮುಖ್ಯಮಂತ್ರಿ ಚಂದ್ರು ಅವರು ಇದೇ ರವಿವಾರ ಅ. 15ರಂದು ವಿಜಯಪುರ ಜಿಲ್ಲೆಗೆ ಆಗಮಿಸಲಿದ್ದು, ದೇವರಹಿಷ್ಕರಗಿ ತಾಲೂಕಿನ ಸುಕ್ಷೇತ್ರ ಕೊಂಡಗುಳಿ ಗ್ರಾಮದಲ್ಲಿ ಶ್ರೀ ದೇವಿ ಪುರಾಣ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಜಯಪುರ ಜಿಲ್ಲಾ ಆಪ್ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆಮ್ ಆದಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ವಲಯದ ಉಸ್ತುವಾರಿ ಅರ್ಜುನ್ ಹಲಗಿಗೌಡರ್‌, ರಾಜ್ಯ, ಉಪಾಧ್ಯಕ್ಷರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿಗಳಾದ ರೋಹನ್ ಐನಾಪುರ್ ಮತ್ತಿತರೇ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅ. 15ರ ರವಿವಾರದಂದು ಮುಖ್ಯ ಮಂತ್ರಿ ಚಂದ್ರು ಅವರು, ವಿಜಯಪುರ ನಗರಕ್ಕೆ ಆಗಮಿಸಿ, ಬೆಳ್ಳಿಗೆ 11:00 ಘಂಟೆಗೆ ಪಕ್ಷದ ಕಚೇರಿ ಜಲನಗರದಲ್ಲಿ ಪತ್ರಿಕಾ ಗೊಷ್ಠಿಯನ್ನು ನಡೆಸಲಿದ್ದಾರೆ. ತದನಂತರ ಜಿಲ್ಲೆಯ ಆಪ್ ಪಕ್ಷದ ನೂತನ ಪದಾಧಿಕಾರಿಗಳನ್ನ ಉದ್ದೇಶಿಸಿ ಸಭೆಯನ್ನು ನಡೆಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಜು ಶೆಟಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
 ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.



13-10-2023 EE DIVASA KANNADA DAILY NEWS PAPER

ಕುಟುಂಬದ ಮೂಲಕ ಸಮಾನತೆ ಅರಿವು ಮೂಡಿಸಬೇಕು - ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಸಂತೋಷ ಕುಂದರ್

ಈ ದಿವಸ ವಾರ್ತೆ ವಿಜಯಪುರ : ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಮತ್ತು ಗಂಡಿನ ಮಧ್ಯ ಸಮಾನತೆ ತರಲು ಪ್ರತಿ ಮನೆಯ ಗೃಹಿಣಿ ಪ್ರಯತ್ನಿಸಬೇಕು. ಕುಟುಂಬದಿಂದಲೇ ಸಮಾನತೆ ಅರಿವು ಪ್ರಾರಂಭವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ  ಸದಸ್ಯ ಕಾರ್ಯದರ್ಶಿಗಳು ಸಂತೋಷ ಕುಂದರ್ ಹೇಳಿದರು. 

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಜಯಪುರ ನಗರ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಇವರ ಸಹಯೋಗದಲ್ಲಿ ನಗರದ ಕಕ್ಕಯ್ಯ ಕಾಲೋನಿಯಲ್ಲಿ ಬುಧವಾರ ಹಮ್ಮಿಕೊಂಡ ಹೆಣ್ಣನ್ನು ರಕ್ಷಿಸಿ ಹೆಣ್ಣು ಮಕ್ಕಳಿಗೆ ಕಲಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಉಮೇಶ ವಂದಾಲ ಅವರು ಮಾತನಾಡಿ, ಸಮಾಜದಲ್ಲಿನ ಲಿಂಗಾನುಪಾತ ವೃದ್ಧಿ, ಮಹಿಳಾ ಮತ್ತು ಮಕ್ಕಳ ಹಕ್ಕು, ಸುರಕ್ಷತೆ ಹಾಗೂ ಸಮಾನತೆ ನಿಟ್ಟಿನಲ್ಲಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಪ್ರತಿಯೊಬ್ಬರು ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ “ಬೇಟಿ ಬಚಾವೋ, ಬೇಟಿ ಪಡಾವೋ” ಕಾರ್ಯಕ್ರಮದ ಗುರಿ ಮತ್ತು ಉದ್ದೇಶ, ವಕೀಲರಾದ ಎಂ.ಸಿ.ಲೋಗಾಂವ್ ಬಡತನದಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಉಚಿತ ಕಾನೂನಿನ ಬಗ್ಗೆ ಮಾತನಾಡಿದರು.

  ಈ ಸಂದರ್ಭದಲ್ಲಿ  ತಾಯಂದಿಯರಿಗೆ ಸನ್ಮಾನ ಹಾಗೂ ಮಕ್ಕಳಿಂದ ವೇಷಭೂಷಣ ಧರಿಸಿ ಅಭಿನಯ ಗೀತೆಗಳ ಪ್ರದರ್ಶನ ಜರುಗಿತು. ಮಕ್ಕಳಿಗೆ ಕಿರು ಕಾಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ದೀಪಾಕ್ಷಿ ಜಾನಕಿ, ಪಾಲಿಕೆ ಸದಸ್ಯರಾದ  ಶ್ರೀಮತಿ ಸುನೀತಾ ಮಹೇಶ ಒಡೆಯರ್, ಆರೋಗ್ಯ ಇಲಾಖೆಯ ಶ್ರೀಮತಿ ಮರಿಯಮ್ಮ ಹಾಗೂ ಮೇಲ್ವಿಚಾರಕಿಯರು, ತಾಯಂದಿರು, ಮಕ್ಕಳು ಗರ್ಭಿಣಿ/ಬಾಣಂತಿಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಮೇಲ್ವಿಚಾರಕಿಯರಾದ ಶ್ರೀಮತಿ ಅಶ್ವಿನಿ ಸನದಿ ನಿರೂಪಿಸಿದರು ಶ್ರೀಮತಿ ಸಿ.ಎಚ್. ಆಲಗೂರ ಸ್ವಾಗತಿಸಿ ವಂದಿಸಿದರು.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ

 ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.