Saturday, July 8, 2023

ಹಾಂಕಾಂಗ ಮೂಲದ ಕಂಪನಿಯಿಂದ ಸಿದ್ಧ ಉಡುಪು ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಉತ್ಸುಕತೆ 5 ರಿಂದ 6 ಸಾವಿರ ಉದ್ಯೋಗ ಸೃಷ್ಟಿಗೆ ಅವಕಾಶ : ಸಚಿವ ಶಿವಾನಂದ ಪಾಟೀಲ

  

ಈ ದಿವಸ ವಾರ್ತೆ

ವಿಜಯಪುರ: ಜಿಲ್ಲೆಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಹಾಂಕಾAಗ್ ಮೂಲದ ಟಾಲ್ ಅಪಾರೆಲ್ಸ್ ಜವಳಿ ಹಾಗೂ ಸಿದ್ಧ ಉಡುಪು ಉತ್ಪಾದನಾ ಕಂಪನಿಯು 700 ರಿಂದ 800 ಕೋಟಿ ರೂ ಹೂಡಿಕೆ ಮಾಡಲು ಉತ್ಸುಕತೆ ತೋರಿರುವ ಹಿನ್ನೆಲೆಯಲ್ಲಿ ಕಂಪನಿಯ ನಿರ್ದೇಶಕರಾದ ಇತಾನ್ ಯಾಂಗ್ ಅವರೊಂದಿಗೆ ಬೆಂಗಳೂರಿನಲ್ಲಿ ನಿನ್ನೆ ಸಭೆ ನಡೆಸಲಾಯಿತು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಅವರು ತಿಳಿಸಿದ್ದಾರೆ.

ಜವಳಿ ಖಾತೆ ಸಚಿವರೊಂದಿಗೆ ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಂಪನಿ ನಿರ್ದೇಶಕರಿಗೆ ಮಾಹಿತಿ ಒದಗಿಸಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಪ್ರೋತ್ಸಾಹ ಹಾಗೂ ರಿಯಾಯಿತಿ ಕುರಿತು ವಿಸ್ತೃತವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜವಳಿ ಇಲಾಖೆಯ ಆಯುಕ್ತರಾದ ಟಿ ಎಚ್ ಎಂ ಕುಮಾರ್ ಹಾಗೂ ಕೆ ಐಎಡಿಬಿ ಸಿಇಒ ಡಾ. ಮಹೇಶ್ ಇಲಾಖಾ ಅಧಿಕಾರಿಗಳು ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ ಮನವರಿಕೆ ಮಾಡಿದರು.

ಹಾಂಕಾಂಗ್ ಟಾಲ್ ಅಪಾರೆಲ್ಸ್ ಕಂಪನಿಯ ನಿರ್ದೇಶಕರಾದ ಇತಾನ್ ಯಾಂಗ್ ಅವರಿಗೆ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳು ಮನವರಿಕೆಯಾದ ಹಿನ್ನೆಲೆಯಲ್ಲಿ ಇಂದು (ಜು.8)ರಂದು ಅಭಿವೃದ್ಧಿಪಡಿಸಿದ ಮುಳವಾಡ ಕೈಗಾರಿಕಾ ಪ್ರದೇಶಕ್ಕೆ (ಕೆಐಎಡಿಬಿ) ತಂಡ ಭೇಟಿ ನೀಡಿ ಪರಿವೀಕ್ಷಣೆ ನಡೆಸಿತು. ಈ ಸಂದರ್ಭದಲ್ಲಿ  ಜವಳಿ ಇಲಾಖೆಯ ಆಯುಕ್ತರಾದ ಟಿ ಎಚ್ ಎಂ ಕುಮಾರ್, ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ದಾನಮ್ಮನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.   

ಜವಳಿ ಮತ್ತು ಸಿದ್ಧ ಉಡುಪು ಘಟಕ ಸ್ಥಾಪನೆಯಿಂದ ಐದರಿಂದ ಆರು ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದ್ದಾರೆ.

09-07-2023 EE DIVASA KANNADA DAILY NEWS PAPER

ಆರ್‌ಸಿಯುಬಿ ನಾಮನಿರ್ದೇಶನ ಸದಸ್ಯರಾಗಿ ಮಣ್ಣೂರ ನೇಮಕ


ಈ ದಿವಸ ವಾರ್ತೆ
ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ತಿನ ಪ್ರಾಧಿಕಾರಕ್ಕೆ ನಾಮ ನಿರ್ದೇಶನ ಸದಸ್ಯರನ್ನಾಗಿ ಕುಲಪತಿಗಳನುಮೋದನೆ ಮೇರೆಗೆ ವಿಜಯಪುರ ನಗರದ ವಿದ್ಯಾ ವರ್ಧಕ ಸಂಘ ವಿವಿಎಸ್ ಆರ್ಟ್ಸ್, ಕಾಮರ್ಸ್ ಮತ್ತು ಬಿಸಿಎ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಜಿ.ಎಚ್. ಮಣ್ಣೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯನ್ನುಕುಲ ಸಚಿವರರಾದ ರಾಜಶ್ರೀ ಜೈನಾಪೂರ ಹೊರಡಿಸಿದ್ದಾರೆ. ಜಿ.ಎಚ್. ಮಣ್ಣೂರ ಅವರನ್ನು ದರಬಾರ  ಆಡಳಿತ ಮಂಡಳಿ ವರ್ಗದವರು, ಉಪನ್ಯಾಸಕ ಸಿಬ್ಬಂದಿ ಹಾಗೂಅಪಾರ ವಿದ್ಯಾರ್ಥಿ ಬಳಗದವರು ಅಭಿನಂದಿಸಿದ್ದಾರೆ.

ಸಮ್ಮೇಳನದ ಪೂರ್ವ ಸಿದ್ದತಾ ಸಭೆ

 ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ ಗದಗ ಹಾಗೂ ಜಿಲ್ಲಾ ಘಟಕ ವಿಜಯಪುರ ಬೆಳ್ಳಿ ಸಂಭ್ರಮದ ನಿಮಿತ್ಯ‌ ಜುಲೈ ೨೯, ಮತ್ತು ೩೦- ೨೦೨೩ ರಂದು ಎರಡು ದಿನಗಳ ಕಾಲ ನಡೆಯುವ ೧೦ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವ  ಸಿದ್ದತೆಗಾಗಿ 3ನೇ ಪೂರ್ವ ಭಾವಿ ಸಭೆಯನ್ನು  ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿಜಯಪುರದಲ್ಲಿ ದಿನಾಂಕ ೯/೭/೨೦೨೩ ರಂದು ಬೆಳಿಗ್ಗೆ 10.00 ಗಂಟೆಗೆ ಕರೆಯಲಾಗಿದೆ. 

ಈ  ಪೂರ್ವಭಾವಿ ಸಭೆಗೆ ದಸಾಪದ ರಾಜ್ಯ/ಜಿಲ್ಲಾ/ತಾಲ್ಲೂಕಿನ ಎಲ್ಲ ಪದಾಧಿಕಾರಿಗಳು, ದಲಿತ ಸಾಹಿತಿಗಳು, ಪ್ರಗತಿಪರ  ಚಿಂತಕರು,ಮತ್ತು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಈ ಸಭೆಗೆ ಆಗಮಿಸಲು ರಾಜ್ಯ ಘಟಕದ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ, ಬೆಳಗಾವಿ ವಿಭಾಗೀಯ ಸಂಯೋಜಕರಾದಕರಾದ ಡಾ.ಸುಜಾತಾ ಚಲವಾದಿ,ವಿಜಯಪುರ ,ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಬಸವರಾಜ ಜಾಲವಾದಿ ಜಂಟಿಯಾಗಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಸ್ಮರಣ ಸಂಚಿಕೆ ಕಥೆ, ಕವಿತೆ ಲೇಖನಗಳಿಗೆ ಆಹ್ವಾನ


 ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದಗ ವತಿಯಿಂದ ಜುಲೈ 29 ಹಾಗೂ 30- 2023 ರಂದು ವಿಜಯಪುರ ನಗರದ ಕಂದಗಲ್ಲ ಹಣಮಂತರಾಯ ರಂಗ ಮಂದಿರದಲ್ಲಿ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜರುಗಲಿದೆ. ಈ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ತರಲಾಗುತ್ತಿದೆ ಹಾಗಾಗಿ, ದಲಿತ ಸಾಹಿತ್ಯ, ದಲಿತ ಚಳುವಳಿ ನಡೆದು ಬಂದ ದಾರಿ, ದಲಿತ ಸಮುದಾಯದ ಮುಂದಿನ ದಾರಿ, ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರನ್ನು ಇಂದಿನ ಪೀಳಿಗೆಗ ಪರಿಚಯಿಸುವ ವಿಭಿನ್ನ ಲೇಖನಗಳು ಮತ್ತು ಕಥೆ, ಕವಿತೆ ಹಾಗೂ ಗಝಲ್ ಗಳನ್ನು ಈ ಸ್ಮರಣ ಸಂಚಿಕೆಗೆ ಕಳಿಸಬಹುದಾಗಿದೆ. 



ಆಸಕ್ತ ಕವಿ ಬರಹಗಾರರು ಜುಲೈ 16.07.2023 ರ ಒಳಗಾಗಿ dspayg@gmail.com ಮೇಲ್ ಐಡಿಗೆ ತಮ್ಮ ಲೇಖನ, ಕಥೆ, ಕವಿತೆ ಗಝಲ್ ಗಳನ್ನು ಕಳುಹಿಸಬಹುದು. ನುಡಿ ಮತ್ತು ಪಿಡಿಎಫ್ ಫೈಲ್ ಮಾಡಿ ಕಳಿಸಿಕೊಡಬಹುದಾಗಿದೆ ಸಂಪಾದಕ ಮಂಡಳಿ ಆಯ್ದವುಗಳನ್ನು ಮಾತ್ರ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.