Friday, October 13, 2023

14-10-2023 EE DIVASA KANNADA DAILY NEWS PAPER

ಇಸ್ರೇಲ್‍ನಲ್ಲಿ ಸಿಲುಕಿದ ಸುರಕ್ಷಿತವಾಗಿ ತವರೂರಿಗೆ ಮರಳಿ ಬಂದ ಪ್ರಾಧ್ಯಾಪಕ

ಈ ದಿವಸ ವಾರ್ತೆ

ವಿಜಯಪುರ: ಇಸ್ರೇಲ್‍ನಲ್ಲಿ ಸಿಲುಕಿದ ವಿಜಯಪುರ ಮೂಲದ ಸಹಾಯಕ ಪ್ರಾಧ್ಯಾಪಕ ನಗರಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಜೆರುಸೆಲಂ ನಿಂದ ವಿಮಾನ ಮೂಲಕ ಸ್ವದೇಶಕ್ಕೆ ಸುಮೇಶ್ ಗೋವಿಂದ ಆಗಮಿಸಿದ್ದು, ಸುಮೇಶ್ ಅವರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಇಸ್ರೇಲ್‍ನಲ್ಲಿನ ಪರಿಸ್ಥಿತಿ ಹಂಚಿಕೊಂಡರು.

ಈ ವೇಳೆ ಡಿಸಿ ಭೂಬಾಲನ್ ಸುಮೇಶ್ ಅವರಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು.

ಸುಮೇಶ್ ವಿಜಯಪುರದ ಹಿಟ್ನಳ್ಳಿಯ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eeಜivಚಿsಚಿ@gmಚಿiಟ.ಛಿom ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.

ಪ್ರದೇಶ ಕುರುಬರ ಸಂಘಕ್ಕೆ ಸಂಘಟನಾ ಕಾರ್ಯದರ್ಶಿ ಯಾಗಿ ರವಿ ಕಿತ್ತೂರ ಅವಿರೋಧ ಆಯ್ಕೆ

ಈ ದಿವಸ ವಾರ್ತೆ

ವಿಜಯಪುರ: ಗಾಂಧಿನಗರ ಬೆಂಗಳೂರಿನಲ್ಲಿನ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ 35 ಜನ ಪದಾಧಿಕಾರಿಗಳು ಚುನಾವಣೆಯಲ್ಲಿ 34 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರಲ್ಲಿ ವಿಜಯಪುರದ ರವಿ ಕಿತ್ತೂರ ಅವರನ್ನು ಸಂಘದ ಸಂಘಟನಾ ಕಾರ್ಯದರ್ಶಿಯಾಗಿಯನ್ನಾಗಿ ಅವಿರೋಧ ಆಯ್ಕೆಮಾಡಲಾಗಿದೆ. 

35 ಜನ ಪದಾಧಿಕಾರಿಗಳ ಆಯ್ಕೆಯನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಸಚಿವರಾದ ಬೈರತಿ ಸುರೇಶ, ಮಾಜಿ ಸಚಿವರಾದ ಎಚ್. ಎಂ. ರೇವಣ್ಣ. ಎಚ್ ವಿಶ್ವನಾಥ್, ಬಂಡೆಪ್ಪ ಕಾಶಂಪುರ. ಮಾಜಿ ರಾಜ್ಯಾಧ್ಯಕ್ಷರಾದ ಡಾ. ರಾಜೇಂದ್ರ ಸಣ್ಣಕ್ಕಿ. ಸುಬ್ರಹ್ಮಣ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪನವರು . ವೆಂಕಟೇಶ್ ಮೂರ್ತಿ. ರಾಮಕೃಷ್ಣರವರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

102 ವಷರ್À ಇತಿಹಾಸ ಹೊಂದಿದ ಕುರುಬ ಸಮಾಜದ ಸಂಘಕ್ಕೆ ಅಳೆದು ತೂಗಿ ಕಳೆದ ಬಾರಿ ರಾಜ್ಯ ಸಹ ಕಾರ್ಯದರ್ಶಿಯಾಗಿದ್ದ ಜಿಲ್ಲೆಯ ರವಿ ಕಿತ್ತೂರ ಅವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಡ್ತಿ ನೀಡಿ ಮರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ಆಯ್ಕೆಯಾಗಲು ಶ್ರಮಿಸಿದ ರಾಜ್ಯ ನಾಯಕರಿಗೆ ಹಾಗೂ ರಾಜ್ಯದ 118 ನಿರ್ದೇಶಕರಿಗೆ ಜಿಲ್ಲೆಯ ಹಾಲುಮತ ಸಮಾಜದ ಅಧ್ಯಕ್ಷರು. ಮುಖಂಡರು ನೌಕರರ ವರ್ಗದವರು ವಿವಿಧ ಸಂಘಟನೆಗಳ ಮುಖಂಡರು ಅಭಿನಂದಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eeಜivಚಿsಚಿ@gmಚಿiಟ.ಛಿom ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.

ವಿದ್ಯುತ್ ಖರೀದಿ ಕುರಿತಂತೆ ಮುಖ್ಯ ಮಂತ್ರಿಗಳ ಅಧ್ಯಕ್ಷ ತೆಯಲ್ಲಿ ಇಂದು ಸಭೆ




ಈ ದಿವಸ ವಾರ್ತೆ

ಬೆಂಗಳೂರು, ಅಕ್ಟೋಬರ್ 13: ಮಳೆ ಕಡಿಮೆಯಾಗುವುದರಿಂದ  ಹಾಗೂ ಬೇಸಿಗೆ ರೀತಿಯಲ್ಲಿ ವಿದ್ಯುತ್ತಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

 ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದೆ.  ಕಳೆದ ವರ್ಷ ಇದೇ ವೇಳೆಗೆ 900 ಮೆ.ವ್ಯಾಟ್ ಬಳಸಲಾಗುತ್ತಿತ್ತು. ಈ ಬಾರಿ 1500 ರಿಂದ 1600 ಮೆ.ವ್ಯಾಟ್ ಬೇಡಿಕೆ ಇರುವುದರಿಂದ  ತೊಂದರೆಯಾಗಿದೆ. ವಿದ್ಯುತ್ ನ್ನು ಹೊರಗಿನಿಂದ ಹೇಗೆ ಖರೀದಿಸುವುದು ಎಂದು ಚರ್ಚಿಸಲು ಇಂದು  ಮಧ್ಯಾಹ್ನ ಸಭೆ ಕರೆಯಲಾಗಿದೆ ಎಂದರು. 

 ವಿದ್ಯುತ್ ಉತ್ಪಾದನೆ ಮಾಡುವವರು ಸರ್ಕಾರಕ್ಕೆ ಮಾರಾಟ ಮಾಡಬೇಕು, ಬೇರೆಲ್ಲಿಯೂ ಮಾರಬಾರದೆಂದು  ನಿನ್ನೆ ಅದೇಶವನ್ನೂ ಮಾಡಲಾಗಿದೆ ಎಂದು ತಿಳಿಸಿದರು. 

ಬಿಜೆಪಿಗೆ ವಸ್ತುಸ್ಥಿತಿ  ತಿಳಿದಿಲ್ಲ

ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಜೆಪಿಯವರು ಹೇಳಿದ್ದಕ್ಕೆಲ್ಲಾ ಉತ್ತರ ನೀಡಲು ಆಗುವುದಿಲ್ಲ. ಅವರು ರಾಜಕೀಯವಾಗಿ ಮಾತನಾಡುತ್ತಾರೆ. ವಸ್ತುಸ್ಥಿತಿ ಅವರಿಗೆ ತಿಳಿದಿದೆಯೇ. ಮಳೆ ಇಲ್ಲದೆ ಬರಗಾಲ ಬಂದು ತೊಂದರೆಯಾಗಿದೆ.   ಆದರೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.ಅವರು ಹೇಳಿದಂತೆ ಸಂಪೂರ್ಣ ಲೋಡ್ ಶೆಡ್ಡಿಂಗ್ ಆಗಿಲ್ಲ. ಮೂರು ಫೇಸ್ ನಲ್ಲಿ 7 ಗಂಟೆ ವಿದ್ಯುತ್ ನೀಡಬೇಕೆಂದಿರುವುದನ್ನು ಕೊಡಲು  ಆಗುತ್ತಿಲ್ಲ ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ,ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
 ವ್ಯಾಟ್ಸಪ್ : 7204279187/ 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.