Monday, May 25, 2020

26-05-2020 EE DIVASA KANNADA DAILY NEWS PAPER

ವಿಜಯಪುರದಲ್ಲಿ 70 ಪಾಸಿಟಿವ್ ಪ್ರಕರಣಗಳು ದೃಢ :  ಇಬ್ಬರು  ಗುಣಮುಖ ರೋಗಿಗಳು  ಆಸ್ಪತ್ರೆಯಿಂದ ಬಿಡುಗಡೆ
ಈ ದಿವಸ ವಾರ್ತೆ ವಿಜಯಪುರ: ಕೋವಿಡ್-19ದಿಂದ ಗುಣಮುಖರಾದ ಇಬ್ಬರು ಇಂದು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ,ಈವರೆಗೆ ಒಟ್ಟು 44 ರೋಗಿಗಳು ಗುಣಮುಖರಾಗಿದ್ದಾರೆ ಎಂದು  ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.
ಇಂದು ರೋಗಿ ಸಂಖ್ಯೆ 594(22 ವರ್ಷದ ಯುವ ಕ) ಹಾಗೂ ರೋಗಿ ಸಂಖ್ಯೆ 856(20 ವರ್ಷದ ಯುವತಿ) ಗುಣಮುಖರಾಗಿ,ಬಿಡುಗಡೆ ಹೊಂದಿದ್ದು
ಅದರಂತೆ  ಸಧ್ಯ ಆಸ್ಪತ್ರೆಯಲ್ಲಿ  22 ಸಕ್ರಿಯ ಕೋವಿಡ್-19 ರೋಗಿಗಳಿದ್ದು, ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
 ಜಿಲ್ಲೆಯಲ್ಲಿ ಇಂದು ದಿನಾಂಕ 25-೦5-2020 ರಂದು ಒಬ್ಬರಿಗೆ ಕೋವಿಡ್-೧೯ ಸೊಂಕು ತಗುಲಿರುವುದು ದೃಡಪಟ್ಟಿದೆ. ರೋಗಿ ಸಂಖ್ಯೆ: 2136(28 ವರ್ಷದ ಮಹಿಳೆ ) ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆ  ಹೊಂದಿದ್ದಾರೆ.  ಅವರಿಗೆ  ಕ್ವಾರೈಂಟನ್ ಮಾಡಿ ,ಅವಶ್ಯಕ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 70 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 44 ಜನರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.


ಇನ್ನುಳಿದ 22ಕೋವಿಡ್ ಸೋಂಕಿತ ರೋಗಿಗಳಿದ್ದು,ನಾಲ್ವರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ.  14,954 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ.  1866  -ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 13,042 ಜನರು (1 ರಿಂದ 28ದಿನಗಳ) ರಿಪೋರ್ಟಿಂಗ್  ಅವಧಿಯಲ್ಲಿದ್ದು, ಈವರೆಗೆ  12,466 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 4,263 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 8133 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಗುಣಮುಖ ರೋಗಿಗಳ ಬಿಡುಗಡೆ  ಸಂದರ್ಭದಲ್ಲಿ ಡಾ ಶರಣಪ್ಪ  ಕಟ್ಟಿ, ಡಾ ಲಕ್ಕಣ್ಣವರ್,ಡಾ ಸಂದೀಪ್ ಸಜ್ಜನ್ ,ಆರ್. ಎನ್ ಸಾವಳಗಿ,ಡಾ ಬಿರಾದಾರ್ ,ಡಾ ಇಂಗಳೆ,ಜಗದೀಶ್  ಮಾಣಕರ್ ,ಜಿ.ಸಿ ಉಪಾಸೆ,ಅಶೋಕ್ ಬೆಳ್ಳಣ್ಣವರ್,ಸಂತೋಷ ಬಿರಾದಾರ್, ಅಜಿತ್ ಕೊಟ್ನಿಸ್ ಉಪಸ್ಥಿತರಿದ್ದರು.