Tuesday, February 13, 2024

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾದಿಗ ದಂಡೋರಾದಿಂದ ಹಲಿಗೆ ಮೇಳದೊಂದಿಗೆ ಫೆ.16 ರಂದು ಬೃಹತ್ ಪ್ರತಿಭಟನಾ ರ್ಯಾಲಿ




 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ತ್ವರಿತಗತಿಯಲ್ಲಿ ಜಾರಿಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಜಾತಿಯ ಬೀಜ ಬಿತ್ತುವ ಸವರ್ಣೀಯರ ಮೇಲೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮಾದಿಗ ದಂಡೋರಾ (ಮಾಪಣ್ಣ ಹದನೂರ ಬಣ) ರಾಜಕೀಯೇತರ ಪ್ರಬಲ ಮಾದಿಗ ಸಂಘಟನೆ ಮಾದಿಗ ರಿಜರವೇಷನ್ ಹೋರಾಟ ಸಮಿತಿ ವಿಜಯಪುರ ಜಿಲ್ಲಾ ವತಿಯಿಂದ ಫೆ. 16 ರಂದು ಶುಕ್ರವಾರ 12 ಗಂಟೆಗೆ ನಗರದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಗಾಂಧಿ ವೃತ್ತದಿದ ಜಿಲ್ಲಾಧಿಕಾರ ಕಚೇರಿಯವರಿಗೆ ಬೃಹತ್ ಪ್ರತಿಭಟನಾ ರ್ಯಾಲಿ ಹಲಿಗೆ ಮೇಳದೊಂದಿಗೆ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ಎಲ್ಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಾದಿಗ ದಂಡೋರಾ ರಾಜ್ಯ ಕಾರ್ಯಾದ್ಯಕ್ಷ ಪ್ರಭಾಕರ ಎಂ. ಹದನೂರ ಹೇಳಿದರು.


ನಗರದ ಹಳೆಯ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ದಂಡೋರಾ ಹೋರಾಟ ಸಮಿತಿಯು ಮೀಲಾಯಿತಿಯಲ್ಲಿ ಮಾದಿಗರಿಗಾದ ಅನ್ಯಾಯವನ್ನು ಮನಗಂಡು 1997ರಲ್ಲಿ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಮಾಪಣ್ಣ ಹದನೂರ ಅವರ ನೇತೃತ್ವದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾಯಿತಿಯನ್ನು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯದಾದ್ಯಂತ ಹೋರಾಟವನ್ನು ಪ್ರಾರಂಭಿಸಿರುವುದು ತಮಗೆಲ್ಲಾ ತಿಳಿದ ವಿಷಯ 1974 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿ। ದೇವರಾಜ ಅರಸು ರವರು ನೇಮಿಸಿದ ಎಲ್.ಜಿ. ಹಾವನೂರ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜನಾಂಗವೇ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ವರದಿ ನೀಡಿತು ಈ ಆಯೋಗದ ವರದಿಯ ಜಾರಿಗೆ ಆಗ್ರಹಿಸಿ 1997 ರಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಸಾವಿರಾರು ಮಾದಿಗ ಕುಲಭಾಂದವರೊಂದಿಗೆ ಅಂದಿನ ಮುಖ್ಯಮಂತ್ರಿ ಗಳಾಗಿದ್ದ ದಿ|| ಜೆ. ಹೆಚ್. ಪಟೇಲ್ ರವರಿಗೆ ಮನವಿ ಪತ್ರವನ್ನು ನಲ್ಲಿಸುವ ಮೂಲಕ ಹೋರಾಟವನ್ನು ಆರಂಭಿಸಿತ್ತು. ಮಾದಿಗ ದಂಡೋರಾ ಉಗ್ರವಾದ ಹೋರಾಟಕ್ಕೆ ಮಣಿದ 2005ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ದಿ। ಧರ್ಮಸಿಂಗ್ ಸರಕಾರವ ಮೀಸಲಾತಿಯ ತಾರತಮ್ಮಯದ ಕುರಿತು ವಿಚಾರಣೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ನೇತೃತ್ವದಲ್ಲಿಬ 2005 ರಿಂದ ಸುದೀರ್ಘವಾಗಿ 7 ವರ್ಷಗಳ ಕಾಲ ಹಳ್ಳಿಗಳಲ್ಲಿ ಹಾಗೂ ಕಾಲೂಕು, ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಗಳು ಹಾಗೂ ಉಪಜಾತಿಗಳ ಗೊಂದಲವನ್ನು ಸರಿಪಡಿಸಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ 101 ಉಪಜಾತಿಗಳಲ್ಲಿ ವಾದಿಗೆ ಮತ್ತು ಮಾದಿಗ ಉಪಜಾತಿಗಳು ಜನಸಂಖ್ಯೆಯಲ್ಲಿ ಹೆಚ್ಚಾಗಿದೆ. ಹಾಗೆಯೇ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿದರೆಂದು ವರದಿ ನೀಡಿದೆ. ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ಕ್ರಮವಾಗಿ ಶೇ. 33.4 ರಷ್ಟು ಜನಸಂಖ್ಯೆ ಇರುವ ಮಾದಿಗ ಸಹ ಸಂಬಂಧಿತ ಜಾತಿಗಳಿಗೆ ಶೇ. 6 ರಷ್ಟು ಮೀಸಲಾತಿಯನ್ನು ಶೇ.30 ರಷ್ಟು ಇರುವ ಹೊಲೆಯ ಸಹ ಸಂಬಂಧಿತ ಜಾತಿಗಳಿಗೆ ಶೇ. 5 ರಷ್ಟು ಮೀಸಲಾತಿ ಹಾಗೂ ಶೆ. 10.94 ರಷ್ಟು ಇರುವ ಅಲೇಮಾರಿ ಅಸ್ಪಶ್ಯ ಇತರೆ ಜಾತಿಗಳಿಗೆ ಶೇ.1 ರಷ್ಟು ಮೀಸಲಾತಿ, ಶೇ. 23.63 ರಷ್ಟು ಇರುವ ದೃಶ್ಯ ಜಾತಿಗಳಿಗೆ ಶೇ. 3 ರಷ್ಟು ಮೀಸಲಾತಿಯನ್ನು ಜನಸಂಖ್ಯೆ ಆಧಾರಿತವಾಗಿ ಒಳಮೀಸಲಾತಿ ಕಲ್ಪಿಸಬೇಕೆಂದು 2012 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ.ವಿ. ಸದಾನಂದಗೌಡ ಅವರ ನೇತೃತ್ವದ ರಾಜ್ಯ ಸರಕಾರಕ್ಕೆ ಶಿಪಾರಸ್ಸು ಮಾಡಿದೆ.

ಆಯೋಗದ ವರದಿಯನ್ನು ಅಂದಿನ ರಾಜ್ಯ ಸರಕಾರವು ವರದಿಯನ್ನು ಅನುμÁ್ಟನಗೊಳಿಸದೆ ಶೋಷಿತ ಮಾದಿಗರನ್ನು ವಂಚಿಸಿರುವುದು ಸ್ಪಷ್ಟ ವಾಗಿ ಗೋಚರವಾಗಿದೆ ಅಂದಿನ ವಿರೋಧ ಪಕ್ಷದ ನಾಯಕರಾಗಿದ ಶ್ರೀ ಸಿದ್ದರಾಮಯ್ಯನವರು 2013 ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುμÁ್ಠನಗೊಳಿಸುವುದಾಗಿ ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ, ನಂತರ ಆಯೋಗದ ವರದಿ ಯ ಜಾರಿಗೆ ಕಿಂಚಿತ್ತು ಕಾಳಜಿ ತೋರದೆ ತಮ್ಮ ಅಧಿಕಾರ ಪೂರ್ಣಗೊಳಿಸಿ ಮಾದಿಗರ ಕೆಂಗಣಿಗೆ ಗುರಿಯಾಗಿ 2018 ರಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದ್ದಾರೆ. 

ಇಂದಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀಯುತ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟದ ಸಭೆಯಲ್ಲಿ ನ್ಯಾಯಮೂರ್ತಿ ಶ್ರೀ ವಿ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೆಗೊಳಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿಬೇಕೆಂದು ಮಾದಿಗ ದಂಡೋರಾ ಮಾದಿಗ ಮೀಸಲಾತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಾಪಣ್ಣ ಹದನೂರ ಹಾಗೂ ವಿಜಯಪುರ ಜಿಲ್ಲಾಧ್ಯಕ್ಷರಾದ ಶ್ರೀ ಮುತ್ತಣ್ಣ ಬ. ಸಾಸನೂರ (ವಕೀಲರು) ಇವರ ಸತತ 20 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿದ್ದು ಮಾನ್ಯ ಕರ್ನಾಟಕ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಅವರ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಹಾಗೂ ಕರ್ನಾಟಕ ಮತ್ತು ಮಾದಿಗ ಕುಲಬಾಂಧವರು ವಿಜಯಪುರ ಜಿಲ್ಲೆಯಲ್ಲಿ ಈ ಮೇಲ್ಕಾಣಿಸಿದ ದಿನಾಂಕದಂದು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಲಿಗೆ ಮೇಳೆದೊಂದಿಗೆ ಹಮ್ಮಿಕೊಂಡಿದ್ದು, ಈ ಪ್ರತಿಭಟನಾ ರ್ಯಾಲಿಯಲ್ಲಿ ಸಮಸ್ತ ವಿಜಯಪುರ ಜಿಲ್ಲೆಯ ಮಾದಿಗ ದಂಡೋರಾ ಪದಾಧಿಕಾರಿಗಳು ಗುರುಹಿರಿಯರು, ಸಾಹಿತಿಗಳು, ಕಲಾವಿದರು, ಮಾದಿಗ ಸಮಾಜದ ಹಿತೈಷಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನಾ ರ್ಯಾಲಿಯನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ಜಿಲ್ಲಾ ಸಮಿತಿ ಜಿಲ್ಲಾ ಅಧ್ಯಕ್ಷರಾದ ಮುತ್ತಣ್ಣ ಬ. ಸಾಸನೂರ (ವಕೀಲರು), ಡಿ. ಬಿ. ಮದೂರ, ತಿಪ್ಪಣ್ಣ ಮಾದರ, ಸೋಮು ಬಿರಲದಿನ್ನಿ, ಅಶೋಕ ನಡುವಿನಮನಿ, ಪಾವಡೆಪ್ಪ ಟಕ್ಕಳಕಿ,  ಬಸವರಾಜ ವನಕಿಹಾಳ, ಸುನೀಲ ಸಂದ್ರಿಮನಿ, ಸಾಯಬಣ್ಣ ರಾಮರಥ, ಸಂಜೀವ ಜಾಲವಾದಿ, ಪರಶುರಾಮ ದ್ಯಾಬೇರಿ, ಭೀಮಣ್ಣ ಸೊನ್ನದ, ಸುರೇಶ ರೋಣಿಹಾಳ, ಅಶೋಕ ದೇವೇಂದ್ರ ರತ್ನಾಕರ, ಮುತ್ತು ಗುಡಿಮನಿ, ದುರಗೇಶ ಡೋಣೂರ, ಬಸವರಾಜ ವಂದಾಲ, ಬಾಲು ಗುಡಿಮನಿ, ವಿಠಲ ಆಸಂಗಿ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಸೆಕ್ಯುರಿಟಿ ಗಾರ್ಡ್ ನಿಂದಲೇ ಎಟಿಎಂನಲ್ಲಿರುವ ಹಣ ಕಳ್ಳತನಕ್ಕೆ ಯತ್ನ

 


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ: ಎಟಿಎಂ ಸೆಕ್ಯುರಿಟಿ ಗಾರ್ಡ್ ವೊಬ್ಬ ಎಟಿಎಂನಲ್ಲಿರುವ ಹಣ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಡಿಸಿಸಿಬ್ಯಾಂಕ್‌ನ ಎಟಿಎಂನಲ್ಲಿ ನಡೆದಿದೆ.

ಎಟಿಎಂ ಸೆಕ್ಯುರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರೇವಣ್ಣಸಿದ್ದ ಉರ್ಫ್ ಸಾಗರ ಲಾಳಸಂಗಿ ಎಂಬವನು, ತನ್ನ ದ್ವಿಚಕ್ರ ವಾಹನದಲ್ಲಿ ಕಬ್ಬಿಣ ಕಟ್ ಮಾಡುವ ಗ್ರ್ಯಾಂಡರ್ ಮಶೀನ, ಸುತ್ತಿಗೆ ತಂದು, ಕತ್ತರಿಸಲು ಯತ್ನ ಮಾಡಿದ್ದಾನೆ.

ಲಾಕರ್ ಕಟ್ ಆಗದೆ ಇದ್ದ ಕಾರಣ ಹಣ ಕಳ್ಳತನ ಮಾಡಲು ಸಾಧ್ಯವಾಗಿಲ್ಲ.

ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಈರಣ್ಣ ತೆಲ್ಲೂರ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

14-02-2024 EE DIVASA KANNADA DAILY NEWS PAPER

13-02-2024 EE DIVASA KANNADA DAILY NEWS PAPER