Friday, July 21, 2023

ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಬೃಹತ್ ಪ್ರಮಾಣದ ಹೋರಾಟದ ಅಗತ್ಯ : ಕಾಂ. ನಾಡಗೌಡರು


ಈ ದಿವಸ ವಾರ್ತೆ

 ವಿಜಯಪುರ: ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಬೃಹತ್ ಪ್ರಮಾಣದ ಹೋರಾಟದ ಅಗತ್ಯ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಕಾಂ. ಎಂ. ಬಿ. ನಾಡಗೌಡರು ಹೇಳಿದರು.

ಅವರು ನಗರದ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ರಿ) (ಸಿಐಟಿಯು) ಸಂಯೋಜಿತ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ 10 ನೇ ಜಿಲ್ಲಾ ಸಮ್ಮೇಳನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ನೌಕರರು ಸಂಘಟಿತರಾಗಲು ಕರೆ ನಿಡಿದರು. ಹೋರಾಟದಿಂದ ವೇತನ ಹೆಚ್ಚಳ ಕಂಡಿದೆ. ಹೋರಾಟದಿಂದ ಅನೇಕರು ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಭೀಮಶಿ ಕಲಾದಗಿ  ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನ ಉದ್ದೇಶಿಸಿ ಹಿರಿಯ ಹೋರಾಟಗಾರರಾದ ಭೀಮಶಿ ಕಲಾದಗಿ ಮಾತನಾಡಿ, ಹೋರಾಟ ಫಲದಿಂದ ವೇತನ, ಬಡ್ತಿ ಸೇರಿದಂತೆ ನೌಕರರಿಗೆ ಅನುಕೂಲವಾಗಿದೆ. ಈಗಾಗಲೇ ಸಂಘಟನೆಯಿAದ ಸಂಘ ಬಲಿಷ್ಠವಾಗಿದೆ. ಇನ್ನು ಹೆಚ್ಚು ಹೆಚ್ಚಾಗಿ ಸಂಘವು ಬಲಿಷ್ಠಗೊಳ್ಳಲು ಎಲ್ಲರೂ ಕೈ ಜೋಡಿಸಬೇಕು ಎಂದರು. ಸಂಘದ ಅವಿರತ 1988 ರಿಂದ ಮಾಡಿದ ಹೋರಾಟ ನೌಕರರು ವೇತನ ಸರಿಯಾಗಿ ಪಡೆಯುವಂತಾಗಿದೆ.ಕನಿಷ್ಠ ವೇತನ,ಅನುಮೋದನೆ ಪಡೆಯಲು ಸಾಧ್ಯವಾಯಿತು ,ನೌಕರರು ಸಂಘಟಿತರಾಗಲು ಕರೆ ನೀಡಿದರು.

ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲರಜಾಕ ಎಂ ತಮದಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಅಣ್ಣಾರಾಯ ಈಳಗೇರ ಅವರನ್ನು ಸನ್ಮಾನಿಸಲಾಯಿತು.

ಜಿ.ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಸಿಐಟಿಯು ಜಿಲ್ಲಾಧ್ಯಕ್ಷರಾದ ಕಾಂ ಅಣ್ಣಾರಾಯ ಇಳಗೇರ, ಪ್ರಧಾನ ಕಾರ್ದಯರ್ಶಿ ಲಕ್ಷಣ ಹಂದ್ರಾಳ, ವಿಠ್ಠಲ ಹೊನಮೋರೆ, ಅಯ್ಯನಗೌಡ ಬಾಗೇವಾಡಿ, ಜಿ.ಎಸ್.ಗಂಗಶೆಟ್ಟಿ, ಶಿವನಗೌಡ ಬಿರಾದಾರ, ಮಲ್ಲು ತಳೆವಾಡ, ಯಲ್ಲನಗೌಡ ಬಿರಾದಾರ, ಶ್ರೀಶೈಲಕವಿ, ತುಕಾರಾಮ ಮಾರನೂರ, ಮಲ್ಲಿಕಾರ್ಜುನ ಮಾದರ, ಎಂ.ಕೆ.ಕಳ್ಳಗಿ, ಲಾಲಾಹ್ಮದ ಶೇಖ,ಕೆ.ಐ. ಮಡಿವಾಳರ, ಮುದಿಗೌಡರ ಮುಗಳಿ,  ಶ್ರೀಮತಿ ಕಾಳಮ್ಮ ಬಡಿಗೇರ, ಶ್ರೀಮತಿ ಭಾರತಿ ವಾಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಲಕ್ಷ್ಮಣ ಹಂದ್ರಾಳ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿವಾನಂದ ಬಿರಾದಾರ ಸ್ವಾಗತಿಸಿದರು. ಚಂದ್ರಶೇಖರ ವಾಲಿಕಾರ ನಿರೂಪಿಸಿದರು. ರಾಮಚಂದ್ರ ನಂದೂರ ವಂದಿಸಿದರು.

ಇದೇ ಸಂದರ್ಭ ದಲ್ಲಿ  ಹೋರಾಟಗಾರ್ತಿ ಭಾರತಿ ವಾಲಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ದಲ್ಲಿ  ಹೋರಾಟಗಾರ್ತಿ ಕಾಳಮ್ಮ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಕುವೆಂಪು ಪ್ರಶಸ್ತಿಗೆ ಹಿರಿಯ ಸಾಹಿತಿ ಮಲ್ಲಿಕಾ ಘಂಟಿ ಆಯ್ಕೆ

           

ಈ ದಿವಸ ವಾರ್ತೆ

ವಿಜಯಪುರ: ಕುವೆಂಪು ಕಲಾನಿಕೇತನ ಸಂಸ್ಥೆಯು ರಾಷ್ಟ್ರಕವಿ ಕುವೆಂಪುರವರ 119ನೇ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ 'ರಾಷ್ಟ್ರ ಕವಿ ಕುವೆಂಪು ಪ್ರಶಸ್ತಿ'ಗೆ ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಎಸ್‌.ಘಂಟಿ ಆಯ್ಕೆಯಾಗಿದ್ದಾರೆ. 

ಈ ಪ್ರಶಸ್ತಿಯು 25 ಸಾವಿರ ನಗದು, ಬೆಳ್ಳಿ ಪದಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಆ.8ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಸಾಹಿತಿ ಡಾ.ಮಲ್ಲಿಕಾ ಎಸ್‌.ಘಂಟಿ ಅವರಿಗೆ ಪ್ರದಾನ ಮಾಡಲಿದ್ದಾರೆಂದು ಸಂಸ್ಥೆ ಅಧ್ಯಕ್ಷ ಕುವೆಂಪು ಪ್ರಕಾಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹಿರಿಯ ಸಾಹಿತಿ ಮಲ್ಲಿಕಾ ಘಂಟಿ ಕುವೆಂಪು ಪ್ರಶಸ್ತಿಗೆ ಭಾಜನ ರಾದ ಹಿನ್ನೆಲೆ ವಿಜಯಪುರ ಜಿಲ್ಲೆಯ ಮಲ್ಲಿಕಾ ಘಂಟಿ ಅವರ ಅಭಿಮಾನಿ ಬಳಗದವರು ಅಭಿನಂದಿಸಿದ್ದಾರೆ.

22 ರಂದು ಗಾನಬನದಲ್ಲಿ ಗುರುವಂದನಾ ಕಾರ್ಯಕ್ರಮ


ವಿಜಯಪುರ : ಶ್ರೀ ಗುರು ಕುಮಾರೇಶ್ವರ ಪ್ರತಿμÁ್ಠನ (ರಿ) ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿμÁ್ಠನ (ರಿ) ವಿಜಯಪುರ ಇವರ ಸಹಯೋಗದಲ್ಲಿ ಶ್ರೀ ಶಿವಯೋಗಿ ಪುಟ್ಟರಾಜ ಗಾನಬನದ ಸಂಸ್ಥಾಪಕರಾದ ಗುರುಕಾರುಣ್ಯತೇಜ, ಗಾನಬನದ ಗಾನಗಂದರ್ವ, ಶ್ರೀ ಪಂ. ತೋಂಟದಾರ್ಯ ಕವಿಗವಾಯಿಗಳವರ 59ನೇ ಜನ್ಮದಿನದ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ದಿನಾಂಕ: 22-07-2023 ರಂದು ಶನಿವಾರ ರಂದು ಸಂಜೆ 6.30 ಗಂಟೆಗೆ ಶಿವಯೋಗಿ ಪುಟ್ಟರಾಜ ಗಾನಬನದ ಆವರಣ, ಎನ್.ಸಿ.ಸಿ. ಕಾರ್ಯಾಲಯದ ಹಿಂದುಗಡೆ, ಶ್ರೀ ಗಾನಯೋಗಿ ಪಂಚಾಕ್ಷರಿ ರಸ್ತೆ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿವ್ಯ ಸಾನ್ನಿಧ್ಯವನ್ನು ಬಸವನ ಬಾಗೇವಾಡಿ ಸಂಸ್ಥಾನ ಒಡೆಯರ ಹಿರೇಮಠದ ಶ್ರೀ ಷ.ಬ್ರ. ಶಿವಪ್ರಕಾಶ ಶೀವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಜ್ಞಾನ ಯೋಗಾಶ್ರಮದ ಅಧ್ಯಕ್ಷರಾದ ಪ.ಪೂ. ಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ (ರಿ) ಗೌರವಾಧ್ಯಕ್ಷರಾದ ಬಸವರಾಜ ಪಿ. ಕೆಂಗನಾಳ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲೆಯ ಉಪನೋಂದಣಾಧಿಕಾರಿಗಳಾದ ಬಿ.ಎಸ್.ಬಿರಾದಾರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಲಿಂಗರಾಜ ಹಿರೇಮಠ, ಚಿಕ್ಕಮಕ್ಕಳ ತಜ್ಞರಾದ ಡಾ. ಪರೀಕ್ಷಿತ ಕೋಟಿ ಭಾಗವಹಿಸಲಿದ್ದಾರೆ.

ಹಚ್ಯಾಳ ಹಿರೇಮಠದ ವೇ.ಮೂ. ವಿರುಪಾಕ್ಷಯ್ಯ ಶಾಶ್ತ್ರಿಗಳು ಪ್ರವಚನ ನುಡಿಗಳನ್ನಾಡಲಿದ್ದಾರೆ.

ತೊರವಿ ಹಿರೇಮಠದ ವೇ.ಮೂ. ಚಿದಾನಂದ ಶಾಸ್ತ್ರಿಗಳು ಉಪನ್ಯಾಸ ನೀಡಲಿದ್ದಾರೆ.

ಎಮ್.ವ್ಹಿ. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ, ಶಿಕ್ಷಕರಾದ ಕೈಲಾಸನಾಥ ಮದಭಾವಿ ನಿರೂಪಿಸಲಿದ್ದಾರೆ. ಪಿ.ಸಿ. ಅರಕೇರಿಮಠ ಸ್ವಾಗತಿಸಲಿದ್ದಾರೆ. ಸುಭಾಸಚಂದ್ರ ಕನ್ನೂರ ವಂದಿಸಲಿದ್ದಾರೆ.  ಪಂ. ತೋಂಟದಾರ್ಯ ಕವಿ ಗವಾಯಿಗಳು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಗುರು ಕಾರುಣ್ಯತೇಜ

 ಮನುಷ್ಯನ ಜೀವನ ಉನ್ನತ ಸ್ಥಿತಿಗೇರಬೇಕಾದರೆ ಅವನ ಸಾಧನೆ ಹಾಗೂ ಗುರುಕೃಪೆಯೇ ಕಾರಣವೆಂದು ಗ್ರಹಿಸಬೇಕಾಗುತ್ತದೆ. ಮನುಷ್ಯನ ಸಾಧನೆ ಯಾವ ಕ್ಷೇತ್ರದಲ್ಲಿಯೇ ಇರಲಿ ಅದು ಆಧ್ಯಾತ್ಮ ಕ್ಷೇತ್ರವಾಗಿರಲಿ, ಧಾರ್ಮಿಕ ಕ್ಷೇತ್ರವಾಗಿರಲಿ, ರಾಜಕೀಯ ಕ್ಷೇತ್ರವಾಗಿರಲಿ, ಸಂಗೀತ-ಚಿತ್ರಕಲೆಯಂತಹಾ ಯಾವುದೇ ಕ್ಷೇತ್ರವಾಗಿರಲಿ ಇವುಗಳಲ್ಲಿ ಸಾಧನೆ ಮಾಡಿ ಸಿದ್ಧಿ ಪಡೆಯಬೇಕಾದರೆ ಅದಕ್ಕೇಲ್ಲಾ ಸಮರ್ಥ ಗುರುವಿನ ಮಾರ್ಗದರ್ಶನ ಬೇಕೆಬೇಕು. ಅದಕ್ಕೇನೆ ಗುರು ಮತ್ತು ಶಿಷ್ಯನ ಸಂಬಂಧ ಅನ್ಯೋನ್ಯ ಹಾಗೂ ಅವರ್ನಿಯ. 

 ವೇದ ಕಾಲದ ಇತಿಹಾಸದೂದಕ್ಕು ಖ್ಯಾತಿವಂತರ ಚರಿತ್ರೆಗಳು ಗೋಚರವಾಗುತ್ತವೆ. ಗುರುವಿನಿಂದ ವಿದ್ಯೆ ಸಂಪಾದಿಸಿಕೊಂಡು ಶಿಷ್ಯರು ಗುರುಗಳ ಬಗೆಗೆ ಅಪಾರವಾದ ಗೌರವ ವಿನರ್ಮತೆ ಹೊಂದಿರುತ್ತಾರೆ. ಇದಕ್ಕೆ ಮಹಾಭಾರತದಲ್ಲಿ ಕಾಣಬರುವ ದ್ರೋಣಾಚಾರ್ಯ್ಯರ ಅವರ ಶಿಷ್ಯ ಏಕಲವ್ಯನಂತವರೇ ಸಾಕ್ಷಿ. ಶಿಷ್ಯರು ಜೀವನದಲ್ಲಿ ಯಾವತ್ತಿಗೂ ಗುರುವಿನನ್ನ ಮರೆಯಲಾರರು. ಅದಕ್ಕಾಗಿಯೇ ಪ್ರತಿ ಆಷಾಡ ಹುಣ್ಣಿಮೆಯನ್ನು ಗುರುಪೊರ್ಣಿಮೆ, ಬುದ್ಧ ಪೊರ್ಣಿಮೆಯೆಂದು ಆಚರಿಸುತ್ತಾ ಬರಲಾಗಿದೆ. ಶಿಷ್ಯರು ತಮ್ಮ ಗುರುಗಳಿಗೆ ವಿಶೇಷವಾಗಿ ಗೌರವ ಸಲ್ಲಿಸುವ ಉದೇಶಕ್ಕಾಗಿಯೇ ಗುರುವಂದನಾಯೆಂಬ ಭಕ್ತಿ ಸಮರ್ಪನಾ ಕಾರ್ಯಕ್ರಮವನ್ನು ನಾಡಿನಯಲ್ಲಡೆ ಆಚರಿಸುತ್ತಾರೆ. ಇಂತಹ ಕಾರ್ಯಕ್ರಮವೊಂದು ವಿಜಯಪುರ ನಗರದ ಗಾನಬನವೆಂಬ ಹೆಸರಿನ ಶ್ರೀ ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷದ ಸಂಗತಿ. ಗಾನಬನದ ರುವಾರಿಗಳಾದ ಶ್ರೀ ಪಂಡೀತ ತೋಂಟದಾರ್ಯ ಕವಿ ಗವಾಯಿಗಳವರ ಬದುಕು ಆವರ್ಣಿಯವಾದದ್ದು. ತಮ್ಮ ವಿದ್ಯಾಗುರುಗಳಾದ ಪೂಜ್ಯ ಲಿಂ. ಡಾ. ಪಂಡೀತ ಪುಟ್ಟರಾಜ ಗುರುವರ್ಯರ ಜೀವನವನ್ನೇ ಆದರ್ಶವಾಗಿ ಇಟ್ಟುಕೊಂಡು ಜೀವನ ನಡೆಸತಕ್ಕವಂತರು. ಗುರುಗಳ ಕೃಪಾಪೋಷಣೆಯಲ್ಲಿ ಗಾನಬನದ ಸಂಗೀತ ಗುರುಕುಲದಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಅವರಿಗೆ ಊಟ, ವಸತಿ, ವಿದ್ಯೆಯನ್ನು ನೀಡುತ್ತಾ ಬರುತ್ತಿದ್ದಾರೆ. ಇವರಿಂದ ಅನೇಕರು ಸಂಗೀತ ವಿದ್ಯೆಯನ್ನು ಪಡೆದು ತಮ್ಮ ಬದುಕಿನ ನೆಲೆಯನ್ನು ಕಂಡುಕೊಂಡಿದ್ದಾರೆ. ಹೀಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಸಮರ್ಪಿಸುವ ನಿಟ್ಟಿನಲ್ಲಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ. 

 ಇವರು ಶಿಷ್ಯರಿಗೆ ಸಂಗೀತ ಕಲೆಯನ್ನು ಧಾರಾಳವಾಗಿ ಅವರ ಅವರ ಅರ್ಹತೆ ಅನುಗುಣವಾಗಿ ಕೊಡುತ್ತಾ ಬಂದಿದ್ದಾರೆ. ತಮ್ಮ ಸ್ವಂತ ಜೀವನಕ್ಕೆ ಹೆಚ್ಚು ಗಮನ ಕೊಡದೇ ಸದಾ ಗಾನಬನದ ಶ್ರೇಯೋಭಿವೃದ್ಧಿಗಾಗಿ ವಿದ್ಯಾರ್ಥಿಗಳ ಯೋಗಕ್ಷೇಮದ ಬಗೆಗೆನೆ ಚಿಂತಿಸುತ್ತಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಸಂಗೀತ ಕಲಾಭಿಮಾನಿಗಳು ತಮ್ಮ ಸಹಾಯ ಸಹಕಾರವನ್ನು ನೀಡುತ್ತಾ ನಮ್ಮ ಭಾಗÀದಲ್ಲಿ ಇದೊಂದು ಸಂಗೀತ ಸೇವಾ ಸಂಸ್ಥೆ ಬೆಳೆಯಲೆಂದು ತಮ್ಮ ಮುಕ್ತ ಮನಸ್ಸಿನಿಂದ ಹಾರೈಸುತ್ತಿದ್ದಾರೆ. ಭಕ್ತರ ಹಾಗೂ ಮಠಾಧೀಶರ ದೇಣಿಗೆಯ ಕೊಡುಗೆಯಿಂದ ನಿರ್ಮಾಣಗೊಂಡ ಗುರುತ್ರಯರ ಮೂರ್ತಿಗಳ ಮಂದಿರ ಕಂಗೊಳಿಸುತ್ತಿದೆ. ಇದಕ್ಕೇಲ್ಲಾ ಕಾರಣರು ಗಾನಬನದ ನಿರ್ಮಾತೃಗಳಾದ ಶ್ರೀ ಪಂ. ತೋಂಟದಾರ್ಯ ಕವಿಗವಾಯಿಗಳವರು ಇಂತಹ ತೋಂಟದಾರ್ಯರ ಕಾರ್ಯಗಳನ್ನು ಮೆಚ್ಚಿ ಅವರ ಶಿಷ್ಯರೆಲ್ಲರೂ ಸೇರಿ ಶ್ರದ್ಧಾ-ಭಕ್ತಿಯಿಂದ "ಗುರುವಂದನಾ" ಎಂಬ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಇದೇ ತಿಂಗಳ ಅಂದರೆ 22-07-2023 ಶನಿವಾರದಂದು ಸಮಯ ಸಂಜೆ : 6-30ಕ್ಕೆ ಗಾನಬನದಲ್ಲಿ ಜರುಗಲಿದೆ. ಇಂತಹ ಯೋಗ್ಯ ಕಾರ್ಯಕ್ರಮಕ್ಕೆ ಸ್ವಾಗತ ಬಯಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸೋಣ.

 ರಚನೆ - ಶ್ರೀ ವೇ.ಮೂ. ವೀರುಪಾಕ್ಷಯ್ಯ ಶಾಸ್ತ್ರೀಗಳು, ಹಿರೇಮಠ, ಹಚ್ಚಾ್ಯಳ 


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.