Sunday, July 30, 2023

31-07-2023 EE DIVASA KANNADA DAILY NEWS PAPER

ದಲಿತ ಸಾಹಿತ್ಯ ಹೆಚ್ಚಾಗಿ ಇಂದು ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದ ಆಗಬೇಕಾದ ಅವಶ್ಯಕತೆಯಿದೆ: ಮೂಡ್ನಾಕೂಡು ಚಿನ್ನಸ್ವಾಮಿ


ಈ ದಿವಸ ವಾರ್ತೆ

 ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ :25ವರ್ಷಗಳ  ಕಾಲ ಒಂದು ದಲಿತ ಸಾಹಿತ್ಯ ಪರಿಷತ್ತು ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ಬೆಳಸಿ ಉಳಸಿಕೊಂಡು ಬರುವುದು ಕಷ್ಟದ ಕೆಲಸ ಇಂತಹ ಕೆಲಸ ನಿರಂತರವಾಗಿ ಮಾಡುತ್ತಿರುವ ರಾಜ್ಯಾಧ್ಯಕ್ಷ ಡಾ ಅರ್ಜುನ ಗೊಳಸಂಗಿ ಅವರ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಹೇಳಿದರು. ಅವರು ವಿಜಯಪುರದ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ  ಬೆಳ್ಳಿ ಸಂಭ್ರಮ ನಿಮಿತ್ಯ  ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ದಸಾಪ ಬೆಳ್ಳಿ ಸಂಭ್ರಮ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.



ದಲಿತ ಸಾಹಿತ್ಯ ಹೆಚ್ಚಾಗಿ ಇಂದು ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದ ಆಗಬೇಕಾದ ಅವಶ್ಯಕತೆಯಿದೆ, ಒಂದು ಸಾವಿರ ವರ್ಷ ಮೊಗಲರು ಭಾರತ ಆಳ್ವಿಕೆಯನ್ನು ವೈದಿಕರು ಸಹಿಸಿಕೊಂಡರು ಆದರೆ 150 ವರ್ಷಗಳ ಬ್ರಿಟಿಷ್ ಆಳ್ವಿಕೆಯನ್ನು ಸಹಿಸಲಿಲ್ಲ ಏಕೆಂದರೆ ಅವರು ಭಾರತದ ಕಂದಾಚಾರಗಳನ್ನು ವಿರೋಧಿಸಿದ್ದೇ ಅದಕ್ಕೆ ಕಾರಣ ದಲಿತರಿಗೆ ಅಕ್ಷರ ಮಾತ್ರವಲ್ಲ ಅನ್ನ ನೀರು ಕೊಡದೆ ಪೀಡಿಸಿದಂತಹ ವರ್ಗದವರು ಸಮಾಜ ಸುಧಾರಣೆ ಕಾನೂನುಗಳನ್ನು ವಿರೋಧಿಸಿದರು ಆದರೆ ಅಂಬೇಡ್ಕರ್ ಅವರ ಪ್ರಯತ್ನದಿಂದ ಅದು ಸಾಧ್ಯವಾಯಿತು ಎಂದು ಹೇಳಿದರು.


ಪ್ರಶಸ್ತಿ ಸ್ವೀಕರಿಸಿ ಡಾ ಗವಿಸಿದ್ದಪ್ಪ ಪಾಟೀಲ ಅವರು ಮಾತನಾಡಿ ದಲಿತ ಸಾಹಿತ್ಯ ಪರಿಷತ್ತು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ನಾಡಿನ ಎಲ್ಲರನ್ನು ಒಳಗೊಳ್ಳುವ ಮೂಲಕ ಮಾದರಿ ಕಾರ್ಯ ಮಾಡುತ್ತಿದೆ ಎಂದರು. ಇನ್ನೋರ್ವ ಪ್ರಶಸ್ತಿ ಪುರಸ್ಕೃತೆ ಸೌಜನ್ಯ ಕರಡೋಣಿ ಅವರು ಮಾತನಾಡಿದರು ಜೊತೆಗೆ ಸಮ್ಮೇಳನ ಅಧ್ಯಕ್ಷರಿಗೆ ಹಾಗೂ ಗಣ್ಯರಿಗೆ ತಮ್ಮ ಕಲಾಕೃತಿಗಳನ್ನು ನೀಡಿ ಗೌರವಿಸಿದರು. ಮತ್ತೋರ್ವ ಪ್ರಶಸ್ತಿ ಪುರಸ್ಕೃತೆ ಮುರ್ತುಜಾ ಬೇಗಂ ಕೊಡಗಲಿ ಅವರು ಮಾತನಾಡಿ ಹಳ್ಳಿಗಳಲ್ಲಿ ಬೇರೂರಿರುವ ಅಸಮಾನತೆಯನ್ನು ತೊಲಗಿಸಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಪ್ರಶಸ್ತಿ ಪುರಸ್ಕೃತರಾದ ರೇಣುಕಾ ಹೆಳವರ ಮುಳ್ಳೂರು ಶಿವಮಲ್ಲು, ಡಾ ಹೊಂಬಯ್ಯ ಹೊನ್ನಲಗೆರೆ,ಸ್ವಪ್ನ ಬುಕ್ ಹೌಸ್ ನ ದೊಡ್ಡೇಗೌಡ, ಡಾ ಎಂ ಬಿ ಕಟ್ಟಿ, ಗಣಪತಿ ಚಲವಾದಿ ಅವರು ಮಾತನಾಡಿದರು.


ಗೌರವ ಪ್ರಶಸ್ತಿಗೆ ಭಾಜನರಾದ ವಿವಿಧ ಕ್ಷೇತ್ರದ ಸಾಧಕರಾದ ಆರ್. ದೊಡ್ಡಗೌಡ ಬೆಂಗಳೂರು (ಸಾಹಿತ್ಯ),  ವೀರಹನುಮಾನ ರಾಯಚೂರು (ಸಾಹಿತ್ಯ), ಶ್ರೀಶೈಲ ನಾಗರಾಳ ಕಲಬುರ್ಗಿ (ಸಾಹಿತ್ಯ), ಡಾ. ಗವಿಸಿದ್ದಪ್ಪ ಪಾಟೀಲ ಹುಮ್ನಾಬಾದ (ಸಾಹಿತ್ಯ), ಶ್ರೀಮತಿ ಮುರ್ತುಜಾ ಬೇಗಂ ಕೊಡಗಲಿ ಇಲಕಲ್ಲ (ಸಾಹಿತ್ಯ), ಹಾರೋಹಳ್ಳಿ ರವೀಂದ್ರ ಮೈಸೂರು (ಸಾಹಿತ್ಯ), ಪರಶುರಾಮ ಶಿವಶರಣ ವಿಜಯಪುರ (ಸಾಹಿತ್ಯ), ನರೇಂದ್ರ ನಾಗವಾಲ ಮೈಸೂರು (ಸಮಾಜಸೇವೆ) ,ಮುಳ್ಳೂರ ಶಿವಮಲ್ಲು ಚಾಮರಾಜನಗರ (ದಲಿತ ಚಳುವಳಿ), ಡಾ. ಸಂಜೀವಕುಮಾರ ಮಾಲಗತ್ತಿ ಧಾರವಾಡ (ಪತ್ರಿಕಾರಂಗ), ರಾಜು ವಿಜಯಪುರ ಹುಬ್ಬಳ್ಳಿ (ಪತ್ರಿಕಾರಂಗ), ಕು. ಸೌಜನ್ಯ ಕರಡೋಣಿ ಧಾರವಾಡ (ಚಿತ್ರಕಲೆ), ಸಿ. ಆರ್. ನಟರಾಜ ಕೋಲಾರ (ಸಂಗೀತ), ದೇವು ಕೆ, ಅಂಬಿಗ ವಿಜಯಪುರ (ಸಿನೆಮಾ) ಅವರಿಗೆ ಬೆಳ್ಳಿ ಪ್ರಶಸ್ತಿ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಬಿಡಲೋಟಿ ರಂಗನಾಥ್, ಡಾ ಸದಾಶಿವ ದೊಡಮನಿ, ಡಾ ಶಾಂತನಾಯ್ಕ ಶಿರಾಗಾನಹಳ್ಳಿ, ರೇಣುಕಾ ಹೆಳವರ, ಪಿ ಆರ್ ಡಿ ಮಲ್ಲಯ್ಯ ಕಟ್ಟೇರ, ಡಾ ಪ್ರಸನ್ನ ನಂಜಾಪುರ, ಡಾ ಗಿರೀಶ ಮೂಗ್ತಿಹಳ್ಳಿ, ಪ್ರಭುಲಿಂಗ ನೀಲೂರೆ, ಗೌಡಗೆರೆ ಮಾಯುಶ್ರೀ, ಡಾ ಎಚ್ ಡಿ ಉಮಾಶಂಕರ, ಸೋಮಲಿಂಗ ಗೆಣ್ಣೂರ, ಡಾ ಎಂ ಬಿ ಕಟ್ಟಿ, ಡಾ ಹೊಂಬಯ್ಯ ಹೊನ್ನಲೆಗೆರೆ, ಡಾ ಅಮರೇಶ ಯತಗಲ್, ಡಾ ಪೂರ್ಣಿಮಾ, ರಾಯಸಾಬ ದರ್ಗಾದವರ ಅವರಿಗೆ  ವಾರ್ಷಿಕ ವಿವಿಧ ದತ್ತಿ ಹಾಗೂ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದರು.
ಅದರಂತೆ ಸಂಘಟನೆಯಲ್ಲಿ ತೊಡಗಿಸಿಕೊಂಡ ವಿಭಾಗೀಯ ಸಂಯೋಜಕರ ಗಣಪತಿ ಚಲವಾದಿ, ರಾಯಚೂರು ದಸಾಪ ಜಿಲ್ಲಾಧ್ಯಕ್ಷ ತಾಯರಾಜ್‌ ಮಚಟಹಾಳ, ತಾಲೂಕಾ ಅಧ್ಯಕ್ಷರಾದ ಹುಸೇನಪ್ಪ ಅಮರಾಪೂರ ಅವರಿಗೆ ದಸಾಪ ಅತ್ಯುತ್ತಮ ಸಂಘಟಕ ಸಾಧಕರಶ್ರೀ ಪ್ರಶಸ್ತಿ  ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ ಎಚ್‌.ಟಿ.ಪೋತೆ, ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ,  ಖಂಜಾಂಚಿ ಡಾ. ಎಚ್.‌ ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು. ಡಾ ಚಂದ್ರಗುಪ್ತ ಅವರು ಕಾರ್ಯಕ್ರಮ ಸಂಯೋಜಿಸಿದರು. ಅಶ್ವಿನಿ ಮದನಕರ ಸ್ವಾಗತಿಸಿದರು, ಎಂ ಬಿ ಕಟ್ಟಿಮನಿ ಹಾಗೂ ರುಕ್ಮಿಣಿ ನಾಗಣ್ಣವರ ನಿರೂಪಿಸಿದರು ಪದ್ಮಾವತಿ ಯಾತಗಲ್ಲ ವಂದಿಸಿದರು.