Friday, December 29, 2023

ಶಿವಾನಂದ ಪಾಟೀಲರ ಮೇಲಿನ ಆರೋಪ ಸಲ್ಲದು : ಡಾ. ಬಾಬು ಬಿ. ಕುಚನೂರ


ವಿಜಯಪುರ: ಸಚಿವ ಶಿವಾನಂದ್ ಪಾಟೀಲ್‌ರ ಹೇಳಿಕೆಯನ್ನು, ತಿವಿಚಲಾಗಿದೆ, ಅವರು ರೈತರ ಮಗ, ರೈತರ ಹಿತ ಚಿಂತಕ, ಅವರನ್ನು ಎದುರಾಳಿಗಳು ಅವರನ್ನು, ತೇಜೋವದೇ ಮಾಡುವ ಉದ್ದೇಶ ದಿಂದ, ಅವರ ಹೇಳಿಕೆಯನ್ನು, ತಿವಿಚಿ ಅಪಪ್ರಚಾರ ಮಾಡುತಿದ್ದಾರೆ ಎಂದು ಕುಚನೂರ ಫೌಂಡೇಶನ್ ಅಧ್ಯಕ್ಷ ಹಾಗೂ ಕೋ- ಆಫರೇಟಿವ್ ಆಸ್ಪತ್ರೆ ನಿರ್ದಶಕ ಹಾಗೂ ಶ್ರೀ ಸಿದ್ಧಾರೂಢ ಮಠದ ಆಜೀವ ಸದಸ್ಯರಾದ ಡಾ. ಬಾಬು ಬಿ. ಕುಚನೂರ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಶಿವಾನಂದ ಪಾಟೀಲ ಅವರು ಸೌಮ್ಯ ಸ್ವಭಾವ ವ್ಯಕ್ತಿಯಾಗಿದ್ದಾರೆ. ಅವರು ರೈತರ ಕುರಿತು ಅಪಾರ ಕಾಳಜಿಯನ್ನು ಹೊಂದಿದ್ದಾರೆ. ಅವರು ರೈತ ವಿರೋಧಿ ಆಗಿದ್ದರೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಗೆ ಹಾಗೂ ಕಬ್ಬು ಬೆಳೆಗಾರರಿಗೆ ಒಳ್ಳೆಯ ನಿಗದಿತ ಬೆಲೆ, ಮತ್ತು ಕಬ್ಬು ಬೆಳೆಗಾರಿಗೆ ಆಗುವ ಗಾತ್ರದಲ್ಲಿ, ವೈತ್ಯಾಸವನ್ನು ಅಧಿವೇಶನದಲ್ಲಿ ವಾದವನ್ನು ಮಂಡುಸುತ್ತಿರಲಿಲ್ಲ.. ಅದೇ ರೀತಿ ಡಿಸಿಸಿ ಬ್ಯಾಂಕ್ ಮುಖಾಂತರ ಅಪಾರ ರೈತ ಬಾಂಧವರಿಗೆ ಸಾಲ ಮನ್ನಾ ಮಾಡುವ ಮುಖಾಂತರ ರೈತರ ಮೆಚ್ಚುಗೆ ಪಾತ್ರರಾಗಿದ್ದಾರೆ. ಇಂತಹ ವಿಷಯಗಳನ್ನು ಎದುರಾಳಿಗಳು ಎಲ್ಲಿಯೂ ಹೇಳುವುದಿಲ್ಲ. ರೈತಬಾಂಧವರೇ, ನೀವು ಇಲ್ಲದೆ ದೇಶವೆ ಶೂನ್ಯ, ನಿಮ್ಮನ್ನು ಸಚಿವ ಶಿವಾನಂದ್ ಪಾಟೀಲರು ಅಷ್ಟೇ ಅಲ್ಲಾ ಬೇರೆ ಯಾವ ಸಚಿವರೂ ಕೂಡಾ, ಅವಹೇಳನೆ ಕಾರಿ ಮಾತುಗಳನ್ನು ಹೇಳಲು ಸಾಧ್ಯವಿಲ್ಲ, ಇದೆಲ್ಲ ವಿರೋಧ ಪಕ್ಷದ ಕೈವಾಡ, ರೈತರು ಯಾರು ಅನ್ಯತಾ ಭಾವಿಸದಿರಿ. ಶಿವಾನಂದ ಪಾಟೀಲರು ರೈತರ ಪರವಾಗಿದ್ದಾರೆ. ಅವರ ಏಳ್ಗೆ ಸಹಿಸದ ಕೆಲವು ಕುತಂತ್ರಿಗಳು ಈ ರೀತಿಯಾಗಿ ಅವರ ಹೆಸರನ್ನು ಕೆಡಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.