Monday, July 31, 2023

ಕಿರು ಚಲನಚಿತ್ರದ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದ ದಸಾಪ : ಡಾ ಅರ್ಜುನ ಗೊಳಸಂಗಿ

ಈ ದಿವಸ ವಾರ್ತೆ

ವಿಜಯಪುರ: ಪುಸ್ತಕ ಪ್ರಕಾಶನ, ಸಾಹಿತ್ಯ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ದಲಿತ ಸಾಹಿತ್ಯ ಪರಿಷತ್ತು ರಾಮಸಾಹೇಬಾ ಕಿರು ಚಲನಚಿತ್ರದ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ ಎಂದು ದಸಾಪ ರಾಜ್ಯ ಘಟಕದ  ಅಧ್ಯಕ್ಷ ಡಾ ಅರ್ಜುನ ಗೊಳಸಂಗಿ ಅವರು ಹೇಳಿದರು.

 ಅವರು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಾಡಿನ ಹೆಸರಾಂತ ಸಾಹಿತಿ ಪ್ರೊ ಎಚ್ ಟಿ ಪೋತೆ ಅವರ ಜನಪ್ರಿಯ ಕಾದಂಬರಿ ರಾಮಾಯಿ ಆಧಾರಿತ ಜೀವನ ಕ್ರಿಯೇಷನ್ ಅಡಿ ದಲಿತ ಸಾಹಿತ್ಯ ಪರಿಷತ್ತು ನಿರ್ಮಾಣ ಮಾಡಿದ ,ಸುನೀಲಕುಮಾರ ಸುಧಾಕರ ನಿರ್ದೇಶನದ ರಮಾಸಾಹೇಬಾ ಕಿರುಚಿತ್ರ ಬಿಡುಗಡೆ ಮಾಡಿ ಮಾಡಿ ಮಾತನಾಡಿದರು.  ಕಿರು ಚಲನಚಿತ್ರದಲ್ಲಿ ಅಂಬೇಡ್ಕರ್ ಅವರ ಪಾತ್ರದಲ್ಲಿ ಪ್ರೊ ಎಚ್ ಟಿ ಪೋತೆ, ರಮಾಬಾಯಿ ಪಾತ್ರದಲ್ಲಿ ಕಲಾವಿದೆ ರೇಣುಕಾ ಪಾಟೀಲ ರಾಮಜಿ ಪಾತ್ರದಲ್ಲಿ ವಿಶ್ವೇಶ್ವರಯ್ಯ ಮಠಪತಿ ಬಾಲ ರಾಮಬಾಯಿಯಾಗಿ ಬಾಲ ಕಲಾವಿದೆ ಮೇಘನಾ ಶಿವಶರಣ, ಮೀರಾಬಾಯಿ ಪಾತ್ರದಲ್ಲಿ ಇಂದುಮತಿ ಲಮಾಣಿ ಆನಂದರಾವ ಆಗಿ ಜಗದೀಶ ಹಲಸಂಗಿ,ಶ್ರೀಶೈಲ ನಾಗರಾಳ ಅರುಣಾ ಎಂಪಿ ಸರೋಜಿನಿ ಪಾಟೀಲ,ಪರಶುರಾಮ ಶಿವಶರಣ,ಲಾಯಪ್ಪ ಇಂಗಳೆ,  ಕಲ್ಲಪ್ಪ ಶಿವಶರಣ,ಬಸವರಾಜ ಜಾಲವಾದಿ,ಸುನೀಲ ಕಳ್ಳಿಮನಿ,ಲಕ್ಷ್ಮಣ ಹಂದ್ರಾಳ,ಜನಾರ್ಧನ ಕೆ.,ಬಾಬು ತಡಲಗಿ, ಸುರೇಶ ಚವ್ಹಾಣ,ನರೇಶ ಪೋದ್ದಾರ,ಮನು ಪತ್ತಾರ,ಸೃಜನ ಪತ್ತಾರ,ಸಚಿನ್,ವಿನೋದ ರಾಠೋಡ ಸೇರಿದಂತೆ ವಿವಿಧ ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ದೇವು ಅಂಬಿಗ ಅವರು ಸಂಕಲನ ಮಾಡಿದ್ದಾರೆ.ಜೀವನ ಗೊಳಸಂಗಿ ಉಮೇಶ ಶಿವಶರಣ ,‌ಚಂದ್ರಶೇಖರ ಅಂಬಲಿ ಸೇರಿದಂತೆ 20ಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ನಿರ್ವಹಿಸಿರುವ ಈ ಚಿತ್ರವು ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ಮೆರಗನ್ನು ಹೆಚ್ಚಿಸಿದ ರಮಾಸಾಹೇಬಾ ಚಿತ್ರ ನೋಡುಗರ ಕಣ್ಮನ ಸೆಳೆಯಿತು. 

 


ಚಿತ್ರದಲ್ಲಿ ಬರುವ  ಅಂಬೇಡ್ಕರ್ ಅವರ ಜೀವನದಲ್ಲಿ ಬರುವ ಕಷ್ಟದ ಘಟನೆಗಳಿಗೆ ನೋಡುಗರ ಕಣ್ಣಲ್ಲಿ ನೀರು ತುಂಬಿ ಬಂದಿದ್ದು ಕಂಡು ಬಂತು. ಈ ಸಂಧರ್ಭದಲ್ಲಿ ದಸಾಪ ರಾಜ್ಯ ಘಟಕದ ಪದಾಧಿಕಾರಿಗಳಾದ ಡಾ ಎಚ್ ಬಿ ಕೋಲ್ಕಾರ ಸುಭಾಷ ಹುದ್ಲೂರ, ವೈ ಎಂ ಭಜಂತ್ರಿ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾಹಿತಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.